Author: kannadanewsnow57

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಸೋಮವಾರದಿಂದ ಹೊಸ ಅಬಕಾರಿ ನೀತಿಯನ್ನು ಜಾರಿಗೆಗೊಳಿಸಿದೆ. ಈ ಹೊಸ ನೀತಿಯು ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದ್ದು, ವಿಶೇಷವಾಗಿ ಕಡಿಮೆ ದರದ ಮದ್ಯದ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ ‘ಬಲ್ಕ್ ಲೀಟರ್’ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಕೈಬಿಟ್ಟು, ಈಗ ‘ಅಲ್ಕೋಹಾಲ್ ಇನ್ ಬೇವರೇಜ್’ (ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣ) ಆಧಾರಿತ ತೆರಿಗೆಯನ್ನು ಅಳವಡಿಸಲಾಗಿದೆ.ಈ ಹಿಂದೆ ಇದ್ದ 16 ಅಬಕಾರಿ ಸ್ಲ್ಯಾಬ್ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್ಗಳಿಗೆ ಸೀಮಿತಗೊಳಿಸಲಾಗಿದೆ. 180 ಮಿಲಿ ಟೆಟ್ರಾ ಪ್ಯಾಕ್ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಮತ್ತು ವೋಡ್ಕಾ ಬೆಲೆಯು ಕನಿಷ್ಠ ಶೇ. 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಂದು ಕಡೆ ಸಾಮಾನ್ಯ ಮದ್ಯದ ಬೆಲೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ವಿದೇಶಿ ಅಥವಾ ಪ್ರೀಮಿಯಂ ಮದ್ಯದ ಬ್ರ್ಯಾಂಡ್ಗಳ ಬೆಲೆ ಶೇ. 16ರಿಂದ ಶೇ. 20ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಸರ್ಕಾರದ ಈ ನಿರ್ಧಾರದಿಂದ ಬಹುರಾಷ್ಟ್ರೀಯ ಪ್ರೀಮಿಯಂ…

