Author: kannadanewsnow57

ಜೈಪುರ: ವಿಚ್ಛೇದನ ಒಪ್ಪಂದಕ್ಕೆ ಸಹಿ ಹಾಕಿ, ಜೀವನಾಂಶವಾಗಿ 20 ಲಕ್ಷ ರೂಪಾಯಿ ಪಡೆದ ನಂತರವೂ ಮಾಜಿ ಪತಿ ಮತ್ತು ಅವರ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪತಿ ಹಾಗೂ ಅವರ ವಯೋವೃದ್ಧ ಪೋಷಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ. ವೈವಾಹಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೊಸೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ 65 ವರ್ಷದ ಸತ್ಯಪಾಲ್ ಶರ್ಮಾ ಮತ್ತು ಅವರ 62 ವರ್ಷದ ಪತ್ನಿ ಸೀತಾ ದೇವಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಈ ಆದೇಶ ನೀಡಿದ್ದಾರೆ. 20 ಲಕ್ಷ ರೂ. ಜೀವನಾಂಶದೊಂದಿಗೆ ವಿಚ್ಛೇದನ ಇತ್ಯರ್ಥ ವರದಿಗಳ ಪ್ರಕಾರ, ಈ ದಂಪತಿಯ ವಿವಾಹವು 2009ರ ನವೆಂಬರ್‌ನಲ್ಲಿ ನಡೆದಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2013 ರಲ್ಲಿ ಮಹಿಳೆ ತನ್ನ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ…

Read More

ಜರ್ಮ್ ಸೆಲ್ ಟ್ಯೂಮರ್ಗಳು (Germ Cell Tumours) ಅತ್ಯಂತ ಅಪರೂಪದ ಕ್ಯಾನ್ಸರ್ ಆಗಿದ್ದು, ವಿಶ್ವಾದ್ಯಂತ ವರ್ಷಕ್ಕೆ ಸುಮಾರು 75,000 ಜನರಲ್ಲಿ ಮಾತ್ರ ಇದು ಪತ್ತೆಯಾಗುತ್ತದೆ. ಸಾಮಾನ್ಯವಾಗಿ ಅಂಡಾಶಯದ ಕ್ಯಾನ್ಸರ್ (Ovarian Cancer) ಅಂದರೆ ವಯಸ್ಸಾದ ಮಹಿಳೆಯರಿಗೆ ಮಾತ್ರ ಬರುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಜರ್ಮ್ ಸೆಲ್ ಟ್ಯೂಮರ್ ಎಂಬುದು ಯುವತಿಯರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು 30 ವರ್ಷದೊಳಗಿನ ಮಹಿಳೆಯರನ್ನು ಕಾಡುವ ಒಂದು ಅಪರೂಪದ ಅಂಡಾಶಯದ ಕ್ಯಾನ್ಸರ್ ಆಗಿದೆ. ಇದು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುವುದರಿಂದ ಮತ್ತು ತುಂಬಾ ಅಪರೂಪವಾಗಿರುವುದರಿಂದ, ಜನರು ಇದನ್ನು ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಹೀಗಾಗಿ ಇದನ್ನು ಆರಂಭದಲ್ಲೇ ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಮಹಿಳೆಯರಲ್ಲಿ ಜರ್ಮ್ ಸೆಲ್ ಟ್ಯೂಮರ್ ಭುವನೇಶ್ವರದ ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಅಂಕಾಲಜಿ ವಿಭಾಗದ ಕನ್ಸಲ್ಟೆಂಟ್ ಆದ ಡಾ. ನಿತೀಶ್ ರಂಜನ್ ಆಚಾರ್ಯ ಅವರ ಪ್ರಕಾರ, “ಮಹಿಳೆಯರಲ್ಲಿ ಜರ್ಮ್ ಸೆಲ್ ಟ್ಯೂಮರ್ಗಳು ಅಂಡಾಶಯದಲ್ಲಿ ಮೊಟ್ಟೆಗಳನ್ನು ಉತ್ಪಾದಿಸುವ ಕೋಶಗಳಿಂದ ಹುಟ್ಟಿಕೊಳ್ಳುತ್ತವೆ. ಈ ಕಾಯಿಲೆಯ ಲಕ್ಷಣಗಳು ನಿರ್ದಿಷ್ಟವಾಗಿ…

