Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ರಾಜ್ಯದ ಕರಾವಳಿಯಲ್ಲಿ ಸರಣಿ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. https://kannadanewsnow.com/kannada/child-falls-into-borewell-in-gujarat-rescue-officials-rush-to-the-spot/ ಈ ಕುರಿತು ಮಾಹಿತಿ ನೀಡಿರುವ ಸಿಎಂ ಬೊಮ್ಮಾಯಿ, ಸರ್ಕಾರ ಮೂರು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ. ಫಾಜಿಲ್ ಹತ್ಯೆ ಕುರಿತಂತೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. 3 ಪ್ರಕರಣಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತೇವೆ ಎಂದು ಹೇಳಿದ್ದಾರೆ. https://kannadanewsnow.com/kannada/biggi-news-basavaraj-bommai-is-weak-cm-says-former-cm-siddaramaiah/ ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ. ತನಿಖೆಯಿಂದ ಹಿಂದೆ ಬಿದ್ದಿಲ್ಲ. ಫಾಜಿಲ್ ಹತ್ಯೆಯನ್ನು ನಾನು ಕೇವಲ ಕೊಲೆ ಎಂದು ನೋಡುತ್ತಿಲ್ಲ.ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. https://kannadanewsnow.com/kannada/bigg-breaking-news-fazil-murder-case-in-surathkal-in-mangaluru-what-did-cm-bommai-say/
ಗುಜರಾತ್ : ಬಾಲಕಿ ಮೈದಾನದಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ತೆರೆದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ಸುರೇಂದ್ರನಗರದ ಗಜನ್ವಾವ್ ಗ್ರಾಮದಲ್ಲಿ ನಡೆದಿದೆ. https://kannadanewsnow.com/kannada/bigg-breaking-news-fazil-murder-case-in-surathkal-in-mangaluru-what-did-cm-bommai-say/ ಬಾಲಕಿ ಮೈದಾನದಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ಸುಮಾರು 60 ಅಡಿಗಳಷ್ಟುಆಳವಿರುವ ತೆರೆದ ಕೊಳವೆ ಬಾವಿಗೆ ಬಿದ್ದು ಬಾಲಕಿ ಸಿಲುಕಿಕೊಂಡಿದ್ದಾರೆ. ಈ ನಡುವೆ ತಹಸೀಲ್ದಾರ್ ಹಾಗೂ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. https://kannadanewsnow.com/kannada/bigg-breaking-news-fazil-murder-case-in-surathkal-in-mangaluru-what-did-cm-bommai-say/
ಬೆಂಗಳೂರು : ಬಸವರಾಜ ಬೊಮ್ಮಾಯಿ ರಾಜ್ಯದ ದುರ್ಬಲ ಮುಖ್ಯಮಂತ್ರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/manisha-ropeta-first-hindu-woman-in-pakistan-to-become-a-dsp/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರದಿಂದ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಗುಪ್ತಚರ ಇಲಾಕೆಯ ಹೊಣೆಗಾರಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಇದೆ. ಆದರೂ ರಾಜ್ಯದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ. https://kannadanewsnow.com/kannada/bigg-breaking-news-fazil-murder-case-in-surathkal-in-mangaluru-what-did-cm-bommai-say/ ರಾಜ್ಯದಲ್ಲಿ ಸರಣಿ ಹತ್ಯೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಹೊಣೆ, ಅರಗಜ್ಞಾನೇಂದ್ರ ಗೃಹ ಸಚಿವರಾಗಲು ನೈತಿಕತೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನ: ಪಾಕಿಸ್ತಾನದ ಜಾಕೋಬಾಬಾದ್‌ನಲ್ಲಿ ಹಿಂದೂ ಮಹಿಳೆಯೊಬ್ಬರು ಉನ್ನತ ಮಟ್ಟದ ಪೊಲೀಸ್ ಹುದ್ದೆಗೇರಿದ್ದಾರೆ. ಇವರು ಪಾಕಿಸ್ತಾನದಲ್ಲಿ ಡಿಎಸ್ಪಿ ಶ್ರೇಯಾಂಕದ ಹುದ್ದೆಗೇರಿದ ದೇಶದ ಮೊದಲ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮಹಿಳೆಯಾಗಿದ್ದಾರೆ. 26 ವರ್ಷದ ಮನೀಶಾ ರೋಪೇಟಾ ಈ ಉನ್ನತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಯಾಗಿದ್ದಾರೆ. ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಮಹಿಳೆಯರು ಉನ್ನತ ಹುದ್ದೆ ಪಡೆಯುವುದು ಸುಲಭದ ಮಾತಲ್ಲ. ಈ ನಡುವೆಯೂ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಮನೀಶಾ ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಡಿಎಸ್ಪಿ ಹುದ್ದೆಗೇರಿದ್ದಾರೆ. ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡಿಎಸ್ ಮನೀಶಾ ರೋಪೇಟಾ, “ಬಾಲ್ಯದಿಂದಲೂ ನಾನು ಮತ್ತು ನನ್ನ ಸಹೋದರಿಯರು ಅದೇ ಹಳೆಯ ಪಿತೃಪ್ರಭುತ್ವದ ವ್ಯವಸ್ಥೆಯನ್ನು ನೋಡಿದ್ದೇವೆ, ಅಲ್ಲಿ ಹುಡುಗಿಯರು ಶಿಕ್ಷಣ ಪಡೆಯಲು ಮತ್ತು ಕೆಲಸ ಮಾಡಲು ಬಯಸಿದರೆ, ಅವರು ಶಿಕ್ಷಕರು ಅಥವಾ ವೈದ್ಯರಾಗಬಹುದು. ಹುಡುಗಿಯರು ಓದಿ, ತಮ್ಮ ಕನಸು ನನಸಾಗಿಸಿಕೊಳ್ಳಲು ಕೆಲವೇ ಕೆಲವರು ಮಾತ್ರ ಪ್ರೋತ್ಸಾಹ ನೀಡುತ್ತಾರೆ. ಎಲ್ಲರಿಗೂ ಈ ಭಾಗ್ಯ ಇಲ್ಲ. ಇಂತಹ ಭಾವನೆಗಳನ್ನೂ ಹೊರ…
