Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

04/05/2026 9:54 PM

BREAKING: ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಸೋಲು, ಅಧಿಕಾರದತ್ತ ಬಿಜೆಪಿ!

04/05/2026 9:43 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!
KARNATAKA

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!

By kannadanewsnow5718/12/2025 8:02 AM

​ಕೆಲವೊಮ್ಮೆ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡಕ್ಕೋ, ಇಲ್ಲವೇ ಮೇಲಾಧಿಕಾರಿಗಳ ಮೌಖಿಕ ಸೂಚನೆಗೋ ಮಣಿದು ಅಮಾಯಕರ ಮೇಲೆ ಎಫ್ಐಆರ್ ದಾಖಲಿಸುವ ಘಟನೆಗಳು ನಡೆಯುತ್ತವೆ. ಠಾಣಾಧಿಕಾರಿಗಳು (SHO) ತಮ್ಮ ಮನಸ್ಸಾಕ್ಷಿ ಮತ್ತು ಕಾನೂನು ಬದಿಗಿಟ್ಟು, ಕೇವಲ “ಹೇಳಿದ ಕೆಲಸ” ಮಾಡಲು ಹೋದಾಗ ಇಂತಹ ತಪ್ಪುಗಳಾಗುತ್ತವೆ.

​ನಿಮ್ಮ ಮೇಲೂ ಇಂತಹದೇ “ಸುಳ್ಳು ಕೇಸ್” ದಾಖಲಾಗಿದ್ದರೆ ಹೆದರಬೇಡಿ. ಮಾಹಿತಿ ಹಕ್ಕು ಕಾಯಿದೆ (RTI) ಅಡಿಯಲ್ಲಿ ಈ ಕೆಳಗಿನ ಕೇಳ್ವಿಗಳನ್ನು ಕೇಳಿ, ಪೊಲೀಸರ ನಿದ್ದೆ ಗೆಡಿಸಿ!

​ಕೇಳಬೇಕಾದ ಮಾಹಿತಿಗಳು ಇಲ್ಲಿವೆ:

​೧. ನನ್ನ ಮೇಲೆ ಎಫ್ಐಆರ್ ದಾಖಲಿಸಲು ಮೇಲಾಧಿಕಾರಿಗಳು ಲಿಖಿತ ಇಲ್ಲವೇ ಬಾಯಿ ಮಾತಿನ (ಮೌಖಿಕ) ಮೂಲಕ ನಿರ್ದೇಶನ ನೀಡಿದ್ದರೆ, ಅದರ ವಿವರ ಮತ್ತು ದಾಖಲೆಗಳನ್ನು ಕೊಡಿ.

​೨. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಪ್ರಕರಣಗಳಲ್ಲಿ ಎಫ್ಐಆರ್‌ಗೂ ಮುನ್ನ “ಪ್ರಾಥಮಿಕ ಪರಿಶೀಲನೆ” (Preliminary Enquiry) ನಡೆಸಬೇಕು. ನನ್ನ ಪ್ರಕರಣದಲ್ಲಿ ಇದು ನಡೆದಿದ್ದರೆ ಅದರ ವರದಿ ಮತ್ತು ಟಿಪ್ಪಣಿ (Noting) ಕೊಡಿ.

​೩. ಸದರಿ ಎಫ್ಐಆರ್ ದಾಖಲಾದ ದಿನಾಂಕ ಮತ್ತು ಸಮಯದಂದು ಪೊಲೀಸ್ ಠಾಣೆಯ ‘ದಿನಚರಿ’ಯಲ್ಲಿ (Station Diary / General Diary) ನಮೂದಾಗಿರುವ ಪ್ರಮಾಣಿತ ಪ್ರತಿಯನ್ನು ಕೊಡಿ. (ಇದರಿಂದ ಸಮಯದ ವ್ಯತ್ಯಾಸವಿದ್ದರೆ ಸಿಕ್ಕಿಬೀಳುತ್ತಾರೆ).

