Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಾಳೇಕೆರೆ ಗ್ರಾಮದ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಲಾರಿಗಳ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರಣಿ ಅಪಘಾತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ ‘ಯುವನಿಧಿ’ ಯೋಜನೆ ಫಲಾನುಭವಿಗಳು ಡಿಸೆಂಬರ್ 25 ರೊಳಗೆ ತಪ್ಪದೇ ಡಿಕ್ಲರೇಶನ್ ಮಾಡುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೋಮಾ ಕೋರ್ಸ್‍ಗಳನ್ನು 2022-23 ಹಾಗೂ 2023-24 ನೇ ಸಾಲಿನಲ್ಲಿ ತೇರ್ಗಡೆಯಾದ ಕರ್ನಾಟಕ ರಹವಾಸಿಗಳಿಗೆ ನಿರುದ್ಯೊಗಿ ಭತ್ಯೆಯನ್ನು ನೀಡುವ ಖಾತರಿ ಯೋಜನೆಯಾಗಿದೆ. ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎಲ್ಲಾ ಪದವೀಧರರಿಗೆ, ಸ್ನಾತಕೋತ್ತರ ಪದವಿ, ಬಿಎಡ್ ಪದವೀಧರರಿಗೆ ಪ್ರತಿ ತಿಂಗಳು ರೂ.3 ಸಾವಿರ ಗಳು ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1500 ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ…
ಬೆಂಗಳೂರು: ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಈಗ ಸುಲಭ. ನಿಮ್ಮ ಸ್ಮಾರ್ಟ್ ಪೋನ್ ನಲ್ಲೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ. ಸ್ಮಾರ್ಟ್ ಪೋನ್ ಯುಗದಲ್ಲಿ ಸ್ಮಾರ್ಟ್ ಆಗೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸುವಂತ ವಿಧಾನವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಪರಿಚಯಿಸಿದೆ. ರಾಜ್ಯದ ಗ್ರಾಮೀಣ ಜನರು ಗ್ರಾಮ ಪಂಚಾಯ್ತಿ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳದೇ ಕುಳಿತಲ್ಲೇ ಮೊಬೈಲ್ ನಲ್ಲಿ ಆಸ್ತಿ ತೆರಿಗೆ ಪಾವತಿಸೋದಕ್ಕೆ ಅವಕಾಶ ನೀಡಿದೆ. ಅದು ಹೇಗೆ ಅಂತ ಈ ಕೆಳಗಿನ ವೀಡಿಯೋ ನೋಡಿ. ನೋಡಿದ್ರಲ್ಲ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಮೂಲಕ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಸ್ಮಾರ್ಟ್ ಪೋನ್ ಇದ್ರೆ ಸಾಕು, ಕುಳಿತಲ್ಲೇ ಪೇ ಮಾಡಬಹುದು. ನಿಮಗೆ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಸ್ಮಾರ್ಟ್ ಪೋನ್ ನಲ್ಲಿ ಪಾವತಿ ಬಗ್ಗೆ ಅನುಮಾನಗಳಿದ್ದರೇ, ಸಮಸ್ಯೆ ಆಗುತ್ತಿದ್ದರೇ ಏಕೀಕೃತ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಿ ಪಡೆಯುವಂತೆ ಗ್ರಾಮೀಣಾಭಿವೃದ್ಧಿ…
ನವದೆಹಲಿ: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದ್ದು, ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಂದ ಜಾರಿ ನಿರ್ದೇಶನಾಲಯ ಅನುಮತಿ ಪಡೆದಿದೆ. 2021-22ನೇ ಸಾಲಿನ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಡಿಸೆಂಬರ್ 5 ರಂದು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯನ್ನು ಇಡಿ ಕೋರಿತ್ತು. ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಂದ ಜಾರಿ ನಿರ್ದೇಶನಾಲಯ ಅನುಮತಿ ಪಡೆದಿದೆ ಎಂದು ಹೇಳಲಾಗಿದೆ.