ಯುರೋಪ್ ಮತ್ತು ಅಮೆರಿಕದಲ್ಲಿ ‘ಮಂಕಿಪಾಕ್ಸ್’ ಹೆಚ್ಚು ಪರಿಣಾಮ ಬೀರಿದೆ : ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ | Monkeypox
ಜಿನೀವಾ: ಮಂಕಿಪಾಕ್ಸ್ ಯುರೋಪ್ ಮತ್ತು ಅಮೆರಿಕಗಳು ಹೆಚ್ಚು ಪರಿಣಾಮ ಬೀರಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಈ ಎರಡು ಪ್ರದೇಶಗಳು 95 ಪ್ರತಿಶತದಷ್ಟು ಪ್ರಕರಣಗಳು ವರದಿಯಾಗಿದೆ. ಇದುವರೆಗೆ 78 ದೇಶಗಳಲ್ಲಿ 18,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಶೇ. 70 ಕ್ಕಿಂತ ಹೆಚ್ಚು ಯುರೋಪಿಯನ್ ಪ್ರದೇಶದಲ್ಲಿ ಮತ್ತು ಶೇ. 25 ರಷ್ಟು ಅಮೆರಿಕದಲ್ಲಿ ಕಂಡು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ. https://kannadanewsnow.com/kannada/good-news-another-good-news-for-the-farming-community-rs-57000-has-been-sanctioned-for-the-construction-of-a-cattle-shed-under-this-scheme-youll-get-it/ ವರದಿಯಾದ ಪ್ರಕರಣಗಳಲ್ಲಿ ಶೇ. 98 ರಷ್ಟು ಪ್ರಕರಣಗಳು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರಲ್ಲಿ ವೈರಸ್ ಹರಡಿದೆ. ಇದು ಇತರೆ ವೈರಸ್‌ನಂತೆ ಅಪಾಯಕಾರಿ ಮತ್ತು ಏಕಾಏಕಿ ಏರಿಕೆಯಾಗಬಹುದು ಎಂದು ಒತ್ತಿ ಹೇಳಿದರು. ಕೋವಿಡ್ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಾನಿಕಾರಕ ಮಾಹಿತಿಯನ್ನು ತಡೆಗಟ್ಟಲು ಮತ್ತು ಎದುರಿಸಲು ನಮ್ಮೊಂದಿಗೆ ಕೆಲಸ ಮಾಡಲು ನಾವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಟೆಕ್ ಕಂಪನಿಗಳು ಮತ್ತು…
ಬೆಂಗಳೂರು : ಮಂಗಳೂರಿನ ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಮೂರು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ. https://kannadanewsnow.com/kannada/fazil-murder-case-in-mangalore-suratkal-penambur-mulki-bajpe-yojana-144-implemented/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾಜಿಲ್ ಹತ್ಯೆ ಕುರಿತಂತೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. 3 ಪ್ರಕರಣಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತೇವೆ ಎಂದು ಹೇಳಿದ್ದಾರೆ. https://kannadanewsnow.com/kannada/fazil-murder-case-in-mangalore-suratkal-penambur-mulki-bajpe-yojana-144-implemented/ ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ. ತನಿಖೆಯಿಂದ ಹಿಂದೆ ಬಿದ್ದಿಲ್ಲ. ಫಾಜಿಲ್ ಹತ್ಯೆಯನ್ನು ನಾನು ಕೇವಲ ಕೊಲೆ ಎಂದು ನೋಡುತ್ತಿಲ್ಲ.ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. https://kannadanewsnow.com/kannada/bigg-news-former-cm-hd-kumaraswamy-accuses-state-govt-of-playing-murderous-politics-even-in-death/
ತುಮಕೂರು ; ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. https://kannadanewsnow.com/kannada/fazil-murder-case-in-mangalore-suratkal-penambur-mulki-bajpe-yojana-144-implemented/ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಜರಂಗದಳ, ಹಿಂದೂ ರಕ್ಷಣಾ ವೇದಿಕೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಇಂದು ತಿಪಟೂರು ಬಂದ್ ಗೆ ಕರೆ ನೀಡಿವೆ. ಹಿಂದೂಪರ ಸಂಘಟನೆಗಳು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಿಪಟೂರು ನಗರದ ಬಿ.ಹೆಚ್.ರಸ್ತೆಯ ಬಹುತೇಕ ಅಂಗಡಿಗಳು ಬಂದ್ ಮಾಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಕ ಬೆಂಬಲ ನೀಡಲಾಗಿದೆ.
ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಬಳಿ ಫಾಜಿಲ್ ಎಂಬ ವ್ಯಕ್ತಿಯ ಬರ್ಬರ ಹತ್ಯೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. https://kannadanewsnow.com/kannada/pakistan-6-killed-18-injured-after-roof-collapses-due-to-heavy-rains/ ಮಂಗಳೂರಿನ ಸುರತ್ಕಲ್ ಫಾಜಿಲ್ ಹತ್ಯೆ ಹಿನ್ನೆಲೆ ಮಂಗಳೂರಿನ ಸುರತ್ಕಲ್‌ನಲ್ಲಿ ಹೈಅಲರ್ಟ್ ಇದೆ. ದಕ್ಷಿಣಕನ್ನಡ 4 ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸುರತ್ಕಲ್, ಪೆಣಂಬೂರ್, ಮುಲ್ಕಿ, ಬಜಪೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/pakistan-6-killed-18-injured-after-roof-collapses-due-to-heavy-rains/ ನಿಷೇಧಾಜ್ಞೆ ಇರುವ ಕಡೆ ಮಸೀದಿಗಳಲ್ಲಿ ಇಂದು ಶುಕ್ರವಾರ ನಮಾಜ್ ಮಾಡದಂತೆ ಖಾಕಿ ಮನವಿ ಮಾಡಿದ್ದಾರೆ. ನಾಲ್ಕು ಕಡೆ ಶಾಲಾ ಕಾಲೇಜುಗಳಿಗೂ ರಜೆಯನ್ನು ಘೋಷಣೆ ಮಾಡಲಾಗಿದೆ.
ಮೂಲ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೊಳ್ಳೇಗಾಲದ ಮಹಾಕಾಳಿ ಮಂತ್ರ ಶಕ್ತಿಯಿಂದ ಕೇವಲ 4 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. Call/WhatsApp Ph:- 9480512091 ಪ್ರಧಾನ ಗುರುಗಳು ಪಂಡಿತ್: ಶ್ರೀ ವಿನಯ್ ಕುಮಾರ್ ಶಾಸ್ತ್ರಿ ಗಳು ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ದುಷ್ಟ ಶಕ್ತಿ…
ಸಾಹಿವಾಲ್ (ಪಾಕಿಸ್ತಾನ): ಪಾಕಿಸ್ತಾನದ ಸಾಹಿವಾಲ್‌ನಲ್ಲಿ ಸುರಿದ ಭಾರೀ ಮಳೆಗೆ ಛಾವಣಿ ಕುಸಿದು ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮನೆ ಛಾವಣಿ ಕುಸಿತದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಮತ್ತು ರಕ್ಷಣಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದವು. ಈ ವೇಳೆ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನೂ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಿಂಧ್‌ನ ಖೈರ್‌ಪುರ್ ಜಿಲ್ಲೆಯಲ್ಲಿ ಇದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ಛಾವಣಿ ಕುಸಿತದಿಂದ ಒಂದೇ ಕುಟುಂಬದ ವ್ಯಕ್ತಿ ಹಾಗೂ ಅವರ ಇಬ್ಬರು ಅಪ್ರಾಪ್ತ ಪುತ್ರರು ಸಾವನ್ನಪ್ಪಿದ್ದರೆ, ಇಬ್ಬರು ಪುತ್ರಿಯರು ತೀವ್ರವಾಗಿ ಗಾಯಗೊಂಡಿದ್ದಾರೆ. https://kannadanewsnow.com/kannada/commonwealth-games-2022-in-birmingham-declared-open-in-grand-ceremony/ https://kannadanewsnow.com/kannada/rat-fever-detected-in-udupi-symptoms-how-is-it-spread-here-is-the-complete-information/ https://kannadanewsnow.com/kannada/bigg-news-former-cm-hd-kumaraswamy-accuses-state-govt-of-playing-murderous-politics-even-in-death/