Author: kannadanewsnow57

ಬೆಂಗಳೂರು : ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣ ಮಾಡುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರಮಾಂಕ (1) ರಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-110ರಲ್ಲಿ ಘೋಷಿಸಿರುವಂತೆ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ ಸಂಬಂಧ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗಿ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿ ಆದೇಶಿಸಲಾಗಿದೆ. ಸದರಿ 147 ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಗಳ ಪೈಕಿ CSR ಬೆಂಬಲಿತ ಒಟ್ಟು 65 ಸರ್ಕಾರಿ ಶಾಲೆಗಳನ್ನು, ಆಯವ್ಯಯ ಘೋಷಣೆಯಂತೆ ರಾಜ್ಯ ಅನುದಾನದಡಿ 76 (Non-CSR) ಸರ್ಕಾರಿ ಶಾಲೆಗಳನ್ನು ಹಾಗೂ ಕೇಂದ್ರ ಶಿಕ್ಷಣ ಮಂತ್ರಾಲಯ, ನವದೆಹಲಿ, ಇಲ್ಲಿನ PAB ಯಲ್ಲಿನ ಅನುಮೋದನೆಯಂತೆ 6 ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಆದೇಶಿಸಲಾಗಿದೆ ಕ್ರಮಾಂಕ (2) ರಲ್ಲಿ ಮಾನ್ಯ ಇಲಾಖಾ ಸಚಿವರ ಸೂಚನೆಯಂತೆ ರಾಜ್ಯ ಅನುದಾನದಡಿ ಈ ಕೆಳಕಂಡ ಒಟ್ಟು 35 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು…

Read More

ಬೆಂಗಳೂರು : ರಾಜ್ಯದ್ಯಾಂತ ಅರಣ್ಯ ಭೂಮಿ ಒತ್ತುವರಿ ಪತ್ತೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡಗಳನ್ನು (SIT) ರಚಿಸಿ ಆದೇಶ ಹೊರಡಿಸಿದೆ. ಹೌದು, ಕಂದಾಯ ಇಲಾಖೆಯ ಸ್ವಾಧೀನದಲ್ಲಿದ್ದ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ, ಅಂತಹ ಭೂಮಿಯನ್ನು ಮರುವಶಕ್ಕೆ ಪಡೆಯಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎಸ್ ಐಟಿ ರಚಿಸಿ ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ ಅರಣ್ಯ ಇಲಾಖೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಎಸ್ಐಟಿ ರಚಿಸಿದೆ. ನಾಲ್ಕು ತಿಂಗಳಲ್ಲಿ ಈ ಕುರಿತ ವರದಿ ನೀಡಬೇಕೆಂದು ಜಿಲ್ಲಾ ಎಸ್ಐಟಿಗೆ ನಿರ್ದೇಶಿಸಲಾಗಿದೆ. ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಇಲ್ಲವೇ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಲಾಗಿದೆಯೇ ಎನ್ನುವುದನ್ನು ವಿಶೇಷ ತನಿಖಾ ತಂಡಗಳು ಪತ್ತೆ ಮಾಡಬೇಕು. ಹೀಗೆ ಹಂಚಿಕೆ ಮಾಡಿದ ಭೂಮಿಯನ್ನು ರಾಜ್ಯ ಸರ್ಕಾರವು ವಾಪಸ್ ಪಡೆದು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು…

Read More

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಯ ಶೌಚಗೃಹದ ಬಕೆಟ್ ನಲ್ಲಿ ಮಂಗಳವಾರ ನವಜಾತ ಹೆಣ್ಣು ಶಿಶುವೊಂದು ಪತ್ತೆ ಆಗಿದೆ. ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ. ಆಗ ತಾನೆ ಹುಟ್ಟಿದ ಶಿಶುವನ್ನು ಯಾರೋ ಬಟ್ಟೆಯಲ್ಲಿ ಸುತ್ತಿ ಶೌಚಗೃಹದ ಬಕೆಟ್ನಲ್ಲಿ ಹಾಕಿ ಹೋಗಿದ್ದು, ಮಗು ಅಳುವ ಶಬ್ದ ಕೇಳಿದ ಸ್ವಚ್ಛತಾ ಸಿಬ್ಬಂದಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ವೈದ್ಯರು ಹಾಗೂ ಇತರ ಸಿಬ್ಬಂದಿ ಬಂದು ನೋಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ದೂರು ನೀಡಲಾಗಿದೆ.