ಬೆಂಗಳುರು : ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಇ-ಶ್ರಮ್ ಯೋಜನೆ ಯೋಜನೆಯನ್ನು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷವಾಗಿ ಇ-ಶ್ರಮ್ ಪೋರ್ಟಲ್ ಅನ್ನು ಸ್ಥಾಪಿಸಿದೆ. ಇ-ಶ್ರಮ್ ಪೋರ್ಟಲ್‌ನ ಮುಖ್ಯ ಉದ್ದೇಶವೆಂದರೆ ಅಸಂಘಟಿತ ವಲಯದ ಕಾರ್ಮಿಕರ ವ್ಯಾಪಕ ಡೇಟಾಬೇಸ್ ಅನ್ನು ರಚಿಸುವುದು ಮತ್ತು ಅವರಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಒದಗಿಸುವುದು. ಕೇಂದ್ರವು ಅಸಂಘಟಿತ ವಲಯದ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ಅನ್ನು ಒದಗಿಸುತ್ತದೆ. ಈ ಕಾರ್ಡ್‌ನಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇ-ಶ್ರಮ್ ಕಾರ್ಡ್ ಪಡೆಯುವ ಕಾರ್ಮಿಕರು 60 ವರ್ಷ ವಯಸ್ಸಿನ ನಂತರ ಪಿಂಚಣಿ, ಜೀವ ವಿಮೆ ಮತ್ತು ಅಂಗವೈಕಲ್ಯ ಸಂದರ್ಭದಲ್ಲಿ ಆರ್ಥಿಕ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್ eshram.gov.in ಮೂಲಕ ಇ-ಶ್ರಮ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ಇ-ಶ್ರಮ್ ಕಾರ್ಡ್ ಪಡೆಯಲು ಅರ್ಹತೆ ಅಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿ ಅಥವಾ ಕೆಲಸಗಾರ ವಯಸ್ಸು 16 ರಿಂದ 59 ವರ್ಷಗಳು ಅರ್ಜಿದಾರರ ಸೆಲ್…
ಬೆಂಗಳೂರು : ಬುಟಾಟಿಕೆ ಮತ್ತು ಪೊಳ್ಳು ಹಿಂದುತ್ವವಾದ ಪ್ರತಿಪಾದಕರಾದ ಬಿ.ಜೆ.ಪಿ ಯವರು ಧರ್ಮ ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ, ಹಿಂದೂ ಧರ್ಮದ ಉಳಿವಿಗಾಗಿ ಯಾವುದೇ ಕಾರ್ಯ ಮಾಡದಿದ್ದರೂ, ಬರೀ ಬಾಯಿ ಮಾತಿನಲ್ಲಿ ಹಿಂದೂ ಧರ್ಮ, ದೇವಾಲಯಗಳ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಭಾಷಣ ಮಾಡುವವರ ಮುಂದೆ ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಗೆ ಪಣ ತೊಟ್ಟಿರುವ ರಾಮಲಿಂಗಾರೆಡ್ಡಿಯವರ ಕಾರ್ಯ ಆಸ್ತಿಕ ಸಮುದಾಯದಲ್ಲಿ ಸಂತೋಷದ ಹೊನಲನ್ನು ಹರಿಸಿದೆ. ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯಿಂದ ಈವರೆಗೆ ರಾಜ್ಯದ ವಿವಿಧ…
