Author: kannadanewsnow57

ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 4115 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಸರ್ಕಾರ ಬರೋಬ್ಬರಿ 4115 ಪೊಲೀಸ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ನೇಮಕಾತಿ ಆರಂಭಿಸಲಿದೆ. 3500 ಕಾನ್ಸ್ ಟೇಬಲ್ ಹಾಗೂ 615 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿ ವಿವಿಧ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಲಿದೆ. ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರವೇ ಅಧಿಸೂಚನೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಾನ್ಸೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ವರ್ಷ ಪೂರ್ಣಗೊಂಡಿರಬೇಕು. 25 ವರ್ಷ ಮೀರಿರಬಾರದು. ಬರೋಬ್ಬರಿ 4115 ಪೊಲೀಸ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಈ ಮೂಲಕ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಹುದ್ದೆಗಳ ವಿವರ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್ (ಸಿಎಆರ್ / ಡಿಎಆರ್) 2000 ವಿಶೇಷ ಮೀಸಲು ಪೊಲೀಸ್‌ ಕಾನ್ಸ್‌ಟೇಬಲ್ (SRPC…

Read More

ನವದೆಹಲಿ. ಅಮುಲ್ ದೇಶದ ಜನಪ್ರಿಯ ಡೈರಿ ಬ್ರಾಂಡ್ ಆಗಿದೆ. ದೇಶದ ಜನತೆ ಅಮುಲ್ ಮೇಲೆ ನಂಬಿಕೆ ಇಟ್ಟಿದ್ದಾರೆ. ದೀಪಾವಳಿ ಹಬ್ಬ ಬರುತ್ತಿರುವ ಈ ಹೊತ್ತಿನಲ್ಲಿ ಅಮೂಲ್ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ವಂಚಕರು ಅಮೂಲ್ ನ ಕೃಪಾಕಟಾಕ್ಷದ ಲಾಭ ಪಡೆದು ಅಮುಲ್ ನ ನಕಲಿ ತುಪ್ಪವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಒಂದು ಲೀಟರ್‌ನ ರೀಫಿಲ್ ಪ್ಯಾಕ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ದೇಶದ ಜನರಲ್ಲಿ ತನ್ನ ಪ್ರತಿಷ್ಠೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕಂಪನಿಯು ಇಂಟರ್ನೆಟ್ ಮಾಧ್ಯಮದ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಒಂದು ಲೀಟರ್ ರೀಫಿಲ್ ತುಪ್ಪದ ಪ್ಯಾಕ್ ತಯಾರಿಕೆ ನಿಲ್ಲಿಸಲಾಗಿದೆ ಕಂಪನಿಯು ಗ್ರಾಹಕರಿಗೆ ನಕಲಿ ಮತ್ತು ಅಸಲಿ ಅಮುಲ್ ತುಪ್ಪವನ್ನು ಹೇಗೆ ಗುರುತಿಸುವುದು ಎಂದು ಹೇಳಿದೆ. ಅಮುಲ್ ಹೆಸರಿನಲ್ಲಿ ಒಂದು ಲೀಟರ್ ರೀಫಿಲ್ ಪ್ಯಾಕ್‌ಗಳಲ್ಲಿ ಕಲಬೆರಕೆ ತುಪ್ಪವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಲಹೆಯಲ್ಲಿ ತಿಳಿಸಲಾಗಿದೆ. ಕಂಪನಿಯು ಮೂರು ವರ್ಷಗಳಿಂದ ಒಂದು ಲೀಟರ್ ರೀಫಿಲ್ ತುಪ್ಪದ ಪ್ಯಾಕ್‌ಗಳ ತಯಾರಿಕೆಯನ್ನು ನಿಲ್ಲಿಸಿದೆ. ಅಮುಲ್…

