Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-1ಕ್ಕೆ KSRTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
KARNATAKA

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-1ಕ್ಕೆ KSRTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

By kannadanewsnow5716/02/2026 8:01 AM

ಬೆಂಗಳೂರು: 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ ಬಸ್ಸುಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅನುಮತಿಸಿ ಆದೇಶಿಸಲಾಗಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಿನಾಂಕ: 28.02.2026 ರಿಂದ ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿವೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ, ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಂತೆ ಉಲ್ಲೇಖಿತ-1 ರ ಪತ್ರದಲ್ಲಿ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರವರು ಕೋರಿರುತ್ತಾರೆ ಎಂದಿದ್ದಾರೆ.

ಅದರನ್ವಯ ಕ.ರಾ.ರ.ಸಾ.ನಿಗಮವು, ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ 28.02.2026 ರಿಂದ 17.03.2026 ರವರೆಗೆ, ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ “ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ, ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳುವಳಿಕೆ ನೀಡಲು ಸೂಚಿಸಿದ್ದಾರೆ.

ಮುಂದುವರೆದು, ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳುವುದು. ಚಾಲನಾ ಸಿಬ್ಬಂದಿಗಳು ಮೇಲ್ಕಂಡ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದು. ಈ ವಿಷಯವನ್ನು ಎಲ್ಲಾ ಘಟಕ ಮತ್ತು ಬಸ್‌ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಮೇಲ್ಕಂಡ ನಿರ್ದೇಶನಗಳನ್ನು ಜಾರಿಗೊಳಿಸಲು ಕ್ರಮ ವಹಿಸುವಂತೆ ತಿಳಿಸಿದ್ದಾರೆ.

Good news for the state's 'Second PUC' students: Free travel on KSRTC buses for Exam-1
Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM1 Min Read

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM2 Mins Read

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.