Subscribe to Updates
Get the latest creative news from FooBar about art, design and business.
Author: kannadanewsnow57
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಇಂದು ಕೋಲ್ಕತ್ತಾದ ಕಾಲಿಘಾಟ್‌ನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕೃತ ನಿವಾಸದ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ್ದಾರೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (TMC) ನಡುವಿನ ವಾಕ್ಸಮರ ಮತ್ತು ಭದ್ರತಾ ವಿಚಾರಗಳಿಗೆ ಸಂಬಂಧಿಸಿದಂತೆ ಈ ಪ್ರತಿಭಟನೆ ನಡೆದಿದೆ ಎನ್ನಲಾಗಿದೆ. ಸಿಎಂ ನಿವಾಸದ ಸಮೀಪ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಮತಾ ಬ್ಯಾನರ್ಜಿ ಅವರ ನಿವಾಸದ ಪ್ರವೇಶ ದ್ವಾರದ ಬಳಿಯೇ ಬಿಜೆಪಿ ಬೆಂಬಲಿಗರು ಕೇಸರಿ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.ಈ ದಿಢೀರ್ ಬೆಳವಣಿಗೆಯಿಂದಾಗಿ ಕಾಲಿಘಾಟ್ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. https://twitter.com/ANI/status/2051198322640371933?s=20
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಆರಂಭಿಕ ಟ್ರೆಂಡ್ಗಳಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭಾರಿ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದ ಒಟ್ಟು 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಪಕ್ಷವು ಸದ್ಯ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ವಿಜಯ್ ನಿವಾಸದಲ್ಲಿ ಸೀಟಿ ಹೊಡೆದು ಸಂಭ್ರಮಾಚರಣೆ ಚುನಾವಣಾ ಫಲಿತಾಂಶದ ಟ್ರೆಂಡ್ ತಮ್ಮ ಪರವಾಗಿ ಬರುತ್ತಿದ್ದಂತೆಯೇ ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದೆ. ಇತ್ತ ಮನೆಯ ಒಳಗಡೆ ವಿಜಯ್ ಅವರ ಕುಟುಂಬ ಸದಸ್ಯರು ಸೀಟಿ ಹೊಡೆಯುವ ಮೂಲಕ ಮತ್ತು ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸುತ್ತಿದ್ದಾರೆ. ‘ದಳಪತಿ’ ವಿಜಯ್ ಅವರ ತಾಯಿ ಶೋಭಾ ಮತ್ತು ತಂದೆ ಎಸ್.ಎ. ಚಂದ್ರಶೇಖರ್ ಅವರ ಮುಖದಲ್ಲಿ ಮಗನ ರಾಜಕೀಯ ಯಶಸ್ಸಿನ ಖುಷಿ ಎದ್ದು ಕಾಣುತ್ತಿದೆ. 234 ಕ್ಷೇತ್ರಗಳ ಪೈಕಿ 107 ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಮುನ್ನಡೆ. ದಶಕಗಳಿಂದ ತಮಿಳುನಾಡನ್ನಾಳಿದ…
ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿ ಭಾನುವಾರ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದ್ದು, ಸಕ್ಕರೆ ನಾಡಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಕಡಿದು ಹತ್ಯೆ ಮಾಡಿದೆ. ಘಟನೆಯ ವಿವರ: ಮೈಸೂರು ಮೂಲದ ಮಹಮ್ಮದ್ ಸೋಹೇದ್ (27) ಕೊಲೆಯಾದ ದುರ್ದೈವಿ. ಬೈಕಿನಲ್ಲಿ ತೆರಳುತ್ತಿದ್ದ ಸೋಹೇದ್ನನ್ನು ನಾಲ್ಕೈದು ಮಂದಿ ಕಿರಾತಕರ ತಂಡ ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದೆ. ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂ ತಲುಪುತ್ತಿದ್ದಂತೆ ಅಡ್ಡಗಟ್ಟಿದ ಹಂತಕರು, ಲಾಂಗು ಮತ್ತು ಮಚ್ಚುಗಳಿಂದ ಮನಬಂದಂತೆ ದಾಳಿ ನಡೆಸಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಸೋಹೇದ್ ಓಡಲು ಯತ್ನಿಸಿದರೂ ಬಿಡದ ಹಂತಕರು, ಸಾರ್ವಜನಿಕವಾಗಿಯೇ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ತಾವು ತಂದಿದ್ದ ಮಾರಾಕಾಸ್ತ್ರಗಳನ್ನು ಘಟನಾ ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…
ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ನಿಮ್ಮ ಊರಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ (RO Plants) ಯಾವುದೇ ತಾಂತ್ರಿಕ ತೊಂದರೆ ಅಥವಾ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ಈಗ ನೇರವಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಕುರಿತು ಪ್ರಕಟಣೆ ಹೊರಡಿಸಿದೆ. ಯಾವಾಗ ದೂರು ನೀಡಬಹುದು? ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಯಾಚರಣೆಯಲ್ಲಿ ಸಮಸ್ಯೆ ಉಂಟಾದಲ್ಲಿ. ಘಟಕದ ಕಾಯಿನ್ ಬಾಕ್ಸ್ನಲ್ಲಿ (Coin Box) ತಾಂತ್ರಿಕ ದೋಷ ಕಂಡುಬಂದಲ್ಲಿ. ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದಾಗ ಸಾರ್ವಜನಿಕರು ಸುಮ್ಮನೆ ಕೂರದೇ ತಕ್ಷಣವೇ ದೂರು ದಾಖಲಿಸಬಹುದು. ಸಹಾಯವಾಣಿ ಸಂಖ್ಯೆ: ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ‘ಪಂಚಮಿತ್ರ’ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಜನರು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು: ಪಂಚಮಿತ್ರ ಸಹಾಯವಾಣಿ: 8277506000 ಗ್ರಾಮೀಣ…
ನವದೆಹಲಿ : ಇಂದು 2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಅಂತಿಮ ಟ್ರೆಂಡ್ ವಿವರಗಳು ಇಲ್ಲಿವೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ – 2026 1. ತಮಿಳುನಾಡು: ವಿಜಯ್ ಅವರ ಟಿವಿಕೆ ಸುನಾಮಿ! ತಮಿಳುನಾಡು ರಾಜಕೀಯದಲ್ಲಿ ಈ ಬಾರಿ ಐತಿಹಾಸಿಕ ಬದಲಾವಣೆ ಕಂಡುಬಂದಿದೆ. ಚಿತ್ರನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಮೊದಲ ಚುನಾವಣೆಯಲ್ಲೇ ಅಚ್ಚರಿಯ ಮುನ್ನಡೆ ಸಾಧಿಸಿದೆ. ಟಿವಿಕೆ (TVK): 104 (ಮುನ್ನಡೆ) ಎಐಎಡಿಎಂಕೆ (AIADMK): 78 ಡಿಎಂಕೆ (DMK): 51 ಬಹುಮತದ ಸಂಖ್ಯೆ: 118 ಡಿಎಂಕೆ ಸರ್ಕಾರಕ್ಕೆ ಈ ಫಲಿತಾಂಶ ದೊಡ್ಡ ಆಘಾತ ನೀಡಿದ್ದು, ವಿಜಯ್ ಕಿಂಗ್ ಮೇಕರ್ ಆಗಿ ಹೊರಹೊಮ್ಮುತ್ತಿದ್ದಾರೆ. 2. ಪಶ್ಚಿಮ ಬಂಗಾಳ: ಮಮತಾ ಕೋಟೆಯಲ್ಲಿ ಅರಳಿದ ಕಮಲ ದಶಕಗಳ ಕಾಲ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ಗೆ ಈ ಬಾರಿ…
