Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ಅಡುಗೆ ಎಣ್ಣೆ ಹಾಗೂ ಅಕ್ಕಿಯ ಬೆಲೆಯೂ ಗಗನಕ್ಕೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯದ ಕರೆ ನೀಡಿದ ಬೆನ್ನಲ್ಲೇ ಈ ಬೆಲೆ ಏರಿಕೆ ಕಂಡುಬಂದಿದ್ದು, ಸಾಮಾನ್ಯ ಜನರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಪೆಟ್ರೋಲ್ ದರ ಪ್ರತಿ ಲೀಟರ್ಗೆ 3.27 ರೂ. ಹಾಗೂ ಡೀಸೆಲ್ ದರ 3.12 ರೂ. ನಷ್ಟು ಏರಿಕೆಯಾಗಿದೆ. ಅಕ್ಕಿ ಬೆಲೆ ಏರಿಕೆ ಬಿಸಿ ಅಕ್ಕಿಯ ರಫ್ತು ಹೆಚ್ಚಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಉಂಟಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ. ವಿವಿಧ ತಳಿಯ ಅಕ್ಕಿಗಳ ದರ ಈ ಕೆಳಗಿನಂತಿದೆ: ಬಾಸ್ಮತಿ ಅಕ್ಕಿ: 90 ರೂ. ನಿಂದ 115 ರೂ. ಗೆ ಏರಿಕೆ. ಜೀರಾ ಅಕ್ಕಿ: 180 ರೂ. ನಿಂದ 220 ರೂ. ಗೆ ಏರಿಕೆ.…
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಹಸಿರು ಇಂಧನಕ್ಕೆ ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ’ಯನ್ನು (PM Surya Ghar Muft Bijli Yojana) ಜಾರಿಗೆ ತರಲಾಗಿದೆ. “ವಿದ್ಯುತ್ ಉತ್ಪಾದಿಸಿ, ಹಣ ಉಳಿಸಿ ಮತ್ತು ಆದಾಯ ಗಳಿಸಿ” ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಿಗೆ ಭರ್ಜರಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳನ್ನು ಘೋಷಿಸಲಾಗಿದೆ. ಯೋಜನೆಯ ಪ್ರಮುಖ ಪ್ರಯೋಜನಗಳು: ದೀರ್ಘಾವಧಿ ಬಾಳಿಕೆ: ಸೌರ ಘಟಕಗಳು ಕನಿಷ್ಠ 25 ವರ್ಷಗಳವರೆಗೆ ಸುದೀರ್ಘ ಕಾಲ ಬಾಳಿಕೆ ಬರಲಿವೆ. ಉಳಿತಾಯ: ಮಾಸಿಕ ವಿದ್ಯುತ್ ಬಿಲ್ನಲ್ಲಿ ಗಣನೀಯ ಉಳಿತಾಯವಾಗಲಿದೆ. ಹೆಚ್ಚುವರಿ ಆದಾಯ: ಮನೆಯಲ್ಲಿ ಬಳಕೆಯಾದ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ತನ್ನು ಆಯಾ ಭಾಗದ ಎಸ್ಕಾಂಗಳಿಗೆ (ESCOMs) ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ಸಬ್ಸಿಡಿ ವಿವರಗಳು: ಬಳಕೆದಾರರ ವರ್ಗಕ್ಕೆ ಅನುಗುಣವಾಗಿ ಸರ್ಕಾರವು ಈ ಕೆಳಗಿನಂತೆ ಆರ್ಥಿಕ ನೆರವು ನೀಡಲಿದೆ: ಗ್ರಾಹಕ ವರ್ಗ ಸೌರ ಘಟಕದ ಸಾಮರ್ಥ್ಯ ಸಬ್ಸಿಡಿ ಮೊತ್ತ ಗೃಹ ಬಳಕೆ ಗ್ರಾಹಕರು (ಪ್ರತ್ಯೇಕ ಮನೆಗಳಿಗೆ) 1…
