Subscribe to Updates
Get the latest creative news from FooBar about art, design and business.
Author: KNN IT TEAM
ಶಿವಮೊಗ್ಗ: ವಿದ್ಯುತ್ ಕಾಮಗಾರಿಗಳ ಹಿನ್ನಲೆಯಲ್ಲಿ ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ನಾಳೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ. https://kannadanewsnow.com/kannada/praveens-murder-cm-bommai-calls-emergency-meeting/ ಈ ಬಗ್ಗೆ ಮೆಸ್ಕಾಂ ಮಾಹಿತಿ ಬಿಡುಗಡೆ ಮಾಡಿದ್ದು, ಜುಲೈ 28 ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್.-5ರಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. https://kannadanewsnow.com/kannada/suspended-rajya-sabha-mps-launch-50-hour-long-protest-inside-parliament-complex/ ಗೋಪಾಳಗೌಡ ಬಡಾವಣೆ, ಎ, ಬಿ, ಸಿ, ಡಿ, ಇ, ಎಫ್ ಬ್ಲಾಕ್, ಕೆ.ಹೆಚ್.ಬಿ, ಎಲ್.ಐ.ಜಿ, ಎಂ.ಐ.ಜಿ ಪ್ರೆಸ್ ಕಾಲೋನಿ, ನೀಲಮೇಘಮ್ ಲೇಔಟ್, ಅಲಹರೀಮ್ ಲೇಔಟ್, ಪೊಲೀಸ್ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದೆ. https://kannadanewsnow.com/kannada/bigg-news-good-news-for-scheduled-caste-community-from-state-government-shubh-lagna-mass-marriage-scheme/
ಬೆಂಗಳೂರು: ನಗರದ ಬ್ಯಾಟರಾಯಪುರ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ. ಅಕ್ರಮವಾಗಿ ಶ್ರೀಗಂಧ ಮಾರಾಟ ಮಾಡುತ್ತಿದ್ದ ಐದು ಜನರನ್ನು ಬಂಧಿಸಿದ್ದಾರೆ. https://kannadanewsnow.com/kannada/monk-climbs-up-steep-mountain-without-a-safety-harness/ ಬಂಧಿತರಿಂದ1,693 ಕೆಜಿ ತೂಕದ 2.68 ಕೋಟಿ ರೂಪಾಯಿ ಮೌಲ್ಯದ ಕೆಂಪು ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬ್ಯಾಟರಾಯನಪುರ ಪಿಎಸ್ ತಂಡವು ರೆಡ್ ಸ್ಯಾಂಡರ್ಸ್ ಸ್ಮಗ್ಲರ್ ಗಳನ್ನು ಬಂಧಿಸಿದ್ದು, ಆರೋಪಿಗಳಿಂದ 2,68,00,000/- ರೂ.ಗಳ ಮೌಲ್ಯದ 1693 ಕೆ.ಜಿ ತೂಕದ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ. ಎರಡು ದ್ವಿಚಕ್ರ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಒಳ್ಳೆಯ ಕೆಲಸ, ತಂಡ!” ಎಂದು ಬೆಂಗಳೂರು ನಗರ ಪೊಲೀಸರು ಬ್ಯಾಟರಾಯನಪುರ ಪೊಲೀಸರನ್ನು ಶ್ಲಾಘಿಸಿದರು. https://twitter.com/BlrCityPolice/status/1551900849009733632?ref_src=twsrc%5Etfw%7Ctwcamp%5Etweetembed%7Ctwterm%5E1551900849009733632%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Fcities%2Fbengaluru-news
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಕಾನೂನು ಜಾರಿ ಸಂಸ್ಥೆ ಬುಧವಾರ ತಿಳಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಮೇಲೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ಸತ್ಯೇಂದ್ರ ಜೈನ್ ಮತ್ತು ಇತರ ಇಬ್ಬರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. https://twitter.com/ANI/status/1552216237941280769 ಮೇ 30, 2022 ರಂದು ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಬಳಿಕ ಆಗಸ್ಟ್ 24, 2017 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಹಣ ವರ್ಗಾವಣೆ ತನಿಖೆಯನ್ನು ಪ್ರಾರಂಭಿಸಿದೆ. ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. https://kannadanewsnow.com/kannada/lightning-strike-kills-18-in-two-days-in-up/
