Author: kannadanewsnow57

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರು ರಾಜ್ಯದ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು 2025-26ನೇ ಸಾಲಿನ ವರ್ಗಾವಣೆಗೆ ಜೂ.25ರ ಇಂದಿನಿಂದ ಕೌನ್ಸೆಲಿಂಗ್ ಆರಂಭವಾಗಲಿದೆ. ಕಡಿಮೆ ಮಕ್ಕಳ ದಾಖಲಾತಿ ಇರುವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನೂ ವರ್ಗಾವಣೆಗೆ ಲಭ್ಯವಿರುವ ಪಟ್ಟಿಯಲ್ಲಿ ತೋರಿಸದಿದ್ದರೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಾಕಷ್ಟು ಸಮಸ್ಯೆಯಾಗಬಹುದು. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಮತ್ತು ಶೂನ್ಯ ದಾಖಲಾತಿ ಹೊಂದಿರುವ ಕಾಲೇಜಿನ ಉಪನ್ಯಾಸಕರ, ಕೋರಿಕೆ ವರ್ಗಾವಣೆ ಯಲ್ಲಿ 40ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಗ್ರಾಮೀಣ ಪ್ರದೇಶದ ಕಾಲೇಜಿನ ಖಾಲಿ ಹುದ್ದೆ ವರ್ಗಕ್ಕೆ ಆಯ್ಕೆ ಮಾಡಿಕೊಳ್ಳಲು ಅವಕಾಶಕ್ಕಾಗಿ ಸಂಘ ಆಗ್ರಹಿಸಿದೆ. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿಖಾಲಿ ಹುದ್ದೆಗಳನ್ನೂ ವರ್ಗಾವಣೆಗೆ ಪರಿಗಣಿಸುವಂತೆ ರಾಜ್ಯ ಪಿಯು ಉಪನ್ಯಾಸಕರ ಸಂಘ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದೆ.

Read More

ಬೆಂಗಳೂರು: ಆಡುಗೋಡಿ ಮತ್ತು ಆಸ್ಟೀನ್ ಟೌನ್ ಉಪಕೇಂದ್ರ ನಿರ್ವಹಣಾ ಕಾಮಗಾರಿ ನಿಮಿತ್ತ ಜೂನ್ 25 ರ ಬುಧವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಮ್.ಎಪ್, ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಾಣೆ, ಬೆಂಗಳೂರು ಡ್ಯೆರಿ, ಫೋರಾಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾಡ್ðನ್, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಯಾನ್ಸ್ ಅಡ್ಮಿನಿಸ್ರೆಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದವನ ಸ್ಲಮ್, ಲಾಲ್ ಜಿ ನಗರ, ಶಾಮಣ್ಣ ಗಾಡðನ್, ಎನ್ ಡಿ ರ್ ಐ, ಪೋಲಿಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲ ಪ್ರದೇಶಗಳು, ರಿಚ್ ಮಂಡ್ ಟೌನ್, ರಿಚ್ ಮಂಡ್ ಸರ್ಕಲ್ ನಲ್ಲಿ ಕರೆಂಟ್ ಇರೋದಿಲ್ಲ. ಜಾನ್ಸನ್ ಮಾಕೆðಟ್, ನಾರೀಸ್ ರಸ್ತೇ, ಅರಬ್ ಲ್ಯೇನ್, ವೆಲ್ಂಗ್ಟನ್ ಸ್ಡೀಟ್ ಕರ್ಲಿ ಸ್ಡೀಟ್, ಲಿಯೋನಾಡ್ð ಸ್ಡೀಟ್, ರಿನಿಯಸ್ ಸ್ಡೀಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದ ದುರ್ಗಮ ಪ್ರದೇಶ, ಸಂಪರ್ಕ ರಹಿತ ಪ್ರದೇಶಗಳ ಜನತೆಗೆ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಚಾರಿ ಆರೋಗ್ಯ ಘಟಕಗಳನ್ನು ಅನುಷ್ಠಾನ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, 20 ಸಂಚಾರಿ ಆರೋಗ್ಯ ಘಟಕಗಳನ್ನು 3 ವರ್ಷಗಳ ಅವಧಿಗೆ ರೂ.2007.48 ಲಕ್ಷಗಳ ವೆಚ್ಚದಲ್ಲಿ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಕೆಲವೊಂದು ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 82 ಸಂಚಾರಿ ಆರೋಗ್ಯ ಘಟಕಗಳನ್ನು ( NHM ಅಡಿಯಲ್ಲಿ 50 + SCPTSP ರಡಿ 32 ) ಕೆಲವು ಷರತ್ತಿಗೊಳಪಟ್ಟು ಪಥಮವಾಗಿ 03 ವರ್ಷದ ಅವಧಿಗೆ ಕೆ.ಟಿ.ಪಿ.ಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಅಲ್ಪಾವಧಿ ಟೆಂಡರ್ ಆಹ್ವಾನಿಸಲು ಅನುಮೋದನೆ ನೀಡಲಾಗಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಂದ ಕಡತ ಸಂಖ್ಯೆ: ಆಕುಕ…