Read More

29-10-2024 ಮಂಗಳವಾರ ಪ್ರದೋಷ ಪೂಜೆ ಶಿವನ ಪೂರ್ಣ ದೃಷ್ಟಿ ನಮ್ಮ ಮೇಲೆ ಬೀಳಬೇಕಾದರೆ ನಾವು ಪ್ರದೋಷದ ಸಮಯದಲ್ಲಿ ಶಿವನ ಆರಾಧನೆ ಮಾಡಬೇಕು. ಶಿವನ ಪೂರ್ಣದೃಷ್ಟಿ ನಮ್ಮ ಮೇಲೆ ಬಿದ್ದರೆ ಕ್ಷಣಮಾತ್ರದಲ್ಲಿ ನಮ್ಮ ಸಂಕಷ್ಟಗಳೆಲ್ಲ ಮಾಯವಾಗುತ್ತವೆ. ಇದು ಹೇಗೆ ಸಾಧ್ಯ? ಯಾರು ಶಿವನನ್ನು ಸಂಪೂರ್ಣ ನಂಬಿಕೆ ಮತ್ತು ಸಂಪೂರ್ಣ ಭಕ್ತಿ ಮತ್ತು ಶರಣಾಗತಿಯಿಂದ ಪೂಜಿಸುತ್ತಾರೋ ಅದು ಬಹಳ ಸುಲಭವಾಗಿ ಸಾಧ್ಯವಾಗುತ್ತದೆ. ಆ ಅರ್ಥದಲ್ಲಿ ಇಂದಿನ ದಿನ. 29-10-2024 ಮಂಗಳವಾರದ ಜೊತೆಗೆ ಪ್ರದೋಷ ಬಂದಿದೆ. ಈ ಪ್ರದೋಷವನ್ನು ಋಣ ವಿಮೋಸನಾ ಪ್ರದೋಷ ಎನ್ನುತ್ತಾರೆ. ಋಣ ಎಂದರೆ ರೋಗ ಎಂಬ ಅರ್ಥವೂ ಇದೆ. ಋಣ ಎಂದೂ ಅರ್ಥ. ಇದು ನಿಮ್ಮ ಕರ್ಮ ಕ್ರಿಯೆಗಳನ್ನು ಸಹ ಸೂಚಿಸುತ್ತದೆ. ಏಕೆಂದರೆ ಕರ್ಮಫಲದಿಂದಲೇ ನಮ್ಮನ್ನು ರೋಗ, ಋಣಗಳು ಹಿಂಬಾಲಿಸುತ್ತಿವೆ. ಇದರಿಂದ ಮುಕ್ತಿ ಹೊಂದಲು ನಾಳೆ ಶಿವನ ಆರಾಧನೆ ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಇಂದಿನ ಆಧ್ಯಾತ್ಮಿಕ ಪೋಸ್ಟ್ ಮೂಲಕ ತಿಳಿಯಲಿದ್ದೇವೆ. ಮಂಗಳವಾರ ಪ್ರದೋಷ ಪೂಜೆ ಇದು ತುಂಬಾ ಸುಲಭವಾದ ವಿಧಾನವಾಗಿದೆ.…

Read More

ಮೈಸೂರು : ಮುಡಾ ಹಗರಣ ಸಂಬಂಧ ಇಡಿ ಅಧಿಕಾರಿಗಳು ಮತ್ತೊಂದು ದಾಳಿ ನಡೆಸಿದ್ದು, ಮೈಸೂರಿನ ಬಿಲ್ಡರ್ ಜಯರಾಮ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮೈಸೂರಿನ ಶ್ರೀರಾಂಪುರದಲ್ಲಿ ಬಿಲ್ಡರ್ ಜಯರಾಮ್ ನಿವಾಸ ಹಾಗೂ ಕಚೇರಿಗಳ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮುಡಾ ಹಗರಣದಲ್ಲಿ ಸೈಟ್ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಿಲ್ಡರ್ ಗಳ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದು, ಇದೀಗ ಮೈಸೂರಿನ ಬಿಲ್ಡರ್ ಜಯರಾಮ್ ಮನೆಯ ಮೇಲೂ ದಾಳಿ ನಡೆಸಲಾಗಿದೆ.

Read More

ಬಾಗಲಕೋಟೆ : ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಂಟಿಆರ್ ಮಸಾಲ ಪ್ಯಾಕೆಟ್ ನಲ್ಲಿ ಹುಳು ಪತ್ತೆಯಾಗಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಎಂಟಿಆರ್ ಮಸಲಾ ಖರೀದಿಸಿದ ಗ್ರಾಹಕರಿಗೆ ಆಘಾತಗೊಂಡಿದ್ದು, ಎಂಟಿಆರ್ ಮಸಾಲ ಪ್ಯಾಕೆಟ್ ಓಪನ್ ಮಾಡಿದಾಗ ಅದರಲ್ಲಿ ಹುಳುಗಳು ಪತ್ತೆಯಾಗಿವೆ. ಇನ್ನು ಸಹ ಎಕ್ಷ್​ಪೈರ್​ ಆಗದ ಪ್ಯಾಕೆಟ್​ನಲ್ಲಿ ಹುಳುಗಳು ಪತ್ತೆಯಾಗಿದ್ದು​ ಎಂಟಿಆರ್​ ಗ್ರಾಹಕರಿಗೆ ಆತಂಕ ಮೂಡಿಸಿದೆ. MTR ಮಸಾಲ ಪ್ಯಾಕೆಟ್​ನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಃಕರು ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.

Read More

ನವದೆಹಲಿ : ಐಡ್ರಾಪ್ಸ್, ರಕ್ತದೊತ್ತಡದ ಔಷಧಿಗಳು ಮತ್ತು ಉತ್ತರಾಖಂಡದಲ್ಲಿ ತಯಾರಿಸಲಾದ ಅನೇಕ ಆಂಟಿಬಯೋಟಿಕ್ ಔಷಧಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಕಂಡುಬಂದಿದೆ. ಈ ಫಲಿತಾಂಶದ ನಂತರ, ರಾಜ್ಯ ಔಷಧ ಆಡಳಿತ ಇಲಾಖೆ ಏಳು ಔಷಧಿಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಹೊರಡಿಸಿದ ಎಚ್ಚರಿಕೆಯ ಪ್ರಕಾರ, ಉತ್ತರಾಖಂಡದಲ್ಲಿ ತಯಾರಿಸಿದ ಆಂಟಿಬಯೋಟಿಕ್ ಸೆಫುರಾಕ್ಸಿಮ್, ಲೆಪ್ರೊಮೈಡ್, ಬ್ಯಾಕ್ಟೀರಿಯಾದ ಸೋಂಕಿನ ಔಷಧಿ ಫ್ಲೋಕ್ಸಾಗಾಸ್, ಅಧಿಕ ರಕ್ತದೊತ್ತಡ ಔಷಧಿ ವಿಂಟೆಲ್ ಸೇರಿದಂತೆ ಒಟ್ಟು ಏಳು ಔಷಧಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಈ ಔಷಧಿಗಳ ಮಾದರಿಗಳು ವಿಫಲವಾದ ನಂತರ ಈ ಔಷಧಿಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ. ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಎಚ್ಚರಿಕೆಯ ನಂತರ ಎಲ್ಲಾ ಔಷಧೀಯ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರಾಖಂಡದ ಆಹಾರ ಮತ್ತು ಔಷಧ ಇಲಾಖೆಯ ಹೆಚ್ಚುವರಿ ಆಯುಕ್ತ ಮತ್ತು ಔಷಧ ನಿಯಂತ್ರಕ ತಜ್ಬರ್ ಸಿಂಗ್ ಜಗ್ಗಿ ಹೇಳಿದ್ದಾರೆ. ಈ ಕಂಪನಿಗಳು ಇನ್ನು ಮುಂದೆ ಈ ಔಷಧಿಗಳನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಈ ಎಲ್ಲ…

Read More

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು, ನಿಧಿ ಆಸೆಗಾಗಿ ಪಾಪಿ ತಂದೆಯೊಬ್ಬ ಸ್ವಂತ ಮಗನನ್ನೇ ಬಲಿಕೊಡಲು ಯತ್ನಿಸಿದ ಘಟನೆ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದ್ದು, ಕುಟ್ಟಿ ಸೈತಾನ್ ಪೂಜೆಗೆ ಮಗು ಬಲಿ ಕೊಡಲು ತಂದೆ ಯತ್ನಿಸಿದ್ದಾನೆ. ಈ ವೇಳೆ ಪತ್ನಿ ತಡೆದಿದ್ದು, ಬಳಿಕ ದೂರು ನೀಡಿದ್ದಾಳೆ. ಬೆಂಗಳೂರಿನ ಕೆ.ಆರ್.ಪುರಂನ ಸದ್ದಾಂ ಎಂಬಾತ ನಿಧಿ ಆಸೆಗೆ ಮಗನನ್ನೇ ಬಲಿಕೊಡಲು ಯತ್ನಿಸಿದ್ದಾನೆ. ತಡರಾತ್ರಿ ಮಂತ್ರ ಪಠಿಸುತ್ತಾ ವಾಮಾಚಾರದ ಬಗ್ಗೆ ಅಭ್ಯಾಸ ಮಾಡುತ್ತಿದ್ದ. ಪತಿ ಸದ್ದಾಂ ಕಿರುಕುಳ ಬೇಸತ್ತು ಮಹಿಳೆ ಪೊಲೀಸ್ ಆಯುಕ್ತ ದಯಾನಂದ್ ಗೆ ದೂರು ನೀಡಿದ್ದಾಳೆ.

