Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : 2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಡೀಸಲ್‌ಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆ ವತಿಯಿಂದ “ರೈತ ಶಕ್ತಿ” ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಈ ಯೋಜನೆಯಡಿ ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ, ಫ್ರೂಟ್ಸ್/FRUITS (Farmers Registration and Unified Beneficiary information System-ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) portal ನಲ್ಲಿನ ನೋಂದಣಿಯಂತೆ ರೈತರ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ. 250/- ರಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡೀಸೆಲ್ ಸಹಾಯಧನವನ್ನು…
ಪ್ರತಾಪಗಢ (ಉತ್ತರ ಪ್ರದೇಶ): ವ್ಯಕ್ತಿ ಸತ್ತರೆ, ಆತನ ಅಂತ್ಯಸಂಸ್ಕಾರ ಮಾಡಿ, ಸಾವಿನ ಹದಿಮೂರನೇ ದಿನ ತಿಥಿ ಮಾಡುವುದನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಆದ್ರೆ, ಹದಿಮೂರನೇ ಕಾರ್ಯಕ್ರಮದ ವಿಚಿತ್ರ ಪ್ರಕರಣವೊಂದು ಯುಪಿಯ ಪ್ರತಾಪಗಢದಲ್ಲಿ ಮುನ್ನೆಲೆಗೆ ಬಂದಿದೆ. ಪ್ರತಾಪಗಢದಲ್ಲಿ ಮಾಲೀಕನೊಬ್ಬ ಸತ್ತ ಹುಂಜನ ಅಂತ್ಯಸಂಸ್ಕಾರ ಮಾಡಿದ್ದಲ್ಲದೇ, ಹದಿಮೂರನೇ ದಿನವೂ ಅದಕ್ಕೆ ತಿಥಿ ಕಾರ್ಯ ಮಾಡಿ, ಆ ಪ್ರದೇಶದ ಜನರೆಲ್ಲರಿಗೂ ಊಟ ಹಾಕಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಕಂಡ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ಈ ಘಟನೆ ಪ್ರತಾಪ್‌ಗಢ ಜಿಲ್ಲೆಯ ಫತಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಹ್ದೌಲ್ ಕಾಲಾ ಗ್ರಾಮದಲ್ಲಿ ನಡೆದಿದ್ದು, ಅಲ್ಲಿ ಡಾ. ಶಾಲಿಕ್ರಮ್ ಸರೋಜ್ ಎಂಬುವರು ಕ್ಲಿನಿಕ್ ನಡೆಸುತ್ತಿದ್ದಾರೆ. ಇವರು ಮನೆಯಲ್ಲಿ ಮೇಕೆ, ಹುಂಜ ಸಾಕಿದ್ದಾರೆ. ಇಡೀ ಕುಟುಂಬ ಹುಂಜನನ್ನು ಪ್ರೀತಿಸಲು ಪ್ರಾರಂಭಿಸಿತು. ಅವರು ಅದಕ್ಕೆ ಲಾಲಿ ಎಂದು ಹೆಸರಿಸಿದರು. ಜುಲೈ 8 ರಂದು ಡಾ.ಶಾಲಿಕ್ರಮ್ ಅವರ ಮೇಕೆ ಮರಿ ಮೇಲೆ ನಾಯಿ ದಾಳಿ ಮಾಡಿತ್ತು. ಇದನ್ನು ಕಂಡ ಲಾಲಿ ನಾಯಿಯೊಂದಿಗೆ ಘರ್ಷಣೆಗೆ ಮುಂದಾಯಿತು.…
ಹಾಸನ : ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ದೋಣಿಗಾಲ್ ಶಿರಾಡಿಘಾಟ್ ಮಾರ್ಗದಲ್ಲಿ ರಸ್ತೆ ಕುಸಿತವಾಗಿತ್ತು. ಇದೀಗ ರಸ್ತೆ ಮಾರ್ಗವನ್ನು ಸರಿಪಡಿಸಲಾಗಿದ್ದು, ಲಾರಿ ಮತ್ತು ಬಸ್ ಸೇರಿದಂತೆ ಎಲ್ಲಾ ವಾಹನ ಸಂಚಾರಕ್ಕೆ ಅನುಮತಿ ಸಿಕ್ಕಿದೆ. https://kannadanewsnow.com/kannada/bigg-news-good-news-for-the-farming-community-cold-storage-plants-to-be-set-up-at-13-locations-in-the-state-agriculture-minister-b-c-patil/ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವರದಿ ಮೆರೆಗೆ ಎಲ್ಲಾ ರೀತಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಳೆದ ಒಂದು ವಾರ ಹಿಂದೆ ಭಾರಿ ಮಳೆಯಿಂದಾಗಿ ರಸ್ತೆ ಕುಸಿತವಾಗಿತ್ತು. ಹೀಗಾಗಿ ಬಸ್ ಮತ್ತು ಲಾರಿ ಸಂಚಾರಕ್ಕೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದರು. ಇದೀಗ ಎಲ್ಲ ವಾಹನ ಸಂಚಾರಕ್ಕೂ ಅನುಮತಿ ನೀಡಲಾಗಿದೆ ಎಂದು ತಹಸೀಲ್ದಾರ್ ಜಯಕುಮಾರ್ ಹೇಳಿದ್ದಾರೆ. https://kannadanewsnow.com/kannada/bigg-news-good-news-for-scheduled-tribe-communities-applications-invited-for-loan-facility-under-various-schemes/
