Author: kannadanewsnow57

ವಾಷಿಂಗ್ಟನ್: ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಅವರ ಸ್ಥಿತಿ ಈಗ ಹೇಗಿದೆ ಎಂದು ಹೇಳಿದ್ದಾರೆ. ತನ್ನ ಬಲ ಕಿವಿಯ ಮೇಲ್ಭಾಗದಲ್ಲಿ ಗುಂಡು ಹಾರಿಸಲಾಗಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷರು ಹೇಳಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿಲ್ಲ ಮತ್ತು ಅವರು ಚೆನ್ನಾಗಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಅವರ ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಪೆನ್ಸಿಲ್ವೇನಿಯಾದಲ್ಲಿ ರ್ಯಾಲಿ ನಡೆಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಸಮಯದಲ್ಲಿ, ಒಂದರ ನಂತರ ಒಂದರಂತೆ ಹಲವಾರು ಗುಂಡುಗಳನ್ನು ಹಾರಿಸಲಾಯಿತು, ಆದರೆ ಸೀಕ್ರೆಟ್ ಸರ್ವಿಸ್ ಏಜೆಂಟರು ತಕ್ಷಣ ಕಾರ್ಯಪ್ರವೃತ್ತರಾಗಿ ಮಾಜಿ ಅಧ್ಯಕ್ಷರನ್ನು ರ್ಯಾಲಿ ವೇದಿಕೆಯಿಂದ ಕರೆದೊಯ್ದರು. ದಾಳಿಯ ನಂತರ, ಟ್ರಂಪ್ ತಮ್ಮ ಬಲ ಕಿವಿಯ ಮೇಲೆ ಕೈ ಇಟ್ಟಿದ್ದರು ಮತ್ತು ಅವರ ಕಿವಿಯಿಂದ ರಕ್ತ ಸೋರುತ್ತಿತ್ತು. ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, “ಏನೋ ತಪ್ಪಾಗಿದೆ ಎಂದು ನನಗೆ ತಕ್ಷಣ ತಿಳಿದಿತ್ತು, ಏಕೆಂದರೆ…

Read More

ಬೆಂಗಳೂರು : ಗರ್ಭಿಣಿ ಮಹಿಳೆಯರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮಾತೃವಂದನಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಾತೃವಂದನಾ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕøತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರಿಂದ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನ ರೂಪದಲ್ಲಿ ವೇತನ ನಷ್ಟಕ್ಕಾಗಿ ನೀಡುವುದಾಗಿದೆ. ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ರೂ. 5000, ಎರಡನೇ ಮಗು (ಹೆಣ್ಣು ಮಗುವಾಗಿರುವುದಕ್ಕೆ) ರೂ. 6000 ನೀಡಲಾಗುವುದು. ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಮೊದಲ ಪ್ರಸವದ ಗರ್ಭಿಣಿ ಮತ್ತು ಎರಡನೇ ಹೆಣ್ಣು ಮಗುವಿನ ಬಾಣಂತಿಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ…

Read More

ವಾಷಿಂಗ್ಟನ್‌ : ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಶನಿವಾರ ಸಂಜೆ ನಡೆದ ಚುನಾವಣೆ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಡೊನಾಲ್ಡ್‌ ಟ್ರಂಪ್‌ ಮೇಲಿನ ಗುಂಡಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದು, ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವಗಳಲ್ಲಿ ಹಿಂಸೆಗೆ ಸ್ಥಾನವಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಮೃತರ ಕುಟುಂಬ, ಗಾಯಗೊಂಡವರು ಮತ್ತು ಅಮೆರಿಕದ ಜನರೊಂದಿಗೆ ಇವೆ ಎಂದು ಟ್ವೀಟ್‌ ಮಾಡಿದ್ದಾರೆ. https://Twitter.com/narendramodi/status/1812315611940176344?ref_src=twsrc%5Etfw%7Ctwcamp%5Etweetembed%7Ctwterm%5E1812315611940176344%7Ctwgr%5E6f84d761802150b87f2146dd2416eb1c8e6fac32%7Ctwcon%5Es1_&ref_url=https%3A%2F%2Fkannadadunia.com%2Flive-news%2Fpm-modi-condemns-attack-on-donald-trump-says-deeply-concerned-by-attack-on-my-friend%2F ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ದೊಡ್ಡ ಸ್ಫೋಟದ ನಂತರ ಟ್ರಂಪ್ ಗಾಯಗೊಂಡಂತೆ ನೆಲಕ್ಕೆ ಬಿದ್ದರು. ಭದ್ರತಾ ಸಿಬ್ಬಂದಿ ಮಾಜಿ ಅಧ್ಯಕ್ಷರನ್ನು ತ್ವರಿತವಾಗಿ ರಕ್ಷಿಸಿ ವೇದಿಕೆಯಿಂದ ಹೊರಗೆ…

