Author: KNN IT TEAM

ಮಂಗಳೂರು : ಸುರತ್ಕಲ್ ನಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಸುರತ್ಕಲ್ ವ್ಯಾಪ್ತಿಯಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. https://kannadanewsnow.com/kannada/bigg-news-the-education-department-has-instructed-private-schools-in-the-state-to-publish-the-details-on-the-notice-board-and-collect-the-fee/ ಸುರತ್ಕಲ್ ನ ಮಂಗಳಪೇಟೆ ನಿವಾಸಿ ಫಾಜಿಲ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಂದು ನಾಲ್ಕು ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸುರತ್ಕಲ್, ಪೆಣಂಬೂರು, ಬಜ್ಪೆ, ಮುಲ್ಕಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/good-news-for-farmers-dalits-women-in-the-state-cm-bommai-announces-5-new-schemes/ ಫಾಜಿಲ್ ಸುರತ್ಕಲ್ ನ ಬಟ್ಟೆ ಖರೀದಿಗೆಂದು ಅಂಗಡಿಯೊಂದಕ್ಕೆ ತೆರಳಿದ್ದ ಈ ವೇಳೆ ರಾತ್ರಿ 8 ಗಂಟೆ ಸುಮಾರಿಗೆ ಈ ದಾಳಿ ಮಾಡಿ ದುಷ್ಕರ್ಮಿಗಳು ಫಾಜಿಲ್ ನನ್ನು ಹತ್ಯೆ ಮಾಡಿದ್ದಾರೆ. https://kannadanewsnow.com/kannada/2-die-45-ill-in-union-ministers-constituency-polluted-water-suspected/

Read More

ಭೋಪಾಲ್(ಮಧ್ಯಪ್ರದೇಶ): ಮಧ್ಯಪ್ರದೇಶದ ದಾಮೋಹ್‌ನಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಸಾವನ್ನಪ್ಪಿದ್ದು, 45 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.  ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆರೋಗ್ಯ ಇಲಾಖೆಯ ತಂಡ ಬರುವ ಮುನ್ನವೇ ಗ್ರಾಮದ ಇಬ್ಬರು ನಿವಾಸಿಗಳು ಮೃತಪಟ್ಟಿದ್ದರು. ನಂತ್ರ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹತ್ತು ರೋಗಿಗಳನ್ನು ದಾಮೋಹ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೂವತ್ತೈದು ಮಂದಿಯನ್ನು ಸಮೀಪದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬಾವಿಯ ಕಲುಷಿತ ನೀರು ಸೇವನೆಯಿಂದ ತೀವ್ರ ಗ್ಯಾಸ್ಟ್ರೋಎಂಟರೈಟಿಸ್ ಮತ್ತು ಸಂಬಂಧಿತ ಸಮಸ್ಯೆಗಳು ಉಂಟಾಗಿರಬಹುದು. ಇದೀಗ ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. https://kannadanewsnow.com/kannada/bigg-news-aadhaar-card-number-mandatory-for-voter-id-card/ https://kannadanewsnow.com/kannada/breaking-news-mig-21-aircraft-crashes-in-rajasthan-the-death-of-both-the-pilots-mig-plane-crash/ https://kannadanewsnow.com/kannada/good-news-google-maps-introduced-street-view-now-even-if-your-loved-ones-come-to-the-designated-place-you-will-get-a-notification/

Read More

ಬೆಂಗಳೂರು : ರಾಜ್ಯದ ಎಲ್ಲ ಖಾಸಗಿ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಪ್ರತಿ ವರ್ಷ ಡಿಸೆಂಬರ್ ಅಂತ್ಯದೊಳಗೆ ಶಾಲೆಯ ಸೂಚನಾ ಫಲಕ ಹಾಗೂ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಿ ಅದರಂತೆ ಶುಲ್ಕವನ್ನು ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ. https://kannadanewsnow.com/kannada/good-news-for-farmers-dalits-women-in-the-state-cm-bommai-announces-5-new-schemes/ ಖಾಸಗಿ ಶಾಲೆಗಳು ತಮ್ಮ ಮನಬಂದಂತೆ ಶುಲ್ಕ ಪಡೆಯುತ್ತಿವೆ. ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸುತ್ತಿಲ್ಲವೆಂದು ಆರೋಪಿಸಿ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ 2022 ರ ಮೇ 23 ರಂದು ತೀರ್ಪಿನ ಪ್ರಕಾರ ಹಾಗೂ ಖಾಸಗಿ ಶಾಲಾ ಅಡಳಿತದ ಮಾರ್ಗಸೂಚಿಯಂತೆ 2019-2020 ನೇ ಸಾಲಿನಿಂದ ಶುಲ್ಕ ನಿಗಿದ ಆದೇಶ ಬಂದಿದೆ. ಆ ಪ್ರಕಾರ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ಡಿಸೆಂಬರ್ ನೊಳಗೆ ವಿವರಗಳನ್ನು ಪ್ರಕಟಿಸುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. https://kannadanewsnow.com/kannada/bigg-news-aadhaar-card-number-mandatory-for-voter-id-card/