Read More

ಬೆಂಗಳೂರು : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇಂದು ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನಕ್ಕೆ ಆರೆಂಜ್ ಅಲರ್ಟ್ ಹಾಗೂ ನಂತರದನಂತರದ ಎರಡು ದಿನಕ್ಕೆ ಯೆಲ್ಲೋ ಅಲರ್ಟ್ ನೀಡಲಾ ಗಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ ಮೂರು ದಿನಗಳಿಗೆ ಯೆಲ್ಲೋ ಅಲರ್ಟ್ನ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಇಂದು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನಲ್ಲಿ ಮಾತ್ರ ರಜೆ ಘೋಷಿಸಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಸರ್ಕಾರಿ, ಅನುದಾನ ರಹಿತ, ಅನುದಾನ ಸಹಿತ ಮತ್ತು ಪಿಯುಸಿ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ…

Read More

ಬೆಂಗಳೂರು : 2025-26ನೇ ಸಾಲಿನ ಆಯವ್ಯಯ ಘೋಷಣೆ ಸಂಖ್ಯೆ: 140- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 3 ಲಕ್ಷಕ್ಕೂ ಅಧಿಕ ಸಿಬ್ಬಂದಿ ಹಾಗೂ ಅವಲಂಬಿತರಿಗೆ 5 ಲಕ್ಷ ರೂ. ವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಅನುಮೋದನೆ ಹಾಗೂ ಸಿಬ್ಬಂದಿಗಳಿಂದ ಮಾಸಿಕ 100 ರೂಗಳ ವಂತಿಕೆ ಮತ್ತು ಸರ್ಕಾರದಿಂದ ಉಳಿಕೆ ಹಣವನ್ನು ಭರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರಮಾಂಕ(1)ರ ಪ್ರಕಾರ ವಿಷಯದಲ್ಲಿ ಘೋಷಿಸಲಾಗಿರುತ್ತದೆ. ವಿವರಿಸಿದಂತೆ ಮೇಲೆ ಓದಲಾದ ಕ್ರಮಾಂಕ(2)ರ ಏಕ-ಕಡತದಲ್ಲಿ ಈ ಕೆಳಕಂಡಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ: 1. ಆಯವ್ಯಯ ಘೋಷಣೆಯು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒಪ್ಪಂದ, ಗುತ್ತಿಗೆ / ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುವ ತನ್ನ ಸಿಬ್ಬಂದಿಗಳಿಗೆ ಖಚಿತವಾದ ಆರೋಗ್ಯ ಸೌಲಭ್ಯದ ಸೇವೆಗಳನ್ನು ಒದಗಿಸುವ ಪ್ರಯತ್ನವನ್ನು ಗುರಿಯಾಗಿಸಿಕೊಂಡು ಈ ವರ್ಗದ ಸಿಬ್ಬಂದಿಗಳನ್ನು ಒಳಗೊಳ್ಳಲು ಹೊಸ ಕೊಡುಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ.…

