Author: KNN IT TEAM

ಬೆಂಗಳೂರು : ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆ ತವರು ಕರಾವಳಿ ಈಗ ಕೊಲೆಗಳ ಆಡಂಬೋಲವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. https://kannadanewsnow.com/kannada/pakistan-heavy-rains-claim-over-111-lives-damage-over-6000-houses-in-balochistan/ ಈ ಕುರಿತು ಟ್ವೀಟ್ ಮಾಡಿರುವ ಅವರು, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆ ತವರು ಕರಾವಳಿ ಈಗ ಕೊಲೆಗಳ ಆಡಂಬೋಲವಾಗಿದೆ. 10 ದಿನಗಳಲ್ಲಿ 3 ಕೊಲೆ! ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ. https://twitter.com/hd_kumaraswamy/status/1552870743503171584 ಮುಖ್ಯಮಂತ್ರಿ ಬಸವರಾಝ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇದ್ದಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು? ಕಾಣದ ಕೈಗಳ ಒತ್ತಡವೇನಾದರೂ ಉಂಟಾ? ಎಂದು ಪ್ರಶ್ನಿಸಿದ್ದಾರೆ. ಕರಾವಳಿ ಶಿಕ್ಷಣದ ಕಾಶಿ, ದೇಗುಲಗಳ ಪುಣ್ಯನೆಲ, ಪ್ರಾಕೃತಿಕ ಸೌಂದರ್ಯದ ಬೀಡು, ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕೀರ್ತಿಕಳಸ. ಇಂಥ ನೆಲದಲ್ಲಿ…

Read More

ಪಾಕಿಸ್ತಾನ: ಜೂನ್ 1 ರಿಂದ ಪ್ರಾರಂಭವಾಗಿರುವ ಮಾನ್ಸೂನ್ ಮಳೆ ಬಲೂಚಿಸ್ತಾನದಲ್ಲಿ 111 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ದೇಶದ ಮುಖ್ಯ ಕಾರ್ಯದರ್ಶಿ ಅಬ್ದುಲ್ ಅಜೈ ಅಕಿಲಿ ಬಹಿರಂಗಪಡಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಕಿಲಿ, ಪ್ರಾಂತ್ಯದಲ್ಲಿ ಭಾರೀ ಮಳೆಯಿಂದಾಗಿ 6,077 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. 10,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ 16 ಅಣೆಕಟ್ಟುಗಳಿಗೆ ಹಾನಿಯಾಗಿದೆ. ಆದರೆ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ. https://kannadanewsnow.com/kannada/bigg-news-azadi-ka-amrit-mahotsav-har-ghar-tiranga-abhiyan-from-august-13-to-15/ ಈ ವರ್ಷದ ಮಳೆಯೂ ಹಿಂದಿನ ಮಳೆಗೆ ಹೋಲಿಸಿದರೆ ಶೇಕಡಾ 500 ಕ್ಕಿಂತ ಹೆಚ್ಚು ಪರಿಣಾಮ ಬೀರಿದೆ. ಇದರಿಂದಾಗಿ ಸುಮಾರು 2,400 ಸೌರ ಫಲಕಗಳನ್ನು ತೀವ್ರವಾಗಿ ಹಾನಿಗೊಳಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದರು. ಮಳೆಯಿಂದಾಗಿ ಬಲೂಚಿಸ್ತಾನದ ಕನಿಷ್ಠ 10 ಜಿಲ್ಲೆಗಳು ಹಾನಿಗೊಳಗಾಗಿದ್ದು, ಸುಮಾರು 650 ಕಿಮೀ ರಸ್ತೆಗಳು ಹಾನಿಗೊಳಗಾಗಿವೆ. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಶೇಖರಣೆಗೊಂಡ ನೀರಿನಿಂದ ಹಲವು ವಾಹನಗಳು ಸಿಕ್ಕಿ ಬಿದ್ದಿವೆ ಎಂಧಿದ್ದಾರೆ. ಪ್ರಾಂತ್ಯದಾದ್ಯಂತ…

