Subscribe to Updates
Get the latest creative news from FooBar about art, design and business.
Author: kannadanewsnow57
ಭಾರತೀಯರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಮತ್ತು ಬಿಸ್ಕೇಟ್ ಇಲ್ಲದೆ ದಿನ ಶುರುವಾಗುವುದಿಲ್ಲ. ಇದು ಬಹುತೇಕರಿಗೆ ಅತ್ಯಂತ ಸುಲಭ ಹಾಗೂ ಸಮಾಧಾನಕರವಾದ ದಿನನಿತ್ಯದ ಅಭ್ಯಾಸ. ಆದರೆ, ಈ ಸಾಮಾನ್ಯ ಅಭ್ಯಾಸ ನಿಮ್ಮ ಹೊಟ್ಟೆಗೆ ಹಾನಿ ಉಂಟುಮಾಡಬಹುದು ಎಂದು ಮುಂಬೈನ ವೈದ್ಯರೊಬ್ಬರು ಎಚ್ಚರಿಸಿದ್ದಾರೆ. ಮುಂಬೈನ ಖ್ಯಾತ ಕೀಲು ಮೂಳೆ ಶಸ್ತ್ರಚಿಕಿತ್ಸಕ ಮತ್ತು ಆರೋಗ್ಯ ತಜ್ಞ ಡಾ. ಮನನ್ ವೋರಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಬಿಸ್ಕೇಟ್ ಸೇವಿಸುವುದರಿಂದ ಕರುಳಿನ ಸಮಸ್ಯೆಗಳು ಉಂಟಾಗಬಹುದು ಮತ್ತು ದಿನದ ಮುಂದಿನ ಭಾಗದಲ್ಲಿ ಶಕ್ತಿಯ ಕೊರತೆ ಎದುರಾಗಬಹುದು ಎಂದು ಅವರು ವಿವರಿಸಿದ್ದಾರೆ. ಬೆಳಗಿನ ಚಹಾ ಹೊಟ್ಟೆಗೆ ಏಕೆ ತೊಂದರೆ ನೀಡುತ್ತದೆ? ಡಾ. ವೋರಾ ಅವರ ಪ್ರಕಾರ, ಚಹಾದಲ್ಲಿ ಕೆಫೀನ್ ಮತ್ತು ಟ್ಯಾನಿನ್ ಅಂಶಗಳಿರುತ್ತವೆ. ಇವು ಹೊಟ್ಟೆಯಲ್ಲಿ ಆಮ್ಲ (Acid) ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದಾಗ, ಅದು ಹೊಟ್ಟೆಯ…
ರಾಷ್ಟ್ರೀಯ ಜಾನುವಾರು ಮಿಷನ್ (NLM) ಅಡಿಯಲ್ಲಿ ಕತ್ತೆ, ಕುದುರೆ ಮತ್ತು ಒಂಟೆಗಳಂತಹ ಜಾನುವಾರುಗಳ ಸಾಕಾಣಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರೈತರು ಮತ್ತು ಉದ್ಯಮಿಗಳಿಗೆ ಭಾರಿ ಆರ್ಥಿಕ ನೆರವು ನೀಡಲು ಮುಂದಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಕತ್ತೆ ಸಾಕಾಣಿಕೆ (ಬ್ರೀಡಿಂಗ್ ಫಾರ್ಮ್) ಆರಂಭಿಸುವವರಿಗೆ ಸರ್ಕಾರವು ಆರ್ಥಿಕ ಬೆಂಬಲವನ್ನು ಒದಗಿಸುತ್ತಿದೆ. ಕತ್ತೆ ಸಾಕಾಣಿಕೆಗೆ ಸಬ್ಸಿಡಿ ವಿವರಗಳು: 50 ಲಕ್ಷದವರೆಗೆ ಸಹಾಯಧನ: ಯೋಜನಾ ವೆಚ್ಚದ ಶೇ. 50ರಷ್ಟು ಬಂಡವಾಳ ಸಬ್ಸಿಡಿಯನ್ನು (ಗರಿಷ್ಠ 50 ಲಕ್ಷ ರೂ.ವರೆಗೆ) ಸರ್ಕಾರ ನೀಡಲಿದೆ. ಯಾರಿಗೆ ಲಭ್ಯ?: ಆಸಕ್ತ ವ್ಯಕ್ತಿಗಳು, ರೈತ ಉತ್ಪಾದಕ ಸಂಸ್ಥೆಗಳು (FPO), ಸ್ವ-ಸಹಾಯ ಸಂಘಗಳು (SHG), ಜಂಟಿ ಹೊಣೆಗಾರಿಕೆ ಗುಂಪುಗಳು (JLG), ಸಹಕಾರ ಸಂಘಗಳು ಮತ್ತು ಸೆಕ್ಷನ್ 8 ಕಂಪನಿಗಳು ಈ ಯೋಜನೆಯ ಲಾಭ ಪಡೆಯಬಹುದು. ಅರ್ಹತಾ ಮಾನದಂಡ: ಈ ಸಬ್ಸಿಡಿ ಪಡೆಯಲು, ಕನಿಷ್ಠ 50 ಹೆಣ್ಣು ಕತ್ತೆಗಳು ಮತ್ತು 5 ಗಂಡು ಕತ್ತೆಗಳನ್ನು ಒಳಗೊಂಡ ಸಾಕಾಣಿಕೆ ಘಟಕವನ್ನು ಸ್ಥಾಪಿಸುವುದು ಕಡ್ಡಾಯ.…
