Subscribe to Updates
Get the latest creative news from FooBar about art, design and business.
Author: KNN IT TEAM
ಬಳ್ಳಾರಿ : ಬೆಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿಪಥ್ ಯೋಜನೆಯಡಿ ರಾಜ್ಯದ 14 ಜಿಲ್ಲೆಯ ಯುವಕರಿಗೆ ಸೇನಾ ನೇಮಕಾತಿ ರ್ಯಾಲಿಯನ್ನು ಆ.10ರಿಂದ 22ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಸೇನಾ ನೇಮಕಾತಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/setback-to-stalin-high-court-orders-tamil-nadu-govt-to-publish-photos-of-president-pm-in-ads-for-44th-chess-olympiad/ ಅರ್ಹತೆಗಳು: ಟ್ರೇಡ್‍ಗಳು;ಅಗ್ನಿವೀರ್(ಸಾಮಾನ್ಯ ಕರ್ತವ್ಯ ಎಲ್ಲಾ ಶಸ್ತ್ರಾಸ್ತ್ರಗಳು)-ವಯಸ್ಸು 171/2ರಿಂದ 21 ವರ್ಷಗಳು, ಶೈಕ್ಷಣಿಕ ಅರ್ಹತೆಯು 10ನೇ ತರಗತಿ ಅಥವಾ ಮೆಟ್ರಿಕ್ ಒಟ್ಟು ಶೇ.45 ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇ.33 ಅಂಕಗಳನ್ನು ಪಡೆದಿರಬೇಕು. ಅಗ್ನಿವೀರ್(ತಾಂತ್ರಿಕ ಎಲ್ಲಾ ಶಸ್ತ್ರಾಸ್ತ್ರಗಳು)-ವಯಸ್ಸು 171/2ರಿಂದ 21 ವರ್ಷಗಳು, ಶೈಕ್ಷಣಿಕ ಅರ್ಹತೆಯು 10+2/ ಮಧ್ಯಂತರ ಪಾಸ್ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್‍ನಲ್ಲಿ ಒಟ್ಟು ಶೇ.50 ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇ.40 ಅಂಕಗಳನ್ನು ಪಡೆದಿರಬೇಕು ಅಥವಾ 10+2/ ಎನ್‍ಐಒಎಸ್ ಯಾವುದೇ ಮಾನ್ಯತೆ ಪಡೆದ ರಾಜ್ಯ ಶಿಕ್ಷಣ ಮಂಡಳಿ ಅಥವಾ ಕೇಂದ್ರ ಶಿಕ್ಷಣ ಮಂಡಳಿಯಿಂದ ಮಧ್ಯಂತರ ಪರೀಕ್ಷೆ ಪಾಸ್ ಮತ್ತು ಎನ್‍ಎಸ್‍ಕ್ಯೂಎಫ್ ಮಟ್ಟ 4 ಅಥವಾ…
ತಮಿಳುನಾಡು: ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತಮಿಳುನಾಡಿನಲ್ಲಿ ಗುರುವಾರದಿಂದ ಆರಂಭವಾದ 44ನೇ ಚೆಸ್ ಒಲಿಂಪಿಯಾಡ್(44th Chess Olympiad)ಗೆ ಸಂಬಂಧಿಸಿದ ಎಲ್ಲಾ ಜಾಹೀರಾತುಗಳಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಅವರ ಭಾವಚಿತ್ರಗಳನ್ನು ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. 44ನೇ ಚೆಸ್ ಒಲಿಂಪಿಯಾಡ್ ಚೆನ್ನೈನಲ್ಲಿ ಜುಲೈ 28(ನಿನ್ನೆ) ರಿಂದ ಆಗಸ್ಟ್ 9 ರವರೆಗೆ ನಡೆಯಲಿದೆ. 1927 ರಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಸ್ಪರ್ಧೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮತ್ತು 30 ವರ್ಷಗಳ ನಂತರ ಏಷ್ಯಾದಲ್ಲಿ ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರವು ಹಾಕಿರುವ ಜಾಹೀರಾತು ಫಲಕಗಳಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಅವರ ಭಾವಚಿತ್ರಗಳು ಇರಲಿಲ್ಲ.ಇದು ಪ್ರತಿಪಕ್ಷಗಳಿಂದ ಕೋಪಕ್ಕೆ ಕಾರಣವಾಗಿದೆ. 44ನೇ ಚೆಸ್ ಒಲಿಂಪಿಯಾಡ್‌ಗಾಗಿ ಮಾಡಿದ ಜಾಹೀರಾತುಗಳು ಮತ್ತು ಪ್ರಚಾರಗಳಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿಯವರ ಭಾವಚಿತ್ರಗಳನ್ನು ಸೇರಿಸಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರ ರಾಜೇಶ್ ಕುಮಾರ್ ಅವರು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. https://kannadanewsnow.com/kannada/gujarat-woman-points-to-language-used-against-pm-modi-his-response/ ಅಡ್ವೊಕೇಟ್ ಜನರಲ್ ಆರ್ ಶುಣ್ಮುಗಸುಂದರಂ ಅವರು, ಇದು…