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯೊಂದು ಬಂದಿದೆ. ಭಾರತೀಯ ಕ್ಲಾಸಿಕ್ ಬೈಕ್ಗಳ, ಅದರಲ್ಲೂ ‘ಯೆಜ್ಡಿ’ ಬೈಕ್ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ಜನ್ಮದಿನದ ಪ್ರಯುಕ್ತ ಹೊಚ್ಚ ಹೊಸ ‘ರೆಡ್ ವೂಲ್ಫ್ʼ ಬಣ್ಣದ ಯೆಜ್ಡಿ ರೋಡ್ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಯೆಜ್ಡಿ ಬೈಕ್ಗಳೆಂದರೆ ಎಲ್ಲಿಲ್ಲದ ಕ್ರೇಜ್. ಅದೇ ಬೈಕ್ ಅನ್ನು ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಅವರು, ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರು. ಯುವಕನಾಗಿದ್ದಾಗ ಇದೇ ಯೆಜ್ಡಿ ಬೈಕ್ನಲ್ಲಿ ತಾವು ಮಾಡಿದ ಲಾಂಗ್ ರೈಡ್ಗಳನ್ನು ಹಾಗೂ ಆ ದಿನಗಳ ಮಧುರ ನೆನಪುಗಳನ್ನು ಅವರು ಮೆಲುಕು ಹಾಕಿದರು. ಬೆಂಗಳೂರು ನಗರ ಕೇವಲ ಐಟಿ-ಬಿಟಿ, ಎಐ ಮತ್ತು ತಂತ್ರಜ್ಞಾನಕ್ಕೆ ಮಾತ್ರವಲ್ಲದೆ, ತನ್ನದೇ ಆದ ವಿಶಿಷ್ಟ ‘ಬೈಕ್-ರೈಡಿಂಗ್ ಕಲ್ಚರ್’ಗೂ ಜಗತ್ಪ್ರಸಿದ್ಧವಾಗಿದೆ. ಇಂದಿಗೂ ಉದ್ಯಾನ ನಗರಿಯ ಯುವಕರು ಮತ್ತು ಬೈಕ್ ಪ್ರೇಮಿಗಳ ಮನಸ್ಸಿನಲ್ಲಿ ಯೆಜ್ಡಿ ಬ್ರ್ಯಾಂಡ್ ತನ್ನದೇ ಆದ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ. ಇದು…
ಮಳೆ ಮತ್ತು ಸಿಡಿಲಿನ ಮುನ್ಸೂಚನೆಗಳಿಗಾಗಿ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಕೊಪ್ಪಳ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಳೆ ಮತ್ತು ಸಿಡಿಲಿನ ಎಚ್ಚರಿಕೆಯ ಸಂದೇಶವನ್ನು ಪಡೆಯಲು https://www.ksndmc.org/MobileRegister_Kn.asp ಮೂಲಕ ಚಂದಾದಾರಿಕೆ ಸೌಲಭ್ಯ ಬಳಸಬಹುದು. ಅದೆ ರೀತಿ, https://play.google.com/store/apps/details ಎನ್ನುವ ಸಿಡಿಲು ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸಿ ಮಳೆ ಮತ್ತು ಸಿಡಿಲು ವಿವರಗಳನ್ನು ಪಡೆಯಬಹುದು. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವೆಬ್‌ಸೈಟ್ https://www.ksndmc.org/ ಬಳಸಿ ಹವಾಮಾನದ ಬಗ್ಗೆ ಎಚ್ಚರಿಕೆಗಳನ್ನು ಪಡೆಯಬಹುದು. ದೂರವಾಣಿ ಸಂಖ್ಯೆ 080-67355000 ಅಥವಾ ವರುಣ ಮಿತ್ರ 24*7: 9243345433 ಗೂ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದ್ದು, ಈ ಕುರಿತು ಪೊಲೀಸ್ ಮಹಾನಿರ್ದೇಶಕರು ಮತ್ತು ಐಜಿಪಿ ಅವರ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಸುಮಾರು 8,176 ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ವರ್ಗೀಕರಣದ ವಿವರಗಳನ್ನು ಪ್ರಕಟಿಸಲಾಗಿದೆ. ಪರಿಶಿಷ್ಟ ಜಾತಿಯ ಒಟ್ಟು ಶೇ.15 ರಷ್ಟು ಮೀಸಲಾತಿಯಲ್ಲಿ ಪ್ರವರ್ಗ-ಎ ಗೆ ಶೇ.5.25, ಪ್ರವರ್ಗ-ಬಿ ಗೆ ಶೇ.5.25 ಮತ್ತು ಪ್ರವರ್ಗ-ಸಿ ಗೆ ಶೇ.4.5 ರಷ್ಟು ಒಳಮೀಸಲಾತಿಯನ್ನು ನಿಗದಿಪಡಿಸಲಾಗಿದೆ. 545 ಮತ್ತು 402 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಕಳೆದ 3.5 ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿರಲಿಲ್ಲ. ಇದರಿಂದಾಗಿ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಮೀರುವ ಭೀತಿಯಲ್ಲಿದ್ದರು. ಹುದ್ದೆಗಳ ವಿವರ ಈ ಕೆಳಗಿನಂತಿದೆ: ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಕರ್ನಾಟಕ ಭಾಗಗಳಿಗೆ ಪ್ರತ್ಯೇಕವಾಗಿ ಹುದ್ದೆಗಳನ್ನು ಮೀಸಲಿಡಲಾಗಿದೆ. ಕ್ರ.ಸಂ ಹುದ್ದೆಯ ಹೆಸರು ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕೇತರ (ಉಳಿಕೆ ಕರ್ನಾಟಕ) ಒಟ್ಟು ಹುದ್ದೆಗಳು…
ನವದೆಹಲಿ: ದೇಶದ ಆರ್ಥಿಕತೆ ಮತ್ತು ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಈ ಬಾರಿ ನಿಗದಿಗಿಂತ ಐದು ದಿನ ಮುಂಚಿತವಾಗಿ, ಅಂದರೆ ಮೇ 26ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಕೇರಳದ ಕರಾವಳಿಯನ್ನು ಸ್ಪರ್ಶಿಸುತ್ತದೆ. ಆದರೆ ಈ ಬಾರಿ ಹವಾಮಾನ ಬದಲಾವಣೆಯಿಂದಾಗಿ ಮೇ ಕೊನೆಯ ವಾರದಲ್ಲೇ ಮಳೆ ಮಾರುತಗಳು ಅಪ್ಪಳಿಸಲಿವೆ. ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶದಲ್ಲಿ ಮಳೆಯ ಪ್ರಮಾಣ ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಬಾರಿ ದೇಶಾದ್ಯಂತ ಸರಾಸರಿ 80 ಸೆ.ಮೀ. ನಷ್ಟು ಮಳೆಯಾಗುವ ನಿರೀಕ್ಷೆಯಿದೆ.ಮುಂಗಾರು ಮಳೆಯು ದೇಶದ ಒಟ್ಟು ಮಳೆಯ ಪ್ರಮಾಣದಲ್ಲಿ ಶೇ. 70 ರಷ್ಟು ಪಾಲನ್ನು ಹೊಂದಿದ್ದು, ಮುಂದಿನ 4 ತಿಂಗಳುಗಳಲ್ಲಿ ಹಂತ-ಹಂತವಾಗಿ ದೇಶಾದ್ಯಂತ ವ್ಯಾಪಿಸಿ ಕೃಷಿ ಚಟುವಟಿಕೆಗಳಿಗೆ ವೇಗ ನೀಡಲಿದೆ. ಮುಂದಿನ 24 ಗಂಟೆಗಳಲ್ಲಿ ಅಂಡಮಾನ್ ಸಮುದ್ರ ಹಾಗೂ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲು ಪೂರಕವಾದ ವಾತಾವರಣ…
