Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಕೊಟ್ಟ ಕ್ಲೀನ್ ಚಿಟ್ ಗೆ ನ್ಯಾಯಾಲಯ ಇಂದು ತೀರ್ಪು ನೀಡಲಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಕೊಟ್ಟ ಕ್ಲೀನ್ ಚಿಟ್ ಗೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು.ವಾದ ಆಲಿಸಿದ್ದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ನ್ಯಾಯಾಲಯ ಬಿ ರಿಪೋರ್ಟ್ ಒಪ್ಪಿದ್ರೆ ಸಿಎಂ ಕುಟುಂಬಕ್ಕೆ ಬಿಗ್ ರಿಲೀಫ್ ಸಿಗಲಿದೆ. ಲೋಕಾಯುಕ್ತದಿಂದ ಇಂದು ಪ್ರಕರಣದ ಅಂತಿಮ ವರದಿ ಸಲ್ಲಿಕೆಯಾಗಲಿದೆ. ಅಂತಿಮ ವರದಿ ಸಲ್ಲಿಕೆ ಬಳಿಕ ಬಿ ರಿಪೋರ್ಟ್ ಆದೇಶ ಹೊರಬೀಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಯವರು ಮೂಡಾದಿಂದ ಪಡೆದಿದ್ದ 14 ಸೈಟ್ಗಳ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿತ್ತು.
ಬೆಂಗಳೂರು : ರೇಷನ್ ಕಾರ್ಡ್ಗೆ ಅರ್ಜಿ ಹಾಕಿ ಕಾಯುತ್ತಿದ್ದವರಿಗೆ ಗುಡ್ನ್ಯೂಸ್ ಅನ್ನು ಆಹಾರ ಸಚಿವ ಕೆಎಚ್ ಮುನಿಯಪ್ಪ ನೀಡಿದ್ದಾರೆ. ಹೌದು, ಅವರು ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವ ಸಲುವಾಗಿ ಒಟ್ಟು 3.96 ಲಕ್ಷ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಈಗಾಗಲೇ ಅರ್ಜಿಗಳನ್ನು ವಿಲೇವಾರಿ ಮಾಡಿದ್ದು ಮುಂದಿನ ಒಂದುವರೆ ತಿಂಗಳಲ್ಲಿ ಅರ್ಹರಿಗೆ ಹೊಸ ರೇಷನ್ ಕಾರ್ಡ್ಗಳನ್ನು ನೀಡಲಾಗುತ್ತೆ ಎಂದರು. ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವ ಸಲುವಾಗಿ ಒಟ್ಟು 3.96 ಲಕ್ಷ ಅರ್ಜಿಗಳು ಬಂದಿದ್ದವು, ಈ ಪೈಕಿ ಮಾನದಂಡವನ್ನು ಪೂರೈಸಿರುವ ಪೈಕಿ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಲಾಗಿದ್ದು, ಬಾಕಿ ಉಳಿದ ಮಂದಿಗೆ ಶೀಘ್ರದಲ್ಲಿ ಅಂದರೆ ಒಂದು ತಿಂಗಳೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂತ ಅವರು ಹೇಳಿದರು. ಇನ್ನೂ ಇದೇ ವೇಳೆ ಅವರು ಮಾತನಾಡುತ್ತ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳನ್ನು ಹತ್ತಿಕ್ಕಿವ ನಿಟ್ಟಿನಲ್ಲಿ ಎಪಿಎಲ್ಗೆ ಬದಲಾವಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಕಾರ್ಡ್ಗಳನ್ನು ನೀಡಲಾಗುತ್ತಿದೆ…
ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ. ಬಾರವ್ವ ಕೋಬಡಿ (60) ಹಾಗೂ ಲಕ್ಷ್ಮೀಬಾಯಿ ರುದ್ರಗೌಡರ (65) ಎಂದು ತಿಳಿದುಬಂದಿದೆ. ಕಟಾವು ವೇಳೆ ಮುಂದೆ ನೋಡದೆ ಡ್ರೈವರ್ ವಾಹನ ಚಲಾಯಿಸಿದ್ದಾನೆ ಇಬ್ಬರೂ ಮಹಿಳೆಯರ ತಲೆ ಯಂತ್ರದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಕಬ್ಬಿಣ ಗದ್ದೆಗೆ ಕೂಲಿ ಕೆಲಸಕ್ಕೆ ಎಂದು ಇಬ್ಬರು ಮಹಿಳೆಯರು ಬಂದಿದ್ದರು. ಚಾಲಕನ ನಿರ್ಲಕ್ಷದಿಂದ ಕೂಲಿಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ತಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.
