Subscribe to Updates
Get the latest creative news from FooBar about art, design and business.
Author: kannadanewsnow57
ಇಂದಿನ ಕಾಲದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಬಹಳ ಸಾಮಾನ್ಯವಾಗಿದೆ. ಮಾಲಿನ್ಯ, ಕೆಟ್ಟ ಆಹಾರ ಪದ್ಧತಿ ಮತ್ತು ಆಧುನಿಕ ಜೀವನಶೈಲಿಯಿಂದಾಗಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಪ್ರತಿದಿನ ಹೃದಯಾಘಾತದಿಂದ ಜನರು ಸಾಯುತ್ತಿದ್ದಾರೆ. ಈ ಮಧ್ಯೆ, ಹೃದಯಾಘಾತಕ್ಕೆ ಸಂಬಂಧಿಸಿದ ಸಂಶೋಧನೆಯೊಂದರಲ್ಲಿ ಹೊಸದೊಂದು ಅಂಶ ಬಹಿರಂಗವಾಗಿದೆ. ಈ ಅಧ್ಯಯನವು ಯಾವ ರಕ್ತದ ಗುಂಪಿನ ಜನರಿಗೆ ಹೃದಯಾಘಾತವಾಗುವ ಅಪಾಯ ಹೆಚ್ಚು ಎಂದು ಹೇಳುತ್ತದೆ. ಎ ಮತ್ತು ಬಿ ರಕ್ತದ ಗುಂಪುಗಳನ್ನು ಹೊಂದಿರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಹೃದಯಾಘಾತ ಮತ್ತು ರಕ್ತದ ಗುಂಪಿನ ಕುರಿತು ನಡೆಸಿದ ಸಂಶೋಧನೆಯಲ್ಲಿ, ಸಂಶೋಧಕರು ‘O’ ರಕ್ತದ ಗುಂಪಿನಲ್ಲದ ಜನರು ಹೃದಯಾಘಾತದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಕಂಡುಕೊಂಡಿದ್ದಾರೆ. ಈ ಹೊಸ ಅಧ್ಯಯನದಲ್ಲಿ, ಯಾವ ರಕ್ತದ ಗುಂಪುಗಳಿಗೆ ಹೃದಯಾಘಾತವಾಗುವ ಅಪಾಯ ಹೆಚ್ಚು ಅಥವಾ ಕಡಿಮೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಇದರಲ್ಲಿ, ಎ ಮತ್ತು ಬಿ ರಕ್ತದ ಗುಂಪುಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ಕಂಡುಬಂದಿದೆ. ‘O’ ರಕ್ತದ ಗುಂಪು ಇರುವವರಿಗೆ ಕಡಿಮೆ…
ಬೆಂಗಳೂರು : ಬೆಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪತ್ನಿಯನ್ನು ಹೆದರಿಸಲು ನೇಣು ಬಿಗಿದುಕೊಳ್ಳಲು ಹೋಗಿ ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಂದಕುಮಾರ್ ಎಂಬಾತ ಪತ್ನಿ ಪವಿತ್ರಾರನ್ನು ಹೆದರಿಸಲು ಹೋಗಿ ನೇಣು ಹಾಕಿಕೊಂಡಿದ್ದು, ಬಳಿಕ ನಂದಕುಮಾರ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಸಂಕ್ರಾಂತಿ ಹಬ್ಬದ ದಿನವೇ ಕುಡಿದು ಬಂದಿದ್ದೀರಾ ಅಂತ ಹೆಂಡತಿ ಪವಿತ್ರಾ ಗಂಡನೊಂದಿಗೆ ಜಗಳ ಮಾಡಿದ್ದು, ಹೆಂಡತಿಗೆ ಹೆದರಿಸುವ ಸಲುವಾಗಿ ನೇಣು ಬಿಗಿದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ನಿದ್ದೆ ಮಾಡದೇ ತಡರಾತ್ರಿಯವರೆಗೂ ರೀಲ್, ಶಾರ್ಟ್ಸ್ ನೋಡುವವರಿಗೆ ಹೈ ಬಿಪಿ ಕಾಡುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಅಧ್ಯಯನಕ್ಕೆ ಸಂಬಂಧಿಸಿದಂತೆ 4,318 ಮಧ್ಯವಯಸ್ಕರನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ. ರೀಲು, ಶಾರ್ಟ್ಸ್ ನೋಡುತ್ತಾ ರಾತ್ರಿ ಕಳೆಯುವವರ ರಕ್ತದೊತ್ತಡದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಇವರೆಲ್ಲರೂ ಅಧಿಕ ಬಿಪಿಯಿಂದ ಬಳಲುತ್ತಿರುವುದು ಕಂಡುಬಂದಿದೆ. ಈ ಸಮಸ್ಯೆಯು ವಿಶೇಷವಾಗಿ ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಈ ಸಂಶೋಧನೆಯು ಬಹಿರಂಗಪಡಿಸಿದೆ. ಚೀನಾದಲ್ಲಿ ನಡೆದ ಈ ಅಧ್ಯಯನದ ಫಲಿತಾಂಶವನ್ನು ಎಚ್ಚರಿಕೆಯಾಗಿ ತೆಗೆದುಕೊಳ್ಳಬೇಕು ಎಂದು ನೆಟಿಜನ್‌ಗಳು ಹೇಳುತ್ತಾರೆ. ಒಮ್ಮೆ ಬಿಪಿ ಹೆಚ್ಚಾದರೆ ಜೀವನ ಪರ್ಯಂತ ಬಿಪಿ ನಿಯಂತ್ರಣಕ್ಕೆ ಔಷಧಿ ಜತೆಗೆ ಸೂಕ್ತ ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ವೈದ್ಯರು. https://twitter.com/DrDeepakKrishn1/status/1877896221630644643?ref_src=twsrc%5Etfw%7Ctwcamp%5Etweetembed%7Ctwterm%5E1877896221630644643%7Ctwgr%5Ef0b4b60a2649c56b9dd6c5400554c4e67988d0c9%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Ftelugu%2Fhmtvtelugu-epaper-dh179dcd49bfd74fd0983ce602f85b0433%2Fraatriputanidrapokundarilsshaartschustunnaaraaiteeedenjartappadu-newsid-n647579912 ಇತ್ತೀಚೆಗೆ ರೀಲ್‌ಗಳು ಮತ್ತು ಕಿರುಚಿತ್ರಗಳನ್ನು ನೋಡುವುದು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ ಎಂಬ ಬಲವಾದ ಅಭಿಪ್ರಾಯವಿದೆ. ಗುರಿಯೇ ಇಲ್ಲದವರು ಪ್ರತಿನಿತ್ಯ ಗಂಟೆಗಟ್ಟಲೆ ರೀಲು, ಕಿರುಚಿತ್ರಗಳನ್ನು ನೋಡುತ್ತಾ ಸಮಯ ಹಾಳು ಮಾಡಿಕೊಳ್ಳುತ್ತಾರೆ ಎಂದು ಹಲವು ಬುದ್ಧಿಜೀವಿಗಳು ಸಾಮಾಜಿಕ…
