Author: kannadanewsnow57

ಪ್ರತಿಯೊಬ್ಬರಿಗೂ ಜ್ಞಾಪಕ ಶಕ್ತಿ ಎನ್ನುವುದು ಪ್ರಮುಖ. ಕೆಲವರಿಗೆ ನೆನಪಿನ ಶಕ್ತಿ ಕಡಿಮೆ ಇದ್ದರೆ, ಕೆಲವರಿಗೆ ಹೆಚ್ಚಿರುತ್ತದೆ. ವಯಸ್ಸು ಹೆಚ್ಚುತ್ತಿದ್ದಂತೆ ಮೆದುಳಿನ ಕಾರ್ಯವೂ ನಿಧಾನಗೊಳ್ಳುತ್ತದೆ. ಚಿಕ್ಕ ಚಿಕ್ಕ ವಿಷಯಗಳೂ ಮರೆತು ಹೋಗುತ್ತವೆ. ಈ ಸಮಸ್ಯೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಇದೀಗ ಚಿಕ್ಕ ಮಕ್ಕಳಿಗೂ ಕಾಡುತ್ತಿದೆ. ಕೆಲವು ಮಕ್ಕಳಿಗೆ ನೆನಪಿನ ಶಕ್ತಿ ಬಹಳ ಕಡಿಮೆ ಇರುತ್ತದೆ. ಏನು ಹೇಳಿದರೂ ಅದನ್ನು ಸುಲಭವಾಗಿ ಮರೆಯುತ್ತಾರೆ. ಯಾವ ವಿಚಾರದ ಬಗ್ಗೆಯೂ, ಅದರಲ್ಲೂ ಓದಿನ ಮೇಲೆ ಸರಿಯಾಗಿ ಗಮನ ಕೇಂದ್ರೀಕರಿಸಲು ಆಗುವುದಿಲ್ಲ. ಬದಲಾಗುತ್ತಿರುವ ಜೀವನಶೈಲಿಯಿಂದ ಯುವಕರು ಮತ್ತು ಮಕ್ಕಳಲ್ಲಿ ಮರೆವಿನ ಸಮಸ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಕಡಿಮೆಯಾಗುತ್ತಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕೆಲವೊಂದು ಆಹಾರಗಳು ಬಹಳ ಸಹಾಯ ಮಾಡುತ್ತವೆ. ಆ ಆಹಾರಗಳು ಯಾವುವು ನೋಡೋಣ. ವಾಲ್‌ನಟ್ಸ್ ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಆಲ್ಫಾ ಲಿನೋಲೆನಿಕ್ ಆಮ್ಲವು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.…

Read More

ನವದೆಹಲಿ : ಪೋಷಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಪ್ರಾಪ್ತ ವಯಸ್ಕರಿಗೆ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉಪಕ್ರಮವಾದ ಬಹುನಿರೀಕ್ಷಿತ ಎನ್‌ಪಿಎಸ್ ವಾತ್ಸಲ್ಯ ಯೋಜನೆಯು ಮುಂದಿನ ಎರಡು ವಾರಗಳಲ್ಲಿ ಪ್ರಾರಂಭವಾಗಲಿದೆ. ಸರ್ಕಾರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಯೋಜನೆಯ ವಿವರಗಳನ್ನು ಅಂತಿಮಗೊಳಿಸುತ್ತಿದೆ, ಇದು ಪೋಷಕರು ತಮ್ಮ ಮಕ್ಕಳಿಗೆ ದೀರ್ಘಾವಧಿಯ ಸಂಪತ್ತನ್ನು ನಿರ್ಮಿಸಲು ರಚನಾತ್ಮಕ ಮಾರ್ಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಅಧಿಕೃತ ಉದ್ಘಾಟನೆ ನಡೆಯಲಿದೆ. ಈ ಹೊಸ ಯೋಜನೆಯು ಚಿಕ್ಕ ವಯಸ್ಸಿನಿಂದಲೇ ತಮ್ಮ ಮಕ್ಕಳ ಆರ್ಥಿಕ ಭದ್ರತೆಯಲ್ಲಿ ಹೂಡಿಕೆ ಮಾಡಲು ಕುಟುಂಬಗಳನ್ನು ಪ್ರೋತ್ಸಾಹಿಸುವ ಮೂಲಕ ತಲೆಮಾರುಗಳಾದ್ಯಂತ ಹಣಕಾಸಿನ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಸರ್ಕಾರದ ದೃಷ್ಟಿಗೆ ಹೊಂದಿಕೆಯಾಗುತ್ತದೆ. 2024-25ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಘೋಷಿಸಲಾದ ವಾತ್ಸಲ್ಯ ಯೋಜನೆಯು ಭಾರತೀಯ ಕುಟುಂಬಗಳಿಗೆ ಪರಿವರ್ತನಾ ಆರ್ಥಿಕ ಸಾಧನವಾಗಿ ಸಿದ್ಧವಾಗಿದೆ, ಆರಂಭಿಕ ಮತ್ತು ಸ್ಥಿರವಾಗಿ ಉಳಿತಾಯವನ್ನು ಪ್ರಾರಂಭಿಸಲು ಅವರಿಗೆ ಅಧಿಕಾರ ನೀಡುತ್ತದೆ. ಎನ್‌ಪಿಎಸ್ ವಾತ್ಸಲ್ಯ ಎಂದರೇನು?…

