Subscribe to Updates
Get the latest creative news from FooBar about art, design and business.
Author: KNN IT TEAM
ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ಲತಾಶ್ರೀ ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ನಿಗದಿತ ಅವಧಿಗೆ ಹಾಜರಾಗಲು ಹಾಗೂ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದು. ಬೆಳಿಗ್ಗೆ 10ಕ್ಕೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಖಡಕ್ ಎಚ್ಚರಿಕೆ ನೀಡಿದೆ. https://kannadanewsnow.com/kannada/bigg-news-state-government-orders-appointment-of-chairpersons-for-various-boards-of-corporations/ ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು ಕೆಲವು ನೌಕರರು, ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಮತ್ತು ಕಾರ್ಯನಿಷ್ಠೆಯ ಕೊರತೆಯನ್ನು ಇತ್ತೀಚಿನ ದಿನಗಳಲ್ಲಿ ಅವಲೋಕಿಸಲಾಗಿದೆ ಎಂದಿದ್ದಾರೆ. ಸಾರ್ವಜನಿಕರು ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಯಲ್ಲಿನ ತಮ್ಮ ಕಾರ್ಯಗಳಿಗೆ ಬೆಳಿಗ್ಗೆ ನಿಗದಿತ ಅವಧಿಗೆ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡದಾಗ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿಗಳು, ಅಧಿಕಾರಿಗಳು ಕಚೇರಿಗೆ ಹಾಜರಾಗಿಲ್ಲದೇ ಇರುವ ಕಾರಣ ಸಾಮಾನ್ಯ ಜನರು ಬವಣೆ ಪಡುವಂತೆ ಆಗಿದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರದ…
Good News: ಅಗ್ನಿಪಥ್ದಡಿ ಅರ್ಜಿ ಸಲ್ಲಿಸುವವರಿಗೆ ಸಿಹಿ ಸುದ್ದಿ: ಈ ಸಾಲಿನಲ್ಲಿ ವಯೋಮಿತಿ ಸಡಿಲಿಕೆ, ಇಲ್ಲಿದೆ ಮಾಹಿತಿ
ಬಳ್ಳಾರಿ: ಬೆಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿಪಥ್ ಯೋಜನೆಯಡಿ ರಾಜ್ಯದ 14 ಜಿಲ್ಲೆಯ ಯುವಕರಿಗೆ ಸೇನಾ ನೇಮಕಾತಿ ರ್ಯಾಲಿಯನ್ನು ಆ.10ರಿಂದ 22ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸೇನಾ ನೇಮಕಾತಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೇನಾ ನೇಮಕಾತಿಯ ವಿವರಗಳು ಇಂತಿವೆ: ಟ್ರೇಡ್‍ಗಳು;ಅಗ್ನಿವೀರ್(ಸಾಮಾನ್ಯ ಕರ್ತವ್ಯ)(ಎಲ್ಲಾ ಶಸ್ತ್ರಾಸ್ತ್ರಗಳು)-ವಯಸ್ಸು 171/2ರಿಂದ 21 ವರ್ಷಗಳು, ಶೈಕ್ಷಣಿಕ ಅರ್ಹತೆಯು 10ನೇ ತರಗತಿ ಅಥವಾ ಮೆಟ್ರಿಕ್ ಒಟ್ಟು ಶೇ.45 ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇ.33 ಅಂಕಗಳನ್ನು ಪಡೆದಿರಬೇಕು. ಅಗ್ನಿವೀರ್(ತಾಂತ್ರಿಕ)(ಎಲ್ಲಾ ಶಸ್ತ್ರಾಸ್ತ್ರಗಳು) ಹಾಗೂ ಅಗ್ನಿವೀರ್(ತಾಂತ್ರಿಕ)(ವಾಯುಯಾನ ಮತ್ತು ಯುದ್ದ ಸಾಮಗ್ರಿ ಪರೀಕ್ಷಕ)-ವಯಸ್ಸು 171/2ರಿಂದ 21 ವರ್ಷಗಳು, ಶೈಕ್ಷಣಿಕ ಅರ್ಹತೆಯು 10+2/ ಮಧ್ಯಂತರ ಪಾಸ್ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್‍ನಲ್ಲಿ ಒಟ್ಟು ಶೇ.50 ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇ.40 ಅಂಕಗಳನ್ನು ಪಡೆದಿರಬೇಕು ಅಥವಾ 10+2/ ಎನ್‍ಐಒಎಸ್ ಯಾವುದೇ ಮಾನ್ಯತೆ ಪಡೆದ ರಾಜ್ಯ ಶಿಕ್ಷಣ ಮಂಡಳಿ ಅಥವಾ ಕೇಂದ್ರ ಶಿಕ್ಷಣ ಮಂಡಳಿಯಿಂದ ಮಧ್ಯಂತರ ಪರೀಕ್ಷೆ ಪಾಸ್…