Read More

ನವದೆಹಲಿ: ದೇಶದಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಎರಡು ರಾಷ್ಟ್ರೀಯ ಶಾಲಾ ಮಂಡಳಿಗಳಿವೆ, ಅವುಗಳೆಂದರೆ CBSE ಮತ್ತು NIOS. CBSE ಮುಖಾಮುಖಿ ಶಿಕ್ಷಣದ ಮೂಲಕ ಶಿಕ್ಷಣವನ್ನು ನೀಡುತ್ತಿದ್ದರೆ, NIOS ಮುಕ್ತ ಮತ್ತು ದೂರ ಶಿಕ್ಷಣದ ಮೂಲಕ ಶಿಕ್ಷಣವನ್ನು ನೀಡುತ್ತಿದೆ. CBSE ನಡೆಸುವ ಮಂಡಳಿ ಪರೀಕ್ಷೆಗಳಲ್ಲಿ ಹಾಜರಾಗಲು ಅಗತ್ಯವಾದ ಅವಶ್ಯಕತೆಗಳು ಈ ಕೆಳಗಿನಂತಿವೆ. 1. X ತರಗತಿ ಮತ್ತು XII ತರಗತಿಗಳು ಕ್ರಮವಾಗಿ IX ಮತ್ತು X ತರಗತಿ ಮತ್ತು XII ಮತ್ತು XII ತರಗತಿಗಳನ್ನು ಒಳಗೊಂಡಿರುವ ಎರಡು ವರ್ಷಗಳ ಕಾರ್ಯಕ್ರಮವಾಗಿದೆ. ಅದರಂತೆ, ಪರೀಕ್ಷೆಗಳಿಗೆ ಹಾಜರಾಗಲು ಅರ್ಹತೆ ಪಡೆಯಲು ಎಲ್ಲಾ ವಿಷಯಗಳು ವಿದ್ಯಾರ್ಥಿಯು 2 ವರ್ಷಗಳ ಕಾಲ ಅಧ್ಯಯನ ಮಾಡಿರಬೇಕು. 2. ವಿದ್ಯಾರ್ಥಿಗಳು ಕನಿಷ್ಠ 75% ಹಾಜರಾತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. 3. CBSE ನೀಡುವ ಎಲ್ಲಾ ವಿಷಯಗಳಲ್ಲಿ, ಆಂತರಿಕ ಮೌಲ್ಯಮಾಪನವು NEP-2020 ರ ಪ್ರಕಾರ ಮೌಲ್ಯಮಾಪನದ ಕಡ್ಡಾಯ ಅವಿಭಾಜ್ಯ ಅಂಗವಾಗಿದೆ. ಇದು 2 ವರ್ಷಗಳ ದೀರ್ಘ ಪ್ರಕ್ರಿಯೆಯಾಗಿದೆ. ಒಬ್ಬ ವಿದ್ಯಾರ್ಥಿ ಶಾಲೆಗೆ ಹೋಗದಿದ್ದರೆ,…

Read More

ಬೀದರ್ : ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಈ ಕ್ರಮ ಕೈಗೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.  ಬೀದರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು (Lumpy Disease) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿಶೇಷ ನಿಗಾವಹಿಸಲು ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಾನುವಾರುಗಳಲ್ಲಿ ಚರ್ಮಗಂಟು ರೋಗ ತಡೆಗಟ್ಟಲು ಎಚ್ಚರಿಕೆ  ಬೀದರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು (Lumpy Disease) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿಶೇಷ ನಿಗಾವಹಿಸಲು ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ✅ ಗಡಿಭಾಗದ ಗ್ರಾಮಗಳಲ್ಲಿ ಪಶುವೈದ್ಯಕೀಯ ಇಲಾಖೆಯ ಮೂಲಕ ತಕ್ಷಣವೇ ಲಸಿಕೆ ಹಾಕಿಸುವ ಕಾರ್ಯ ಕೈಗೊಳ್ಳಬೇಕು. ✅ ರೋಗದ ಲಕ್ಷಣಗಳು (ಚರ್ಮದಲ್ಲಿ ಗುಳ್ಳೆಗಳು, ಜ್ವರ, ಹಾಲು ಉತ್ಪಾದನೆ ಕಡಿಮೆಯಾಗುವುದು, ತಿನ್ನದಿರುವುದು) ಕಂಡುಬಂದ ತಕ್ಷಣ ಪಶುವೈದ್ಯರಿಗೆ ಮಾಹಿತಿ ನೀಡಬೇಕು. ✅ ಸೋಂಕಿತ…