Read More

ಕಾಂತಿಯುತ ಚರ್ಮ ಪಡೆಯಲು ಬರೀ ಫೇಸ್‌ ಪ್ಯಾಕ್‌, ಮಸಾಜ್‌ಗಳನ್ನು ಮಾಡಿಕೊಂಡರೆ ಸಾಲದು. ದೇಹಕ್ಕೆ ಕೆಲ ಪೋಷಕಾಂಶಗಳು ಅಗತ್ಯ. ದೇಹದ ಒಳಗಿನಿಂದ ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಬೇಕು. ಹಾಗಿದ್ದರೆ ಮಾತ್ರ ತ್ವಚೆ ದೀರ್ಘ ಕಾಲದವರೆಗೂ ಆರೋಗ್ಯವಾಗಿರುತ್ತದೆ. ಹೆಚ್ಚು ಹೆಚ್ಚು ನೀರು ಸೇವಿಸಿದರೆ ತ್ವಚೆ ತುಂಬಾ ಆರೋಗ್ಯವಾಗಿರುತ್ತದೆ. ದಿನವೂ ಸುಮಾರು ಐದು ಲೀಟರ್‌ ಕುಡಿಯಿರಿ. ನೀರು ಹೆಚ್ಚು ಸೇವಿಸಿದರೆ ತ್ವಚೆಯನ್ನು ಸದಾ ಮಾಯಿಶ್ಚರೈಸ್‌ನಲ್ಲಿರಿಸುತ್ತದೆ. ಇನ್ನು ಹೆಚ್ಚು ನೀರಿನ ಸೇವನೆ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ ಈ ಮೂಲಕ ಮೊಡವೆಗಳು ಆಗದಂತೆ ನೋಡಿಕೊಳ್ಳುತ್ತದೆ. ನೀರಿನ ಹೆಚ್ಚು ಸೇವನೆ ದೇಹವನ್ನು ಸದಾ ತೇವಾಂಶದಲ್ಲಿರಿಸುತ್ತದೆ. ಬದಾಮಿ ಸೇವಿಸಿದರೆ ಚರ್ಮ ಹೊಳೆಯುವ ರೂಪ ಪಡೆದುಕೊಳ್ಳುತದೆ. ಇದರಲ್ಲಿ ಒಮೆಗಾ3 ಅಂಶವಿದ್ದು ಚರ್ಮಕ್ಕೆ ಬೇಕಾದ ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲ ನೀಡುತ್ತದೆ. ನಿತ್ಯವೂ ನೆನಸಿಟ್ಟ ಎರಡು ಬದಾಮಿ ಸೇವನೆ ತ್ವಚೆಯನ್ನು ಮೃದುವಾಗಿಸುತ್ತದೆ. ಎಲ್ಲ ಬಗೆಯ ಹಸಿ ತರಕಾರಿ ಸೇವನೆ ದೀರ್ಘ ಕಾಲದವರೆಗೂ ದೇಹ ಹಾಗು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯವೂ ಒಂದಲ್ಲ ಒಂದು ಹಸಿ…