ಮೈಸೂರು: ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ಸಂಕಲನಕಾರರಾದ ನರಹಳ್ಳಿ ಜ್ಞಾನೇಶ್ (48) ಅವರು ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವರಾದ ಇವರು, ಕಾರ್ಯನಿಮಿತ್ತ ತಮ್ಮ ಸ್ವಗ್ರಾಮ ನರಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದ ಸಾಧನೆ: ಕಳೆದ ಎರಡು ದಶಕಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ಜ್ಞಾನೇಶ್ ಅವರು, ಹಿರಿಯ ಸಂಕಲನಕಾರ ಸುರೇಶ್ ಅರಸ್ ಅವರ ಗರಡಿಯಲ್ಲಿ ಪಳಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಹಲವಾರು ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಸಿನಿಮಾಗಳಿಗೆ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದರು. ವಿಶೇಷವಾಗಿ, ನಟ ಜಗ್ಗೇಶ್ ಅಭಿನಯದ ‘ಎದ್ದೇಳು ಮಂಜುನಾಥ’ ಚಿತ್ರದ ಅತ್ಯುತ್ತಮ ಸಂಕಲನಕ್ಕಾಗಿ ಇವರು ಪ್ರತಿಷ್ಠಿತ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗಷ್ಟೇ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿದ್ದ ಇವರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಪ್ರತಿನಿಧಿಸುವ ಮೂಲಕ ವಾಣಿಜ್ಯ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು.
ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಇಂಧನ ಇಲಾಖೆಗೆ ಭರಪೂರ ಅನುದಾನ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸದಾಗಿ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ಯನ್ನು ಘೋಷಿಸಿದ್ದಾರೆ. ಕೃಷಿ ಪಂಪ್‌ಸೆಟ್‌ಗಳು ಹಾಗೂ ಗೃಹಬಳಕೆಯ ಉಚಿತ ವಿದ್ಯುತ್ ಯೋಜನೆಗಳಿಗಾಗಿ (ಗೃಹ ಜ್ಯೋತಿ) ಒಟ್ಟಾರೆ ಬರೋಬ್ಬರಿ 30,000 ಕೋಟಿ ರೂ. (ನಿಖರವಾಗಿ 29,868 ಕೋಟಿ ರೂ.) ಮೀಸಲಿಟ್ಟಿರುವುದು ಈ ಬಜೆಟ್‌ನ ಪ್ರಮುಖ ಅಂಶವಾಗಿದೆ. ಪರಿಸರ ಸ್ನೇಹಿ ಇಂಧನ ಬಳಕೆ ಹಾಗೂ ಕೃಷಿ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ಸರ್ಕಾರ ಈ ಬೃಹತ್ ಯೋಜನೆಗಳನ್ನು ಪ್ರಕಟಿಸಿದೆ. ಹೊಸ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’: ಕುಸುಮ್-ಸಿ (Kusum-C) ಮಾದರಿಯಲ್ಲಿ ಈ ಹೊಸ ಯೋಜನೆ ಜಾರಿಗೆ ಬರಲಿದೆ. 10,500 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿಸಿಎಲ್ (KPTCL) ಉಪಕೇಂದ್ರಗಳಲ್ಲಿ 3,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ನೀರಾವರಿ ಪಂಪ್‌ಸೆಟ್‌ಗಳ ವಿಕೇಂದ್ರೀಕೃತ ಫೀಡರ್‌ಗಳಿಗೆ 2,777 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ ಕಾರ್ಯಗತಗೊಳಿಸಲಾಗುವುದು. ಉಚಿತ ವಿದ್ಯುತ್‌ಗೆ ಬೃಹತ್ ಅನುದಾನ: ರಾಜ್ಯದ 21…
ಬೆಂಗಳೂರು : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನು ಮುಂದೆ ಏಕೀಕೃತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ನಗರಾಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ನಗರಾಭಿವೃದ್ಧಿ ಹಾಗೂ ಆಸ್ತಿ ನಿರ್ವಹಣೆ ಏಕೀಕೃತ ಆಸ್ತಿ ತೆರಿಗೆ: ಇ-ಆಸ್ತಿ ತಂತ್ರಾಂಶದೊಂದಿಗೆ ಸಂಯೋಜಿಸಿ ಸ್ವಯಂ ಚಾಲಿತವಾಗಿ ತೆರಿಗೆ ಬೇಡಿಕೆ ಸೃಜಿಸುವ ‘ಯೂನಿಫೈಡ್ ಪ್ರಾಪರ್ಟಿ ಟ್ಯಾಕ್ಸ್’ (Unified Property Tax) ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಹೊಸ ನಿಯಮ ಜಾರಿ: ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಅನ್ನು ಜಾರಿಗೆ ತರಲಾಗುತ್ತಿದೆ. ಅಮೃತ್ ನಗರೋತ್ಥಾನ: ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ (ಹಂತ-4) ಮೂಲಸೌಕರ್ಯ ಅಭಿವೃದ್ಧಿಗೆ ಈ ಸಾಲಿನಲ್ಲಿ ₹500 ಕೋಟಿ ಅನುದಾನ ಮೀಸಲಿಡಲಾಗಿದೆ. ಮೂಲಸೌಕರ್ಯ ಮತ್ತು ಕುಡಿಯುವ ನೀರು ಬೆಂಗಳೂರಿಗೆ ಭರ್ಜರಿ ಅನುದಾನ: ರಾಜಧಾನಿಯ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ…
ಹೋಮ್ ಲೋನ್ ಪಡೆದು ಮನೆ ಅಥವಾ ಸೈಟ್ ಖರೀದಿಸಿದ ನಂತರ, ಅನಿವಾರ್ಯ ಕಾರಣಗಳಿಂದ ಅಥವಾ ಲಾಭದ ಉದ್ದೇಶದಿಂದ ಅದನ್ನು ಮಾರಾಟ ಮಾಡಬೇಕೆಂದು ಅನೇಕರು ಯೋಚಿಸುತ್ತಾರೆ. ಆದರೆ ಸಾಲದ ಹೊರೆ ಇರುವಾಗ ಆಸ್ತಿ ಮಾರಾಟ ಸಾಧ್ಯವೇ ಎಂಬ ಗೊಂದಲ ಇರುತ್ತದೆ. ಖಂಡಿತವಾಗಿಯೂ ಸಾಲವಿರುವ ಆಸ್ತಿಯನ್ನು ಕಾನೂನುಬದ್ಧವಾಗಿ ಮಾರಾಟ ಮಾಡಬಹುದು. ಅದರ ಸರಳ ಹಂತಗಳು ಇಲ್ಲಿವೆ. ಸಾಲವಿರುವ ಆಸ್ತಿ ಮಾರಾಟಕ್ಕೆ ಬ್ಯಾಂಕಿನ ಅನುಮತಿ ಕಡ್ಡಾಯ ನಿಮ್ಮ ಆಸ್ತಿಯ ಅಸಲು ದಾಖಲೆಗಳು ಬ್ಯಾಂಕಿನ ವಶದಲ್ಲಿರುವುದರಿಂದ, ಮಾರಾಟ ಮಾಡುವ ಮೊದಲು ಬ್ಯಾಂಕಿನಿಂದ ಸಮ್ಮತಿ ಪತ್ರ (Consent Letter) ಪಡೆಯುವುದು ಮೊದಲ ಕೆಲಸ. ಇದರಲ್ಲಿ ಬಾಕಿ ಇರುವ ಒಟ್ಟು ಸಾಲ ಮತ್ತು ದಾಖಲೆಗಳ ಪಟ್ಟಿಯ ವಿವರವಿರುತ್ತದೆ. ಮಾರಾಟದ ಪ್ರಕ್ರಿಯೆ ಹೇಗಿರುತ್ತದೆ? (Step-by-Step) • ಬ್ಯಾಂಕ್ ಅನುಮತಿ: ಸಾಲ ತೀರಿಸಲು ಬೇಕಾದ ಒಟ್ಟು ಮೊತ್ತದ (Foreclosure Statement) ವಿವರ ಪಡೆಯಿರಿ. • ಖರೀದಿದಾರರ ಆಯ್ಕೆ: ಖರೀದಿದಾರರು ತಮ್ಮ ಉಳಿತಾಯದಿಂದ ಹಣ ಪಾವತಿಸಬಹುದು ಅಥವಾ ಅದೇ ಬ್ಯಾಂಕ್/ಬೇರೆ ಬ್ಯಾಂಕ್‌ನಿಂದ ಲೋನ್ ಪಡೆಯಬಹುದು.…
