Author: KNN IT TEAM

ಬಳ್ಳಾರಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವ ಮೂಲಕ ಮತ್ತೆ ರಾಜಕೀಯ ಮರುಪ್ರವೇಶ ಪಡೆದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 102 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. https://kannadanewsnow.com/kannada/man-in-japan-pays-rs-18-lakh-to-look-like-a-wolf/ ಈಗಾಗಲೇ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀಅರುಣಾ ಅವರು ತಾಲೂಕಿನ ಗಡಿಭಾಗದ ಬೆಣಕಲ್ಲು ಗ್ರಾಮದಲ್ಲಿ ಪಕ್ಷದ ಬಾವುಟ ಬಿಡುಗಡೆಗೊಳಿಸುವ ಮೂಲಕ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಒಎಂಸಿ ಎಂಡಿ ಬಿ.ವಿ. ಶ್ರೀನಿವಾಸ ರೆಡ್ಡಿ ಕೊಪ್ಪಳ, ರಾಯಚೂರು, ಕಲಬುರಗಿಯ ಸೇಡಂ ಪೈಕಿ ಒಂದು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಉತ್ತರ ಕರ್ನಾಟಕದ 64 ಮತ್ತು ದಕ್ಷಿಣ ಕರ್ನಾಟಕದ 38 ಕ್ಷೇತ್ರಗಳಲ್ಲಿ ಕೆಆರ್‌ಪಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜ.16ರಂದು ಉತ್ತರ ಕರ್ನಾಟಕದ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ರೆಡ್ಡಿ ಘೋಷಿಸಲಿದ್ದಾರೆ ಎನ್ನಲಾಗಿದೆ. https://kannadanewsnow.com/kannada/bigg-news-bjp-gears-up-for-elections-booth-vijay-campaign-to-be-launched-from-today/

Read More

ಜಪಾನ್‌: ಜಪಾನ್‌ನಲಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತಾನು ʻತೋಳ(wolf)ʼದಂತೆ ಕಾಣಲು ಸುಮಾರು 3,000,000 ಯೆನ್ (18.5 ಲಕ್ಷ ರೂ.) ಪಾವತಿಸಿದ್ದಾನೆ. ವ್ಯಕ್ತಿಯು ತನ್ನ ಜೀವಿತಾವಧಿಯ ಕನಸನ್ನು ನನಸಾಗಿಸಲು ಜೆಪ್ಪೆಟ್ ಎಂಬ ಕಂಪನಿಯಿಂದ ತಮ್ಮ ಕಸ್ಟಮೈಸ್ ಮಾಡಿದ ವೇಷಭೂಷಣಕ್ಕಾಗಿ 3,000,000 ಯೆನ್ (ರೂ. 18.5 ಲಕ್ಷಗಳು) ಖರ್ಚು ಮಾಡಿದ್ದಾನೆ. ಈ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿರುವ ಪ್ರಕಾರ, ʻಬಾಲ್ಯದಿಂದಲೂ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ತೋಳದಂತೆ ಕಾಣಬೇಕೆಂದು ಆತ ಬಯಸಿದ್ದನು. ಹೀಗಾಗಿ, ಈ ವೇಷಭೂಷಣಕ್ಕಾಗಿ ಸುಮಾರು 18.85 ಲಕ್ಷ ರೂ. ಖರ್ಚು ಮಾಡಿದ್ದಾರೆ. ಜೆಪ್ಪೆಟ್ ವೇಷಭೂಷಣವನ್ನು ಪೂರ್ಣಗೊಳಿಸಲು 50 ದಿನಗಳನ್ನು ತೆಗೆದುಕೊಂಡಿತು. ಅಂತಿಮವಾಗಿ ಆತ ಕನ್ನಡಿಯಲ್ಲಿ ತನ್ನ ರೂಪಾಂತರವನ್ನು ನೋಡಿ ಆಶ್ಚರ್ಯಚಕಿತನಾದನುʼ ಎಂದು ಹೇಳಿದರು. ಜೆಪ್ಪೆಟ್(Zeppet) ಜಾಹೀರಾತುಗಳು, ಚಲನಚಿತ್ರಗಳು ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಶಿಲ್ಪಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ಏಜೆನ್ಸಿಯು ಜಪಾನ್‌ನ ಪ್ರಸಿದ್ಧ ಮ್ಯಾಸ್ಕಾಟ್‌ಗಳಿಗೆ ವೇಷಭೂಷಣಗಳನ್ನು ಒದಗಿಸುತ್ತದೆ ಮತ್ತು ಟಿವಿ ಬಟ್ಟೆಗಳನ್ನು ಸಹ ಮಾಡುತ್ತದೆ. ಈ ಹಿಂದೆ, ಜೆಪ್ಪೆಟ್ ನಾಯಿಯಾಗಿ ರೂಪಾಂತರಗೊಂಡ…

