Author: KNN IT TEAM

ಬೆಂಗಳೂರು : ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯಾದ ಒಂದು ದಿನದ ನಂತರ, ದಕ್ಷಿಣ ಕನ್ನಡದಲ್ಲಿ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಹೇಯ ಕೃತ್ಯವನ್ನ ಖಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. “ಇದು ಇತರ ಪ್ರಕರಣಗಳಿಗೆ ಹೋಲಿಕೆ ಹೊಂದಿರುವ ಯೋಜಿತ ಘಟನೆಯಂತೆ ಕಾಣುತ್ತದೆ” ಎಂದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, “ಈ ಘಟನೆ ಕೇರಳದ ಗಡಿಯ ಬಳಿ ನಡೆದಿರುವುದರಿಂದ, ನಮ್ಮ ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಡಿಜಿಪಿ ಅವರು ತಮ್ಮ ಕೇರಳ ಸಹವರ್ತಿಯೊಂದಿಗೆ ಮಾತನಾಡಲಿದ್ದಾರೆ, ಮಂಗಳೂರು ಎಸ್ಪಿ ಕಾಸರಗೋಡು ಎಸ್ಪಿ ಅವರೊಂದಿಗೆ ಮಾತನಾಡಿದ್ದಾರೆ” ಎಂದು ತಿಳಿಸಿದರು. ಇನ್ನು “ಜನರ ಕೋಪವು ಸರ್ಕಾರದ ವಿರುದ್ಧವಲ್ಲ, ಈ ಘಟನೆಯ ಬಗ್ಗೆ ಜನರು ಕೋಪಗೊಳ್ಳುವುದು ನ್ಯಾಯಸಮ್ಮತವಾಗಿದೆ. ನಾನು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ, ಗೃಹ ಸಚಿವರು ಎಸ್ಪಿಯೊಂದಿಗೆ ಮಾತನಾಡಿದ ನಂತ್ರ ಈ ಕೊಲೆಯ ಬಗ್ಗೆ ಎಲ್ಲಾ ಅಗತ್ಯ ನಿರ್ದೇಶನಗಳನ್ನ ನೀಡಿದ್ದಾರೆ. ಈ…

Read More

ರಾಯಚೂರು: ಜಿಲ್ಲೆಯಲ್ಲಿ ದೇವದುರ್ಗದ ಆಲ್ಕೋಡ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೋಳಿ ಕದಿಯಲು ಬಂದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಕಳ್ಳಾನಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. https://kannadanewsnow.com/kannada/praveen-nettaru-murdered-senior-ips-officer-to-stay-in-sullia-for-two-days/ ರಾಜಾಸಾಬ್ ಎಂಬ ಮನೆಯಲ್ಲಿ ಕೋಳಿ ಕಳ್ಳತನ ಮಾಡಿದ್ದ ವ್ಯಕ್ತಿ. ಸುಮಾರು 10 ಕೋಳಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ. ಮೂವರು ಕಳ್ಳರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು ಇನ್ನಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಈಸಂಬಂಧ ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಹಿಮಾಚಲ ಪ್ರದೇಶ: ಶಿಮ್ಲಾದಲ್ಲಿ ಬುಧವಾರ ಬಸ್ ಕಮರಿಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ 25 ಜನರಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದೆ, ಚಿಕಿತ್ಸೆಗಾಗಿ ಸ್ಥಳೀಯ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಗಳನ್ನು ಕೈಗೊಂಡಿದ್ದಾರೆ. https://kannadanewsnow.com/kannada/kpcc-president-will-become-cm-karianna-sangati-in-support-of-dk/