Read More

ಓಂ ಶ್ರೀ ಗುರುಭ್ಯೋ ನಮಃ ‌ ‌ ‌ ‌ ‌ ‌ ‌ ಶ್ರೀ ಗೌರೀ ಅಷ್ಟೋತ್ತರ ಶತನಾಮಾವಲಿಃ ಓಂ ಮಹಾಮನೋನ್ಮಣೀಶಕ್ತ್ಯೈ ನಮಃ । ಓಂ ಶಿವಶಕ್ತ್ಯೈ ನಮಃ । ಓಂ ಶಿವಂಕರ್ಯೈ ನಮಃ । ಓಂ ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಸ್ವರೂಪಿಣ್ಯೈ ನಮಃ । ಓಂ ಶಾನ್ತ್ಯತೀತ ಕಲಾನನ್ದಾಯೈ ನಮಃ । ಓಂ ಶಿವಮಾಯಾಯೈ ನಮಃ । ಓಂ ಶಿವಪ್ರಿಯಾಯೈ ನಮಃ । ಓಂ ಸರ್ವಜ್ಞಾಯೈ ನಮಃ । ಓಂ ಸುನ್ದರ್ಯೈ ನಮಃ । ಓಂ ಸೌಮ್ಯಾಯೈ ನಮಃ । 10 । ಓಂ ಸಚ್ಚಿದಾನನ್ದರೂಪಿಣ್ಯೈ ನಮಃ । ಓಂ ಪರಾಪರಾಮಯ್ಯೈ ನಮಃ । ಓಂ ಬಾಲಾಯೈ ನಮಃ । ಓಂ ತ್ರಿಪುರಾಯೈ ನಮಃ । ಓಂ ಕುಂಡಲ್ಯೈ ನಮಃ । ಓಂ ಶಿವಾಯೈ ನಮಃ । ಓಂ ರುದ್ರಾಣ್ಯೈ ನಮಃ । ಓಂ ವಿಜಯಾಯೈ ನಮಃ । ಓಂ ಸರ್ವಾಯೈ ನಮಃ । ಓಂ ಶರ್ವಾಣ್ಯೈ ನಮಃ…

Read More

ಬೆಂಗಳೂರು :ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ/ ಕಾಯಕ ಕಿರಣ/ಶಹಾಜೀರಾಜೆ ಸಮೃದ್ಧಿ ಯೋಜನೆ., ಗಂಗಾ ಕಲ್ಯಾಣ ನೀರಾವರಿ ಯೋಜನೆ/ ಜೀವಜಲ/ ಜೀಜಾವು ಜಲಭಾಗ್ಯ ಯೋಜನೆ, ಅರಿವು–ಶೈಕ್ಷಣಿಕ ಸಾಲ ಯೋಜನೆ ಸೇರಿ ಹಲವು ಯೋಜನೆಗಳಡಿ ಸಾಲ, ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ (ನಿ), ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಸವಿತಾ-ಸಮಾಜ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಅಲೆಮಾರಿ-ಅರೆಮಾರಿ ಅಭಿವೃದ್ಧಿ ನಿಗಮ (ನಿ)., ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ…