Read More

ವಿಜಯಪುರ : ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಮಠದಲ್ಲೇ ಚಿಕಿತ್ಸೆ ಮುಂದುವರೆದಿದ್ದು, ಇಂದು ಬೆಳಗ್ಗೆ  ಡಾ. ಮಲ್ಲಣ್ಣ ಮೂಲಿಮನಿ ಹಾಗೂ ಇತರ ವೈದ್ಯರಿಂದ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ. https://kannadanewsnow.com/kannada/bigg-news-bjp-gears-up-for-elections-booth-vijay-campaign-to-be-launched-from-today/ ಸೋಮವಾರ ಬೆಳಗ್ಗೆ  ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಮಲ್ಲಣ್ಣ ಮೂಲಿಮನಿ ಹಾಗೂ ಇತರ ವೈದ್ಯರಿಂದ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ. ಆಶ್ರಮದ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಬಳಿ ಸೇರಿದ ಅಪಾರ ಸಂಖ್ಯೆಯ ಭಕ್ತರು ಶ್ರೀಗಳು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಮಠಕ್ಕೆ ಭಕ್ತರ ದಂಡು ಹರಿದು ಬರುತ್ತಿದ್ದು, ಗೇಟ್ ಮುಂಭಾಗದಲ್ಲಿ ಭಾರಿ ಸಂಖ್ಯೆಯ ಭಕ್ತರು ನೆರೆದಿದ್ದಾರೆ. ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಭಕ್ತರು ಪಟ್ಟು ಹಿಡಿದಿದ್ದಾರೆ. ಇನ್ನು ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಹೀಗಿರುವಾಗ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂಬಿ ಪಾಟೀಲ್ ಕೂಡಾ ಶ್ರೀಗಳನ್ನು ನೋಡಲು ಆಗಮಿಸಲಿದ್ದಾರೆ.

Read More

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಬಿಜೆಪಿ ಇಂದಿನಿಂದ ಮತಗಟ್ಟೆ ಹಂತದಲ್ಲಿ ಬೂತ್ ವಿಜಯ ಅಭಿಯಾನ ಹಮ್ಮಿಕೊಂಡಿದೆ. https://kannadanewsnow.com/kannada/3-civilians-killed-in-terror-attack-in-jammu-and-kashmirs-rajouri/ ಇಂದಿನಿಂದ ಜನವರಿಗೆ 12 ರವರೆಗೆ ಬಿಜೆಪಿಯಿಂದ ಬೂತ್ ವಿಜಯ ಅಭಿಯಾನ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ಎಲ್ಲಾ 39 ಸಂಘಟನಾ ಜಿಲ್ಲೆಗಳು, 312 ಮಂಡಲಗಳು, 1445 ಮಹಾಶಕ್ತಿ ಕೇಂದ್ರಗಳು ಹಾಗೂ 11,642 ಶಕ್ತಿಕೇಂದ್ರಗಳು, 58,186 ಬೂತ್ ಗಳ ಹಂತದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ಬೂತ್ ಸಮಿತಿಗಳ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಮತಗಟ್ಟೆಗಳಲ್ಲಿ ವಾಟ್ಸಪ್ ಗ್ರೂಪ್ ಗಳ ರಚನೆ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ, ಮನ್ ಕಿ ಬಾತ್ ಕಾರ್ಯಕ್ರಮದ ಕುರಿತು ಹಾಗೂ 50 ಲಕ್ಷ ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸಲಾಗುವುದು ಎಂದು ತಿಳಿದುಬಂದಿದೆ.

Read More

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡ ನಾಗರಿಕರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. ಘಟನೆಯಲ್ಲಿ ಗಾಯಗೊಂಡ ಇತರ ಒಂಬತ್ತು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅವರಲ್ಲಿ ಕೆಲವರ ಸ್ಥಿತಿ “ತುಂಬಾ ಗಂಭೀರವಾಗಿದೆ” ಎಂದು ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಲ್ಲಿ ಕೆಲವರನ್ನು ಜಮ್ಮುವಿಗೆ ಏರ್ಲಿಫ್ಟ್ ಮಾಡಲಾಗಿದೆ. ನಿನ್ನೆ ಸಂಜೆ ಡಾಂಗ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮೂರು ಮನೆಗಳಿಗೆ ನುಗ್ಗಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಭಾರಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಮೆಹಮೂದ್ ಎಚ್ ಬಜರ್ ಅವರು ನಾಲ್ಕು ಜನರ ಸಾವನ್ನು ಖಚಿತಪಡಿಸಿದ್ದಾರೆ ಮತ್ತು ಗಾಯಗೊಂಡವರಲ್ಲಿ ಇಬ್ಬರನ್ನು ಉತ್ತಮ ಚಿಕಿತ್ಸೆಗಾಗಿ ಜಮ್ಮುವಿಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