ಹಾವೇರಿ: ಅತಿವೃಷ್ಟಿ ಹಾನಿ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು,ಶೀಘ್ರವೇ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ. ಹಾನಿಯಾದವರಿಗೆ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಿಂತ ದ್ವಿಗುಣ ಮೊತ್ತದ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು. https://kannadanewsnow.com/kannada/bigg-news-national-livestock-mission-scheme-implementation-of-insurance-programme-in-all-districts-across-the-state/ ಹಿರೇಕೆರೂರು ತಾಲೂಕು ಕೋಡ ಗ್ರಾಮದಲ್ಲಿ ಮಾಧ್ಯಮದವರಿಂದಿಗೆ ಮಾತನಾಡಿದ ಅವರು, ಸತತವಾಗಿ ಮಳೆಯ ಕಾರಣ ಬೆಳೆಹಾನಿ ಸರ್ವೇ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಂದಾಯ, ಕೃಷಿ ಇಲಾಖೆ ಜಂಟಿಯಾಗಿ ಸರ್ವೇಕಾರ್ಯದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಸರ್ವೇ ಕಾರ್ಯಪೂರ್ಣಗೊಳ್ಳಲಿದೆ. ಧಾರಳವಾಗಿ ಸರ್ವೇ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು. https://kannadanewsnow.com/kannada/us-detects-first-case-of-polio-in-nearly-a-decade/ ರೈತರ ಅನುಕೂಲಕ್ಕಾಗಿ ರಾಜ್ಯದ 13 ಸ್ಥಳಗಳಲ್ಲಿ ಅಂದಾಜು ರೂ.10ಕೋಟಿ ವೆಚ್ಚದಲ್ಲಿ ಕೋಲ್ಡ್‍ಸ್ಟೋರೇಜ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಶಿಗ್ಗಾಂವ, ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ತಲಾ ರೂ.9.86 ಕೋಟಿ ವೆಚ್ಚದಲ್ಲಿ ಕೋಲ್ಡ್‍ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನದ 24 ತಾಸು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ.…
BIGG NEWS : `ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ : ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವಿಮಾ ಕಾರ್ಯಕ್ರಮ ಅನುಷ್ಠಾನ
ಬೆಂಗಳುರು : ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜಾನುವಾರು ವಿಮಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಪ್ರತಿ ಫಲಾನುಭವಿಯು ಗರಿಷ್ಟ 5 ರಾಸುಗಳನ್ನು (ದನ/ಎಮ್ಮೆ) ವಿಮೆಗೆ ಒಳಪಡಿಸಬಹುದಾಗಿದೆ. https://kannadanewsnow.com/kannada/us-detects-first-case-of-polio-in-nearly-a-decade/ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಎ.ಪಿ.ಎಲ್ ಫಲಾನುಭವಿಗಳಿಗೆ ಶೇ. 50 ಪ್ರೀಮಿಯಂ ಸಹಾಯಧನ ಸಿಗಲಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಬಿಪಿಎಲ್ ಫಲಾನುಭವಿಗಳಿಗೆ ಶೇ. 