Subscribe to Updates
Get the latest creative news from FooBar about art, design and business.
Author: KNN IT TEAM
ಭೋಪಾಲ್ : ಮಧ್ಯಪ್ರದೇಶದ ಸಾಗರ್‌ನಲ್ಲಿ ಒಂದೇ ಸಿರಿಂಜ್ ಬಳಸಿ 30 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಪ್ರಕರಣ ನಡೆದ ಕೆಲ ದಿನಗಳಲ್ಲೆ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಹ್ದೋಲ್ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತಾಯಿಯ ಮೃತದೇಹವನ್ನು ತನ್ನ ಬೈಕ್ನಲ್ಲಿಯೇ ಇಟ್ಟುಕೊಂಡು ಸುಮಾರು 80 ಕಿ.ಮೀ ಸಾಗಿರುವ ಘಟನೆ ನಡೆದಿದೆ. ಖಾಸಗಿ ವಾಹನಗಳ ವ್ಯಕ್ತಿಯ ಗ್ರಾಮ ಮೃತದೇಹವನ್ನು ಸಾಗಿಸಲು 5 ಸಾವಿರ ರೂ.ಗಳನ್ನು ಕೇಳಿದ್ದು, ಈತನ ಬಳಿ ಹಣ ವದಗಿಸಲಾಗದೇ ವ್ಯಕ್ತಿ ತನ್ನ ಬೈಕ್‌ನಲ್ಲೇ ಹೊತ್ತು ಸಾಗಿದ್ದಾನೆ ಎನ್ನಲಾಗುತ್ತಿದೆ. https://twitter.com/Anurag_Dwary/status/1553970204618551296 ಎದೆ ನೋವಿನಿಂದ ಅನುಪ್ಪುರಾದ ಗೊಡಾರು ಗ್ರಾಮದ ನಿವಾಸಿ ಜೈಮಾಂತ್ರಿ ಯಾದವ್ ಎಂಬುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ರೋಗಿಯ ಮಗ ಸುಂದರ್ ಯಾದವ್, ಜಿಲ್ಲಾಸ್ಪತ್ರೆಯ ದಾದಿಯರು ನಿರ್ಲಕ್ಷ್ಯದ ಚಿಕಿತ್ಸೆಯಿಂದ ತಾಯಿ ಸಾವನ್ನಪ್ಪಿದ್ದು, ಆಕೆಯ ಸಾವಿಗೆ…
ವಾರಣಾಸಿ: ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದಲ್ಲಿ ಮಸೀದಿ ಸಮಿತಿಯನ್ನು ಪ್ರತಿನಿಧಿಸುತ್ತಿದ್ದ ವಕೀಲ ಅಭಯ್ ನಾಥ್ ಯಾದವ್(62 ವರ್ಷ) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅಭಯ್ ನಾಥ್ ಯಾದವ್ ಅವರು ಭಾನುವಾರ ರಾತ್ರಿ ನಿಧನರಾಗಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಯಾದವ್ ಜ್ಞಾನವಾಪಿ ಪ್ರಕರಣದಲ್ಲಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸುತ್ತಿದ್ದ ಪ್ರಮುಖ ವಕೀಲರಾಗಿದ್ದರು. ಅಲಹಾಬಾದ್ ಹೈಕೋರ್ಟ್ ಕಳೆದ ವಾರ ಹಿಂದೂ ಅರ್ಜಿದಾರರ ಪೂಜೆಯ ಹಕ್ಕನ್ನು ಕೋರಿ 1991 ರ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 3 ಕ್ಕೆ ಮುಂದೂಡಿತ್ತು. https://kannadanewsnow.com/kannada/earth-is-suddenly-rotating-faster-and-effect-could-be-devastating-know-why/ https://kannadanewsnow.com/kannada/delhi-cm-arvind-kejriwal-visit-gujarat-today/ https://kannadanewsnow.com/kannada/no-hearse-van-madhya-pradesh-man-forced-to-tie-mothers-body-to-bike/
ನವದೆಹಲಿ : ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಉತ್ತಮ ವರದಿ ಮತ್ತು ಆರ್ಥಿಕ ಚೇತರಿಕೆಯಿಂದಾಗಿ ವರ್ಷದಿಂದ ವರ್ಷಕ್ಕೆ (y-o-y) ಶೇಕಡಾ 28ರಷ್ಟು ಏರಿಕೆಯಾಗಿ 1,48,995 ಕೋಟಿ ರೂ.ಗೆ ತಲುಪಿದೆ. ಇದು ಎರಡನೇ ಅತಿ ಹೆಚ್ಚು ಜಿಎಸ್ಟಿ ಆದಾಯ ಸಂಗ್ರಹವಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ ಜೂನ್‌ನಲ್ಲಿ 1,44,616 ಕೋಟಿ ರೂಪಾಯಿ ಸಂಗ್ರಹವಾಗಿದೆ. https://twitter.com/ANI/status/1553993208186957824?s=20&t=i3H8F48xH_anQNp-n6KI6g ಜುಲೈ 2022ರಲ್ಲಿ ಜಿಎಸ್ಟಿ ಸಂಗ್ರಹವು ಏಪ್ರಿಲ್ 2022ರ 1,67,540 ಕೋಟಿ ರೂ.