Read More

ಕೊಪ್ಪಳ : ʻ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೋ ಅವರೇ ಸಿಎಂ ಆಗುತ್ತಾರೆʼ ಇದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಎಂದು ಡಿಕೆಶಿ ಬೆಂಬಲಕ್ಕೆ ನಿಂತ ಮಾಜಿ ವಿಧಾನ ಪರಿಷತ್‌ ಸದಸ್ಯ ಕರಿಯಣ್ಣ ಸಂಗಟಿ ಹೇಳಿಕೆ ನೀಡಿದ್ದಾರೆ. https://kannadanewsnow.com/kannada/suspected-case-of-monkeypox-reported-in-ups-noida-health-department/ ಈ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ್‌ ಸಿಎಂ ಆಗಲಿ ಎಂದು ಆಶಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಜಮೀರ್‌ ಅಹಮದ್‌ ಸೇರಿ ನಮ್ಮಂತ ಹಿಂದಿನವರು ನೀಡುವ ಹೇಳಿಕೆಯನ್ನು ನಿಲ್ಲಿಸಬೇಕು. ಇದು ಕಾಂಗ್ರೆಸ್ ಪಕ್ಷಕ್ಕೆ ಸರಿ ಅಲ್ಲ. ಕಾಯುವವರು, ಕೊಯ್ಯುವವರು ಮಾತ್ರ ಒಂದಾದರೆ ಸಾಲದು, ತಿನ್ನುವವರು ಒಂದಾಗಬೇಕು ಎಂದು ಹೇಳಿದರು. https://kannadanewsnow.com/kannada/suspected-case-of-monkeypox-reported-in-ups-noida-health-department/ ಸಿದ್ದರಾಮಯ್ಯ ಬಗ್ಗೆ ನನಗೂ ಅಭಿಮಾನವಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಜೋಡೆತ್ತುಗಳು. ಜಮೀರ್‌ ಅಹಮದ್‌ ಕಾಂಗ್ರೆಸ್ಸಿಗೆ ಮುಳುವಾಗಲಿದ್ದಾರೆ. ಅವರ ಬಾಯಿ ಬಂದ್ ಮಾಡಿಸಬೇಕು. ಸಿ ಎಂ ಇಬ್ರಾಹಿಂ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಕಾಂಗ್ರೆಸ್ ಬಿಡಲು ಜಮೀರ ಅಹ್ಮದ್ ಕಾರಣ ಎಂದು ಹೇಳಿದರು. https://kannadanewsnow.com/kannada/suspected-case-of-monkeypox-reported-in-ups-noida-health-department/ ಗಂಗಾವತಿಯಲ್ಲಿ ನಮಗೆ ಬೇಕಾದವರು ಕಾಂಗ್ರೆಸ್ ಶಾಸಕರಾಗುತ್ತಾರೆ ಎನ್ನುವ ಮೂಲಕ…

Read More

ನವದೆಹಲಿ: ಉತ್ತರ ಪ್ರದೇಶದ ನೋಯ್ಡಾದಲ್ಲಿ ( Uttar Pradesh’s Noida ) ಬುಧವಾರ ಮಂಕಿಪಾಕ್ಸ್ನ (  monkeypox ) ಶಂಕಿತ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ( health department  ) ಅಧಿಕಾರಿಗಳು ಬುಧವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. https://kannadanewsnow.com/kannada/praveen-nettarus-murder-dont-point-fingers-at-someone-dont-just-call-it-a-depravity-dk-shivakumar-hits-out-at-bjp/ ರೋಗಿಯು 47 ವರ್ಷದ ಮಹಿಳೆಯಾಗಿದ್ದು, ಮಂಗಳವಾರ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ ನಂತರ ಆಕೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/suspended-rajya-sabha-mps-launch-50-hour-long-protest-inside-parliament-complex/ “ಮಾದರಿಗಳನ್ನು ಲಕ್ನೋಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ರೋಗಿಯು ಪ್ರಸ್ತುತ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಪರೀಕ್ಷಾ ಫಲಿತಾಂಶಗಳು ಹೊರಬಂದ ನಂತರವೇ ಮಂಕಿಪಾಕ್ಸ್ ಅನ್ನು ದೃಢಪಡಿಸಬಹುದು” ಎಂದು ಸ್ಥಳೀಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಗುರುದ್ವಾರ ಕಾರ್ಟೆ ಪರ್ವಾನ್‌ನ ಗೇಟ್ ಬಳಿ ಬಾಂಬ್​ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸಿಖ್ ಮತ್ತು ಹಿಂದೂ ಸಮುದಾಯಗಳ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ಇಂಡಿಯನ್ ವರ್ಲ್ಡ್ ಫೋರಂನ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ. https://twitter.com/ANI/status/1552235005790658560 ಜೂನ್‌ನಲ್ಲಿ ಕಾಬೂಲ್‌ನ ಬಾಗ್-ಎ ಬಾಲಾ ನೆರೆಹೊರೆಯಲ್ಲಿರುವ ಗುರುದ್ವಾರ ಕಾರ್ಟೆ ಪರ್ವಾನ್‌ನಲ್ಲಿ ಹಲವು ಸ್ಫೋಟಗಳು ಸಂಭವಿಸಿದ್ದವು. ಈ ದಾಳಿ ನಡೆದ ಒಂದು ತಿಂಗಳಲ್ಲಿ ದಾಳಿ ನಡೆದಿದೆ. ಕಳೆದ ತಿಂಗಳು ನಡೆದ ದಾಳಿಯಲ್ಲಿ ಒಬ್ಬ ಸಿಖ್ ಸಮುದಾಯದ ಸದಸ್ಯ ಸೇರಿದಂತೆ ಇಬ್ಬರನ್ನು ಸಾವನ್ನಪ್ಪಿದ್ದರು. ಈ ಭಯೋತ್ಪಾದಕ ದಾಳಿಯ ಹೊಣೆಯನ್ನುಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು. https://kannadanewsnow.com/kannada/terrorist-yasin-malik-hospitalised-after-hunger-strike-in-delhis-tihar-jail/

Read More

ಬೆಂಗಳೂರು: ಒಬ್ಬ ಹೋಮ್‌ ಮಿನಿಸ್ಟರ್, ಪಕ್ಷ ಅಂತ ತೊಗೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದೆ. ಯಾರದ್ದೊ‌ ಕಡೆ ಬೆರಳು ತೋರಿಸಿ ಸುಮ್ಮನೆ ಅವಲಕ್ಷಣ ಎನ್ನಿಸಿಕೊಳ್ಳಬೇಡಿ. ಯಾರು ಇದರಲ್ಲಿ ಭಾಗಿಯಾಗಿದ್ದಾರೆಂದು ಡಿಜಿಪಿ ಇಲ್ಲವೇ ಎಸ್‌ಪಿ ಹೇಳಬೇಕು. ಇತಂಹ ಕೊಲೆಗಳು ರಾಜಕೀಯವಾಗಿ ಆಯ್ತಾ ? ಖಾಸಗೀಯಾಗಿ ಆಯಿತಾ, ಬೇರೆ ಉದ್ದೇಶದಿಂದ ಆಯ್ತಾ ಅಂತಾ ಪೊಲೀಸ್ ಅಧಿಕಾರಿಗಳು ಪ್ರಾಮಾಣೀಕರಿಸಬೇಕು. ತನಿಖೆ‌ ಮಾಡಿ ಯಾರೇ ಆದರೂ ಕಾನೂನು ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar )  ಹೇಳಿದ್ದಾರೆ.  https://kannadanewsnow.com/kannada/shimoga-power-outage-in-these-areas-of-the-city-tomorrow/ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರು, ಸರ್ಕಾರ ವಿಫಲವಾಗಿದೆ. ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆ ಬಾಯಿಗೆ ಒರಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಯಲಿ, ಅವರನ್ನು ಬಂಧಿಸಬೇಕು. ಸತ್ಯಾಂಶವನ್ನು ಹೊರಗೆ ಬರಲಿ ಎಂದರು. https://kannadanewsnow.com/kannada/suspended-rajya-sabha-mps-launch-50-hour-long-protest-inside-parliament-complex/ ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಜಕೀಯಕ್ಕೆ ಮಾಡಿದ್ದಾರೋ, ಬೇರೆ ವೈಯಕ್ತಿಕ ವಿಚಾರಕ್ಕೆ ಮಾಡಿದ್ದಾರೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಸತ್ಯಾಂಶ ಎಲ್ಲವೋ ಹೊರಗೆ ಬರಬೇಕು,…

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ದೇಶದಲ್ಲಿ ಮಂಕಿಪಾಕ್ಸ್‌ ಭೀತಿ ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ ನಾಲ್ವರು ರೋಗಿಗಳು ದೃಢಪಟ್ಟಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಮತ್ತೊಬ್ಬ ಶಂಕಿತ ರೋಗಿಯು ಪತ್ತೆಯಾಗಿದ್ದು, ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ತೆಲಂಗಾಣದ ಹೈದರಾಬಾದ್‌ನಲ್ಲಿಯೂ ಶಂಕಿತ ರೋಗಿಯೊಬ್ಬ ಪತ್ತೆಯಾಗಿದ್ದು, ಆದ್ರೆ, ಆತನ ವರದಿ ನೆಗೆಟಿವ್ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದಾದ್ಯಂತ 75 ದೇಶಗಳಲ್ಲಿ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸೋಂಕನ್ನ ಹೆಚ್ಚಿಸಿದ ನಂತರ, WHO ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. WHO ಪ್ರಕಾರ, ಮಂಕಿಪಾಕ್ಸ್ ರೋಗವು ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆ. ಇದರ ಸೋಂಕಿಗೆ ಒಳಗಾದಾಗ ಸಿಡುಬಿನಂತಹ ಲಕ್ಷಣಗಳು ಕಂಡುಬರುತ್ತವೆ. ಮಂಕಿಪಾಕ್ಸ್ ಕಡಿಮೆ ಸಂಖ್ಯೆಯ ಪ್ರಕರಣಗಳಲ್ಲಿ ಮಾತ್ರ ಮಾರಣಾಂತಿಕವಾಗಿದೆ. ಈ ವರ್ಷ, ಮೇ 6ರಂದು, ವಿಶ್ವದ ಮೊದಲ ಮಂಕಿಪಾಕ್ಸ್ ಪ್ರಕರಣ ಇಂಗ್ಲೆಂಡ್‌ನಲ್ಲಿ ವರದಿಯಾಗಿದೆ. ಅಂದಿನಿಂದ, ಮಂಕಿಪಾಕ್ಸ್ ಪ್ರಕರಣಗಳು ಜಗತ್ತಿನಲ್ಲಿ ವೇಗವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಮೊಟ್ಟಮೊದಲ ಮಂಗನ ಕಾಯಿಲೆಯು ಜುಲೈ 14ರಂದು ಕೇರಳದಲ್ಲಿ ಪತ್ತೆಯಾಗಿವೆ.…

