Subscribe to Updates
Get the latest creative news from FooBar about art, design and business.
Author: KNN IT TEAM
ದಕ್ಷಿಣ ಕನ್ನಡ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದಂತ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಖಂಡಿಸಿ, ಪ್ರತಿಭಟನೆ ನಡೆಸಿದ್ದ ವೇಳೆಯಲ್ಲಿ, ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಹೀಗೆ ಲಾಠಿ ಚಾರ್ಜ್ ನಡೆಸಿದ್ದರಿಂದ ಪೊಲೀಸರ ಕ್ರಮಕ್ಕೆ, ಕಾರ್ಯಕರ್ತರು ಕಿಡಿಕಾರಿದ್ದರು. ಜೊತೆಗೆ ಸಿಎಂ ಬೊಮ್ಮಾಯಿ ವಿರುದ್ಧವೂ ಘೋಷಣೆ ಕೂಗಿದ್ದರು. ಅಲ್ಲದೇ ಲಾಠಿ ಚಾರ್ಜ್ ಗೆ ಕಾರಣವಾದಂತ ಅಧಿಕಾರಿಗಳನ್ನು ವರ್ಗಾವಣೆಗೂ ಒತ್ತಾಯಿಸಿದ್ದರು. ಹೀಗಾಗಿ ಬಿಜೆಪಿ ಕಾರ್ಯಕರ್ತರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದು, ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. https://kannadanewsnow.com/kannada/praveens-murder-case-handed-over-to-nia-by-state-government/ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ನಡೆಸಲಾಗುತ್ತಿದ್ದಂತ ಪ್ರತಿಭಟನಾ ಮೆರವಣಿಗೆಕಾರರ ಮೇಲೆ ಪೊಲೀಸರು ಕಳೆದ ಎರಡು ದಿನಗಳ ಹಿಂದೆ ಲಾಠಿ ಚಾರ್ಜ್ ನಡೆಸಿದ್ದರು. ಅಲ್ಲದೇ ಕಾಸರಗೂಡಿನ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ರಮೇಶ್ ಮೇಲೂ ಪೊಲೀಸರು ಲಾಠಿ ಬೀಸಿದ್ದರು. ಹೀಗಾಗಿ ಪೊಲೀಸರ ಈ ಕ್ರಮಕ್ಕೆ ಹಲವು ಬಿಜೆಪಿ ಮುಖಂಡರು ಕಿಡಿಕಾರಿದ್ದರು. ಜೊತೆಗೆ ಸಿಎಂ ಬೊಮ್ಮಾಯಿ ವಿರುದ್ಧವು ಘೋಷಣೆ ಕೂಗಿ, ಲಾಠಿಚಾರ್ಜ್ ಗೆ…
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆಸಲಾಗಿದ್ದಂತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಇದೀಗ ಎನ್ಐಎ ತನಿಖೆಗೆ ವಹಿಸಿ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದೆ. ಪ್ರವೀಣ್ ಹತ್ಯೆ ಹಿಂದೆ ಅಂತರರಾಜ್ಯದ ನಂಟಿರೋದಾಗಿ ಹೇಳಲಾಗುತ್ತಿದೆ. ಆ ಕುರಿತಂತೆ ತನಿಖೆ ನಡೆಸಿ ಹತ್ಯೆಯ ಆರೋಪಿಗಳ ಸಮಗ್ರ ಮಾಹಿತಿ ಕಲೆ ಹಾಕಿ, ತಪ್ಪಿತಸ್ತರಿಗೆ ಶಿಕ್ಷೆ ಕೊಡಿಸೋ ನಿಟ್ಟಿನಲ್ಲಿ ಎನ್ಐಎ ತನಿಖೆಗೆ ವಹಿಸಿದೆ. ಮತ್ತೊಂದೆಡ ದಕ್ಷಿಣ ಕನ್ನಡ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದಂತ ಹಿಂದೂ ಕಾರ್ಯಕರ್ತ ಪ್ರವೀಣ್ ಕೊಲೆ ಖಂಡಿಸಿ, ಪ್ರತಿಭಟನೆ ನಡೆಸಿದ್ದ ವೇಳೆಯಲ್ಲಿ, ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಹೀಗೆ ಲಾಠಿ ಚಾರ್ಜ್ ನಡೆಸಿದ್ದರಿಂದ ಪೊಲೀಸರ ಕ್ರಮಕ್ಕೆ, ಕಾರ್ಯಕರ್ತರು ಕಿಡಿಕಾರಿದ್ದರು. ಜೊತೆಗೆ ಸಿಎಂ ಬೊಮ್ಮಾಯಿ ವಿರುದ್ಧವೂ ಘೋಷಣೆ ಕೂಗಿದ್ದರು. ಅಲ್ಲದೇ ಲಾಠಿ ಚಾರ್ಜ್ ಗೆ ಕಾರಣವಾದಂತ ಅಧಿಕಾರಿಗಳನ್ನು ವರ್ಗಾವಣೆಗೂ ಒತ್ತಾಯಿಸಿದ್ದರು. ಹೀಗಾಗಿ ಬಿಜೆಪಿ ಕಾರ್ಯಕರ್ತರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದು, ಕೆಲ ಅಧಿಕಾರಿಗಳನ್ನು…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹರಣರದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಟಿಎಂಸಿ ನಾಯಕ ಪಾರ್ಥ ಚಟರ್ಜಿಯವರು ಪ್ರಕರಣ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಷಡ್ಯಂತ್ರಕ್ಕೆ ಬಲಿಯಾಗಿ ತಮ್ಮನ್ನು ಸಿಲುಕಿಸಲಾಗುತ್ತಿದೆ ಎಂದಿದ್ದಾರೆ. https://kannadanewsnow.com/kannada/bigg-breaking-news-sri-ram-sene-founder-pramod-muthalik-taken-into-police-custody/ ಪಾರ್ಥ ಚಟರ್ಜಿ ವಿರುದ್ಧ ಹಗರಣ ಬಯಾಲಾದ ಬಳಿಕ ಟಿಎಂಸಿ ಪಕ್ಷದಲ್ಲಿ ಅನೇಕ ಗದ್ದಲಗಳು ಎದ್ದಿದ್ದವು. ಚಟರ್ಜಿಯವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಅನೇಕ ಟಿಎಂಸಿ ನಾಯಕರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ನಿನ್ನೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಚಟರ್ಜಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದು ಹಾಕಿದ್ದು, ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಳಿಸಿದ್ದಾರೆ. ಪಾರ್ಥ ಚಟರ್ಜಿ ಅವರು ಸುಮಾರು ಎರಡು ದಶಕಗಳ ಕಾಲ ಟಿಎಂಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇತ್ತ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಪಾದಗಳಿಗೆ ಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತ್ತಿದೆ. https://kannadanewsnow.com/kannada/who-is-protecting-mafias-in-gujarat-rahul-gandhi-on-illicit-liquor-drugs/ ಅರ್ಪಿತಾ ಮುಖರ್ಜಿ ಅವರಿಗೆ ಸಂಬಂಧಿಸಿದ ಮತ್ತೊಂದು ಅಪಾರ್ಟ್‌ಮೆಂಟ್ ಮೇಲೆ ಜಾರಿ ನಿರ್ದೇಶನಾಲಯ…
ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಹಿನ್ನೆಲೆ ಬೆಳ್ಳಾರೆ& ಸುಬ್ರಮಣ್ಯ ಠಾಣೆಗೆ ನೂತನ ಪಿಎಸ್‌ಐಯನ್ನು ನೇಮಕ ಮಾಡಲಾಗಿದೆ. https://kannadanewsnow.com/kannada/lathicharge-for-praveens-mortal-remains-new-psi-appointed-for-bellare-subramanya-police-stations/ ಬೆಳ್ಳಾರೆಯಲ್ಲಿ ಎಸ್‌ಐ ಆಗಿದ್ದ ರುಕ್ಮ ನಾಯ್ಕ್, ಸುಬ್ರಮಣ್ಯ ಎಸ್‌ಐ ಆಗಿದ್ದ ಜಂಬೂ ರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಳ್ಯ ಸರ್ಕಲ್ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಮಣ್ಯ ಪೊಲೀಸ್ ಠಾಣೆಗಳಿಗೆ ನೂತನವಾಗಿ ಪೊಲೀಸ್ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ವಿಮ ವಲಯ ಐಜಿಪಿ ದೇವಜ್ಯೋತಿರೇ ಆದೇಶಿಸಿದ್ದಾರೆ. https://kannadanewsnow.com/kannada/lathicharge-for-praveens-mortal-remains-new-psi-appointed-for-bellare-subramanya-police-stations/ ಕುಂದಾಪುರ ಎಸ್‌ಐ ಆಗಿದ್ದ ಸುಹಾಸ್ ಅವರು ಬೆಳ್ಳಾರೆ ಠಾಣೆಗೆ , ವಿಟ್ಲಠಾಣಾ ಎಸ್‌ಐ ಆಗಿದ್ದ ಮಂಜುನಾಥ್ ಟಿ ಅವರನ್ನು ಸುಬ್ರಮಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಳ್ಳಾರೆಯಲ್ಲಿ ಎಸ್‌ಐ ಆಗಿದ್ದ ರುಕ್ಮಾ ನಾಯಕ್, ಸುಬ್ರಮಣ್ಯ ಎಸ್‌ಐ ಆಗಿದ್ದ ಜಂಬು ರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. https://kannadanewsnow.com/kannada/lathicharge-for-praveens-mortal-remains-new-psi-appointed-for-bellare-subramanya-police-stations/
ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾಸ್ಕೋದ ಆಗ್ನೇಯ ಜಿಲ್ಲೆಯ ಕಟ್ಟಡದಲ್ಲಿ ರಾತ್ರಿಯಿಡೀ ಫೈರ್ ಅಲಾರಂ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಕಾರಣ ಎಂಟು ಜನರು ಬೆಂಕಿಗಾವುತಿಯಾಗಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ 4 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ್ದಾರೆ. ಈ ವೇಳೆ ಕಟ್ಟಡದಲ್ಲಿದ್ದ 200 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. https://kannadanewsnow.com/kannada/bigg-breaking-news-sri-ram-sene-founder-pramod-muthalik-taken-into-police-custody/ https://kannadanewsnow.com/kannada/up-woman-gang-raped-by-husband-and-his-cousin-given-triple-talaq-over-dowry/ https://kannadanewsnow.com/kannada/bigg-news-aadhaar-seeding-programme-to-be-linked-to-voters-list-from-august-1/
ಗೊಂಡಾ (ಉತ್ತರ ಪ್ರದೇಶ): ಗೊಂಡಾದಲ್ಲಿ ವರದಕ್ಷಿಣೆ ನೀಡದಿದ್ದಕ್ಕಾಗಿ ಮಹಿಳೆಯ ಮೇಲೆ ಆಕೆಯ ಪತಿ ಮತ್ತು ಆತನ ಸೋದರ ಸಂಬಂಧಿ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ, ಇದಾದ ಬಳಿಕ ಮಹಿಳೆಗೆ ‘ತ್ರಿವಳಿ ತಲಾಖ್’ ಮೂಲಕ ವಿಚ್ಛೇದನ ನೀಡಿರುವ ಘಟನೆ ನಡೆದಿದೆ. ಆರೋಪಿ ಪತಿಯಾದ ಲಕ್ನೋ ಮೂಲದ ಮೊಹಮ್ಮದ್ ಅದ್ನಾನ್ ಅವರನ್ನು ಗುರುವಾರ ಪೊಲೀಸರು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆತನ ಸೋದರ ಸಂಬಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತನ್ನ ಪತಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದನು ಮತ್ತು ಅದಕ್ಕಾಗಿ ತನಗೆ ಥಳಿಸುತ್ತಿದ್ದ. ಈ ಕಾರಣದಿಂದ ಮಹಿಳೆ ಆಕೆಯ ತಾಯಿಯ ಮನೆಯಲ್ಲೇ ವಾಸವಿದ್ದಳು. ಮಂಗಳವಾರ ಮಹಿಳೆ ಮತ್ತು ಆಕೆಯ ಸೋದರಸಂಬಂಧಿ ತನ್ನ ಅತ್ತೆಯ ಮನೆಗೆ ಹೋಗಿದ್ದರು. ಮನೆಯಲ್ಲಿ ಆರೋಪಿಗಳು ಮಹಿಳೆಯನ್ನು ಒಬ್ಬಂಟಿಯಾಗಿ ಕಂಡಿದ್ದು, ಈ ವೇಳೆ ಅತ್ಯಾಚಾರ ಎಸಗಿದ್ದಾರೆ. ನಂತರ ಅದ್ನಾನ್ ಆಕೆಯನ್ನು ಥಳಿಸಿ, ಕಾನೂನುಬಾಹಿರವಾದ ‘ತ್ರಿವಳಿ ತಲಾಖ್’ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/commonwealth-games-2022-check-out-indias-schedule-for-day-1/ https://kannadanewsnow.com/kannada/international-tiger-day-2022-observed-globally-on-29-july/…
ಮಡಿಕೇರಿ : ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಕಾರ್ಯಕ್ರಮ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಆ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವವರು ಆಧಾರ್ ಸಂಖ್ಯೆಯನ್ನು ಮತದಾರರ ನೋಂದಣಾಧಿಕಾರಿಗೆ ನಮೂನೆ 6 ಬಿ ಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. https://kannadanewsnow.com/kannada/shocking-%e0%b2%86%e0%b2%82%e0%b2%a7%e0%b3%8d%e0%b2%b0%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf-8-%e0%b2%a8%e0%b3%87-%e0%b2%a4%e0%b2%b0/ ಮತದಾರರು https://www.nvsp.in , https://voterportal.eci.gov.in ವೆಬ್‍ಸೈಟ್‍ನಲ್ಲಿ ಅನ್‍ಲೈನ್ ಮೂಲಕ ಮತ್ತು ಮೊಬೈಲ್ ಆ್ಯಪ್ ಮೂಲಕ ನಮೂನೆ 6 ಬಿ ಅನ್ನು ಭರ್ತಿ ಮಾಡಿ ಆಧಾರ್ ಅನ್ನು ದೃಢೀಕರಿಸಬಹುದು. ಆಫ್ಲೈನ್ ಸಲ್ಲಿಕೆ: ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ನಮೂನೆ 6 ಬಿ ಪ್ರತಿಯಲ್ಲಿ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವರು. ಆಧಾರ್ ಸಂಖ್ಯೆಯನ್ನು ಹೊಂದಿರದ ಮತದಾರರು ನಮೂನೆ-6ಬಿ ಯೊಂದಿಗೆ ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ ಅಂಚೆ ಕಚೇರಿಯಲ್ಲಿ ನೀಡಿದ ಭಾವಚಿತ್ರವಿರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‍ಜಿಐ…
ಆಂಧ್ರಪ್ರದೇಶ : ಎರಡು ಮಕ್ಕಳ ತಾಯಿ 15 ವರ್ಷದ ಹುಡುಗನೊಂದಿಗೆ ಓಡಿಹೋದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಗುಡಿವಾಡ ಪಟ್ಟಣದ ಮಹಿಳೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. https://kannadanewsnow.com/kannada/bigg-breaking-news-sri-ram-sene-founder-pramod-muthalik-taken-into-police-custody/ ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ, ಜುಲೈ 19 ರಂದು