Author: KNN IT TEAM

ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಜಲ್ಪೇಶ್‌ಗೆ ತೆರಳುತ್ತಿದ್ದ ಪ್ರಯಾಣಿಕರಿದ್ದ ಪಿಕಪ್ ವ್ಯಾನ್‌ಗೆ ವಿದ್ಯುತ್ ಸ್ಪರ್ಶ ಉಂಟಾದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಘಟನೆ ನಡೆದ ಕೂಡಲೇ ಪ್ರಯಾಣಿಕರನ್ನು ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ವ್ಯಾನ್‌ನಲ್ಲಿದ್ದ 27 ಜನರ ಪೈಕಿ 10 ಮಂದಿ ಸಾವನ್ನಪ್ಪಿದ್ದು, 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನು ಚಿಕಿತ್ಸೆಗಾಗಿ ಜಲ್ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಾನ್‌ನಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‌ನ ವೈರಿಂಗ್‌ನಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. “ಇಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೆಖ್ಲಿಗಂಜ್ ಪಿಎಸ್ ವ್ಯಾಪ್ತಿಯ ಧಾರ್ಲಾ ಸೇತುವೆಯಲ್ಲಿ ಜಲ್ಪೇಶ್‌ಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕ್ ಅಪ್ ವ್ಯಾನ್‌ಗೆ ವಿದ್ಯುತ್ ಸ್ಪರ್ಶದ ಘಟನೆ ನಡೆದಿದೆ. ಜನರೇಟರ್ (ಡಿಜೆ ಸಿಸ್ಟಮ್) ವೈರಿಂಗ್‌ ಕಟ್‌ಆಗಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ…

Read More

ಅರ್ಜೀಲಿಂಗ್ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಧುಧಿಯಾದಲ್ಲಿ ಬಾಲಸೋನ್ ನದಿಯಲ್ಲಿ ಪಿಕ್ನಿಕ್‌ಗೆ ತೆರಳಿ, ಅಲ್ಲೇ ಸಿಲುಕಿದ್ದ 11 ಕಾಲೇಜು ವಿದ್ಯಾರ್ಥಿಗಳ ಗುಂಪನ್ನು ಅಗ್ನಿಶಾಮಕ ದಳದವರು ಭಾನುವಾರ ರಕ್ಷಿಸಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿದ್ಯಾರ್ಥಿಗಳ ಗುಂಪು ಧುಧಿಯಾಗೆ ಭೇಟಿ ನೀಡಿತು ಎಂದು ವರದಿಯಾಗಿದೆ. ಬೆಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾದ ಪರಿಣಾಮ ವಿದ್ಯಾರ್ಥಿಗಳು ಅಲ್ಲೇ ಸಿಲುಕಿದ್ದರು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಧುಧಿಯಾ ಪ್ರದೇಶದಲ್ಲಿ ನದಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೊನೆಗೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಎಂಟು ಗಂಟೆಗಳ ಕಠಿಣ ಪ್ರಯತ್ನದ ನಂತರ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲಾಯಿತು. https://kannadanewsnow.com/kannada/prohibitory-orders-under-section-144-imposed-in-dakshina-kannada-district-till-august-6/ https://kannadanewsnow.com/kannada/cwg-2022-achinta-sheuli-lifts-games-record-313kg-to-win-indias-third-gold/ https://kannadanewsnow.com/kannada/here-is-the-list-of-bank-holidays-for-the-month-of-august/

Read More

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank of India – RBI) ರಜಾದಿನಗಳ ವೇಳಾಪಟ್ಟಿಯ ( bank holiday ) ಪ್ರಕಾರ, 2022 ರ ಆಗಸ್ಟ್ನಲ್ಲಿ ಆರು ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ, ಬ್ಯಾಂಕುಗಳನ್ನು ಒಟ್ಟು 12 ದಿನಗಳವರೆಗೆ ಮುಚ್ಚಲಾಗುತ್ತದೆ. ಆಗಸ್ಟ್ ನಲ್ಲಿ ಒಟ್ಟು 18 ಬ್ಯಾಂಕ್ ರಜಾದಿನಗಳಿವೆ. ಅನೇಕ ಬ್ಯಾಂಕ್ ರಜಾದಿನಗಳು ಪ್ರಾದೇಶಿಕವಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಮತ್ತು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಇಂಫಾಲದ ಪ್ರಾದೇಶಿಕ ರಜಾದಿನವಾದ ಪೇಟ್ರಿಯಾಟ್ಸ್ ಡೇ, ಆಗಸ್ಟ್ 13 ರಂದು, ಅಂದರೆ ತಿಂಗಳ ಎರಡನೇ ಶನಿವಾರ, ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡಲಿವೆ. ಇದಲ್ಲದೇ ಇತರ 13 ಪ್ರಾದೇಶಿಕ ರಜಾದಿನಗಳಂತೆ ಬ್ಯಾಂಕ್ ಬಂದ್ ಆಗಿರಲಿವೆ. ಈ ಪರಿಣಾಮವಾಗಿ, 19 ರಜಾದಿನಗಳ ಬದಲಿಗೆ, ಈ ತಿಂಗಳು ಕೇವಲ 18 ರಜಾದಿನಗಳು ಮಾತ್ರ ಇರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ: ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜಾದಿನಗಳು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು ಮತ್ತು ರಿಯಲ್-ಟೈಮ್…

