Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3035ಕ್ಕೆ ಏರಿಕೆಯಾಗಿದೆ. https://kannadanewsnow.com/kannada/international-tiger-day-2022-observed-globally-on-29-july/ ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 800 ಕ್ಕೆ ಏರಿಕೆಯಾದರೆ, ಮೈಸೂರು – 349 ಉಡುಪಿ – 377 ದಕ್ಷಿಣ ಕನ್ನಡ – 190 ಶಿವಮೊಗ್ಗ – 175 ಚಿತ್ರದುರ್ಗ – 170 ಮಂಡ್ಯ – 102 ಹಾಸನ – 132 ವಿಜಯಪುರ – 128 ಬೆಳಗಾವಿ – 116 ದಾವಣಗೆರೆ – 119 ಕಲಬುರುಗಿ – 105 ರಷ್ಟು ಕೇಸ್ಗಳು ಹೆಚ್ಚಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ವರ್ಷ 41,618 ಡೆಂಗ್ಯೂ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 18,348 ಮಂದಿಯ ರಕ್ಷ ಪರೀಕ್ಷೆ ನಡೆಸಲಾಗಿದೆ. 2,258 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಆದರೆ ಸಾವು ಸಂಭವಿಸಿಲ್ಲ. 2021 ರಲ್ಲಿ 7,189 ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು,…
ದೆಹಲಿ: ಅಂತರರಾಷ್ಟ್ರೀಯ ಹುಲಿ ದಿನ(International Tiger Day)ವನ್ನು ಪ್ರತಿ ವರ್ಷ ಜುಲೈ 29 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಹುಲಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಹುಲಿಗಳನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಸರಿಸುಮಾರು ಶೇ. 95 ರಷ್ಟು ಕಡಿಮೆಯಾಗಿದೆ. ಅಂತರಾಷ್ಟ್ರೀಯ ಹುಲಿ ದಿನ 2022 ರ ಥೀಮ್ 2022 ರ ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಈ ವರ್ಷದ ಥೀಮ್ “ಭಾರತವು ಹುಲಿ ಸಂಖ್ಯೆಯನ್ನು ಪುನರುಜ್ಜೀವನಗೊಳಿಸಲು ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸುತ್ತದೆ(India launches Project Tiger to revive the tiger population)” ಎಂಬುದಾಗಿದೆ. ಮಹತ್ವ ಈ ದಿನವು ಹುಲಿಗಳ ಆವಾಸಸ್ಥಾನಗಳನ್ನು ರಕ್ಷಿಸಲು ಮತ್ತು ವಿಸ್ತರಿಸಲು ಪ್ರಯತ್ನಿಸುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್, ಇಂಟರ್ನ್ಯಾಷನಲ್ ಫಂಡ್ ಫಾರ್ ಅನಿಮಲ್…
ಚಿತ್ರದುರ್ಗ : ಜಿಲ್ಲೆಯೆ ಹೊಳಲ್ಕೆರೆ ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಉಪಾಹಾರ ಸೇವಿಸಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/praveen-nettaru-strict-action-will-be-taken-against-those-killed-minister-ashwatthanarayan-chidi/ ಬೆಳಗ್ಗಿನ ಉಪಾಹಾರ ಸೇವಿಸಿದ ಬಳಿಕ ಹೊಟ್ಟೆನೋವು ವಾಂತಿ-ಭೇದಿಯಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನುಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ https://kannadanewsnow.com/kannada/praveen-nettaru-strict-action-will-be-taken-against-those-killed-minister-ashwatthanarayan-chidi/