Read More

ಬೆಂಗಳೂರು: ನಗರದ ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರದ ವತಿಯಿಂದ ಒಂದು ಬಾರಿ ಪರಿಹಾರ(OTS) ಯೋಜನೆಯನ್ನು ಬಿಬಿಎಂಪಿಯಲ್ಲಿ ದಿನಾಂಕ:30-11-2024 ರವರೆಗೆ ವಿಸ್ತರಿಸಲಾಗಿದೆ. ಬಿಬಿಎಂಪಿ ಐತಿಹಾಸಿಕ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ. ಆದರೆ ಆಸ್ತಿ ತೆರಿಗೆ ಬಾಕಿ ಇರುವ ನಾಗರೀಕರು ಇದರ ಲಾಭವನ್ನು ಸರಿಯಾಗಿ ಪಡೆಯುತ್ತಿಲ್ಲ. 250 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ 1,6000ಕ್ಕೂ ಹೆಚ್ಚು ಪರಿಷ್ಕರಣೆ ಪ್ರಕರಣಗಳು ಮತ್ತು 400 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ ಸುಮಾರು 2.4 ಲಕ್ಷ ಸುಸ್ತಿದಾರರ ಪ್ರಕರಣಗಳು ಪಾವತಿಸುವುದು ಬಾಕಿಯಿರುತ್ತದೆ.ಆದ್ದರಿಂದ OTS ಯೋಜನೆಯಡಿ ತಕ್ಷಣವೇ ಬಾಕಿ‌ ಆಸ್ತಿ ತೆರಿಗೆ ಪಾವತಿಸುವ ಸಲುವಾಗಿ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯೋಜಿಸಿದೆ ಮತ್ತು ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು 31ನೇ ನವೆಂಬರ್ ಒಳಗಾಗಿ ಪಾವತಿಸಿ, ಇಲ್ಲವಾದಲ್ಲಿ 1ನೇ ಡಿಸೆಂಬರ್ 2024 ರಿಂದ ನೀವು ಪಾವತಿಸುವ ಬಾಕಿ ಆಸ್ತಿ ತೆರಿಗೆಯು…

Read More

ಬೆಂಗಳೂರು : ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪಟಾಕಿ ಬಳಕೆ ಕುರಿತಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು ಮತ್ತು ಅವುಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುತ್ತದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿರುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದನ್ವಯ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ದಿನಾಂಕ: 31/10/2024 ರಿಂದ 02/11/2024ರವೆಗೆ ಸ್ಫೋಟಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದಲ್ಲದೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು, ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿರುತ್ತದೆ. ಅಲ್ಲದೇ, ‘ಹಸಿರು ಪಟಾಕಿ’ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿರುತ್ತದೆ. ಮುಂದುವರೆದು, 2024 ನೇ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಸಾರ್ವಜನಿಕರು ಕೇವಲ ಹಸಿರು ಪಟಾಕಿಗಳನ್ನು ಮಾತ್ರ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಮೈಕೋ ಲೇಔಟ್ ಬಸ್ ನಿಲ್ದಾಣದ ಸಮೀಪ ಆಟೋ ಡ್ರೈವರ್ ಒಬ್ಬ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ನಿಂತಿದ್ದ ಆಟೋ ಸೈಡ್ ಗೆ ಹಾಕುವಂತೆ ಬಿಎಂಟಿಸಿ ಬಸ್ ಚಾಲಕ ಜ್ಞಾನಪ್ಪ ಹಾರ್ನ್ ಮಾಡಿದ್ದಕ್ಕೆ ಕೋಪಗೊಂಡ ಆಟೋ ಚಾಲಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಮೂಲಕ ಕಳೆದ 2 ತಿಂಗಳಲ್ಲಿ ಇದು 5 ನೇ ಹಲ್ಲೆ ಪ್ರಕರಣವಾಗಿದೆ. ಎಸ್.ಜಿ.ಪಾಳ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More