Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಪ್ರಧಾನಿ ಮೋದಿ ಮೇಲೆ ಅಮೇರಿಕಾ ಒತ್ತಡ ಹೇರುವುದು ವ್ಯರ್ಥ’: ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಪುಟಿನ್!

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸಾರಿಗೆ ಇಲಾಖೆಯಿಂದ ಮಹತ್ವದ ಪ್ರಕಟಣೆ : ಎಲ್ಲಾ ಬಸ್ಸುಗಳಲ್ಲಿ ಈ ಸುರಕ್ಷತಾ ಕ್ರಮಗಳ ಅಳವಡಿಕೆ ಕಡ್ಡಾಯ !
KARNATAKA

BIG NEWS : ರಾಜ್ಯ ಸಾರಿಗೆ ಇಲಾಖೆಯಿಂದ ಮಹತ್ವದ ಪ್ರಕಟಣೆ : ಎಲ್ಲಾ ಬಸ್ಸುಗಳಲ್ಲಿ ಈ ಸುರಕ್ಷತಾ ಕ್ರಮಗಳ ಅಳವಡಿಕೆ ಕಡ್ಡಾಯ !

By kannadanewsnow57

ಬೆಂಗಳೂರು : ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲಾ ಸಾಮಾನ್ಯ ಬಸ್ಸು ಹಾಗೂ ಸ್ಟೀಪರ್ ಬಸ್ಸುಗಳಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 125-C ರಲ್ಲಿ ತಿಳಿಸಿರುವಂತೆ, ಈ ಕೆಳಕಂಡ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.

ರಾಜ್ಯದಲ್ಲಿ ನೋಂದಾಯಿಸಲಾಗಿರುವ ಎಲ್ಲಾ ಸ್ಟೀಪರ್ ಕೋಚ್ ಬಸ್ಸುಗಳಲ್ಲಿ ಚಾಲಕರ ಹಿಂಬದಿ ಅಳವಡಿಸಿರುವ ವಿಭಜಕದ ಬಾಗಿಲನ್ನು ತೆಗೆದುಹಾಕುವುದು.

ರಾಜ್ಯದಲ್ಲಿ ನೋಂದಾಯಿಸಲಾಗಿರುವ ಎಲ್ಲಾ ಸ್ಟೀಪರ್ ಕೋಚ್ ಬಸ್ಸುಗಳಲ್ಲಿ ಸ್ಟೀಪರ್ ಬರ್ತ್ಗಳಿಗೆ ಅಳವಡಿಸಿರುವ ಸೈಡರ್ಗಳನ್ನು ತೆಗೆದುಹಾಕುವುದು.

ದಿನಾಂಕ 01-04-2019 ನಂತರ ನೋಂದಣಿಯಾಗಿರುವ ಎಲ್ಲಾ ಸ್ಟೀಪರ್ ಕೋಚ್ ಬಸ್ಸುಗಳಲ್ಲಿ FIRE ಪತ್ತೆ ಮತ್ತು ನಿಗ್ರಹ ವ್ಯವಸ್ಥೆ(FDSS) ಗಳನ್ನು ಕಡ್ಡಾಯವಾಗಿ ಅಳವಡಿಸುವುದು.

ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿ, ಸ್ವೀಪರ್ ಕೋಚ್ ಬಸ್ಗಳು ಸೇರಿದಂತೆ ಎಲ್ಲಾ ಪ್ರಯಾಣಿಕ ಬಸ್ಗಳಲ್ಲಿ ವಾಣಿಜ್ಯ ಸರಕುಗಳನ್ನು ಸಾಗಿಸುವಂತಿಲ್ಲ.

ಚಾಸಿಸ್ ಅನ್ನು ಅನಧಿಕೃತವಾಗಿ ವಿಸ್ತರಣೆ ಮಾಡಿ ನಿರ್ಮಿಸಿರುವ ಬಸ್ಸುಗಳ ಕಾರ್ಯಾಚರಣೆಯನ್ನು ನಿಲ್ಲಿಸುವುದು.

ಪ್ರತಿಯೊಂದು ಬಸ್ಸಿನಲ್ಲಿ ಕಡ್ಡಾಯವಾಗಿ ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಸಾಧನ ಅಳವಡಿಕೆ, ಬಸ್ಸಿನ ಛಾವಣಿಯ ವಿನ್ಯಾಸ ರೇಖಾ ಚಿತ್ರವನ್ನು ಪ್ರಯಾಣಿಕರಿಗೆ ಹ್ಯಾಚ್ಗಳೊಂದಿಗೆ ಸುಲಭವಾಗಿ ಓದಲು ಅನುಕೂಲವಾಗುವ ಸ್ಥಳದಲ್ಲಿ ವಾಹನದ ಒಳಗಡೆ ಪ್ರದರ್ಶಿಸಿರಬೇಕು.