Read More

ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಅದರಂತೆ 2026ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮಾತ್ರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು. ವಿದ್ಯಾರ್ಥಿಗಳು 2026 ರ ಎಸ್ಎಸ್ಎಲ್ಸಿ/ಪಿಯುಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ-ತಾಯಿ ಕರ್ನಾಟಕ ರಾಜ್ಯ ಸರ್ಕಾರದ ಖಾಯಂ ನೌಕರರಾಗಿರಬೇಕು. https://powermedia.info ಲಿಂಕ್ ಮುಖಾಂತರ ಅರ್ಜಿ ಸಲ್ಲಿಸುವುದು. ಸಂಘವು ನಿಗದಿಪಡಿಸಿರುವ ನಮೂನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ/ತಾಲ್ಲೂಕು/ಯೋಜನಾ ಶಾಖೆ ಅಧ್ಯಕ್ಷರು ಮತ್ತು ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ದೃಢೀಕರಿಸಿ ಆನ್ಲೈನ್ನಲ್ಲಿ…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತಿವೇಗ ಹಾಗೂ ಅಜಾಗರೂಕ ಚಾಲನೆಗೆ ಮತ್ತೊಂದು ಬಲಿಯಾಗಿದೆ. ನಗರದ ಹೊರವಲಯದ ಚಿಕ್ಕಜಾಲ ಬಳಿ ನಡೆದ ಭೀಕರ ಹಿಟ್ ಅಂಡ್ ರನ್ (Hit and Run) ಪ್ರಕರಣದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಮತ್ತು ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು 40 ವರ್ಷದ ಮಹೇಶ್ ಎಂದು ಗುರುತಿಸಲಾಗಿದೆ. ಮಹೇಶ್ ಅವರು ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ವೇಗವಾಗಿ ಬಂದ ಅಪರಿಚಿತ ಕಾರೊಂದು ಇವರ ದ್ವಿಚಕ್ರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಹೇಶ್ ಅವರ ಪತ್ನಿ ಹಾಗೂ ಪುತ್ರಿಗೂ ಪೆಟ್ಟಾಗಿದ್ದು, ಸದ್ಯ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ನವದೆಹಲಿ: ದೇಶದ ಕೃಷಿ ವಲಯ ಹಾಗೂ ಆರ್ಥಿಕತೆಯ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಮಾರುತಗಳು ಈ ಬಾರಿ ನಿಗದಿತ ಸಮಯಕ್ಕಿಂತ ಒಂದು ವಾರ ಮೊದಲೇ ಅಪ್ಪಳಿಸುವ ಮುನ್ಸೂಚನೆ ಸಿಕ್ಕಿದೆ. ಸಾಮಾನ್ಯವಾಗಿ ಮೇ 22ರ ಸುಮಾರಿಗೆ ಅಂಡಮಾನ್ ಪ್ರವೇಶಿಸುತ್ತಿದ್ದ ಮಾರುತಗಳು, ಈ ಬಾರಿ ಮೇ 17ರಂದೇ ದಕ್ಷಿಣ ಬಂಗಾಳ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ. ವಾಡಿಕೆಗಿಂತ ಐದಾರು ದಿನ ಮುಂಚಿತವಾಗಿ ಅಂದರೆ ಈ ವಾರದ ಅಂತ್ಯದೊಳಗೆ ಮುಂಗಾರು ಅಂಡಮಾನ್ ತಲುಪಲಿದೆ. ಅಂಡಮಾನ್ ನಂತರ ಮಾರುತಗಳು ಕೇರಳದತ್ತ ಮುಖ ಮಾಡಲಿವೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಪ್ರವೇಶಿಸುವ ಮುಂಗಾರು, ಈ ಬಾರಿ ಮೇ ಅಂತ್ಯದಲ್ಲೇ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ. ಕರ್ನಾಟಕಕ್ಕೆ ಯಾವಾಗ? ಕೇರಳಕ್ಕೆ ಮಳೆ ಬಂದ 3 ರಿಂದ 4 ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದ್ದು, ಇದರೊಂದಿಗೆ ರಾಜ್ಯದಲ್ಲಿ ನಾಲ್ಕು ತಿಂಗಳ ಸುದೀರ್ಘ ಮಳೆಗಾಲ ಅಧಿಕೃತವಾಗಿ ಆರಂಭವಾಗಲಿದೆ.ಹವಾಮಾನ ಇಲಾಖೆಯ ಈ ಮುನ್ಸೂಚನೆಯು ರೈತರಲ್ಲಿ ಸಂತಸ ತಂದಿದ್ದು, ಮುಂಚಿತವಾಗಿ ಕೃಷಿ ಚಟುವಟಿಕೆಗಳನ್ನು…

Read More

ಬೆಂಗಳೂರು: ಇಂದಿನ ಓಟದ ಬದುಕಿನಲ್ಲಿ ಆರೋಗ್ಯವೇ ದೊಡ್ಡ ಭಾಗ್ಯ. ಆದರೆ, ನಾವು ನಿಜವಾಗಿಯೂ ಆರೋಗ್ಯವಾಗಿದ್ದೇವೆಯೇ ಎಂದು ತಿಳಿಯುವುದು ಹೇಗೆ? ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕೇವಲ ಕಾಯಿಲೆಗಳಿಲ್ಲದಿರುವುದು ಆರೋಗ್ಯವಲ್ಲ; ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸುಸ್ಥಿತಿಯಲ್ಲಿರುವುದೇ ನಿಜವಾದ ಆರೋಗ್ಯ. ಒಬ್ಬ ವ್ಯಕ್ತಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ಹೇಳಲು ಈ ಕೆಳಗಿನ 10 ಪ್ರಮುಖ ಲಕ್ಷಣಗಳು ಸಹಕಾರಿಯಾಗಿವೆ. 1. ಗಾಢವಾದ ನಿದ್ರೆ ನೀವು ಹಾಸಿಗೆಗೆ ಸೇರಿದ 30 ನಿಮಿಷದೊಳಗೆ ನಿದ್ರೆಗೆ ಜಾರುತ್ತಿದ್ದರೆ ಮತ್ತು ಮಧ್ಯರಾತ್ರಿ ಪದೇ ಪದೇ ಎಚ್ಚರವಾಗದೆ, ಬೆಳಿಗ್ಗೆ ಎದ್ದಾಗ ಉತ್ಸಾಹದಿಂದ ಕೂಡಿದ್ದರೆ ನಿಮ್ಮ ಆರೋಗ್ಯ ಉತ್ತಮವಾಗಿದೆ ಎಂದರ್ಥ. 2. ಸುಗಮ ಜೀರ್ಣಕ್ರಿಯೆ ಹೊಟ್ಟೆ ಉಬ್ಬರ ಇಲ್ಲದಿರುವುದು ಮತ್ತು ಯಾವುದೇ ಒತ್ತಡವಿಲ್ಲದೆ ಸುಲಭವಾಗಿ ಮಲವಿಸರ್ಜನೆ ಆಗುವುದು ಆರೋಗ್ಯವಂತ ದೇಹದ ಪ್ರಮುಖ ಲಕ್ಷಣ. ಜೀರ್ಣಾಂಗವ್ಯೂಹ ಸರಿಯಾಗಿದ್ದರೆ ಅರ್ಧದಷ್ಟು ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. 3. ಸ್ಥಿರವಾದ ತೂಕ ಮತ್ತು ಶಕ್ತಿ ದೇಹದ ತೂಕ ಹಠಾತ್ತಾಗಿ ಏರಿಕೆ ಅಥವಾ ಇಳಿಕೆ ಆಗಬಾರದು. ದಿನವಿಡೀ ಕೆಲಸ…