Read More

ಬೆಳಗಾವಿ : ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಎಸ್‌ ಸಿಪಿ, ಟಿಎಸ್‌ ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದ್ದು ನಿಜ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ (ಜು.13) ನಡೆದ ಎಸ್.ಸಿ-ಎಸ್.ಟಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಕುರಿತು ಕೆಲವು ದೂರುಗಳು ಬರುತ್ತಿವೆ. ಹಾಗಾಗಿ ಯಾವುದೇ ಮಧ್ಯವರ್ತಿಗಳು ಇಲ್ಲದೇ ಯೋಜನೆಗಳ ಸೌಲಭ್ಯ ಫಲಾನುಭವಿಗೆ ದೊರೆಯುವಂತೆ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾ ಕೇಂದ್ರಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೇ ನಿಗಮದ ಕೆಲಸ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿನ ಯೋಜನೆಗಳ ಅರ್ಜಿಗಳ ಅಂಕಿ ಅಂಶಗಳ ಮಾಹಿತಿ ಅಧಿಕಾರಿಗಳಿಗೆ ಇರಬೇಕು ಎಂದು…

Read More

ಬೆಂಗಳೂರ: ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೋಬಳಿಗೊಂದು ವಸತಿ ಶಾಲೆಯನ್ನು ಪ್ರಾರಂಭಿಸಲಾಗುತ್ತದೆ ಅಂತ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಅವರು ಇಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಡಾII ಬಾಬು ಜಗಜೀವನ ರಾಮ್ ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಭಾರತದ ಮಾಜಿ ಉಪ ಪ್ರಧಾನಿ ಡಾII ಬಾಬು ಜಗಜೀವನ ರಾಮ್ ಭವನದ ಉದ್ಘಾಟಿಸಿ ಮಾತನಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ದಲಿತ ಸಂಘಟನೆಗಳು 70 ರ ದಶಕದಲ್ಲಿ ಸಾರಾಯಿ ಅಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ.94-95 ರಲ್ಲಿ ಹಣಕಾಸು ಸಚಿವರಾಗಿದ್ದಾಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದ್ದು ತಾವೇ ಎಂದು ಸ್ಮರಿಸಿದರು. ಹೋಬಳಿಗೊಂದು ವಸತಿ ಶಾಲೆ ಇಂದು 821 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಹೋಬಳಿಗೊಂದು ವಸತಿ ಶಾಲೆ…

Read More

ಬೆಂಗಳೂರು : ಬಾಲ್ಯ ವಿವಾಹ ತಡೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಬಾಲ್ಯ ವಿವಾಹ ಕಂಡು ಬಂದ್ರೆ ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮದುವೆ ಮಾಡಿಸುವುದು ಕಾನೂನಿಗೆ ವಿರುದ್ಧವಾಗಿದೆ. ಬಾಲ್ಯ ವಿವಾಹವು ತಾಯಿ ಮತ್ತು ಶಿಶು ಮರಣ ಪ್ರಮಾಣ ಏರಿಕೆಯಾಗುವುದಕ್ಕೂ ಪ್ರಮುಖ ಕಾರಣವಾಗಿದೆ. ಎಲ್ಲಿಯೇ ಬಾಲ್ಯವಿವಾಹ ಕಂಡು ಬಂದರೂ ತಕ್ಷಣವೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ದೂರು ದಾಖಲಿಸಿ. ಬಾಲ್ಯ ವಿವಾಹ ತಡೆಗೆ ಕೈ ಜೋಡಿಸಿ.