Read More

ಪುತ್ತೂರು : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್‌ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದ್ದು, ಉದಯಪುರ ಟ್ರೈಲರ್‌ ಕನ್ಹಯ್ಯಾ ಲಾಲ್‌ ಕೊಲೆ ಖಂಡಿಸಿ ಪೋಸ್ಟ್‌ ಹಾಕಿದ್ದೇ ಕೊಲೆಗೆ ಕಾರಣವಾಯ್ತಾ ಅನ್ನೋ ಶುರುವಾಗಿದೆ. ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಶಿರಚ್ಛೇದಗೊಂಡ ದರ್ಜಿ ಕನ್ಹಯ್ಯಾಲಾಲ್ ಬೆಂಬಲಿಸಿ ಭಾರತೀಯ ಜನತಾ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಜೂನ್ 29 ರಂದು ಫೇಸ್ಬುಕ್ ಪೋಸ್ಟ್‌ನಲ್ಲಿ, ನೇತಾರ “ಬಡ ದರ್ಜಿ”ಯ ಶಿರಚ್ಛೇದ ಮತ್ತು ಕೊಲೆಗಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ಬರೆದಿದ್ದರು. ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದರು. ಕನ್ಹಯ್ಯಾಲಾಲ್ ಅವರ ಹತ್ಯೆಯ ಸುದ್ದಿ ಹೊರಬಿದ್ದ ಒಂದು ದಿನದ ನಂತರ, ಜೂನ್ 29ರಂದು ಈ ಪೋಸ್ಟ್ ಮಾಡಲಾಗಿದೆ. ಅಂದ್ಹಾಗೆ, ಉದಯಪುರದಲ್ಲಿ ಹಾಡಹಗಲೇ ಅಂಗಡಿಯವನನ್ನ ಇಬ್ಬರು ದುಷ್ಕರ್ಮಿಗಳು ಕೊಂದುಹಾಕಿದರು, ಆತನ ತಲೆಯನ್ನ ಕತ್ತರಿಸಿದರು. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್…

Read More

ದಕ್ಷಿಣಕನ್ನಡ  :  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧಿಸಿ ಪ್ರವೀಣ್‌ ಪಾರ್ಥೀವ ಶರೀರದ ಮೆರವಣಿಗೆ ವೇಳೆಯಲ್ಲಿ ಯಾರು ಕೂಡ ಆಸ್ಪತ್ರೆಗೆ ಬಂದಿಲ್ಲ ಎಂದು ವ್ಯಕ್ತಿಯೊಬ್ಬರಿಂದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರಿಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ತರಾಟೆಗೈದ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. https://kannadanewsnow.com/kannada/praveen-cremated-at-the-site-where-the-new-house-was-to-be-built/ ಪ್ರವೀಣ್‌ ಹತ್ಯೆ ಖಂಡಿಸಿ ಕಾರಿನಲ್ಲಿ ತೆರಳುತ್ತಿದ್ದಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರನ್ನು ನೋಡಿ  ವ್ಯಕ್ತಿಯೊಬ್ಬರು ನಮ್ಮದೇ ಸರ್ಕಾರ ಇದ್ದರೂ ಕೂಡ ಇದೀಗ ನಾವು ನಮ್ಮವರನ್ನು ಕಳೆದುಕೊಂಡಿದ್ದೇವೆ. ಇಂತಹ ಕೃತ್ಯ ಇಲ್ಲಿಗೆ ನಿಲ್ಲಬೇಕು,  ನಿಮಗೆ ಈ ಕ್ಯಾಪೆಸಿಟಿ ಇದೆ. ನಿಮ್ಮಿಂದ ಮಾತ್ರ ಸಾಧ್ಯ.ನೀವೆ ಮುಂದೆ ನಿಂತೂ ನಿಲ್ಲಿಸಬೇಕೆಂದು ಕಾರಿನಲ್ಲಿದ್ದ ಯುವಕನಿಂದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಶಾಸಕರನ್ನೇ ತರಾಟೆಗೈದ ವಿಡಿಯೋ ವೈರಲ್  ಇಲ್ಲಿದೆ ನೋಡಿ

Read More