Author: kannadanewsnow57

ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಗಳ ಜನತೆಗೆ ಗುಡ್ ನ್ಯೂಸ್ ನೀಡಿದ್ದು, ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳು 2025-26ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇರಸಾಲ ಯೋಜನೆ ಸಣ್ಣ ಆದಾಯಗಳಿಸುವ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಟ ರೂ.1.00 ಲಕ್ಷ ಇದರಲ್ಲಿ ಶೇ.50 ಸಾಲ, ಮತ್ತು ಶೇ.50 ಸಹಾಯಧನವಾಗಿರುತ್ತದೆ. ಕುರಿ ಸಾಕಾಣಿಕೆ ಯೋಜನೆ: ಕುರಿ ಸಾಕಾಣಿಕೆ ಉದ್ದೇಶಕ್ಕೆ ಘಟಕ ವೆಚ್ಚ ಗರಿಷ್ಟ ರೂ.1.00 ಲಕ್ಷ ಇದರಲ್ಲಿ ಶೇ.50 ಸಾಲ, ಮತ್ತು ಶೇ.50 ಸಹಾಯಧನವಾಗಿರುತ್ತದೆ. https://twitter.com/KarnatakaVarthe/status/1957681769760846327 ಉದ್ಯಮ ಶೀಲತಾ ಯೋಜನೆ ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಾವಲಂಭಿ ಸಾರಥಿ ಯೋಜನೆ ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚ ಶೇ.75ರಷ್ಟು ಅಥವಾ ಗರಿಷ್ಟ 4.00 ಲಕ್ಷಗಳ ಸಹಾಯಧನ. ಫಾಸ್ಟ್ ಪುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್:- ಫುಡ್ ಕಾರ್ಟ್ ವಾಹನಗಳ ಉದ್ದೇಶದಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ 4.00 ಲಕ್ಷಗಳ ಸಹಾಯಧನ.…

Read More

ನವದೆಹಲಿ. ಖ್ಯಾತ ಹಾಸ್ಯನಟ ಮತ್ತು ಪಂಜಾಬಿ ಚಿತ್ರರಂಗದ ಹಿರಿಯ ನಟ ಜಸ್ವಿಂದರ್ ಭಲ್ಲಾ ಇಂದು ಬೆಳಿಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು 65 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಜಸ್ವಿಂದರ್ ಭಲ್ಲಾ ತಮ್ಮ ವಿಶಿಷ್ಟ ಹಾಸ್ಯ ಶೈಲಿ ಮತ್ತು ಸ್ಮರಣೀಯ ಪಾತ್ರಗಳಿಂದ ಪಂಜಾಬಿ ಮನರಂಜನಾ ಜಗತ್ತಿನಲ್ಲಿ ಅಳಿಸಲಾಗದ ಛಾಪನ್ನು ಬಿಟ್ಟರು. ಅವರ ಸಾವಿನ ಸುದ್ದಿ ಪಂಜಾಬಿ ಚಲನಚಿತ್ರೋದ್ಯಮ ಮತ್ತು ಅವರ ಅಭಿಮಾನಿಗಳಲ್ಲಿ ಶೋಕದ ಅಲೆಯನ್ನು ಮೂಡಿಸಿದೆ.

