Author: KNN IT TEAM

ಉಡುಪಿ : ಜಿಲ್ಲೆಯ  ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ಹತ್ಯೆಗೈದ ಘಟನೆ ಬುಧವಾರ ನಡೆದ ಘಟನೆ ತಡವಾಗಿ  ಬೆಳಕಿಗೆ ಬಂದಿದೆ.  https://kannadanewsnow.com/kannada/explosive-twist-in-praveens-murder-case-do-you-know-what-the-brother-who-revealed-the-truth-behind-the-bloodshed-said-read-here/ ಸ್ನೇಹಿತ ಮನೋಜ್‌ ಖಾರ್ವಿ ಜೊತೆ ಊಟಕ್ಕೆ ಪ್ರಸನ್ನ ತೆರಳಿದ್ದನು. ಇದೇ ವೇಳೆ ಹೊಟೇಲ್‌ ಹೊರಗೆ ಸುದರ್ಶನ ಹಾಗೂ ಯತೀಶ್‌  ನಿಂತಿದ್ದರು. ಸುದರ್ಶನ ಮತ್ತು ಪ್ರಸನ್ನ ನಡುವೆ ವಾಗ್ವಾದ ನಡೆಸಿದರು. ಚೂರಿಯಿಂದ ಪ್ರಸನ್ನ ಮೇಲೆ ಹಲ್ಲೆ ಮಾಡಿ ಸುದರ್ಶನ  ಪರಾರಿಯಾಗಿದ್ದಾನೆ. ಗಾಯಾಳು ಪ್ರಸನ್ನಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/explosive-twist-in-praveens-murder-case-do-you-know-what-the-brother-who-revealed-the-truth-behind-the-bloodshed-said-read-here/

Read More

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಸಂಬಂಧ ಇಂದು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಲಾಗುವುದು. ಕೇರಳ ಗಡಿ ಭಾಗದಲ್ಲಿ 55 ರಸ್ತೆಗಳನ್ನು ನಿಭಾಯಿಸುವುದು, ನಿರ್ಬಂಧ ಹೇರಿಕೆ ಸೇರಿದಂತೆ ಪ್ರಮುಖ ತೀರ್ಮಾನಗಳ ಬಗ್ಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. https://kannadanewsnow.com/kannada/decision-to-hand-over-probe-into-praveen-nettaru-murder-case-to-nia-cm-basavaraj-bommai/ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಪ್ರವೀಣ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೊಂದು ಕೊಲೆಯ ಮಾಹಿತಿ ಬಂದಿದೆ. ಮೂರು ಕೊಲೆಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿಯೊಬ್ಬ ನಾಗರೀಕನ ಜೀವವೂ ಸರ್ಕಾರಕ್ಕೆ ಮುಖ್ಯ. ತನಿಖೆ ನಡೆಯುತ್ತಿದೆ. ಮೂರು ಕೊಲೆಗಳಾಗಿರುವುದು ಜನರಲ್ಲಿ ಆತಂಕವನ್ನು ಮೂಡಿಸಿರುವುದು ಸಹಜ. ಸಮಾಜದಲ್ಲಿ…