Read More

ನಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಬೆವರುವುದು ಅತ್ಯಗತ್ಯ. ಆದರೆ ಯಾವುದೇ ಕಾರಣವಿಲ್ಲದೆ ರಾತ್ರಿಯ ಸಮಯದಲ್ಲಿ ನೀವು ಅತಿಯಾಗಿ ಬೆವರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹದ ಒಳಗೆ ಯಾವುದೋ ಕಾಯಿಲೆ ಮನೆಮಾಡಿದೆ ಎನ್ನುವುದರ ಸೂಚನೆಯಾಗಿರಬಹುದು. ರಾತ್ರಿ ಅತಿಯಾಗಿ ಬೆವರು ಸುರಿಸಲು ಕಾರಣವಾಗುವ ಆ 7 ಪ್ರಮುಖ ವೈದ್ಯಕೀಯ ಸ್ಥಿತಿಗಳು ಇಲ್ಲಿವೆ: 1. ಹೃದಯ ಸಂಬಂಧಿ ಕಾಯಿಲೆಗಳು ಹೃದಯವು ರಕ್ತವನ್ನು ಪಂಪ್ ಮಾಡಲು ಕಷ್ಟಪಡುತ್ತಿರುವಾಗ ದೇಹದಲ್ಲಿ ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ನಿದ್ರೆಯ ಸಮಯದಲ್ಲಿ ಅತಿಯಾದ ಬೆವರುವಿಕೆಗೆ ಕಾರಣವಾಗಬಹುದು. ಇದು ಹೃದಯ ವೈಫಲ್ಯದ ಆರಂಭಿಕ ಲಕ್ಷಣವೂ ಆಗಿರಬಹುದು. 2. ರಕ್ತದೊತ್ತಡ (Hypertension) ರಕ್ತದೊತ್ತಡದಲ್ಲಿ ದಿಢೀರ್ ಏರಿಳಿತ ಉಂಟಾದಾಗ ಬೆವರಿನ ಗ್ರಂಥಿಗಳು ಉತ್ತೇಜಿತಗೊಂಡು ಬೆವರು ಬರಲು ಶುರುವಾಗುತ್ತದೆ. ಅಲ್ಲದೆ, ಬಿಪಿಗಾಗಿ ಬಳಸುವ ಕೆಲವು ಔಷಧಿಗಳ ಪಾರ್ಶ್ವಪರಿಣಾಮದಿಂದಲೂ ರಾತ್ರಿ ಬೆವರು ಬರಬಹುದು. 3. ಮಧುಮೇಹ ಮತ್ತು ಲೋ ಶುಗರ್ ರಕ್ತದಲ್ಲಿನ ಸಕ್ಕರೆ ಪ್ರಮಾಣವು ದಿಢೀರನೆ ಕುಸಿದಾಗ (Nocturnal Hypoglycaemia) ದೇಹವು ಬೆವರುತ್ತದೆ. ಮಧುಮೇಹಿಗಳಲ್ಲಿ ರಾತ್ರಿ ವೇಳೆ…

