Author: kannadanewsnow57

ದಕ್ಷಿಣ ಆಫ್ರಿಕಾದಿಂದ ಅಪಘಾತದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬರುತ್ತಿದೆ. ದಕ್ಷಿಣ ಆಫ್ರಿಕಾದ ಗಣಿಯೊಂದರಲ್ಲಿ ಸಿಲುಕಿ ಕನಿಷ್ಠ 100 ಅಕ್ರಮ ಗಣಿಗಾರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ಈ ಎಲ್ಲಾ ಕಾರ್ಮಿಕರು ದಕ್ಷಿಣ ಆಫ್ರಿಕಾದ ಚಿನ್ನದ ಗಣಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದರು. ಈಗ ಈ ಕಾರ್ಮಿಕರಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿದೆ. https://twitter.com/TabZLIVE/status/1878902672264143222?ref_src=twsrc%5Etfw%7Ctwcamp%5Etweetembed%7Ctwterm%5E1878902672264143222%7Ctwgr%5E0690e0690827b0aa66c81819d0fde8a1292b44b1%7Ctwcon%5Es1_c10&ref_url=https%3A%2F%2Fapi-news.dailyhunt.in%2F ಗಣಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ಪ್ರತಿನಿಧಿಸುವ ಗುಂಪೊಂದು ಸೋಮವಾರ, ಈ ಕಾರ್ಮಿಕರು ತಿಂಗಳುಗಟ್ಟಲೆ ಭೂಗತ ಗಣಿಯಲ್ಲಿ ಸಿಕ್ಕಿಬಿದ್ದಿದ್ದರು ಎಂದು ಹೇಳಿದರು. ಬಹಳ ಹೊತ್ತು ಗಣಿಯಲ್ಲಿ ಸಿಲುಕಿದ್ದ ಅವರು ನಂತರ ಸಾವನ್ನಪ್ಪಿದರು. ಗಣಿಯಲ್ಲಿ ಸಿಲುಕಿದ್ದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸಿದರು ಆದರೆ ಅವರು ಯಶಸ್ವಿಯಾಗಲಿಲ್ಲ. ಗಣಿಗಾರಿಕೆ ಪೀಡಿತ ಸಮುದಾಯಗಳ ಯುನೈಟೆಡ್ ಇನ್ ಆಕ್ಷನ್ ಗುಂಪಿನ ವಕ್ತಾರ ಸಬೆಲೊ ಮ್ಂಗುನಿ, ಶುಕ್ರವಾರ ರಕ್ಷಿಸಲ್ಪಟ್ಟ ಕೆಲವು ಗಣಿಗಾರರೊಂದಿಗೆ ಮೇಲ್ಮೈಗೆ ಕಳುಹಿಸಲಾದ ಮೊಬೈಲ್ ಫೋನ್‌ನಲ್ಲಿ ಎರಡು ವೀಡಿಯೊಗಳಿವೆ ಎಂದು ಹೇಳಿದರು. ಈ ವೀಡಿಯೊದಲ್ಲಿ, ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಡಜನ್ಗಟ್ಟಲೆ…

Read More

ಬೆಂಗಳೂರು: ನಗರದ ಬಿಎಂಟಿಸಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಇಂದಿನಿಂದ ಜನವರಿ.30ರವರೆಗೆ “ನಮ್ಮ ಬಿಎಂಟಿಸಿ” ಮೊಬೈಲ್ ಅಪ್ಲಿಕೇಶನ್ನ ತಾತ್ಕಾಲಿಕ ಅಲಭ್ಯವಾಗಲಿದೆ. ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025 ರ ಜನವರಿ 15 ರಿಂದ 30 ರವರೆಗೆ “ನಮ್ಮ ಬಿಎಂಟಿಸಿ” ಮೊಬೈಲ್ ಅಪ್ಲಿಕೇಶನ್ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಯಪಡಿಸುತ್ತಿರುವುದಾಗಿ ಹೇಳಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ (Karnataka State Data Centre -KSDC) ಮೈಗ್ರೆಂಟ್ ಕೆಲಸ ನಡೆಯುತ್ತಿದೆ. ಈ ಕಾರಣದಿಂದ ಸಮಸ್ಯೆ ಎದುರಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ ( Bangalore Metropolitan Transport Corporation -BMTC) ಈ ಅವಧಿಯಲ್ಲಿ ಉಂಟಾದ ಯಾವುದೇ ಅನಾನುಕೂಲತೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ಪ್ರಯಾಣಿಕರ ತಿಳಿಯ ಪಡಿಸಲು ಬಯಸುತ್ತಿದ್ದೇವೆ ಎಂಬುದಾಗಿ ತಿಳಿಸಿದೆ. ನಮ್ಮ ಬಿಎಂಟಿಸಿ ಅಪ್ಲಿಕೇಷನ್ ತಾತ್ಕಾಲಿಕವಾಗಿ ಸ್ಥಗಿತದಿಂದ ಏನೆಲ್ಲ ಅಲಭ್ಯತೆ.? 1. ಲೈವ್ ಬಸ್ ಟ್ರ್ಯಾಕಿಂಗ್ ಲಭ್ಯವಿರಲ್ಲ 2. ಜರ್ನಿ ಪ್ಲ್ಯಾನರ್ ಸಿಗಲ್ಲ 3. ಶುಲ್ಕ ಕ್ಯಾಲ್ಕುಲೇಟರ್ ಮಾಡೋಕೆ ಆಗಲ್ಲ. 4.…