ಬಾಗಲಕೋಟೆ : ಕರ್ನಾಟಕ ಉಪಚುನಾವಣೆಯಲ್ಲಿ ಇದೀಗ ಬಾಗಲಕೋಟೆ ಕ್ಷೇತ್ರದಲ್ಲಿ ಉಮೇಶ್ ಮೇಟಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 20 ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 14875 ಮತಗಳ ಅಂತರದಿಂದ ಜಯಗಳಿಸಿದರು. ವೀರಣ್ಣ ಚರಂತಿಮಠ ಅವರು ಈ ಒಂದು ಕ್ಷೇತ್ರದಲ್ಲಿ ಇದೀಗ ಸೋಲು ಅನುಭವಿಸಿದ್ದಾರೆ. ತೀವ್ರ ಹಣಾಹಣಿಯಲ್ಲಿ ಉಮೇಶ್ ಮೇಟಿಗೆ 78,482 ಮತ ಬಂದಿದ್ದು, ಮತ್ತು ವೀರಣ್ಣ ಚರಂತಿಮಠ ಅವರಿಗೆ 63607 ಮತಗಳು ಬಿದ್ದಿವೆ. ಇನ್ನು ಮೂರು ಸುತ್ತಿನ ಮತ ಎಣಿಕೆ ಮಾತ್ರೆಗಳು ಬಾಕಿ ಇದ್ದು,ಇನ್ನೇನು ಅಧಿಕೃತ ಫಲಿತಾಂಶ ಘೋಷಣೆ ಅಷ್ಟೇ ಬಾಕಿ ಇದೆ. ಮತಗಳ ಅಂತರ ಮತ್ತು ಅಂಕಿ-ಅಂಶ: ಒಟ್ಟು 20 ಸುತ್ತುಗಳ ಸುದೀರ್ಘ ಮತ ಎಣಿಕೆಯ ನಂತರ, ಉಮೇಶ್ ಮೇಟಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವೀರಣ್ಣ ಚರಂತಿಮಠ ಅವರಿಗಿಂತ 14,875 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದರು. ಚುನಾವಣಾ ಕಣದಲ್ಲಿ ಉಮೇಶ್ ಮೇಟಿ ಅವರು ಒಟ್ಟು 78,482 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ,…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಬಹುಮತದ ಗಡಿಯನ್ನು ದಾಟುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ರಾಜ್ಯಾದ್ಯಂತ ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ದೇಶದಲ್ಲಿ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಭಾರಿ ಹಿನ್ನಡೆಯಾಗಿದೆ. ತೀವ್ರ ಪೈಪೋಟಿಯ ನಡುವೆಯೂ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮ್ಯಾಜಿಕ್ ನಂಬರ್ ದಾಟುವ ಮೂಲಕ ಬಂಗಾಳದ ನೆಲದಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ ಬಂಗಾಳದ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಸದ್ಯ 177 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬಹುಮತದ ಗಡಿಯನ್ನು ದಾಟಿದೆ. ಪ್ರಧಾನಿ ಮೋದಿ ಮತ್ತು…
ನವದೆಹಲಿ: ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಹಿನ್ನೆಲೆ: 2026ರ ಹೊಸ ತಿದ್ದುಪಡಿ ಮಸೂದೆಯು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಮ್ಮ ಲಿಂಗ ಗುರುತಿನ ಪ್ರಮಾಣಪತ್ರವನ್ನು ಪಡೆಯಲು ‘ಕಡ್ಡಾಯವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಬೇಕು’ ಎಂಬ ನಿಯಮವನ್ನು ಒಳಗೊಂಡಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಈ ನಿಯಮವು ವ್ಯಕ್ತಿಯ ‘ಸ್ವಯಂ-ನಿರ್ಣಯದ ಹಕ್ಕನ್ನು’ (Right of Self-determination) ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾರೆ. ನ್ಯಾಯಪೀಠದ ಪ್ರಮುಖ ಅಂಶಗಳು: ತ್ರಿಸದಸ್ಯ ಪೀಠ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಇದರ ವಿಚಾರಣೆಗಾಗಿ ಸಿಜೆಐ ನೇತೃತ್ವದಲ್ಲೇ ಮೂವರು ನ್ಯಾಯಾಧೀಶರ ವಿಶೇಷ ಪೀಠವನ್ನು ರಚಿಸಿದೆ. ಅರ್ಜಿದಾರರ ವಾದ: ಲಿಂಗ ಗುರುತಿಸಿಕೊಳ್ಳುವುದು ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಸರ್ಕಾರವು ವೈದ್ಯಕೀಯ ಚಿಕಿತ್ಸೆಯನ್ನು ಕಡ್ಡಾಯಗೊಳಿಸಿರುವುದು…
ನವದೆಹಲಿ: ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆಯೊಂದನ್ನು ನೀಡಿದೆ. ಇನ್ನು ಮುಂದೆ ಫಾಸ್ಟ್‌ಟ್ಯಾಗ್ (FASTag) ಅನ್ನು ವಾಹನದ ಮುಂಭಾಗದ ಗಾಜಿಗೆ (Windscreen) ಕಡ್ಡಾಯವಾಗಿ ಅಂಟಿಸದಿದ್ದರೆ, ಅಂತಹ ಟ್ಯಾಗ್‌ಗಳನ್ನು ಬ್ಲಾಕ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಕೈಯಲ್ಲಿ ಹಿಡಿದು ಸ್ಕ್ಯಾನ್ ಮಾಡುವುದು ಸರಿಯಲ್ಲ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ಫಾಸ್ಟ್‌ಟ್ಯಾಗ್ ಅನ್ನು ಅನೇಕ ಚಾಲಕರು ವಾಹನದ ಗಾಜಿಗೆ ಅಂಟಿಸುವ ಬದಲು, ಟೋಲ್ ಪ್ಲಾಜಾ ಬಂದಾಗ ಕೈಯಲ್ಲಿ ಹಿಡಿದು ಸ್ಕ್ಯಾನ್ ಮಾಡಿಸುತ್ತಿರುವುದು ಕಂಡುಬಂದಿದೆ. ಇದು ಸರಿಯಾದ ಕ್ರಮವಲ್ಲ ಎಂದು NHAI ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಗಾಜಿನ ಮೇಲೆ ಅಂಟಿಸುವುದರಿಂದ ಆಗುವ ಪ್ರಯೋಜನಗಳು: ತ್ವರಿತ ಸ್ಕ್ಯಾನಿಂಗ್: ವಾಹನವು ಚಲನೆಯಲ್ಲಿರುವಾಗಲೇ ಸ್ಕ್ಯಾನರ್ ಚಿಪ್ ಅನ್ನು ಗುರುತಿಸಿ ಶುಲ್ಕ ಕಡಿತಗೊಳಿಸುತ್ತದೆ. ದಟ್ಟಣೆ ನಿಯಂತ್ರಣ: ವಾಹನಗಳು ಟೋಲ್ ಬಳಿ ನಿಲ್ಲುವ ಅಗತ್ಯವಿಲ್ಲದ ಕಾರಣ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ದುರುಪಯೋಗಕ್ಕೆ ತಡೆ: ಒಂದೇ ಫಾಸ್ಟ್‌ಟ್ಯಾಗ್…
ನವದೆಹಲಿ : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇಡೀ ದೇಶದ ಕುತೂಹಲ ಕೆರಳಿಸಿರುವ ಈ ಫಲಿತಾಂಶದಲ್ಲಿ, ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳ ಅಗತ್ಯವಿದೆ? ಆಯಾ ರಾಜ್ಯಗಳ ಒಟ್ಟು ಸೀಟುಗಳು ಮತ್ತು ಮ್ಯಾಜಿಕ್ ನಂಬರ್ ಎಷ್ಟು ಎಂಬ ಮಾಹಿತಿ ಇಲ್ಲಿದೆ. 1. ತಮಿಳುನಾಡು ದಕ್ಷಿಣದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಭಾರಿ ಪೈಪೋಟಿ ಏರ್ಪಟ್ಟಿದೆ. ಒಟ್ಟು ವಿಧಾನಸಭಾ ಸ್ಥಾನಗಳು: 234 ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್: 118 ತಮಿಳುನಾಡಿನಲ್ಲಿ ಸದ್ಯ AIADM 78 ಕ್ಷೇತ್ರಗಳಲ್ಲಿ, DMK 51, TVK 104 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 2. ಪಶ್ಚಿಮ ಬಂಗಾಳ ದಶಕಗಳ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಒಟ್ಟು ವಿಧಾನಸಭಾ ಸ್ಥಾನಗಳು: 294 ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್: 148 (ಗಮನಿಸಿ: ಫಾಲ್ತಾ ಕ್ಷೇತ್ರದಲ್ಲಿ ಮರುಮತದಾನದ…