Read More

ಬರ್ಮಿಂಗ್‌ಹ್ಯಾಮ್ (ಯುಕೆ): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್(Commonwealth Games) 2022 ರ ಪುರುಷರ 73 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ(Achinta Sheuli) 313 ಕೆಜಿಯಷ್ಟು ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ G🔥LD FOR ACHINTA 🥇 Beaming with confidence, the 20-yr old debutant #AchintaSheuli puts up a dominating performance to bag 3️⃣rd GOLD for 🇮🇳 at @birminghamcg22 Creating Games Record & winning 🥇with a total lift of 313Kg in Men’s 73kg 🏋‍♂️Final at #B2022 #Cheer4India 1/1 pic.twitter.com/EWpW4uVK7t — SAI Media (@Media_SAI) July 31, 2022 Achinta Sheuli bags #TeamIndia’s third 🥇 at @birminghamcg22 👏🎆 All three gold medals so far have been won by our weightlifters…

Read More

ವಿಜಯಪುರ : ನಿನ್ನೆ ರಾತ್ರಿ ಸುರಿದ  ಭಾರೀ ಮಳೆಯಿಂದ  ಡೋಣಿ ನದಿಯೂ ತುಂಬಿ ಹರಿಯುತ್ತಿದೆ. ರಾಜ್ಯ ಹೆದ್ದಾರೊ 61ರ ಕೆಳಸೇತುವೆ ಮೇಲೆ ನೀರು ಹರಿಯುತ್ತಿದೆ. ನದಿಯಲ್ಲಿ ಮತ್ತಷ್ಟು ನೀರು ಏರಿಕೆಯಾದರೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ಇರುವ ಕೆಳಸೇತುವೆ ಮುಳುಗಡೆಯಾಗಿದೆ. https://kannadanewsnow.com/kannada/activists-police-clash-during-protest-at-home-ministers-residence-more-than-40-activists-arrested/ ರಾಜ್ಯ ಹೆದ್ದಾರಿ ಮೇಲಿನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ ನದಿಗೆ ನಿರ್ಮಿಸಿರುವ ಮುಖ್ಯ ಸೇತುವೆ ಶಿಥಿಲಗೊಂಡ ಕಾರಣ ಪ್ರಮುಖ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.  ಹಳೇ ಕೆಳಸೇತುವೆ ದುರಸ್ತಿಗೊಳಿಸಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಬ್ರಿಡ್ಜ್‌ ಮುಳುಗಿದ್ರೆ ವಿಜಯಪುರ -ತಾಳಿಕೋಟೆ ಸಂಪರ್ಕ ಕಟ್‌ ಆಗಲಿದೆ https://kannadanewsnow.com/kannada/activists-police-clash-during-protest-at-home-ministers-residence-more-than-40-activists-arrested/

