Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಒಳ ಮೀಸಲಾತಿ ವರದಿ ಜಾರಿಯಾದ ಬೆನ್ನಲ್ಲೇ 85,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ. ಹೌದು, ರಾಜ್ಯದಲ್ಲಿ ಒಳ ಮೀಸಲಾತಿ ಕಾರಣಕ್ಕೆ 2024ರ ನವೆಂಬರ್ ನಿಂದ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಗಣಪತಿ ಹಬ್ಬ ಮುಗಿಯುತಿದ್ದಂತೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಮೀಸಲಾತಿ ಅನ್ವಯವಾಗುವ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು. ಆಗಿನಿಂದ ನೇಮಕಾತಿ ನಡೆದಿಲ್ಲ.ಈಗ ಒಳ ಮೀಸಲಾತಿ ಜಾರಿಯಾಗಲಿರುವುದರಿಂದ ನೇಮಕಾತಿಗೆ ಮತ್ತು ಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಸುಮಾರು 85,000 ಹುದ್ದೆಗಳ ನೇಮಕಾತಿ ಗಳಿಗಾಗಿ ಎಲ್ಲಾ ಇಲಾಖೆಗಳ ಬೇಡಿಕೆ ಪ್ರಕ್ರಿಯೆ ವಿವಿಧ ಹಂತದಲ್ಲಿವೆ. ಕೆಲವು ಆರ್ಥಿಕ ಇಲಾಖೆ ಕೋರುವ ಹಂತದಲ್ಲಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ರಾಜ್ಯದಲ್ಲಿ ಮಂಜೂರಾದ 7,76,414 ಹುದ್ದೆಗಳಿದ್ದು, 4,91,533 ಹುದ್ದೆಗಳು…
ಉಡುಪಿ : ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ಇಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ನಟ ದಿನೇಶ್ ನಿಧನರಾಗಿದ್ದಾರೆ. ಕೆಜಿಎಫ್, ಉಳಿದವರು ಕಂಡಂತೆ, ರಿಕ್ಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ನವದೆಹಲಿ : ಈ ಶೈಕ್ಷಣಿಕ ವರ್ಷದಿಂದಲೇ ಮನಃಶಾಸ್ತ್ರ ಮತ್ತು ಆರೋಗ್ಯ ಸಂಬಂಧಿತ ಕೋರ್ಸ್ ಗಳನ್ನು ಇನ್ನು ಮುಂದೆ ದೂರ ಶಿಕ್ಷಣ ಅಥವಾ ಆನ್ಲೈನ್ ವಿಧಾನದ ಮೂಲಕ ಕಲಿಸುವುದನ್ನು ಸ್ಥಗಿತಗೊಳಿಸಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಆದೇಶ ಹೊರಡಿಸಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು 2025 ರಿಂದ ಆರೋಗ್ಯ ರಕ್ಷಣೆ, ಮನೋವಿಜ್ಞಾನ, ಪೌಷ್ಟಿಕಾಂಶ ಮತ್ತು ಸಂಬಂಧಿತ ವಿಷಯಗಳಲ್ಲಿ ಆನ್‌ಲೈನ್ ಅಥವಾ ದೂರ ಶಿಕ್ಷಣದ ಮೂಲಕ ಕೋರ್ಸ್‌ಗಳನ್ನು ನಡೆಸದಂತೆ ನಿರ್ದೇಶಿಸಿದೆ. ಈ ನಿಷೇಧವು NCHP ಕಾಯ್ದೆ, 2021 ರ ಅಡಿಯಲ್ಲಿ ಅನ್ವಯಿಸುತ್ತದೆ. ಇದು ಮನೋವಿಜ್ಞಾನ, ಸೂಕ್ಷ್ಮ ಜೀವವಿಜ್ಞಾನ, ಆಹಾರ ಮತ್ತು ಪೋಷಣೆ, ಜೈವಿಕ ತಂತ್ರಜ್ಞಾನ, ಕ್ಲಿನಿಕಲ್ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿಯಂತಹ ಕೋರ್ಸ್‌ಗಳನ್ನು ಒಳಗೊಂಡಿದೆ. ಈ ನಿಯಮವು ಸಂಬಂಧಿತ ವಿಶೇಷತೆಗೆ ಮಾತ್ರ ಅನ್ವಯಿಸುತ್ತದೆ UGC ಕಾರ್ಯದರ್ಶಿ ಮನೀಶ್ ಜೋಶಿ, “ಜುಲೈ-ಆಗಸ್ಟ್, 2025 ಮತ್ತು ನಂತರದ ಶೈಕ್ಷಣಿಕ ಅವಧಿಗೆ ಮುಕ್ತ ಮತ್ತು ದೂರಶಿಕ್ಷಣ ಮತ್ತು ಆನ್‌ಲೈನ್ ಮೋಡ್ ಅಡಿಯಲ್ಲಿ ಮನೋವಿಜ್ಞಾನವನ್ನು…