Read More

ಬೆಂಗಳೂರು : ರಾಜ್ಯಾದ್ಯಂತ ಕಳೆದ ಸೆ.13ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ ನಲ್ಲಿ ದಾಖಲೆಯ ಒಟ್ಟು 1.11 ಕೋಟಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷ, ಹೈಕೋರ್ಟ್ ನ್ಯಾ| ಅನು ಸಿವರಾಮನ್, ಲೋಕ ಅದಾಲತ್‌ಗಾಗಿ ಹೈಕೋರ್ಟ್‌ ಒಟ್ಟು 989 ಪೀಠಗಳನ್ನು ಸ್ಥಾಪಿಸಲಾಗಿತ್ತು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳೂ ಸೇರಿ ದಾಖಲೆಯ ಒಟ್ಟು 1.11 ಕೋಟಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಸಂಬಂಧಪಟ್ಟವರಿಗೆ 3,997 ಕೋಟಿ ರೂ.ಪರಿಹಾರ ಕೊಡಿಸಲಾಗಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಬರೋಬ್ಬರಿ 8 ಲಕ್ಷ ಬಿಪಿಎಲ್ ಕಾರ್ಡ್ ರದ್ದಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಡ್ ಇದೀಗ ರದ್ದಾಗುವ ಆಗುವ ಸಾಧ್ಯತೆ ಇದೆ. ಅಕ್ರಮ ಬಿಪಿಎಲ್ ಕಾರ್ಡ್ ಇರುವುದು ಪತ್ತೆಯಾಗಿದೆ. ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳ ಮೇಲೆ ಇದೀಗ ಹದ್ದಿನ ಕಣ್ಣು ಇಡಲಾಗಿದೆ. ಆಹಾರ ಇಲಾಖೆಯ ವಿಶೇಷ ಕಾರ್ಯಚರಣೆಯಲ್ಲಿ ಇದು ಬಹಿರಂಗವಾಗಿದೆ ಒಟ್ಟು 12,68,097 ಅನುಮಾನಾಸ್ಪದ ರೇಷನ್ ಕಾರ್ಡ್ ಪತ್ತೆಯಾಗಿದೆ. 8 ಲಕ್ಷ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಶೀಘ್ರದಲ್ಲಿ ಆಹಾರ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. 19690 ಮಂದಿ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. 25 ಲಕ್ಷಕ್ಕಿಂತ ಅಧಿಕ ವಹಿವಾಟು ಮೀರಿರುವವರು 2684 ಇದ್ದಾರೆ. ಇ- ಕೆ ವೈ ಸಿ ಮಾಡಿಸದೆ ಇರುವವರ ಸಂಖ್ಯೆ 6,16,196 ಇದ್ದಾರೆ 1. 20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು 5,13,613…

Read More

ಬೆಂಗಳೂರು : ರಾಜ್ಯ ಸರ್ಕಾರವು ಮೋಟಾರು ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆಗೆ ಭಾರತ ಸರ್ಕಾರದ ಯೋಜನೆ (CTRAV) 2025ರ ಅಡಿಯಲ್ಲಿ ನೀಡುವ ರೂ. 1.5 ಲಕ್ಷ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿಯಾಗಿ (Top up) ರೂ 1 ಲಕ್ಷಗಳ ನೆರವು ಒದಗಿಸುವ ಕುರಿತ ಆದೇಶ ಹೊರಡಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಪಘಾತ ಸಂತ್ರಸ್ತರ ಯೋಜನೆಯನ್ನು ಮಾರ್ಪಡಿಸಿ ಪ್ರತಿ ಅವಘಾತ ಸಂತ್ರಸ್ತರಿಗೆ ರೂ. 1.5 ಲಕ್ಷಗಳ ವರಗಿನ ಚಿಕಿತ್ಸೆ ಒದಗಿಸುವ ಭಾರತ ಸರ್ಕಾರದ CTRAV ಯೋಜನೆ. 2025 ಕ್ಕೆ ರಾಜ್ಯ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ರೂ. 1 ಲಕ್ಷ ಟಾಪ್ ಅಪ್ ಒದಗಿಸುವ ಸಂಬಂಧ ಈ ಕೆಳಕಂಡಂತೆ ಜಾರಿಗೊಳಿಸಲು ಅನುಮೋದನೆ ನೀಡಿ ಆದೇಶಿಸಿದೆ. ವೆಂಟಿಲೇಟರ್ನಲ್ಲಿ ಇರುವ ರೋಗಿಗಳು ಹಾಗೂ ಮಲ್ಲಿ ಆರ್ಗನ್ ವೈಫಲ್ಯ ಅಥವಾ ಇತರ ಗಂಭೀರ ಚಿಕಿತ್ಸೆಗೆ ಒಳಪಟ್ಟವರು CTRAV ಯೋಜನೆಯ 7 ದಿನಗಳ ಚಿಕಿತ್ಸೆ ನಂತರವೂ ರಾಜ್ಯ ಪ್ಯಾಕೇಜ್ ಪ್ರಕಾರ…