Read More

ಖಮ್ಮಂ : ತೆಲಂಗಾಣದ ಉಮ್ಮಡಿ ಖಮ್ಮಂ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದೆ. ಜನರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಭೀಕರ ಸದ್ದಿನೊಂದಿಗೆ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ, ಬೆಚ್ಚಿಬಿದ್ದ ಸಾರ್ವಜನಿಕರು ಪ್ರಾಣಭಯದಿಂದ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಮುಖ್ಯವಾಗಿ ಭದ್ರಾದ್ರಿ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.8 ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 2.26 ಕ್ಕೆ ಸಂಭವಿಸಿದ ಈ ಘಟನೆಯಿಂದಾಗಿ ಜನರು ರಾತ್ರಿಯಿಡೀ ನಿದ್ದೆಯಿಲ್ಲದೆ ಜಾಗರಣೆ ಮಾಡುವಂತಾಯಿತು. ಭದ್ರಾದ್ರಿ ಜಿಲ್ಲೆಯ ಹೊಸಗೂಡೆಂ (ಕೊತ್ತಗುಡೆಂ), ಪಾಲ್ವಂಚ, ಭದ್ರಾಚಲಂ ಮತ್ತು ಬೂರ್ಗಂಪಾಡು ಪ್ರದೇಶಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಭೂಕಂಪನದ ತೀವ್ರತೆಯು ಕಡಿಮೆ ಮಟ್ಟದಲ್ಲಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಭಾರಿ ನಷ್ಟ ಸಂಭವಿಸಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಅಥವಾ ಭಯಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳು ಸೂಕ್ತ ಸಲಹೆ ನೀಡಿದ್ದಾರೆ.

Read More

ಪಟ್ನಾ: ಚಿನ್ನದ ಅಂಗಡಿಗೆ ಗ್ರಾಹಕರಂತೆ ಬಂದು, ಮಾಲೀಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ (ಮೆಣಸಿನಕಾಯಿ ಪುಡಿ ಸ್ಪ್ರೇ) ಜಲ್ಲಿ ದರೋಡೆ ಮಾಡಲು ಯತ್ನಿಸಿದ ಇಬ್ಬರು ಯುವತಿಯರನ್ನು ಸಾರ್ವಜನಿಕರು ಸಿಕ್ಕಿಹಾಕಿಸಿ ಪೊಲೀಸರಿಗೊಪ್ಪಿಸಿದ ರೋಮಾಂಚನಕಾರಿ ಘಟನೆಯೊಂದು ಬಿಹಾರದ ಪಟ್ನಾದ ದಿಘಾ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ (ಜೂನ್ 12) ಸಂಜೆ ಸುಮಾರು 5:35 ರ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ (CCTV) ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಸಿನಿಮೀಯ ಶೈಲಿಯಲ್ಲಿ ಜಾಣ್ಮೆ ಪ್ರದರ್ಶಿಸಿದ ಮಾಲೀಕ! ಆಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಯುವತಿಯರು, ಮಾಲೀಕನ ಗಮನ ಬೇರೆಡೆ ಸೆಳೆದಿದ್ದಾರೆ. ಹಠಾತ್ತನೆ ಅವರಲ್ಲೊಬ್ಬಳು ತನ್ನ ಬಳಿಯಿದ್ದ ಪೆಪ್ಪರ್ ಸ್ಪ್ರೇ ತೆಗೆದು ಮಾಲೀಕನ ಮುಖಕ್ಕೆ ಹೊಡೆಯಲು ಯತ್ನಿಸಿದ್ದಾಳೆ. ಆದರೆ, ಅತ್ಯಂತ ಜಾಗರೂಕರಾಗಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕ ಸಮಯಪ್ರಜ್ಞೆ ಮೆರೆದು ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದ ಮಾಲೀಕ, ತಕ್ಷಣವೇ ಅಂಗಡಿಯಿಂದ ಹೊರಗೆ ಓಡಿ ಬಂದು, ದರೋಡೆಗೆ ಯತ್ನಿಸಿದ ಇಬ್ಬರೂ ಯುವತಿಯರು…