ರಾಮನಗರ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಲಿದೆ ಎಂದು ರಾಮನಗರದಲ್ಲಿ ಸಚಿವ ಅಶ್ವತ್ಥನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/r-ashok-clarifies-fazils-murder-as-personal-love-affair/ ಹತ್ಯೆಗೈದ ಹಂತಕರಿಗೆ ನಿರ್ದಾಕ್ಷಿಣ್ಯ ಕ್ರಮವಾಗಲಿದೆ. ನಡುಕ ಹುಟ್ಟಿಸೋ ಕಾಲ ಸನಿಹವಾಗಿದೆ. ಎನ್‌ಕೌಂಟರ್ ಮಾಡುವ ಕಾಲ ಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆಯಂತೆ ಬೇರ್ಯಾರ ಹತ್ಯೆ ಆಗಬಾರದು. ರಾಮನಗರದಲ್ಲಿ ಸಚಿವ ಅಶ್ವತ್ಥನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/r-ashok-clarifies-fazils-murder-as-personal-love-affair/
ಬೆಂಗಳೂರು : ರಾಜ್ಯದಲ್ಲಿ ಜನಾಕ್ರೋಶಕ್ಕೆ ‘ಬೊಮ್ಮಾಯಿ ಮಾಡೆಲ್’ ವಿಪಳವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. https://kannadanewsnow.com/kannada/r-ashok-clarifies-fazils-murder-as-personal-love-affair/ ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಬಸವಣ್ಣನ ಮಾಡೆಲ್ ಇದೆ, ಕುವೆಂಪು ಮಾಡೆಲ್ ಇದೆ, ನಾರಾಯಣಗುರುಗಳ ಮಾಡೆಲ್ ಇದೆ, ದೇವರಾಜ್ ಅರಸರ ಮಾಡೆಲ್ ಇದೆ. ಇವುಗಳನ್ನು ಬಿಟ್ಟು ಯುಪಿ ಮಾಡೆಲ್ ತರುತ್ತೇವೆ ಎನ್ನುವ ಸಿಎಂ ಬೊಮ್ಮಾಯಿ ಅವರೇ, ಇದರರ್ಥ ಇಲ್ಲಿನ ಯುವಕರನ್ನು ಪರರಾಜ್ಯಗಳಿಗೆ ಪಾನಿಪುರಿ ಮಾರಲು ಕಳಿಸುವುದೇ? #JanaAkrosha ಕ್ಕೆ ‘ಬೊಮ್ಮಾಯಿ ಮಾಡೆಲ್’ ಛಿದ್ರವಾಯಿತೆ? ಎಂದು ವ್ಯಂಗ್ಯವಾಡಿದೆ. https://twitter.com/INCKarnataka/status/1552883018095767552 ಒಂದೇ ವಾರದಲ್ಲಿ ಕರಾವಳಿಯಲ್ಲಿ ಮೂರು ಕೊಲೆಗಳಾಗಿವೆ. ಮಸೂದ್, ಪ್ರವೀಣ್, ಫಾಜಿಲ್.ಈ ಕೊಲೆಗಳ ಕಾರಣ ಮುಂದೆ ತನಿಖೆಯಿಂದ ತಿಳಿಯಬೇಕಿದೆ. ಆಡಳಿತ ಮಾಡುವವರಿಗೆ ಧರ್ಮಗಳಿಗಿಂತ “ರಾಜಧರ್ಮ” ಮುಖ್ಯ. ರಾಜಧರ್ಮದ ಎದುರು ಸರ್ವಧರ್ಮವೂ ಸಮಾನ. ಸಿಎಂ ಬೊಮ್ಮಾಯಿ ಅವರೇ, ನಿಮಗೆ ರಾಜಧರ್ಮ ನೆನಪಿಸಲು ಮತ್ತೊಮ್ಮೆ ವಜಪೇಯಿಯವರೇ ಹುಟ್ಟಿಬರಬೇಕೆ? ಎಂದು ಪ್ರಶ್ನಿಸಿದೆ. https://twitter.com/INCKarnataka/status/1552906980674531329
ಬೆಂಗಳೂರು : ಮಂಗಳೂರಿನ ಸುರತ್ಕಲ್ ಬಳಿ ಫಾಜಿಲ್ ಹತ್ಯೆ ಪ್ರಕರಣ ಸಂಬಂಧಿಸಿ ಸಚಿವ ಆರ್. ಆಶೋಕ್ ಮಾತನಾಡಿ ಫಾಜಿಲ್ ಹತ್ಯೆಯನ್ನು ಕೆಲವರು ಕೋಮುಗಲಾಭೆ ಅಂತಾರೆ ಇನ್ನೂ ಕೆಲವರು ʻ ಪರ್ಸನಲ್ & ಲವ್ ಅಫೇರ್ ಅಂತಾ ಹೇಳ್ತಿದ್ದಾರೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/bigg-breaking-news-sri-ram-sene-founder-pramod-muthalik-taken-into-police-custody/ ಫಾಜಿಲ್ ಹತ್ಯೆ ಬಗ್ಗೆ ಕೆಲವರು ಕೋಮುಗಲಾಭೆ ಅಂತಾರೆ ಇನ್ನೂ ಕೆಲವರು ʻ ಪರ್ಸನಲ್ & ಲವ್ ಅಫೇರ್ ಎನ್ನುತ್ತಾರೆ. ಇವೆಲ್ಲವೂ ಪೊಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ ಮುಸ್ಲಿಂ ವ್ಯಕ್ತಿಯಾಗಿದ್ದರೂ ಹಲ್ಲೆ ಮಾಡುವುದು ತಪ್ಪು ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಆರ್. ಆಶೋಕ್ ತಿಳಿಸಿದ್ದಾರೆ. https://kannadanewsnow.com/kannada/bigg-breaking-news-sri-ram-sene-founder-pramod-muthalik-taken-into-police-custody/
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ 22ನೇ ಆವೃತ್ತಿ ಆರಂಭವಾಗಿದ್ದು, ಮೊದಲ ದಿನವಾದ ಇಂದು ಹೆಚ್ಚಿನ ಸಂಖ್ಯೆಯ ಭಾರತೀಯ ಆಟಗಾರರು ಸ್ಫರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 8 ರವರೆಗೆ ಈ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದೆ. ಮೊದಲ ದಿನವಾದ ಇಂದು ಭಾರತೀಯ ಮಹಿಳಾ ಹಾಕಿ ಮತ್ತು ಮಹಿಳಾ ಕ್ರಿಕೆಟ್ ಸ್ಪರ್ಧೆಗಳು ನಡೆಯಲಿವೆ. ಪ್ರಸ್ತುತ ವರದಿಗಳ ಪ್ರಕಾರ, ಸಾರ್ವಕಾಲಿಕ CWG ಪದಕ ಪಟ್ಟಿಯಲ್ಲಿ ಭಾರತೀಯರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ 2022 ಭಾರತದ ದಿನದ ಮೊದಲ ದಿನದ ಸ್ಪರ್ಧೆಯ ವೇಳಾಪಟ್ಟಿಯನ್ನು ಇಲ್ಲಿ ಪರಿಶೀಲಿಸಿ (ಭಾರತೀಯ ಕಾಲಮಾನದ ಪ್ರಕಾರ). * ಮಧ್ಯಾಹ್ನ 2 ಗಂಟೆಗೆ ಟೇಬಲ್ ಟೆನಿಸ್ ಪುರುಷರ ತಂಡ – ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ, ಶರತ್ ಅಚಂತ, ಸತ್ಯನ್ ಜ್ಞಾನಶೇಖರನ್ ಮಹಿಳಾ ತಂಡ – ದಿಯಾ ಚಿತಾಲೆ, ಮನಿಕಾ ಬಾತ್ರಾ, ರೀತ್ ಟೆನ್ನಿಸನ್, ಶ್ರೀಜಾ ಅಕುಲಾ * ಮಧ್ಯಾಹ್ನ 3 ಗಂಟೆಗೆ ಈಜು 400 ಮೀ ಫ್ರೀಸ್ಟೈಲ್ – ಕುಶಾಗ್ರಾ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಆದರೆ ನಿರ್ಬಂಧವಿದ್ದರೂ ನಗರಕ್ಕೆ ಬಂದ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://kannadanewsnow.com/kannada/dont-spread-false-news-on-social-media-about-fazils-murder-mangalore-commissioner-sasikumar-warns/ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಮುತಾಲಿಕ್ ಅವರ ದಕ್ಷಿಣ ಕನ್ನಡ ಜಿಲ್ಲೆ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದರು. ಆದರೆ ನಿರ್ಬಂಧವಿದ್ದರೂ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ಪ್ರಮೋದ್ ಮುತಾಲಿಕ್ ಅವರನ್ನು ಕಮಿಷನರೇಟ್ ವ್ಯಾಪ್ತಿಗೆ ಪ್ರವೇಶಿಸಿದ ಕೂಡಲೇ ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. https://kannadanewsnow.com/kannada/is-praveen-and-fazils-mothers-pain-the-same-ʼ-ut-khader-outrage/