Read More

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೇತೃತ್ವದ ಸರ್ಕಾರ 1 ವರ್ಷದ ಅಧಿಕಾರವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. https://kannadanewsnow.com/kannada/bigg-news-aadhaar-card-number-mandatory-for-voter-id-card/ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರೈತರ ಮಕ್ಕಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ ವಿದ್ಯಾನಿಧಿ ಯೋಜನೆ, ನೇಕಾರ, ಟ್ಯಾಕ್ಸಿ ಚಾಲಕರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ.ಎಸ್ ಸಿ/ಎಸ್ ಟಿ ಯುವಕರಿಗೆ ಬಾಬು ಜಗಜೀವನ್ ರಾಂ ಹೆಸರಿನಲ್ಲಿ ಉದ್ಯೋಗ ಕೈಗೊಳ್ಳಲು ಸ್ತ್ರೀ ಸಾಮರ್ಥ್ಯ ಯೋಜನೆ, ಎಂಟು ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, ಯುವಕರಿಗೆ ಆರ್ಥಿಕ ನೆರವು ನೀಡಲು ಸ್ವಾಮಿ ವಿವೇಕಾನಂದ ಯೋಜನೆಗಳನ್ನು ಜಾರಿಗೆ ತರಲಾಗಿದೆ. 8.5 ಲಕ್ಷ ಕಳೆದ ವರ್ಷ ರೈತ ವಿದ್ಯಾರ್ಥಿಗಳು ವಿದ್ಯಾನಿಧಿ ಪಡೆದುಕೊಂಡಿದ್ದರು. 9.98 ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ತಲುಪಿದೆ. ರೈತ ಮಕ್ಕಳಿಗೆ ಇದರಿಂದ ಭರವಸೆ ಮೂಡಿದೆ. ಸಂಧ್ಯಾ ಸುರಕ್ಷಾ ಮಾಸಾಶನ ಎಲ್ಲ ಹೆಚ್ಚು ಮಾಡಿ ಆರ್ಥಿಕ ಆಸರೆ ನೀಡಲಾಗಿದೆ. ಬಡವರಿಗೆ ವಯಸ್ಸಾದವರಿಗೆ ಅಂಗವಿಕಲರಿಗೆ ಕೊಟ್ಟಿದ್ದೇವೆ. ಇತ್ತೀಚೆಗೆ…

Read More

ರಾಯಚೂರು : ಸಾರ್ವಜನಿಕರು ಮತದಾನದ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಣಿ ಪ್ರಕ್ರಿಯೆಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಅಗತ್ಯ ನೆರವು ನೀಡುವಂತೆ  ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್.ದುರುಗೇಶ್ ಕೋರಿದರು.       ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಕೇಂದ್ರ ಚುನಾವಣೆ ಆಯೋಗ ಆದೇಶದ ಪ್ರಕಾರ ಗುರುತಿನ ಚೀಟಿಗೆ ಆಧಾರ್ ನೋಂದಣಿಗೆ ಸಂಬAಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮುಂಬಾರು ಆಗಷ್ಟ್ 1ರಿಂದ ಡಿ.31ವರೆಗೆ ಹೊಸ ಮತದಾರರು ಸೇರ್ಪಡೆ ಹಾಗೂ ಮತದಾನ ಗುರುತಿನ ಚೀಟಿಗೆ ಆಧಾರ್ ನೋಂದಣಿ ಮಾಡಲು ವಿವಿಧ ಕಾರ್ಯಕ್ರಮಗಳು ಮತ್ತು ವಿಶೇಷ ಶಿಬಿರಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಿಇಒ, ಡಿಇಒ, ಹಾಗೂ ಇಆರ್‌ಒಗಳ ನೇತೃತ್ವದಲ್ಲಿ ನಡೆಯಲಿದ್ದು, ಇದಕ್ಕೆ ವಿವಿಧ  ರಾಜಕೀಯ ಪಕ್ಷಗಳು ಹಾಗೂ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳು ಸಹಕಾರ ನೀಡಬೇಕೆಂದರು. ಕೇಂದ್ರ ಹಾಗೂ ರಾಜ್ಯ ಚುನಾವಣೆ ಆದೇಶ ಪ್ರಕಾರ ಮತದಾನ ಗುರುತಿನ ಚೀಟಿಗೆ ಆಧಾರ್ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಗರುಡ ಮತ್ತು ವಿಹೆಚ್ ಅ್ಯಪ್‌ಗಳ…