ಶಿವಮೊಗ್ಗ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು. ಸೊರಬದ ಬ್ಲಾಕ್ ವ್ಯಾಪ್ತಿಯ ವಿವಿಧ ಇಲಾಖೆಗಳ 25 ಕಾಮಗಾರಿಗಳು ಮತ್ತು 58 ಕಾಮಗಾರಿಗಳ ಶಂಕುಸ್ಥಾಪನೆ (ಒಟ್ಟು 56.34ಕೋಟಿ ಮೊತ್ತದ) ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಕಚೇರಿ , ತಾಲ್ಲೂಕು ಬಗರ್ ಹುಕುಂ ಸಮಿತಿ ಕಚೇರಿ ಹಾಗೂ ಸೊರಬ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಕಾಮಗಾರಿಗಳನ್ನು ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕತೆ ರೂಪದಲ್ಲಿ, ಆಹಾರವಾಗಿ, ಬಡವರ ಮನೆಗಳ ಜ್ಯೋತಿಯಾಗಿ ಬೆಳಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಲ್ಲ. ಬದಲಾಗಿ ಅದು ಅಕ್ಷಯ ಪಾತ್ರೆ. ಗೃಹಜ್ಯೋತಿಯಡಿ ಉಚಿತ ವಿದ್ಯುತ್, ಗೃಹಲಕ್ಷ್ಮಿಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ.2000 , ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಯುವನಿಧಿ ಯೋಜನೆಯಡಿ ೧೭ ಲಕ್ಷ ವಿದ್ಯಾರ್ಥಿಗಳು…
ಬೆಂಗಳೂರು : ಬುಟಾಟಿಕೆ ಮತ್ತು ಪೊಳ್ಳು ಹಿಂದುತ್ವವಾದ ಪ್ರತಿಪಾದಕರಾದ ಬಿ.ಜೆ.ಪಿ ಯವರು ಧರ್ಮ ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ, ಹಿಂದೂ ಧರ್ಮದ ಉಳಿವಿಗಾಗಿ ಯಾವುದೇ ಕಾರ್ಯ ಮಾಡದಿದ್ದರೂ, ಬರೀ ಬಾಯಿ ಮಾತಿನಲ್ಲಿ ಹಿಂದೂ ಧರ್ಮ, ದೇವಾಲಯಗಳ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಭಾಷಣ ಮಾಡುವವರ ಮುಂದೆ ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಗೆ ಪಣ ತೊಟ್ಟಿರುವ ರಾಮಲಿಂಗಾರೆಡ್ಡಿಯವರ ಕಾರ್ಯ ಆಸ್ತಿಕ ಸಮುದಾಯದಲ್ಲಿ ಸಂತೋಷದ ಹೊನಲನ್ನು ಹರಿಸಿದೆ. ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯಿಂದ ಈವರೆಗೆ ರಾಜ್ಯದ ವಿವಿಧ…
ಬೆಳಗಾವಿ : ಮನೆಗೆ ನುಗ್ಗಿ ದುಷ್ಕರ್ಮಿಗಳು 9 ತಿಂಗಳ ಗರ್ಭಿಣಿ ಮಹಿಳೆಯ ಬರ್ಬರ ಹತ್ಯೆ ಮಾಡಿರವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ. ಚಿಕ್ಕೂಡ ಗ್ರಾಮದಲ್ಲಿ ಮನೆಯಲ್ಲಿ ಇದ್ದ ಗರ್ಭಿಣಿ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ಗರ್ಭಿಣಿ ಮಹಿಳೆಯನ್ನು ಸುವರ್ಣ ಮಾಂತಯ್ಯ ಮಠಪತಿ ಎಂದು ಗುರುತಿಸಲಾಗಿದೆ. ಮಹಿಳೆಗೆ 4 ಹೆಣ್ಣು ಮಕ್ಕಳಿದ್ದು, 5 ನೇ ಮಗುವಿನ ಗರ್ಭಿಣಿಯಾಗಿದ್ದರು. 9 ತಿಂಗಳಾಗಿದ್ದು, ಇನ್ನೊಂದು ವಾರದಲ್ಲಿ ಹೆರಿಗೆಗೆ ದಿನಾಂಕ ನೀಡಲಾಗಿತ್ತು. ಆದರೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಹೊಟ್ಟೆಗೆ ಒದ್ದು ಹತ್ಯೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.