Read More

ತುಮಕೂರು : ತುಮಕೂರಿನಲ್ಲಿ ಭೀಕರ ಅಪಘಾತವಾಗಿದ್ದು, ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. https://kannadanewsnow.com/kannada/fazil-murder-case-in-mangalore-police-arrested-12-accused/ ತುಮಕೂರು ನಗರದ ಹನುಮಂತಪುರ ಬ್ರಿಡ್ಜ್​ ಬಳಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಚಿನ್ (21) ಮಲ್ಲಿಕಾರ್ಜುನ್ (24) ಮೃತಪಟ್ಟಿದ್ದಾರೆ. ಮೃತ ಯುವಕರು ಹಾವೇರಿ ಜಿಲ್ಲೆಯವರು ಎಂದು ಗುರುತಿಸಲಾಗಿದ್ದು, ಬೆಂಗಳೂರಿನಿಂದ ಶಿರಾ ಕಡೆಗೆ ತೆರಳುತ್ತಿದ್ದ ವೇಳೆ ಹನುಮಂತಪುರದ ಬ್ರಿಡ್ಜ್​ಗೆ  ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/fazil-murder-case-we-have-no-faith-in-the-government-ut-khader-sparks/

Read More

ದಕ್ಷಿಣಕನ್ನಡ  : ಮಂಗಳೂರಿನ ಸುರತ್ಕಲ್‌ ಬಳಿ ಫಾಜಿಲ್‌ ಹತ್ಯೆ ಸಂಬಂಧಿಸಿ  ಪೊಲೀಸರಿಂದ 12 ಜನರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. https://kannadanewsnow.com/kannada/another-murder-after-praveens-killing-kochi-muslim-youth-killed/ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆನ್ನಲ್ಲೇ ಮತ್ತೊಂದುಕೊಲೆ ನಡೆದಿದೆ.  ಸುರತ್ಕಲ್ ನಲ್ಲಿ ನಿನ್ನೆ ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/fazil-murder-case-we-have-no-faith-in-the-government-ut-khader-sparks/ ಮಂಗಳ ಪೇಟೆಯ ಫಾಜಿಲ್ಎಂ‌ ಬ ಯುವಕನ ಚಪ್ಪಲಿ ಖರೀದಿಗೆ ಬಂದಿದ್ದ, ಫಾಜಿಲ್‌ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. https://kannadanewsnow.com/kannada/fazil-murder-case-we-have-no-faith-in-the-government-ut-khader-sparks/ ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಜಿಲ್‌ನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ  ಸಾವನ್ನಪ್ಪಿದ್ದಾನೆ  ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಉಡುಪಿ: ಕೊರೊನಾ, ಮಂಕಿ ಫಾಕ್ಸ್ ಆತಂಕದ ನಡುವೆ ಉಡುಪಿಯಲ್ಲಿ ʻಇಲಿ ಜ್ವರʼದ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 85 ಇಲಿ ಜ್ವರ ಪ್ರಕರಣಗಳು ದಾಖಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದ್ದು, ಇನ್ನೂ ಪ್ರಕರಣಗಳು ಮತ್ತಷ್ಟು ದಾಖಲಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಿ ಜ್ವರವು ಸಾಮಾನ್ಯ ಜ್ವರದಂತೆ ಕಂಡರೂ ಅದು ಮಾರಕವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಕಿಡ್ನಿ, ಮೆದುಳು, ಯಕೃತ್‌ಗೆ ಹಾನಿಯಾಗುವುದು ಖಚಿತ. ಹೀಗಾಗಿ, ನಿಮ್ಮಲ್ಲಿ ಯಾವುದೇ ಜ್ವರದ ಲಕ್ಷಣಗಳು ಕಂಡುಬಂದರೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ. ಮಳೆ, ನೆರೆನೀರಿನ ಮೂಲಕ ಇಲಿ ಜ್ವರ ಬರುವ ಸಾಧ್ಯತೆಗಳಿವೆ. ಇಲಿಯ ಮೂತ್ರ ನೆರೆ ನೀರು ಸೇರಿ ವೈರಸ್ ಮನುಷ್ಯನ ದೇಹಕ್ಕೆ ಸೇರಿ ಜ್ವರ ಬರುವ ಸಾಧ್ಯತೆ ಹೆಚ್ಚು. ಜಮೀನಿನಲ್ಲಿ ನಿಂತ ನೆರೆ ನೀರಿನಲ್ಲಿ ಕೆಲಸ ಮಾಡುವವರ ಕಾಲಿನಲ್ಲಿರುವ ಬಿರುಕುಗಳ ಮೂಲಕ ವೈರಾಣು ದೇಹ ಪ್ರವೇಶಿಸುವಿಕೆಯಿಂದ ಈ ಜ್ವರ ಬರಬಹುದು. https://kannadanewsnow.com/kannada/commonwealth-games-2022-in-birmingham-declared-open-in-grand-ceremony/ ಇಲಿ ಜ್ವರದ ಲಕ್ಷಣ & ಹರಡುವಿಕೆ? ಇಲಿ ಜ್ವರವು…

Read More

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ)ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಪ್ರಸ್ತುತ ಏಕಾಏಕಿ ಕಂಡುಬರುವ ಮಂಕಿಪಾಕ್ಸ್ ವೈರಸ್‌ ರೋಗಲಕ್ಷಣಗಳು ಆಫ್ರಿಕನ್ ಪ್ರದೇಶಗಳಲ್ಲಿ ವರದಿಯಾಗಿದ್ದ ವೈರಸ್​​​​ಗಿಂತ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿವೆ ಎಂದು ಹೇಳಿದೆ. https://kannadanewsnow.com/kannada/bigg-news-azadi-ka-amrit-mahotsav-har-ghar-tiranga-abhiyan-from-august-13-to-15/ ಅಧ್ಯಯನವು 197 ಜನರ ಹಿಂದಿನ ಅವಲೋಕನದ ವಿಶ್ಲೇಷಣೆಯನ್ನು ಮಾಡಿದೆ. ಲಂಡನ್​ನಲ್ಲಿ ಎಲ್ಲಾ ಪುರುಷರು ಮಂಕಿಪಾಕ್ಸ್​​​ ವೈರಸ್​ ಹೊಂದಿದವರಾಗಿದ್ದು, ಭಾಗವಹಿಸುವವರಲ್ಲಿ 196 ಜನರು ತಮ್ಮನ್ನು ಸಲಿಂಗಕಾಮಿ, ದ್ವಿಲಿಂಗಿ ಅಥವಾ ಪುರುಷರೊಂದಿಗೆ ಸಂಭೋಗ ಹೊಂದಿದ ಪುರುಷರು ಎಂದು ಗುರುತಿಸಿಕೊಂಡಿದ್ದಾರೆ. ಅಧ್ಯಯನದ ಪ್ರಕಾರ, 2007-11ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಮತ್ತು 2017-18ರಲ್ಲಿ ನೈಜೀರಿಯಾದಲ್ಲಿ ಹಿಂದೆ ಕಂಡು ಬಂದಿದ್ದ ರೋಗ ಲಕ್ಷಣಗಳಿಗೆ ಹೋಲಿಸಿದರೆ ಪ್ರಸ್ತುತ ವೈರಸ್​​​ ಗುಣಲಕ್ಷಣಗಳಲ್ಲಿ ಗುದನಾಳದ ನೋವು ಮತ್ತು ಶಿಶ್ನ ಊತ (ಎಡಿಮಾ) ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಮಂಕಿಪಾಕ್ಸ್ ವೈರಸ್‌ಗಾಗಿ ಪರೀಕ್ಷಿಸಲು ವೈದ್ಯರು ಶಿಫಾರಸು ಮಾಡಿದ್ದಾರೆ. ಇದಲ್ಲದೆ, ಮಂಕಿಪಾಕ್ಸ್ ಪಾಸಿಟಿವ್​ ಹೊಂದಿದ ರೋಗಿಗಳು ವ್ಯಾಪಕವಾದ ಶಿಶ್ನ ಗಾಯಗಳು ಅಥವಾ ತೀವ್ರವಾದ ಗುದನಾಳದ…