ನವದೆಹಲಿ: ‘ಅಶಿಸ್ತಿನ ವರ್ತನೆ’ಗಾಗಿ ರಾಜ್ಯಸಭೆಯಿಂದ ( Rajya Sabha ) ಅಮಾನತುಗೊಂಡಿರುವ 20 ಪ್ರತಿಪಕ್ಷಗಳ ಸಂಸದರು ( Twenty Opposition MPs ) ಬುಧವಾರ ಸಂಸತ್ ಸಂಕೀರ್ಣದೊಳಗೆ ( Parliament complex ) 50 ಗಂಟೆಗಳ ಸುದೀರ್ಘ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ದರ ಹೆಚ್ಚಳದ ಬಗ್ಗೆ ತಕ್ಷಣ ಚರ್ಚೆಗೆ ಒತ್ತಾಯಿಸಿ ಸದನದ ಕಲಾಪಗಳಿಗೆ ಅಡ್ಡಿಪಡಿಸುವುದನ್ನು ಮುಂದುವರಿಸಿದ ನಂತರ ಪ್ರತಿಪಕ್ಷದ ಸಂಸದರನ್ನು ವಾರದ ಉಳಿದವರೆಗೆ ಅಮಾನತುಗೊಳಿಸಲಾಗಿದೆ. https://kannadanewsnow.com/kannada/is-there-no-end-to-this-carnage-why-is-the-government-forgetting-hd-kumaraswamy/ “ಸಂಸದರು ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಮತ್ತು ರಾತ್ರಿಯಿಡೀ ಸ್ಥಳದಲ್ಲಿ ಉಳಿಯಲಿದ್ದಾರೆ ಎಂದು ಅಮಾನತುಗೊಂಡ ಸಂಸದರಲ್ಲಿ ಒಬ್ಬರಾದ ಟಿಎಂಸಿ ಸಂಸದ ಡೋಲಾ ಸೇನ್ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಿಂದ ಏಳು, ಡಿಎಂಕೆಯಿಂದ ಆರು, ತೆಲಂಗಾಣ ರಾಷ್ಟ್ರ ಸಮಿತಿಯಿಂದ (ಟಿಆರ್ಎಸ್) ಮೂವರು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ನಿಂದ ಇಬ್ಬರು ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ…
ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.ಪಾರ್ಥಿವ ಶರೀರ ಬೆಳ್ಳಾರೆ ಮುಟ್ಟಿದ್ದು ಅಂತಿಮ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸೇರಿ ” ಅಮರ್ ರಹೇ” ಎಂಬ ಘೋಷಣೆ ಕೂಗುತ್ತಿದ್ದಾರೆ. https://kannadanewsnow.com/kannada/praveens-murder-cm-bommai-calls-emergency-meeting/?utm_medium=push ಈ ಮಧ್ಯೆ ಪ್ರವೀಣ್ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದು “ಎನ್ನ ಬಾಲೇನ್ ಎಂಕ್ ಕಂತ್ ಕೊರ್ಲೆ ದಮ್ಮಯ್ಯ- ಎಂಕಲೇಗ್ ನ್ಯಾಯ ಇಜ್ಜಾಂಡೆ..!!” ( ನನ್ನ ಮಗನನ್ನು ತಂದು ಕೊಡಿ-ನನ್ನ ಮಗನ ಜೀವ ತಂದು ಕೊಡಿ ನಮಗೆ ನ್ಯಾಯ ಇಲ್ಲದೆ ಹೋಯಿತೆ ಎಂದು ಬಿಕ್ಕಿ ಅಳುತ್ತಿರುವ ದೃಶ್ಯ ಮನಕರಗುವಂತೆ ಮಾಡುತ್ತಿದೆ. https://kannadanewsnow.com/kannada/praveens-murder-cm-bommai-calls-emergency-meeting/?utm_medium=push
ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿ ಅಂತಿಮ ಯಾತ್ರೆ ಬಳಿಕ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾರಿಚಾರ್ಚ್ ಮಾಡಿದ್ದಾರಾದ್ರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಸಧ್ಯ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ಆದೇಶ ನೀಡಲಾಗಿದೆ. ಇನ್ನು ಪರಿಸ್ಥಿತಿ ಮತ್ತಷ್ಟು ಬಿಗಾಡಿಸುವ ಲಕ್ಷಣಗಳು