Read More

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.  ಈ ತರಬೇತಿಯನ್ನು ಕೆಂದ್ರ ಹಾಗೂ ರಾಜ್ಯ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಐ.ಹೆಚ್.ಎಮ್ ಮತ್ತು ಎಫ್.ಸಿ.ಐ ಸಂಸ್ಥೆಗಳ ಮೂಲಕ ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕನಿಷ್ಠ 20 ರಿಂದ 45 ವರ್ಷದೊಳಗಿರುವ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಹಾಗೂ ಪ್ರೋತ್ಸಾಹಧನ ದೊಂದಿಗೆ ಉಚಿತ ತರಬೇತಿ ನೀಡುವುದಾಗಿ ಹಾಗೂ ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.  ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಆಸಕ್ತ ಅಭ್ಯರ್ಥಿಗಳು ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್:  karnatakatourism.org, ಸೇವಾಸಿಂಧು ಪೋರ್ಟಲ್: sevasindhu.karnataka.gov.in    ಹಾಗೂ ಬಾಪೂಜಿ ಸೇವಾ ಕೇಂದ್ರ:  :bsk.karnataka.gov.in   ಗಳಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ತರಬೇತಿ ವಿವರ: ಆಹಾರ ಮತ್ತು…

Read More

ಬೆಂಗಳೂರು : ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಮಾಡಲು ಕಛೇರಿ ಹಂಚಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಪೊಲೀಸ್ ಇಲಾಖೆಯಲ್ಲಿ, ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅವರುಗಳ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿರುತ್ತದೆ. ಕರ್ನಾಟಕ ಸಿವಿಲ್ ಸೇವೆಗಳು(ಅನುಕಂಪ ಆಧಾರದ ಮೇಲೆ ನೇಮಕಾತಿ) 1996ರ ನಿಯಮಗಳಡಿ ಉಲ್ಲೇಖಿತ ಸರ್ಕಾರದ ಅಧಿಸೂಚನೆ ಮತ್ತು ನಿರ್ದೇಶನದನ್ವಯ ನೇಮಕಾತಿಗೆ ಅರ್ಹರಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಅವರುಗಳ ಹೆಸರಿನ ಮುಂದೆ ನಮೂನೆಯ ಕಾಲಂ 04 ರಲ್ಲಿ ನಮೂದಿಸಲಾದ ಘಟಕಗಳಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಮಾಡಲು ಸದರಿ ಕಛೇರಿ/ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ. ನೇಮಕಾತಿ ಮಾಡುವ ಪ್ರಾಧಿಕಾರಿ/ ಅಧಿಕಾರಿಗಳು ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿದ ನಂತರ ಸದರಿ ಅಭ್ಯರ್ಥಿಗಳಿಗೆ ತಮ್ಮ ಘಟಕದಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ…

Read More

ಬೆಂಗಳೂರು : ವಸತಿ ಸಚಿವ ಜಮೀರ್ ಅಹ್ಮದ್ ನಿವಾಸಕ್ಕೆ ಮುತ್ತಿಗೆ ಯತ್ನಿಸಿದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸೇರಿದಂತೆ ಹಲವು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ಮೇಲೆ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ಗಂಭೀರ ಆರೋಪ ಮಾಡಿದ್ದರು. ಆದ್ದರಿಂದ ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಜಮೀರ್ ನಿವಾಸಕ್ಕೆ ಬಂದಿದ್ದ ವೇಳೆ ಹೈ ಡ್ರಾಮಾ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ರೂಪೇಶ್ ರಾಜಣ್ಣ ಹಾಗೂ ಬೆಂಬಲಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

