Author: KNN IT TEAM

ನವದೆಹಲಿ :  ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕಾಗಿ ದೊಡ್ಡಬಳ್ಳಾಪುರದಲ್ಲಿ ಜುಲೈ 28 ಕ್ಕೆ ‘ಜನೋತ್ಸವ’ ಹಮ್ಮಿಕೊಳ್ಳಲಾಗಿದೆ. https://kannadanewsnow.com/kannada/4-congress-mps-suspended-from-lok-sabha-for-entire-session-after-protests/ ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಜುಲೈ 28 ಕ್ಕೆ ನನ್ನ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿಯ ಮೂರು ವರ್ಷಗಳ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಒಂದು ವರ್ಷದ ಸಾಧನಾ ಸಮಾವೇಶ ಜನೋತ್ಸವ ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-this-time-too-the-use-of-djs-will-not-be-allowed-in-ganeshotsav/ ಬಸವರಾಜ ಬೊಮ್ಮಾಯಿ ಅವರು 2021ರ ಜುಲೈ 28ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ದೊಡ್ಡಮಟ್ಟದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

Read More

ನವದೆಹಲಿ: ಬೆಲೆ ಏರಿಕೆ ವಿರೋಧಿಸಿ ಸದನದೊಳಗೆ ಕರಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಆಗಸ್ಟ್ 12ಕ್ಕೆ ಕೊನೆಗೊಳ್ಳುವ ಸಂಪೂರ್ಣ ಮುಂಗಾರು ಅಧಿವೇಶನಕ್ಕೆ ಅಮಾನತು ಮಾಡಲಾಗಿದೆ. ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸಲು ಬಯಸುವವರು ಸದನದ ಹೊರಗೆ ಭಿತ್ತಿಪತ್ರ ಹಿಡಿದು ಪ್ರತಿಭಟಿಸುವಂತೆ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯ ಹೊರತಾಗಿಯೂ ಕರಪತ್ರ ಹಿಡಿದು ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಶಾಸಕ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಅವರನ್ನು ಅಮಾನತುಗೊಳಿಸಲಾಗಿದೆ. ಸ್ಪೀಕರ್ ಕ್ರಮದ ನಂತರ ನಾಲ್ವರು ಸಂಸತ್ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತೆರಳಿ ಘೋಷಣೆಗಳನ್ನು ಕೂಗಿದರು. ಕೆಲವರನ್ನು ಅಮಾನತು ಮಾಡುವ ಮೂಲಕ ಸರ್ಕಾರ ತನ್ನ ಸಂಸದರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ನಮ್ಮ ಸಂಸದರು ಜನರ ಮುಖ್ಯವಾದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. https://kannadanewsnow.com/kannada/crematorium-submerged-70-year-old-madhya-pradesh-woman-cremated-on-road/ “ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಹಿಟ್ಟು, ಮಜ್ಜಿಗೆಯಂತಹ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಮುಂತಾದ ವಿಷಯಗಳ ಕುರಿತು ಸಂಸದರು…

Read More

ಕೊಪ್ಪಳ : ಬಾಳೆಹಣ್ಣಿನ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ನೀಡಲು ಸೂಚನೆ ನೀಡಲಾಗಿದೆ. https://kannadanewsnow.com/kannada/bigg-news-this-time-too-the-use-of-djs-will-not-be-allowed-in-ganeshotsav/ ಕಲ್ಯಾಣ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಹೆಚ್ಚಳಕ್ಕಾಗಿ ಬಾಳೆಹಣ್ಣು ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಾಗಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಬಾಳೆಹಣ್ಣು ದರ ಭಾರೀ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣು ಬದಲು ಶೇಂಗಾ ಚಿಕ್ಕಿ ನೀಡಲು ನಿರ್ಧರಿಸಲಾಗಿದೆ. ಬಾಳೆಹಣ್ಣು ದರ ವಿಪರೀತವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಶಾಲಾ ಮಕ್ಕಳಿಗೆ ಶೇಂಗಾ ಚಿಕ್ಕಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಮುಖ್ಯಸ್ಥರಾದ ಅನಿತಾ ಹೇಳಿದ್ದಾರೆ. https://kannadanewsnow.com/kannada/crematorium-submerged-70-year-old-madhya-pradesh-woman-cremated-on-road/

Read More

ಬೆಳಗಾವಿ: ಸರ್ವೋಚ್ಛ ನ್ಯಾಯಾಲಯ ಹಾಗೂ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮತ್ತಿತರ ಹಬ್ಬದಾಚರಣೆಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಆಗಸ್ಟ್ 31 ರಿಂದ ಸೆಪ್ಟೆಂಬರ್ 9 ರವರೆಗೆ ಗಣೇಶೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಸಂಭ್ರಮದಿಂದ ಹಾಗೂ ಶಾಂತಿಯುತವಾಗಿ ಉತ್ಸವ ಆಚರಣೆಗೆ ಗಣೇಶೋತ್ಸವ ಮಂಡಳಿಗಳು ಸಹಕರಿಸಬೇಕು ಎಂದು ಹೇಳಿದ್ದಾರೆ. ಉತ್ಸವ ಸಂದರ್ಭದಲ್ಲಿ ಡಿಜೆ ಗೆ ಅವಕಾಶವಿಲ್ಲ; ಆದರೆ ನಿಗದಿತ ಪ್ರಮಾಣದ ಶಬ್ದ ಹೊರಸೂಸುವ “ಧ್ವನಿ”ವರ್ಧಕ ಬಳಕೆಗೆ ಸದ್ಯಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮತಿಯನ್ನು ನೀಡಲಾಗುವುದು. ಏಕಗವಾಕ್ಷಿ…

Read More

ಭಿಂಡ್ (ಮಧ್ಯಪ್ರದೇಶ) : ಮಳೆಯ ಪ್ರವಾಹದಿಂದಾಗಿ ಸ್ಮಶಾನ ಜಲಾವೃತವಾದ ಪರಿಣಾಮ 70 ವರ್ಷದ ಮಹಿಳೆಯೊಬ್ಬರ ಮೃತದೇಹಕ್ಕೆ ರಸ್ತೆ ಬದಿಯಲ್ಲೇ ಅಂತ್ಯಸಂಸ್ಕಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಅಜ್ನೌಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ ಶವಸಂಸ್ಕಾರದ ಸ್ಥಳವು ಸಿಂಧ್ ನದಿಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಹೀಗಾಗಿ ಬೇರೆ ಸ್ಥಳದ ಲಭ್ಯತೆ ಇಲ್ಲದ್ದರಿಂದ ರಸ್ತೆ ಬದಿಯಲ್ಲೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮೃತ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. भिण्ड से आई मानवता को शर्मसार करने वाली विडीओ, जहाँ गांव में मुक्तिधाम ना होने के चलते ग्रामीणों ने बीच रोड पर महिला का किया अंतिम संस्कार. ऐसे में अक्सर लोगों को सहारा लेना पड़ता हैं… ⁦@ChouhanShivraj⁩ ⁦@BJP4MP⁩ pic.twitter.com/vh2IS9m3XF — Mayank Tiwari (@imayanktiwari) July 25, 2022 ಭಿಂಡ್ ಜಿಲ್ಲೆಯಲ್ಲಿರುವ ಅಜ್ನೌಲ್ ಗ್ರಾಮದಲ್ಲಿ ಯಾವುದೇ ಪರ್ಯಾಯ ಸ್ಮಶಾನ ಸೌಲಭ್ಯ ಇಲ್ಲದಿರುವುದರಿಂದ ಅಲ್ಲಿನ ಜನರು…

Read More

ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಘೋಷಿಸುವ ಬಗ್ಗೆ ಕೇಂದ್ರವು ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ರಾಜ್ಯಕ್ಕೆ ಭರವಸೆ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ. https://kannadanewsnow.com/kannada/brother-in-law-kills-25-year-old-widow-over-suspicion-of-affair-arrested/ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪರಿಸರ ಸೂಕ್ಷ್ಮ ವಲಯಗಳನ್ನು ಘೋಷಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೇಂದ್ರವು ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ‘ರಾಜ್ಯದೊಂದಿಗೆ ಸಮಾಲೋಚಿಸದೆ, ಕೇಂದ್ರವು ತನ್ನ ನಿರ್ಧಾರದೊಂದಿಗೆ ಮುಂದುವರಿಯುವುದಿಲ್ಲ ಎಂದು ಸಚಿವರು ನಮಗೆ ಭರವಸೆ ನೀಡಿದರು’ ಎಂದು ಸಿಎಂ ಹೇಳಿದರು. https://kannadanewsnow.com/kannada/bigg-news-dengue-cases-on-the-rise-in-the-state-344-cases-detected-in-8-days/ ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವ ಮೊದಲು ಪ್ರದೇಶಗಳ ನೆಲದ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುವ ನಮ್ಮ ಸಲಹೆಗೆ ಕೇಂದ್ರ ಸಚಿವರು ಸಹಮತ ವ್ಯಕ್ತಪಡಿಸಿದರು. ಸಚಿವಾಲಯವು ಈಗಾಗಲೇ ಈ ವಿಷಯದ ಬಗ್ಗೆ ಸಮಿತಿಯನ್ನು ರಚಿಸಿದೆ, ಅದು ತನ್ನ ಅಭಿಪ್ರಾಯವನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಲಿದೆ” ಎಂದು ಬೊಮ್ಮಾಯಿ ಹೇಳಿದರು. https://kannadanewsnow.com/kannada/bigg-news-july-31-is-the-last-day-for-eligible-beneficiaries-registered-under-pm-kisan-scheme-to-do-e-kyc/ ಕಸ್ತೂರಿರಂಗನ್…