ಕಾಣಿಸುತ್ತಿದ್ದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆ ಕರೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ ಸೇರಿ ಹಲವರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ, ಬೆಳ್ಳಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಚಿವ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಜಗ್ಗಾಡಿದ್ದಾರೆ. ಪೊಲೀಸ್ ಬಂದೋಬಸ್ತಿನಲ್ಲಿ ಕಟೀಲು ಪಾರಾಗಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ ಪೊಲೀಸರು ಲಾಠ ಚಾರ್ಜ್ ಮಾಡಿದ್ದಾರೆ ಇದಕ್ಕೂ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರತಿಭಟನೆಯ ವೇಳೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಾರಣ, ಲಾಠಿಚಾರ್ಜ್ ಕೂಡ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮಹತ್ವದ ಸಭೆಯನ್ನು ತುರ್ತಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಕರೆದಿದ್ದಾರೆ. https://kannadanewsnow.com/kannada/is-there-no-end-to-this-carnage-why-is-the-government-forgetting-hd-kumaraswamy/ ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಇಂದು ಪ್ರವೀಣ್ ನೆಟ್ಟಾರ್ ಹತ್ಯೆಯಾಗಿದೆ. ಈ ಹಿನ್ನಲೆಯಲ್ಲಿ ಹಿಂದೂ ಕಾರ್ಯಕರ್ತರು ಬೆಳ್ಳಾರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಬೆಳ್ಳಾರೆ ಬೂದಿ ಮುಚ್ಚಿದಂತ ಕೆಂಡವಾಗಿದ್ದು, ಉದ್ವಿಗ್ನ ವಾತಾವಣ ಸ್ಥಳದಲ್ಲಿ ನಿರ್ಮಾಣವಾಗಿದೆ. https://kannadanewsnow.com/kannada/police-resort-to-lathicharge-to-control-situation-in-bellares-protest-against-veens-murder/ ಈ ಹಿನ್ನಲೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹತ್ವದ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಪೊಲೀಸ್ ಇಲಾಖೆಯ ವರಿಷ್ಠರು ಸೇರಿದಂತೆ ಹಲವರು…
ಕೆಎನ್ ಎನ್ ನ್ಯೂಸ್ ಡೆಸ್ಕ್ : ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಸನ್ಯಾಸಿಯ ಬಗ್ಗೆ ಅಚ್ಚರಿ ಮೂಡಿದೆ. https://kannadanewsnow.com/kannada/bjp-yuva-morcha-members-resign-en-masse-in-chikkamagaluru/ ಅವರು ಯಾವುದೇ ಸುರಕ್ಷತಾ ಸರಪಳಿಯಿಲ್ಲದೆ ಪರ್ವತವನ್ನು ಹತ್ತುತ್ತಿದ್ದಾರೆ.ಈ ವೀಡಿಯೊವನ್ನು ತನ್ಸು ಯೆಗೆನ್ ಎಂಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವೈರಲ್ ವೀಡಿಯೊ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಮಹಿಳೆಯೊಬ್ಬಳು ಏಕಕಾಲದಲ್ಲಿ ಸುರಕ್ಷತಾ ಸರಪಳಿಯೊಂದಿಗೆ ಪರ್ವತವನ್ನು ಏರುವುದನ್ನು ರೆಕಾರ್ಡ್ ಮಾಡಿದ ವೀಡಿಯೊ, ಸನ್ಯಾಸಿಯು ಸ್ವಲ್ಪ ಸೆಕೆಂಡುಗಳಲ್ಲಿ ನಿರಾಯಾಸವಾಗಿ ಮೇಲಕ್ಕೆ ಹೋಗುತ್ತಿದ್ದಾರೆ. ಇದು ತುಂಬಾ ಆಘಾತಕಾರಿಯಾಗಿದೆ ಏಕೆಂದರೆ ಇದು ಕಡಿದಾದ ಪರ್ವತವಾಗಿದೆ. ಮಹಿಳೆ ಶಿಖರವನ್ನು ತಲುಪಲು ಹೆಣಗಾಡುತ್ತಿರುವಾಗ, ಯಾವುದೇ ಸಹಾಯವಿಲ್ಲದೆ ನಿರಾಯಾಸವಾಗಿ ಪರ್ವತವನ್ನು ಏರುವ ಯಾರಾದರೂ ಇಲ್ಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. https://twitter.com/TansuYegen/status/1549803242955182080?ref_src=twsrc%5Etfw%7Ctwcamp%5Etweetembed%7Ctwterm%5E1549803242955182080%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmonk-climbs-up-steep-mountain-without-a-safety-harness-viral-video-stuns-internet-1980433-2022-07-27
ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯದರ್ತ ಪ್ರವೀಣ್ ಹತ್ಯೆ ಖಂಡಿಸಿ ಇಂದು ನಡೆಸುತ್ತಿರುವಂತ ಪ್ರತಿಭಟನೆ ತಾರಕ್ಕೇರಿದೆ. ಹಿಂದೂ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ, ಲಾಠಿಚಾರ್ಜ್ ಕೂಡ ನಡೆಸಲಾಗಿದೆ. ಈ ವೇಳೆ ಹಿಂದೂ ಕಾರ್ಯಕರ್ತನೋರ್ವ ಗಾಯಗೊಂಡಿದ್ದಾನೆ. https://kannadanewsnow.com/kannada/is-there-no-end-to-this-carnage-why-is-the-government-forgetting-hd-kumaraswamy/ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪರಿಸ್ಥಿತಿ ಮತ್ತಷ್ಟು ಕೆಂಡವಾಗಿದೆ. ಪ್ರವೀಣ್ ಹತ್ಯೆ ಖಂಡಿಸಿ ಇಂದು ನಡೆಸಲಾಗುತ್ತಿದ್ದಂತ ಪ್ರತಿಭಟನೆಯು ವ್ಯಾಪಕ ಸ್ವರೂಪವನ್ನು ಪಡೆದುಕೊಂಡಿದೆ. https://kannadanewsnow.com/kannada/i-didnt-say-bulldozer-should-run-over-rss-siddaramaiah-warns-of-legal-action-if-viral-post-is-not-stopped/ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಕೆಲವೆಡೆ ವಾಗ್ವಾದ ನಡೆದ್ರೇ.. ಮತ್ತೆ ಕೆಲವು ಕಡೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಹಿಂದೂ ಕಾರ್ಯಕರ್ತರು ಪ್ರತಿಭಟನೆ ವೇಳೆ ಕಲ್ಲು ತೂರಿದ ಪರಿಣಾಮ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. https://kannadanewsnow.com/kannada/bigg-news-good-news-for-scheduled-caste-community-from-state-government-shubh-lagna-mass-marriage-scheme/ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಂತೆ ಪ್ರತಿಭಟನಾ ನಿರತ ಕಾರ್ಯಕರ್ತರು ಸ್ಥಳದಿಂದ ಕಾಲ್ ಕಿತ್ತಿದ್ದಾರೆ. ಇನ್ನೂ ಪೊಲೀಸರು ಮನಬಂಧಂತೆ ಲಾಠಿ ಬೀಸಿದ ಪರಿಣಾಮ, ಹಿಂದೂ ಕಾರ್ಯಕರ್ತನೊಬ್ಬ ತಲೆ ಹೊಡೆದು ಗಾಯವಾಗಿದೆ. ಆತನನ್ನು ಸ್ಥಳೀಯರು…
ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿ ಅಂತಿಮ ಯಾತ್ರೆ ಬಳಿಕ ಬಿಗುವಿನ ವಾತವರಣ ನಿರ್ಮಾಣಗೊಂಡಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನನ್ನು ನೋಡಲು ಕನಿಷ್ಟ ಪಕ್ಷ ಆಸ್ಪತ್ರೆಗೆ ಬಂದಿಲ್ಲ. ಪಾರ್ಥಿವ ಶರೀರ ವನ್ನೂ ನೋಡಲು ಬರುವಾಗಲು ಇಂದು ಮಧ್ಯಾಹ್ನವಾಗಿದೆ ಆ ಕಾರಣಕ್ಕಾಗಿ ಕಾರ್ಯಕರ್ತರು ಕಿಚ್ಚು ಹಚ್ಚಿದ್ದಾರೆ. https://kannadanewsnow.com/kannada/praveens-murder-activist-injured-in-lathi-charge-by-police/ ಈ ವೇಳೆ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸಚಿವ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಜಗ್ಗಾಡಿದ್ದಾರೆ. ಪೊಲೀಸ್ ಬಂದೋಬಸ್ತಿನಲ್ಲಿ ಕಟೀಲು ಪಾರಾಗಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ ಪೊಲೀಸರು ಲಾಠ ಚಾರ್ಜ್ ಮಾಡಿದ್ದಾರೆ ಇದಕ್ಕೂ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.