Read More

ವಿಜಯಪುರ : ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪಾದಚಾರಿಗಳಿಗೆ ಬೈಕ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ, ಹಿಂಬದಿ ಸವಾರ, ರಸ್ತೆ ಬದಿ ನಿಂತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ತಾಳಿಕೋಟೆ ತಾಲೂಕಿನ ಗೋಟಖಂಡಕಿ ನಿವಾಸಿ ನಿಂಗರಾಜ ಚೌದರಿ(32), ದೇವರಹಿಪ್ಪರಗಿ ತಾಲೂಕಿನ ಹಂಚಲಿ ನಿವಾಸಿ ಅನಿಲ್ ಖೈನೂರ (23) ಮಲಗಲದಿನ್ನಿ ಗ್ರಾಮದ ನಿವಾಸಿ ಉದಯಕುಮಾರ ಪ್ಯಾಟಿ(19) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಮತ್ತೊಬ್ಬ ಯುವಕ ರಾಯಪ್ಪ ಕೂಡ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಕ್ಕಳಿಂದ ಹದಿಹರೆಯದವರವರೆಗೆ ಯಾವುದೇ ವಯಸ್ಸಿನ ಜನರು ಪಿಜ್ಜಾ ತಿನ್ನಲು ಇಷ್ಟಪಡುತ್ತಾರೆ. ನೀವು ಪಿಜ್ಜಾವನ್ನು ಇಷ್ಟಪಡದಿದ್ದರೂ, ಅದು ಆರೋಗ್ಯಕರ ಆಹಾರವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಪಿಜ್ಜಾ ಮೂಲತಃ ಇಟಾಲಿಯನ್ ಆಹಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಒಂದು ತಿಂಗಳು ಪಿಜ್ಜಾವನ್ನು ತ್ಯಜಿಸುವುದು ಆಹಾರಪ್ರಿಯರಿಗೆ ತುಂಬಾ ಕಷ್ಟ. ಆದರೆ ಇದನ್ನು ಪ್ರಯತ್ನಿಸಿದರೆ ದೇಹದ ಮೇಲೆ ತುಂಬಾ ಒಳ್ಳೆಯ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಪಿಜ್ಜಾ ತಿನ್ನುವುದನ್ನು ನಿಲ್ಲಿಸಿದರೆ ಏನಾಗುತ್ತದೆ.. ಈ ಲೇಖನದಲ್ಲಿ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ. ಪಿಜ್ಜಾ ತಿನ್ನುವುದರಿಂದ ದೇಹದ ಮೇಲೆ ಏನು ಪರಿಣಾಮ ಬೀರುತ್ತದೆ: ಪಿಜ್ಜಾ ತಿನ್ನುವುದು ಬೊಜ್ಜು ಅಪಾಯವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಅನೇಕ ದೀರ್ಘಕಾಲದ ಕಾಯಿಲೆಗಳು ಸಂಭವಿಸಬಹುದು. ಆದ್ದರಿಂದ, ನೀವು ಈ ಆಹಾರಗಳನ್ನು ಹೆಚ್ಚು ತ್ಯಜಿಸಿದರೆ, ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಪಿಜ್ಜಾದಲ್ಲಿ ಬಹಳಷ್ಟು ಕ್ಯಾಲೋರಿಗಳಿವೆ. ಇದರಿಂದ ಅತಿಯಾಗಿ ತಿಂದರೆ.. ಬೊಜ್ಜು ಬೇಗ ಹೆಚ್ಚುತ್ತದೆ. ಪಿಜ್ಜಾವನ್ನು ಅತಿಯಾಗಿ ತಿನ್ನುವುದರಿಂದ ರಕ್ತನಾಳಗಳಲ್ಲಿ…

Read More

ತುಮಕೂರು : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಾಟ್ಸಪ್ ನಲ್ಲಿ ಬರುವ ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮೂಲಕ ಪ್ರಾಧ್ಯಾಪಕರೊಬ್ಬರು ಬರೋಬ್ಬರಿ 10 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೌದು, ವಾಟ್ಸಪ್ ನಲ್ಲಿ ಸೈಬರ್ ವಂಚಕರು ಕಳುಹಿಸಿದ ಲಿಂಕ್ ಮೂಲಕ ನಕಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡ ತುಮಕೂರು ನಗರದ ಎಸ್‌.ಎಸ್‌.ಪುರಂನ ನಿವಾಸಿ ಪ್ರಾಧ್ಯಾಪಕ ಟಿ.ಆರ್‌.ಹೇಮಂತ್‌ಕುಮಾರ್‌ ಎಂಬುವರು ಬರೋಬ್ಬರಿ 10.53 ಲಕ್ಷ ರೂ. ಕಳೆದುಕೊಂಡಿದ್ದಾರೆ. ಪ್ರಾಧ್ಯಾಪಕ ಟಿ.ಆರ್. ಹೇಮಂತ್ ಕುಮಾರ್ ಅವರು ವಾಟ್ಸಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ‘ಡಿ-ಮಾಟ್‌ ಟ್ರೇಡಿಂಗ್‌ ಆಯಪ್‌’ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಸೈಬರ್‌ ವಂಚಕರು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಆ. 5ರಿಂದ 27ರ ವರೆಗೆ ಹಂತ ಹಂತವಾಗಿ 10.53 ವರ್ಗಾಯಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ವಾಪಸ್ ಬಾರದೇ ಇದ್ದಾಗ ತಾವು ಮೋಸ ಹೋಗಿರುವುದಾಗಿ ತಿಳಿದುಬಂದಿದೆ. ಬಳಿಕ ಅವರು ತುಮಕೂರು ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ನಕಲಿ ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದ್ದು, ಅಕ್ರಮ ಬಿಪಿಎಲ್ ಕಾರ್ಡ್ ಕಡಿವಾಣಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಅಕ್ರಮ ಬಿಪಿಎಲ್ ಕಾರ್ಡ್ ಗಳಿಗೆ ಕಡಿವಾಣ ಹಾಕುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅಕ್ರಮ ಬಿಪಿಎಲ್ ಕಾರ್ಡ್ ಕಡಿವಾಣಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಡವ ಡವ ಶುರುವಾಗಿದೆ. ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಇದುವರೆಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡೆದ ಅಕ್ಕಿ ಹಾಗೂ ಇತರೆ ಧಾನ್ಯಗಳ ಮೊತ್ತವನ್ನು ಮರಳಿಸಬೇಕು ಜೊತೆಗೆ ಕ್ರಿಮಿನಲ್ ಕೇಸ್ ಎದುರಿಸಬೇಕು. ರಾಜ್ಯದಲ್ಲಿ ಅಕ್ರಮ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 98,431…