Read More

ದಕ್ಷಿಣ ಅಮೆರಿಕ : ದಕ್ಷಿಣ ಅಮೆರಿಕಾದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 8.0 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ಶುಕ್ರವಾರ ಬೆಳಿಗ್ಗೆ ದಕ್ಷಿಣ ಅಮೆರಿಕಾದಲ್ಲಿ 8.0 ತೀವ್ರತೆಯ ಭೂಕಂಪ ಸಂಭವಿಸಿದೆ. ದೃಢೀಕರಿಸಿದ ವರದಿಗಳ ಪ್ರಕಾರ, ದಕ್ಷಿಣ ಅಮೆರಿಕಾದ ದಕ್ಷಿಣ ತುದಿ ಮತ್ತು ಅಂಟಾರ್ಕ್ಟಿಕಾದ ನಡುವೆ ಇರುವ ಡ್ರೇಕ್ ಪ್ಯಾಸೇಜ್ನಲ್ಲಿ ಭೂಕಂಪನ ಸಂಭವಿಸಿದೆ. 8.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಬಹು ವರದಿಗಳು ಸೂಚಿಸಿವೆ. ಆದಾಗ್ಯೂ, ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಚಿತ್ರದುರ್ಗ : ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ನಿವಾಸದ ಮೇಲೆ ಇಂದು ಬೆಳ್ಳಂಬೆಳಗ್ಗೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ಕೆಸಿ ವೀರೇಂದ್ರ, ಕೆಸಿ ನಾಗರಾಜು, ಕೆಸಿ ತಿಪ್ಪೇಸ್ವಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ 4 ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಸಿ ವೀರೇಂದ್ರ, ಕೆಸಿ ನಾಗರಾಜ, ಕೆಸಿ ತಿಪ್ಪೇಸ್ವಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಖಾಸಗಿ ಕಾರಿನಲ್ಲಿ ಬಂದ ಇಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಚಿತ್ರದುರ್ಗ : ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ನಿವಾಸದ ಮೇಲೆ ಇಂದು ಬೆಳ್ಳಂಬೆಳಗ್ಗೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ಕೆಸಿ ವೀರೇಂದ್ರ, ಕೆಸಿ ನಾಗರಾಜು, ಕೆಸಿ ತಿಪ್ಪೇಸ್ವಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 4 ಕಾರಿನಲ್ಲಿ ಬಂದ ಇಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಚಿಕ್ಕಮಗಳೂರು : ಧರ್ಮಸ್ಛಳ ಪೊಲೀಸ್ ಠಾಣೆಯಲ್ಲಿ ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಆರೋಪದಡಿ ಸುಮೋಟೋ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದು, ಈ ನಡುವೆ ಸಮೀರ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಹೌದು, ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಎಂಬುವವರು ಚಿಕ್ಕಮಗಳೂರಿನ ಕಡೂರು ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ದಾ ಕೇಂದ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವು ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್.19ರಂದು ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು…

Read More

ನವದೆಹಲಿ : ಕರ್ನಾಟಕ ಸೇರಿದಂತೆ ದೇಶದ 26 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ದೆಹಲಿ NCR, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾನ್ಸೂನ್ ಮಳೆಯಿಂದ ಪ್ರಭಾವಿತವಾಗುವ ಸಾಧ್ಯತೆಯಿದೆ. ದೇಶದ ಪಶ್ಚಿಮ ಭಾಗಗಳಲ್ಲಿ, ಮುಂದಿನ 24 ಗಂಟೆಗಳಲ್ಲಿ ಕೊಂಕಣ, ಗೋವಾ, ಕರ್ನಾಟಕ, ಮಧ್ಯ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿಯೂ ಸಹ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಆಗಸ್ಟ್ 22 ರಿಂದ 24 ರವರೆಗೆ ಮಧ್ಯಪ್ರದೇಶ, ಛತ್ತೀಸ್ಗಢ, ಒಡಿಶಾ, ಬಿಹಾರ, ಜಾರ್ಖಂಡ್, ವಿದರ್ಭ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ…

Read More

ನವದೆಹಲಿ : ದೇಶದ ರೈತರು, ಜನಸಾಮಾನ್ಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಜಿಎಸ್ಟಿ ದರಗಳನ್ನ ಸರಳೀಕರಿಸಲು ಪ್ರಮುಖ ಬದಲಾವಣೆ ಮಾಡಲಾಗಿದೆ. ಮೊಬೈಲ್, ತುಪ್ಪ, ಕಾರು, ವಾಷಿಂಗ್ ಮೆಷಿನ್ ಸೇರಿ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಜಿಎಸ್ಟಿ ದರಗಳ ಕುರಿತ ಸಚಿವರ ಗುಂಪು (GoM) ಕೇಂದ್ರದ ಪ್ರಸ್ತಾವನೆಯನ್ನ ಅನುಮೋದಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ, ಅಸ್ತಿತ್ವದಲ್ಲಿರುವ ನಾಲ್ಕು ಸ್ಲ್ಯಾಬ್’ಗಳನ್ನು (5%, 12%, 18% ಮತ್ತು 28%) ರದ್ದುಗೊಳಿಸಲಾಗಿದೆ ಮತ್ತು ಅದನ್ನು ಕೇವಲ ಎರಡು ಸ್ಲ್ಯಾಬ್’ಗಳು 5% ಮತ್ತು 18%ಗೆ ಬದಲಾಯಿಸಲು ಅನುಮೋದಿಸಲಾಗಿದೆ. ಶೇಕಡ 28ರ ಸ್ಲ್ಯಾಬ್ ನ ಉತ್ಪನ್ನಗಳಿಗೆ ಶೇಕಡ 18ರಷ್ಟು ಜಿಎಸ್ಟಿ ವಿಧಿಸುವುದರಿಂದ ಬೈಕ್, ವಾಷಿಂಗ್ ಮೆಷಿನ್, ಕಾರು, ಮೊಬೈಲ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಶೇಕಡ 12ರ ಸ್ಲ್ಯಾಬ್ ಉತ್ಪನ್ನಗಳು ಶೇಕಡ 5ರ ಸ್ಲ್ಯಾಬ್ ವ್ಯವಸ್ಥೆಗೆ ಬರುವುದರಿಂದ ಬೆಣ್ಣೆ, ತುಪ್ಪ, ಕಂಪ್ಯೂಟರ್, ಹಣ್ಣಿನ ಜ್ಯೂಸ್ ಸೇರಿ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಈಗ 4ರ ಬದಲಿಗೆ ಕೇವಲ…

