Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಒಂದು ದೊಡ್ಡ ಬದಲಾವಣೆಯಾಗಲಿದೆ. ಈಗ, ವಿಮಾನಗಳಂತೆ, ರೈಲುಗಳಲ್ಲಿ ನಿಗದಿತ ಮಾನದಂಡಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ, ಉತ್ತರ ಮಧ್ಯ ರೈಲ್ವೆಯ ಪ್ರಯಾಗ್ರಾಜ್ ವಿಭಾಗವು ಜಂಕ್ಷನ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಸ್ಥಾಪಿಸಲಿದೆ. ಪ್ರಯಾಣಿಕರ ಸಾಮಾನುಗಳನ್ನು ಈ ಯಂತ್ರಗಳ ಮೂಲಕ ತೂಕ ಮಾಡಲಾಗುತ್ತದೆ. ತೂಕದ ಸಮಯದಲ್ಲಿ ಸಾಮಾನುಗಳು ನಿಗದಿತ ಮಾನದಂಡವನ್ನು ಮೀರಿದರೆ, ಪ್ರಯಾಣಿಕರು ಅದಕ್ಕೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಾಹಿತಿಯ ಪ್ರಕಾರ, ಒಬ್ಬ ಪ್ರಯಾಣಿಕನು ನಿಗದಿತ ಮಿತಿಗಿಂತ ಹೆಚ್ಚಿನ ಸಾಮಾನುಗಳೊಂದಿಗೆ ಪ್ರಯಾಣಿಸಲು ಬಯಸಿದರೆ, ಅವನು ಮುಂಗಡ ಬುಕಿಂಗ್ನಲ್ಲಿ ಶುಲ್ಕವನ್ನು ಪಾವತಿಸಬಹುದು. ನಿಗದಿತ ಮಿತಿಗಿಂತ ಹೆಚ್ಚಿನ ಸಾಮಾನುಗಳಿಗೆ ಶುಲ್ಕವನ್ನು ಪಾವತಿಸದಿದ್ದರೆ, ಅವನು ದಂಡವನ್ನು ಪಾವತಿಸಬೇಕಾಗುತ್ತದೆ. ಈ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಪ್ರಾರಂಭವಾಗಲಿದೆ ಆರಂಭದಲ್ಲಿ, ಪ್ರಯಾಗ್ರಾಜ್ ವಿಭಾಗದ ಪ್ರಮುಖ ನಿಲ್ದಾಣಗಳಿಂದ ಈ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಗಿದೆ. ಪ್ರಯಾಗ್ರಾಜ್ ಜಂಕ್ಷನ್, ಪ್ರಯಾಗ್ರಾಜ್ ಛೋಕಿ, ಸುಬೇದರ್ಗಂಜ್, ಕಾನ್ಪುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ ಜಂಕ್ಷನ್,…
ತಾಯಿಯಾಗುವ ಬಯಕೆ ಹೊಂದಿರುವ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ವ್ಯಕ್ತಿಯೊಬ್ಬ 7 ಮಂದಿ ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಿದ್ದಾನೆ. ಹೌದು, ಜಪಾನ್ನಲ್ಲಿ ಹಾಜಿಮೆ ಎಂಬ 38 ವರ್ಷದ ವ್ಯಕ್ತಿಯೊಬ್ಬರು ಮಹಿಳೆಯರೊಂದಿಗೆ ಮಲಗಿ ವೀರ್ಯ ದಾನ ಮಾಡಲು ಮುಂದಾದ ನಂತರ ಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಒಸಾಕಾದಲ್ಲಿ ನೆಲೆಸಿರುವ ಹಾಜಿಮೆ, ಸಂಭೋಗ ರಹಿತ ಗರ್ಭಧಾರಣೆಯ ಆಯ್ಕೆಯನ್ನು ಸಹ ಒದಗಿಸುತ್ತಾರೆ. 38 ವರ್ಷದ ಹಾಜಿಮೆ ಎಂಬ ಈ ವ್ಯಕ್ತಿ, 5 ವರ್ಷಗಳ ಹಿಂದೆ ಒಬ್ಬ ಸ್ನೇಹಿತ ಸಹಾಯ ಕೇಳಿದಾಗ ಈ ಕೆಲಸವನ್ನು ಪ್ರಾರಂಭಿಸಿದ್ದಾಗಿ ಹೇಳಿದ್ದಾನೆ. ಹಾಜಿಮೆಯ ಸ್ನೇಹಿತ ತನಗೆ ವೀರ್ಯದ ಕೊರತೆ ಇದೆ ಮತ್ತು ತನ್ನ ಹೆಂಡತಿಯಿಂದ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದ. ನಂತರ ಅವನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಗರ್ಭಿಣಿಯಾಗುವಂತೆ ಹಾಜಿಮೆಗೆ ವಿನಂತಿಸಿದನು. ಈ ಅಸಾಮಾನ್ಯ ವಿನಂತಿಯನ್ನು ಕೇಳಿ ಹಾಜಿಮೆ ಆಶ್ಚರ್ಯಚಕಿತನಾದನು, ಆದರೆ ಕೆಲವು ದಿನಗಳ ನಂತರ ಅವನು ಅದರ ಬಗ್ಗೆ ಸಂಶೋಧನೆ ಮಾಡಿ ಅನೇಕ ಜನರು ಇದೇ ರೀತಿಯ…
ನವದೆಹಲಿ : ಉಪಾಧ್ಯಕ್ಷ ಹುದ್ದೆಗೆ INDIA ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಹೆಸರು ಘೋಷಣೆ ಮಾಡಲಾಗಿದೆ. ಬಿ. ಸುದರ್ಶನ್ ರೆಡ್ಡಿ ಯಾರು? ಬಿ. ಸುದರ್ಶನ್ ರೆಡ್ಡಿ, ಬಿ.ಎ., ಎಲ್.ಎಲ್.ಬಿ., ಜುಲೈ 8, 1946 ರಂದು ಜನಿಸಿದರು. ಅವರು ಡಿಸೆಂಬರ್ 27, 1971 ರಂದು ಆಂಧ್ರಪ್ರದೇಶದ ಬಾರ್ ಕೌನ್ಸಿಲ್ನಲ್ಲಿ ಹೈದರಾಬಾದ್ನಲ್ಲಿ ವಕೀಲರಾಗಿ ಸೇರಿಕೊಂಡರು. ಅವರು ಆಂಧ್ರಪ್ರದೇಶದ ಹೈಕೋರ್ಟ್ನಲ್ಲಿ ರಿಟ್ ಮತ್ತು ಸಿವಿಲ್ ವಿಷಯಗಳಲ್ಲಿ ಅಭ್ಯಾಸ ಮಾಡಿದ್ದಾರೆ. ಅವರು 1988-90ರ ಅವಧಿಯಲ್ಲಿ ಹೈಕೋರ್ಟ್ನಲ್ಲಿ ಸರ್ಕಾರಿ ವಕೀಲರಾಗಿ ಕೆಲಸ ಮಾಡಿದರು. 1990 ರಲ್ಲಿ ಅವರು ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಕೌನ್ಸಿಲ್ ಆಗಿಯೂ ಕೆಲಸ ಮಾಡಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ಕೌನ್ಸಿಲ್ ಆಗಿ ಕೆಲಸ ಮಾಡಿದರು. http://twitter.com/ANI/status/1957706525515956371?ref_src=twsrc%5Egoogle%7Ctwcamp%5Eserp%7Ctwgr%5Etweet ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಬಿ. ಸುದರ್ಶನ್ ರೆಡ್ಡಿ ಭಾರತದ ಅತ್ಯಂತ ವಿಶಿಷ್ಟ ಮತ್ತು ಪ್ರಗತಿಪರ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರು. ಅವರು ಆಂಧ್ರಪ್ರದೇಶ…
ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಸಂಜಯನಗರದಲ್ಲಿ ಮಗುವಿಗೆ ಉಪಹಾರ ತರಲು ಬೈಕ್ ನಲ್ಲಿ ಹೋಗುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಶನ್ ಎಂಬ ವ್ಯಕ್ತಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದು , ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸವಾರ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಬೆಂಗಳೂರು : ಕೇವಲ 10 ವರ್ಷಗಳಲ್ಲಿ 130 ಲಕ್ಷ ಕೋಟಿ ಸಾಲ ಮಾಡಿದೆ ಬಿಜೆಪಿಯ ಕೇಂದ್ರ ಸರ್ಕಾರ, ಸಾಲವೂ ತಪ್ಪಲಿಲ್ಲ, ತುಪ್ಪವೂ ಸಿಗಲಿಲ್ಲ. ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, – 1947ರಿಂದ 2014ರವರೆಗೆ ಭಾರತದ ಸಾಲ – 54 ಲಕ್ಷ ಕೋಟಿ – 2014ರಿಂದ 2025ರವರೆಗೆ 200.16 ಲಕ್ಷ ಕೋಟಿಗೆ ಏರಿದೆ – ಕೇವಲ 10 ವರ್ಷಗಳಲ್ಲಿ 130 ಲಕ್ಷ ಕೋಟಿ ಸಾಲ ಮಾಡಿದೆ ಬಿಜೆಪಿಯ ಕೇಂದ್ರ ಸರ್ಕಾರ – ಪಾವತಿಸುತ್ತಿರುವ ಬಡ್ಡಿ 12.76 ಲಕ್ಷ ಕೋಟಿ! ಸ್ವತಂತ್ರಾನಂತರ 67 ವರ್ಷಗಳಲ್ಲಿ ಶೂನ್ಯದಿಂದ ದೇಶವನ್ನು ಕಟ್ಟಲಾಗಿದೆ, ಬೃಹತ್ ಡ್ಯಾಮ್ ಗಳನ್ನು, ಬೃಹತ್ ಕೈಗಾರಿಕೆಗಳನ್ನು, ವಿಸ್ತಾರದ ರೈಲ್ವೆ ವ್ಯವಸ್ಥೆಯನ್ನು, ಏಮ್ಸ್ ನಂತಹ ಸುಸಜ್ಜಿತ ಆಸ್ಪತ್ರೆಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಾಗಿದೆ, ಬಾಹ್ಯಾಕಾಶ ಸಾಧನೆಗಳನ್ನು ಮಾಡಲಾಗಿದೆ, ಮೂರು ಯುದ್ಧಗಳನ್ನು ಎದುರಿಸಲಾಗಿದೆ, ಜಗತ್ತಿನ 4ನೇ ಶಕ್ತಿಶಾಲಿ ಸೈನ್ಯವನ್ನು ಕಟ್ಟಲಾಗಿದೆ, ರಸ್ತೆ, ನೀರು, ವಿದ್ಯುತ್ ನಂತಹ ಮೂಲಸೌಕರ್ಯಗಳನ್ನು…
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2025-26ರ ಋತುವಿಗೆ ವಾರ್ಷಿಕ ಕೇಂದ್ರ ಒಪ್ಪಂದಗಳನ್ನು ಘೋಷಿಸಿದೆ, ಇದರಲ್ಲಿ ಮೂರು ವಿಭಾಗಗಳಲ್ಲಿ 30 ಆಟಗಾರರು ಸೇರಿದ್ದಾರೆ, ಈ ಬಾರಿ ಬಾಬರ್, ರಿಜ್ವಾನ್ ಗೆ ಹಿಂಬಡ್ತಿ ನೀಡಲಾಗಿದೆ. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಬಿ ವರ್ಗಕ್ಕೆ ಹಿಂಬಡ್ತಿ ಮಾಡಲಾಗಿದೆ, ಮೊದಲ ಬ್ರಾಕೆಟ್ನಲ್ಲಿದ್ದ ಏಕೈಕ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಬಿ ವರ್ಗಕ್ಕೆ ಹಿಂಬಡ್ತಿ ಮಾಡಲಾಗಿದೆ. ಪ್ರತಿ ವಿಭಾಗ – ಬಿ, ಸಿ ಮತ್ತು ಡಿ – ತಲಾ 10 ಆಟಗಾರರನ್ನು ಒಳಗೊಂಡಿತ್ತು, 12 ಹೊಸಬರು ಮತ್ತು ಎಂಟು ಆಟಗಾರರನ್ನು ಹಿಂದಿನ ಪಟ್ಟಿಯಿಂದ ಕೈಬಿಡಲಾಗಿದೆ. 2025-26ರ ಪಾಕಿಸ್ತಾನ ಪುರುಷರ ಗುತ್ತಿಗೆ ಆಟಗಾರರ ಪಟ್ಟಿ ಬಿ ವರ್ಗ (10 ಆಟಗಾರರು): ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್ ಮತ್ತು ಶಾಹೀನ್ ಶಾ ಆಫ್ರಿದಿ…
