Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ: ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು ತ್ರಿ-ಸೇವೆಗಳ ಜಂಟಿ ಥಿಯೇಟರ್ ಕಮಾಂಡ್ಗಳನ್ನು ಸ್ಥಾಪಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಘೋಷಿಸಿದ್ದಾರೆ. https://kannadanewsnow.com/kannada/kadugolla-leaders-from-every-party-should-be-given-tickets-for-assembly-polls-shivu-yadav/ ಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಜಮ್ಮು ಕಾಶ್ಮೀರ ಪೀಪಲ್ಸ್ ಫೋರಂ ಜಮ್ಮುವಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. https://kannadanewsnow.com/kannada/congress-to-continue-its-fight-against-ed-kirikula-maun-satyagraha-on-july-26/ “ಕಾರ್ಗಿಲ್ನಲ್ಲಿ ಆಪರೇಷನ್ ವಿಜಯ್ನಲ್ಲಿ ಕಂಡುಬಂದಂತೆ ಜಂಟಿ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ದೇಶದಲ್ಲಿ ಜಂಟಿ ಥಿಯೇಟರ್ ಕಮಾಂಡ್ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ” ಎಂದು ಸಿಂಗ್ ಹೇಳಿದರು.
ರಾಮನಗರ: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಿಂದ ತಲಾ ಐವರು ಕಾಡುಗೊಲ್ಲ ಸಮುದಾಯದ ಮುಖಂಡರಿಗೆ ಟಿಕೆಟ್ ಕೊಡಬೇಕು ಎಂಬುದಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಶಿವು ಯಾದವ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು ಕಾಡುಗೊಲ್ಲ ಸಮುದಾಯವನ್ನು ಕೇಂದ್ರ ಸರ್ಕಾರವು ಪರಿಶಿಷ್ಟ ವರ್ಗಕ್ಕೆ ಸೇರಿಸಿ ತ್ವರಿತವಾಗಿ ಆದೇಶ ಹೊರಡಿಸಬೇಕು ಎಂಬುದಾಗಿ ಒತ್ತಾಯಿಸಿದರು. https://kannadanewsnow.com/kannada/congress-to-continue-its-fight-against-ed-kirikula-maun-satyagraha-on-july-26/ ಕಾಡುಗೊಲ್ಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ 2011ರಲ್ಲಿ ಸರ್ಕಾರ ಅನ್ನಪೂರ್ಣಮ್ಮ ಅವರಿಗೆ ಜವಾಬ್ದಾರಿ ವಹಿಸಿತ್ತು, ಅವರು 2014ರಲ್ಲಿ ವರದಿಯನ್ನು ಸಲ್ಲಿಸಿದ್ದಾರೆ. ಈ ವದಿಯನ್ನು ಆಧರಿಸಿಯೇ ಕಾಡುಗೊಲ್ಲ ಸಮುದಾಯವು ಬುಡಕಟ್ಟು ಸಮುದಾಯಕ್ಕೆ ಸೇರಿದೆ ಎಂದು ರಾಜ್ಯ ಸರ್ಕಾರ ಗುರುತಿಸಿದೆ. ಸಿದ್ಧರಾಮಯ್ಯ ಸರ್ಕಾರವು ಎಸ್ಟಿ ಪಟ್ಟಿಗೆ ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು, ಆದ್ರೇ ಕೇಂದ್ರ ಸರ್ಕಾರ ಈವರೆಗೆ ಯಾವುದೇ ನಿರ್ಧಆರ ಪ್ರಕಟಿಸಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು. 2018ರಲ್ಲಿ ಸರ್ಕಾರವು ನಮ್ಮ ಸಮುದಾಯವನ್ನು ರಾಜ್ಯದಲ್ಲಿನ ಜಾತಿ ಪಟ್ಟಿಗೆ ಸೇರಿಸಿದೆ. ಆದ್ರೇ ಈವರೆಗೂ ಜಿಲ್ಲಾಡಳಿತಗಳು…