ಭಾರತೀಯ ರೈಲ್ವೆ ತನ್ನ ಮೀಸಲಾತಿ ವ್ಯವಸ್ಥೆಯಲ್ಲಿ ಪ್ರಯಾಣಿಕ ಸ್ನೇಹಿ ಬದಲಾವಣೆಯನ್ನು ಘೋಷಿಸಿದೆ, ಪ್ರಯಾಣಿಕರಿಗೆ ಅವರ ಟಿಕೆಟ್ ಸ್ಥಿತಿಯ ಬಗ್ಗೆ ಮುಂಚಿತವಾಗಿ ಸ್ಪಷ್ಟತೆಯನ್ನು ನೀಡಲು ಮೊದಲ ಕಾಯ್ದಿರಿಸುವಿಕೆ ಚಾರ್ಟ್ನ ಸಮಯವನ್ನು ಪರಿಷ್ಕರಿಸಿದೆ. ಹೊಸ ನಿಯಮದ ಅಡಿಯಲ್ಲಿ, ಪ್ರಯಾಣಿಕರು ಈಗ ರೈಲು ಹೊರಡುವ 10 ಗಂಟೆಗಳ ಮೊದಲು ದೃಢೀಕರಣ ಮತ್ತು ಕಾಯುವಿಕೆ ಪಟ್ಟಿಯ ಸ್ಥಾನಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ, ಇದು ಕೊನೆಯ ನಿಮಿಷದ ಆತಂಕವನ್ನು ಕಡಿಮೆ ಮಾಡುವ ಮತ್ತು ಪ್ರಯಾಣದ ಯೋಜನೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಮೊದಲು, ಮೊದಲ ಕಾಯ್ದಿರಿಸುವಿಕೆ ಚಾರ್ಟ್ ಅನ್ನು ನಿರ್ಗಮನಕ್ಕೆ ಕೇವಲ ನಾಲ್ಕು ಗಂಟೆಗಳ ಮೊದಲು ಸಿದ್ಧಪಡಿಸಲಾಗುತ್ತಿತ್ತು, ಇದು ಪ್ರಯಾಣಿಕರನ್ನು ಅಂತಿಮ ಕ್ಷಣಗಳವರೆಗೆ ಅನಿಶ್ಚಿತಗೊಳಿಸುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯು ಹೆಚ್ಚು ಅಗತ್ಯವಾದ ಪರಿಹಾರವನ್ನು ತರುವ ನಿರೀಕ್ಷೆಯಿದೆ, ವಿಶೇಷವಾಗಿ ದೂರದ ಪ್ರಯಾಣ ಮಾಡುವವರಿಗೆ ಅಥವಾ ಸಂಪರ್ಕ ವ್ಯವಸ್ಥೆಗಳನ್ನು ಮಾಡುವವರಿಗೆ. ಪರಿಷ್ಕೃತ ಮೀಸಲಾತಿ ಚಾರ್ಟ್ ಸಮಯವನ್ನು ವಿವರಿಸಲಾಗಿದೆ ನವೀಕರಿಸಿದ ಮಾರ್ಗಸೂಚಿಗಳ ಪ್ರಕಾರ, ಚಾರ್ಟ್ ತಯಾರಿ ಸಮಯವು ಈಗ ರೈಲಿನ ನಿರ್ಗಮನದ ವೇಳಾಪಟ್ಟಿಯನ್ನು ಆಧರಿಸಿ ಬದಲಾಗುತ್ತದೆ. ಬೆಳಿಗ್ಗೆ…
ಆನ್ ಲೈನ್ ಗೌಪ್ಯತೆಗೆ ಸಂಬಂಧಿಸಿದಂತೆ ಪ್ರಮುಖ ಸೈಬರ್ ದಾಳಿ ನಡೆದಿದೆ. ವಯಸ್ಕರ ವೆಬ್ಸೈಟ್ ಪೋರ್ನ್ಹಬ್ ತನ್ನ ಲಕ್ಷಾಂತರ ಪ್ರೀಮಿಯಂ ಬಳಕೆದಾರರ ಡೇಟಾ ಅಪಾಯದಲ್ಲಿದೆ ಎಂದು ಒಪ್ಪಿಕೊಂಡಿದೆ. ಈ ಘಟನೆಯು ಮೂರನೇ ವ್ಯಕ್ತಿಯ ವಿಶ್ಲೇಷಣಾ ಕಂಪನಿಯನ್ನು ಒಳಗೊಂಡ ಅನಧಿಕೃತ ಪ್ರವೇಶದಿಂದ ಹುಟ್ಟಿಕೊಂಡಿದೆ. ಪಾವತಿಗಳು ಮತ್ತು ಪಾಸ್ವರ್ಡ್ಗಳು ಸುರಕ್ಷಿತವೆಂದು ಕಂಪನಿ ಹೇಳಿದ್ದರೂ, ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವನ್ನು ಕದಿಯುವ ಸಾಧ್ಯತೆಯು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಡೇಟಾ ಉಲ್ಲಂಘನೆ ಪ್ರಕರಣ ಹೇಗೆ ಬೆಳಕಿಗೆ ಬಂದಿದೆ ಪೋರ್ನ್ಹಬ್ 200 ಮಿಲಿಯನ್ಗಿಂತಲೂ ಹೆಚ್ಚು ಪ್ರೀಮಿಯಂ ಬಳಕೆದಾರರನ್ನು ಸಂಪರ್ಕಿಸಿ ಅವರ ಕೆಲವು ಡೇಟಾ ದಾಖಲೆಗಳನ್ನು ಕದ್ದಿರಬಹುದು ಎಂದು ತಿಳಿಸಿತು. ಮೇಲ್ಆನ್ಲೈನ್ ವರದಿಯ ಪ್ರಕಾರ, ಹ್ಯಾಕರ್ಗಳು ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವನ್ನು ಪ್ರವೇಶಿಸಿದ್ದಾರೆ ಮತ್ತು ಪ್ಲಾಟ್ಫಾರ್ಮ್ನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಂಪನಿಯು “ಅನಧಿಕೃತ ಪ್ರವೇಶ”ವನ್ನು ದೃಢಪಡಿಸಿದೆ. ಮೂರನೇ ವ್ಯಕ್ತಿಯ ಮಿಕ್ಸ್ಪ್ಯಾನೆಲ್ ಬಗ್ಗೆ ಪ್ರಶ್ನೆಗಳು ಪೋರ್ನ್ಹಬ್ ಪ್ರಕಾರ, ಈ ಘಟನೆಯು ಅದರ ಆಂತರಿಕ ವ್ಯವಸ್ಥೆಗಳಿಗೆ ಸಂಬಂಧಿಸಿಲ್ಲ, ಆದರೆ ಮಿಕ್ಸ್ಪ್ಯಾನೆಲ್ ಎಂಬ ಮೂರನೇ…
