Subscribe to Updates
Get the latest creative news from FooBar about art, design and business.
Author: KNN IT TEAM
ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಭಾನುವಾರದಂದು ಹಠಾತ್ ಪ್ರವಾಹದಲ್ಲಿ ಸಿಲುಕಿದ್ದ ಪ್ರವಾಸಿಗರು ಸೇರಿದಂತೆ, 105 ಜನರನ್ನು ರಕ್ಷಿಸಲಾಗಿದೆ. ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಡೋರ್ನಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಪ್ರವಾಸಿಗರು ಸಿಲುಕಿದ್ದರು. ಇದೀಗ ಅವರನ್ನು ಕೊಕ್ಸಾರ್‌ಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Himachal Pradesh | 105 passengers rescued from Chattru in a joint rescue operation by Police & Civil admin after they were stranded due to a blocked highway amid flash floods in Chhattru area of Lahaul-Spiti district: Manav Verma, SP, Lahaul-Spiti pic.twitter.com/3enZQOByOr — ANI (@ANI) August 1, 2022 #WATCH | Himachal Pradesh: The water level in Beas river has increased due to heavy rains…
ಕೊಪ್ಪಳ : ಅಂಜನಾದ್ರಿ ಬೆಟ್ಟದಲ್ಲೇ ಅಂಜನೇಯ ಹುಟ್ಟಿರುವುದು. ಇದರ ಬಗ್ಗೆ ಯಾವುದೇ ಪ್ರಶ್ನೆಗಳು ಬರುವುದಿಲ್ಲ, ಈ ಮಾತನ್ನು ನಾನು ಸಾವಿರ ಬಾರಿ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಮಾತನಾಡಿದ ಸಿಎಂ “ಅಂಜನಾದ್ರಿ ಬೆಟ್ಟದಲ್ಲೇ ಅಂಜನೇಯ ಹುಟ್ಟಿರುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ಸ್ಥಳವಾಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮಾಡಲಾಗುತ್ತೆ. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರಿಗಾಗಿ ರೋಪ್ ವೇ ನಿರ್ಮಿಸಲು ನಿರ್ಧರಿಸಲಾಗಿದೆ” ಎಂದರು.
ಲಾಸ್ ವೇಗಾಸ್ : ವಿಚ್ಚೇದನ ಕೇಳಿದ ಪತ್ನಿಯನ್ನು ಕೋಪಗೊಂಡ ಪತಿ ಬರೋಬ್ಬರಿ 30 ಬಾರಿ ಇರಿದು ಕೊಲೆಗೈದಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಲಾಸ್ ವೇಗಾಸ್‌ನಲ್ಲಿ ಬಂಧಿಸಲಾಗಿದೆ ಎಂದು ನ್ಯೂಸ್‌ವೀಕ್‌ನಲ್ಲಿನ ವರದಿಯೊಂದು ತಿಳಿಸಿದೆ. https://kannadanewsnow.com/kannada/monkeypox-vs-chickenpox-key-differences-according-to-doctors/ ಆರೋಪಿ ಕ್ಲಿಫರ್ಡ್ ಜೇಕಬ್ಸ್ ಎಂಬ ವ್ಯಕ್ತಿ ಕಳೆದ 15 ವರ್ಷಗಳಿಂದ ಜೊತೆಗಿದ್ದ ತನ್ನ ಹೆಂಡತಿ ವಿಚ್ಚೇದನ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಸಲ್ಲಿಸಿದ ಬಂಧನ ವರದಿಯನ್ನು ಉಲ್ಲೇಖಿಸಿ ಲೆಟ್ ತಿಳಿಸಿದೆ. ಜೇಕಬ್ಸ್ ಬಾಕ್ಸಿಂಗ್ ಬೋಧಕರಾಗಿದ್ದರು, ಆದರೆ ಅವರು ಎಲ್ಲಿ ಉದ್ಯೋಗದಲ್ಲಿದ್ದರು ಎಂಬುದು ಸ್ಪಷ್ಟವಾಗಿಲ್ಲ. ನ್ಯೂಸ್ವೀಕ್ ವರದಿಯ ಪ್ರಕಾರ, ಅಪಾರ್ಟ್ಮೆಂಟ್ನಲ್ಲಿ ಐದು ಚಾಕುಗಳು ಮತ್ತು ರಕ್ತಸಿಕ್ತ ಕತ್ತರಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಸ್ ವೇಗಾಸ್ ರಿವ್ಯೂ ಜರ್ನಲ್ ಶನಿವಾರ ವರದಿಯಲ್ಲಿ ಘಟನೆಯಲ್ಲಿ ಮಹಿಳೆಯ ದೇಹದಲ್ಲಿ ಚಾಕು ಇರಿತದ 30 ಗಾಯಗಳು ಕಂಡು ಬಂದಿದೆ. ಮುಖ ಮತ್ತು ಕುತ್ತಿಗೆಗೆ ನರಗಳ ಹಾನಿಗೊಳಗಾಗಿವೆ. ಮಹಿಳೆಯ ಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ ಎಂದು…