Read More

ಹಾವೇರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ತನಗೆ ವಿದ್ಯೆ ಕಲಿಸಿ, ತಂದೆಯ ಸ್ಥಾನದಲ್ಲಿ ನಿಂತು ನೆರವಾದ ಗುರುವಿನ ಋಣವನ್ನು ಶಿಷ್ಯನೊಬ್ಬ ವಿಶಿಷ್ಟವಾಗಿ ತೀರಿಸಿದ್ದಾನೆ. ವರ್ಷಗಳ ಹಿಂದೆ ತನ್ನ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದ ಶಿಕ್ಷಕರ ನಿವೃತ್ತಿ ದಿನದಂದೇ ಶಿಷ್ಯನೊಬ್ಬ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಗುರು ಭಕ್ತಿಯನ್ನು ಮೆರೆದಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದ ಶಿಕ್ಷಕರೊಬ್ಬರ ಬೀಳ್ಕುಡುಗೆ ಸಮಾರಂಭ ಇಂತಹದೊಂದು ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಪ್ರೌಢಶಾಲೆಯ ಶಿಕ್ಷಕರಾದ ಸಿ.ಎಸ್. ವಸ್ತ್ರದ ಅವರು ಸೇವೆಯಿಂದ ನಿವೃತ್ತರಾಗಿದ್ದು, ಅವರ ನಿವೃತ್ತಿ ದಿನದಂದೇ ಹಳೆಯ ವಿದ್ಯಾರ್ಥಿಯೊಬ್ಬ ಪ್ರೀತಿಯಿಂದ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಬಡ ವಿದ್ಯಾರ್ಥಿಗೆ ಆಸರೆಯಾಗಿದ್ದ ಗುರು: ವರ್ಷಗಳ ಹಿಂದೆ ಆರ್ಥಿಕವಾಗಿ ಹಿಂದುಳಿದಿದ್ದ ಬಡ ವಿದ್ಯಾರ್ಥಿಯೊಬ್ಬನ ವಿದ್ಯಾಭ್ಯಾಸಕ್ಕೆ ಶಿಕ್ಷಕ ಸಿ.ಎಸ್. ವಸ್ತ್ರದ ಅವರು ಆಸರೆಯಾಗಿದ್ದರು. ತಂದೆಯ ಸ್ಥಾನದಲ್ಲಿ ನಿಂತು ಆ ವಿದ್ಯಾರ್ಥಿಯ ಶಾಲಾ ಶುಲ್ಕವನ್ನು ಭರಿಸಿ, ಆತ ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸಿದ್ದರು. ಗುರುವಿನ ಪ್ರೋತ್ಸಾಹದಿಂದಾಗಿ ಆ ವಿದ್ಯಾರ್ಥಿ ಇಂದು…

Read More

ಬೆಂಗಳೂರು : ರಾಜ್ಯಾದ್ಯಂತ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ದಂಡ ಪಾವತಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಶೇ. 50 ರಷ್ಟು ಭರ್ಜರಿ ರಿಯಾಯಿತಿ ನೀಡಿ, ಅವಧಿಯನ್ನು ವಿಸ್ತರಣೆ ಮಾಡಿದೆ. ಜೂನ್ 21 ರಿಂದ ಜುಲೈ 10 ರವರೆಗೆ ಅವಕಾಶ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ವಿಶೇಷ ಸೌಲಭ್ಯವು ಜೂನ್ 21 ರಿಂದ ಜೂನ್ ಜುಲೈ 10 ರವರೆಗೆ ಲಭ್ಯವಿರಲಿದೆ. ಈ ಅವಧಿಯಲ್ಲಿ ದಂಡ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ₹2,827 ಕೋಟಿ ದಂಡ ಬಾಕಿ: ಜೂನ್ 4 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ, 2025 ರಲ್ಲಿ ಹಲವು ಬಾರಿ ವಿಶೇಷ ಅಭಿಯಾನಗಳನ್ನು ನಡೆಸಿದಾಗ್ಯೂ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ದಂಡ ಬಾಕಿ ಉಳಿದುಕೊಂಡಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 2,827 ಕೋಟಿ ರೂ. ಮೊತ್ತದ ಸಂಚಾರ ದಂಡ ಸಂಗ್ರಹವಾಗದೇ ಬಾಕಿ ಉಳಿದಿದೆ. ಹೀಗಾಗಿ ಸಾರ್ವಜನಿಕರಿಗೆ…