Read More

ಘಾಜಿಯಾಬಾದ್(ಉತ್ತರ ಪ್ರದೇಶ): ಅನೈತಿಕ ಸಂಬಂಧದ ಶಂಕೆಯ ಅನುಮಾನದಿಂದ ವಿಧವೆ ಸೊಸೆಯನ್ನು ಸೋದರ ಮಾವನೊಬ್ಬ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಟ್ವಿಂಕಲ್ ಎಂದು ಗುರುತಿಸಲಾಗಿದೆ. ಟ್ವಿಂಕಲ್ ಮೀರತ್ ಜಿಲ್ಲೆಯ ಜಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ಪುರ್ ಗ್ರಾಮದ ನಿವಾಸಿ ಗೌರವ್ ಅವರನ್ನು 2017 ರಲ್ಲಿ ವಿವಾಹವಾಗಿದ್ದರು. ಅವರ ಪತಿ 2021 ರಲ್ಲಿ ಟ್ರಕ್ ಅಪಘಾತದಲ್ಲಿ ನಿಧನರಾದರು. ಇದಾದ ಕೆಲವು ದಿನಗಳ ಬಳಿಕ ಆಕೆ ಪದೇ ಪದೇ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಕಂಡ ಅಭಿಷೇಕ್‌ಗೆ ಆಕೆಯ ಮೇಲೆ ಅನುಮಾನ ಮೂಡತೊಡಗಿತು. ಭಾನುವಾರ ರಾತ್ರಿ ಆತ ಟ್ವಿಂಕಲ್ ಮಲಗಿದ್ದ ಕೋಣೆಗೆ ಹೋಗಿ, ಆಕೆಯನ್ನು ಮನಬಂದಂತೆ ಸುತ್ತಿಗೆಯಿಂದ ಹೊಡೆದು ದೇಹವನ್ನು ಹಲವು ಕಡೆ ಸೀಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಅಭಿಷೇಕ್‌ನನ್ನು ಬಂಧಿಸಲಾಗಿದ್ದು, ತನಿಖೆಯ ವೇಳೆ ಸತ್ಯಾಂಶ ಬಯಲಾಗಿದೆ. ಇನ್ನೂ, ಟ್ವಿಂಕಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/commonwealth-games-2022-heres-a-list-of-indian-athletes-to-look-out-for-in-upcoming-event/ https://kannadanewsnow.com/kannada/uttar-pradesh-young-woman-dies-after-falling-while-running/ https://kannadanewsnow.com/kannada/bigg-news-july-31-is-the-last-day-for-eligible-beneficiaries-registered-under-pm-kisan-scheme-to-do-e-kyc/

Read More

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ ಶುರುವಾಗಿದ್ದು, ಕಳೆದ 8 ದಿನದ ಅವಧಿಯಲ್ಲಿ ರಾಜ್ಯದಲ್ಲಿ 344 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕಳೆದ 8 ದಿನಗಳ ಅವಧಿಯಲ್ಲಿ (ಜುಲೈ 18 ರಿಂದ ಜುಲೈ 25) ಬೆಂಗಳೂರಿನಲ್ಲಿ 138 ಪ್ರಕರಣಗಳು ದೃಢಪಟ್ಟಿವೆ. ಶಿವಮೊಗ್ಗದಲ್ಲಿ 14, ಉಡುಪಿಯಲ್ಲಿ 13, ದಕ್ಷಿಣ ಕನ್ನಡದಲ್ಲಿ 13 ಸೇರಿದಂತೆ ರಾಜ್ಯದಲ್ಲಿ 344 ಡೆಂಗೆ ಪ್ರಕರಣಗಳು ವರದಿಯಾಗಿವೆ. ಜನವರಿಯಿಂದ ಇದುವರೆಗೂ ರಾಜ್ಯದಲ್ಲಿ3,728 ಡೆಂಗೆ ಪ್ರಕರಣಗಳು ವರದಿಯಾಗಿವೆ. ಪ್ರಮುಖವಾಗಿ ಚಿತ್ರದುರ್ಗ 168, ದಾವಣಗೆರೆ 119, ಶಿವಮೊಗ್ಗ 172, ಬೆಳಗಾವಿ 103, ವಿಜಯಪುರ 125, ಕಲಬುರಗಿ 105, ಕೊಪ್ಪಳ 101, ಮೈಸೂರು 349, ಹಾಸನ 132, ದಕ್ಷಿಣ ಕನ್ನಡ 189, ಉಡುಪಿ 369 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಇ 723 ಹೊಸ ಪ್ರಕರಣಗಳು ವರದಿಯಾಗಿವೆ. ಡೆಂಗ್ಯೂ ಜ್ವರ ಎಲ್ಲಿಂದ, ಹೇಗೆ ಹರಡುತ್ತೆ..? ಸಾಮಾನ್ಯವಾಗಿ ಡೆಂಗ್ಯೂ ಜ್ವರ ಸೊಳ್ಳೆಗಳಿಂದ ಬರುತ್ತೆ. ಹೌದು, ಹಗಲಿನ ಸಮಯದಲ್ಲಿ ಸೊಳ್ಳೆ ಕಡಿತದ ಮೂಲಕ ಡೆಂಗ್ಯೂ ಹರಡಲಾಗುತ್ತದೆ. ಡೆಂಗ್ಯೂ ಜ್ವರದ…