Read More

ನವದೆಹಲಿ : ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಒಡಿಶಾ ಸರ್ಕಾರ, ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಭಾನುವಾರ ಮತ್ತೆ ತೆರೆಯುವುದಾಗಿ ಘೋಷಿಸಿದೆ. ಈ ರತ್ನ ಭಂಢಾರ ಪೂರ್ಣ 46 ವರ್ಷಗಳ ನಂತರ ತೆರೆಯುತ್ತದೆ. ಇಂದು ಪುರಿ ಜಗನ್ನಾಥ್‌ ದೇವಾಲಯದ ರತ್ನ ಭಂಡಾರವನ್ನು ತೆರೆಯಲು ರಾಜ್ಯ ಸರ್ಕಾರ ಎಸ್ಒಪಿ ಹೊರಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, ಎಸ್ಒಪಿಯನ್ನು ಅಂತಿಮಗೊಳಿಸುವಾಗ ಆಚರಣೆಗಳು, ಸಮಯ ಮುನ್ನೆಚ್ಚರಿಕೆಗಳು ಸೇರಿದಂತೆ ಮತ್ತೆ ತೆರೆಯುವ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಭಾನುವಾರ ರತ್ನ ಭಂಡಾರವನ್ನು ಮತ್ತೆ ತೆರೆಯಲು ನಿರ್ಧರಿಸಲಾಯಿತು ಭಾನುವಾರ ರತ್ನ ಭಂಡಾರವನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ), ಸೈನಿಕರು ಸೇರಿದಂತೆ ಇತರರು ಸೇರಿದ್ದಾರೆ ಎಂದು ಅವರು ಹೇಳಿದರು. ಆಭರಣಗಳ ಪಟ್ಟಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಆರ್ಬಿಐ ಸಹಾಯವನ್ನು ಕೋರಲಾಗಿದೆ ಎಂದು ಅವರು ಹೇಳಿದರು. ಅವರ ಪ್ರತಿನಿಧಿಗಳು…

Read More

ಬೆಂಗಳೂರು : ಸದ್ಯ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ನಿನ್ನೆ ಒಂದೇ ದಿನ ರಾಜ್ಯದಲ್ಲಿ 424 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಲ್ಲಿ 202 ಡೆಂಗ್ಯೂ ಕೇಸ್​ಗಳು ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬೆಂಗಳೂರು: ಪರಿ ರಾಜ್ಯದಲ್ಲಿ ಶನಿವಾರ 2,557 ಮಂದಿಗೆ ಡೆಂಗೆ ಜ್ವರ ತಪಾಸಣೆ ನಡೆಸಿದ್ದು, ಈ ಪೈಕಿ 424 ಮಂದಿಗೆ ಡೆಂಗೆ ದೃಢಪಟ್ಟಿದೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 9,082ಕ್ಕೆ ಏರಿಕೆಯಾಗಿದೆ. ಈವರೆಗೆ ಡೆಂಗೆ ಜ್ವರದಿಂದ 7 ಮಂದಿ ಮೃತಪಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 202, ಧಾರವಾಡ, ಮಂಡ್ಯ, ಹಾಸನ, ದಕ್ಷಿಣ ಕನ್ನಡದಲ್ಲಿ ತಲಾ 20 ಡೆಂಗೆ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚುತ್ತಿವೆ. ಕೇವಲ ಮಕ್ಕಳನ್ನೇ ಟಾರ್ಗೆಟ್ ಮಾಡಿತ್ತಿರುವ ಡೆಂಗ್ಯೂ ಕಳೆದ ಹಲವು ದಿನಗಳ ಹಿಂದೆ ಚಿಕ್ಕ ಚಿಕ್ಕ ಮಕ್ಕಳು ಬಲಿಯಾಗಿದ್ದಾರೆ.ಇಂದು ವಿದ್ಯಾರ್ಥಿನಿಯನ್ನು ಬಲಿ ಪಡೆದಿದೆ. ಜೊತೆಗೆ ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತಿದೆ. ಹಾಸನ, ಹಾವೇರಿ, ಚಿಕ್ಕಮಗಳೂರು ಕೆಲ…