Read More

ದಕ್ಷಿಣಕನ್ನಡ  :  ಬಿಜೆಪಿ ಕಾರ್ಯಕರ್ತ ಹತ್ಯೆ ಬಳಿಕ ಇದೀಗ ಮತ್ತೊಂದು ಮಂಗಳೂರಿನ ಸುರತ್ಕಲ್‌ ಬಳಿ ಫಾಜಿಲ್ ಹತ್ಯೆ ಪ್ರಕರಣ ಸಂಬಂಧಿಸಿ ಮಾಜಿ ಸಚಿವ  ಯು.ಟಿ.ಖಾದರ್‌ ಪ್ರತಿಕ್ರಿಯಿಸಿದ್ದಾರೆ.   https://kannadanewsnow.com/kannada/bigg-news-azadi-ka-amrit-mahotsav-har-ghar-tiranga-abhiyan-from-august-13-to-15/ ಪಕ್ಷಪಾತ ಮಾಡದೇ ಸರ್ಕಾರ ನ್ಯಾಯ ಕೊಡಿಸಬೇಕು. ಮಂಗಳೂರಿನಲ್ಲಿ ಶಾಂತಿ ನೆಲೆಸುವ ಕೆಲಸ ಮಾಡಬೇಕಾಗಿದೆ. ಸಿಎಂ ಬೊಮ್ಮಾಯಿ ಬಂದಾಗಲೇ ಫಾಜಿಲ್‌ ಕೊಲೆಯಾಗಿದೆ. ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್‌ ಕಿಡಿ ಕಾರಿದ್ದಾರೆ. https://kannadanewsnow.com/kannada/bigg-news-azadi-ka-amrit-mahotsav-har-ghar-tiranga-abhiyan-from-august-13-to-15/ ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದಾಗ ಕಾನೂನು ಕೈಗೊತ್ತಿಕೊಳ್ತಾರೆ ಪ್ರವೀಣ್‌ ನೆಟ್ಟಾರು ಮನೆಗೆ ನಿನ್ನೆ ಸಿಎಂ ಭೇಟಿ ನೀಡಿದ್ದಾರೆ ಕೊಲೆಯಲ್ಲಿ ಮಸೂದ್‌ ಮನೆಗೆ ಬೊಮ್ಮಾಯಿ ಹೋಗಿಲ್ಲ ಎಂದು ಸಿಎಂ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಭಿಂದ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಭಿಂದ್​​ ಜಿಲ್ಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ ವೈರಲ್ ವಿಡಿಯೋವನ್ನು ಭಿಂದ್​ ಜಿಲ್ಲೆಯ ಲಹಾರ್ ಸರ್ಕಾರಿ ಕಾಲೇಜಿನಲ್ಲಿ ರೆಕಾರ್ಡ್ ಮಾಡಲಾಗಿದೆ. ಜಿವಾಜಿ ವಿಶ್ವವಿದ್ಯಾಲಯದ ಬಿಎ ಮತ್ತು ಬಿಎಸ್‌ಸಿ ಕೋರ್ಸ್‌ಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡಿದ್ದಾರೆ ಎನ್ನಲಾಗುತ್ತಿದೆ. https://twitter.com/fpjindia/status/1552655792397897728 ವಿಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮೊಂದಿಗೆ ಉಲ್ಲೇಖ ಪುಸ್ತಕಗಳು, ಚೀಟ್ಸ್ ಮತ್ತು ಮೊಬೈಲ್ ಫೋನ್‌ಗಳನ್ನು ಇಟ್ಟುಕೊಂಡು ನಕಲು ಮಾಡುತ್ತಿರುವುದು ಕಂಡುಬಂದಿದೆ. ಪರೀಕ್ಷಾ ಸಭಾಂಗಣದಲ್ಲಿ ಶಿಕ್ಷಕರ ಸಮ್ಮುಖದಲ್ಲೇ ನಕಲು ಮಾಡುವ ಕೃತ್ಯ ನಡೆಯುತ್ತಿತ್ತು ಎನ್ನಲಾಗಿದೆ. ಈ ಕುರಿತಂತೆ ಕಾಲೇಜಿನ ಪ್ರಾಂಶುಪಾಲ ಕಮಲೇಶ್ ಪ್ರತಿಕ್ರಿಯಿಸಿದ್ದು, ನಾನು ಸದ್ಯಕ್ಕೆ ಹೊರಗಿದ್ದೇನೆ. ವೈರಲ್​ ಆದ ವಿಡಿಯೋದ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ನಾನು ಈ ಬಗ್ಗೆ ತನಿಖೆ ನಡೆಸುತ್ತೇನೆ ಎಂದೇಳಿದ್ದಾರೆ. ಮತ್ತೊಂದೆಡೆ, ಜಿವಾಜಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಸುಶೀಲ್ ಮಂಡೇಲಿಯಾ ಮಾತನಾಡಿದ್ದು, ಈ ವಿಷಯದ ಬಗ್ಗೆ ನನಗೆ ತಿಳಿದಿಲ್ಲ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ…