Read More

ಶಿವಮೊಗ್ಗ : ಎಬಿವಿಪಿ ಕಾರ್ಯಕರ್ತರ ನೋವು ಏನೆಂಬುದು ನಮಗೆ ಅರ್ಥವಾಗುತ್ತದೆ. ರಾಜ್ಯ ಸರ್ಕಾರ ಪ್ರವೀಣ್ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ. https://kannadanewsnow.com/kannada/delhi-reverts-to-old-liquor-sale-policy-after-new-rules-spark-row/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಬಿವಿಪಿ ಕಾರ್ಯಕರ್ತರ ನೋವು, ಆಕ್ರೋಶವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ರಾಜ್ಯದಲ್ಲಿ ಸಾವು,ನೋವುಗಳ ನಡೆದಾಗ ಸರ್ಕಾರವನ್ನು ಎಚ್ಚರಗೊಳಿಸುವುದು ಸಹಜ, ಮತಾಂಧ,ದುಷ್ಟಶಕ್ತಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನನಗೆ ರಾಜೀನಾಮೆ ಕೇಳುತ್ತಿದ್ದಾರೆ. ಅವರ ಅವಧಿಯಲ್ಲಿ 2 ಸಾವಿರ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಅವರ ಸರ್ಕಾರದಲ್ಲಿ ಮಾಡಿದ್ದನ್ನು ಸರಿಪಡಿಸಲು ಸಮಯಾವಕಾಶಬೇಕು. ನಮ್ಮ ರಾಜೀನಾಮೆ ಬಗ್ಗೆ ಕೇಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. https://kannadanewsnow.com/kannada/bigg-news-%e0%b2%9c%e0%b2%ae%e0%b3%8d%e0%b2%ae%e0%b3%81%e0%b2%95%e0%b2%be%e0%b2%b6%e0%b3%8d%e0%b2%ae%e0%b3%80%e0%b2%b0%e0%b2%a6-%e0%b2%ac%e0%b2%be%e0%b2%b0%e0%b2%be%e0%b2%ae%e0%b3%81%e0%b2%b2/

Read More

ನವದೆಹಲಿ : ಆಮ್ ಆದ್ಮಿ ಪಕ್ಷದ ಹಳೆಯ ಮದ್ಯ ನೀತಿಯು ಆಗಸ್ಟ್ 1 ರಿಂದ ಮತ್ತೆ ಜಾರಿಗೆ ಬರಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ದೆಹಲಿ ಪೊಲೀಸ್‌ ಆರ್ಥಿಕ ಅಪರಾಧ ವಿಭಾಗದಿಂದ (ಇಒಡಬ್ಲ್ಯು) ನಡೆಯುತ್ತಿರುವ ತನಿಖೆ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ದೆಹಲಿ ಸರ್ಕಾರದ ನಡುವಿನ ಮುಖಾಮುಖಿಯ ನಡುವೆ ರಾಷ್ಟ್ರ ರಾಜಧಾನಿಯಲ್ಲಿನ ಮದ್ಯ ನೀತಿಯ ಸುದ್ದಿ ಹೊಸ ತಿರುವು ಪಡೆದುಕೊಂಡಿದೆ. ದೆಹಲಿ ಸರ್ಕಾರವು ಮುಂದಿನ ಆರು ತಿಂಗಳ ಕಾಲ ಚಿಲ್ಲರೆ ಮದ್ಯ ಮಾರಾಟದ ಹಳೆಯ ನೀತಿ ಮುಂದುವರಿಸಲು ನಿರ್ಧರಿಸಿದೆ. https://kannadanewsnow.com/kannada/bigg-news-you-have-destroyed-karnataka-which-was-like-a-garden-of-peace-for-all-says-former-cm-hdk-against-cm-bommai/ ಇದೇ ವೇಳೆ ಸರ್ಕಾರದ ನೂತನ ಮದ್ಯ ನೀತಿಯನ್ನು ಸಮರ್ಥಿಸಿಕೊಂಡಿರುವ ಸಿಸೋಡಿಯಾ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ನೀತಿ ಜಾರಿಯಾಗಿದೆ ಎಂದು ಹೇಳಿದ್ದಾರೆ. ಅಬಕಾರಿ ಖಾತೆಯನ್ನು ಹೊಂದಿರುವ ಸಿಸೋಡಿಯಾ, ಹೊಸ ನೀತಿಯನ್ನು ಜಾರಿಗೆ ತರುವವರೆಗೆ ಆರು ತಿಂಗಳ ಅವಧಿಗೆ ಅಬಕಾರಿ ನೀತಿಯ ಹಳೆಯ ನೀತಿಯೇ ಮುಂದುವರೆಸುವಂತೆ ಗುರುವಾರ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗುತ್ತಿದೆ.…