ಬೆಂಗಳೂರು: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿತ್ತು, ಆ ವೇಳೆಯಲ್ಲಿ, ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಮಾಡಲಾಗಿತ್ತು.ಈಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವುದರ ವಿವರ ಇಲ್ಲಿದೆ. ಗುತ್ತಿಗನೂರು ವಿ, ಗೌಡ-ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮ ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ-ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಚಂಗಾವರ ಮಾರಣ್ಣ-ಕಾಡುಗೊಲ್ಲ ಅಭಿವೃದ್ದಿ ನಿಗಮ ದೇವೇಂದ್ರನಾಥ ಕೆ ನಾದ್-ಅಲೆಮಾರಿ/ಅರೆ ಅಲೆ ಮಾರಿ ಅಭಿವೃದ್ದಿ ನಿಗಮ ಕೆ.ಪಿ ವೆಂಕಟೇಶ್-ಕರ್ನಾಟಕ ಸಪಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಧರ್ಮಣ್ಣ ದೊಡ್ಡಮನಿ- ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ರಘು ಕೌಟಿಲ್ಯ- ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಕೊಲ್ಲಾ ಶೇಶಗಿರಿ ರಾವು-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ,…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಈ ತಿಂಗಳ ಆರಂಭದಲ್ಲಿ, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಿಂದ ಹೊರಗುಳಿಯಲು ತನ್ನ ಎಲ್ಲಾ ಸಂಪತ್ತನ್ನ ತನ್ನ ಲೋಕೋಪಕಾರಿ ಪ್ರತಿಷ್ಠಾನಕ್ಕೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಈಗ, ಜುಲೈ 13ರಂದು ಟ್ವೀಟ್ ಹಂಚಿಕೊಂಡ ಸುಮಾರು ಒಂದು ವಾರದ ನಂತ್ರ ಬಿಲ್ ಗೇಟ್ಸ್, ತಮ್ಮ ಚಾರಿಟಬಲ್ ಫೌಂಡೇಶನ್‌ಗೆ 6 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನ ನೀಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಮೆರಿಕದ ಉದ್ಯಮಿ ಕೆನಡಿಯನ್ ನ್ಯಾಷನಲ್ ರೈಲ್ವೆ ಕಂಪನಿಯಲ್ಲಿ ಸುಮಾರು 5.2 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ʼನ್ನ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ದಾನ ಮಾಡಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಡೀರ್ & ಕಂಪನಿಯ 995 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನ ಗುರುವಾರ ಫೌಂಡೇಶನ್‌ಗೆ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಗೇಟ್ಸ್ ಅವ್ರ ಹೂಡಿಕೆ ವಾಹನವಾದ ಕ್ಯಾಸ್ಕೇಡ್ ಇನ್ವೆಸ್ಟ್ಮೆಂಟ್ ಎಲ್ಎಲ್ಸಿಯಿಂದ 3 ದಶಲಕ್ಷಕ್ಕೂ ಹೆಚ್ಚು ಷೇರುಗಳನ್ನ ಖಾಸಗಿ ಲಾಭರಹಿತ ಸಂಸ್ಥೆಗೆ ವರ್ಗಾಯಿಸಲಾಗಿದೆ” ಎಂದಿದೆ.…
ನವದೆಹಲಿ : ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ, 2021-22ರ ಆರ್ಥಿಕ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 78 ಮತ್ತು 76 ಬಾರಿ ಹೆಚ್ಚಿಸಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇನ್ನು ಈ ಉತ್ತರವನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಚಡ್ಡಾ, ಇದು ಸಾಮಾನ್ಯ ಜನರನ್ನ “ಲೂಟಿ” ಮಾಡುವ ಸರ್ಕಾರದ ಸ್ಪಷ್ಟ ತಪ್ಪೊಪ್ಪಿಗೆಯಾಗಿದೆ ಎಂದು ಹೇಳಿದ್ದಾರೆ. “ರಾಜ್ಯಸಭೆಯಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ, ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 78 ಬಾರಿ ಮತ್ತು 76 ಬಾರಿ ಹೆಚ್ಚಿಸಲಾಗಿದೆ ಎಂದು ಒಪ್ಪಿಕೊಂಡಿದೆ. ಇದು ಸಾಮಾನ್ಯ ಜನರನ್ನು ಲೂಟಿ ಮಾಡಿದ ಸರ್ಕಾರದ ಸ್ಪಷ್ಟ ತಪ್ಪೊಪ್ಪಿಗೆಯಾಗಿದೆ” ಎಂದು ಚಡ್ಡಾ ಹೇಳಿದರು. https://twitter.com/raghav_chadha/status/1551511427743371264?s=20&t=m093N2CDSclyJmv1emoW5Q ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನ ಕ್ರಮವಾಗಿ ಜೂನ್ 26, 2010 ಮತ್ತು ಅಕ್ಟೋಬರ್ 19, 2014ರಿಂದ ಜಾರಿಗೆ ಬರುವಂತೆ…