​೪. ದೂರು ಬಂದಾಗ ಅದನ್ನು ಪರಿಶೀಲಿಸಿ, ಇದು ಎಫ್ಐಆರ್ ಮಾಡಲು ಯೋಗ್ಯವೇ ಎಂದು ಸ್ವತಂತ್ರವಾಗಿ ತೀರ್‍ಮಾನ ಕೈಗೊಂಡಿರುವ ಠಾಣಾಧಿಕಾರಿ (SHO) ಈ ಬಗ್ಗೆ ಕಡತದಲ್ಲಿ ಬರೆದಿರುವ ಟಿಪ್ಪಣಿ (File Noting), ಆಂತರಿಕ ಸಂವಹನದ ಪ್ರತಿ ಕೊಡಿ.

​೫. ಇಂತಹ ಪ್ರಕರಣದಲ್ಲಿ FIR ದಾಖಲಿಸಲು ಇಲಾಖೆಯ ಆಂತರಿಕ ಸುತ್ತೋಲೆ (Circular) ಅಥವಾ SOP ಏನನ್ನುತ್ತದೆ? ಅದರ ಪ್ರತಿಯನ್ನು ನೀಡಿ.

ಯಾವಾಗ ನೀವು ಈ ಮಾಹಿತಿಗಳನ್ನು ಕೇಳುತ್ತೀರೋ, ಆಗ ತನಿಖಾಧಿಕಾರಿಗೆ “ಇವರು ಕಾನೂನು ಬಲ್ಲವರು, ಸುಮ್ಮನೆ ಹೆದರುವವರಲ್ಲ” ಎಂದು ತಿಳಿಯುತ್ತದೆ. ಒಂದು ವೇಳೆ ದುರುದ್ದೇಶದಿಂದ ಕೇಸ್ ಹಾಕಿದ್ದರೆ, ಈ ಕೇಳ್ವಿಗಳಿಗೆ ಬದಲು ನೀಡಲು ತಡಕಾಡುತ್ತಾರೆ. ಈ ದಾಖಲೆಗಳು ಮುಂದೆ ನ್ಯಾಯಾಲಯದಲ್ಲಿ ನಿಮ್ಮ ನಿರ್ದೋಷತ್ವ ಸಾಬೀತು ಮಾಡಲು ನೆರವಾಗುತ್ತವೆ.

​ಕಾನೂನು ಎಂಬುದು ಬರೀ ಶ್ರೀಮಂತರ ಆಸ್ತಿಯಲ್ಲ, ಅದು ಸಾಮಾನ್ಯರ ರಕ್ಷಾ ಕವಚ ಕೂಡ ಹೌದು.

Has a false FIR been registered against you? Don't be discouraged use the 'Right to Information' weapon!
Share. Facebook Twitter LinkedIn WhatsApp Email

Related Posts

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

04/05/2026 9:54 PM1 Min Read

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM1 Min Read

ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ

04/05/2026 9:24 PM2 Mins Read
Recent News

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

04/05/2026 9:54 PM

BREAKING: ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಸೋಲು, ಅಧಿಕಾರದತ್ತ ಬಿಜೆಪಿ!

04/05/2026 9:43 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM

ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ

04/05/2026 9:24 PM
State News
KARNATAKA

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

By kannadanewsnow0904/05/2026 9:54 PM KARNATAKA 1 Min Read

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಜಯಭೇರಿ ಬಾರಿಸಿದೆ. ಈ ಚುನಾವಣಾ ಯಶಸ್ಸಿನಲ್ಲಿ ಕರ್ನಾಟಕದ ವಸತಿ…

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM

ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ

04/05/2026 9:24 PM

ಸಾಗರದ ಬೇಸೂರು ಅಣು ಸ್ಥಾವರಕ್ಕೆ ವಿರೋಧ: ದಾಖಲೆ ನೀಡದಿದ್ದರೆ ಕಾನೂನುಭಂಗ ಚಳವಳಿ- ತೀ.ನ.ಶ್ರೀನಿವಾಸ್ ಎಚ್ಚರಿಕೆ

04/05/2026 8:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.