Read More

ಧಾರವಾಡ : ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಹರ ಘರ ತಿರಂಗಾ ಅಭಿಯಾನವನ್ನು ಬರುವ ಆಗಸ್ಟ 13 ರಿಂದ 15 ರವರೆಗೆ ನಿರಂತರವಾಗಿ ಎಲ್ಲ ಶಾಲೆ, ಕಾಲೇಜು, ಸರಕಾರಿ ಕಟ್ಟಡಗಳು, ಗ್ರಾಮ ಪಂಚಾಯತಿಗಳು, ವಿವಿಧ ಸಂಘ ಸಂಸ್ಥೆಗಳು, ಅಂಗನವಾಡಿ ಕಟ್ಟಡಗಳ ಮೇಲೆ ಧ್ವಜ ಹಾರಿಸುವ ಮೂಲಕ ಆಚರಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. https://kannadanewsnow.com/kannada/job-alert-job-seekers-note-today-is-the-last-day-to-apply-for-1411-constable-posts/ ಜಿಲ್ಲೆಯ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಮ್ಮ ಕಾರ್ಯಾಲಯ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಪಂಚಾಯತ ಕಟ್ಟಡಗಳ ಮೇಲೆ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ತಮ್ಮ ಕಚೇರಿ ಹಾಗೂ ಎಲ್ಲ ಮನೆಗಳಲ್ಲಿ, ಬಡಾವಣೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವದರ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು. https://kannadanewsnow.com/kannada/good-news-another-good-news-for-the-farming-community-rs-57000-has-been-sanctioned-for-the-construction-of-a-cattle-shed-under-this-scheme-youll-get-it/  ಈ ನಿಟ್ಟಿನಲ್ಲಿ ಎಲ್ಲರೂ ಆಗಸ್ಟ್ 13 ರಿಂದ 15 ರವರೆಗೆ ನಿರಂತರವಾಗಿ ಧ್ವಜಾರೋಹಣ ಮಾಡಬೇಕು. ಸರಕಾರದ ನಿರ್ದೇಶನದಂತೆ 2:3 ಅಳತೆಯ ರಾಷ್ಟ್ರಧ್ವಜವನ್ನು ಖಾದಿ…

Read More

ಹಾವೇರಿ : ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೆಕೆಆರ್) ವತಿಯಿಂದ 1411 ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗಳಿಗೆ ಪುರುಷರಿಂದ ಹಾಗೂ 857 ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/good-news-another-good-news-for-the-farming-community-rs-57000-has-been-sanctioned-for-the-construction-of-a-cattle-shed-under-this-scheme-youll-get-it/ ಕಾನ್ಸ್ಟೇಬಲ್(ಡ್ರೈವರ್) ಹುದ್ದೆಗೆ  ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 21 ರಿಂದ30 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ.  ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 18 ರಿಂದ27 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ. https://kannadanewsnow.com/kannada/bigg-news-azadi-ka-amrit-mahotsav-various-competitions-to-be-organized-for-all-school-students-in-the-state/   ಅರ್ಹ ಅಭ್ಯರ್ಥಿಗಳು ದಿನಾಂಕ 29-07-2022 ರೊಳಗಾಗಿ ವೆಬ್‍ಸೈಟ್ https://ssc.nic.inನಲ್ಲಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂ.080-25502520,ಮೊ.9483862020, ದೂ.08375-249291 ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More