ನಾಪತ್ತೆಯಾಗಿದ್ದನು. ಈ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆರೋಪಿ ಮಹಿಳೆ ಸ್ವಪ್ನಾ ಎಂದು ಗುರುತಿಸಲಾಗಿದ್ದು, ಬಾಲಕನ ಅದೇ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಜುಲೈ 26 ರಂದು ಹೈದರಾಬಾದಿನ ಬಾಲನಗರದಲ್ಲಿ ಮಹಿಳೆ ಮತ್ತು ಅಪ್ರಾಪ್ತ ಬಾಲಕನನ್ನು ಪತ್ತೆ ಮಾಡಲಾಗಿದೆ ಎಂದು ಗುಡಿವಾಡ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ದುರ್ಗಾರಾವ್ ತಿಳಿಸಿದ್ದಾರೆ. https://kannadanewsnow.com/kannada/who-is-protecting-mafias-in-gujarat-rahul-gandhi-on-illicit-liquor-drugs/
ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಹಿನ್ನೆಲೆ ಬೆಳ್ಳಾರೆ & ಸುಬ್ರಮಣ್ಯ ಠಾಣೆಯ ಪೊಲೀಸರ ವರ್ಗಾವಣೆ ಮಾಡಲಾಗಿದೆ https://kannadanewsnow.com/kannada/more-than-25-students-are-sick-after-eating-breakfast/ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಬೆಳ್ಳಾರೆ & ಸುಬ್ರಮಣ್ಯ ಪೊಲೀಸರನ್ನು ಸ್ಥಳ ನಿಗದಿ ಪಡಿಸದೇ ದಿಢೀರ್ ವರ್ಗಾವಣೆ ಮಾಡಲಾಗಿದೆ. https://kannadanewsnow.com/kannada/more-than-25-students-are-sick-after-eating-breakfast/ ಬೆಳ್ಳಾರೆ ಠಾಣೆಗೆ ನೂತನ ಪಿಎಸ್‌ಐ ಆಗಿ ಸುಹಾನ್, ಸುಬ್ರಮಣ್ಯ ಠಾಣೆಗೆ ಪಿಎಸ್‌ಐ ಆಗಿ ಟಿ. ಮಂಜುನಾಥ ನೇಮಕ ಮಾಡಲಾಗಿದೆ ಇಂದು ಪಶ್ವಿಮ ವಲಯದ ಐಜಿಪಿ ಆದೇಶ ಹೊರಡಿಸಿದ್ದಾರೆ.
ನವದೆಹಲಿ: ಗೋವಾದ ರೆಸ್ಟೋರೆಂಟ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಮಗಳ ವಿರುದ್ಧದ ಆರೋಪದ ಮೇಲೆ ಅವರು ಮಾಡಿದ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಅಳಿಸಲು ಮೂವರು ಕಾಂಗ್ರೆಸ್ ನಾಯಕರಿಗೆ ಇಂದು ಆದೇಶ ನೀಡಲಾಗಿದೆ. ಕೇಂದ್ರ ಸಚಿವರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ನಾಯಕರಿಗೆ ಸಮನ್ಸ್ ನೀಡಿತ್ತು. ಸ್ಮೃತಿ ಇರಾನಿ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರು ತಮ್ಮ ಟ್ವೀಟ್‌ಗಳನ್ನು ಅಳಿಸಿ ಆಗಸ್ಟ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. https://twitter.com/ANI/status/1552917412554887168 ಕಾಂಗ್ರೆಸ್ ನಾಯಕರು ಹಾಗೆ ಮಾಡಲು ವಿಫಲವಾದರೆ, ಈ ಪ್ರಕರಣದಲ್ಲಿ ಟ್ವೀಟ್‌ಗಳನ್ನು ಸಾಮಾಜಿಕ ಮಾಧ್ಯಮ ಕಂಪನಿ ಅಥವಾ ಟ್ವಿಟರ್ ತೆಗೆದುಹಾಕಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಕೋರ್ಟ್ ಆದೇಶದ ನಂತರ ಟ್ವೀಟ್ ಮಾಡಿರುವ ಜೈರಾಮ್ ರಮೇಶ್ ,ಸ್ಮೃತಿ ಇರಾನಿ ಅವರು ದಾಖಲಿಸಿರುವ ಪ್ರಕರಣಕ್ಕೆ ಔಪಚಾರಿಕವಾಗಿ ಉತ್ತರಿಸುವಂತೆ ದೆಹಲಿ ಹೈಕೋರ್ಟ್ ನಮಗೆ ನೋಟಿಸ್ ನೀಡಿದೆ. ನ್ಯಾಯಾಲಯದ ಮುಂದೆ…