Subscribe to Updates
Get the latest creative news from FooBar about art, design and business.
Author: KNN IT TEAM
ಬಾರ್ಮರ್: ರಾಜಸ್ಥಾನದ ಬಾರ್ಮರ್‌ನಲ್ಲಿ ಬೀದಿ ನಾಯಿಯೊಂದು ಕೇವಲ ಎರಡು ಗಂಟೆಗಳಲ್ಲಿ ನಲವತ್ತು ಜನರಿಗೆ ಕಚ್ಚಿದ್ದು, ಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ಆಜ್ ತಕ್ ವರದಿ ಮಾಡಿದೆ. https://kannadanewsnow.com/kannada/union-minister-amit-shah-inaugurates-mega-dairy-at-gejjalagere/ ನಾಯಿ ಕಡಿತಕ್ಕೊಳಗಾದ ಜನರು ಸಮೀಪದ ಆಸ್ಪತ್ರೆಗೆ ಬರುತ್ತಿದ್ದಂತೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಜನರಿಂದ ತುಂಬಿ ತುಳುಕುತ್ತಿದ್ದು, ನಾಯಿ ಕಚ್ಚಿ ಗಾಯಗಳಾಗಿದ್ದು, ಅನಾಹುತದ ತೀವ್ರತೆ ಬಯಲಾಗಿದೆ. ಬಾರ್ಮರ್ ಜಿಲ್ಲೆಯ ಕಲ್ಯಾಣಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. https://kannadanewsnow.com/kannada/union-minister-amit-shah-inaugurates-mega-dairy-at-gejjalagere/ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಡಳಿತ ಮಂಡಳಿಯೂ ತಬ್ಬಿಬ್ಬಾಯಿತು. ಕೂಡಲೇ ನಗರಸಭೆಗೆ ಮಾಹಿತಿ ನೀಡಿದ್ದು, ನಾಯಿ ಹಿಡಿಯಲು ಎರಡು ತಂಡಗಳನ್ನು ರಚಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ನೆರವಿನಿಂದ ಬೀದಿ ನಾಯಿಯನ್ನು ಹಿಡಿಯಲಾಯಿತು. ಇದೀಗ ನಗರದ ವಿವಿಧ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿಯಲು ನಗರಸಭೆ ಮುಂದಾಗಿದೆ. ಹಠಾತ್ ಬೀದಿನಾಯಿ ಕಡಿತದಿಂದ ಗಾಯಗೊಂಡ ಅನೇಕ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಲ್.ಮನ್ಸೂರಿಯಾ ತಿಳಿಸಿದ್ದಾರೆ. https://kannadanewsnow.com/kannada/union-minister-amit-shah-inaugurates-mega-dairy-at-gejjalagere/
ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮತ್ತು ನಾಳೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಅಮಿತ್ ಶಾ ಉದ್ಘಾಟಿಸಿದ್ದಾರೆ. https://kannadanewsnow.com/kannada/amit-shahs-battle-cry-in-sugarnadu-today-union-home-minister-leaves-for-mandya-from-bengaluru/ ಮನ್‌ಮುಲ್ ಅವರಣದಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ ಆಗಿದೆ. ರಾಜ್ಯದ ಅತಿ ದೊಡ್ಡ ಮೆಗಾಡೈರಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಹಾಲಿನ ಪೌಡರ್ ಉತ್ಪಾದನ ಘಟನೆ ನಿರ್ಮಾಣಗೊಂಡಿದೆ. 6 ಲೀಟರ್ ಹಾಲು ಸಂಗ್ರಹ ಸಾಮಾರ್ಥ ಹೊಂದುವ ಮೆಗಾ ಡೈರಿ ಇದಾಗಿದೆ. 265 ಕೋಟಿ ರೂ ವೆಚ್ಚದಲ್ಲಿ ಮಾಡಲಾಗಿರುವ ಡೈರಿ ಇದಾಗಿದೆ https://kannadanewsnow.com/kannada/amit-shahs-battle-cry-in-sugarnadu-today-union-home-minister-leaves-for-mandya-from-bengaluru/ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಅಮಿತ್ ಶಾ ಇಂದು ಬೆಳಗ್ಗೆ ಆಗಮಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಲವು ನಾಯಕರು ಅಮಿತ್ ಶಾ ಸಾಥ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯೊಂದಿಗೆ, ಇಂದು…