ನವದೆಹಲಿ : ಪ್ರಸ್ತುತ ರಾಜಕೀಯದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. “ಇಂದಿನ ರಾಜಕೀಯವು ಅಧಿಕಾರದ ಗುರಿಯಾಗಿ ಮುಂದುವರಿಯುತ್ತಿದೆ. ಹಾಗಾಗಿ ಕೆಲವೊಮ್ಮೆ ರಾಜಕೀಯವನ್ನ ತೊರೆಯುವ ಮನಸ್ಸಾಗುತ್ತೆ” ಎಂದು ಗಡ್ಕರಿ ಹೇಳಿದರು. ಇನ್ನು ಇತ್ತಿಚಿಗೆ ಗಡ್ಕರಿ ನೀಡಿದ ಈ ರೀತಿಯ ಕೆಲವೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “ನಾನು ರಾಜಕೀಯವನ್ನ ತ್ಯಜಿಸಬೇಕೇ ಅಥವಾ ಬೇಡವೇ ಎಂದು ನನಗೆ ಹಲವು ಬಾರಿ ಅನಿಸುತ್ತೆ, ಜೀವನದಲ್ಲಿ ರಾಜಕೀಯಕ್ಕಿಂತ ಹೆಚ್ಚಿನದನ್ನ ಮಾಡಬೇಕಾಗಿದೆ” ಎಂದು ಗಡ್ಕರಿ ಹೇಳಿದರು. ರಾಜಕೀಯವು ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ್ದು, ಆದ್ರೆ, ಪ್ರಸ್ತುತ ರಾಜಕೀಯವು ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಅಧಿಕಾರದಲ್ಲಿ ಉಳಿಯಲು ಮತ್ತು ಅಧಿಕಾರಕ್ಕೆ ಬರಲು ರಾಜಕೀಯ ಅಗತ್ಯ” ಎಂದು ಗಡ್ಕರಿ ಸಂವೇದನಾಶೀಲ ಕಾಮೆಂಟ್ ಮಾಡಿದ್ದಾರೆ. ಇನ್ನು “ಈ ಹಿಂದೆ ರಾಜಕೀಯವು ಸಾಮಾಜಿಕ ಚಳವಳಿಯ ಭಾಗವಾಗಿತ್ತು. ಸಮಾಜದಲ್ಲಿ ಬದಲಾವಣೆ, ದೇಶದ ಅಭಿವೃದ್ಧಿಯತ್ತ ಗಮನ ಹರಿಸಿ ರಾಜಕೀಯ ನಡೆಯುತ್ತಿದ್ದು, ಈಗ ಅಧಿಕಾರವೇ ಗುರಿ ಎಂಬಂತೆ ರಾಜಕಾರಣ ನಡೆಯುತ್ತಿದೆ” ಎಂದರು. ಇನ್ನು “ಗಿರೀಶ್ ಗಾಂಧಿ…
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಅಕ್ರಮದ ನೆಪದಲ್ಲಿ ಕಡುಬಡವರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬಿಪಿಎಲ್ ಕಾರ್ಡ್ ಹೊಂದಿದವರು ವಾಹನ ಹೊಂದಿದ್ದಲ್ಲಿ ಅಂಥವರಿಗೆ ನೋಟಿಸ್ ನೀಡಿ ದುಬಾರಿ ದಂಡ ಹಾಗೂ ಕ್ರಿಮಿನಲ್ ಕೇಸ್ ಹಾಕುವುದಾಗಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸುಮಾರು 12,584 ಮಂದಿಗೆ ನೋಟಿಸ್ ನೀಡಿದ್ದು, ಈ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಬೆಂಗಳೂರಿನ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಎಂಬ ಸಂಸ್ಥೆಯು ಕಾನೂನು ಹೋರಾಟಕ್ಕೆ ಇಳಿದಿದೆ. ಮುಖ್ಯಮಂತ್ರಿ, ಆಹಾರ ಸಚಿವರು ಹಾಗೂ ಮುಖ್ಯಕಾರ್ಯದರ್ಶಿಗೆ ಸೋಮವಾರ ಪತ್ರ ಬರೆದು, ಬಡಪಾಯಿ ಜನರಿಗೆ ನೋಟೀಸ್ ತಿಳುವಳಿಕೆ ನೋಟಿಸ್ ನೀಡದೆ ಕಾನೂನು ಕ್ರಮ ಜರುಗಿಸದಂತೆ ಒತ್ತಾಯಿಸಿದೆ. ಈ ಹಿಂದೆ ಜಿಂದಾಲ್ ಭೂ ಹಗರಣ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಕರ್ಮಕಾಂಡ ಸಹಿತ ಹಲವಾರು ಭ್ರಷ್ಟಾಚಾರ ಪ್ರಕರಣಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದ ಕೆ.ಎ.ಪಾಲ್ ಮುಂದಾಳುತ್ವದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಇದೀಗ ‘BPL’ ಅವಾಂತರ ವಿರುದ್ದ…
ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ಲತಾಶ್ರೀ ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ನಿಗದಿತ ಅವಧಿಗೆ ಹಾಜರಾಗಲು ಹಾಗೂ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದು. ಬೆಳಿಗ್ಗೆ 10ಕ್ಕೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು ಕೆಲವು ನೌಕರರು, ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಮತ್ತು ಕಾರ್ಯನಿಷ್ಠೆಯ ಕೊರತೆಯನ್ನು ಇತ್ತೀಚಿನ ದಿನಗಳಲ್ಲಿ ಅವಲೋಕಿಸಲಾಗಿದೆ ಎಂದಿದ್ದಾರೆ. https://kannadanewsnow.com/kannada/breaking-news-10-discount-on-property-registration-extended-for-next-3-months-minister-r-ashok/ ಸಾರ್ವಜನಿಕರು ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಯಲ್ಲಿನ ತಮ್ಮ ಕಾರ್ಯಗಳಿಗೆ ಬೆಳಿಗ್ಗೆ ನಿಗದಿತ ಅವಧಿಗೆ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡದಾಗ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿಗಳು, ಅಧಿಕಾರಿಗಳು ಕಚೇರಿಗೆ ಹಾಜರಾಗಿಲ್ಲದೇ ಇರುವ ಕಾರಣ ಸಾಮಾನ್ಯ ಜನರು ಬವಣೆ ಪಡುವಂತೆ ಆಗಿದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರದ…
ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ \ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ದಾಖಲಾತಿ ಮಿತಿಯನ್ನ 80 ರಿಂದ 100ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ, “ಕಾಲೇಜಿನಲ್ಲಿ ಹೆಚ್ಚುವರಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವುದನ್ನು ಖಚಿತ ಪಡಿಸಿಕೊಂಡು ಆಗತ್ಯತೆ ಹಾಗೂ ಬೇಡಿಕೆಯಾನುಸಾರ, ಮಂಜೂರಾತಿ ಪಡೆದು ಪ್ರಸ್ತುತ ಭೋಧಿಸುತ್ತಿರುವ ಒಂದು ವಿಭಾಗಕ್ಕೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ಪಡೆಯುಲು ಅವಕಾಶ ಕಲ್ಪಸಿ ಆದೇಶಿಸಲಾಗಿತ್ತು. ಇನ್ನು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಪ್ರತಿ ಸಂಯೋಜನೆಯ 2ನೇ ವಿಭಾಗಕ್ಕೂ ಹೆಚ್ಚುವರಿ 20 ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡಲಾಗಿದೆ” ಎಂದಿದೆ. ಅದ್ರಂತೆ ಪ್ರತಿ ಸಂಯೋಜನೆಯ ಗರಿಷ್ಠ 2 ವಿಭಾಗಕ್ಕೆ ಮಾತ್ರ ಪ್ರಥಮ ಪಿಯುಸಿಗೆ 20 ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಅನುಮತಿಸಿದೆ.
ಬೆಂಗಳೂರು: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿತ್ತು, ಆ ವೇಳೆಯಲ್ಲಿ, ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಮಾಡಲಾಗಿತ್ತು.ಈಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವುದರ ವಿವರ ಇಲ್ಲಿದೆ. ಗುತ್ತಿಗನೂರು ವಿ, ಗೌಡ-ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮ ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ-ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಚಂಗಾವರ ಮಾರಣ್ಣ-ಕಾಡುಗೊಲ್ಲ ಅಭಿವೃದ್ದಿ ನಿಗಮ ದೇವೇಂದ್ರನಾಥ ಕೆ ನಾದ್-ಅಲೆಮಾರಿ/ಅರೆ ಅಲೆ ಮಾರಿ ಅಭಿವೃದ್ದಿ ನಿಗಮ ಕೆ.ಪಿ ವೆಂಕಟೇಶ್-ಕರ್ನಾಟಕ ಸಪಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಧರ್ಮಣ್ಣ ದೊಡ್ಡಮನಿ- ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ರಘು ಕೌಟಿಲ್ಯ- ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಕೊಲ್ಲಾ ಶೇಶಗಿರಿ ರಾವು-ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ,…