Read More

ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಈಗ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜನಸಾಮಾನ್ಯರು ತಲೆತಗ್ಗಿಸುವಂತೆ ಮಾಡಿದೆ. ನಡೆದದ್ದೇನು? ಕನಸಿನ ನಗರಿ ಮುಂಬೈನ ಚರ್ಚ್‌ಗೇಟ್ ರೈಲ್ವೆ ನಿಲ್ದಾಣದ ಹೊರಗಿನ ಫುಟ್‌ಪಾತ್‌ನಲ್ಲಿ ತಡರಾತ್ರಿ ಜೋಡಿಯೊಂದು ಬಹಿರಂಗವಾಗಿಯೇ ಅಸಭ್ಯ ವರ್ತನೆಯಲ್ಲಿ ತೊಡಗಿಸಿಕೊಂಡಿತ್ತು. ಈ ದೃಶ್ಯವನ್ನು ಗಮನಿಸಿದ ದಾರಿಹೋಕರೊಬ್ಬರು ಅದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಷ್ಟೇ ಅಲ್ಲದೆ, ಆ ಜೋಡಿಯನ್ನು ಪ್ರಶ್ನಿಸಿ, “ಓಯ್ ಭಾಯ್, ಸಾರ್ವಜನಿಕವಾಗಿ ಇದೇನು ಮಾಡುತ್ತಿದ್ದೀರಿ?” ಎಂದು ಜೋರಾಗಿ ಗದರಿಸುವ ಮೂಲಕ ಅವರ ಕೃತ್ಯವನ್ನು ತಡೆದಿದ್ದಾರೆ. ವೈರಲ್ ವಿಡಿಯೋ ಮತ್ತು ಸಾರ್ವಜನಿಕರ ಆಕ್ರೋಶ ಈ ವಿಡಿಯೋದಲ್ಲಿ ಕಂಡುಬಂದ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಅದೇ ಫುಟ್‌ಪಾತ್‌ನಲ್ಲಿ ಕೇವಲ ಕೆಲವೇ ಮೀಟರ್‌ಗಳ ದೂರದಲ್ಲಿ ಇತರ ಜನರು ಮಲಗಿದ್ದರು. ಜನನಿಬಿಡ ಪ್ರದೇಶದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರ ಪ್ರತಿಕ್ರಿಯೆ: ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು…

Read More

ಮನೆ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಈಗ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಸರ್ಕಾರದ ಈ ಕ್ರಮದಿಂದಾಗಿ ಲಕ್ಷಾಂತರ ಶ್ರೀಮಂತ ಕುಟುಂಬಗಳು ಸಬ್ಸಿಡಿ ಸೌಲಭ್ಯವನ್ನು ಕಳೆದುಕೊಳ್ಳಲಿವೆ. ಯಾರಿಗೆ ಅನ್ವಯಿಸುತ್ತದೆ ಈ ನಿಯಮ? ಸರ್ಕಾರದ ಹೊಸ ಆದೇಶದ ಪ್ರಕಾರ, ವಾರ್ಷಿಕ 10 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಇನ್ಮುಂದೆ ಎಲ್‌ಪಿಜಿ ಸಬ್ಸಿಡಿ ಪಡೆಯಲು ಅರ್ಹರಲ್ಲ. ಈ ಹಿಂದೆ ‘ಗಿವ್ ಇಟ್ ಅಪ್’ (Give It Up) ಅಭಿಯಾನದ ಮೂಲಕ ಸ್ವಯಂಪ್ರೇರಿತರಾಗಿ ಸಬ್ಸಿಡಿ ಬಿಟ್ಟುಕೊಡಲು ಕೋರಲಾಗಿತ್ತು, ಆದರೆ ಈಗ ಡಿಜಿಟಲ್ ತಂತ್ರಜ್ಞಾನ ಬಳಸಿ ಅನರ್ಹರನ್ನು ಗುರುತಿಸಲಾಗುತ್ತಿದೆ. ಹೊಸ ಡಿಜಿಟಲ್ ಪರಿಶೀಲನೆ ವ್ಯವಸ್ಥೆ ಅರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರವು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ: ಡೇಟಾ ಮ್ಯಾಚಿಂಗ್: ಗ್ಯಾಸ್ ಕನೆಕ್ಷನ್ ವಿವರಗಳನ್ನು ನೇರವಾಗಿ PAN ಕಾರ್ಡ್, ಆದಾಯ ತೆರಿಗೆ ರಿಟರ್ನ್ಸ್ (ITR) ಮತ್ತು ಕುಟುಂಬದ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡಲಾಗುತ್ತಿದೆ. ಕುಟುಂಬದ ಒಟ್ಟು ಆದಾಯ: ಕೇವಲ…

