Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ : ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಚೆಸ್ ಒಲಿಂಪಿಯಾಡ್ -2022ರ 44ನೇ ಋತುವನ್ನ ಗುರುವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, “ಕ್ರೀಡೆಯಲ್ಲಿ, ಸೋತವರು ಯಾರೂ ಇಲ್ಲ, ವಿಜೇತರು ಇದ್ದಾರೆ ಮತ್ತು ಭವಿಷ್ಯದ ವಿಜೇತರು ಇದ್ದಾರೆ” ಎಂದು ಹೇಳಿದರು. 2020ರ ಆನ್ಲೈನ್ ಒಲಿಂಪಿಯಾಡ್‌ನಲ್ಲಿ ಭಾರತವು ರಷ್ಯಾದೊಂದಿಗೆ ಜಂಟಿ ವಿಜೇತವಾಗಿತ್ತು. ಈ ಬಾರಿ ಚೆಸ್ ಒಲಿಂಪಿಯಾಡ್‌ನಲ್ಲಿ ಮುಕ್ತ ವಿಭಾಗದಲ್ಲಿ ದಾಖಲೆಯ 187 ದೇಶಗಳ ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 162 ತಂಡಗಳು ಭಾಗವಹಿಸುತ್ತಿವೆ. ಅದೇ ಸಮಯದಲ್ಲಿ, ಪಾಕಿಸ್ತಾನವು 44ನೇ ಚೆಸ್ ಒಲಿಂಪಿಯಾಡ್‌ನಿಂದ ಹೊರಬಂದಿದೆ. ಇನ್ನು ಪಾಕ್ ತಂಡವು ಭಾರತವನ್ನ ತಲುಪಿರುವ ಸಮಯದಲ್ಲಿ ಪಾಕಿಸ್ತಾನವು ಈ ನಿರ್ಧಾರ ತೆಗೆದುಕೊಂಡಿದೆ.
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಯಾರಿಗೆ ಯಾವಾಗ ಅದೃಷ್ಟ ಒಲಿಯುತ್ತೆ ಅನ್ನೋದನ್ನ ಯಾರೂ ಊಹಿಸಲು ಸಾಧ್ಯವಿಲ್ಲ. ಇದೇ ರೀತಿಯ ಪ್ರಕರಣವೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ. ಇನ್ನು ಈ ಸ್ಟೋರಿ ಓದಿದ್ಮಲೆ ನೀವು ಕೂಡ ಅಬ್ಬಾ.. ನಿಜಕ್ಕೂ ಆತ ಅದೃಷ್ಟವಂತ ಅಂತಾ ಹೇಳ್ತೀರಾ. ವಾಸ್ತವವಾಗಿ, ಕೇರಳದ ಒಬ್ಬ ವ್ಯಕ್ತಿ ಅಕ್ಷರಶಃ ಸಾಲದ ಸುಳಿಯಲ್ಲಿ ಸಿಲುಕಿದ್ದು, ತಾನಿರುವ ಮನೆಯನ್ನೂ ಮಾರುವುದಕ್ಕೆ ಮುಂದಾಗಿದ್ದಾನೆ. ವಿಷ್ಯ ಏನಪ್ಪಾ ಅಂದ್ರೆ, ಮನೆ ಮಾರಾಟ ಮಾಡುವ ಮೊದ್ಲು, ಆತನಿಗೆ 1 ಕೋಟಿ ರೂ.ಗಳ ಜಾಕ್ಪಾಟ್ ಹೊಡೆದಿದೆ. ಹೌದು, ಕೇರಳದ ವ್ಯಕ್ತಿಯೊಬ್ಬರು ತಮ್ಮ 50 ಲಕ್ಷ ರೂ.ಗಳ ಸಾಲವನ್ನು ಮರುಪಾವತಿಸಲು ತಮ್ಮ ಮನೆಯನ್ನ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ನಂತರ ಇದ್ದಕ್ಕಿದ್ದಂತೆ 1 ಕೋಟಿ ರೂ.ಗಳ ಲಾಟರಿ ಗೆದ್ದಿದ್ದಾರೆ ಎಂದು ಅವರಿಗೆ ತಿಳಿಯಿತು. ಮಂಜೇಶ್ವರಂನಲ್ಲಿ ಚಿತ್ರಕಲಾವಿದರಾಗಿ ಕೆಲಸ ಮಾಡುತ್ತಿರುವ 50 ವರ್ಷದ ಮೊಹಮ್ಮದ್ ಅಲಿಯಾಸ್ ಬಾವಾ ಕೇರಳ ರಾಜ್ಯ ಲಾಟರಿ ಮೂಲಕ ಜಾಕ್ಪಾಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇರಳದ ಈ ವ್ಯಕ್ತಿ ಸೋಮವಾರ ತನ್ನ…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಯಾದಗಿರಿಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಆರೋಗ್ಯ ಆಯೋಗದ (NMC) ಅನುಮತಿ ದೊರೆತಿದ್ದು, ಇದೇ 2022-23ನೇ ಶೈಕ್ಷಣಿಕ ಸಾಲಿನಿಂದ 150 ಎಂಬಿಬಿಎಸ್ ಸೀಟುಗಳಿಗೆ ಪ್ರವೇಶಾತಿ ಪ್ರಾರಂಭವಾಗಲಿದೆ ಎಂದು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. https://twitter.com/mla_sudhakar/status/1552647131697008640?s=20&t=_kJs3QOlKAc-_c0TB4fmPA ಟ್ವೀಟ್ ಮೂಲಕ ವಿಷ್ಯ ತಿಳಿಸಿದ ಸಚಿವರು, “ಯಾದಗಿರಿ ಮೆಡಿಕಲ್ ಕಾಲೇಜು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಲಿದ್ದು, ಈ ಭಾಗದ ಆರೋಗ್ಯ ಮೂಲಸೌಕರ್ಯದಲ್ಲಿ ಗಣನೀಯ ಸುಧಾರಣೆ ತರಲಿದೆ” ಎಂದು ಹೇಳಿದ್ದಾರೆ. ಇನ್ನು ಯಾದಗಿರಿ ಜನತೆಯ ಬಹುದಿನಗಳ ಕನಸು ನನಸಾಗಿಸಲು ಕಾರಣೀಭೂತರಾದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿಯವರಿಗೆ ಯಾದಗಿರಿ ಜನತೆಯ ಪರವಾಗಿ ಧನ್ಯವಾದಗಳು ಎಂದಿದ್ದಾರೆ. ಇನ್ನು ಮತ್ತೊಂದು ಟ್ವಿಟ್‌ನಲ್ಲಿ “ಹಾವೇರಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮುಂಬರುವ 2022-23ನೇ ಶೈಕ್ಷಣಿಕ ಸಾಲಿನಿಂದ 150 ಎಂಬಿಬಿಎಸ್ ಸೀಟುಗಳೊಂದಿಗೆ ಪ್ರವೇಶಾತಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅನುಮತಿ ನೀಡಿದೆ” ಎಂದು ಸಚಿವರು ತಿಳಿಸಿದ್ದಾರೆ. https://twitter.com/mla_sudhakar/status/1552631990838767616?s=20&t=DosWdScZabCAEytH-PL6IQ
ಬೆಂಗಳೂರು: ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳುವ ಹೋರಾಟದಲ್ಲಿ ರಾಜಕಾರಣಿಗಳ ಮಕ್ಕಳು ಬಲಿಯಾಗುತ್ತಿಲ್ಲ. ಬದಲಿಗೆ ಅಮಾಯಕರ, ಬಡವರ ಮಕ್ಕಳು ಅಮಾನುಷವಾಗಿ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಕೆ.ಆರ್.ನಗರದಲ್ಲಿ ಡಾ.ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ಪರೋಕ್ಷವಾಗಿ ಬಿಜೆಪಿಯ ಸ್ವಾರ್ಥ ರಾಜಕಾರಣವನ್ನು ಕಟುವಾಗಿ ಟೀಕಿಸಿದರು. ಬಿಜೆಪಿ ಸರಕಾರದ ಆಡಳಿತಲ್ಲಿ ಕಾರ್ಪೋರೇಟ್ ಕಂಪನಿಗಳು ಲಕ್ಷಾಂತರ ಕೋಟಿ ಕುಳಗಳಾಗುತ್ತಿವೆ. ಒಬ್ಬ ಕಾರ್ಪೋರೇಟ್ ವ್ಯಕ್ತಿಯ ಒಂದು ದಿನದ ಆದಾಯ 1 ಸಾವಿರದ 348 ಕೋಟಿ ರೂಪಾಯಿಗಳಾಗಿದೆ ಎಂದು ಉದ್ಯಮಿ ಗೌತಮ್ ಅದಾಯನಿಯ ಹೆಸರೇಳದೇ ಹೇಳಿದ ಅವರು; ಬಿಜೆಪಿ ಸರಕಾರ ಧನಿಕರ ಪರ ನೀತಿಯನ್ನು ಹೊಂದಿದೆ. ಆದರೆ ದೇಶದಲ್ಲಿ ಕೋಟ್ಯಂತರ ಜನರು ಸ್ವಾತಂತ್ರ್ಯ ಬಂದು ೭೫ ವರ್ಷವಾದ ಹೊತ್ತಿನಲ್ಲೂ ತುತ್ತು ಅನ್ನಕ್ಕೂ ಸಂಕಷ್ಟಪಡುತ್ತಿದ್ದಾರೆ ಎಂದು ಹೆಚ್ಡಿಕೆ ಮರಗಿದರು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ನಡೆಸುತ್ತಿರುವ ಸ್ವಾರ್ಥ ರಾಜಕೀಯವನ್ನು ಮಾಜಿ ಮುಖ್ಯಮಂತ್ರಿಗಳು ಎಳೆ ಎಳೆಯಾಗಿ ಬಿಡಿಸಿಟ್ಟರಲ್ಲದೆ; ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಶಕ್ತಿ…
ಬೆಂಗಳೂರು: ಕಾಂಗ್ರೆಸ್ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಹೀಗಂತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಸಂಸದರು ಮಾತನಾಡಿದ್ದಾರೆ ಎನ್ನಲಾದ ಮಾತು ಈಗ ವಿವಾದಕ್ಕೆ ಕಾರಣವಾಗಿದ್ದು, ಸಂಸದರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತೇಜಸ್ವಿ ಸೂರ್ಯ ಹಾಗೂ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗಂಡಿ ಮಾತುಕತೆಯ ಆಡಿಯೋ ವೈರಲ್ ಆಗಿದ್ದು, ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಈ ಬಗ್ಗೆ ಸಂಸದ ತೇಜಸ್ವಿಯವರು ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರು : ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನ ಒದಗಿಸಲು ಹೆಚ್ಚುವರಿ ಪ್ಯಾಸೆಂಜರ್ ರೈಲುಗಳನ್ನ ಆರಂಭಿಸಲಾಗಿದೆ. ಅದ್ರಂತೆ, ಈ ರೈಲುಗಳ ಓಡಾಟ ನಾಳೆಯಿಂದ್ಲೇ ಶುರುವಾಗಲಿದೆ. ಪ್ಯಾಸೆಂಜರ್ ರೈಲುಗಳು ಈ ಕೆಳಗಿನಂತಿವೆ..! 1.ರೈಲು ಸಂಖ್ಯೆ.06523 / 06524 ಎಸ್ಎಂವಿಬಿ (ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೈಯ್ಯಪ್ಪನಹಳ್ಳಿ) – ಕೆಎಸ್ಆರ್ ಬೆಂಗಳೂರು – ಎಸ್ಎಂವಿಬಿ ಮೆಮು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ.06523 ಎಸ್ಎಂವಿಬಿ – ಕೆಎಸ್ಆರ್ ಬೆಂಗಳೂರು ಮೆಮು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ಎಸ್ಎಂವಿಬಿ ನಿಂದ 03.15 ಗಂಟೆಗೆ ಹೊರಟು 04.00 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪುತ್ತದೆ. ರೈಲು ಸಂಖ್ಯೆ.065224 ಕೆಎಸ್ಆರ್ ಬೆಂಗಳೂರು – ಎಸ್ಎಂವಿಬಿ ಮೆಮು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷವು ಕೆಎಸ್ಆರ್ ಬೆಂಗಳೂರಿನಿಂದ 21.30 ಗಂಟೆಗೆ ಹೊರಟು 22.05 ಗಂಟೆಗೆ ಎಸ್ಎಂವಿಬಿ ತಲುಪುತ್ತದೆ. 2. ರೈಲು ಸಂಖ್ಯೆ.06531/06532 KSR ಬೆಂಗಳೂರು – ದೇವನಹಳ್ಳಿ – ಕೆಎಸ್ಆರ್ ಬೆಂಗಳೂರು ಮೆಮು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ.06531…