Read More

ಪುತ್ತೂರು :   ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಬೆನ್ನಲ್ಲೇ ಹಲವು ಅನುಮಾನಗಳು ಎದುರಾಗುತ್ತಿದ್ದು, ಇದೀಗ ರಕ್ತದೋಕುಳಿ ಹಿಂದಿನ ಸ್ಪೋಟಕ ಸತ್ಯದ ಜತೆಗೆ ಪ್ರವೀಣ್‌ ನನ್ನು ಕಳೆದುಕೊಂಡ ಬೇಸರವನ್ನು ಪ್ರವೀಣ್‌ ಸಹೋದರನೇ ರಂಚಿತ್‌  ಬಿಚ್ಚಿಟ್ಟಿದ್ದು,ಪ್ರಕರಣಕ್ಕೆ ಬಿಗ್‌ ಟ್ವಿಸ್‌ ಸಿಕ್ಕಂತಾಗಿದೆ.  https://kannadanewsnow.com/kannada/night-curfew-imposed-across-dakshina-kannada-district-from-today-till-august-1/ ಪ್ರವೀಣ್‌ ಬೆಳ್ಳಾರೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಹಲಾಲ್‌ ಕಟ್‌ ಜಟ್ಕಾ ಕಟ್‌ ರಾಜ್ಯದಲ್ಲಿ ಚರ್ಚೆಯಾಗುವ ಮೊದಲೇ ಪ್ರವೀಣ್‌ ಬೆಳ್ಳಾರೆಯಲ್ಲಿ ಹಿಂದುಗಳಲ್ಲಿ ಮಾಂಸ ಮಾರಾಟ ಮಾಡಲು ಮುಂದಾಗುವಂತೆ ಪ್ರೇರೆಪಿಸುತ್ತಿದ್ದನು. ಹೀಗಾಗಿ ಮುಸ್ಲಿಂ ಮಾಂಸ ಮಾರಾಟಗಾರರಿಗೆ ಇದಿಂದ ಬ್ಯುಸಿನೆಸ್‌ ಲಾಸ್‌ ಆಗುತ್ತಿತ್ತು. ಜತೆಗೆ  ಮೀನಿನ ಟೆಂಡರ್‌ ಹಿಂದೂಗಳಿಗೆ ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದನು. https://kannadanewsnow.com/kannada/night-curfew-imposed-across-dakshina-kannada-district-from-today-till-august-1/ ಹಿಂದೂಗಳ ಪ್ರಮುಖ ನಾಯಕನಾಗಿ ಬೆಳೆಯುತ್ತಿದ್ದನು. ಹಿಂದೂಗಳನ್ನು ಪ್ರೇರೆಪಿಸೋ ಕೆಲ್ಸವನ್ನು ಪ್ರವೀಣ್‌ ಮಾಡುತ್ತಿದ್ದರು. ಈ ಕಾರಣಗಳ ವೈಯಕ್ತಿ ದ್ವೇಷದಿಂದ ಕೊಲೆ ನಡೆದಿರಬಹುದು.   ಈತ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರ ಮಗನೇ ಕೃತ್ಯ ಎಸಗಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರವೀಣ್‌ ಈ ನಡತೆಯನ್ನು ಕಂಡು ವೈಮನಸ್ಸಿನಿಂದ ಈ ಕೃತ್ಯ ಮಾಡಿರಬಹುದೆಂದು ಪ್ರವೀಣ್‌ ಸಹೋದರ ರಂಜಿತ್‌ ಮಾಹಿತಿ…

Read More

ಚೆನ್ನೈ : ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾಲಯದ 42 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಅವರ ಪ್ರಧಾನಿಯನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಸುಮಾರು 69 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. https://twitter.com/narendramodi/status/1552888824891846656 ಬಳಿಕ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮಾತನಾಡಿ, ನೀವು ಉದ್ಯೋಗ ಪಡೆಯುವುದು ಮಾತ್ರವಲ್ಲದೆ ಇತರರಿಗೂ ಕೆಲಸ ನೀಡಬೇಕು. ಇಂಜಿನಿಯರ್‌ಗಳು ಉದ್ಯಮಿಗಳಾಗಬೇಕು. ಉನ್ನತ ಶಿಕ್ಷಣದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಶೇ.56.5 ರಷ್ಟು ಮಹಿಳೆಯರು ಇಂದು ಘಟಿಕೋತ್ಸವದಲ್ಲಿದ್ದಾರೆ. ಪ್ರವೇಶ ಪರೀಕ್ಷೆಯನ್ನು ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ರದ್ದುಗೊಳಿಸಿದರು. ಇದರಿಂದಾಗಿ ತಮಿಳುನಾಡಿನ ಕಾಲೇಜುಗಳಲ್ಲಿ ವರ್ಷಕ್ಕೆ 25 ಸಾವಿರದಿಂದ 77 ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ ಎಂದರು. https://twitter.com/ANI/status/1552907743702355969 ಅಣ್ಣಾ ವಿಶ್ವವಿದ್ಯಾನಿಲಯವನ್ನು ಸೆಪ್ಟೆಂಬರ್ 4, 1978 ರಂದು ಸ್ಥಾಪಿಸಲಾಯಿತು. ಇದಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ಹೆಸರನ್ನು ಇಡಲಾಗಿದೆ.…