Read More

ನವದೆಹಲಿ : ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಇಂದು ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ ವೇಳೆ ಬಾಲಿವುಡ್ನ ಸಂವೇದನಾಶೀಲ ನಟ, ನಿರ್ದೇಶಕ ಅಮಿರ್ ಖಾನ್ ಅವರು ಆಕಸ್ಮಿಕವಾಗಿ ಎದುರಾದರು. ಸಿನೆಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಧನಾತ್ಮಕ ಬದಲಾವಣೆಗೆ ತುಡಿಯುವ ಅವರೊಳಗಿನ ಸಮಾಜಮುಖಿ ವ್ಯಕ್ತಿತ್ವ ನಟನೆಯನ್ನು ಮೀರಿ ಜನರಿಗೆ ಅವರನ್ನು ಹೆಚ್ಚು ಆಪ್ತವಾಗಿಸಿದೆ.ಅವರ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹಾರೈಸಿ, ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದೆ. https://twitter.com/siddaramaiah/status/1937406571027243325?ref_src=twsrc%5Etfw%7Ctwcamp%5Etweetembed%7Ctwterm%5E1937406571027243325%7Ctwgr%5Ee0fa5a093f4fbe87a27105a0eed4508db6c923e7%7Ctwcon%5Es1_c10&ref_url=https%3A%2F%2Fkannadadunia.com%2Fcm-siddaramaiah-meets-bollywood-actor-aamir-khan-in-delhi%2F

Read More

ಕತಾರ್ : ಸೋಮವಾರ ರಾತ್ರಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಪ್ರತೀಕಾರದ ದಾಳಿ ನಡೆಸಿತು. ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳ ಮಳೆ ಸುರಿಸಿತು. ಇಸ್ರೇಲ್ ಮತ್ತು ಇರಾನ್ ನಡುವಿನ ದಾಳಿಗಳು ಮತ್ತು ಪ್ರತಿದಾಳಿಗಳು ಮುಂದುವರಿದಂತೆ… ಇರಾನ್ನ 3 ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ವಾಯುದಾಳಿ ನಡೆಸಿತು. ಆದಾಗ್ಯೂ, ಪ್ರತೀಕಾರದ ಎಚ್ಚರಿಕೆ ನೀಡಿದ ಇರಾನ್, ಸೋಮವಾರ ರಾತ್ರಿ ಕತಾರ್ ಮತ್ತು ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿತು. ಕತಾರ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಆರು ಕ್ಷಿಪಣಿಗಳನ್ನು ಹಾರಿಸಿತು. ಕತಾರ್ನ ರಾಜಧಾನಿ ದೋಹಾದಲ್ಲಿ ಸ್ಫೋಟಗಳು ಕೇಳಿಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ನಗರದಾದ್ಯಂತ ದೊಡ್ಡ ಶಬ್ದಗಳು ಕೇಳಿಬಂದಿವೆ ಎಂದು ಅವರು ಹೇಳಿದರು. https://twitter.com/intelFromBrian/status/1937201034675331459?ref_src=twsrc%5Etfw%7Ctwcamp%5Etweetembed%7Ctwterm%5E1937201034675331459%7Ctwgr%5Ef47aff0227c08327a127b12a88d3349ec6f7e184%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Ftelugu%2Fntvtelugu-epaper-dh40488774740f49a8981181ac6b0ca529%2Fherosriramdragskesulookarikiokaruhiroshriraamarest-newsid-n669627126 ಮತ್ತೊಂದೆಡೆ, ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದಾಗ ದೋಹಾದಾದ್ಯಂತ ಸೈರನ್ಗಳು ಮೊಳಗಿದವು. ಆದಾಗ್ಯೂ, ದೋಹಾದಲ್ಲಿ ಇರಾನಿನ ದಾಳಿಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಈಗ ವೈರಲ್ ಆಗಿವೆ. ದೋಹಾದಲ್ಲಿರುವ ಮಾಲ್ನಿಂದ…

Read More