ಬೆಂಗಳೂರು : ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸಂಚಾರಿ ಇ-ಚಲನ್ ಮುಖಾಂತರ ದಾಖಲಾದ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ನೀಡಲಾಗಿರುವ ಶೇ.50ರಷ್ಟು ರಿಯಾಯಿತಿ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡೇ ದಿನದಲ್ಲಿ ಬರೋಬ್ಬರಿ 7 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಹೌದು, 2ನೇ ದಿನವಾದ ಭಾನುವಾರ 1.07 ಲಕ್ಷ ಪ್ರಕರಣಗಳಲ್ಲಿ 3.01 ಕೋಟಿ ರು. ದಂಡ ಸಂಗ್ರಹವಾಗಿದೆ. ಮೊದಲ ದಿನ 1.48 ಲಕ್ಷ ಪ್ರಕರಣಗಳಲ್ಲಿ 4.18 ಕೋಟಿ ರು. ದಂಡ ಸಂಗ್ರಹವಾಗಿತ್ತು. ಈ ಎರಡೂ ದಿನಗಳಲ್ಲಿ ಒಟ್ಟು 2.56 ಲಕ್ಷ ಪ್ರಕರಣಗಳಲ್ಲಿ 7.19 ಕೋಟಿ ರು. ದಂಡ ಸಂಗ್ರಹವಾಗಿದೆ. ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಗಳ ಹಳೇ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಸೆ.19ರ ವರೆಗೆ ಈ ಶೇ.50 ರಷ್ಟು ರಿಯಾಯಿತಿಗೆ ಅವಕಾಶ ಕಲಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಈಗ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ನಾವು ಅವುಗಳನ್ನು ಎಷ್ಟು ಬಳಸುತ್ತೇವೆ ಎಂದರೆ ಅವುಗಳನ್ನು ಮತ್ತೆ ಮತ್ತೆ ಎತ್ತಿಕೊಳ್ಳುವ ಅಭ್ಯಾಸವಾಗಿ ಮಾರ್ಪಟ್ಟಿದೆ. ಒಂದು ವರದಿಯ ಪ್ರಕಾರ, ಸರಾಸರಿ ಭಾರತೀಯ ಬಳಕೆದಾರರು ದಿನಕ್ಕೆ 70-80 ಬಾರಿ ತಮ್ಮ ಫೋನ್ ಅನ್ನು ಮುಟ್ಟುತ್ತಾರೆ. ಇದರಲ್ಲಿ ಅರ್ಧದಷ್ಟು ಬಾರಿ, ಅವರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಭ್ಯಾಸದಿಂದ ಅದನ್ನು ತೆಗೆದುಕೊಳ್ಳುತ್ತಾರೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ವರದಿಯ ಪ್ರಕಾರ, ಯಾರಾದರೂ ತಮ್ಮ ಸ್ಮಾರ್ಟ್‌ಫೋನ್ ಅನ್ನು ಮುಟ್ಟಿದಾಗಲೆಲ್ಲಾ, ಅರ್ಧಕ್ಕಿಂತ ಹೆಚ್ಚು ಬಾರಿ ಅವರು ಫೋನ್ ಅನ್ನು ಏಕೆ ಮುಟ್ಟಬೇಕೆಂದು ಅವರಿಗೆ ತಿಳಿದಿರುವುದಿಲ್ಲ. 50-55% ಬಾರಿ ಜನರು ತಾವು ಫೋನ್ ಅನ್ನು ಏಕೆ ಎತ್ತಿಕೊಳ್ಳುತ್ತಿದ್ದಾರೆಂದು ತಿಳಿದಿರುವುದಿಲ್ಲ, ಆದರೆ 45-50% ಬಾರಿ ಅವರು ನಿರ್ದಿಷ್ಟ ಕಾರ್ಯಕ್ಕಾಗಿ ಫೋನ್ ಅನ್ನು ಎತ್ತಿಕೊಳ್ಳುತ್ತಾರೆ ಮತ್ತು ಉಳಿದ 5-10% ಬಾರಿ ಜನರು ತಾವು ಏನು ಮಾಡಬೇಕೆಂದು ಸ್ವಲ್ಪ ಕಲ್ಪನೆಯನ್ನು ಹೊಂದಿರುತ್ತಾರೆ ಎಂದು ವರದಿ ಹೇಳುತ್ತದೆ. ಸಾವಿರಕ್ಕೂ ಹೆಚ್ಚು ಜನರೊಂದಿಗೆ ಮಾತನಾಡಲಾಗಿದೆ “ಸ್ಮಾರ್‌್ಚಫೋನ್ ಅನುಭವವನ್ನು…
ಗಡಿ ಭದ್ರತಾ ಪಡೆ (BSF) ಹೆಡ್ ಕಾನ್ಸ್ಟೇಬಲ್, ರೇಡಿಯೋ ಆಪರೇಟರ್ (RO) ಮತ್ತು ರೇಡಿಯೋ ಮೆಕ್ಯಾನಿಕ್ (RM) ಹುದ್ದೆಗಳು 2025 ರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 1121 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. BSF ನ ಅಧಿಕೃತ ವೆಬ್ಸೈಟ್ rectt.bsf.gov.in ನಲ್ಲಿ ಸೆಪ್ಟೆಂಬರ್ 23, 2025 ರವರೆಗೆ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 ರಲ್ಲಿ ಒಟ್ಟು 1121 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ, 910 ಹುದ್ದೆಗಳು ಹೆಡ್ ಕಾನ್ಸ್ಟೇಬಲ್ (RO) ಮತ್ತು 211 ಹುದ್ದೆಗಳು ಹೆಡ್ ಕಾನ್ಸ್ಟೇಬಲ್ (RM) ಹುದ್ದೆಗಳಾಗಿವೆ. ಶೈಕ್ಷಣಿಕ ಅರ್ಹತೆ ಈ ನೇಮಕಾತಿಗೆ ಸೇರಲು ಅಭ್ಯರ್ಥಿಗಳು 10 ನೇ ತರಗತಿ ಪಾಸ್ + ಐಟಿಐ ಡಿಪ್ಲೊಮಾ ಹೊಂದಿರಬೇಕು. ರೇಡಿಯೋ ಆಪರೇಟರ್ (RO) ಹುದ್ದೆಗೆ ಐಟಿಐ ಡಿಪ್ಲೊಮಾ ಈ ಕೆಳಗಿನ ವಿಷಯಗಳಲ್ಲಿರಬೇಕು: ರೇಡಿಯೋ, ಟೆಲಿವಿಷನ್, ಎಲೆಕ್ಟ್ರಾನಿಕ್ಸ್, COPA, ಜನರಲ್ ಎಲೆಕ್ಟ್ರಾನಿಕ್ಸ್ ಮತ್ತು ಡೇಟಾ ಎಂಟ್ರಿ ಆಪರೇಟರ್. ಅದೇ ಸಮಯದಲ್ಲಿ, ರೇಡಿಯೋ…
ಮಾಸ್ಕೋ : ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿದ್ದು, ರಷ್ಯಾದ ಪಡೆಗಳು ಉಕ್ರೇನ್‌ನ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶ ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಉಕ್ರೇನ್ ನ ಹೊಸ ವಸಾಹತು ವಶಪಡಿಸಿಕೊಂಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ, ಫೆಬ್ರವರಿ 2022 ರ ಉಕ್ರೇನ್ ಆಕ್ರಮಣದ ಆರಂಭಿಕ ವಾರಗಳಲ್ಲಿ ಉಕ್ರೇನಿಯನ್ ರಾಜಧಾನಿ ಕೈವ್‌ನಲ್ಲಿ ಮುನ್ನಡೆಯಲು ವಿಫಲವಾದ ನಂತರ, ರಷ್ಯಾದ ಪಡೆಗಳು ಪೂರ್ವ ಡಾನ್‌ಬಾಸ್ ಪ್ರದೇಶದ ಮೇಲೆ ಕೇಂದ್ರೀಕರಿಸಿವೆ, ಬಹುತೇಕ ಪ್ರತಿದಿನ ಹೊಸ ಹಳ್ಳಿಗಳನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸುತ್ತಿವೆ.