Read More

ನವದೆಹಲಿ : ದೇಶದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಪೋಲಿಯೋ, ಹೆಪಟೈಟಿಸ್ ಮತ್ತು ಇತರ ವಾಡಿಕೆಯ ಲಸಿಕೆಗಳನ್ನ ಕಾಯ್ದಿರಿಸಲು ಭಾರತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನ ಟೆಕ್ ಬೆನ್ನೆಲುಬಾದ ಕೋವಿನ್ ಬಳಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್.ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿನ್ ಮರುರೂಪಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಮತ್ತು ದೈನಂದಿನ ಲಸಿಕೆಗಳ ಸ್ಲಾಟ್‌ಗಳನ್ನ ಕಾಯ್ದಿರಿಸಲು ಟೆಕ್ ಪ್ಲಾಟ್ಫಾರ್ಮ್ ಅಂತಿಮವಾಗಿ ಹೊರತರುವುದು. ಇದು “ಕೆಲವೇ ತಿಂಗಳುಗಳ ವಿಷಯವಾಗಿದೆ” ಎಂದರು. “ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮಕ್ಕಾಗಿ ವೇದಿಕೆಯನ್ನ ಈಗ ಮರುರೂಪಿಸಲಾಗುತ್ತಿದೆ. ಕೋವಿನ್ ತನ್ನದೇ ಆದ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳುತ್ತದೆ. ಆದ್ರೆ, ರೋಗನಿರೋಧಕ ಕಾರ್ಯಕ್ರಮದ ವ್ಯಾಪ್ತಿಯನ್ನು ಟ್ರ್ಯಾಕ್ ಮಾಡುವುದು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ” ಎಂದು ಅವರು ಹೇಳಿದರು. ಕೋವಿನ್ ಕೋವಿಡ್ ಲಸಿಕೆಗಳ ವಿಷಯದಲ್ಲಿ ಮಾಡಿದಂತೆ, ಪೋಷಕರಿಗೆ ಜ್ಞಾಪನೆಗಳನ್ನ ಕಳುಹಿಸುವುದನ್ನ ಮುಂದುವರಿಸುತ್ತದೆ. “ಉದಾಹರಣೆಗೆ: ನಿಮ್ಮ ಮಗುವಿನ ಪೋಲಿಯೊ ಲಸಿಕೆ ಬಾಕಿಯಿದ್ದರೆ ಅಥವಾ ಮುಂಬರುವದಾಗಿದ್ದರೆ, ವ್ಯವಸ್ಥೆಯು ಪೋಷಕರಿಗೆ ಜ್ಞಾಪನಾ ಸಂದೇಶಗಳನ್ನ…

Read More

ಬೆಂಗಳೂರು : ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು. https://kannadanewsnow.com/kannada/what-former-cm-siddaramaiah-says-is-not-a-vedic-word-cm-bommai/  ಬೆಂಗಳೂರಿನ ಶಕ್ತಿಭವನದಲ್ಲಿ ಮಾಧ್ಯಮದವರೊಂದಿಗೆ ಇಂದು ಮಾತನಾಡಿದಂತ ಅವರು, ಪ್ರವೀಣ್ ಹತ್ಯೆ ವ್ಯವಸ್ಥಿತವಾಗಿ ಆಗಿದೆ ಹಾಗೂ ಇದೊಂದು ಅಂತರರಾಜ್ಯ ವಿಚಾರವಾಗಿದೆ. ಡಿಜಿ, ಐಜಿ ಅವರ ಬಳಿ ಚರ್ಚಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸೂಚಿಸಲಾಗಿದೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮಾಹಿತಿ ಪಡೆದ ನಂತರ ಗೃಹ ಇಲಾಖೆ ಪತ್ರ ಬರೆಯಲಿದೆ. ಕೇರಳ ಗಡಿಯಲ್ಲಿ ಎರಡು ರಾಜ್ಯಗಳ ಸಂಪರ್ಕಿಸುವ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಚೆಕ್ ಪೋಸ್ಟ್ ಗಳನ್ನು ಹಾಕಲಾಗುವುದು. ಸೂಕ್ಷ್ಮ ಊರುಗಳಲ್ಲಿ ತಾತ್ಕಾಲಿಕ ಪೋಲಿಸ್ ಕ್ಯಾಂಪ್‍ಗಳು, ಹಲವಾರು ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ತೆಗೆದುಕೊಳ್ಳಬೇಕು, ರಾತ್ರಿ ಗಸ್ತನ್ನು ಹೆಚ್ಚಿಸಬೇಕು ಹಾಗೂ ಕೆ.ಎಸ್.ಆರ್.ಪಿಯ ಮತ್ತೊಂದು ತುಕಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜಿಸಲು ಸೂಚಿಸಲಾಗಿದೆ ಎಂದರು. https://kannadanewsnow.com/kannada/dc-orders-ban-on-sale-of-liquor-across-dakshina-kannada-district-from-today-till-august-1/…