ಪುತ್ತೂರು : ಕೊಲೆಯಾದ ಬಿಜೆಪಿ ಯುವ ಮುಖಂಡ ಪ್ರವೀನ್ ನೆಟ್ಟಾರು ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದು, ಕುಟುಂಬಸ್ಥರಿ ಸಾಂತ್ವನ ಹೇಳಿದ್ದಾರೆ. ಇನ್ನು ಇದೇ ವೇಳೆ ಕುಟುಂಬಸ್ಥರಿಗೆ 25 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದಾರೆ. ನೆಟ್ಟೂರು ಗ್ರಾಮದಲ್ಲಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿ ಸಿಎಂ ಬೊಮ್ಮಾಯಿ, “ಪ್ರವೀಣ್ ಕುಟುಂಬಸ್ಥರಿಗೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದೇನೆ. ಇದು ಕೊಲೆ ಮಾತ್ರವಲ್ಲ, ದೇಶದ್ರೋಹದ ಕೆಲಸ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆಯಾಗ್ತಿದೆ. ಅತಿ ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು. ಇನ್ನು ಇದನ್ನು ಕೇವಲ ಒಂದು ಕೊಲೆ ಪ್ರಕರಣವಾಗಿ ನೋಡುವುದಿಲ್ಲ, ಅಗತ್ಯ ಬಿದ್ದರೆ ಪ್ರವೀಣ್ ಕೊಲೆ ಕೇಸ್‌ನ ತನಿಖೆ ಎನ್‌ಐಎಗೆ ವಹಿಸ್ತೇವೆ. ಹತ್ಯೆಗೆ ಬೆಂಬಲ ನೀಡಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ” ಎಂದರು. ಇನ್ನು ಸಿಎಂ ಬೊಮ್ಮಾಯಿ ಸೇರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಬಂಧಿತ ನಾಯಕ ಪಾರ್ಥ ಚಟರ್ಜಿಯನ್ನ ಟಿಎಂಸಿಯಿಂದ ಅಮಾನತುಗೊಳಿಸಲಾಗಿದ್ದು, ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಗುರುವಾರ ಮಾಹಿತಿ ನೀಡಿದ್ದಾರೆ. ಎಸ್ಎಸ್ಸಿ (ಶಾಲಾ ಸೇವಾ ಆಯೋಗ) ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಆರೋಪದ ಮೇಲೆ ಚಟರ್ಜಿ ಶನಿವಾರ ಬಂಧಿಸಲಾಗಿದೆ. ರಾಜ್ಯ ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿನ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯನ್ನ ಕಾನೂನುಬಾಹಿರವಾಗಿ ನೇಮಕ ಮಾಡುವಲ್ಲಿ ಅವ್ರ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಪ್ರಸ್ತುತ, ಅವರು ಇಡಿ ವಶದಲ್ಲಿದ್ದಾರೆ.