ಬೆಂಗಳೂರು: ದೇಶವ್ಯಾಪಿ ಹಮ್ಮಿಕೊಳ್ಳಲಾಗಿರುವ 3ನೇ ಹಂತದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಈಗ ಕರ್ನಾಟಕದಲ್ಲೂ ಆರಂಭವಾಗಿದೆ. ರಾಜ್ಯದ ಒಟ್ಟು 5.57 ಕೋಟಿ ಮತದಾರರ ವಿವರಗಳ ಮರುಪರಿಶೀಲನೆ ಈ ಅಭಿಯಾನದ ಮೂಲಕ ನಡೆಯಲಿದೆ. ಏನಿದು ‘ಸರ್’ (SIR)? ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ತತ್ವವನ್ನು ಬಲಪಡಿಸಲು ಭಾರತೀಯ ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪಡೆಯಲಿದ್ದಾರೆ. ಮೃತಪಟ್ಟವರು, ಬೇರೆಡೆಗೆ ಸ್ಥಳಾಂತರಗೊಂಡವರು ಮತ್ತು ಅನರ್ಹರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. 18 ವರ್ಷ ಪೂರೈಸಿದ ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲು ಇಲ್ಲಿ ಅವಕಾಶವಿದೆ. ಪರಿಷ್ಕರಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಮನೆ-ಮನೆಗೆ ಭೇಟಿ: ಬಿ.ಎಲ್.ಒ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಫಾರ್ಮ್ ನೀಡುತ್ತಾರೆ. ಹೆಸರು, ವಿಳಾಸ, ವಯಸ್ಸು, ಆಧಾರ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಕರಡು ಪಟ್ಟಿ ಪ್ರಕಟಣೆ: ಮಾಹಿತಿ ಸಂಗ್ರಹದ ನಂತರ ಕರಡು…
ಬೆಂಗಳೂರು: ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಎಂದೇ ಬಿಂಬಿತವಾಗಿರುವ ‘ಭೂ ಗ್ಯಾರಂಟಿ’ ಯೋಜನೆಯಡಿ, ಬೆಂಗಳೂರಿನ ನಾಗರಿಕರ ಆಸ್ತಿ ದಾಖಲೆಗಳ ಗೊಂದಲ ನಿವಾರಿಸಲು ಬಿಬಿಎಂಪಿ ಇಂದಿನಿಂದ (ಶನಿವಾರ) ‘ನನ್ನ ಇ-ಖಾತಾ, ನನ್ನ ಹಕ್ಕು’ ಎಂಬ ವಿಶೇಷ ಅಭಿಯಾನವನ್ನು ಕೈಗೊಂಡಿದೆ. ಮುಂದಿನ 3 ತಿಂಗಳುಗಳ ಕಾಲ ಪ್ರತಿ ಶನಿವಾರ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಇ-ಖಾತಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಸಮಯ ಮತ್ತು ಸ್ಥಳ: ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಿಬಿಎಂಪಿಯ 52 ಸಹಾಯಕ ಕಂದಾಯ ಅಧಿಕಾರಿಗಳ (ARO) ಕಚೇರಿಗಳಲ್ಲಿ ಈ ಶಿಬಿರಗಳು ನಡೆಯಲಿವೆ. ಶುಲ್ಕದಲ್ಲಿ ಭಾರಿ ಕಡಿತ: ಈ ಹಿಂದೆ ಬಿ-ಖಾತಾದಿಂದ ಎ-ಖಾತಾಕ್ಕೆ ಪರಿವರ್ತಿಸಲು ನಿಗದಿಪಡಿಸಲಾಗಿದ್ದ ಶುಲ್ಕವನ್ನು ಶೇ.5 ರಿಂದ ಕೇವಲ ಶೇ.2 ಕ್ಕೆ ಇಳಿಸಲಾಗಿದೆ. ಇದು ನಾಗರಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಉಳಿತಾಯ ತರಲಿದೆ. ಯಾರು ಭಾಗವಹಿಸಬಹುದು?: ಖಾತಾ ವರ್ಗಾವಣೆ, ಹೊಸ ಇ-ಖಾತಾ ಪಡೆಯುವವರು, ಬಾಕಿ ಇರುವ…
ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗಳ ಭರ್ತಿಗೆ ಅಧಿಸೂಚನೆ (CEN 01/2026) ಹೊರಡಿಸಿದೆ. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ: 15 ಮೇ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2026 (ರಾತ್ರಿ 23:59 ರವರೆಗೆ) ಹುದ್ದೆಯ ವಿವರಗಳು: ಹುದ್ದೆಯ ಹೆಸರು: ಸಹಾಯಕ ಲೋಕೋ ಪೈಲಟ್ (ALP) ಒಟ್ಟು ಹುದ್ದೆಗಳು: 11,127 ವೇತನ ಶ್ರೇಣಿ: ಆರಂಭಿಕ ವೇತನ ₹19,900/- (7ನೇ ವೇತನ ಆಯೋಗದ ಮಟ್ಟ-2ರ ಅನ್ವಯ) ವಯೋಮಿತಿ: 01.01.2026 ಕ್ಕೆ ಅನ್ವಯವಾಗುವಂತೆ 18 ರಿಂದ 30 ವರ್ಷಗಳು. ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು: ಆಧಾರ್ ಕಾರ್ಡ್ ಕಡ್ಡಾಯ: ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಆಧಾರ್ ಆಧಾರಿತ ಪರಿಶೀಲನೆಯನ್ನು ನಡೆಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಆಧಾರ್ ವಿವರಗಳನ್ನು…
ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಅಮೆರಿಕದ ಆರ್ಥಿಕ ಪರಿಸ್ಥಿತಿಯ ಪರಿಣಾಮವಾಗಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಮೇ 15ರ ಶುಕ್ರವಾರದಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 3,000 ರೂಪಾಯಿಗಿಂತಲೂ ಹೆಚ್ಚು ಕುಸಿದಿದ್ದರೆ, ಬೆಳ್ಳಿಯ ದರ ಕೆಜಿಗೆ ಬರೊಬ್ಬರಿ 19,000 ರೂಪಾಯಿಗಳಷ್ಟು ಇಳಿಕೆಯಾಗಿದೆ. ಬೆಲೆ ಇಳಿಕೆಗೆ ಕಾರಣವೇನು? ಅಮೆರಿಕದಲ್ಲಿ ಹೆಚ್ಚುತ್ತಿರುವ ತೈಲ ಬೆಲೆಗಳು ಹಣದುಬ್ಬರದ ಭೀತಿಯನ್ನು ಹೆಚ್ಚಿಸಿವೆ. ಇದು ಅಮೆರಿಕದ ಟ್ರೆಜರಿ ಇಳುವರಿಯನ್ನು ಹೆಚ್ಚಿಸಿದ್ದು, ಹೂಡಿಕೆದಾರರು ಚಿನ್ನದ ಮೇಲಿನ ಆಸಕ್ತಿ ಕಡಿಮೆ ಮಾಡಲು ಕಾರಣವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಈ ವಾರ ಸುಮಾರು 3% ರಷ್ಟು ಕುಸಿದಿದೆ. ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಮೇ 15) ಇಂದಿನ ಮಾರುಕಟ್ಟೆ ದರದಂತೆ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ 10 ಗ್ರಾಂಗೆ) ಈ ಕೆಳಗಿನಂತಿದೆ: ನಗರ 22K ಚಿನ್ನ (10…