ತುಮಕೂರು: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/amit-shahs-battle-cry-in-sugarnadu-today-union-home-minister-leaves-for-mandya-from-bengaluru/ ಸಿಎಂ ಬೊಮ್ಮಾಯಿ ಅವರು ಲಿಂಗಾಯತ ಮತ್ತು ಒಕ್ಕಲಿಗರಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಮಾಡಿರೋದು ನೋಡಿದ್ರೆ ರಂಗ ಎಂಬ ಪದವನ್ನು ತೆಗೆದು ಮಂಗ ಎಂದು ಮಾಡಿದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಜನಾಂಗಕ್ಕೆ ಒಂದು ರೀತಿ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ಸವರಿ ಅದರ ವಾಸನೆಯನ್ನು ಕೂಡ ಪಡೆದುಕೊಳ್ಳದಂತೆ ಸರ್ಕಾರ ಮಾಡಿದೆ. ಈ ರೀತಿ ಮೀಸಲಾತಿ ವರ್ಗೀಕರಣ ಮಾಡಲು ಸಾವಿರಾರೂ ಕೋಟಿ ರೂ. ಖರ್ಚು ಮಾಡಿ ಆಯೋಗವನ್ನು ರಚಿಸಿರುವುದು ದೊಡ್ಡ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಇಂತಹದಕ್ಕೆಲ್ಲಾ ಜನ ಮರುಳಾಗುವುದಿಲ್ಲ ಎಂದರು.
ಬೀದರ್: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ನಾಲಾ ವಿಸ್ತøತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದಕ್ಕೆ ಸಂತಸ ಸೂಚಿಸಿದ ಬಿಜೆಪಿ ರಾಜ್ಯ ವಕ್ತಾರರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಈ ಮೂಲಕ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಕಳಸಾ ಬಂಡೂರಿ ಯೋಜನೆಗೆ ನಾವು ಹೋರಾಟ ಮಾಡಿದ್ದೇವೆ. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವೂ ಅತ್ಯಂತ ಶ್ರಮ ಹಾಕಿದೆ. ಬಸವರಾಜ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್: ಖರ್ಜೂರವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ನೀವು ಅನೇಕ ರೋಗಗಳನ್ನು ತೊಡೆದುಹಾಕಬಹುದು. ಖರ್ಜೂರವು ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್ ಮತ್ತು ಅನೇಕ ಜೀವಸತ್ವಗಳಿಂದ ಸಮೃದ್ಧವಾಗಿದೆ. ಅವು ದೇಹಕ್ಕೆ ಪ್ರಯೋಜನಕಾರಿಯಾಗಿವೆ. ಖರ್ಜೂರವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂದು ತಿಳಿಯೋಣ. https://kannadanewsnow.com/kannada/bommai-hits-back-at-goa-cm-over-inter-state-water-dispute/ ಇದು ದೇಹದಲ್ಲಿ ರಕ್ತದ ಕೊರತೆಯನ್ನು ನಿವಾರಿಸುತ್ತದೆ. ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಆಗ ನೀವು ಖರ್ಜೂರವನ್ನು ಸೇವಿಸಬಹುದು. ಇದು ಕಬ್ಬಿಣ ಮತ್ತು ವಿಟಮಿನ್-ಎ ಅನ್ನು ಹೇರಳವಾಗಿ ಹೊಂದಿರುತ್ತದೆ, ಇದು ದೇಹದಲ್ಲಿ ರಕ್ತವನ್ನು ತಯಾರಿಸಲು ಕೆಲಸ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಖರ್ಜೂರಗಳು ಸಹಾಯಕವಾಗಿವೆ. ಇದು ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. https://kannadanewsnow.com/kannada/bommai-hits-back-at-goa-cm-over-inter-state-water-dispute/ ಇದು ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅವು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಮಲಬದ್ಧತೆ ಸಮಸ್ಯೆ ಇರುವ ಜನರು ಖರ್ಜೂರವನ್ನು ಸೇವಿಸಬಹುದು. ಇದು ನಾರಿನಂಶದಿಂದ ಸಮೃದ್ಧವಾಗಿದೆ,…
ಬೆಂಗಳೂರು: ಅಂತರ ರಾಜ್ಯ ಜಲ ವಿವಾದದ ಸಂಬಂಧಿಸಿದಂತೆ ಕಿರಿಕ್ ತೆಗೆದಂತ ಗೋವಾ ಮುಖ್ಯಮಂತ್ರಿಗೆ, ಸಿಎಂ ಬಸವರಾಜ ಬೊಮ್ಮಾಯಿ ಇಂದು ಖಡಕ್ ತಿರುಗೇಟು ನೀಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗೋವಾ ಮುಖ್ಯಮಂತ್ರಿಗಳಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶ ಕಾನೂನಿನಿಂದ ನಡೆಯುತ್ತಿದೆ. ಅಂತರ ರಾಜ್ಯ ಜಲ ವಿವಾದ ಕಾಯ್ದೆ ಇದೆ. ಸುಪ್ರೀಂಕೋರ್ಟ್ ಇದೆ, ನ್ಯಾಯ ಮಂಡಳಿಯಿದೆ. ಈ ಪ್ರಕರಣದಲ್ಲಿ ನ್ಯಾಯ ಮಂಡಳಿ ನಿರ್ಧಾರವನ್ನು ತಿಳಿಸಿದೆ. ನರೇಂದ್ರ ಮೋದಿಯವರ ಸರ್ಕಾರ 2018 ರಲ್ಲಿಯೇ ಅಧಿಸೂಚನೆ ಹೊರಡಿಸಿದೆ. ಈಗ ಡಿಪಿಆರ್ ಅನುಮೋಡಿಸಿದ್ದಾರೆ. ಇದೆಲ್ಲವೂ ಕಾನೂನು ಬದ್ಧವಾಗಿದೆ ಎಂದರು. ಕರ್ನಾಟಕ ಏನೇ ಮಾಡಿದರೂ ಕಾನೂನು ಬದ್ಧವಾಗಿ ಮಾಡುತ್ತೇವೆ. ಡಿಪಿಆರ್ ಅನುಮೋದನೆಯ ಮೂಲಕ ಮುಂದಿನ ಕೆಲಸಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಕಾನೂನು ಬದ್ಧವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನ್ಯಾಯಮಂಡಲಿಯು ನಮ್ಮ ಹಾಗೂ ಗೋವಾ ಬೇಡಿಕೆಯನ್ನು ಆಲಿಸಿದೆ. ಯಾರಿಗೂ ಧಕ್ಕೆಯಾಗದಂತೆ ನ್ಯಾಯಮಂಡಲಿ ತೀರ್ಪು ನೀಡಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು. https://kannadanewsnow.com/kannada/good-news-for-those-looking-for-teacher-posts-15000-teachers-to-be-recruited-soon-says-cm-bommai/ https://kannadanewsnow.com/kannada/243-new-covid-19-cases-detected-in-india-in-last-24-hours/
ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮತ್ತು ನಾಳೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. https://kannadanewsnow.com/kannada/border-dispute-between-karnataka-and-maharashtra-it-is-a-do-or-die-for-kannadigas-deve-gowda/ ಇದೀಗ ಬೆಂಗಳೂರಿನಲ್ಲಿ ಮಂಡ್ಯದತ್ತ ಹೊರಟಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಮಂಡ್ಯಕ್ಕೆ ಅಮಿತಾ ಶಾ ತೆರಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗಲವು ನಾಯಕರು ಅಮಿತ್ ಶಾ ಜೊತೆಗೆ ಪ್ರಯಾಣ ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯೊಂದಿಗೆ, ಇಂದು ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿದ ಮಂಡ್ಯದಿಂದ ತಮ್ಮ ಪ್ರವಾಸ ಪ್ರಾರಂಭಿಸಲಿದ್ದಾರೆ.ಇಂದು ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಬಳಿಕ, ಅಮಿತ್ ಶಾ ಅವರು, ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಮಂಡ್ಯ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನವದೆಹಲಿ: ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಶುಕ್ರವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ದೆಹಲಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಪಂತ್ ಅವರ ಕಾರು ರೈಲಿಂಗ್ ಗೆ ಡಿಕ್ಕಿ ಹೊಡೆದಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದ ನಂತರ ಕಾರಿನ ಸ್ಥಿತಿಯ ವೀಡಿಯೊವೊಂದು ವೈರಲ್ ಆಗಿದೆ. ಈ ಅಪಘಾತದ ನಂತರ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅವರ ಕಾರು ಇನ್ನೂ ಸ್ಥಳದಲ್ಲಿದೆ. ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ, ಇದು ಅಪಘಾತವು ಎಷ್ಟು ಭಯಾನಕವಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪಂತ್ ಜಿಗಿಯುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. https://twitter.com/FakeBissh/status/1608680045530447873 https://twitter.com/gaurav5pandey/status/1608689430340210689