ಎಲ್ಲಾ ಪಡಿತರ ಚೀಟಿದಾರರು ವಿವಿಧ ಕಾರಣಗಳಿಂದ ಆದ್ಯತಾ ಪಡಿತರ ಚೀಟಿಯು (ಬಿ.ಪಿ.ಎಲ್) ಆದ್ಯತೇತರ ಪಡಿತರ ಚೀಟಿಯಾಗಿ (ಎ.ಪಿ.ಎಲ್) ಪರಿವರ್ತಿತವಾಗಿದಲ್ಲಿ ಹಾಗೂ ಪಡಿತರ ಚೀಟಿದಾರರು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆ ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರುಗಳಿಗೆ ದಾಖಲೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನ್ನ ಸುವಿಧಾ ಯೋಜನೆಗೆ ನೋಂದಣಿಗೆ ಆಹ್ವಾನ ಅನ್ನಸುವಿಧಾ ಯೋಜನೆಯು ರಾಜ್ಯದ್ಯಂತ ಅನುಷ್ಠಾನಗೊಂಡಿದ್ದು, 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನ ಸುವಿಧಾ ಮಾಡ್ಯೂಲ್ನ ಮೂಲಕ ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ಪಡಿತರವನ್ನು ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 15,207 ಫಲಾನುಭವಿಗಳಿದ್ದು 3229 ಫಲಾನುಭವಿಗಳು ಅನ್ನ ಸುವಿಧ ಯೋಜನೆಯಡಿ ನೋಂದಾವಣೆ ಮಾಡಿಕೊಂಡಿರುತ್ತಾರೆ ಉಳಿದ 11,978 ಪಡಿತರ ಚೀಟಿದಾರರು ಮಾರ್ಚ್ 2026 ರ ಮಾಹೆಯ 1 ರಿಂದ 6ನೇ ತಾರೀಖಿನೊಳಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನೆ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾರ್ವಕಾಲಿಕ ದಾಖಲೆಯ 47 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೊಸ ಹುದ್ದೆಗಳ ಭರ್ತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ: 1. ಬೃಹತ್ ನೇಮಕಾತಿ ಅಭಿಯಾನ: ಶಿಕ್ಷಕರು ಮತ್ತು ಉಪನ್ಯಾಸಕರು: ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ (ಪಿಯು) ಕಾಲೇಜುಗಳಲ್ಲಿ ಖಾಲಿ ಇರುವ 15,000 ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸಹ ಪ್ರಾಧ್ಯಾಪಕರು: ಉನ್ನತ ಶಿಕ್ಷಣ ಇಲಾಖೆಯಡಿ 3,000 ಸಹ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. 2. ವಿದ್ಯಾರ್ಥಿ ಕಲ್ಯಾಣ ಮತ್ತು ಹೊಸ ಕಾಯ್ದೆ: ‘ರೋಹಿತ್ ವೇಮುಲ ಕಾಯ್ದೆ’: ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೊಳಿಸಲಾಗುವುದು.…
ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಬೊಕ್ಕಸದ ಮೇಲೆ ಆರ್ಥಿಕ ಹೊರೆಯಾಗಿದ್ದರೂ, ಅಭಿವೃದ್ಧಿಯೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಮುಖ್ಯಮಂತ್ರಿಗಳು ಈ ಆಯವ್ಯಯದಲ್ಲಿ ಯಶಸ್ವಿ ಪ್ರಯತ್ನ ನಡೆಸಿದ್ದಾರೆ. ಅಹಿಂದ ವರ್ಗ, ಕೃಷಿ, ಶಿಕ್ಷಣ, ಕೈಗಾರಿಕೆ, ಹಾಗೂ ಆರೋಗ್ಯ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳತ್ತ ಅವರು ವಿಶೇಷ ಗಮನಹರಿಸಿದ್ದಾರೆ. ಅನ್ನಭಾಗ್ಯದಡಿ ‘ಇಂದಿರಾ ಕಿಟ್’ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿ ಬದಲಿಗೆ, ಇನ್ನು ಮುಂದೆ ಪ್ರತಿ ತಿಂಗಳು ‘ಇಂದಿರಾ ಕಿಟ್’ ವಿತರಿಸಲಾಗುವುದು. ಈ ಕಿಟ್ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡಿರಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಬಜೆಟ್‌ನಲ್ಲಿ 6,200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳಿಗಾಗಿ ‘ಇಂದಿರಾ ಕ್ಯಾಂಟೀನ್’ ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳನ್ನು…
ಬೆಂಗಳೂರು: ಕಂದಾಯ ಇಲಾಖೆಯ ಸೇವೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ನಿಖರತೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಇಲಾಖೆಯ ಒಟ್ಟು 43 ಸೇವೆಗಳಿಗೆ ಇ-ಕೆವೈಸಿ (e-KYC) ಹಾಗೂ ಫೇಸ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯನ್ನು ಡಿಜಿಟಲೀಕರಣದತ್ತ ಕೊಂಡೊಯ್ಯುವ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು. ಬಜೆಟ್ ನಲ್ಲಿ ಕಂದಾಯ ಇಲಾಖೆಯ ಪ್ರಮುಖ ಘೋಷಣೆಗಳು: ₹50 ಕೋಟಿ ವೆಚ್ಚದಲ್ಲಿ ‘ಭೂಮಿ-8.0’ ಅಭಿವೃದ್ಧಿ: ಪ್ರಸ್ತುತ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ‘ಭೂಮಿ’ ತಂತ್ರಾಂಶವನ್ನು ಸಮಗ್ರವಾಗಿ ಆಧುನೀಕರಿಸಲಾಗುವುದು. 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದುವ ಸುಧಾರಿತ ‘ಭೂಮಿ-8.0’ ಸಾಫ್ಟ್‌ವೇರ್ ಅನ್ನು ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ದತ್ತಾಂಶಗಳ ಸಂಯೋಜನೆ: ‘ಕುಟುಂಬ’, ‘ಫ್ರೂಟ್ಸ್’ ಮತ್ತು ‘ಭೂಮಿ’ ತಂತ್ರಾಂಶಗಳ ದತ್ತಾಂಶಗಳನ್ನು ಒಗ್ಗೂಡಿಸಿ, ಉತ್ತಮ ನಿರ್ಣಯ ಕೈಗೊಳ್ಳಲು ನೆರವಾಗುವ ವ್ಯವಸ್ಥೆಯನ್ನು (Decision Support System) ಜಾರಿಗೆ…