ಒಂದು ಮಂತ್ರ ಸಾಕು ಸಾಲ ತೀರುತ್ತೆ. ಈ ಮಂತ್ರ ಹೇಳಿದರೆ ಮೂವತ್ತು ದಿನಗಳಲ್ಲಿ ಸಾಲ ತೀರುತ್ತೆ ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನು ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕಾಲಭೈರವ ಅಂದ್ರೆ ಶಿವನ ಸ್ವರೂಪ. 64 ಭೈರವ ರೂಪದಲ್ಲಿ ಕಾಲಭೈರವನೇ ಪ್ರಮುಖವಾದವನು. ಕಾಲ ಅಂದ್ರೆ ಸಮಯವನ್ನು ಸೂಚಿಸುವವನು ಎಂದರ್ಥ. ಭೈರವನ ಪೂಜೆ ಮಾಡೋದ್ರಿಂದ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವ ಮಾತೊಂದಿದೆ. ಕೆಲವರಿಗೆ ರಾಜಯೋಗವಿದ್ದರೂ ಫಲಗಳು ಲಭಿಸುವುದಿಲ್ಲ. ಅಂದುಕೊಂಡ ಕಾರ್ಯ ಸಿದ್ಧಿಸುವುದಿಲ್ಲ. ಹಾಗಾಗಲೂ ಕಾರಣವೇನು? ಜ್ಯೋತಿಷ್ಯಶಾಸ್ತ್ರ ಹೇಳುವುದೇನು?ಉನ್ನತ ಸ್ಥಾನ ಅಲಂಕರಿಸಲು ರಾಜಯೋಗವೇ ಮೂಲ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಉನ್ನತ ಸ್ಥಾನ ಏರುವುದೆಂದರೆ ಆಡಳಿತದ ಸೂತ್ರ ಹಿಡಿಯುವುದೆಂದಷ್ಟೇ ಅರ್ಥವಲ್ಲ. ಜೀವನದಲ್ಲಿ ಮೇಲೆ ಬರುವುದು, ಅಂದುಕೊಂಡ ಕೆಲಸವನ್ನು ಸಾಧಿಸುವುದಕ್ಕೂ ಅನ್ವಯಿಸಬಹುದು. ಉದಾಹರಣೆಗೆ ಇತ್ತೀಚೆಗೆ ತಾನೇ ಪಂಚರಾಜ್ಯ ಚುನಾವಣೆಗಳು ನಡೆದಿವೆ. ಅದೆಷ್ಟೋ ಎಂಎಲ್‌ಎಗಳು ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ದಿಸೆಯಲ್ಲಿ ಅವರು ಸಾಕಷ್ಟು ಪ್ರಯತ್ನವನ್ನು, ಸಾಧ್ಯವಾದಷ್ಟು ಪ್ರಭಾವವನ್ನು ಬೀರುತ್ತಾರೆ. ಆದಾಗ್ಯೂ ಕೆಲವೊಮ್ಮೆ ಅಧಿಕಾರದ ನಿರೀಕ್ಷೆ ಕೈಗೆ ಎಟುಕದ ದ್ರಾಕ್ಷಿಯಂತಾಗುತ್ತದೆ. ಮಂತ್ರಿಯಾಗುವ ಯೋಗ ಕೆಲವರಿಗೆ ತಾನಾಗೇ ಹುಡುಕಿಕೊಂಡು ಬರುತ್ತದೆ. ಅದು ಹೇಗೆ? ಕೆಲವರು ಜಾತಕದಲ್ಲಿನ ರಾಜಯೋಗ, ಗಜಕೇಸರಿಯೋಗಕ್ಕೂ ಅಧಿಕಾರ ಗ್ರಹಣಕ್ಕೂ ತಾಳೆ ಹಾಕುತ್ತಾರೆ. ಜ್ಯೋತಿಷ್ಯದ ಲೆಕ್ಕಾಚಾರದ ರೀತ್ಯ ಗುರು ಮಕರ ರಾಶಿಯಲ್ಲಿ…
ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಗೃಹ ಸಚಿವಾಲಯ (ಎಂಎಚ್ಎ) ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮೋದನೆ ನೀಡಿದೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಜಯ್ ಕುಮಾರ್ ಸಕ್ಸೇನಾ ಅನುಮತಿ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ಕಳೆದ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಆದೇಶವೊಂದರಲ್ಲಿ ಸಾರ್ವಜನಿಕ ಸೇವಕರನ್ನು ವಿಚಾರಣೆಗೆ ಒಳಪಡಿಸುವ ಮೊದಲು ಜಾರಿ ನಿರ್ದೇಶನಾಲಯವು ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿತ್ತು. ಪ್ರಾಸಿಕ್ಯೂಷನ್ ದೂರು ದಾಖಲಿಸುವ ಮೊದಲು ಅಧಿಕಾರಿಗಳ ಪೂರ್ವಾನುಮತಿ ಪಡೆಯದ ಕಾರಣ ತನ್ನ ಮತ್ತು ಇತರರ ವಿರುದ್ಧ ಇಡಿ ಚಾರ್ಜ್ಶೀಟ್ ಕಾನೂನುಬಾಹಿರ ಎಂದು ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 2024 ರ ಡಿಸೆಂಬರ್ನಲ್ಲಿ, ಜಾರಿ ನಿರ್ದೇಶನಾಲಯವು ಲೆಫ್ಟಿನೆಂಟ್ ಗವರ್ನರ್ಗೆ ಪತ್ರ ಬರೆದು, ಕೇಜ್ರಿವಾಲ್ “ಕಿಂಗ್ಪಿನ್ ಮತ್ತು ಪ್ರಮುಖ ಪಿತೂರಿಗಾರ” ಆಗಿರುವುದರಿಂದ ಅನುಮತಿ ನೀಡಬೇಕು ಎಂದು ಹೇಳಿದೆ. ಮದ್ಯ…
ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಪತ್ನಿ ಸೇರಿ ಮೂವರಿಗೆ ಚಾಕು ಇರಿದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪದಲ್ಲಿ ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬ ಪತ್ನಿ ಮತ್ತು ಮನೆಯವರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಪತ್ನಿ ಮಮ್ತಾಜ್, ಅತ್ತೆ ಶಬೀನಾ, ಅಣ್ಣ ಅರ್ಬಾಜ್ ಅವರಿಗೆ ಅಜರುದ್ದೀನ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಯುವತಿಯ ಜೊತೆಗೆ ಅಜರುದ್ದೀನ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಗಲಾಟೆಯಾಗಿ ಪತ್ನಿ ಸೇರಿ ಮೂವರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕನ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಚಾಲಕ ಶಿವ ಪ್ರಸಾದ್ ಹಿಟ್ & ರನ್ ಕೇಸ್ ದಾಖಲಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕ ತಮ್ಮನ್ನು ಓವರ್ ಟೇಕ್ ಮಾಡುವ ಪ್ರಯತ್ನದಲ್ಲಿ ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾಯವಾಗಿದೆ ಎಂದು ಕಾರಿನ ಚಾಲಕ ಜಿ ಶಿವಪ್ರಸಾದ್ ಅವರು ದೂರು ನೀಡಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.‘ನಾನು ಸಚಿವರ ಸರ್ಕಾರಿ ಕಾರು ಚಲಾಯಿಸುತ್ತಿದ್ದೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಕಂಟೇನರ್ ಟ್ರಕ್ ಹೋಗುತ್ತಿತ್ತು. ಅದರ ಚಾಲಕ ಯಾವುದೇ ಮುನ್ಸೂಚನೆ ಕೊಡದೆ ಎಡಬದಿಗೆ ಬಂದನು. ಕಾರನ್ನು ಎಡಬದಿಗೆ ತೆಗೆದುಕೊಂಡರೂ ಅದರ ಬಲಬದಿಗೆ…
ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಲು ವಿವಿಧ ರೀತಿಯ ಗಡ್ಡವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಆದರೆ ಅನೇಕ ಜನರು ಕ್ಲೀನ್ ಶೇವ್ ಲುಕ್ ಅನ್ನು ಇಟ್ಟುಕೊಳ್ಳುತ್ತಾರೆ. ಜನರು ತಮ್ಮ ದೇಹದ ಪ್ರಕಾರ ಮತ್ತು ಉದ್ಯೋಗಕ್ಕೆ ಅನುಗುಣವಾಗಿ ತಮ್ಮ ಗಡ್ಡದ ಲುಕ್ ಸಹ ಬದಲಾಯಿಸಬೇಕಾಗುತ್ತದೆ. ಹಲವರಿಗೆ ಪ್ರತಿದಿನ ಬೆಳಗ್ಗೆ ಎದ್ದ ನಂತರ ಗಡ್ಡ ಬೋಳಿಸುವ ಅಭ್ಯಾಸವಿದ್ದರೆ ಇನ್ನು ಕೆಲವರು ತಿಂಗಳುಗಟ್ಟಲೆ ಗಡ್ಡ ಬೋಳಿಸಿಕೊಳ್ಳುವುದಿಲ್ಲ. ಗಡ್ಡವನ್ನು ಬೋಳಿಸುವುದು ಪುರುಷರಿಗೆ ಸಾಮಾನ್ಯ ವಿಷಯವಾಗಿದೆ, ಆದರೆ ಪ್ರತಿದಿನ ಗಡ್ಡವನ್ನು ಬೋಳಿಸುವುದು ಪ್ರಯೋಜನಕಾರಿ ಅಥವಾ ಹಾನಿಕಾರಕವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಚರ್ಮ ರೋಗ ತಜ್ಞರ ಪ್ರಕಾರ, ಗಡ್ಡವನ್ನು ಇಟ್ಟುಕೊಳ್ಳುವುದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಆದರೆ ಗಡ್ಡ ದೊಡ್ಡದಾಗಿದ್ದರೆ ಅದನ್ನು ಪ್ರತಿದಿನ ಚೆನ್ನಾಗಿ ತೊಳೆಯಬೇಕು. ದಿನದ ಗಡಿಬಿಡಿಯಲ್ಲಿ, ಧೂಳು, ಸೂಕ್ಷ್ಮಜೀವಿಗಳು, ಎಣ್ಣೆ ಮತ್ತು ಸತ್ತ ಚರ್ಮದ ಜೀವಕೋಶಗಳು ಮುಖದ ಮೇಲೆ ಸಂಗ್ರಹವಾಗುತ್ತವೆ, ಅದನ್ನು ಫೇಸ್ ವಾಶ್ ಅಥವಾ ಕ್ಲೆನ್ಸರ್ನಿಂದ ತೊಳೆಯಬೇಕು. ನಿಮ್ಮ ಗಡ್ಡವನ್ನು ಬೆಳೆಸುವುದು ಮತ್ತು ಅದನ್ನು ಪ್ರತಿದಿನ…
ಕಲಬುರ್ಗಿ : ತನ್ನ ಬಾಲ್ಯದ ಗೆಳೆಯನೊಬ್ಬ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಆತನದ್ದೇ ನೆನಪಿನಲ್ಲಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳದ ಶಿವರಾಜ ಮಡಿವಾಳ (22) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದುಬಂದಿದೆ. ಬಾಲ್ಯ ಸ್ನೇಹಿತ ಪ್ರವೀಣ್ ಚವ್ಹಾಣ್ ಎರಡು ತಿಂಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇದರಿಂದ ಮನನೊಂದ ಶಿವರಾಜ ಮಡಿವಾಳ ಭಾನುವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಶಿವರಾಜ ಕೆಲಸಕ್ಕಾಗಿ ಮಹಾರಾಷ್ಟ್ರದ ಪುಣೆಗೆ ತೆರಳಿ ಅಲ್ಲಿಯೇ ಕುಟುಂಬಸ್ಥರ ಜತೆಗೆ ವಾಸವಾಗಿದ್ದರು. ಗೆಳೆಯನ ಸಾವಿನಿಂದ ಶಿವರಾಜ ಬಹಳಷ್ಟು ಮಾನಸಿಕವಾಗಿ ನೊಂದಿದ್ದ. ಬ್ಯಾಂಕ್ ಕೆಲಸಕ್ಕೆಂದು ಕಲಬುರಗಿಗೆ ಬಂದಿದ್ದ ಶಿವರಾಜ ಸ್ಟೇಷನ್ ಪ್ರದೇಶದ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.ಆತ್ಮಹತ್ಯೆ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