ನವದೆಹಲಿ : ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (CSL) ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ (IAC-1) ‘ವಿಕ್ರಾಂತ್’ನ್ನ ಗುರುವಾರ ಭಾರತೀಯ ನೌಕಾಪಡೆಗೆ ತಲುಪಿಸಿದೆ. ವರದಿಯ ಪ್ರಕಾರ, ಸಿಎಸ್ಎಲ್ ಹಡಗಿನ ವಿತರಣೆಯನ್ನ ದೃಢಪಡಿಸಿದೆ, ಇದು ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ. ಈ ಹಡಗು ಸುಮಾರು 45,000 ಟನ್‌ಗಳಷ್ಟು ಆಳವಾದ ಸ್ಥಳಾಂತರವಾಗಿದೆ ಮತ್ತು ಇದನ್ನು ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ನೌಕಾ ಹಡಗು ಯೋಜನೆ ಎಂದು ಪರಿಗಣಿಸಲಾಗಿದೆ ಎಂದು ಸಿಎಸ್ಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “ಆಜಾದಿ ಕಾ ಅಮೃತ ಮಹೋತ್ಸವದೊಂದಿಗೆ ಭಾರತೀಯ ಸಾಗರ ಇತಿಹಾಸ ಮತ್ತು ಸ್ವದೇಶಿ ಹಡಗು ನಿರ್ಮಾಣದಲ್ಲಿ ಮಹತ್ವದ ದಿನ” ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ. https://twitter.com/indiannavy/status/1552598896911990784?s=20&t=ejRf4jjtPVRHVZCzT4Ekmg ಸುದ್ದಿ ಸಂಸ್ಥೆ ಪಿಟಿಐಗೆ ನಿಕಟವಾಗಿರುವ ರಕ್ಷಣಾ ಮೂಲಗಳು ಹಡಗನ್ನ ಭಾರತೀಯ ನೌಕಾಪಡೆಗೆ ತಲುಪಿಸುವುದನ್ನ ದೃಢಪಡಿಸಿವೆ. ಇನ್ನು ಐಎಸಿಯ ಅಧಿಕೃತ ಸೇರ್ಪಡೆ ಮತ್ತು ಕಾರ್ಯಾರಂಭವು ಈ ವರ್ಷದ ಆಗಸ್ಟ್ʼನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿವೆ. ಐಎನ್ಎಸ್ ವಿಕ್ರಾಂತ್, ದೇಶೀಯ ವಿಮಾನ…
ಪನ್ನಾ : ಅಚಾನಕ್ಕಾಗಿ ಸಿಕ್ಕ ವಜ್ರದಿಂದ ಬಡ ಮಹಿಳೆಯೊಬ್ಬಳ ಅದೃಷ್ಟವೇ ಬದಲಾಗಿದೆ. ಹೌದು, ಬೆಲೆಬಾಳುವ ಕಲ್ಲಿನ ಗಣಿಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಪನ್ನಾ ಅರಣ್ಯ ಪ್ರದೇಶದಲ್ಲಿ ಉರುವಲು ಸಂಗ್ರಹಿಸಲು ಹೋದಾಗ ಮಹಿಳೆಯೊಬ್ಬರಿಗೆ 4.39 ಕ್ಯಾರೆಟ್ ವಜ್ರ ಸಿಕ್ಕಿದೆ. ಅಂದಾಜಿನ ಪ್ರಕಾರ, ಹರಾಜಿನಲ್ಲಿ ವಜ್ರಕ್ಕೆ 20 ಲಕ್ಷ ರೂಪಾಯಿ ಬೆಲೆ ಬಾಳಲಿದೆ. ಪುರುಷೋತ್ತಮಪುರದ ನಿವಾಸಿಯಾದ ಗೆಂಡಾ ಬಾಯಿ ಅನ್ನೋ ಮಹಿಳೆ ಬುಧವಾರ ಕಟ್ಟಿಗೆ ಸಂಗ್ರಹಿಸೋಕೆ ಅಂತಾ ಕಾಡಿಗೆ ಹೋಗಿದ್ದಾಳೆ. ಆಗ ಬುಧವಾರ ಬೆಲೆಬಾಳುವ ಕಲ್ಲು ಸಿಕ್ಕಿತು ಎಂದು ಡೈಮಂಡ್ ಇನ್ಸ್ಪೆಕ್ಟರ್ ಅನುಪಮ್ ಸಿಂಗ್ ತಿಳಿಸಿದ್ದಾರೆ. ನಂತ್ರ ಆ ಮಹಿಳೆ ಡೈಮಂಡ್ ಆಫೀಸ್ ಹೋಗಿದ್ದು, 4.39 ಕ್ಯಾರೆಟ್ ವಜ್ರದ ಕಲ್ಲನ್ನ ಠೇವಣಿ ಇಟ್ಟಿದ್ದಾಳೆ ಎಂದು ಹೇಳಿದರು. ಇನ್ನು ಈ ಕಚ್ಚಾ ವಜ್ರವನ್ನ ಹರಾಜು ಹಾಕಲಾಗುವುದು ಮತ್ತು ಸರ್ಕಾರದ ರಾಯಲ್ಟಿ ಮತ್ತು ತೆರಿಗೆಗಳನ್ನ ಕಡಿತಗೊಳಿಸಿದ ನಂತ್ರ ಆದಾಯವನ್ನ ಮಹಿಳೆಗೆ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಗೆಂಡಾ ಬಾಯಿ, ತಾನು ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ನಂತ್ರ…