Read More

ಬೆಂಗಳೂರು: 2026-27ನೇ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವ ಸಾರ್ವಜನಿಕರಿಗೆ ಸರ್ಕಾರವು ವಿಶೇಷ ರಿಯಾಯಿತಿಯೊಂದನ್ನು ಘೋಷಿಸಿದೆ. ತೆರಿಗೆದಾರರು ಜೂನ್‌ 30ರ ಒಳಗಾಗಿ ತಮ್ಮ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದರೆ, ಶೇಕಡಾ 5ರಷ್ಟು ರಿಯಾಯಿತಿ (ಡಿಸ್ಕೌಂಟ್) ಪಡೆದುಕೊಳ್ಳಬಹುದಾಗಿದೆ. ಪೂರ್ಣ ಪಾವತಿ ಕಡ್ಡಾಯ: ಜೂನ್ 30ರ ಒಳಗೆ ಆಸ್ತಿ ತೆರಿಗೆಯ ಸಂಪೂರ್ಣ ಮೊತ್ತವನ್ನು ಒಟ್ಟಿಗೆ ಪಾವತಿಸುವ ಸಾರ್ವಜನಿಕರಿಗೆ ಮಾತ್ರ ಈ ಶೇ. 5ರ ರಿಯಾಯಿತಿ ಸೌಲಭ್ಯ ಅನ್ವಯವಾಗುತ್ತದೆ. ಭಾಗಶಃ ಪಾವತಿಸುವವರಿಗೆ ಈ ವಿನಾಯಿತಿ ಸಿಗುವುದಿಲ್ಲ. ಅಂತಿಮ ಗಡುವು: 2026ರ ಜೂನ್ 30ರ ನಂತರ ಪಾವತಿಸುವ ತೆರಿಗೆಗೆ ಯಾವುದೇ ರಿಯಾಯಿತಿ ಲಭ್ಯವಿರುವುದಿಲ್ಲ. ಸಹಾಯವಾಣಿ ಸಂಪರ್ಕಿಸಿ: ಆಸ್ತಿ ತೆರಿಗೆ ಪಾವತಿ ಹಾಗೂ ರಿಯಾಯಿತಿ ಕುರಿತು ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಸಾರ್ವಜನಿಕರು ‘ಪಂಚಮಿತ್ರ’ ಸಹಾಯವಾಣಿ ಸಂಖ್ಯೆ: 8277506000 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಆದ್ದರಿಂದ ನಾಗರಿಕರು ಕೊನೆಯ ದಿನದ ಧಾವಂತವನ್ನು ತಪ್ಪಿಸಲು ಹಾಗೂ ಶೇ. 5ರಷ್ಟು ರಿಯಾಯಿತಿಯ…

Read More

ಬೆಂಗಳೂರು: ರಾಜ್ಯದಲ್ಲಿ ಮತದಾನದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು, ಪಿಂಚಣಿ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸದ್ಯದಲ್ಲೇ ಆರಂಭವಾಗಲಿರುವ ಕೇಂದ್ರ ಸರ್ಕಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಎಸ್‌ಆರ್‌) ಪ್ರಕ್ರಿಯೆಯ ಕುರಿತು ಅವರು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.ಎಸ್‌ ಐ ಆರ್‌ ವೇಳೆ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಖುದ್ದಾಗಿ ಹೋಗಿ ಮತದಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.ಮತದಾನದ ಹಕ್ಕು ಪಡೆಯಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳೇ ಜನರಿಗೆ ಒದಗಿಸಬೇಕು. ಯಾರೇ ಆಗಲಿ ತಮ್ಮ ಊರಿನಿಂದ ಹೊರಗೆ ಕೆಲಸ ಮಾಡುತ್ತಿದ್ದರೆ, ಅವರ ದಾಖಲೆಗಳನ್ನು ಸಂಗ್ರಹಿಸಿ ಮತದಾನದ ಹಕ್ಕಿಗೆ ಅರ್ಜಿ ಸಲ್ಲಿಸಬೇಕು. ವಾಸಪ್ರಮಾಣ ಪತ್ರ ಇಲ್ಲದವರಿಗೆ ಅದನ್ನು ಒದಗಿಸಬೇಕು ಎಂದು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿಗೆ…