Read More

ಬಾರ್ಮರ್ : ಭಾರತೀಯ ವಾಯುಪಡೆಯ (IAF) ಮಿಗ್ -21 ವಿಮಾನವು ಗುರುವಾರ ರಾತ್ರಿ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಾರ್ಮರ್ʼನ ಭೀಮ್ಡಾ ಗ್ರಾಮದಲ್ಲಿ ಮಿಗ್ ಅಪಘಾತಕ್ಕೀಡಾಗಿದ್ದು, ಜೋರಾದ ಶಬ್ದದೊಂದಿಗೆ ಬೆಂಕಿಯ ದೊಡ್ಡ ಜ್ವಾಲೆಗಳನ್ನ ಜನರು ನೋಡಿದ್ದು ಮಿಗ್ ಅಪಘಾತದ ಸುದ್ದಿ ಕೋಲಾಹಲವನ್ನ ಸೃಷ್ಟಿಸಿದೆ. ಸಧ್ಯ ಸ್ಥಳಕ್ಕೆ ಅಧಿಕಾರಿಗಳು ತೆರಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಪಘಾತವು ಎಷ್ಟು ಗಂಭೀರವಾಗಿದೆಯೆಂದರೆ ಮಿಗ್ʼನ ಅವಶೇಷಗಳು ಅರ್ಧ ಕಿಲೋಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನು ಘಟನೆಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ಹೊರಬರುತ್ತಿವೆ. https://twitter.com/ani_digital/status/1552699371543597056?s=20&t=r5ztNq3CCQgESd-iuA-UHg

Read More

ರಾಜಸ್ಥಾನ : ರಾಜಸ್ಥಾನದಲ್ಲಿ ಮಿಗ್ ವಿಮಾನ ಪತನಗೊಂಡಿದ್ದು, ಅಪಘಾತವು ಎಷ್ಟು ಗಂಭೀರವಾಗಿದೆಯೆಂದರೆ ಮಿಗ್ʼನ ಅವಶೇಷಗಳು ಅರ್ಧ ಕಿಲೋಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ಹೊರಬರುತ್ತಿವೆ. ಹಾನಿಗೊಳಗಾದ ವಿಮಾನ ಮಿಗ್ -21 ಎಂದು ನಂಬಲಾಗಿದೆ. ಆದ್ರೆ, ಅದಿನ್ನೂ ಸ್ಪಷ್ಟವಾಗಿಲ್ಲ. ಇನ್ನೂ ವಿಮಾನದಲ್ಲಿ ಯಾರೆಲ್ಲಾ ಇದ್ದರು? ಅವ್ರ ಸ್ಥಿತಿ ಸಧ್ಯ ಹೇಗಿದೆ? ಅನ್ನೋ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. https://twitter.com/ani_digital/status/1552699371543597056?s=20&t=r5ztNq3CCQgESd-iuA-UHg