ಬೆಂಗಳೂರು: ಈಗಾಗಲೇ ಬೆಂಗಳೂರು, ರಾಜ್ಯಾಧ್ಯಂತ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ಕಿರುಕುಳ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಬಳಿಕ ಮತ್ತೆ ಜುಲೈ.26ರಂದು ಬೆಂಗಳೂರಿನ ಕಾಂಗ್ರೆಸ್ ಭನದ ಗಾಂಧಿ ಪ್ರತಿಮೆ ಬಳಿಯಲ್ಲಿ ರಾಜ್ಯದ ಎಲ್ಲಾ ನಾಯಕರು ಮೌನ ಸತ್ಯಾಗ್ರಾಹ ನಡೆಸೋದಕ್ಕೆ ನಿರ್ಧರಿಸಲಾಗಿದೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ನೀಡಿದಂತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ‘ಇದೇ 26 ರಂದು ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಪ್ರಕರಣದಲ್ಲಿ ನನ್ನ ತಾಯಿಗೂ ಇದೇ ರೀತಿ ಕಿರುಕುಳ ನೀಡಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ನ್ಯಾಯಾಲಯದ ಮೊರೆ ಹೋಗಿದ್ದೆ ಎಂದರು. https://kannadanewsnow.com/kannada/woman-raped-by-husbands-friend/ ಆದರೆ, ಸೋನಿಯಾ ಗಾಂಧಿ ಅವರು ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಆದರೂ ಕಿರುಕುಳ ನಿಲ್ಲುತ್ತಿಲ್ಲ. ಹೀಗಾಗಿ ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ…
ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (Council for the Indian School Certificate Examinations – CISCE) ಭಾನುವಾರ ಸಂಜೆ 5 ಗಂಟೆಗೆ 12 ನೇ ತರಗತಿ ಅಥವಾ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (Indian School Certificate – ISC) ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಿದೆ. cisce.org ಅಧಿಕೃತ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು results.cisce.org ಮೂಲಕ ನೋಡಬಹುದಾಗಿದೆ. https://kannadanewsnow.com/kannada/hubballi-company-manager-arrested-in-connection-with-fire-at-factory-in-tarihal/ ಸಿಐಎಸ್ಸಿಇ ಜುಲೈ 24 ರಂದು ಸಂಜೆ 5 ಗಂಟೆಗೆ ಐಎಸ್ಸಿಯ 12ನೇ ತರಗತಿಯ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಲಿದೆ. ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಗೊಂಡ ನಂತ್ರ, ಈ ಕೆಳಗಿನ ಹಂತಗಳನ್ನು ಅನುಸರಿಸಿ, ಅಂಕ ವೀಕ್ಷಿಸಬಹುದಾಗಿದೆ. https://kannadanewsnow.com/kannada/woman-raped-by-husbands-friend/ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ? ಒಮ್ಮೆ ಘೋಷಿಸಿದ ನಂತರ, ಫಲಿತಾಂಶಗಳು cisce.org ಮತ್ತು results.cisce.org ರಂದು ಲಭ್ಯವಿರುತ್ತವೆ. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಮುಖಪುಟದಲ್ಲಿ ಲಭ್ಯವಿರುವ ಐಎಸ್ಸಿ ಫಲಿತಾಂಶ 2021 ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅನನ್ಯ ID, ಅನುಕ್ರಮಣಿಕೆ ಸಂಖ್ಯೆ,…