‘ಬಸ್ ಬಾಡಿ ಕೋಡ್ ನಿಗದಿಪಡಿಸಿರುವ ಮಾನದಂಡಗಳ ಕನಿಷ್ಠ 4 ತುರ್ತು ಪ್ರಕಾರ, 12 ಮೀಟರ್ ಉದ್ದಳತೆಯ ಬಸ್ಸುಗಳಲ್ಲಿ ನಿರ್ಗಮನ ದ್ವಾರಗಳು ಮತ್ತು 12 ಮೀಟರ್ಗಿಂತ ಹೆಚ್ಚಿನ ಉದ್ದಳತೆಯ ಬಸ್ಸುಗಳಲ್ಲಿ ಕನಿಷ್ಠ 5 ತುರ್ತು ನಿರ್ಗಮನ ದ್ವಾರಗಳು ಇರತಕ್ಕದ್ದು.

AIS: 052 AIS: 119 ಅನುಗುಣವಾಗಿ ಬಸ್ಸುಗಳ ಮೇಲ್ಯಾವಣಿಗಳಲ್ಲಿ ಲಗೇಜ್ ಕ್ಯಾರಿಯರ್ಗಳನ್ನು ತೆಗೆದುಹಾಕುವುದು.

ಎಲ್ಲಾ ಸ್ಟೀಪರ್ ಕೋಚ್ ಬಸ್ಸುಗಳಲ್ಲಿ ಕನಿಷ್ಠ 10 ಕೆ.ಜಿ. ಸಾಮರ್ಥ್ಯದ ಅಗ್ನಿಶಾಮಕ ಸಾಧನಗಳನ್ನು ಅಳವಡಿಸುವುದು.

ಬಸ್ ಕವಚ ನಿರ್ಮಾಣ ಸಂಸ್ಥೆಗಳು ಕೇಂದ್ರ ಮೋಟಾರು ವಾಹನ ನಿಯಮವಾಳಿ 1989ರ ನಿಯಮ 126 ರಂತೆ ಹೊಂದಿರುವ ಪ್ರಮಾಣಪತ್ರ ಸಿಂಧುತ್ವವಿದ್ದು, ಸದರಿ ಕಂಪನಿಗಳು ನಿರ್ಮಿಸುವ ವಾಹನಗಳನ್ನು ಮಾತ್ರ ನೋಂದಾಯಿಸಲಾಗುವುದು.

ಅನುಮೋದಿತ ಟೆಸ್ಟಿಂಗ್ ಏಜೆನ್ಸಿಗಳು ನೀಡುವ ಪ್ರಮಾಣಪತ್ರ ನಮೂನೆ 22 ಮತ್ತು 22A ಗಳನ್ನು ಪರಿಶೀಲಿಸಿದ ನಂತರವೇ ವಾಹನಗಳನ್ನು ನೋಂದಾಯಿಸಲಾಗುವುದು.

ಈ ಮೇಲಿನ ಸೂಚನೆಗಳನ್ನು ವಾಹನದ ಮಾಲೀಕರು ದಿನಾಂಕ: 28-02-2026ರ ಒಳಗೆ ಕಡ್ಡಾಯವಾಗಿ ಪಾಲಿಸುವುದು, ತಪ್ಪಿದಲ್ಲಿ ಅಂತಹ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ 1988 ಹಾಗೂ ಅದರಡಿ ರಚಿಸಲಾದ ನಿಯಮಗಳಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಿದೆ.

BIG NEWS: Important announcement from the State Transport Department: Implementation of these safety measures is mandatory in all buses!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

3 Mins Read

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

2 Mins Read

BIG NEWS: ರಾಜ್ಯದಲ್ಲಿ `ಗ್ರಾಮ ಪಂಚಾಯಿತಿ ಚುನಾವಣೆ’ : ವಾರ್ಡ್‌ ಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

3 Mins Read
Recent News

​’ಪ್ರಧಾನಿ ಮೋದಿ ಮೇಲೆ ಅಮೇರಿಕಾ ಒತ್ತಡ ಹೇರುವುದು ವ್ಯರ್ಥ’: ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಪುಟಿನ್!

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

​’ಇರಾನ್ ಅಮೆರಿಕದ ಸೈನಿಕರನ್ನು ಕೊಂದರೆ, ಅದು ಯುದ್ಧ ಮರುಪ್ರಾರಂಭಿಸಲು ಸೂಕ್ತ ಕಾರಣ’: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

State News
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

By kannadanewsnow57 KARNATAKA 3 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (LADS) ಅಡಿಯಲ್ಲಿ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಯಾವೆಲ್ಲಾ ಪ್ರಮುಖ ಕಾಮಗಾರಿಗಳನ್ನು…

GOOD NEWS : `ರಾಜ್ಯ ಸರ್ಕಾರಿ ನೌಕರರಿಗೆ’ ಭರ್ಜರಿ ಗುಡ್ ನ್ಯೂಸ್ : ನಿವೃತ್ತಿ ಹಿಂದಿನ ದಿನ ‘ಕಾಲ್ಪನಿಕ ವೇತನ ಬಡ್ತಿ’ ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ!

BIG NEWS: ರಾಜ್ಯದಲ್ಲಿ `ಗ್ರಾಮ ಪಂಚಾಯಿತಿ ಚುನಾವಣೆ’ : ವಾರ್ಡ್‌ ಗಳ ರಚನೆ, ಮೀಸಲಾತಿ ನಿಗದಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.