Read More

ಪುತ್ತೂರು :  ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. https://kannadanewsnow.com/kannada/night-curfew-imposed-across-dakshina-kannada-district-from-today-till-august-1/ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ  ಪ್ರವೀಣ್ ಈ ಭಾಗದಲ್ಲಿ ಬೆಳೆಯುತ್ತಿದ್ದ ನಾಯಕ. ಪ್ರವೀಣ್‍ನನ್ನು ಕಳೆದುಕೊಂಡದ್ದು ತುಂಬಲಾರದ ನಷ್ಟವಾಗಿದೆ. ಈ ರೀತಿಯ ಸಾವು ಮರುಕಳಿಸದಂತೆ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಯುವ ಮೋರ್ಚಾ 15 ಲಕ್ಷ ರೂ. ನೀಡುತ್ತದೆ. ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ. ಪಕ್ಷ 25 ಲಕ್ಷ ರೂ. ನೀಡಿದೆ. ಸಮಸ್ತ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಸ್ಲಾಮೀ ಜಿಹಾದ್‍ನ್ನು ಮೂಲದಿಂದ ಉಚ್ಚಾಟನೆ ಮಾಡೋದಕ್ಕೆ ನಾವು ಬದ್ಧ ಎಂದು ಭರವಸೆ ಕೊಟ್ಟರು. https://kannadanewsnow.com/kannada/night-curfew-imposed-across-dakshina-kannada-district-from-today-till-august-1/ ಪ್ರವೀಣ್ ಸಾವು ಆಗಬಾರದಿತ್ತು. ಪ್ರತಿ ಬಾರಿ ಕಾರ್ಯಕರ್ತರನ್ನು ಬೀಳ್ಕೊಟ್ಟಾಗಲೂ ಈ ಮಾತು ಹೇಳುತ್ತೇವೆ. ಈ ಬಾರಿ ಇಡೀ ರಾಜ್ಯ, ದೇಶ ಎಚ್ಚೆತ್ತಿದೆ. ಈಗಾಗಲೇ ಇಬ್ಬರ ಬಂಧನವಾಗಿದೆ. ಪ್ರವೀಣ್ ಅವರ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯ ಮಗನೇ…

Read More

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Farmer CM Siddaramaiah ) ಹೇಳುವುದೆಲ್ಲಾ ವೇದವಾಕ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ ಅವರು, ಸಿದ್ಧರಾಮಯ್ಯ ಅವರ ಕಾಲದಲ್ಲಿ 32 ಸರಣಿ ಕೊಲೆಗಳಾಗಿದ್ದವು. ಆಗ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಎಲ್ಲಾ ವಿಷಯಗಳಲ್ಲಿ ರಾಜಕಾರಣವನ್ನು ಮಾಡಬಾರದು. ಅವರ ಹೇಳಿಕೆಗೆ ಹೆಚ್ಚಿನ ಮಹತ್ವವಿಲ್ಲ ಎಂದರು. https://kannadanewsnow.com/kannada/night-curfew-imposed-across-dakshina-kannada-district-from-today-till-august-1/ ಶಾಸಕ ತನ್ವೀರ್ ಸೇಠ್ ಮೇಲೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಯ ಸುಮಾರು 200 ಜನರನ್ನು ದಾಳಿ ನಡೆಸಿದ ಪ್ರಕರಣದಿಂದ ಅವರನ್ನು ಮುಕ್ತಗೊಳಿಸಲಾಗಿತ್ತು. ಅವರು ಈಗ ಪುನ: ಸಮಾಜಘಾತುಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೇವಲ ಹೇಳಿಕೆಗಳನ್ನು ನೀಡುತ್ತಾರೆ ಎಂದರು. ಸರ್ಕಾರ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಜನರ ಮುಂದಿವೆ. ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿರುವುದೇ ಬಿಜೆಪಿ ಪಕ್ಷ ಎಂಬುದು ಅತ್ಯಂತ ಹಾಸ್ಯಾಸ್ಪದವಾದ ಹೇಳಿಕೆ.…