ಗಳ ನಂತ್ರ ಎರಡನೇ ಅತ್ಯಧಿಕವಾಗಿದೆ. ಜಿಎಸ್ಟಿ ಪ್ರಾರಂಭವಾದಾಗಿನಿಂದ ಮಾಸಿಕ ಜಿಎಸ್ಟಿ ಸಂಗ್ರಹವು 1.40 ಲಕ್ಷ ಕೋಟಿ ರೂ.ಗಳ ಗಡಿಯನ್ನ ದಾಟಿರುವುದು ಇದು ಆರನೇ ಬಾರಿಯಾಗಿದೆ. ಇನ್ನು ಮಾರ್ಚ್ 2022ರಿಂದ ಸತತ ಐದನೇ ತಿಂಗಳಾಗಿದೆ. “ಜುಲೈ 2022ರಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ಟಿ ಆದಾಯವು 1,48,995 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್ಟಿ 25,751 ಕೋಟಿ ರೂ., ಎಸ್ಜಿಎಸ್ಟಿ 32,807 ಕೋಟಿ ರೂ., ಐಜಿಎಸ್ಟಿ 79,518 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,420 ಕೋಟಿ…
ಭೋಪಾಲ್: ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮೃತ ತಾಯಿಯ ಶವವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದ ಕಾರಣ 80 ಕಿಮೀ ದೂರ ಬೈಕ್‌ನಲ್ಲೇ ಕ್ರಮಿಸಿ ಮೃತದೇಹವನ್ನು ಕೊಂಡಿಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಅನುಪ್ಪೂರಿನ ಗೋಡಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾಳೆ. ನಂತ್ರ ರೋಗಿಯ ಮಗ ಸುಂದರ್ ಯಾದವ್ ರೋಗಿಯ ಮಗ ಸುಂದರ್ ಯಾದವ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡುವಂತೆ ಕೇಳಿಕೊಂಡಿದ್ದಾರೆ. ಆದ್ರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದ ಮಂಡಳಿ ವಿಷಯವನ್ನು ನಿರಾಕರಿಸಿದೆ. ಹೀಗಾಗಿ, ಖಾಸಗಿ ವಾಹನದ ವ್ಯವಸ್ಥೆಗೆ ಮುಂದಾದ ಯಾದವ್‌ನನ್ನು 5,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣ ಇಲ್ಲದ ಸುಂದರ್, 100 ರೂ.ಗೆ ಮರದ ಚಪ್ಪಡಿ ಖರೀದಿಸಿ, ಅದಕ್ಕೆ ತಾಯಿಯ ಶವವನ್ನು ಕಟ್ಟಿಕೊಂಡು 80 ಕಿ.ಮೀ ದೂರದ ಅನುಪ್ಪುರ್…
ಮಂಗಳೂರು: ದಕ್ಷಿಣಕನ್ನಡದಲ್ಲಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಪ್ರವೀಣ್ ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆಯಿದೆ. ಅದಕ್ಕೆ ಮೊದಲು ಅದನ್ನು ಹೆಚ್ಚಿಸಬೇಕು ಎಂದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. https://kannadanewsnow.com/kannada/monkeypox-vs-chickenpox-key-differences-according-to-doctors/ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ದಿನಗಳಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿವೆ. ಮಸೂದ್ ಕೊಲೆ ಪ್ರಕರಣಲ್ಲಿ ಎಂಟು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ. ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಉಳಿದ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇನ್ನು ಫಾಝಿಲ್ ಹತ್ಯೆಯ ಬಗ್ಗೆ ತನಿಖೆ ನಡೆಸಿದ್ದೇವೆ. ಈ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿದೆ. ಕೃತ್ಯಕ್ಕೆ ಬಳಸಿದ ಕಾರು ಪತ್ತೆಯಾಗಿದೆ. ಅದರಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದರು.
ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022ನೇ ಸಾಲಿನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಯುವ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ಭಾರತಕ್ಕೆ 3ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇವರಿಗೆ ನೂತನ ರಾಷ್ಟ್ರಪತಿ ದ್ರೌಪತಿ ಮುರ್ಮು ಶುಭ ಕೋರಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕ್ರೀಡಾಪಟು ಅಚಿಂತಾ ಶೆಯುಲಿಯವರು ಕಾಮನ್ ವೆಲ್ತ್ಗೇಮ್ನಲ್ಲಿ ಚಿನ್ನವನ್ನು ಗೆಲ್ಲುವ ಮೂಲಕ ತ್ರಿವರ್ಣವನ್ನು ಎತ್ತರಕ್ಕೆ ಹಾರಿಸುವ ಹಾರಿಸಿದ್ದಾರೆ. ಇದು ಭಾರತ ಹೆಮ್ಮೆ ಪಡುವಂತಹ ಕ್ಷಣವಾಗಿದೆ. ನೀವು ಇತಿಹಾಸವನ್ನು ರಚಿಸಿದ ಚಾಂಪಿಯನ್. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದಿದ್ದಾರೆ. https://twitter.com/rashtrapatibhvn/status/1553934961048072192 ಪುರುಷರ 73 ಕೆಜಿ ವಿಭಾಗದ ಫೈನಲ್‌ನಲ್ಲಿ ಅಚಿಂತಾ ಶೆಯುಲಿ 313 ಕೆಜಿಯಷ್ಟು ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಸಾಧನೆ ಮಾಡಿದರು. 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 3 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು 6 ಪದಕಗಳು ಬಂದಿವೆ. https://kannadanewsnow.com/kannada/bigg-news-modi-will-be-pm-candidate-for-2024-elections-amit-shahs-announcement/
BREAKING NEWS : ದೇಶದಲ್ಲಿ ‘ಮಂಕಿಪಾಕ್ಸ್’ಗೆ ಮೊದಲ ಬಲಿ ; ‘ಕೇಂದ್ರ’ ಹೈ ಆಲರ್ಟ್, ಮೇಲ್ವಿಚಾರಣೆಗೆ ಕಾರ್ಯಪಡೆ ರಚನೆ
ನವದೆಹಲಿ : ಭಾರತದಲ್ಲಿ ಮಂಗನಕಾಯಿಲೆ ಪ್ರಕರಣಗಳ ಹರಡುವಿಕೆಯನ್ನ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಕಾರ್ಯಪಡೆಯನ್ನ ರಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಪಡೆಯ ನೇತೃತ್ವವನ್ನ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ವಹಿಸಲಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಫಾರ್ಮಾ ಮತ್ತು ಬಯೋಟೆಕ್ ಸೇರಿದಂತೆ ಸದಸ್ಯರು ಈ ಕಾರ್ಯಪಡೆಯ ನೇತೃತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಈ ತಿಂಗಳ ಆರಂಭದಲ್ಲಿ ಡಬ್ಲ್ಯುಎಚ್ಒ ‘ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದ ರೋಗಕ್ಕೆ ಸಂಬಂಧಿಸಿದ ತನ್ನ ಮೊದಲ ಸಾವನ್ನ ಭಾರತ ವರದಿ ಮಾಡಿದ ನಂತ್ರ ಈ ಇತ್ತೀಚಿನ ಬೆಳವಣಿಗೆ ಬಂದಿದೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭಾನುವಾರ ಮಂಕಿಪಾಕ್ಸ್ ರೋಗಲಕ್ಷಣಗಳನ್ನ ಹೊಂದಿದ್ದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಈ ಪ್ರಕರಣವನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ರಾಜ್ಯ ಆಡಳಿತವು ಘೋಷಿಸಿತು. ಇನ್ನು ಈ ರೋಗಿಯು ಮಧ್ಯಪ್ರಾಚ್ಯ ದೇಶದಿಂದ ರಾಜ್ಯಕ್ಕೆ ಬಂದಿದ್ದನು. ನಿಧನದ ನಂತ್ರ ರಾಜ್ಯ ಆರೋಗ್ಯ ಇಲಾಖೆ ಪುನ್ನಾಯೂರಿನಲ್ಲಿ ಸಭೆ ಕರೆದಿದ್ದು,…
ನವದೆಹಲಿ: ಚರ್ಮದ ದದ್ದುಗಳು ಮತ್ತು ಜ್ವರ, ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಎರಡರಲ್ಲೂ ಸಾಮಾನ್ಯ ರೋಗಲಕ್ಷಣಗಳು ಇರುತ್ತದೆ. ಹೀಗಾಗಿ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದರೆ ಎರಡೂ ವೈರಲ್ ರೋಗಗಳ ರೋಗಲಕ್ಷಣಗಳು ರೋಗಿಗಳಲ್ಲಿ ಕಾಣಿಸಿಕೊಳ್ಳುವ ವಿಧಾನದಲ್ಲಿ ವ್ಯತ್ಯಾಸವಿದೆ ಎಂದು ವೈದ್ಯರು ಹೇಳಿದ್ದಾರೆ. https://kannadanewsnow.com/kannada/train-runs-over-student-who-slipped-and-fell-on-railway-track/ ಯಾವುದೇ ಸಂದೇಹಗಳನ್ನು ನಿವಾರಿಸಲು ವೈದ್ಯರನ್ನು ಸಂಪರ್ಕಿಸಲು ಅವರು ಸಲಹೆ ನೀಡಿದ್ದಾರೆ. ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ (ಪ್ರಾಣಿಗಳಿಂದ ಮಾನವರಿಗೆ ಹರಡುವ ವೈರಸ್) ಆಗಿದ್ದು, ಸಿಡುಬಿನ ರೋಗಿಗಳಲ್ಲಿ ಈ ಹಿಂದೆ ಕಂಡುಬಂದ ರೋಗಲಕ್ಷಣಗಳನ್ನು ಹೋಲುತ್ತದೆ, ಆದರೂ ಇದು ವೈದ್ಯಕೀಯವಾಗಿ ಕಡಿಮೆ ತೀವ್ರವಾಗಿದೆ. ಮಳೆಗಾಲದಲ್ಲಿ, ಜನರು ವೈರಲ್ ಸೋಂಕುಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಚಿಕನ್ ಪಾಕ್ಸ್ ಪ್ರಕರಣಗಳು ಈ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಜೊತೆಗೆ ಇತರ ಸೋಂಕುಗಳು ದದ್ದುಗಳು ಮತ್ತು ವಾಕರಿಕೆಯಂತಹ ರೋಗಲಕ್ಷಣಗಳನ್ನು ಸಹ ತೋರಿಸುತ್ತವೆ ಎಂದು ಮೇದಾಂತ ಆಸ್ಪತ್ರೆಯ ಚರ್ಮರೋಗಶಾಸ್ತ್ರದ ಸಂದರ್ಶಕ ಸಲಹೆಗಾರ ಡಾ.ರಮಣಜಿತ್ ಸಿಂಗ್ ಹೇಳಿದ್ದಾರೆ. ಈ ಪರಿಸ್ಥಿತಿಯಿಂದಾಗಿ, ಕೆಲವು ರೋಗಿಗಳು ಗೊಂದಲಕ್ಕೊಳಗಾಗುತ್ತಿದ್ದಾರೆ ಮತ್ತು ಚಿಕನ್ ಪಾಕ್ಸ್ ಅನ್ನು…