ಉತ್ತರ ಪ್ರದೇಶ: ಒಂದನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಸಂಕಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಈ ಪತ್ರ ಬರೆದಿದ್ದಾಳೆ. ಇದರಲ್ಲಿ “ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದಿರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್) ಸಹ ದುಬಾರಿಯಾಗಿದೆ ಮತ್ತು ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ. ಈಗ ನನ್ನ ತಾಯಿ ಪೆನ್ಸಿಲ್ ಕೇಳಿದ್ದಕ್ಕಾಗಿ ನನ್ನನ್ನು ಹೊಡೆಯುತ್ತಾರೆ. ನಾನೇನು ಮಾಡಲಿ? ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್ಅನ್ನು ಕದಿಯುತ್ತಾರೆ” ಎಂದು ಬಾಲಕಿ ದೂರಿದ್ದಾಳೆ. ಹಿಂದಿಯಲ್ಲಿ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಕೀಲರಾಗಿರುವ ಬಾಲಕಿಯ ತಂದೆ ವಿಶಾಲ್ ದುಬೆ, ಇದು ನನ್ನ ಮಗಳ ‘ಮನ್ ಕಿ ಬಾತ್’ ಆಗಿದೆ. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ…
ನವದೆಹಲಿ : ಭಾರತದಲ್ಲಿ ಮಂಗನಕಾಯಿಲೆ ಪ್ರಕರಣಗಳ ಹರಡುವಿಕೆಯನ್ನ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಕಾರ್ಯಪಡೆಯನ್ನ ರಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಪಡೆಯ ನೇತೃತ್ವವನ್ನ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ವಹಿಸಲಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಫಾರ್ಮಾ ಮತ್ತು ಬಯೋಟೆಕ್ ಸೇರಿದಂತೆ ಸದಸ್ಯರು ಈ ಕಾರ್ಯಪಡೆಯ ನೇತೃತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಈ ತಿಂಗಳ ಆರಂಭದಲ್ಲಿ ಡಬ್ಲ್ಯುಎಚ್ಒ ‘ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದ ರೋಗಕ್ಕೆ ಸಂಬಂಧಿಸಿದ ತನ್ನ ಮೊದಲ ಸಾವನ್ನ ಭಾರತ ವರದಿ ಮಾಡಿದ ನಂತ್ರ ಈ ಇತ್ತೀಚಿನ ಬೆಳವಣಿಗೆ ಬಂದಿದೆ. https://twitter.com/ANI/status/1553982765762494464?s=20&t=67vbJ3zAnzZsWrjFPMNmYA ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭಾನುವಾರ ಮಂಕಿಪಾಕ್ಸ್ ರೋಗಲಕ್ಷಣಗಳನ್ನ ಹೊಂದಿದ್ದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಈ ಪ್ರಕರಣವನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ರಾಜ್ಯ ಆಡಳಿತವು ಘೋಷಿಸಿತು. ಇನ್ನು ಈ ರೋಗಿಯು ಮಧ್ಯಪ್ರಾಚ್ಯ ದೇಶದಿಂದ ರಾಜ್ಯಕ್ಕೆ ಬಂದಿದ್ದನು. ನಿಧನದ ನಂತ್ರ ರಾಜ್ಯ ಆರೋಗ್ಯ ಇಲಾಖೆ ಪುನ್ನಾಯೂರಿನಲ್ಲಿ ಸಭೆ…