ಬೆಂಗಳೂರು : ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. https://kannadanewsnow.com/kannada/12-children-rescued-from-okha-express-at-calicut-railway-station/ ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ. https://kannadanewsnow.com/kannada/big-shakh-for-customers-repo-rate-hike-again-in-august/ ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು ಎಂದು ಹೇಳಿದ್ದಾರೆ. ಕೊಲೆಗಡುಕರು ಯಾವುದೇ ಪಕ್ಷ, ಪಂಥ,…
ತಿರುವನಂತಪುರಂ (ಕೇರಳ) : ಮಂಗಳವಾರ ಕ್ಯಾಲಿಕಟ್ ರೈಲು ನಿಲ್ದಾಣದಲ್ಲಿ ಓಖಾ ಎಕ್ಸ್‌ಪ್ರೆಸ್‌ನಿಂದ 12 ಮಕ್ಕಳ ಗುಂಪನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ರಕ್ಷಿಸಿದೆ. ಈ ಸಂಬಂಧ ರಾಜಸ್ಥಾನದ ಪಾದ್ರಿ ಮತ್ತು ಮೂವರನ್ನು ಕೋಝಿಕ್ಕೋಡ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೇಳಿಕೆಯ ಪ್ರಕಾರ, ರಾಜಸ್ಥಾನದಿಂದ ಹನ್ನೆರಡು ಹುಡುಗಿಯರನ್ನು 6 ರಾಜಸ್ಥಾನದ ಸ್ಥಳೀಯರೊಂದಿಗೆ ಕೇರಳಕ್ಕೆ ಕರೆತರಲಾಗಿದೆ. ಎಲ್ಲಾ ಹುಡುಗಿಯರನ್ನು ಯಾವುದೇ ಅನುಮತಿಯಿಲ್ಲದೆ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್‌ನಲ್ಲಿರುವ ಕರುಣಾಲಯ ಚಾರಿಟಬಲ್ ಟ್ರಸ್ಟ್‌ಗೆ ಕರೆದೊಯ್ಯಲಾಗುತ್ತಿತ್ತು. ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಕರುಣಾಲಯ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕ, ಪಾದ್ರಿ ಜೇಕಬ್ ವರ್ಗೀಸ್ ಅವರನ್ನು ಬಂಧಿಸಲಾಗಿದೆ. ತನಿಖೆಯ ನಂತರ, ಚಾರಿಟಬಲ್ ಟ್ರಸ್ಟ್ ಸಾಕಷ್ಟು ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಅವರು ಉಲ್ಲೇಖಿಸಿದ ಕಂಪನಿಯ ಪರವಾನಗಿಯನ್ನು ಮೂರು ವರ್ಷಗಳ ಹಿಂದೆ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಬಾಲಕಿಯರನ್ನು ರೈಲ್ವೇ ಪೊಲೀಸ್ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯ ಪ್ರಕಾರ, ಪ್ರತಿ ವರ್ಷ 40,000 ಮಕ್ಕಳು…
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷವೇ ರಾಜ್ಯದ ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಎಂಬಿಬಿಎಸ್ ಪ್ರವೇಶಾತಿ ಆರಂಭಿಸಲು ರಾಷ್ಟ್ರೀಯ ಆರೋಗ್ಯಯ ಅಯೋಗ ಅನುಮತಿ ನೀಡಿದೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. https://kannadanewsnow.com/kannada/big-shakh-for-customers-repo-rate-hike-again-in-august/ ಈ ಕುರಿತು ಟ್ವೀಟ್ ಮಾಡಿರುವ ಅವರು, ಹಾವೇರಿ ಮತ್ತು ಯಾದಗಿರಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮುಂಬರುವ 2022-23ನೇ ಶೈಕ್ಷಣಿಕ ಸಾಲಿನಿಂದ 150 ಎಂಬಿಬಿಎಸ್ ಸೀಟುಗಳೊಂದಿಗೆ ಪ್ರವೇಶಾತಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-1454-villages-in-the-state-do-not-have-burial-facility-state-govt-to-hc/ https://twitter.com/mla_sudhakar/status/1552647131697008640 https://twitter.com/mla_sudhakar/status/1552631990838767616