ನವದೆಹಲಿ: CIBIL ಸ್ಕೋರ್ ಇಲ್ಲದ ಕಾರಣಕ್ಕೆ ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಹೊಸ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಹಿಂದಿನ ಸಾಲ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳು ಮತ್ತು ಕ್ರೆಡಿಟ್ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಹೇಳಿದರು. “ಕ್ರೆಡಿಟ್ ಸಂಸ್ಥೆಗಳಿಗೆ ಉತ್ತಮ ಅಭ್ಯಾಸಗಳ ಭಾಗವಾಗಿ, ಮೊದಲ ಬಾರಿಗೆ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಕ್ರೆಡಿಟ್ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಬಾರದು ಎಂದು RBI ಸಲಹೆ ನೀಡಿದೆ” ಎಂದು ಚೌಧರಿ ಹೇಳಿದರು. ಕನಿಷ್ಠ ಸ್ಕೋರ್ ಅನ್ನು ಸೂಚಿಸಲಾಗಿಲ್ಲ ಆರ್‌ಬಿಐ ಸಾಲಗಾರರಿಗೆ ಯಾವುದೇ ಕನಿಷ್ಠ ಕ್ರೆಡಿಟ್ ಸ್ಕೋರ್ ಅನ್ನು ನಿಗದಿಪಡಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. “ಅನಿಯಂತ್ರಿತ ಕ್ರೆಡಿಟ್ ವಾತಾವರಣದಲ್ಲಿ, ಸಾಲದಾತರು ಮಂಡಳಿಯು ಅನುಮೋದಿಸಿದ ನೀತಿಗಳು ಮತ್ತು ವಿಶಾಲ ನಿಯಂತ್ರಕ ಮಾರ್ಗಸೂಚಿಗಳ ಆಧಾರದ…
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಗಸ್ಟ್ 28ರಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆ.28 ರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಮಾರುತಗಳು ಚುರುಕುಗೊಳ್ಳಲಿದ್ದು, ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಬಿರುಸುಗೊಳ್ಳಲಿದೆ. ಆ.25ಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಹಾಗೂ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬೀದರ್‌ನಲ್ಲಿ ಆ.28ರಿಂದ ಮುಂದಿನ 2 ದಿನ ಹಾಗೂ ಕೊಡಗು, ಬೆಳಗಾವಿಯಲ್ಲಿ ಆ.29ರಂದು ಬಿರುಸಾಗಿ ಸುರಿಯುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಯಾದಗಿರಿಯಲ್ಲಿ ಆ.28ರಂದು ಯೆಲ್ಲೋ ಅಲರ್ಟ್ ಇರಲಿದೆ…
ಬೆಂಗಳೂರು : ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ 1,500 ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಲಿದೆ. ಆಗಸ್ಟ್ 25 ಮತ್ತು 26ರಂದು ಬೆಂಗಳೂರಿನಿಂದ ವಿಶೇಷ ಬಸ್ ಸೇವೆ ಇರಲಿದೆ. ದಿನಾಂಕ: 26.08.2025 ರಂದು ಸ್ವರ್ಣಗೌರಿ ವ್ರತ, ದಿನಾಂಕ 27.08.2025ರಂದು ಗಣೇಶ ಚತುರ್ಥಿ ಹಬ್ಬವಿರುವುದರಿಂದ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ:25.08.2025 ಹಾಗೂ 26.08.2025 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿರುತ್ತದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ:27.08.2025 ಹಾಗೂ 31.08.2025ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. https://twitter.com/KarnatakaVarthe/status/1959225292607865075 • ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ. • ಮೈಸೂರು ರಸ್ತೆ…