Read More

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ನಾಲ್ಕಕ್ಕೇರಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಕೆಲವರನ್ನು ವಿಮಾನದಲ್ಲಿ ಜಮ್ಮುವಿಗೆ ರವಾನಿಸಲಾಗಿದೆ. ಮೃತರನ್ನು ದೀಪಕ್ ಕುಮಾರ್, ಸತೀಶ್ ಕುಮಾರ್ ಮತ್ತು ಪ್ರೀತಮ್ ಲಾಲ್ ಮತ್ತು ಶಿವಪಾಲ್ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಡಾಂಗ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮೂರು ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರೆದಿದೆ. 3 people killed & 7 others injured in firing incident in Dangri area of Rajouri.…

Read More

ಧಾರವಾಡ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಧಾರವಾಡ ಜಿಲ್ಲಾ ವ್ಯಾಪ್ತಿಯ 2022-23ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/bigg-news-heres-the-key-information-for-eligible-beneficiaries-who-have-not-benefitted-under-the-pm-kisan-yojana/ ಅರ್ಹ ಜಿಲ್ಲಾ ವ್ಯಾಪ್ತಿಯ 1ನೇ ತರಗತಿಯಿಂದ 10ನೇ ತರಗತಿವರೆಗಿನ ಮೆಟ್ರಿಕ್ ಪೂರ್ವದ ವಿಕಲಚೇತನ ವಿದ್ಯಾರ್ಥಿಗಳುhttps://ssp.karnataka.gov.in  ಪೋರ್ಟಲ್‍ನಲ್ಲಿ ಹಾಗೂ   ಮೆಟ್ರಿಕ್ ನಂತರದ ವಿಕಲಚೇತನ ವಿದ್ಯಾರ್ಥಿಗಳು https://ssp.postmatric.karnataka.gov.in ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿ, ಹಾರ್ಡಕಾಫಿ ಪ್ರತಿಗಳನ್ನು ಸಂಬಂಧಪಟ್ಟ ತಾಲೂಕಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರಿಗೆ ಜನೆವರಿ 15, 2023ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ:0836-2744474 ಮತ್ತು ತಾಲೂಕಾ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ)ಗಳಾದ ಧಾರವಾಡ-9742757903, ಹುಬ್ಬಳ್ಳಿ-9164347001 ಕಲಘಟಗಿ- 6363695794 ನವಲಗುಂದ-9663271200, ಕುಂದಗೋಳ-8880570833 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೊಪ್ಪಳ : ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ಅರ್ಹ ಹೊಸ ಫಲಾನುಭವಿಗಳು ಈ ಯೋಜನೆಯಡಿ ಇ-ಕೆವೈಸಿ ಹಾಗೂ ನೋಂದಣಿ ಮಾಡಿಸಿಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/tata-group-veteran-r-krishnakumar-dies-at-84/ ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ನೋಂದಣಿಯಾಗದೆ ಬಾಕಿ ಉಳಿದ ಅರ್ಹ ಫಲಾನುಭವಿಗಳ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಜಂಟಿ ಖಾತೆದಾರರು, ಪೌತಿ ಕಾರಣದಿಂದಾಗಿ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು, ಒಂದೇ ಕುಟುಂಬದ ಸದಸ್ಯರೆಂದು ಭೂಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು, ಹಿರಿಯ ನಾಗರೀಕರು ಹಾಗೂ ಮಾಹಿತಿಯ ಕೊರತೆಯಿಂದ ಈ ಎಲ್ಲಾ ಅರ್ಹ ಕಾರಣಗಳಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತ ಕುಟುಂಬಗಳು ಹಾಗೂ ಇತರೆ ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳ ನೊಂದಣಿ ಮಾಡಿಸಲು ಹಾಗೂ ಇ-ಕೆವೈಸಿ ಮಾಡಿಸುವಂತೆ ರೈತ ಬಾಂಧವರಿಗೆ ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂದಿಸಿದ ರೈತ ಸಮಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪಂರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/breaking-news-15-killed-47-injured-in-mexico-road-accident/