ದೆಹಲಿ: ಮುಂದಿನ ವಾರ ನಡೆಯಲಿರುವ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಮತ್ತೊಮ್ಮೆ ರೆಪೊ ದರ(Repo rate)ವನ್ನು ಶೇ.0.35ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ತುಟ್ಟಿಯಾಗಲಿದೆ ಎನ್ನಲಾಗಿದೆ. ಹಣದುಬ್ಬರವನ್ನು ನಿಗ್ರಹಿಸುವ ನಿಟ್ಟಿನಲ್ಲಿ RBI ಕಳೆದ ಎರಡು ಸಭೆಗಳಲ್ಲೂ ಬಡ್ಡಿ ದರವನ್ನು(ರೆಪೊ) ಏರಿಕೆ ಮಾಡಿತ್ತು. ಕಳೆದ ಎರಡು ಬಾರಿಯಿಂದ ಒಟ್ಟು ಶೇ.0.90ರಷ್ಟು ರೆಪೊ ದರ ಹೆಚ್ಚಳವಾಗಿದೆ. ಆಗಸ್ಟ್ 3ರಿಂದ 5 ರವರೆಗೆ ನಡೆಯಲಿರುವ ಸಭೆಯಲ್ಲಿ ಬಡ್ಡಿದರವನ್ನು ಆರ್‌ಬಿಐ ಮತ್ತೆ ಶೇ.0.35 ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಮೆರಿಕನ್ ಬ್ರೋಕರೇಜ್ ಸಂಸ್ಥೆ ಬೋಫಾ ಸೆಕ್ಯುರಿಟೀಸ್ ಅಂದಾಜು ಮಾಡಿದೆ. ಆಗಸ್ಟ್‌ನಲ್ಲಿ ಶೇ.0.35ರಷ್ಟು ಹೆಚ್ಚಾದರೆ ರೆಪೋ ದರ ಶೇ.5.25ಕ್ಕೆ ಹೆಚ್ಚಲಿದೆ. ಇತ್ತೀಚಿನ ರೆಪೊ ದರ ಏರಿಕೆಯಿಂದ ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಶೇ.0.50 ರಿಂದ 1ರವರೆಗೆ ಏರಿಕೆಯಾಗಿವೆ. ಆಗಸ್ಟ್‌ನಲ್ಲಿ ಶೇ.0.35ರಷ್ಟು ಏರಿಕೆಯಾದರೆ, ಬ್ಯಾಂಕ್‌ನ ಬಡ್ಡಿ ದರಗಳಲ್ಲಿ ಕನಿಷ್ಠ ಶೇ.0.25ರಷ್ಟು ಹೆಚ್ಚಳವಾಗುವ ಸಾಧ್ಯತೆ…
ಬೆಂಗಳೂರು : ರಾಜ್ಯದಲ್ಲಿ ಇನ್ನೂ 1,454 ಗ್ರಾಮಗಳಿಗೆ ಶವಸಂಸ್ಕಾರಕ್ಕೆ ಸ್ಮಶಾನ ಸೌಲಭ್ಯವಿಲ್ಲ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. https://kannadanewsnow.com/kannada/bigg-news-kas-2017-result-declared-here-is-the-full-list-of-candidates-who-have-passed/ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ದಾಖಲೆಗಳನ್ನು ಒದಗಿಸಿದ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. https://kannadanewsnow.com/kannada/rain-in-karnataka-yellow-alert-sounded-in-12-districts-after-2-days-of-heavy-rains-across-the-state/ ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ಸರ್ಕಾರ ಒದಗಿಸಿದೆ. ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಲಾಗಿದ್ದು, ಇನ್ನು 1,454 ಗ್ರಾಮಗಳಿಗೆ ಸ್ಮಶಾನ ಸೌಲಭ್ಯವಿಲ್ಲ ಎಂದು ಹೈಕೋರ್ಟ್ ಮುಂದೆ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. https://kannadanewsnow.com/kannada/bigg-news-the-education-department-has-instructed-private-schools-in-the-state-to-publish-the-details-on-the-notice-board-and-collect-the-fee/