ಮಂಡ್ಯ : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ರಾಜ್ಯಾಧ್ಯಾಂತ ಆಕ್ರೋಶ ಭುಗಿಲೆದ್ದಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದ್ದು, ಬಾಲಕಿಯರ ಸರ್ಕಾರಿ ಕಾಲೇಜಿನಿಂದ ರ್ಯಾಲಿ ಆರಂಭವಾಗಿದ್ದು, ಡಿಸಿ ಕಚೇರಿವರೆಗೂ ನಡೆಯಲಿದೆ. ಇನ್ನು ಈ ಪ್ರತಿಭಟನೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಪ್ರತಿ ತಾಲೂಕಿನಿಂದಲೂ ಬೈಕ್ ರ್ಯಾಲಿಯಲ್ಲಿ ಜನ ಬಂದಿದ್ದಾರೆ. ಇನ್ನು ಪ್ರತಿಭಟನೆಕಾರರು ಪ್ರವೀಣ್ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದು, ಪಿಎಸ್‌ಐ, ಎಸ್‌ಡಿಪಿಐ ಸೇರಿ ದೇಶ ವಿರೋಧಿ ಸಂಘಟನೆ ನಿಷೇಧಕ್ಕೆ ಆಗ್ರಹಿಸಿದ್ದಾರೆ. ಈ ನಡುವೆ ಬೃಹತ್ ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಬಿಸಿ ತಟ್ಟಿದ್ದು, ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಅನಂತಪುರದಲ್ಲಿ ಚಿತ್ರಾವತಿ ನದಿಯ ಅಬ್ಬರಕ್ಕೆ ಆಟೋ ಸಮೇತ ಚಾಲಕ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. 40 ವರ್ಷದ ವಿಶೇಷ ಚೇತನ ಆಟೋ ಚಾಲಕ ಶಂಕರ್ ಮೃತ ದುರ್ದೈವಿ. https://kannadanewsnow.com/kannada/dakshina-kannada-serial-killings-police-bandobast-in-the-district-has-reduced-says-dgp-praveen-sood/ ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಈಗಾಗಲೇ ತುಂಬಿದ್ದ ಬಾಗೇಪಲ್ಲಿ ತಾಲೂಕು ಪರಗೋಡು ಬಳಿಯ ಚಿತ್ರಾವತಿ ಜಲಾಶಯದ ಕೋಡಿ ಹರಿದಿದೆ. ಪರಿಣಾಮ ಚಿತ್ರಾವತಿ ನದಿ ಭೋರ್ಗೆರೆಯುತ್ತಿದ್ದು, ಆಂಧ್ರಪ್ರದೇಶಕ್ಕೆ ಯಥೇಚ್ಛವಾದ ನೀರು ಹರಿದು ಹೋಗುತ್ತಿದೆ. https://kannadanewsnow.com/kannada/dakshina-kannada-serial-killings-police-bandobast-in-the-district-has-reduced-says-dgp-praveen-sood/ ಸುಬ್ಬಾರಾಯನಪೇಟೆ ಗ್ರಾಮದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ, ಅದರಲ್ಲಿ ಆಟೋ ಮೂಲಕ ರಸ್ತೆ ದಾಟಲು ಹೋದ ಶಂಕರ್ ಆಟೋ ಸಮೇತ ಕೊಚ್ಚಿ ಹೋಗಿದ್ದಾರೆ. ಬಳಿಕ ಗಿಡಗಂಟಿಗಳ ಮಧ್ಯೆ ಶಂಕರ್ ಮೃತದೇಹ ಪತ್ತೆಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ನವದೆಹಲಿ : ಆಫ್ರಿಕಾದಲ್ಲಿ ಮಂಕಿಪಾಕ್ಸ್ಗೆ ನಾಲ್ಕು ಸಾವುಗಳು ಸಂಭವಿಸಿವೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವು ಹೆಚ್ಚು ಸಾವು-ನೋವುಗಳಗೆ ಕಾರಣವಾಗಬಹುದು ಎಂದು ಹೇಳಿದೆ. https://kannadanewsnow.com/kannada/bihar-student-gets-151-out-of-100-in-political-science-exam/ ಮಂಕಿಪಾಕ್ಸ್ನ ನಿರಂತರ ಹರಡುವಿಕೆಯು ಹೆಚ್ಚಿನ ಸಾವುಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ತ್ವರಿತವಾಗಿ ವೈರಸ್ನ ಪ್ರಸರಣವನ್ನು ತಡೆಯುವುದು ಮತ್ತು ಏಕಾಏಕಿ ಹರಡುತ್ತಿರುವ ವೈರಸ್ ಅನ್ನು ನಿಯಂತ್ರಿಸುವುದು ನಮ್ಮ ಗುರಿಯಾಗಿದೆ ಎಂದು ಡಬ್ಲ್ಯುಒಇ ಯುರೋಪಿನ ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್ ಸ್ಮಾಲ್‌ವುಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ ಈ ರೋಗವು ಚಿಕಿತ್ಸೆಯ ಅಗತ್ಯವಿಲ್ಲದೆ ವ್ಯಕ್ತಿಯೂ ಗುಣಮುಖವಾಗುತ್ತಾನೆ ಎಂದು ಸ್ಮಾಲ್‌ವುಡ್ ಒತ್ತಿ ಹೇಳಿದ್ದಾರೆ. https://kannadanewsnow.com/kannada/bigg-news-modi-will-be-pm-candidate-for-2024-elections-amit-shahs-announcement/ ಜುಲೈ 28 ರಂದು ಮೇ ತಿಂಗಳಲ್ಲಿ ಮೊದಲ ಬಾರಿಗೆ ವರದಿಯಾಗಿದೆ. ಇದುವರಗೆ 78 ದೇಶಗಳೂ ಸುಮಾರು 18,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ಹೊಂದಿವೆ. ಐದು ಮಾಂಕೈಪಾಕ್ಸ್ ಸಂಬಂಧಿತ ಸಾವುಗಳು ಆಫ್ರಿಕಾದಿಂದ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕಳೆದ ವಾರ, ಸ್ಪೇನ್‌ನಿಂದ ಎರಡು ಸಾವುಗಳು ಮತ್ತು ಬ್ರೆಜಿಲ್…
ದೆಹಲಿ: ಈ ಬಾರಿಯ ರಕ್ಷಾ ಬಂಧನದಂದು ತನ್ನ ಸಹೋದರಿಗೆ ಉಡುಗೊರೆಯಾಗಿ ನೀಡಲೆಂದು ಎಲೆಕ್ಟ್ರಿಕ್ ಸ್ಕೂಟರ್‌ಅನ್ನು ಕದ್ದ ಅಣ್ಣನನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರಕ್ಷಾ ಬಂಧನಕ್ಕೆ ತನ್ನ ಸಹೋದರಿಗೆ ಗಿಫ್ಟ್ ಕೊಡಲು ಇ-ಸ್ಕೂಟರ್ ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ತನ್ನ ಬೈಕನ್ನು ದರೋಡೆ ಮಾಡಿದ್ದಾನೆ. ಬಳಿಕ ಕಳ್ಳ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಈ ವೇಳೆ ಅವನ ಫೋನ್ಅನ್ನು ಬಿಟ್ಟು ಹೋಗಿದ್ದನು. ಕಳ್ಳ ಬಿಟ್ಟು ಹೋದ ಫೋನ್ ಸಮೇತ ಜುಲೈ 7 ರಂದು ಸುಲ್ತಾನ್‌ಪುರಿ ಪೊಲೀಸ್ ಠಾಣೆಗೆ ಬಂದ ಸುರೇಂದ್ರ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಬೇಧಿಸಿದ ಪೊಲೀಸರು 21 ವರ್ಷದ ಆರೋಪಿ ತರುಣ್‌ನನ್ನು ಬಂಧಿಸಿದ್ದಾರೆ. ಇದೀಗ, ತರುಣ್ ಬಳಿಯಿದ್ದ ಕದ್ದ ಬೈಕ್ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಕಾರ, ಆರೋಪಿಯು ವಿಜಯ್ ವಿಹಾರ್‌ನಿಂದ ದ್ವಿಚಕ್ರ ವಾಹನವನ್ನು ಕದ್ದಿದ್ದೇನೆ ಮತ್ತು ತನ್ನ ಸಹೋದರಿಗೆ…
ರಾಂಚಿ : ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಜಾರ್ಖಂಡ್ ಸರ್ಕಾರದ ಶಿಕ್ಷಣ ಸಚಿವ ಜಗನ್ನಾಥ್ ಹೇಮಂತ್ ಸೊರೇನ್ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನ ಸೋಮವಾರ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಶಿಕ್ಷಣ ಸಚಿವ ಜಗನ್ನಾಥ್ ಮಹತೋ ಅವರ ಆರೋಗ್ಯ ಹದಗೆಟ್ಟಿದೆ. ಎದೆನೋವು ಮತ್ತು ಉಸಿರಾಟದ ತೊಂದರೆಯ ನಂತರ, ಅವರನ್ನು ಆಂಬ್ಯುಲೆನ್ಸ್ ಮೂಲಕ ರಾಂಚಿಯ ಪರಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಷಯ ತಿಳಿದ ಕೂಡಲೇ ಸಿಎಂ ಹೇಮಂತ್ ಸೊರೇನ್ ಕೂಡ ಶಿಕ್ಷಣ ಸಚಿವರ ಬಳಿಗೆ ತೆರಳಿ ಪರಾಸ್ ಆಸ್ಪತ್ರೆಯಲ್ಲಿ ಅವರನ್ನ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ವಾಸ್ತವವಾಗಿ, ಶಿಕ್ಷಣ ಸಚಿವ ಜಗನ್ನಾಥ್ ಅವರಿಗೆ ಉಸಿರಾಟದ ತೊಂದರೆ ಇತ್ತು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಇಬ್ಬರು ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರೆಯಿಂದ ಪಡೆದ ಮಾಹಿತಿಯ ಪ್ರಕಾರ, 1 ರಿಂದ 2 ಗಂಟೆಗಳಲ್ಲಿ ಅವರ ಆರೋಗ್ಯ ಸ್ಥಿರವಾಗಿರುತ್ತದೆ. ಪ್ರಸ್ತುತ, ವೈದ್ಯರ ತಂಡವು ತೀವ್ರ ನಿಗಾದಲ್ಲಿರಿಸಿದೆ.