Read More

ಉತ್ತರ ಕನ್ನಡ: ಜಿಲ್ಲೆಯಲ್ಲಿ ಸಂಕ್ರಾಂತಿಯ ದಿನವಾದ ನಿನ್ನೆ ಭೀಕರ ದುರ್ಘಟನೆ ಸಂಭವಿಸಿದೆ. ಜಾತ್ರೆಯ ವೇಳೆಯಲ್ಲಿ ಜನರ ಮೇಲೆಯೇ ಕಾರು ನುಗ್ಗಿಸಲಾಗಿದ್ದು, ಓರ್ವ ಯುವತಿ ಸಾವನ್ನಪ್ಪಿ 8 ಭಕ್ತರು ಗಾಯಗೊಂಡಿರುವಂತ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿನ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲಿ ಭೀಕರ ದುರಂತ ಸಂಭವಿಸಿದೆ. ಜಾತ್ರೆಗಾಗಿ ನೆರಿದಿದ್ದಂತ ಜನರ ಮೇಲೆಯೇ ರೋಷನ್ ಫರ್ನಾಂಡಿಸ್ ಎಂಬಾತ ಕಾರು ನುಗ್ಗಿಸಿದ್ದಾನೆ. ಈ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಂತ ಯುವತಿಯೊಬ್ಬಳು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಪೊಲೀಸರು ಹಾಕಿದ್ದಂತ ಬ್ಯಾರಿಕೇಡ್ ಗೆ ಗುದ್ದಿದಂತ ಕಾರು ಚಾಲಕ ರೋಷನ್, ಜಾತ್ರೆಗೆ ಸೇರಿದ್ದಂತ ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆಯೇ ಹರಿಸಿದ್ದಾನೆ. ಇದರಿಂದಾಗಿ 8 ಭಕ್ತರಿಗೆ ಗಾಯವಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Read More

ಕಲಬುರಗಿ : ಇತ್ತೀಚಿಗೆ ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದ್ದು, ಎದೆನೋವಿನಿಂದ 17 ವರ್ಷದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ನಿವಾಸಿ ಕೊರೇಶ ಸಿದ್ದಣ್ಣ ಮದ್ರಿ (17) ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕಲಬುರಗಿಯಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಕೊರೇಶಗೆ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ನಾಲವಾರ ಸ್ಟೇಷನ್ ಖಾಸಗಿ ಆಸ್ಪತ್ರೆಗೆ ತೆರಳುವ ವೇಳೆ ದಾರಿ ಮಧ್ಯೆಯೇ ಹೃದಯಾಘಾತವಾಗಿದೆ. ಸ್ನೇಹಿತರು ಬೈಕ್ ನಿಲ್ಲಿಸಿ ಆಟೊ ಮೂಲಕ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಕೊರೇಶ ಮೃತಪಟ್ಟಿದ್ದು, ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read More

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿನ ಆಸ್ತಿಗಳ ನೋಂದಣಿಗೆ ಕಂದಾಯ ಇಲಾಖೆಯು ಇ-ಸ್ವತ್ತು ಕಡ್ಡಾಯಗೊಳಿಸಿರುವುದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಸುಮಾರು 90 ಲಕ್ಷ ಆಸ್ತಿಗಳಿಗೆ ಕಾಲಮಿತಿಯೊಳಗೆ ಇ-ಸ್ವತ್ತು ವಿತರಣೆ ಮಾಡಿ, ಆಸ್ತಿ ತೆರಿಗೆ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್‌ ರಾಜ್‌) ಉಮಾ ಮಹದೇವನ್‌ ಹಾಗೂ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿ, ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡದಿರಲು ಸೂಚಿಸಿದರಲ್ಲದೆ, ಹೊಸ ಬಡಾವಣೆಗಳ ನಿರ್ಮಾಣವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಹೇಳಿದರು. ಖಾತಾ ಇಲ್ಲದ ಬಹಳಷ್ಟು ಆಸ್ತಿಗಳ ಸಂಬಂಧ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಹಾಗೂ ಮನೆಗಳನ್ನು ನೋಂದಣಿ ಮಾಡುವ ಬಗ್ಗೆ ವರದಿಗಳು ಬರುತ್ತಿದ್ದು, ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದೂ ಸಚಿವರು ತಮ್ಮ ತಿಳಿಸಿದರು. ಸ್ಥಳೀಯ ಸಂಸ್ಥೆಗಳಾದ…