70 ಪ್ರೀಮಿಯಂ ಸಹಾಯಧನ ಸಿಗಲಿದೆ. https://kannadanewsnow.com/kannada/bigg-news-state-government-releases-grants-to-mutts-temples-of-various-communities-in-the-state/ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ವಿಮಾ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳ ಜಾತಿ ಪ್ರಮಾಣ ಪತ್ರ ಸಾಮಾನ್ಯ ವರ್ಗದ ಫಲಾನುಭವಿಗಳು ಬಿಪಿಎಲ್ ಕಾರ್ಡ್ ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು, ತಾಲೂಕ ಸಹಾಯಕ ನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿಗಳು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಯಾರ್ಕ್: ಸುಮಾರು ಒಂದು ದಶಕದ ನಂತರ ಯುನೈಟೆಡ್ ಸ್ಟೇಟ್ಸ್ ತನ್ನ ಮೊದಲ ಪೋಲಿಯೊ(Polio) ಪ್ರಕರಣವನ್ನು ಗುರುವಾರ ವರದಿ ಮಾಡಿದೆ. ಮ್ಯಾನ್‌ಹ್ಯಾಟನ್‌ನ ಉತ್ತರಕ್ಕೆ 30 ಮೈಲಿ (48 ಕಿಲೋಮೀಟರ್) ರಾಕ್‌ಲ್ಯಾಂಡ್ ಕೌಂಟಿಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ನ್ಯೂಯಾರ್ಕ್ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಅಮೆರಿಕ ಕೊನೆಯದಾಗಿ 2013 ರಲ್ಲಿ ಪೋಲಿಯೊ ಪ್ರಕರಣವನ್ನು ದಾಖಲಿಸಿದೆ. ಇತ್ತೀಚಿನ ಪ್ರಕರಣವು “ಓರಲ್ ಪೋಲಿಯೊ ಲಸಿಕೆ (OPV) ಪಡೆದ ವ್ಯಕ್ತಿಯಿಂದ ಪ್ರಸರಣ ಸರಪಳಿಯ ಸೂಚಕವಾಗಿದೆ. ಹೆಚ್ಚಿನ ಪ್ರಕರಣಗಳ ಬಗ್ಗೆ ನಿಗಾ ವಹಿಸುವಂತೆ ಆರೋಗ್ಯ ಪೂರೈಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೌಖಿಕ ಲಸಿಕೆಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ 2000 ರಲ್ಲಿ ನಿಲ್ಲಿಸಲಾಯಿತು. ಇತ್ತೀಚಿನ ದಶಕಗಳಲ್ಲಿ ಒಂದು ಬೃಹತ್ ಜಾಗತಿಕ ಪ್ರಯತ್ನವು ಪೋಲಿಯೊವನ್ನು ತೊಡೆದುಹಾಕಲು ಸಮೀಪಿಸಿದೆ. ಇದು ಮುಖ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವ ದುರ್ಬಲ ಮತ್ತು ಸಂಭಾವ್ಯ…
ಬೆಂಗಳೂರು : ರಾಜ್ಯ ಸರ್ಕಾರವು ಮಠ, ದೇವಸ್ಥಾನ, ಸಂಘ ಸಂಸ್ಥೆಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 142.37 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. https://kannadanewsnow.com/kannada/3-syrian-soldiers-killed-in-israeli-missile-attack-near-damascus-report/ ರಾಜ್ಯದ ವಿವಿಧ ಸಮುದಾಯದ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು, ಟ್ರಸ್ಟ್ಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. 178 ಮಠಗಳಿಗೆ 108.02 ಕೋಟಿ ರೂ, 59 ದೇವಸ್ಥಾನಗಳಿಗೆ 21.35 ಕೋಟಿ ರೂ, 26 ಸಂಘ ಸಂಸ್ಥೆಗಳು ಮತ್ತು ಟ್ರಸ್ಟ್ಗಳಿಗೆ 13 ಕೋಟಿ ರೂ. 142.37 ಕೋಟಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. https://kannadanewsnow.com/kannada/bigg-news-good-news-for-scheduled-tribe-communities-applications-invited-for-loan-facility-under-various-schemes/ ರಾಜ್ಯದ ವಿವಿಧ ಸಮುದಾಯಗಳ ಮಠಗಳು, ದೇವಾಲಯ, ಸಂಘ ಸಂಸ್ಥೆ, ಟ್ರಸ್ಟ್ಗಳಿಗೆ ಬಜೆಟ್ ಹಂಚಿಕೆ ಜೊತೆಗೆ ಸಿಎಂ ವಿಶೇಷಾನುದಾನದಡಿ ಹಣ ಬಿಡುಗಡೆ ಮಾಡಲಾಗಿದೆ. https://kannadanewsnow.com/kannada/youtube-to-remove-videos-carrying-misinformation-about-abortion/