ದಕ್ಷಿಣಕನ್ನಡ : ಫಾಝಿಲ್ ಹತ್ಯೆಯ ಹಂತಕರನ್ನು ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಈ ಕೊಲೆ ವಿಚಾರವಾಗಿ ʻಸೋಷಿಯಲ್ ಮಿಡಿಯಾʼಗಳಲ್ಲಿ ಮನಸ್ಸಿಗೆ ಬಂದಂತೆ ಪೋಸ್ಟ್‌ಗಳನ್ನು ರವಾನೆ ಮಾಡಬೇಡಿ ಮಂಗಳೂರು ಕಮಿಷನರ್ ಶಶಿಕುಮಾರ್ ಎಚ್ಚರಿಕೆ ನೀಡಲಾಗಿದೆ. https://kannadanewsnow.com/kannada/breaking-news-fazil-cremated-at-kabarasthan-in-surathkal/ ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಫಾಜಿಲ್ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಈ ಕೊಲೆ ವಿಚಾರವಾಗಿ ಸೋಷಿಯಲ್ ಮಿಡಿಯಾಗಳಲ್ಲಿ ಮನಸ್ಸಿಗೆ ಬಂದಂತೆ ರವಾನೆ ಮಾಡಬೇಡಿ. https://kannadanewsnow.com/kannada/breaking-news-fazil-cremated-at-kabarasthan-in-surathkal/ ಗೊಂದಲಗಳ ಸಂದೇಶ ರವಾನೆ ಮಾಡಬೇಡಿ. ನಿನ್ನೆ ರಾತ್ರಿ 8 ಗಂಟೆಯಿಂದ ಕೊಲೆ ಬಗ್ಗೆ ಯಾರ ಮೇಲೆ ಅನುಮಾನ ಬರುತ್ತದೋ ಅವರನ್ನು ವಶಕ್ಕೆ ಪಡೆಯಲಾಗಿದೆ. 23 ವಯಸ್ಸಿನ ಫಾಸಿಲ್ ಆಗಿದ್ದಾನೆ, ಆತನು ಚಿಕ್ಕ ಕುಟುಂಬದವನೆಂದು ತಿಳಿದುಬಂದಿದೆ.
ನವದೆಹಲಿ: ಬಿಜಿಎಂಐ (BGMI)ಎಂದೇ ಪ್ರಸಿದ್ಧವಾಗಿರುವ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗುರುವಾರ ತಡರಾತ್ರಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ನಾಪತ್ತೆಯಾಗಿದ್ದು, ಹಲವು ಬಳಕೆದಾರರನ್ನು ಅಚ್ಚರಿಗೊಳಿಸಿದೆ. ಸರ್ಕಾರದ ಆದೇಶವನ್ನು ಅನುಸರಿಸಿ ತಮ್ಮ ಆಪ್ ಸ್ಟೋರ್‌ಗಳಿಂದ ಜನಪ್ರಿಯ ಬ್ಯಾಟಲ್ ರಾಯಲ್ ಆಟವನ್ನು ತೆಗೆದು ಹಾಕಿರುವುದನ್ನು ದೃಢಪಡಿಸಿದ್ದಾರೆ. https://kannadanewsnow.com/kannada/murdered-singer-sidhu-moose-walas-father-gets-sons-face-tattooed-on-arm/ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI)ಪಬ್ ಮೊಬೈಲ್ನ ಭಾರತೀಯ ಆವೃತ್ತಿಯಾಗಿದ್ದು, ಇದನ್ನು ಕ್ರಾಫ್ಟನ್ ಅಭಿವೃದ್ಧಿ ಪಡಿಸಿದೆ. ಈ ಆಟವನ್ನು ಜುಲೈ 2,2021 ರಂದು ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಸರ್ಕಾರದಿಂದ ಆದೇಶವನ್ನು ಸ್ವೀಕರಿಸಿದ ನಂತರ, ಸ್ಥಾಪಿತ ಪ್ರಕ್ರಿಯೆಯನ್ನು ಅನುಸರಿಸಿ, ನಾವು ಡೆವಲಪರ್‌ಗೆ ಸೂಚಿಸಿದ್ದೇವೆ. ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಗೂಗಲ್ ವಕ್ತಾರರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಆಪಲ್ ತನ್ನ ಆ್ಯಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಸಹ ತೆಗೆದುಹಾಕಿದೆ. ಕ್ರಾಫ್ಟನ್ ಇನ್ನೂ ಮುಂದಿನ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಎನ್ನಲಾಗುತ್ತಿದೆ. https://kannadanewsnow.com/kannada/bigg-news-cm-bommai-to-hold-meeting-with-senior-police-officials-today-in-coastal-serial-killings/ ಭಾರತದಲ್ಲಿ ಹೆಚ್ಚು ಇಷ್ಟಪಡುವ ಆಟ ಈ ತಿಂಗಳ ಆರಂಭದಲ್ಲಿ, ಗೇಮ್…