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) 2017ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ನಡೆಸಿದ ಮುಖ್ಯ ಪರೀಕ್ಷೆ ಫಲಿತಾಂಶವನ್ನ ಪ್ರಕಟಿಸಿದೆ. ಅಂದ್ಹಾಗೆ, ಅಭ್ಯರ್ಥಿಗಳು ಈ ಪರೀಕ್ಷಾ ಫಲಿತಾಂಶಕ್ಕಾಗಿ ಬಹು ದಿನಗಳಿಂದ ಕಾಯುತ್ತಿದ್ರು. ಲೋಕಸೇವಾ ಆಯೋಗ ಈಗ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಅರ್ಹರಾದ 318 ಅಭ್ಯರ್ಥಿಗಳ ಪಟ್ಟಿಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅನಂತರ ಅವರ ಸಂದರ್ಶನ ನಡೆಸಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಅರ್ಹರಾದ 318 ಅಭ್ಯರ್ಥಿಗಳ ಅರ್ಹತಾ ಪಟ್ಟಿ ಇಂತಿದೆ..! ಅಂದ್ಹಾಗೆ, ಕೆಪಿಎಸ್‌ಸಿ ಈ 106 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನ 2020ರ ಆಗಸ್ಟ್ 24ರಂದು ನಡೆದಿತ್ತು. ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 20,120 ಅಭ್ಯರ್ಥಿಗಳು ಆಯ್ಕೆಯಾಗಿ ಪರೀಕ್ಷೆ ಬರೆದಿದ್ದರು. ಸಧ್ಯ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನ ಕೆಪಿಎಸ್‌ಸಿ ಪ್ರಕಟಿಸಿದೆ.
ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/mangaluru-holiday-declared-for-schools-colleges-in-surathkal-today-in-four-places-in-connection-with-fazil-murder-case/ ಜುಲೈ 29, 30 ರಂದು ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. https://kannadanewsnow.com/kannada/bigg-news-the-education-department-has-instructed-private-schools-in-the-state-to-publish-the-details-on-the-notice-board-and-collect-the-fee/ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಮತರ, ತುಮಕೂರು, ಚಾಮರಾಜನಗರ, ಕಲಬುರಗಿ, ಬಳ್ಳಾರಿ, ಬೀದರ್ ಜಿಲ್ಲೆಗಳು ಮತ್ತು ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. https://kannadanewsnow.com/kannada/bigg-news-aadhaar-card-number-mandatory-for-voter-id-card/
ಹಿಮ್ಮತ್‌ನಗರ(ಗುಜರಾತ್): ʻಜನರು ಏನು ಹೇಳುತ್ತಾರೆಂದು ತಲೆಕೆಡಿಸಿಕೊಳ್ಳುವ ಬದಲು, ತಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕುʼ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ನಿನ್ನೆ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಹಿಮ್ಮತ್‌ನಗರ ಪಟ್ಟಣದ ಸಮೀಪವಿರುವ ಸಬರ್ ಡೈರಿಯಲ್ಲಿ ಸುಮಾರು 20 ಮಹಿಳಾ ದನ-ಪಾಲಕರೊಂದಿಗೆ ಸಂವಾದದ ಸಂದರ್ಭದಲ್ಲಿ ಮೋದಿ ಅವರು, “ಜನರು ಏನು ಬೇಕಾದರೂ ಹೇಳಲಿ, ನಾವು ನಮ್ಮ ಕೆಲಸವನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ. ಕೆಲವು ಜನರು ತಮ್ಮ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದಾಗ ಅದು ನನಗೆ ಇಷ್ಟವಾಗಲಿಲ್ಲ ಎಂಬ ಮಹಿಳಾ ದನ-ಪಾಲಕರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಮಹಿಳೆ, “ಗುಜರಾತ್ ಇಂದು ನಂಬರ್ ಒನ್ (ರಾಜ್ಯ) ಆಗಿದೆ. ಆದರೆ ಯಾರಾದರೂ ನಿಮ್ಮ ಬಗ್ಗೆ ಅಸಭ್ಯ ಪದಗಳನ್ನು ಬಳಸಿದಾಗ ನಾವು ಇಷ್ಟಪಡುವುದಿಲ್ಲ. 2001 ರ ಭೂಕಂಪದ ನಂತರ ಗುಜರಾತ್ ಅನ್ನು ಮತ್ತೆ ಎದ್ದು ಕಾಣುವಂತೆ ಮಾಡುವ ನಿಮ್ಮ ಹೋರಾಟವನ್ನು ನಾವು ನೋಡಿದ್ದೇವೆ. ಜನರು ನಿಮಗೆ ಹಣೆಪಟ್ಟಿ ಕಟ್ಟಿದ್ದರು. ಆದ್ರೆ, ನೀವು ಜನರ ಸೇವೆ…