Read More

ಜೈಪುರ: ರಾಜಸ್ಥಾನದ ಪಾಲಿ ಜಿಲ್ಲೆಯ ಜೋಗ್ಮಂಡಿ ರೈಲ್ವೆ ಸೇತುವೆಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ಪತಿ ಮತ್ತು ಪತ್ನಿ ರೈಲು ಬರುತ್ತಿರುವುದನ್ನು ನೋಡಿ ಭಯಭೀತರಾಗಿ ತಪ್ಪಿಸಿಕೊಳ್ಳಲು 90 ಅಡಿ ಆಳದ ಕಂದಕಕ್ಕೆ ಹಾರಿದ್ದಾರೆ. ಈ ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಸೋಜತ್ ರಸ್ತೆಯ ಬಳಿಯ ಹರಿಯಮಾಲಿ ನಿವಾಸಿಗಳಾದ ರಾಹುಲ್ ಮೇವಾಡಾ (22) ಮತ್ತು ಅವರ ಪತ್ನಿ ಜಾಹ್ನವಿ (20) ಗೋರಂಘಾಟ್ ಗೆ ಭೇಟಿ ನೀಡಲು ಬಂದಿದ್ದರು. ಅವರು ಜೋಗಮಂಡಿ ಸೇತುವೆಯ ಮೀಟರ್ ಗೇಜ್ ರೈಲ್ವೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾರ್ವಾರ್ ಪ್ಯಾಸೆಂಜರ್ ರೈಲು ಕಮ್ಲಿಘಾಟ್ ರೈಲ್ವೆ ನಿಲ್ದಾಣದಿಂದ ಬಂದಿತು. ಆದಾಗ್ಯೂ, ರೈಲಿನ ವೇಗವು ನಿಧಾನವಾಗಿತ್ತು ಮತ್ತು ಅದು ಸೇತುವೆಯ ಮೇಲೆ ನಿಂತಿತು, ಆದರೆ ಅಷ್ಟರಲ್ಲಿ ದಂಪತಿಗಳು ಭಯಭೀತರಾಗಿ ಸೇತುವೆಯಿಂದ ಕೆಳಗೆ ಹಾರಿದ್ದರು. ಅವರ ಇಬ್ಬರು ಸಂಬಂಧಿಕರು ರೈಲ್ವೆ ಸೇತುವೆಯ ಬಳಿ ಇದ್ದರು, ಆದರೆ ಅವರು ಹಳಿಯಲ್ಲಿ ಇರಲಿಲ್ಲ. ರಾಹುಲ್ ಮತ್ತು ಜಾಹ್ನವಿ ರೈಲ್ವೆ ಹಳಿಯ…

Read More

ದಾವಣಗೆರೆ : ಲೋಕ ಅದಾಲತ್‌ ಪ್ರಕ್ರಿಯೆ ಅತಿ ಸರಳ, ಇಲ್ಲಿ ಏನೆ ವ್ಯಾಜ್ಯ ಇದ್ದರೂ ರಾಜಿಗೆ ಮೊದಲ ಆದ್ಯತೆ. ನ್ಯಾಯಾಧೀಶರು ಮತ್ತು ನುರಿತ ವಕೀಲರು ಲೋಕ ಅದಾಲತ್ ಪೀಠದಲ್ಲಿ ಕುಳಿತು ವಾದಿ-ಪ್ರತಿವಾದಿಗಳನ್ನು ಕೂರಿಸಿಕೊಂಡು ಅವರ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್ ಹೆಗಡೆ ತಿಳಿಸಿದರು. ನಿನ್ನೆ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು. ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯಾರ್ಥದಿಂದ ಸಮಯ ಉಳಿತಾಯವಾಗಿ ಶೀಘ್ರ ನ್ಯಾಯದಾನ ಸಿಗಲಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ಪ್ರತಿನಿಧಿಸುವ ವಕೀಲರು ಮತ್ತು ಸಂಧಾನಗಾರರು ಹಾಗೂ ಎಲ್ಲರ ಶ್ರಮದಿಂದ ಇಲ್ಲಿಯವರೆಗೆ ಸುಮಾರು 17 ಜೋಡಿ ಗಂಡ, ಹೆಂಡತಿಯರು ಮರು ಹೊಂದಾಣಿಕೆ ಮಾಡಿಕೊಂಡು ಸಹಜೀವನ ನಡೆಸಲು ಸಿದ್ದರಾಗಿದ್ದಾರೆ, ಈ ಸಂಖ್ಯೆ ಇನ್ನೂ ಕೂಡ ಹೆಚ್ಚುವ ಸಂಭವ ಇದೆ. ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬಹುದಾಗಿದೆ ಎಂದರು. ಕೆಲವು ಪಕ್ಷಗಾರರಿಗೆ ನಾವು…

Read More