ಡಮಾಸ್ಕಸ್: ಇಂದು ಮುಂಜಾನೆ ಡಮಾಸ್ಕಸ್ ಬಳಿ ಇಸ್ರೇಲಿ ಕ್ಷಿಪಣಿ ದಾಳಿಯಲ್ಲಿ ಮೂವರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ. “ಇಸ್ರೇಲಿ ಶತ್ರುಗಳು ವೈಮಾನಿಕ ದಾಳಿ ನಡೆಸಿದ್ದಾರೆ. ಇವರ ಆಕ್ರಮಣಕ್ಕೆ ಮೂವರು ಸಿರಿಯನ್ ಸೈನಿಕರು ಬಲಿಯಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸಿರಿಯನ್ ವಾಯು ರಕ್ಷಣಾವು ಕೆಲವು ಕ್ಷಿಪಣಿಗಳನ್ನು ತಡೆದಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಒಟ್ಟು ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ಯುದ್ಧ ಮಾನಿಟರ್ ಹೇಳಿದೆ. ಸಿರಿಯಾದೊಳಗಿನ ಮೂಲಗಳ ವ್ಯಾಪಕ ಜಾಲವನ್ನು ಅವಲಂಬಿಸಿರುವ ಮಾನಿಟರ್, ಸ್ಟ್ರೈಕ್‌ಗಳು ವಾಯುಪಡೆಯ ಗುಪ್ತಚರ ಸೌಲಭ್ಯವನ್ನು ಗುರಿಯಾಗಿಸಿಕೊಂಡಿವೆ ಮತ್ತು ಉನ್ನತ ಶ್ರೇಣಿಯ ಅಧಿಕಾರಿಯ ಕಚೇರಿಯನ್ನು ಸಹ ಮೆಜ್ಜೆ ಮಿಲಿಟರಿ ವಿಮಾನ ನಿಲ್ದಾಣದ ಬಳಿ ಕಾರನ್ನು ಹೊಡೆದಿದೆ. ಅಷ್ಟೇ ಅಲ್ಲದೇ, ಕ್ಷಿಪಣಿಗಳು “ಇರಾನಿನ ಶಸ್ತ್ರಾಸ್ತ್ರಗಳ ಡಿಪೋ” ಅನ್ನು ಸಹ ನಾಶಪಡಿಸಿದವು ಎಂದು ಮಾನಿಟರ್ ಹೇಳಿದೆ. 2011 ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ…
ಬಳ್ಳಾರಿ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿನ ವಿವಿಧ ಯೋಜನೆಗಳಡಿ ಪರಿಶಿಷ್ಟ ಪಂಗಡದವರು ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯ ಜನಾಂಗದ ಅರ್ಹ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆ.20 ಆಗಿರುತ್ತದೆ. *ಯೋಜನೆಗಳು: ನೇರಸಾಲ ಯೋಜನೆ-ಘಟಕವೆಚ್ಚ ರೂ.1ಲಕ್ಷ ಇದರಲ್ಲಿ ಶೇ.50ರಷ್ಟು ನಿಗಮದಿಂದ ಸಾಲ ಮತ್ತು ಶೇ.50 ಸಹಾಯಧನ ನೀಡಲಾಗುವುದು. *ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-ಇ.ವಿ. ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ (ಇ-ಕಾಮರ್ಸ್‍ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು) ಗರಿಷ್ಟ ರೂ.50ಸಾವಿರ ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ, ಐ.ಎಸ್.ಬಿ ಹಾಗೂ ಇತರೆ ಚಟುವಟಿಕೆಗಳಿಗಾಗಿ ಸಹಾಯಧನ: ಗರಿಷ್ಟ ರೂ.2 ಲಕ್ಷ, ಉಳಿದ ಮೊತ್ತ ಬ್ಯಾಂಕ್‍ನಿಂದ ಸಾಲ, ಸರಕು ಸಾಗಾಣಿಕೆ ವಾಹನ: ಗರಿಷ್ಟ ರೂ.3.50ಲಕ್ಷ, ಉಳಿದ ಮೊತ್ತ ಬ್ಯಾಂಕ್‍ನಿಂದ…
ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 2,446 ಅರ್ಹ ಫಲಾನುಭವಿಗಳಿಗೆ ಮೈಸೂರು ವಿಮಾನ ನಿಲ್ದಾಣದ ಹಿಂಭಾಗದ ಮಂಡಕಳ್ಳಿ-ದಡದಹಳ್ಳಿ ರಸ್ತೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರು ಜು.23ರಂದು ಸಂಜೆ 4 ಗಂಟೆಗೆ ಬೃಹತ್ ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಆರ್ ಜಿಎಚ್ ಸಿಎಲ್) ಅನುಷ್ಠಾನಗೊಳಿಸಲಿರುವ ಬೃಹತ್ ವಸತಿ ಯೋಜನೆಯನ್ನು ಪಿಎಂಎವೈ-ಎಚ್ ಎಫ್ ಎ (ನಗರ) – ಪ್ರಧಾನ ಮಂತ್ರಿ ಆವಾಸ್ ಯೋಜನೆ – ಎಲ್ಲರಿಗೂ ವಸತಿ – ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ವಸತಿ ಸಚಿವ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಮೈಸೂರು ಮೇಯರ್ ಸುನಂದಾ ಪಾಲನೇತ್ರ ಮತ್ತು ಇತರ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿ+1 ಮತ್ತು…