Read More

ಬೆಂಗಳೂರು : ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಸ್ವಾಧೀನ ಗೊಂಡ ಭೂಮಿಗೆ ಕೊನೆಗೂ ಪರಿಹಾರ ನಿಗದಿ ಮಾಡಿ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದ್ದು, ಮುಳುಗಡೆಯಾಗುವ 75,563 ಎಕರೆ ಪ್ರದೇಶದಲ್ಲಿದಲ್ಲಿ ಪ್ರತಿ ಎಕರೆ ನೀರಾವರಿ ಭೂಮಿಗೆ ₹40 ಲಕ್ಷ ಹಾಗೂ ಒಣ ಭೂಮಿಗೆ ₹30 ಲಕ್ಷ ಪರಿ ಹಾರನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಕಾಲುವೆಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ 51,837 ಎಕರೆಗೆ ಸಂಬಂಧಿಸಿ ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರು, ಒಣ ಜಮೀನಿಗೆ 25 ಲಕ್ಷ ರು. ನಿಗದಿ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ 3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರವನ್ನು…

Read More

ಕನಸಿನಲ್ಲಿ ಕಾಣುವ ಪ್ರತಿಯೊಂದು ವಿಷಯವೂ ಭವಿಷ್ಯದ ಬಗ್ಗೆ ಖಂಡಿತವಾಗಿಯೂ ಕೆಲವು ಸೂಚನೆಗಳನ್ನು ನೀಡುತ್ತದೆ. ಕೆಲವರು ಈ ಸೂಚನೆಗಳನ್ನು ನಿರ್ಲಕ್ಷಿಸುತ್ತಾರೆ.. ಆದರೆ ಈ ಕನಸುಗಳು ಕೆಲವೊಮ್ಮೆ ಅದೃಷ್ಟವನ್ನು ಸೂಚಿಸುತ್ತವೆ.. ಇತರರು ಮುಂಬರುವ ತೊಂದರೆಗಳು ಮತ್ತು ನಷ್ಟಗಳನ್ನು ಸೂಚಿಸುತ್ತಾರೆ. ಪ್ರಸ್ತುತ, ಪಿತೃ ಪಕ್ಷ ನಡೆಯುತ್ತಿದೆ.. ಇದು ಸೆಪ್ಟೆಂಬರ್ 21 ರಂದು ಕೊನೆಗೊಳ್ಳುತ್ತದೆ. ಈ ಸಮಯ ಪೂರ್ವಜರಿಗೆ ಮೀಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಪೂರ್ವಜರಿಗೆ ಸಂಬಂಧಿಸಿದ ಅನೇಕ ರೀತಿಯ ಕನಸುಗಳನ್ನು ನೋಡುತ್ತಾರೆ. ಕೆಲವರು ತಮ್ಮ ಕನಸಿನಲ್ಲಿ ಸತ್ತ ವ್ಯಕ್ತಿಯನ್ನು ಅಳುವುದನ್ನು ನೋಡುತ್ತಾರೆ.. ಇತರ ಸಮಯಗಳಲ್ಲಿ, ಪೂರ್ವಜರು ತಮ್ಮ ಕನಸಿನಲ್ಲಿ ಆಹಾರವನ್ನು ತಿನ್ನುವುದನ್ನು ನೋಡುತ್ತಾರೆ. ಇಂದು, ಪೂರ್ವಜರು ತಮ್ಮ ಕನಸಿನಲ್ಲಿ ಆಹಾರವನ್ನು ತಿನ್ನುವುದನ್ನು ನೋಡಿದರೆ ಕನಸಿನ ಅರ್ಥವೇನೆಂದು ತಿಳಿಯೋಣ. ಪೂರ್ವಜರು ತಮ್ಮ ಕನಸಿನಲ್ಲಿ ಆಹಾರವನ್ನು ತಿನ್ನುವುದನ್ನು ನೋಡಿದರೆ ಕನಸುಗಳ ವಿಜ್ಞಾನದ ಪ್ರಕಾರ, ಪೂರ್ವಜರು ತಮ್ಮ ಕನಸಿನಲ್ಲಿ ಆಹಾರವನ್ನು ತಿನ್ನುವುದನ್ನು ನೋಡಿದರೆ, ಆ ಕನಸನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸಿನ ಅರ್ಥವೆಂದರೆ ನೀವು ಮುಂಬರುವ ಅವಧಿಯಲ್ಲಿ ಯಾವುದೇ…

Read More