Read More

ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರು ಇನ್ನು ಮುಂದೆ ಇ-ಖಾತಾ ಪಡೆಯಲು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವತಿಯಿಂದ ಇದೇ ಮೇ 16ರಿಂದ ಬೃಹತ್ ‘ಇ-ಖಾತಾ ಮೇಳ’ ಆಯೋಜಿಸಲಾಗಿದೆ. 50 ಕಡೆಗಳಲ್ಲಿ ಇ-ಖಾತಾ ಮೇಳ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಒಟ್ಟು 50 ಕೇಂದ್ರಗಳಲ್ಲಿ ಈ ಮೇಳ ನಡೆಯಲಿದೆ. ಅಂದಾಜು 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ 10 ಲಕ್ಷ ಆಸ್ತಿಗಳ ಇ-ಖಾತಾ ವಿತರಣೆ ಪೂರ್ಣಗೊಂಡಿದೆ. ಮೇ 16ರ ನಂತರ ಪ್ರತಿ ಶನಿವಾರ ಈ ಮೇಳಗಳು ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಮಧ್ಯವರ್ತಿಗಳ ಕಾಟಕ್ಕೆ ಬ್ರೇಕ್ ಈ ಮೇಳದ ಪ್ರಮುಖ ಉದ್ದೇಶವೇ ಪಾರದರ್ಶಕತೆ. ಸಾರ್ವಜನಿಕರು ನೇರವಾಗಿ ಮೇಳಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಮತ್ತು ಲಂಚದ ಬೇಡಿಕೆಗೂ ಅವಕಾಶವಿರುವುದಿಲ್ಲ. ಡಿಜಿಟಲ್ ವ್ಯವಸ್ಥೆಯ ಮೂಲಕ ನೇರವಾಗಿ ಅರ್ಹರಿಗೆ ಇ-ಖಾತಾ ತಲುಪಲಿದೆ. ಅಗತ್ಯವಿರುವ…

Read More

ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ಭಾರತದ ಮೇಲೆ ಪರಿಣಾಮ ಬೀರಿದ್ದು, ಈ ಬಿಕ್ಕಟ್ಟು ನಿವಾರಣೆಗೆ ಮೋದಿ ಕೆಲ ಸಲಹೆ ಮತ್ತು ತ್ಯಾಗಗಳಿಗೆ ಕರೆ ನೀಡಿದ್ದಾರೆ. ಅವುಗಳಲ್ಲಿ ಜನ ಅಡುಗೆ ಎಣ್ಣೆಯ ಬಳಕೆಯನ್ನು ಮಿತಿಗೊಳಿಸುವ ಮನವಿ ಸಹ ಒಂದಾಗಿದೆ. ಈ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಲ್ಲಿ ಅಡುಗೆ ಎಣ್ಣೆ ಬೆಲೆ ಕುಸಿತವಾಗಿದ್ದರೇ, ಅಕ್ಕಿ ದರ ಗಗನಕ್ಕೇರಿದೆ. ಹೌದು ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದೇಶದ ಆರ್ಥಿಕತೆಯ ಒಳಿತಿನ ದೃಷ್ಟಿಯಿಂದ ಕೆಲ ಮನವಿಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗೃಹಿಣಿಯರಿಗೆ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಅನ್ನೋದು ಸಹ ಒಂದಾಗಿದೆ. ಆರೋಗ್ಯ ಹಾಗೂ ಆರ್ಥಿಕತೆಯ ಉದ್ದೇಶದಿಂದ ಈ ಕರೆ ನೀಡಿದ್ದಾರೆ. ಅಡುಗೆ ಎಣ್ಣೆ ಬಳಕೆ ಮಿತಿಗೆ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿದೆ. ಎಲ್ಲಾ ಬ್ರ್ಯಾಂಡ್‌ನ ಅಡುಗೆ ಎಣ್ಣೆಗಳಲ್ಲೂ ಒಂದು ಲೀಟರ್‌ಗೆ ಮೂರು ರೂಪಾಯಿಯಿಂದ ಐದು ರೂಪಾಯಿವರೆಗೂ ಕಡಿಮೆಯಾಗಿದೆ. ಒಂದು ಟಿನ್…

Read More