ಬೆಳಗಾವಿ : ರಾಜ್ಯದಲ್ಲಿ ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರ ಉತ್ತರ. ರಾಜ್ಯದಲ್ಲಿ ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆಯ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಜಾಗೃತದಳ (ವಿಜಿಲೆನ್ಸ್) ಘಟಕವನ್ನು ಪೊಲೀಸ್ ಅಧೀಕ್ಷಕರು / ಪೊಲೀಸ್ ಉಪ ಅಧೀಕ್ಷಕರು ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರ ನೇತೃತ್ವದಲ್ಲಿ ರಚಿಸಲಾಗಿದೆ ಹಾಗೂ ಪ್ರತಿ ಜಿಲ್ಲಾಮಟ್ಟದಲ್ಲಿ ಜಾಗೃತದಳ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ / ಸಬ್ ಇನ್ಸ್ಪೆಕ್ಟರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಾಗೃತದಳವು ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಜಾಗೃತದಳವು ನಿಯಮಿತವಾಗಿ…
ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಮಾಸಾಶನ ನೀಡುವ “ಮನಸ್ವಿನಿ” ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನೊದಗಿಸಿ, ಸಹಾಯ ನೀಡುವ ಉದ್ದೇಶದಿಂದ, ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ‘ಮಹಿಳೆಯರಿಗೆ ರೂ.500ಗಳ ಮಾಸಾಶನ… ನೀಡಲು “ಮನಸ್ವಿನಿ” ಯೋಜನೆಯನ್ನು ಸರ್ಕಾರ 2013-14 ನೇ ಸಾಲಿನ ಅಯವ್ಯಯದಲ್ಲಿ ಘೋಷಿಸಿದೆ. 65ಕ್ಕಿಂತ ಹೆಚ್ಚು ವಯಸ್ಸಾದ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿರುತ್ತದೆ. ಈ ಹಿನ್ನಲೆಯಲ್ಲಿ ಕೆಳಕಂಡ ಆದೇಶ. ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 94 ಡಿಎಸ್ಪಿ 2013, ಬೆಂಗಳೂರು. 2:01/08/2013. ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64. ವರ್ಷದೊಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಜೂಪಿಟರ್ ಟೆಕ್ನಾಲಜಿಸ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೆಂಗಳೂರಿನ ಆನೇಕಲ್ ನ ಜಿಗಣಿ ಕೈಗಾರಿಕಾ ಪ್ರದೇಶದ ಜೂಪಿಟರ್ ಟೆಕ್ನಾಲಜಿಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮುಂಜಾನೆ 4 ಗಂಟೆಗೆ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕೆಲವೊಮ್ಮೆ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡಕ್ಕೋ, ಇಲ್ಲವೇ ಮೇಲಾಧಿಕಾರಿಗಳ ಮೌಖಿಕ ಸೂಚನೆಗೋ ಮಣಿದು ಅಮಾಯಕರ ಮೇಲೆ ಎಫ್ಐಆರ್ ದಾಖಲಿಸುವ ಘಟನೆಗಳು ನಡೆಯುತ್ತವೆ. ಠಾಣಾಧಿಕಾರಿಗಳು (SHO) ತಮ್ಮ ಮನಸ್ಸಾಕ್ಷಿ ಮತ್ತು ಕಾನೂನು ಬದಿಗಿಟ್ಟು, ಕೇವಲ “ಹೇಳಿದ ಕೆಲಸ” ಮಾಡಲು ಹೋದಾಗ ಇಂತಹ ತಪ್ಪುಗಳಾಗುತ್ತವೆ. ನಿಮ್ಮ ಮೇಲೂ ಇಂತಹದೇ “ಸುಳ್ಳು ಕೇಸ್” ದಾಖಲಾಗಿದ್ದರೆ ಹೆದರಬೇಡಿ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಈ ಕೆಳಗಿನ ಕೇಳ್ವಿಗಳನ್ನು ಕೇಳಿ, ಪೊಲೀಸರ ನಿದ್ದೆ ಗೆಡಿಸಿ! ಕೇಳಬೇಕಾದ ಮಾಹಿತಿಗಳು ಇಲ್ಲಿವೆ: ೧. ನನ್ನ ಮೇಲೆ ಎಫ್ಐಆರ್ ದಾಖಲಿಸಲು ಮೇಲಾಧಿಕಾರಿಗಳು ಲಿಖಿತ ಇಲ್ಲವೇ ಬಾಯಿ ಮಾತಿನ (ಮೌಖಿಕ) ಮೂಲಕ ನಿರ್ದೇಶನ ನೀಡಿದ್ದರೆ, ಅದರ ವಿವರ ಮತ್ತು ದಾಖಲೆಗಳನ್ನು ಕೊಡಿ. ೨. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಪ್ರಕರಣಗಳಲ್ಲಿ ಎಫ್ಐಆರ್‌ಗೂ ಮುನ್ನ “ಪ್ರಾಥಮಿಕ ಪರಿಶೀಲನೆ” (Preliminary Enquiry) ನಡೆಸಬೇಕು. ನನ್ನ ಪ್ರಕರಣದಲ್ಲಿ ಇದು ನಡೆದಿದ್ದರೆ ಅದರ ವರದಿ ಮತ್ತು ಟಿಪ್ಪಣಿ (Noting) ಕೊಡಿ. ೩. ಸದರಿ ಎಫ್ಐಆರ್ ದಾಖಲಾದ ದಿನಾಂಕ ಮತ್ತು…
ಬೆಳಗಾವಿ : ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡಬೇಕೆಂಬ ಪ್ರಸ್ತಾಪ ವಿಧಾನಪರಿಷತ್ ನಲ್ಲಿ ಕೇಳಿಬಂದಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇಂತಹ ಯುವಕರನ್ನು ಮದುವೆಯಾಗುವ ಹೆಣ್ಣುಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡಬೇಕೆಂಬ ಪ್ರಸ್ತಾಪ ವಿಧಾನ ಪರಿಷತ್ನಲ್ಲಿ ಕೇಳಿಬಂದಿದ್ದು, ಇದಕ್ಕೆ ಪಕ್ಷಾತೀತವಾಗಿ ಸದಸ್ಯರು ಟೇಬಲ್ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಪುಟ್ಟಣ್ಣ, ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ರೈತರ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ. ವ್ಯವಸಾಯ ಮಾಡುವ ಗಂಡುಮಕ್ಕಳು ನಮಗಾಗಿ ಮಠ ಕಟ್ಟಿಕೊಡಿ ಎಂದು ಒತ್ತಾಯಿಸುತ್ತಿರುವುದನ್ನು, ಪವಿತ್ರ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಳ್ಳುತ್ತಿರುವುದನ್ನು ಕೇಳಿದ್ದೇವೆ. ಹಾಗಾಗಿ ಸರ್ಕಾರ ಮದುವೆ ಆಗದ ಕೃಷಿಕ ಯುವಕರಿಗೆ ಯೋಜನೆ ರೂಪಿಸಬೇಕು ಎಂದು ಹೇಳಿದರು. ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಕನಿಷ್ಠ 10 ಲಕ್ಷ ರೂ.ಗಳನ್ನು ಆಕೆ ಹೆಸರಿಗೆ ಬ್ಯಾಂಕ್ ಠೇವಣಿ ಇಟ್ಟು,ಭದ್ರತೆ ಒದಗಿಸಿ ಭರವಸೆ ಮೂಡಿಸಬೇಕೆಂದು…