Read More

ದಕ್ಷಿಣ ಕನ್ನಡ ಜಿಲ್ಲೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ( Praveen Nettaru Murder Case ) ಬಳಿಕ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲದೇ ನಿನ್ನೆ ಮುಸ್ಲೀಂ ಯುವಕನ ಹತ್ಯೆ ಬಳಿಕ ಮತ್ತಷ್ಟು ಉದ್ವಿಗ್ನಗೊಂಡಿದೆ. ಹೀಗಾಗಿ ಇಂದಿನಿಂದ ಆಗಸ್ಟ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮದ್ಯಮಾರಾಟವನ್ನು ( liquor Sale )ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. https://kannadanewsnow.com/kannada/state-govt-fixes-rules-for-bars-pubs-and-mid-shops-warning-of-legal-action-if-found-guilty/ ಈ ಕುರಿತಂತೆ ಆದೇಶ ಹೊರಡಿಸಿರುವಂತ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು, ದಿನಾಂಕ 26-07-2022ರಂದು ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆಯಲ್ಲಿ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ತೆರಳೋದಕ್ಕೆ ಪ್ರವೀಣ್ ನೆಟ್ಟಾರ್ ತಮ್ಮ ಬೈಕ್ ನಲ್ಲಿ ಕುಳಿತಿದ್ದಂತ ಸಂದರ್ಭದಲ್ಲಿ, ಮೂವರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ, ಅವರು ತೀವ್ರಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/decision-to-hand-over-hindu-activist-praveen-nettars-murder-case-to-nia-cm-bommai/ ಈ ಹಿನ್ನಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿರುತ್ತದೆ. ಮುಂದುವರೆದು…

Read More

ಯುಎಇ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗುರುವಾರ ಭಾರೀ ಮಳೆಯಾಗಿದ್ದು, ಪರಿಣಾಮ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗದೆ. ಶಾರ್ಜಾ ಮತ್ತು ಫುಜೈರಾದಿಂದ ರಕ್ಷಣಾ ತಂಡ ಜನರನ್ನು ರಕ್ಷಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗ್ತಿವೆ. https://twitter.com/rehmanspore/status/1552644349350928386 ಮಳೆಯಿಂದಾಗಿ ಎರಡು ನಗರಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದ್ದು, ವಿಶೇಷವಾಗಿ ಫುಜೈರಾ ಅದರ ಪರ್ವತ ಭೂಪ್ರದೇಶ ಮತ್ತು ಕಣಿವೆಗಳಲ್ಲಿ ಅಪಾರ ಹಾನಿಯಾಗಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಕಡಿಮೆ ಮಳೆಯಾಗಿದ್ದು,ಪ್ರವಾಹದಿಂದ ಪಾರಾಗಲು ಅನೇಕ ಜನರು ಹೋಟೆಲ್‌ಗಳು ಮತ್ತು ಇತರ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿದೆ. ಪ್ರವಾಹದ ಕುರಿತಾದ ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಫುಜೈರಾದ ಬೀದಿಗಳಲ್ಲಿ ನಿಲ್ಲಿಸಿದ ಕಾರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವುದನ್ನು ತೋರಿಸುತ್ತವೆ. ಇದು ಈಗಾಗಲೇ ಕಲ್ಬಾ ಮಾರುಕಟ್ಟೆಯಲ್ಲಿ ಖಾಲಿ ಅಂಗಡಿಗಳನ್ನು ಪ್ರವೇಶಿಸುತ್ತಿದೆ. https://twitter.com/sirajnoorani/status/1552687609465356288 ಮತ್ತೊಂದು ವೀಡಿಯೊವು ನಗರದ ಪ್ರವೇಶದ್ವಾರದ ರಸ್ತೆಗಳು ಪ್ರವಾಹದಿಂದಾಗಿ ಕೆಟ್ಟದಾಗಿ ಹಾನಿಗೊಳಗಾಗಿರುವುದನ್ನು ತೋರಿಸುತ್ತದೆ. ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ಕಾರುಗಳು ಚಾಲನೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಡಾಂಬರು ಕಿತ್ತು…

Read More