Read More

ಬೆಂಗಳೂರು: ಅನನ್ಯ ಭಟ್ ನಾಪತ್ತೆಯಾಗಿದ್ದರ ಬಗ್ಗೆ ಅವರ ತಾಯಿ ಸುಜಾತಾ ಭಟ್ ಆರೋಪಿಸಿದ್ದರು. ತಮ್ಮ ಮಗಳ ಅಸ್ಥಿ ಪಂಜರ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಿದ್ದು, ಇದೀಗ ಸುಜಾತಾ ಭಟ್ ಗೆ ಎಸ್ ಐಟಿ ನೋಡಿಸ್ ನೀಡಿದೆ. ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿಯಿಂದ ಸುಜಾತ್ ಭಟ್ ಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದ ವಿವರ ನೀಡುವಂತೆ ಸುಜಾತ್ ಭಟ್ ಗೆ ಎಸ್ ಐಟಿ ನೋಟಿಸ್ ನೀಡಿದೆ. 2003ರಲ್ಲಿ ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು. ಅನನ್ಯ ಭಟ್ ಕಾಣೆಯಾಗಿದ್ದ ಬಗ್ಗೆ ದೂರು ಸಲ್ಲಿಕೆಯಾಗಿತ್ತು. ಇದೀಗ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಂತ ಅನನ್ಯ ಭಟ್ ನಾಪತ್ತೆಯಾಗಿದ್ದರು. ಈ ಪ್ರಕರಣವನ್ನು ಎಸ್ಐಟಿಗೆ ರಾಜ್ಯ ಸರ್ಕಾರ ಹಸ್ತಾಂತರಿ ಅಧಿಕೃತ ಆದೇಶ ಮಾಡಿದೆ.

Read More

ಬಿಲಾಸ್ಪುರ : ಛತ್ತೀಸ್ಗಢ ಹೈಕೋರ್ಟ್ ಪ್ರಕರಣವೊಂದರಲ್ಲಿ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ರ ಸೆಕ್ಷನ್ 19 ರ ಅಡಿಯಲ್ಲಿ, ವಿಧವೆಯಾದ ಸೊಸೆಯು ಮರುಮದುವೆಯಾಗುವವರೆಗೆ ತನ್ನ ಮಾವನಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿದ್ದಾಳೆ ಎಂದು ಸ್ಪಷ್ಟಪಡಿಸಿದೆ. ಕೊರ್ಬಾ ಕುಟುಂಬ ನ್ಯಾಯಾಲಯದ ತೀರ್ಪಿನ ವಿರುದ್ಧದ ಮೇಲ್ಮನವಿಯ ಮೇರೆಗೆ ನ್ಯಾಯಮೂರ್ತಿ ರಜನಿ ದುಬೆ ಮತ್ತು ನ್ಯಾಯಮೂರ್ತಿ ಅಮಿತೇಂದ್ರ ಕಿಶೋರ್ ಪ್ರಸಾದ್ ಅವರ ವಿಭಾಗೀಯ ಪೀಠವು ಈ ಆದೇಶವನ್ನು ಪ್ರಕಟಿಸಿದೆ. ಮಾವನ ಮೇಲ್ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು ಮತ್ತು ಕುಟುಂಬ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಈ ಪ್ರಕರಣ ಕೊರ್ಬಾದಿಂದ ಬಂದಿದೆ. ಚಂದಾ ಯಾದವ್ 2006 ರಲ್ಲಿ ಗೋವಿಂದ ಪ್ರಸಾದ್ ಯಾದವ್ ಅವರನ್ನು ವಿವಾಹವಾದರು, ಆದರೆ ಗೋವಿಂದ್ 2014 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಇದರ ನಂತರ, ವಿವಾದದಿಂದಾಗಿ, ಚಂದಾ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ತನ್ನ ಮಾವ ತುಲಾರಾಮ್ ಯಾದವ್ ಅವರಿಂದ ಪ್ರತಿ ತಿಂಗಳು 20,000 ರೂ. ಜೀವನಾಂಶವನ್ನು ನೀಡುವಂತೆ ಒತ್ತಾಯಿಸಿ ಅವರು ಕುಟುಂಬ…

Read More