Read More

ನವದೆಹಲಿ : ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡ ಕರೋನಾ ವೈರಸ್ ಜಗತ್ತನ್ನು ಹೇಗೆ ಬೆಚ್ಚಿಬೀಳಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸಾಂಕ್ರಾಮಿಕ ರೋಗವು ಇನ್ನೂ ನಮ್ಮೊಂದಿಗೆ ಇದ್ದರೂ, ಅದರ ಪರಿಣಾಮವು ಹೆಚ್ಚಾಗಿ ಕಡಿಮೆಯಾಗಿದೆ. ಈಗ ಎಲ್ಲರೂ ಎಂದಿನಂತೆ ಸಂಪೂರ್ಣವಾಗಿ ಸಹಜ ಜೀವನಕ್ಕೆ ಮರಳಿದ್ದಾರೆ. ಆದರೆ ಈ ವೈರಸ್‌ಗೆ ಸಂಬಂಧಿಸಿದಂತೆ ಇತ್ತೀಚಿನ ಸಮೀಕ್ಷೆಯಲ್ಲಿ, ಸಂವೇದನಾಶೀಲ ವಿಷಯಗಳು ಬೆಳಕಿಗೆ ಬಂದಿವೆ. ಈ ಕರೋನಾ ವೈರಸ್ ಮೆದುಳಿನ ಸೋಂಕಿಗೆ ಕಾರಣವಾಗಬಹುದು ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ವೈರಸ್‌ನ ಮೇಲ್ಮೈಯಲ್ಲಿರುವ ಸ್ಪೈಕ್ ಪ್ರೊಟೀನ್‌ನಲ್ಲಿ ರೂಪಾಂತರಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.. ಇವು ವೈರಸ್ ಅನ್ನು ಹಿಂಬಾಗಿಲಿನ ಮೂಲಕ ಮೆದುಳಿನ ಜೀವಕೋಶಗಳಿಗೆ ಕಳುಹಿಸುತ್ತಿವೆ. ಇಲಿಗಳಲ್ಲಿ ನಡೆಸಿದ ಸಂಶೋಧನೆಯಲ್ಲಿ ಇವುಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ನೇಚರ್ ಮೈಕ್ರೋಬಯಾಲಜಿ ಜರ್ನಲ್‌ನಲ್ಲಿ ಸ್ಪೈಕ್ ಪ್ರೊಟೀನ್‌ನಲ್ಲಿ ಹಲವಾರು ಪ್ರಮುಖ ಸಂಶೋಧನೆಗಳನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಸಂಶೋಧಕರು ವೈರಸ್‌ನ ಮೇಲ್ಮೈಯಲ್ಲಿರುವ ಸ್ಪೈಕ್ ಪ್ರೋಟೀನ್‌ನ ಒಂದು ಭಾಗವನ್ನು ‘ಫ್ಯೂರಿನ್ ಕ್ಲೀವೇಜ್ ಸೈಟ್’ ಎಂದು ಕರೆಯುತ್ತಾರೆ. ಈ ಸೈಟ್… ಸಾಮಾನ್ಯವಾಗಿ ಮುಂಭಾಗದ ಬಾಗಿಲಿನ ಮೂಲಕ…

Read More