Read More

ಬೆಂಗಳೂರು :  ರಾಜ್ಯದಲ್ಲಿ ಸರಣಿ ಹತ್ಯೆ ಪ್ರಕರಣ ಖಂಡಿಸಿ ಹಾಗೂ ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ತೀವ್ರಕೊಂಡ ಬೆನ್ನಲ್ಲೇ 40 ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/i-will-visit-the-residence-of-the-three-murdered-people-h-d-kumaraswamy-clarified/ ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಮನೆ ಬಳಿ ಬೆಳಿಗ್ಗೆಯಿಂದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೃಹ ಸಚಿವರ ಮನೆ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆಯಲು ಮುಂದಾಗುತ್ತಿದ್ದಂತೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ 40 ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/i-will-visit-the-residence-of-the-three-murdered-people-h-d-kumaraswamy-clarified/ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಬಿವಿಪಿ ಕಾರ್ಯಕರ್ತರು ಪೊಲೀಸರನ್ನು ಲೆಕ್ಕಿಸದೇ ಗೃಹ ಸಚಿವರ ಮನೆಯ ಗೇಟ್ ಗಳನ್ನು ತಳ್ಳಿ ಒಳನುಗ್ಗಿದ್ದು,…

Read More

ಜಮ್ಮು ಮತ್ತು ಕಾಶ್ಮೀರ : ಜಮ್ಮು& ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್​​ನಲ್ಲಿ ಸಿಕ್ಕಿಬಿದ್ದ ಇಬ್ಬರು ಭಯೋ ಭಯೋತ್ಪಾದಕರ ಪೈಕಿ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. https://twitter.com/KashmirPolice/status/1553229296122019840 ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದ ವನಿಗಂ ಬಾಲಾದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಭಯೋತ್ಪಾದಕರು ಮತ್ತು ಸೇನೆಯ ನಡುವೆ ಎನ್‌ಕೌಂಟರ್ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯೊಂದಿಗೆ ನಂಟು ಹೊಂದಿದ್ದ ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ಬಂಧಿಸಿತ್ತು. https://kannadanewsnow.com/kannada/bigg-news-you-have-destroyed-karnataka-which-was-like-a-garden-of-peace-for-all-says-former-cm-hdk-against-cm-bommai/

Read More

ಬೀದರ್‌ : ಬಿಜೆಪಿ ಕಾರ್ಯಕರ್ತ ಪ್ರವೀಣ್‌ಹತ್ಯೆ ಬೆನ್ನಲ್ಲೇ ಫಾಜಿಲ್‌ ಕೊಲೆ ನಡೆದಿದೆ. ರಾಜ್ಯದಲ್ಲಿ ಸರಣೆ ಕೊಲೆ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಮಾತನಾಡಿ ಕೊಲೆಯಾದ ಮೂವರ ನಿವಾಸಕ್ಕೆ ಭೇಟಿ ನೀಡುತ್ತೇನೆ ಎಂದು  ಪ್ರತಿಕ್ರಿಯಿಸಿದ್ದಾರೆ.  https://kannadanewsnow.com/kannada/kcet-results-2022-yelahanka-national-colleges-unique-first-rank-heres-the-list-of-rank-recipients/ ಪ್ರವೀಣ್‌ ಕೊಲೆ ಕೇಸ್‌ ಎನ್‌ಐಎಗೆ ಕೊಡುವುದಾಗಿ ಹೇಳಿದ್ದಾರೆ ಈವರೆಗೆ ಎನ್‌ಐಎಗೆ ಕೊಟ್ಟಿರುವ ಕೇಸ್‌ ಏನಾಗಿದೆ ಅಂತಾ ಗೊತ್ತಿಲ್ಲ. ಎನ್‌ಐಎಗೆ ನೀಡಿ 5-6 ವರ್ಷ ಕಳೆದರೂ ಏನಾಗಿದೆ ಅಂತಾ ಗೊತ್ತಿಲ್ಲ ಪ್ರವೀಣ್‌ ಕೊಲೆ ತನಿಖೆ ರಾಜ್ಯದ ಅಧಿಕಾರಿಗಳಿಗೆ ಕೊಡಿ. https://kannadanewsnow.com/kannada/kcet-results-2022-yelahanka-national-colleges-unique-first-rank-heres-the-list-of-rank-recipients/  ಹಿಂದುತ್ವದ ಹೆಸರಲ್ಲಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಯುವಕರನ್ನು ಬಿಜೆಪಿ ನಾಯಕರು ಗುಲಾಮರನ್ನಾಗಿ ಮಾಡ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಾವುದೆ ಕೊಲೆ ನಡೆಯಲಿಲ್ಲ ಬಿಜೆಪಿ ಅವಧಿಯಲ್ಲಿ ಯಾಕೆ ಕೊಲೆಯಾಗ್ತಿದೆ ಎಂದು ಹೆಚ್ಚಿಕೆ ಪ್ರಶ್ನಿಸಿದ್ದಾರೆ

Read More