Subscribe to Updates
Get the latest creative news from FooBar about art, design and business.
Author: KNN IT TEAM
ಗುನಾ: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಸೇತುವೆ ಇಲ್ಲದ ನದಿಯನ್ನು ದಾಟುವ ಮೂಲಕ ತಮ್ಮ ಜೀವವನ್ನು ಪಣಕ್ಕಿಟ್ಟು ಶಾಲೆ ತೆರಳುತ್ತಿದ್ದಾರೆ. https://kannadanewsnow.com/kannada/bigg-news-july-25-is-the-last-date-to-apply-for-the-state-level-best-teacher-award/ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಗುನಾದ ಗೋಚ್ಪುರ ಗ್ರಾಮದ ನಿವಾಸಿಗಳು, ವಿದ್ಯಾರ್ಥಿಗಳು ಸೇರಿದಂತೆ, ಮುಖ್ಯ ರಸ್ತೆಯೂ ಪ್ರಯಾಣಕ್ಕೆ ಸಾಧ್ಯವಾಗದ ಕಾರಣ “ಶಾರ್ಟ್ ಕಟ್” ಮಾರ್ಗದ ಮೂಲಕ ಶಾಲೆಯನ್ನುತೆರಳಲು ಹಗ್ಗಗಳ ಮೇಲೆ ನದಿಯನ್ನು ದಾಟುವುದನ್ನು ಕಾಣಬಹುದು. ಹಗ್ಗದ ಮಾರ್ಗವು ಸರ್ಕಸ್ ನಲ್ಲಿ ಮಾಡುವ ಸ್ಟಂಟ್‌ಗಳಂತೆ ಕಾಣಿಸುತ್ತದೆ. ಗೋಚ್ಪುರ ಗ್ರಾಮವು ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. https://twitter.com/IndiaObservers/status/1550448821955870721?ref_src=twsrc%5Etfw%7Ctwcamp%5Etweetembed%7Ctwterm%5E1550448821955870721%7Ctwgr%5E%7Ctwcon%5Es1_c10&ref_url=https%3A%2F%2Fwww.india.com%2Fviral%2Fviral-video-madhya-pradesh-in-guna-students-are-forced-to-reach-school-by-crossing-river-on-ropes-watch-5529173%2F ವೀಡಿಯೊದಲ್ಲಿ, ಗ್ರಾಮ ಮತ್ತು ಕೃಷಿ ಜಮೀನುಗಳ ನಡುವೆ ಹರಿಯುವ ನದಿಯ ಎರಡೂ ಬದಿಗಳಲ್ಲಿರುವ ಎರಡು ಮರಗಳಿಗೆ ಹಗ್ಗಗಳನ್ನು ಕಟ್ಟಿರುವುದನ್ನು ಕಾಣಬಹುದು. ಸುದ್ದಿ ಸಂಸ್ಥೆ ಐಎಎನ್ಎಸ್ ವರದಿಯ ಪ್ರಕಾರ, ನದಿಯ ಆಳವು ಆರು ಅಡಿಗಳಷ್ಟಿದ್ದು, ಇದು ಸುಮಾರು 20 ಅಡಿ ಅಗಲವಿದೆ. https://kannadanewsnow.com/kannada/bigg-news-july-25-is-the-last-date-to-apply-for-the-state-level-best-teacher-award/ ವೀಡಿಯೊದಲ್ಲಿರುವ ಜನರು ನದಿಯನ್ನು ದಾಟಲು ತಮ್ಮ ಸಮತೋಲನವನ್ನು ಇಟ್ಟುಕೊಂಡು ಒಂದು ಹಗ್ಗವನ್ನು ಹಿಡಿದಿರುವುದನ್ನು ಕಾಣಬಹುದು.…
ಬೆಂಗಳೂರು: ಸ್ಯಾಂಡಲ್ ವುಡ್ ( Sandalwood ) ಸೇರಿದಂತೆ ವಿವಿಧ ಭಾಷಾ ಚಿತ್ರಗಳ ಮೂಲಕ ಬಹುಭಾಷಾ ನಟರಾಗಿ ಗುರ್ತಿಸಿಕೊಂಡಿರುವಂತ ನಟ ಅರ್ಜುನ್ ಸರ್ಜಾ ( Actor Arjun Sarja ) ಅವರ ತಾಯಿ, ಇಂದು ನಿಧನರಾಗಿದ್ದಾರೆ. ಈ ಮೂಲಕ ನಟ ಅರ್ಜುನ್ ಸರ್ಜಾ ಅವರು ಮಾತೃವಿಯೋಗ ಎದುರಿಸುವಂತೆ ಆಗಿದೆ. https://kannadanewsnow.com/kannada/us-reports-first-cases-of-monkeypox-in-children-as-two-detected-with-viral-disease/ ಇಂದು ಬೆಳಿಗ್ಗೆ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ(85) ಅವರು, ಅನಾರೋಗ್ಯದಿಂದಾಗಿ ನಗರದ ಅಪೊಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. https://kannadanewsnow.com/kannada/bigg-news-cm-bommai-to-visit-delhi-for-2-more-days-from-tomorrow-to-take-oath-of-oath-of-office-of-new-president/ ಅಂದಹಾಗೇ ಶಕ್ತಿ ಪ್ರಸಾದ್ ಅವರ ಪತ್ನಿಯಾಗಿದ್ದಂತ ಲಕ್ಷ್ಮೀದೇವಿ ಅವರು, ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದರು. ಅವರು ನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ದಕ್ಷಿಣಕನ್ನಡ : ಹುಡುಗನ ಹೆಸರಲ್ಲಿ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳ ಜೊತೆ ಫೇಸ್ಬುಕ್ನಲ್ಲಿ ಪ್ರೇಮದಾಟವಾಡುತ್ತಿದ್ದ ಮಂಗಳಮುಖಿಯನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಸಿವಿಲ್ ಇಂಜಿನಿಯರ್ ಎಂದು ಹೇಳಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. https://kannadanewsnow.com/kannada/bigg-news-july-25-is-the-last-date-to-apply-for-the-state-level-best-teacher-award/ ಸುಮಾರು ನಾಲ್ಕು ವರ್ಷಗಳಿಂದ ಬಂಟ್ವಾಳದ ಯುವತಿ ಫೇಸ್ಬುಕ್ ಖಾತೆ ನಂಬಿ ಪ್ರೇಮದ ಬಲೆಗೆ ಬಿದ್ದಿದ್ದಳು. ಫೇಸ್ಬುಕ್ ಮೆಸೆಂಜರ್ನಲ್ಲಿ ಚಾಟಿಂಗ್, ದೂರವಾಣಿ ಕರೆಯಲ್ಲೂ ಇಬ್ಬರೂ ಮಾತನಾಡುತ್ತಿದ್ದರು. ಮಗಳ ಪ್ರೇಮ ಪ್ರಕರಣ ತಾಯಿಗೆ ಗೊತ್ತಾಗಿದ್ದು, ಬಳಿಕ ಈ ವಿಚಾರವನ್ನು ಬಂಟ್ವಾಳದ ನ್ಯಾಯವಾದಿ ಶೈಲಜಾ ರಾಜೇಶ್ ಬಳಿ ಹೇಳಿಕೊಂಡಿದ್ದರು. https://kannadanewsnow.com/kannada/bike-riders-life-narrowly-saved-in-truck-and-motorcycle-collision-picture-captured-in-cctv/ ನ್ಯಾ. ಶೈಲಜಾ ಅವರು ವಿಟ್ಲ ಪೊಲೀಸರ ಸಹಾಯದಿಂದ ಪ್ರಕರಣದ ಜಾಡು ಹಿಡಿದು ಹೊರಟಾಗ ಫೇಸ್ಬುಕ್ ಗೆಳೆಯನ ಅಸಲಿ ಮುಖ ಬಯಲಾಗಿದೆ. ಮೊಬೈಲ್ ಲೊಕೇಶನ್ ಹುಡುಕಾಡಿಕೊಂಡು ಉಡುಪಿ ಜಿಲ್ಲೆಯ ಶಂಕರನಾರಾಯಣ ಎಂಬಲ್ಲಿಗೆ ಹೋದಾಗ, ಅಲ್ಲಿದ್ದದ್ದು ಮಂಗಳಮುಖಿ ಎಂಬುದು ಗೊತ್ತಾಗಿದೆ. ಇದೀಗ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳಮುಖಿಯನ್ನು ಬಂಧಿಸಲಾಗಿದೆ.