ಬೆಂಗಳೂರು : ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟೆಲ್ ನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡ್ರಗ್ ಪೆಡ್ಲರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 40 ಲಕ್ಷ ರೂ. 255 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್ ವಶಕ್ಕೆ ಪಡೆಯಲಾಗಿದೆ. ಸಿ.ಸಿ.ಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ, ದಿನಾಂಕ:14/08/2025 ರಂದು ಬಾತ್ಮೀಧಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಅವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಮರಿಯಪ್ಪ ಲೇಔಟ್, ಮನೆಯೊಂದರಲ್ಲಿ ವಾಸವಾಗಿರುವ ವಿದೇಶಿ ಮೂಲದ ವ್ಯಕ್ತಿಯೋರ್ವನು ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್ನ್ನು ಆತನ ವಶದಲ್ಲಿಟ್ಟುಕೊಂಡು, ಆತನಗೆ ಪರಿಚಯವಿರುವ ಗಿರಾಕಿಗಳಿಗೆ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆಂದು ತಿಳಿಸಿರುತ್ತಾರೆ. ಈ ಮಾಹಿತಿಯನ್ನಾದರಿಸಿ, ಅದೇ ದಿನ ಸಂಜೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಅವಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಜಂಟಿಯಾಗಿ, ಬಾತ್ಮೀಧಾರರು ತಿಳಿಸಿದ ಸ್ಥಳಕ್ಕೆ ಭೇಟಿ ನೀಡಿ, ದಾಳಿ…
ಬೆಂಗಳೂರು : ವಿಧಾನಸಭೆಯಲ್ಲಿ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ಸ್ಪೀಕರ್ ಯು.ಟಿ. ಖಾದರ್ ಅಂಗೀಕರಿಸಿದ್ದಾರೆ. ಈ ವಿಧೇಯಕವು ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸುವ ಮತ್ತು ವಾರ್ಡ್ಗಳ ಮರುವಿಂಗಡಣೆಯನ್ನು ಒಳಗೊಂಡಿದೆ. ಬಿಬಿಎಂಪಿಯನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಭಜಿಸುವ ಮೂಲಕ ಆಡಳಿತವನ್ನು ವಿಕೇಂದ್ರೀಕರಿಸುವುದು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
ಉಡುಪಿ: ಧರ್ಮಸ್ಥಳದ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆಗಸ್ಟ್ 16 ರಂದು ಫೇಸ್ಬುಕ್ ಪೇಜ್ನಲ್ಲಿ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಹೇಶ ಶೆಟ್ಟಿ ತಿಮರೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಅವರು ದೂರು ನೀಡಿದ್ದಾರೆ. ಈ ಹಿನ್ನೆಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು : ವಿಧಾನಸಭೆಯಲ್ಲಿ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮಂಡಿಸಿದ್ದಾರೆ.