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಗೂಗಲ್ ಮ್ಯಾಪ್‌ಗಳು ಇತ್ತೀಚೆಗೆ ಹಲವಾರು ನವೀಕರಣಗಳನ್ನ ಸ್ವೀಕರಿಸಿವೆ. ಭಾರತೀಯ ಬಳಕೆದಾರರು ಅಂತಿಮವಾಗಿ ಗೂಗಲ್ ಮ್ಯಾಪ್ಸ್‌ ಸ್ಟ್ರೀಟ್ ವ್ಯೂ ವೈಶಿಷ್ಟ್ಯ ಪರಿಚಯಿಸಿದೆ. ಇನ್ನು ಇದರ ಜೊತೆಗೆ ತಲ್ಲೀನಗೊಳಿಸುವ ದೃಶ್ಯ, ಹೊಸ ಸೈಕ್ಲಿಂಗ್ ಮಾರ್ಗದ ಮಾಹಿತಿ ಮತ್ತು ಸ್ಥಳ ಹಂಚಿಕೆಯ ಮಾಹಿತಿಯಂತಹ ಒಂದೆರಡು ನವೀಕರಣಗಳಿವೆ. ಅಂದ್ಹಾಗೆ, ಗೂಗಲ್ ಮ್ಯಾಪ್ಸ್‌ ಈಗಾಗಲೇ ಬಳಕೆದಾರರಿಗೆ ತಮ್ಮ ಸ್ಥಳಗಳನ್ನ ಹಂಚಿಕೊಳ್ಳಲು ಅನುಮತಿಸುತ್ತವೆ. ಆದ್ರೆ, ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಅವ್ರು ಆಗಮಿಸಿದಾಗ ಅಥವಾ ಗಮ್ಯಸ್ಥಾನವನ್ನ ತೊರೆದಾಗ ತಮ್ಮ ಸಂಪರ್ಕಗಳಿಗೆ ನೋಟಿಫಿಕೇಶನ್‌ ಕಳುಹಿಸಲು ಅನುವು ಮಾಡಿಕೊಡುತ್ತದೆ. ಹೌದು, ಇನ್ಮುಂದೆ ನೀವು ನಿಮ್ಮ ಸ್ನೇಹಿತರು ಎಲ್ಲಿದ್ದಾರೆ ಎಂದು ನೋಡುವುದರ ಜತೆಗೆ ಅವ್ರು ನಿಗದಿತ ಸ್ಥಳಕ್ಕೆ ತಲುಪಿದ ತಕ್ಷಣ ಅಥವಾ ನಿಗದಿತ ಸ್ಥಳದಿಂದ ಹೊರಟ ತಕ್ಷಣ ನಿಮಗೆ ನೋಟಿಫಿಕೇಶನ್‌ ಬರುವಂತೆಯೂ ಮಾಡಿಕೊಳ್ಳಬಹುದು. ಈ ಎಲ್ಲ ಸೌಲಭ್ಯಗಳನ್ನ ಗೂಗಲ್‌ ಮ್ಯಾಪ್‌ ಹೊಸದಾಗಿ ಸೇರಿಸಿಕೊಂಡಿದೆ. “ಹೊಸ ಸ್ಥಳ ಹಂಚಿಕೆಯ ಅಧಿಸೂಚನೆಗಳೊಂದಿಗೆ, ಪ್ರೀತಿಪಾತ್ರರು ಯಾವಾಗ ಆಗಮಿಸಿದರು ಅಥವಾ ಸ್ಥಳವನ್ನ ತೊರೆದರು ಎಂದು ನೀವು ನೋಡಬಹುದು.…

Read More

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) 2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ನಡೆಸಿದ ಮುಖ್ಯ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಿದೆ. ಅಂದ್ಹಾಗೆ, ಅಭ್ಯರ್ಥಿಗಳು ಈ ಪರೀಕ್ಷಾ ಫಲಿತಾಂಶಕ್ಕಾಗಿ ಬಹು ದಿನಗಳಿಂದ ಕಾಯುತ್ತಿದ್ರು. ಅರ್ಹರಾದ 318 ಅಭ್ಯರ್ಥಿಗಳ ಅರ್ಹತಾ ಪಟ್ಟಿ ಇಂತಿದೆ..! ಅಂದ್ಹಾಗೆ, ಕೆಪಿಎಸ್‌ಸಿ ಈ 106 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನ 2020ರ ಆಗಸ್ಟ್ 24ರಂದು ನಡೆದಿತ್ತು. ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 20,120 ಅಭ್ಯರ್ಥಿಗಳು ಆಯ್ಕೆಯಾಗಿ ಪರೀಕ್ಷೆ ಬರೆದಿದ್ದರು. ಸಧ್ಯ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನ ಕೆಪಿಎಸ್‌ಸಿ ಪ್ರಕಟಿಸಿದೆ.

Read More

ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆನ್ನಲ್ಲೇ ಮತ್ತೊಂದುಕೊಲೆ ನಡೆದಿದೆ.  ಸುರತ್ಕಲ್ ನಲ್ಲಿ ಇಂದು ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ https://kannadanewsnow.com/kannada/bigg-news-there-are-no-losers-in-sports-pm-modi-inaugurates-44th-chess-olympiad/ ಮಂಗಳ ಪೇಟೆಯ ಫಾಜಿಲ್ಎಂ‌ ಬ ಯುವಕನ ಚಪ್ಪಲಿ ಖರೀದಿಗೆ ಬಂದಿದ್ದ, ಫಾಜಿಲ್‌ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. https://kannadanewsnow.com/kannada/bigg-news-there-are-no-losers-in-sports-pm-modi-inaugurates-44th-chess-olympiad/ ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಜಿಲ್‌ನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ  ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. https://kannadanewsnow.com/kannada/bigg-news-there-are-no-losers-in-sports-pm-modi-inaugurates-44th-chess-olympiad/

Read More