ಬಳ್ಳಾರಿ : 2022-23ನೇ ಸಾಲಿಗೆ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಹ ಶಿಕ್ಷಕರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ನಿಗದಿಪಡಿಸಿದ್ದ ಅವಧಿಯು ಜು.25ರವರೆಗೆ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/us-reports-first-cases-of-monkeypox-in-children-as-two-detected-with-viral-disease/ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅರ್ಹ ಶಿಕ್ಷಕರು ಇಲಾಖೆಯು ಅಭಿವೃದ್ದಿಪಡಿಸಲಾದ ವೆಬ್‍ಸೈಟ್ ಕೊಂಡಿ hಣಣಠಿ:/http:/www.schooleducation.kar.nic.in ರಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜು.25 ಕೊನೆಯ ದಿನಾಂಕ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. https://kannadanewsnow.com/kannada/bigg-news-it-was-dk-shivakumar-who-initiated-the-cm-race-shivakumar-zameer-ahmed-khan-hits-back/
ಮಧ್ಯಪ್ರದೇಶ : ಬೈಕ್ ಸವಾರನಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಾಶಾತ್ ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಗೋರ್ವಿಯಲ್ಲಿ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರನ ಜೊತೆ ಬೈಕ್ ಟ್ರಕ್ ಚಕ್ರದಡಿ ಬಿದ್ದಿತ್ತು. ಸಮಯಕ್ಕೆ ಸರಿಯಾಗಿ ಟ್ರಕ್ ಸವಾರ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸವಾರರು ಬದುಕುಳಿದಿದ್ದಾನೆ. ಈ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. https://twitter.com/sankrityaayan/status/1550723384526352390 ಸೋಲಾಂಗ್ ಗ್ರಾಮದ ನಿವಾಸಿ ಮಹೇಂದ್ರ ವೈಶ್ ಎಂಬಾತ ತನ್ನ ಸಹಚರನೊಂದಿಗೆ ಬೈಕ್ನಲ್ಲಿ ಗೋರ್ಬಿ ಬಜಾರ್ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ತಿರುವಿನಲ್ಲಿ ಟ್ರಕ್, ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯ ನಂತರ, ಮಹೇಂದ್ರ ವೈಶ್ ಅವರು ಬದುಕುಳಿದಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/why-do-japanese-people-live-longer-the-explosive-secret-of-the-5-main-causes-has-been-revealed/
ಕೆಎನ್ ಎನ್ ನ್ಯೂಸ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್. ಅದು ಇಲ್ಲದೆ ಒಂದು ದಿನ ಕೂಡ ಇರೋಕೆ ಆಗೊಲ್ಲ. ಹಾಗೆ ಅದನ್ನ ಮೂರು ಹೊತ್ತು ನೋಡ್ತಾ ಇದ್ದರೆ, ಪ್ರಪಂಚದಲ್ಲಿ ಏನು ಆದ್ರೂ ಗೊತ್ತಾಗುವುದಿಲ್ಲ. ಕೆಲವರು ಶೌಚಾಲಯದಲ್ಲೂ ಕೂಡ ಬಳಸುತ್ತಾರೆ. https://kannadanewsnow.com/kannada/world-athletics-championships-sydney-mclaughlin-smashes-world-record/ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಫೋನ್ ಬಳಸುವುದರಿಂದ ಏನು ಆಗುತ್ತೆ ತಿಳಿದುಕೊಳ್ಳಣ ಮಲಬದ್ದತೆ ಮತ್ತು ಫೈಲ್ಸ್ : ಜೀರ್ಣಾಂಗ ವ್ಯವಸ್ಥೆ ಸರಿಯಾಗದಿದ್ದಾಗ ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಸಮಸ್ಯೆಗಳನ್ನು ಎದುರಿಸಬಹುದು. ಹೆಚ್ಚು ಕಾಲ ವಾಶ್ ರೂಂನಲ್ಲಿ ಕುಳಿತುಕೊಳ್ಳುವುದು ನಿಮ್ಮ ವಿಸರ್ಜನಾ ಅಂಗಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡಬಹುದು.ಹೀಗಾಗಿ ಅನಾರೋಗ ಕಾಡುತ್ತದೆ. ಸೋಂಕಿನ ಅಪಾಯ: ಪ್ರತಿಯೊಂದು ಶೌಚಾಲಯಗಳಲ್ಲೂ ಬ್ಯಾಕ್ಟೀರಿಯಾಗಳ ಇರುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾಗಳಿಂದ ಅಂತಿಮ ಪರಿಣಾಮ ನಿಮ್ಮ ಮೇಲೆ ಆಗುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಮೂತ್ರದ ಸೋಂಕು ಉಂಟಾಗುತ್ತದೆ. ಅತಿಸಾರ ಸಂಬಂಧಿತ ಸಮಸ್ಯೆಗಳು: ಕೆಲವರು ವಾಶ್‌ರೂಮ್‌ನಲ್ಲಿ ನೈರ್ಮಲ್ಯ…
ನವದೆಹಲಿ: ಅಮೆರಿಕದಲ್ಲಿ ಮೊದಲ ಬಾರಿಗೆ ಇಬ್ಬರು ಮಕ್ಕಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ( Monkeypox cases ) ಪತ್ತೆಯಾಗಿವೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (Centers for Disease Control and Prevention – CDC) ಶುಕ್ರವಾರ ಮಾಹಿತಿ ನೀಡಿದೆ. ಒಬ್ಬರು ಕ್ಯಾಲಿಫೋರ್ನಿಯಾದ ( California ) ಅಂಬೆಗಾಲಿಡುವ ಮಗು ಮತ್ತು ಇನ್ನೊಬ್ಬರು ಯುಎಸ್ ನಿವಾಸಿಯಲ್ಲದ ಆದರೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ( Washington D.C ) ಪರೀಕ್ಷಿಸಲಾದ ಶಿಶು ಎಂದು ವರದಿಯಲ್ಲಿ ತಿಳಿಸಲಾಗಿದೆ. https://kannadanewsnow.com/kannada/bigg-news-cm-bommai-to-visit-delhi-for-2-more-days-from-tomorrow-to-take-oath-of-oath-of-office-of-new-president/ ಎರಡು ಪ್ರಕರಣಗಳು ಸಂಬಂಧ ಹೊಂದಿಲ್ಲ ಮತ್ತು ಮಕ್ಕಳು ಹೇಗೆ ವೈರಲ್ ಕಾಯಿಲೆಗೆ ಒಳಗಾದರು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಗಳು ಮನೆ ಪ್ರಸರಣದ ಪರಿಣಾಮ ಎಂದು ಅಧಿಕಾರಿಗಳು ನಂಬಿದ್ದಾರೆ. ಮಕ್ಕಳು ಚಿಕಿತ್ಸೆಯಲ್ಲಿದ್ದಾರೆ ಮತ್ತು ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ವಿವರಿಸಲಾಗಿದೆ ಎಂದು ಎಪಿ ವರದಿ ಮಾಡಿದೆ. https://kannadanewsnow.com/kannada/bigg-news-tragic-tragedy-in-belagavi-lover-commits-suicide-after-killing-his-girlfriend-for-not-agreeing-to-marriage/ ಮಂಕಿಪಾಕ್ಸ್ ಒಂದು ವೈರಲ್ ಸೋಂಕಾಗಿದ್ದು, ಇದು ಇತ್ತೀಚಿನವರೆಗೂ ಆಫ್ರಿಕಾದ ಕೆಲವು ಭಾಗಗಳಲ್ಲಿ ಸ್ಥಳೀಯವಾಗಿತ್ತು.…
ಬೆಳಗಾವಿ : ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. https://kannadanewsnow.com/kannada/bigg-news-cm-bommai-to-visit-delhi-for-2-more-days-from-tomorrow-to-take-oath-of-oath-of-office-of-new-president/ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಸಿಎಂ ವಿಚಾರ ಶುರು ಮಾಡಿದ್ದೇ ಡಿ.ಕೆ.