ಬೆಂಗಳೂರು: ಕರ್ನಾಟಕ – ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಕುರಿತು ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/banashankari-police-hunt-in-bengaluru-three-arrested-for-trying-to-circulate-demonetised-notes/ ಈ ವಿವಾದವು ಕರ್ನಾಟಕದ ಜನತೆಯ ಹಿತಾಸಕ್ತಿಯ ವಿರುದ್ಧ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ದಾಳಿಯ ಭಾಗವಾಗಿದೆ.ಇದು ಕನ್ನಡಿಗರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ನಮ್ಮ ತೆರಿಗೆ ಸರಿಯಾದ ಪಾಲು ನಮಗೆ ಸಿಗಬೇಕಾದರೆ, ನಮ್ಮ ಮಕ್ಕಳಿಗೆ ಉದ್ಯೋಗ ಸಿಗಬೇಕಾದರೆ, https://kannadanewsnow.com/kannada/banashankari-police-hunt-in-bengaluru-three-arrested-for-trying-to-circulate-demonetised-notes/ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಹೊರಗಿನವರಿಂದ ರಕ್ಷಿಸಬೇಕಾದರೆ, ಗಡಿ ವಿವಾದ ಬಗೆಹರಿಯಬೇಕಾದರೆ, ಜೊತೆಗೆ ನಮ್ಮ ಅಸ್ಮಿತೆಯೊಂದಿಗೆ ರಾಜಿ ಮಾಡಿಕೊಳ್ಳದೆ ನಮ್ಮ ನೋವನ್ನು ನಮ್ಮವರೇ ಅರ್ಥಮಾಡಿಕೊಳ್ಳಬಲ್ಲರು ಎಂಬ ಸತ್ಯವನ್ನು ಅರಿತು ಕನ್ನಡ ಪ್ರಾದೇಶಿಕ ಪಕ್ಷವನ್ನು ಬಲಪಡಿಸಬೇಕು’’ ಎಂದು ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. ಈ ಸಂಕಷ್ಟದಿಂದ ಹೊರಬರಲು ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸುವುದೊಂದೇ ದಾರಿ ಎಂದು ಹೇಳಿದ್ದಾರೆ.
ನವದೆಹಲಿ: ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ ತೀವ್ರ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಕಾರು ಚಾಲನೆ ಮಾಡುವಾಗ ಕ್ರಿಕೆಟರ್ ನಿದ್ರೆಗೆ ಜಾರಿದ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಬಿಎಂಡಬ್ಲ್ಯೂ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. https://kannadanewsnow.com/kannada/rishabh-pant-accident/ ಕ್ರಿಕೆಟಿಗ ಕಾರಿನಲ್ಲಿ ಒಬ್ಬರೇ ಇದ್ದರು ಮತ್ತು ಧಗಧಗನೇ ಹೊತ್ತಿಉರಿದ ಕಾರಿನ ಗಾಜು ಒಡೆದು ಹೊರ ಬಂದು ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಉತ್ತರಾಖಂಡ್ ಪೊಲೀಸ್ ಡಿಜಿಪಿ ಅಶೋಕ್ ಕುಮಾರ್ ಹೇಳಿದರು. ಪಂತ್ ಅವರ ಕಾರು ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸಾನ್ ನಡುವೆ ಅಪಘಾತಕ್ಕೀಡಾಗಿದೆ. ರೂರ್ಕಿ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಅವರನ್ನು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಂಗಳೌರ್ ಪೊಲೀಸ್ ಠಾಣೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ -58 ರಲ್ಲಿ ಈ ಅಪಘಾತ ಸಂಭವಿಸಿದೆ. https://kannadanewsnow.com/kannada/rishabh-pant-accident/ ರಿಷಬ್ ಪಂತ್ ಚಿಕಿತ್ಸೆಗೆ ಏರ್ ಆಂಬ್ಯುಲೆನ್ಸ್ ಸೂಚನೆ ನೀಡಿದ ಉತ್ತರಾಖಂಡ್…