Read More

ಬೆಂಗಳೂರು: ರಾಜ್ಯದ ಅನೇಕ ಸರ್ಕಾರಿ ನೌಕರರಿಗೆ ತಮ್ಮ ವಿರುದ್ಧ ಸಾಬೀತಾದಂತ ಆರೋಪಗಳಿಗೆ ಯಾವೆಲ್ಲ ಶಿಕ್ಷೆ ಆಗಲಿವೆ ಅಂತ ಗೊತ್ತಿಲ್ಲ. ಇಂತಹ ರಾಜ್ಯ ಸರ್ಕಾರಿ ನೌಕರರಿಗೆ ನೌಕರನ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ಯಾವೆಲ್ಲ ದಂಡನೆಗಳನ್ನು ವಿಧಿಸಬಹುದಾಗಿದೆ ಅಂತ ಮುಂದೆ ಓದಿ. ಈ ಬಗ್ಗೆ 2001ರಲ್ಲಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಮಾಹಿತಿ ನೀಡಿದ್ದು, ಅದರಲ್ಲಿ ರಾಜ್ಯ ಸರ್ಕಾರಿ ನೌಕರನು ಸೇವೆಯಲ್ಲಿ ಎಸಗುವ ಅಪರಾಧಗಳ ಕುರಿತು ವಿಚಾರಣೆ ನಡೆಸಿ, ಸಾಬೀತಾದ ಪ್ರಕರಣಗಳಲ್ಲಿ ಆರೋಪಿ ನೌಕರನಿಗೆ ವಿಧಿಸಬಹುದಾದಂತಹ ದಂಡನೆಗಳ ಬಗ್ಗೆ ಕರ್ನಾಟಕ ಸಿವಿಲ್ ಸೇವಾ ನಿಯಮದಲ್ಲಿ ನಿರ್ದಿಷ್ಟ ಪಡಿಸಲಾಗಿದೆ ಅಂತ ತಿಳಿಸಿದ್ದಾರೆ. ಇನ್ನೂ ಸದರಿ ನಿಯಮದಲ್ಲಿ ಯಾವ ಆರೋಪಕ್ಕೆ ಯಾವ ಶಿಕ್ಷೆಯನ್ನು ವಿಧಿಸಬಹುದು ಎಂಬುದನ್ನು ನಿಗದಿಪಡಿಸಿರುವುದಿಲ್ಲ. ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ಆರೋಪದ ತೀವ್ರತೆಗಿಂತ ವಿಧಿಸಲಾದ ದಂಡನೆಗಳು ಕಡಿಮೆ ಅಥವಾ ಹೆಚ್ಚಿನದಾಗುವ, ಹೊಂದಿದ ಆರೋಪಗಳ ಶಿಸ್ತು ಪ್ರಾಧಿಕಾರಿಗಳು, ಹೋಲಿಸಬಹುದಾದಂತಹ ತೀವ್ರತೆಯನ್ನು ಹೊಂದಿದ ಆರೋಪಗಳ ಪ್ರಕರಣಗಳಲ್ಲಿ ಬೇರೆ ಬೇರೆ ದಂಡನೆಗಳನ್ನು…

Read More

ನವದೆಹಲಿ: ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳದ ಮೊದಲ ಅಮೃತ ಸ್ನಾನ ಮಾಡಿದ್ದಾರೆ. ನಿನ್ನೆ ಒಂದೇ ದಿನ 1 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ ನಂತರ, ಜನವರಿ 14 ರಂದು ಈ ವಿಶೇಷ ಕಾರ್ಯಕ್ರಮದಲ್ಲಿ 3.5 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ಮುಂಜಾನೆ, ಸಾಧುಗಳು ಮತ್ತು ನಾಗಾ ಸಾಧುಗಳು ಪವಿತ್ರ ಆಚರಣೆಯಲ್ಲಿ ಭಾಗವಹಿಸಿದ್ದರು. ಮಕರ ಸಂಕ್ರಾಂತಿಯು ದಕ್ಷಿಣದಿಂದ ಉತ್ತರ ಗೋಳಾರ್ಧಕ್ಕೆ ಸೂರ್ಯನ ಚಲನೆಯನ್ನು ಆಚರಿಸುತ್ತದೆ. ಈ ಪರಿವರ್ತನೆಯನ್ನು ಶುದ್ಧೀಕರಣ ಮತ್ತು ಆಧ್ಯಾತ್ಮಿಕ ನವೀಕರಣಕ್ಕೆ ಶುಭ ಸಮಯವೆಂದು ನೋಡಲಾಗುತ್ತದೆ. ಮುಂಬೈನ ಭಕ್ತೆ ಅಲ್ಕಾ ದದ್ವಾಲ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. “ಏಕತೆಯಲ್ಲಿ ವೈವಿಧ್ಯತೆ ಇದೆ… ಮಹಾ ಕುಂಭ ಮೇಳಕ್ಕೆ ಭೇಟಿ ನೀಡಲು ದೇಶದಾದ್ಯಂತದ ಜನರು ಬಂದಿದ್ದಾರೆ. ನಾನು ಇಲ್ಲಿಗೆ ಬಂದಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಮಕರ ಸಂಕ್ರಾಂತಿಯನ್ನು ಆಚರಿಸುವ ಸಂದರ್ಭವೂ ನನಗೆ ಸಿಕ್ಕಿತು” ಎಂದು ಅವರು ಎಎನ್ಐಗೆ…

Read More

ಶಿವಮೊಗ್ಗ : ಕಚೋರಿ ವ್ಯಾಪಾರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರದ ಮುರುಡೇಶ್ವರ ದೇವಾಲಯದ ಬಳಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಸ್ತೂರ ಬಾ ರಸ್ತೆ ಮುರುಡೇಶ್ವರ ದೇವಸ್ಥಾನದ ಬಳಿ ಕಚೋರಿ ಮಾರುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕಚೋರಿ ಮಾರಾಟ ಮಾಡುವ ಹೀರಾಲಾಲ್ ಎಂಬುವರಿಗೆ ವಿಳಾಸ ಕೇಳುವ ನೆಪದಲ್ಲಿ ಬಂದು ಚಾಕು ಇರಿದು ಪರಾರಿಯಾಗಿದ್ದಾರೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕೋಟೆ ಗಂಗೂರಿನ ವ್ಯಕ್ತಿಗಳು ಎನ್ನಲಾಗಿದ್ದು. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯವಿಭಾಗದ ಎನ್-7ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 16.01.2025 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 16 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ “ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್0, ಬಿ-ನಗರ, ಲಕ್ಷ್ಮೀ ನಗರ, ಹೆಚ್.ವಿ.ಕೆ.ಲೌಟ್. , ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಕಛೇರಿ ಸುತ್ತಮುತ್ತ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋಡಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಂಸಲೇಕಾ ಹೋಮ್ ಸುತ್ತಮುತ್ತ, ಶಂಕರಮಾತಾ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿ ನಗರ 2ನೇ ಬ್ಲಾಕ್, ಇ.ಎಸ್.ಐ.ಹೋಸ್ಪಿಟ್.…

Read More

ಬೆಂಗಳೂರು : 01.04.2006 ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಡಿಫೈನ್ಸ್ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ ಇಲಾಖೆಯಲ್ಲಿ ರ್ಯನಿರ್ವಹಿಸುತ್ತಿರುವ ಶ್ರೀ/ಶ್ರೀಮತಿ……ದಿನಾಂಕ……. ಪ್ರಪ್ರಥಮವಾಗಿ ಹುದ್ದೆಗೆ ಇಲಾಖೆಯಲ್ಲಿ ರಂದು ಸರ್ಕಾರಿ ಸೇವೆಯಲ್ಲಿ ವರದಿ ಮಾಡಿಕೊಂಡಿರುವ. ಈ ಹುದ್ದೆಗೆ ನೇಮಕಾತಿ ಅಧಿಸೂಚನೆಯ ಪ್ರಕಟಣೆಯನ್ನು ದಿನಾಂಕ: ರಂದು ಹೊರಡಿಸಲಾಗಿರುತ್ತದೆ. ಉಲ್ಲೇಖಿತ ಆದೇಶದನ್ವಯ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಲು ಅರ್ಹವಿರುವುದರಿಂದ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೊಳಪಡಿಸಲು ಅರ್ಜಿ ಸಲ್ಲಿಸಬಹುದು. ಡಿಫೈನ್ಸ್ ಪಿಂಚಣಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ 1. ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕ ಪ್ರತಿ 2. ಸಂಬಂಧಪಟ್ಟ ಆಯ್ಕೆ ಪಟ್ಟಿ ದಿನಾಂಕ ಪ್ರತಿ 3. ನೇಮಕಾತಿ ಆದೇಶ ದಿನಾಂಕ ಪ್ರತಿ 4. ನೇಮಕಾತಿಯ ನಂತರ ಇಲಾಖೆ ಬದಲಾವಣೆಯಾಗಿದೆಯೇ?…

Read More