ಶಿವಕುಮಾರ್, ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ನನಗೆ ಅವಕಾಶ ಕೊಡಿ ಅಂತ ಅವರೇ ಹೇಳಿದ್ದಾರೆ. ಸಿಎಂ ಸ್ಥಾನದ ರೇಸ್ ಗೆ ಚಾಲನೆ ಕೊಟ್ಟಿದ್ದೆ ಅವರು, ಅವರೇ ಮಾತನಾಡಿದ ಮೇಲೆ ನಾವೆಲ್ಲಾ ಮಾತನಾಡಿದ್ದು, ಸಿಎಂ ಯಾರು ಆಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ.ಸಿಎಂ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ಧಾರ ಕೈಗೊಳ್ಳುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಟಾಂಗ್ ಕೊಟ್ಟಿದ್ದಾರೆ. https://kannadanewsnow.com/kannada/bigg-news-b-s-yediyurappa-should-contest-elections-this-time-renukacharya/
ಬೆಂಗಳೂರು : ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಜುಲೈ 24 ರ ನಾಳೆ ದೆಹಲಿಗೆ ತೆರಳಲಿದ್ದಾರೆ. https://kannadanewsnow.com/kannada/breaking-news-a-technical-snag-helicopter-makes-emergency-landing-in-ramanagara/ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಳೆ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದು, ನಾಳೆ ಬೆಲ 10 ಗಂಟೆ ಕೆಂಪ ದೆಹಲಿಗೆ ತೆರಳಲಿದ್ದಾರೆ ನಾಳೆ ಬಿಜೆಪಿ ಆಡಳಿತ ಇರುವ ರಾಜ್ಯಗಳ ಜೊತೆಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಸಭೆ ಬಳಿಕ ನಾಳೆ ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. https://kannadanewsnow.com/kannada/bigg-news-tragic-tragedy-in-belagavi-lover-commits-suicide-after-killing-his-girlfriend-for-not-agreeing-to-marriage/ ಸೋಮವಾರ ರಾಷ್ಟ್ರದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕೇಂದ್ರ ಸಚಿವರನ್ನು ಭೇಟಿಯಾಗಿ ವಿವಿಧ ಯೋಜನೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. https://kannadanewsnow.com/kannada/swine-flu-symptoms-treatment-prevention-tips-here/
ರಾಮನಗರ : ರಾಮನಗರದ ಎಸ್.ಬಿ.ಕಲ್ಯಾಣಮಂಟಪದ ಬಳಿ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. https://kannadanewsnow.com/kannada/bigg-news-tragic-tragedy-in-belagavi-lover-commits-suicide-after-killing-his-girlfriend-for-not-agreeing-to-marriage/ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರಾಮನಗರದ ಎಸ್.ಬಿ ಕಲ್ಯಾಣ ಮಂಟಪದ ಬಳಿ ತುರ್ತುಭೂಸ್ಪರ್ಶ ಮಾಡಲಾಗಿದ್ದು, ಹೆಲಿಕಾಪ್ಟರ್ ನೋಡಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ. ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಂಡ ಬಳಿಕ ಮತ್ತೆ ಹಾರಾಟ ನಡೆಸಿದೆ. ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಗಳು ಮಾತ್ರ ಇದ್ದರು ಎಂದು ತಿಳಿದುಬಂದಿದೆ. https://kannadanewsnow.com/kannada/bigg-news-b-s-yediyurappa-should-contest-elections-this-time-renukacharya/