ಹುಬ್ಬಳ್ಳಿ: ಇಂದು ಜಿಲ್ಲೆಯ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ ಮೂವರು ಕಾರ್ಮಿಕರು ದುರ್ಮರಣ ಹೊಂದಿದ್ದರು. ಈ ಸಂಬಂಧ ಇದೀಗ ಪೊಲೀಸರು ಕಂಪನಿಯ ಮ್ಯಾನೇಜರ್ ಅನ್ನು ಬಂಧಿಸಿದ್ದಾರೆ. https://kannadanewsnow.com/kannada/woman-raped-by-husbands-friend/ ಹುಬ್ಬಳ್ಳಿಯ ತಾರಿಹಾಳದಲ್ಲಿದ್ದಂತ ಸ್ಪಾರ್ಕ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಇಂದು ಬೆಂಕಿ ಅವಘಡ ಉಂಟಾಗಿ 8 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗೆ ಗಾಯಗೊಂಡಿದ್ದಂತ ಮೂವರು ಕಾರ್ಮಿಕರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. https://kannadanewsnow.com/kannada/bigg-news-vokkaliga-community-is-being-misused-in-politics-minister-ashok-kidi/ ಇನ್ನೂ ಈ ಪ್ರಕರಣದಲ್ಲಿ ಐವರು ಗಾಯಗೊಂಡು, ಹಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಹುಬ್ಬಳ್ಳಿ ಪೊಲೀಸರು ಕಂಪನಿಯ ಮ್ಯಾನೇಜರ್ ಮಂಜುನಾಥ್ ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೇ ಫ್ಯಾಕ್ಟರಿ ಮಾಲೀಕ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ದಾವಣಗೆರೆ: ಕರ್ನಾಟಕ ಮಹರ್ಷಿ ವಾಲ್ಮೀಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿನ ವಿವಿಧ ಯೋಜನೆಗಳಡಿ ಪರಿಶಿಷ್ಟ ಪಂಗಡದವರು ಹಾಗೂ ಅಎಣ್ಯ ಆಧಾರಿತ ಆಧಿವಾಸಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯ ಜನಾಂಗದ ಅರ್ಹ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್.20 ಆಗಿರುತ್ತದೆ. *ಯೋಜನೆಗಳು: ನೇರಸಾಲ ಯೋಜನೆ-ಘಟಕವೆಚ್ಚ ರೂ.1ಲಕ್ಷ ಇದರಲ್ಲಿ ಶೇ.50ರಷ್ಟು ನಿಗಮದಿಂದ ಸಾಲ ಮತ್ತು ಶೇ.50 ಸಹಾಯಧನ ನೀಡಲಾಗುವುದು. *ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-ಇ.ವಿ. ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ (ಇ-ಕಾಮರ್ಸ್‍ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು) ಗರಿಷ್ಟ ರೂ.50 ಸಾವಿರ ಸಹಾಯಧನ, ಉಳಿದ ಮೊತ್ತ ಬ್ಯಾಂಕ್‍ನÀ ಸಾಲವಾಗಿರುತ್ತದೆ, ಐ.ಎಸ್.ಬಿ ಹಾಗೂ ಇತರೆ ಚಟುವಟಿಕೆಗಳಿಗಾಗಿ ಸಹಾಯಧನವಾಗಿ ಗರಿಷ್ಟ ರೂ.2 ಲಕ್ಷ, ಉಳಿದ ಮೊತ್ತ ಬ್ಯಾಂಕ್‍ನÀ ಸಾಲವಾಗಿರುತ್ತದೆ, ಸರಕು ಸಾಗಾಣಿಕೆ ವಾಹನ: ಗರಿಷ್ಟ ರೂ.3.50ಲಕ್ಷ, ಉಳಿದ ಮೊತ್ತ ಬ್ಯಾಂಕ್‍ನÀ ಸಾಲವಾಗಿರುತ್ತದೆ. *ಮೈಕ್ರೋ ಕ್ರೆಡಿಟ್ ಯೋಜನೆ:…
ದಂಪತಿ ನಡುವಿನ ಜಗಳ ಬಗೆಹರಿಸಲು ಬಂದ ಸ್ನೇಹಿತನಿಂದ ಮಹಿಳೆ ಮೇಲೆ ಅತ್ಯಾಚಾರ… ವಿಷಯ ತಿಳಿದು ಪತ್ನಿಗೆ ತಲಾಖ್ ನೀಡಿದ ಪತಿ
ಮಧ್ಯಪ್ರದೇಶ: ದಂಪತಿಯ ನಡುವಿನ ಜಗಳ ಬಗೆಹರಿಸಲು ಬಂದ ಪತಿಯ ಸ್ನೇಹಿತನೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಪತಿಗೆ ತಿಳಿಸಿದರೆ, ಆತ ಮಹಿಳೆಗೆ ತಲಾಖ್ ನೀಡಿ ಮನೆಯಿಂದ ಹೊರಹಾಕಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ತನ್ನ ಪತಿ ಮತ್ತು ಆತನ ಸ್ನೇಹಿತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ತನ್ನ ಗಂಡನ ಸ್ನೇಹಿತನ ವಿರುದ್ಧ ಅತ್ಯಾಚಾರ ಮತ್ತು ಪತಿಗೆ ತ್ರಿವಳಿ ತಲಾಖ್ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾಳೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆ ಮದುವೆ ಬಳಿಕ ಧರ್ಮ ಬದಲಿಸಿಕೊಂಡು ಮುಸ್ಲಿಂ ಆಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ದಂಪತಿಗಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಈ ವಿಚಾರ ಪತಿಯ ಸ್ನೇಹಿತ ಹಸೀಬ್ ಸಿದ್ದಿಕಿ ಅವರಿಗೆ ತಿಳಿದು ರಾಜಿ ಮಾಡುವ ನೆಪದಲ್ಲಿ ದಂಪತಿಯ ಮನೆಗೆ ಬಂದಿದ್ದಾನೆ. ಇದಾದ ಬಳಿಕ ಮನೆಯಲ್ಲಿ ಒಬ್ಬಳೇ ಮಹಿಳೆಯನ್ನು ಕಂಡು ಅತ್ಯಾಚಾರ ಎಸಗಿದ್ದಾನೆ. ಮಹಿಳೆ ತನ್ನ ಈ ಕೃತ್ಯದ ಬಗ್ಗೆ ಪತಿಗೆ ತಿಳಿಸಿದಾಗ,…
ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ ವಾಯುಪಡೆಯ ಸಿಬ್ಬಂದಿಯೊಬ್ಬರು ʻದೇಶದ ಸಶಸ್ತ್ರ ಪಡೆಗಳ ಗುಲಾಮನಾಗಲು ಬಯಸುವುದಿಲ್ಲʼ ಎಂದು ಹೇಳಿಕೊಂಡು ಸೇವೆಯನ್ನು ತೊರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶ್ರೀಲಂಕಾ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ಅಸಂಕಾ ಶ್ರೀಮಲ್ ಅವರು ಸೇವೆಯನ್ನು ತೊರೆಯುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, “ನಾನು ಶ್ರೀಲಂಕಾ ವಾಯುಪಡೆಯ ಗುಲಾಮನಾಗಲು ಬಯಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ SLAF ವಕ್ತಾರ ಗ್ರೂಪ್ ಕ್ಯಾಪ್ಟನ್ ದುಶನ್ ವಿಜೆಸಿಂಗ್, ಅವರು ತಮ್ಮ ಎಂಟು ವರ್ಷಗಳ ಕಾಲ ತಮ್ಮ ಸೇವೆಯನ್ನು ಸಲ್ಲಿಸಿದ ನಂತರ ಜುಲೈ 21 ವಾಯುಪಡೆಯನ್ನು ತೊರೆದಿದ್ದಾರೆʼ ಎಂದು ಮಾಹಿತಿ ನೀಡಿದ್ದಾರೆ. https://kannadanewsnow.com/kannada/bigg-breaking-news-a-biker-was-charred-to-death-after-diesel-tanker-caught-fire-in-harappanahalli/ https://kannadanewsnow.com/kannada/passenger-arrested-for-misbehaving-with-air-hostess-on-flight/ https://kannadanewsnow.com/kannada/bigg-news-applications-invited-for-agniveer-recruitment-for-youth-from-14-districts-of-south-karnataka/
ಬೆಂಗಳೂರು : ಒಕ್ಕಲಿಗ ಸಮುದಾಯ ಅಷ್ಟು ಚೀಪ್ ಅಲ್ಲ. ಕಾಂಗ್ರೆಸ್, ಜೆಡಿಎಸ್ ನವರು ಪದೇ ಪದೇ ಒಕ್ಕಲಿಗ ಜಾತಿ ವಿಚಾರ ಬೀದಿಗೆ ತಂದು ರಂಪಾಟ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. https://kannadanewsnow.com/kannada/passenger-arrested-for-misbehaving-with-air-hostess-on-flight/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಒಕ್ಕಲಿಗ ಸಮುದಾಯದ ದುರ್ಬಳಕೆ ಆಗುತ್ತಿದೆ. ಡಿ.ಕೆ. ಶಿವಕುಮಾರ್, ಜಮೀರ್ ಅಹ್ಮದ್ ಖಾನ್ ಗೆ ಒಳ್ಳೆಯದಾಗಲಿ, ಒಕ್ಕಲಿಗ ಸಮುದಾಯ ಅನ್ನ ಕೊಡುವ ಸಮುದಾಯ, ಕುವೆಂಪು ಹುಟ್ಟಿದ ಸಮುದಾಯದವರಾದ ನಾವು ವಿಶ್ವಮಾನವನಾಗಿರಬೇಕು ಎಂದು ಹೇಳಿದ್ದಾರೆ. https://kannadanewsnow.com/kannada/bigg-news-applications-invited-for-agniveer-recruitment-for-youth-from-14-districts-of-south-karnataka/ ಕಳೆದ 1 ವಾರದಿಂದ ಪರ ವಿರೋಧ ಚರ್ಚೆಯಿಂದ ನೋವಾಗಿದೆ. ನಾನೂ ಒಬ್ಬ ಒಕ್ಕಲಿಗ ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಒಕ್ಕಲಿಗ ಸಮುದಾಯ ಒಂದೇ ಪಕ್ಷದ ಜೊತೆಗೆ ಇರುತ್ತೇ ಎನ್ನಲಾಗಲ್ಲ. ಜಾತಿ ಹೆಸರಿನಲ್ಇ ಸಿಎಂ ಆಗಲು ಸಾಧ್ಯನಾ? ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯ ತಮ್ಮ ಬ್ರ್ಯಾಂಡ್ ರೀತಿ ಕಚ್ಚಾಡುತ್ತಿದ್ದಾರೆ. ಕುಮಾರಸ್ವಾಮಿ-ಡಿ.ಕೆ. ಶಿವಕುಮಾರ್ ಜಗಳದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದರು.
ದೆಹಲಿ: ಪ್ರಯಾಣದ ವೇಳೆ ಇಂಡಿಗೋ ಏರ್‌ಲೈನ್ಸ್ ವಿಮಾನದ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಂಧಿಸಲಾಗಿತ್ತು. ನಂತ್ರ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಈ ಘಟನೆಯು ಶ್ರೀನಗರ ಮತ್ತು ಲಕ್ನೋ ನಡುವೆ ಸಂಚರಿಸುತ್ತಿದ್ದ 6E6075 ವಿಮಾನದಲ್ಲಿ ಸಂಭವಿಸಿದೆ. ವಿಮಾನ ಶ್ರೀನಗರದಿಂದ ಟೇಕ್ ಆಫ್ ಆದ ನಂತರ ಪ್ರಯಾಣಿಕರು ಗಗನಸಖಿಯೊಂದಿಗೆ ವಾಗ್ವಾದಕ್ಕಿಳಿದು ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ನಂತರ ಮಹಿಳೆ ಫ್ಲೈಟ್ ಕ್ಯಾಪ್ಟನ್‌ಗೆ ಈ ವಿಷಯ ತಿಳಿಸಿದ್ದು, ಅವರು ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಮಾನದ ಆಗಮನದ ಮೊದಲು, ರನ್‌ವೇ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ವಿಮಾನ ಲ್ಯಾಂಡ್ ಆದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. https://kannadanewsnow.com/kannada/bigg-news-bjp-will-come-back-to-power-after-winning-150-seats-in-the-state-former-cm-bs-yediyurappa/ https://kannadanewsnow.com/kannada/meghalaya-bjp-leaders-resort-raided-cops-call-it-brothel-73-arrested/ https://kannadanewsnow.com/kannada/bigg-breaking-news-a-biker-was-charred-to-death-after-diesel-tanker-caught-fire-in-harappanahalli/