Read More

ಕೆಎನ್​ಎನ್​ ಡಿಜಿಟಲ್​ ಡೆಸ್ಕ್ : ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ(Commonwealth Games)ದಲ್ಲಿ 322 ಭಾರತೀಯ ಸದಸ್ಯರು ಭಾಗವಹಿಸಲಿದ್ದಾರೆ. ಮುಂಬರುವ ಸವಾಲಿಗೆ ಭಾರತೀಯ ಅಥ್ಲೀಟ್‌ಗಳು ಸಜ್ಜಾಗಿದ್ದಾರೆ ಮತ್ತು ದೇಶಕ್ಕಾಗಿ ಅವರು ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲುವ ಗುರಿ ಹೊಂದಿದ್ದಾರೆ. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 2 ಚಿನ್ನ, 3 ಬೆಳ್ಳಿ ಮತ್ತು 7 ಕಂಚಿನೊಂದಿಗೆ ದೇಶದ ಅತ್ಯುತ್ತಮ ಅಥ್ಲೆಟಿಕ್ಸ್ ಪದಕಗಳನ್ನು ಗೆದ್ದಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗಮನಹರಿಸಬೇಕಾದ ಕೆಲವು ಭಾರತೀಯ ಅಥ್ಲೀಟ್‌ಗಳ ಬಗ್ಗೆ ನೋಡೋಣ ಬನ್ನಿ… ಜಾವೆಲಿನ್ ಥ್ರೋ ನೀರಜ್ ಚೋಪ್ರಾ: ಇತ್ತೀಚೆಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್ ಈವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ಅವರು ನಿರಂತರವಾಗಿ ಜಾವೆಲಿನ್‌ನಲ್ಲಿ 90 ಮೀ ದೂರವನ್ನು ದಾಟುತ್ತಿರುವ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೋಪ್ರಾರನ್ನು ಸೋಲಿಸಿದ ತಮ್ಮ ಸ್ಪರ್ಧಿ ಆಂಡರ್ಸನ್ ಪೀಟರ್ಸ್ ಅವರನ್ನು ೆದುರಿಸಲಿದ್ದಾರೆ. ಚೋಪ್ರಾ…

Read More

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/bigg-news-heres-the-most-important-information-about-cet-result-2/ ಕೃಷಿ ಇಲಾಖೆ ಸೂಚಿಸಿದ ಫಲಾನುಭವಿಗಳು https://pmkisan.gov.xn--in-muh8o/ ಭೇಟಿ ನೀಡಿ ಇ-ಕೆವೈಸಿ ಆಯ್ಕೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದಿಸಿ, ಬಳಿಕ ಆಧಾರ್‍ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಪ್ರಕ್ರಿಯೆ ಇ-ಕೆವೈಸಿ ಪೂರ್ಣಗೊಳಿಸಬೇಕು. ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಒಟಿಪಿ ಸೃಜನೆಯಾಗದ ರೈತರು ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಅಥವಾ ಸೈಬರ್‍ಗಳಲ್ಲಿ ಇ-ಕೆವೈಸಿ ಮಾಡಲು ಅವಕಾಶವಿರುತ್ತದೆ. https://kannadanewsnow.com/kannada/good-news-good-news-for-the-farming-community-yashaswini-yojana-to-be-re-launched-in-october/ ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿ ರೈತರು ಜು.31ರೊಳಗೆ ಇ-ಕೆವೈಸಿ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ತಾಲೂಕು ಕಚೇರಿ ಆವರಣದ ಜಂಟಿ ಕೃಷಿ ನಿರ್ದೇಶಕರ…

Read More