Read More

ಮುಂಬೈ: ರತನ್ ಟಾಟಾ(Ratan Tata) ಅವರ ಆಪ್ತ ಸಹಾಯಕ ಮತ್ತು ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್ ಕೆ ಕೃಷ್ಣ ಕುಮಾರ್(R K Krishna Kumar) ಭಾನುವಾರ ಸಂಜೆ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರ ನಿಕಟ ಸಹವರ್ತಿಯಾಗಿದ್ದ 84 ವರ್ಷದ ಕೃಷ್ಣ ಕುಮಾರ್ ಟಾಟಾದ ಸಲಹಾ ಸಂಸ್ಥೆ, ಆರ್‌ಎನ್‌ಟಿ ಅಸೋಸಿಯೇಟ್ಸ್ ಮತ್ತು ಟಾಟಾ ಸಮೂಹದ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ ಶೇಕಡಾ 66 ರಷ್ಟು ಪಾಲನ್ನು ಹೊಂದಿರುವ ಗುಂಪಿನ ಚಾರಿಟಬಲ್ ಟ್ರಸ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರು. ಕೃಷ್ಣಕುಮಾರ್ ನಿಧನದ ಕುರಿತು ಮಾತನಾಡಿದ ರತನ್ ಟಾಟಾ, “ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ಆರ್.ಕೆ. ಕೃಷ್ಣಕುಮಾರ್ ನಿಧನದಿಂದ ತುಂಬಾ ದುಃಖಿತನಾಗಿದ್ದೇನೆ. ಮತ್ತು ವೈಯಕ್ತಿಕವಾಗಿ ನಾವು ಹಂಚಿಕೊಂಡ ಸೌಹಾರ್ದತೆಯನ್ನು ನಾನು ಯಾವಾಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ” ಎಂದಿದ್ದಾರೆ. ಕೃಷ್ಣಕುಮಾರ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 4.30ಕ್ಕೆ ಇಲ್ಲಿನ ಚಂದನವಾಡಿ ಚಿತಾಗಾರದಲ್ಲಿ ನಡೆಯಲಿದೆ. https://kannadanewsnow.com/kannada/tripura-minister-nc-debbarama-passes-away-at-80-govt-announces-three-day-state-mourning/ https://kannadanewsnow.com/kannada/8-coaches-of-mumbai-jodhpur-train-derail-in-rajasthan/ https://kannadanewsnow.com/kannada/tripura-minister-nc-debbarama-passes-away-at-80-govt-announces-three-day-state-mourning/ https://kannadanewsnow.com/kannada/8-coaches-of-mumbai-jodhpur-train-derail-in-rajasthan/

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನೀವು ಅಂದುಕೊಂಡ ಕೆಲಸಗಳು ಈಡೇರಬೇಕಾ, ಇನ್ನು ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆ ಎದುರಾಗುತ್ತಿದ್ದರೆ, ಇನ್ನು ಯಾವುದೇ ಸಮಸ್ಯೆ ಇದ್ದರೂ ಈ ಒಂದು ಶಕ್ತಿಶಾಲಿ ಮಂತ್ರವನ್ನು ಒಮ್ಮೆ ಪಟಿಸಿ ನೋಡಿ, ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತದೆ. ಹೌದು ನಿಮ್ಮ ಮನೆಯ ಯಾವುದೇ ಸಮಸ್ಯೆಯಾದರೂ ಸಹ ಅದು ನೀವು ಒಮ್ಮೆ ಈ ಶಕ್ತಿ ಶಾಲಿ ಆಂಜನೇಯನ ಮಂತ್ರವನ್ನು 21 ದಿನಗಳ ಕಾಲ ಪಟಿಸಿದರೆ, ನಿಮ್ಮ ಎಲ್ಲಾ ಸಮಸ್ಯೆಗಳು ಶೀಘ್ರದಲೇ ಪರಿಹಾರವಾಗುತ್ತದೆ. ಇನ್ನು ನಿಮ್ಮ ಮೇಲೆ ಆಂಜನೇಯನ ಅನುಗ್ರಹವಾಗುವುದು ಶತ ಸಿದ್ದ. ಅಷ್ಟಕ್ಕೂ ಈ ಮಂತ್ರ ಯಾವುದು, ಈ ಮಂತ್ರವನ್ನು ಪತಿಸುವುದರಿಂದ ಆಗುವ ಲಾಭಗಳೇನು ಎನ್ನುವುದನ್ನು ತಿಳಿಸಿಕೊಡುತ್ತವೆ ಬನ್ನಿ ನೋಡೋಣ.. ಶ್ರೀ ಆಂಜನೇಯನು ಶ್ರೀ ರಾಮನ ಪರಂಭಕ್ತ, ಆಂಜನೇಯ ಸ್ವಾಮಿಯೂ ಬೇಡಿದನ್ನು ಕರುಣಿಸುವ ಮಹಾನ್ ಮಹಿಮಾ, ಇನ್ನು…

Read More