ಮುಜಾಫರ್‌ನಗರ(ಉತ್ತರಪ್ರದೇಶ): 30 ವರ್ಷದ ದಲಿತ ಮಹಿಳೆಗೆ ಏಳು ಮಂದಿ ಅಪರಿಚಿತರು ಬಂದೂಕು ತೋರಿಸಿ ಆಕೆಯ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ, ವೀಡಿಯೋ ಕೂಡ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಶನಿವಾರ ಸಂಜೆ ಮುಜಾಫರ್‌ನಗರ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಬಗ್ಗೆ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ʻನಾನು ಹೊಲಕ್ಕೆ ಹುಲ್ಲು ತರಲು ಹೋಗಿದ್ದೆ. ಈ ವೇಳೆ ಅಲ್ಲಿಗೆ ಬಂದ ಏಳು ಮಂದಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಬಂದೂಕು ತೋರಿಸಿ ತನ್ನ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಿ ನಂತರ ವೀಡಿಯೊ ಮಾಡಿದರುʼ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಾದ ಅನುಜ್, ಕುಲದೀಪ್, ಅಂಕಿತ್, ರವಿ, ರಿಜ್ವಾನ್, ಚೋಟಾ ಮತ್ತು ಅಬ್ದುಲ್ ಎಂಬುವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ…
ಗುಜರಾತ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಗುಜರಾತಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವೆರಾವಾಲ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ಬಳಿಕ ರಾಜ್ಕೋಟ್ನ ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಳೆದೊಂದು ವಾರದಲ್ಲಿ ಕೇಜ್ರಿವಾಲ್ ಅವರ ರಾಜ್ಕೋಟ್ಗೆ ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ. ಒಂದು ತಿಂಗಳಲ್ಲಿ ನಾಲ್ಕನೇ ಭೇಟಿ ಇದಾಗಿದೆ. ಈ ವರ್ಷದ ಕೊನೆಯಲ್ಲಿ ಗುಜರಾತಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. https://kannadanewsnow.com/kannada/bihar-student-gets-151-out-of-100-in-political-science-exam/ ಎಎಎಂ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿ ಮನೋಜ್ ಸೊರಾಥಿಯಾ, ಕೇಜ್ರಿವಾಲ್ ಅವರು ಸೌರ್ಶತ್ರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರಕಟಣೆಗಳನ್ನು ಮಾಡುತ್ತಾರೆ ಎಂದು ಹೇಳಿದರು. ಸಿಎಂ ಕೇಜ್ರಿವಾಲ್ ಅವರು ಮಧ್ಯಾಹ್ನ ಒಂದೇ ಗಂಟೆಗೆ ಪೊರ್ಬಂದರ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಅವರು ಗಿರ್ ಸೋಮನಾಥ್ ಜಿಲ್ಲೆಯ ವೆರಾವಾಲ್ಗೆ ತೆರಳಲಿದ್ದಾರೆ. ಸಿಎಂ ಕ್ರೇಜಿವಾಲ್ ಅವರು ಮಧ್ಯಾಹ್ನ 3 ಗಂಟೆಗೆ ವಿರಾವಲ್‌ನ ಕೆಸಿಸಿ ಮೈದಾನದಲ್ಲಿ (ರೈಲ್ವೆ ಕಾಲೋನಿ) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ…