Subscribe to Updates
Get the latest creative news from FooBar about art, design and business.
Author: KNN IT TEAM
ಪಶ್ಚಿಮ ಬಂಗಾಳ : ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ಬಂಧನದಲ್ಲಿರುವ ಟಿಎಂಸಿ ಸಚಿವ ಪಾರ್ಥ ಚಟರ್ಜಿಯವರನ್ನು ಪಕ್ಷದಿಂದ ಉಚ್ಚಾಟಿಸಿ, ಎಲ್ಲಾ ಹುದ್ದೆಗಳಿಂದ ತೆಗೆದು ಹಾಕಬೇಕು ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಪಕ್ಷವನ್ನು ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯ ನಡುವೆ ಘೋಷ್ ಅವರು ಈ ಹೇಳಿಕೆ ನೀಡಿದ್ದಾರೆ. https://twitter.com/KunalGhoshAgain/status/1552509784745578498 ಬುಧವಾರ (ನಿನ್ನೆ) ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಎರಡನೇ ಅಪಾರ್ಟ್‌ಮೆಂಟ್ ಇಡಿ, 28.90 ಕೋಟಿ ರೂ. ನಗದು, 5 ಕೆಜಿಗೂ ಹೆಚ್ಚು ಚಿನ್ನ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಹಿಂದೆ ಮುಖರ್ಜಿ ಅವರ ಮನೆಯಲ್ಲಿ 21.90 ಕೋಟಿ ರೂ. ನಗದು, 56 ಲಕ್ಷ ರೂ. ವಿದೇಶಿ ಕರೆನ್ಸಿ ಮತ್ತು 76 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಂಸ್ಥೆ ಪತ್ತೆ ಮಾಡಿತ್ತು. ಇದೆಲ್ಲವೂ…
ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಈ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. https://kannadanewsnow.com/kannada/good-news-for-consumers-gold-prices-fall-on-bhima-amavasya-day-check-here/ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ. ರಾಜ್ಯ ಬಿಜೆಪಿ ಸರಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ. ʼಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ. https://twitter.com/hd_kumaraswamy/status/1552509664327499776 ಸರಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರಕಾರದ ವರ್ಷದ ಸಾಧನೆ ಎಂದು ಕಿಡಿಕಾರಿದ್ದಾರೆ. https://twitter.com/hd_kumaraswamy/status/1552509666831515649 ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ?…
ಹೊಸದಿಲ್ಲಿ: ಬಂಗಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..ಅದರಲ್ಲೂ ಭೀಮನ ಅಮವಾಸ್ಯೆ ದಿನ ಚಿನ್ನದ ದರ ಎಷ್ಟಿದೆ ಅಂತಾ ಯೋಚಿಸ್ತಿದ್ಧಿರಾ..? ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಚಿನ್ನ ಬೆಳ್ಳಿ ದರ ಎಷ್ಟಿದೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ https://kannadanewsnow.com/kannada/gold-consumer-good-news-gold-price-rs-4000-decrease-recent-rate-verification/ (Gold Rate Today) ಇಂದು ಜುಲೈ 28 ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ₹5,068 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ ₹5,121 ರೂಪಾಯಿ ನಿಗದಿಯಾಗಿದೆ.ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹46,500 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹50,730 ರೂಪಾಯಿ ದಾಖಲಾಗಿದೆ. https://kannadanewsnow.com/kannada/gold-consumer-good-news-gold-price-rs-4000-decrease-recent-rate-verification/ ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು: ₹46,500 (22…
ಉತ್ತರ ಪ್ರದೇಶ: ವ್ಯಕ್ತಿಯೋರ್ವ ತನ್ನ ಎರಡನೇ ಪತ್ನಿ ಜೊತೆ ಸೇರಿ ಮೊದಲ ಪತ್ನಿ 7 ತಿಂಗಳ ಮಗುವನ್ನು ಕೊಂದು ಶವವನ್ನು ರಹಸ್ಯವಾಗಿ ಹೊಲದಲ್ಲಿ ಹೂತಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದುಬ್ಬಾಗ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮೊದಲ ಪತ್ನಿ ತನ್ನ ಏಳು ತಿಂಗಳ ಮಗಳು ಕಾಣದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಇದರ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಇದೀಗ ಸತ್ಯಾಂಶ ಬಯಲಾಗಿದೆ. ಆರೋಪಿಗಳಾದ ಸಂಜಯ್ ರಾವತ್ (30) ಮತ್ತು ಆತನ ಎರಡನೇ ಪತ್ನಿ ಮೀನಾ (22) ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯ ಶವವನ್ನು ಹೊರತೆಗೆದ ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದುಬ್ಬಾಗ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಅನಿಲ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ. https://kannadanewsnow.com/kannada/metro-commuters-note-token-to-use-station-lift-from-now-on/ ಏನಿದು ಪ್ರಕರಣ? ಪೋಲೀಸರ ಪ್ರಕಾರ, ದೂರುದಾರರಾದ ಪ್ರಮಿಳಾ ಹಾಗೂ ತನ್ನ ಪತಿಯಾದ ಕಾಕೋರಿಯ ಲೋಧೌಸಿ ಗ್ರಾಮದ ನಿವಾಸಿ…
ಬೆಂಗಳೂರು: ನಗರದ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ. ಬಹುತೇಕ ಪ್ರಯಾಣಿಕರು ಧಾವಂತದಲ್ಲಿಯೇ ಇರುತ್ತಾರೆ. ಕೆಲವರು ಅಂತೂ ಮೆಟ್ರೋ ಇಳಿದ ತಕ್ಷಣ ಮತ್ತು ಮೆಟ್ರೋ ಗೆ ಮೇಲೆ ಹೋಗುವಾಗ ಲಿಫ್ಟ್ ಬಳಸುತ್ತಾರೆ. https://kannadanewsnow.com/kannada/bjp-yuva-morcha-members-resign-in-wake-of-praveen-nettars-murder-anger-against-the-government/ ಆದರೆ ಅದು ಇರೋದು ವಿಶೇಷಚೇತನರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಅಂತ.ಈ ಕೆಟಗರಿಯ ಪ್ರಯಾಣಿಕರು ಲಿಫ್ಟ್ ತಲುಪುವ ವೇಳೆಗೆ ಲಿಫ್ಟ್‌ನಲ್ಲಿ ಜನ ತುಂಬಿರುತ್ತದೆ. ತಮ್ಮ ಸರದಿಗಾಗಿ ಲಿಫ್ಟ್ ಅವಶ್ಯಕತೆ ಇರುವವರು ಕಾಯಬೇಕಿರುತ್ತದೆ. ಇಂತಹ ಸಮಸ್ಯೆ ತಪ್ಪಿಸಲು ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಟೋಕನ್ ವ್ಯವಸ್ಥೆ ಮಾಡಲಾಗಿದೆ. https://kannadanewsnow.com/kannada/bjp-yuva-morcha-members-resign-in-wake-of-praveen-nettars-murder-anger-against-the-government/ ಬೆಂಗಳೂರಿನ ಮೆಟ್ರೊ ನಿಲ್ದಾಣಗಳಲ್ಲಿರುವ ಲಿಫ್ಟ್ ಅನ್ನು ವಿಶೇಷಚೇತನರು, ಗರ್ಭಿಣಿಯರು ಮತ್ತು ಹಿರಿಯ ನಾಗರಿಕರು ಮಾತ್ರ ಬಳಸಬೇಕು ಎನ್ನುವ ಸೂಚನಾ ಫಲಕವನ್ನು ಅಳವಡಿಸಿದ್ದರೂ ಸಾಮಾನ್ಯ ಜನರೇ ಬಳಸುವುದನ್ನು ತಪ್ಪಿಸಲು ಪ್ರಾಯೋಗಿಕವಾಗಿ ಐದು ಮೆಟ್ರೊ ನಿಲ್ದಾಣಗಳಲ್ಲಿ ಟೋಕನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಕಬ್ಬನ್‌ಪಾರ್ಕ್, ವಿಧಾನಸೌಧ, ಸರ್ ಎಂ. ವಿಶ್ವೇಶ್ವರಯ್ಯ, ಕೆಎಸ್ ಆರ್ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೊ ನಿಲ್ದಾಣಗಳಲ್ಲಿ…
ಜಿನೀವಾ: ಕಳೆದ ಕೆಲವು ವಾರಗಳಲ್ಲಿ ಕೋವಿಡ್ ಸೋಂಕಿನಿಂದಾಗಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ ಮತ್ತು ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಬುಧವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಕಳೆದ ಐದು ವಾರಗಳಿಂದ ಜಾಗತಿಕವಾಗಿ ಕೋವಿಡ್ ಸಾವುಗಳು ಹೆಚ್ಚುತ್ತಿವೆ. ಕೆಲವು ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. https://kannadanewsnow.com/kannada/minor-girl-raped-by-religious-teacher-in-up/ ಕಳೆದ ಐದು ವಾರಗಳಿಂದ ಕರೋನಾ ಸಾವುಗಳು ಹೆಚ್ಚುತ್ತಿವೆ. ಒಮಿಕ್ರೋನ್ ಸಬ್‌ವೇರಿಯಂಟ್‌ಗಳಿಂದ ನಡೆಸಲ್ಪಡುವ ಪ್ರಸರಣದ ಅಲೆಗಳ ನಂತರ ಹಲವು ದೇಶಗಳು ಆಸ್ಪತ್ರೆಗೆ ದಾಖಲಾಗುವ ಕೇಸ್ಗಳು ಹೆಚ್ಚಾಗುತ್ತಿವೆ. ಹಾಗಾಗಿ ಜನರು ಎಚ್ಚರಿಕಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕವು ದೂರವಾಗಿದ್ದರೂ, ನಾವು ಈಗ ಒಂದು ವರ್ಷದ ಹಿಂದೆ ಇದ್ದ ಪರಿಸ್ಥಿತಿಗಿಂತ ವಿಭಿನ್ನ ಪರಿಸ್ಥಿತಿಯಲ್ಲಿದ್ದೇವೆ. ನಾವು ಹಲವಾರು ಪ್ರಮುಖ ವಿಷಯಗಳನ್ನು ಕಲಿತಿದ್ದೇವೆ. ಜೀವಗಳನ್ನು ಉಳಿಸಲು ವ್ಯಾಕ್ಸಿನೇಷನ್ ಅನ್ನು ಅಮೃತವಾಗಿ ಪರಿಗಣಿಸುವುದರ ಬಗ್ಗೆ ಒತ್ತಿ ಹೇಳಿದ್ದಾರೆ. https://kannadanewsnow.com/kannada/bigg-breaking-news-15-people-detained-so-far-in-praveen-nettaru-murder-case-home-minister-araga-jnanendra/…
ದೆಹಲಿ : 32 ವರ್ಷಗಳಲ್ಲಿ ಗ್ರೀಕೋ-ರೋಮನ್ ಅಂಡರ್ 17 ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸೂರಜ್ ವಸಿಷ್ಠ ಪಾತ್ರರಾಗಿದ್ದಾರೆ https://kannadanewsnow.com/kannada/breaking-news-bjp-resigns-en-masse-in-bagalkot-koppal-districts-in-the-wake-of-praveen-nettars-murder/ ರೋಮ್ನಲ್ಲಿ ನಡೆದ ಫೈನಲ್ನಲ್ಲಿ ಸೂರಜ್ ಅಜೆರ್ಬೈಜಾನ್ ಕುಸ್ತಿಪಟು ಫರೈಮ್ ಮುಸ್ತಫಾಯೆವ್ ಅವರನ್ನು 11-0 ಗೋಲಿನಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. 2022 ರ ವಿಶ್ವ ಕೆಡೆಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಕೊನೆಯ ಚಾಂಪಿಯನ್ 1990 ರಲ್ಲಿ ಪಪ್ಪು ಯಾದವ್ ಆಗಿದ್ದರು. https://kannadanewsnow.com/kannada/breaking-news-bjp-resigns-en-masse-in-bagalkot-koppal-districts-in-the-wake-of-praveen-nettars-murder/ ರೊಮೇನಿಯಾದ ಅಲೆಕ್ಸಾಂಡ್ರು ವ್ಲಾಡುಟ್ ವರ್ಜಾರಿಯನ್ನು ತಾಂತ್ರಿಕ ಶ್ರೇಷ್ಠತೆಯಿಂದ ಸೋಲಿಸಿ ಸೂರಜ್ ಪಂದ್ಯಾವಳಿಯಲ್ಲಿ ತನ್ನ ಎಲ್ಲಾ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದನು. ಅವರು ಜಪಾನಿನ ಕುಸ್ತಿಪಟು ಕೊಹಾಕು ಕನಜವಾ ಮತ್ತು ಉಜ್ಬೇಕಿಸ್ತಾನ್‌ನ ಖುರ್ಷಿದ್ಬೆಕ್ ನಾರ್ಮುಖಮಡೋವ್ ವಿರುದ್ಧ ಜಯಗಳಿಸಿ ಅಂತಿಮ ಸುತ್ತಿಗೆ ಮುನ್ನಡೆದರು, ಅಲ್ಲಿ ಅವರು ಮುಸ್ತಫಾಯೆವ್ ಅವರನ್ನು ಸೋಲಿಸಿದರು. https://twitter.com/wrestling/status/1551970362509774848?ref_src=twsrc%5Etfw%7Ctwcamp%5Etweetembed%7Ctwterm%5E1551970362509774848%7Ctwgr%5E%7Ctwcon%5Es1_c10&ref_url=https%3A%2F%2Fwww.republicworld.com%2Fsports-news%2Fother-sports%2Fsuraj-vashisht-becomes-indias-first-greco-roman-u17-world-champion-in-32-years-articleshow.html
ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈವರೆಗೆ 15 ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ. https://kannadanewsnow.com/kannada/pm-modi-will-visit-gujarat-today-projects-worth-crores-will-be-started-in-the-state/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಕೇರಳ ಪೊಲೀಸರ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಇಬ್ಬರು ಜಂಟಿಯಾಗಿ ಕಾರ್ಯಚರಣೆ ನಡೆಸಿದರೆ ಯಶಸ್ವಿಯಾಗುತ್ತೇವೆ. ಜಂಟಿ ಕಾರ್ಯಚರಣೆಯಿಂದ ಆರೋಪಿಗಳನ್ನು ಮಟ್ಟಹಾಕಲು ಸಾಧ್ಯವಾಗುತ್ತದೆ ಎಂದರು. https://kannadanewsnow.com/kannada/breaking-news-bjp-resigns-en-masse-in-bagalkot-koppal-districts-in-the-wake-of-praveen-nettars-murder/ ಪ್ರವೀಣ್ ಹತ್ಯೆ ಹಿಂದೆ ಅನೇಕ ಮತಾಂಧ ಸಂಘಟನೆಗಳ ಕೈವಾಡ ಇದೆ ಎಂಬ ಅನುಮಾನ ಇದೆ. ಪ್ರವೀಣ್ ಹತ್ಯೆಗೆ ಆಕ್ರೋಶ ಇದ್ದದಕ್ಕೆ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದಾರೆ. ಪ್ರವೀಣ್ ಹತ್ಯೆ ಸಂಬಂಧ ಈವರೆಗೆ 15 ಜನರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗ್ತಿದೆ ಎಂದು ಹೇಳಿದ್ದಾರೆ.
ಗುಜರಾತ್ : ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಗುಜರಾತ್ ಮತ್ತು ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದ ಮೊದಲ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್ ಚೇಂಜ್ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಇಂದು ಗುಜರಾತಿನಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಭೇಟಿಯ ಮೊದಲ ದಿನದಂದು ಹಿಮ್ಮತ್‌ನಗರ ಬಳಿ ಸಬರ್ ಡೈರಿಯ ದಿನಕ್ಕೆ ಮೂರು ಲಕ್ಷ ಲೀಟರ್ ಹಾಲು ಸಂಸ್ಕರಣಾ ಘಟಕವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಮತ್ತು 600 ಕೋಟಿ ವೆಚ್ಚದ ಚೀಸ್ ಪ್ಲಾಂಟ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗುಜರಾತ್ ಸಚಿವ ಮತ್ತು ಬಿಜೆಪಿ ವಕ್ತಾರ ಜಿತು ವಘಾನಿ ಹೇಳಿದ್ದಾರೆ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ನಲ್ಲಿರುವ ಭಾರತದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಕ್ಕೆ (ಐಎಫ್‌ಎಸ್‌ಸಿ) ಭೇಟಿ ನೀಡಲಿದ್ದಾರೆ. ಇದು ದೇಶದ ಮೊದಲ ಅಂ ತಾರಾಷ್ಟ್ರೀಯ ಬುಲಿಯನ್ ಎಕ್ಸ್ಚೇಂಜ್ ಆಗಿದ್ದು, ಭಾರತದಲ್ಲಿ ಚಿನ್ನದ ಹಣಕಾಸುಕರಣವನ್ನು ಉತ್ತೇಜಿಸುತ್ತದೆ ಎಂದು…
ಹಾವೇರಿ : ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೆಕೆಆರ್) ವತಿಯಿಂದ 1411 ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗಳಿಗೆ ಪುರುಷರಿಂದ ಹಾಗೂ 857 ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/minor-girl-raped-by-religious-teacher-in-up/ ಕಾನ್ಸ್ಟೇಬಲ್(ಡ್ರೈವರ್) ಹುದ್ದೆಗೆ ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 21 ರಿಂದ30 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ. ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 18 ರಿಂದ27 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ. https://kannadanewsnow.com/kannada/bjp-yuva-morcha-members-resign-in-wake-of-praveen-nettars-murder-anger-against-the-government/ ಅರ್ಹ ಅಭ್ಯರ್ಥಿಗಳು ದಿನಾಂಕ 29-07-2022 ರೊಳಗಾಗಿ ವೆಬ್‍ಸೈಟ್ https://ssc.nic.inನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.080-25502520,ಮೊ.9483862020, ದೂ.08375-249291 ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/bigg-news-bjp-workers-resign-across-the-state-do-you-know-what-cm-bommai-said/