Read More

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆ ನೀಡಿದ್ದು, ಇಂದಿನಿಂದ (ಜೂನ್ 13, 2026) ರಾಜ್ಯದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Student Bus Pass) ವಿತರಣಾ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ಹೊಸ ಶೈಕ್ಷಣಿಕ ವರ್ಷದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾರಿಗೆ ಇಲಾಖೆಯು ಈ ಮಹತ್ವದ ಕ್ರಮ ಕೈಗೊಂಡಿದೆ. ಕಳೆದ ಎರಡು ದಿನಗಳಿಂದ ಪ್ರಾಯೋಗಿಕವಾಗಿ ಆರಂಭಗೊಂಡಿದ್ದ ಪಾಸ್ ವಿತರಣೆಯು, ಇಂದು ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭರದಿಂದ ಸಾಗುತ್ತಿದೆ. ಎರಡು ದಿನಗಳಲ್ಲಿ ವಿತರಣೆಯಾದ ಪಾಸ್‌ಗಳ ವಿವರ: ನೀಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಜೂನ್ 12 ಮತ್ತು ಜೂನ್ 13 ರಂದು ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ ವಿತರಣೆಯಾದ ಉಚಿತ ಪಾಸ್‌ಗಳ ವಿವರ ಹೀಗಿದೆ: ಸಾರಿಗೆ ಸಂಸ್ಥೆ (RTC) 12-06-2026 13-06-2026 (ಇಂದು) ಒಟ್ಟು ಪಾಸ್‌ಗಳು KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) 350 510 860 BMTC…

Read More

ಯಾದಗಿರಿ: ದಿನಕ್ಕೆ ಮೂರರಿಂದ ನಾಲ್ಕು ಬಾಟಲಿ ಸ್ಟಿಂಗ್ ಜ್ಯೂಸ್  ಕುಡಿಯುತ್ತಿದ್ದ ಯುವಕನೊಬ್ಬ ಕಿಡ್ನಿ ಫೇಲ್ ಆಗಿ (ಮೂತ್ರಪಿಂಡದ ವೈಫಲ್ಯ) ಮೃತಪಟ್ಟಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಬಾಲು ದೇಸಾಯಿ ಮೃತಪಟ್ಟ ದುರ್ದೈವಿ ಯುವಕ. ಮೃತ ಯುವಕ ಬಾಲು ದೇಸಾಯಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಸತತವಾಗಿ 3 ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಅನ್ನು ಅತಿಯಾಗಿ ಸೇವಿಸುತ್ತಿದ್ದ ಎಂದು ಹೇಳಲಾಗಿದೆ.ಅಷ್ಟೊಂದು ಪ್ರಮಾಣದಲ್ಲಿ ಸ್ಟಿಂಗ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕುಟುಂಬದವರು ಮತ್ತು ಸ್ನೇಹಿತರು ಪದೇ ಪದೇ ಬುದ್ಧಿವಾದ ಹೇಳಿದ್ದರೂ ಯುವಕ ಅವರ ಮಾತುಗಳನ್ನು ಕೇಳದೆ ನಿರ್ಲಕ್ಷಿಸಿದ್ದನು. ಇತ್ತೀಚೆಗೆ ಯುವಕನ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಯುವಕನ ದೇಹದಲ್ಲಿ ಅತಿಯಾದ ಕೆಫೀನ್ ಹಾಗೂ ರಾಸಾಯನಿಕಗಳ (Chemicals) ಅಂಶ ಸೇರಿದ ಪರಿಣಾಮವಾಗಿ ಆತನ ಕಿಡ್ನಿ…

Read More