Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಮುಂಬರುವ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಮೆಟ್ರೋ ಹಂತ-3, ಜೆಪಿನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕ ಬದಲಾವಣೆ ಮಾಡಲಾಗಿದ್ದು, ಮಾರುಕಟ್ಟೆ ಶುಲ್ಕ 41 ಪೈಸೆಯಿಂದ 42 ಪೈಸೆಗೆ ಹೆಚ್ಚಳ ಮಾಡಲಾಗುವುದು, ವಹಿವಾಟು ವೆಚ್ಚ 0.01 ಪೈಸೆಗೆ ಹೆಚ್ಚಳ ಮಾಡಿ ಮಾರ್ಪಾಡು ಮಾಡಲಾಗುವುದು ಎಂದು ಹೇಳಿದ್ದಾರೆ. ಆಶಾ ಕಿರಣ ಯೋಜನೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸಲು 52.85 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಣ್ಣಿನ ಉಚಿತ ತಪಾಸಣೆಯೇ ಆಶಾಕಿರಣ…
ಬೆಂಗಳೂರು : ಬೆಂಗಳೂರಿನಲ್ಲಿ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಮೆಟ್ರೋ ಹಂತ-3, ಜೆಪಿನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕ ಬದಲಾವಣೆ ಮಾಡಲಾಗಿದ್ದು, ಮಾರುಕಟ್ಟೆ ಶುಲ್ಕ 41 ಪೈಸೆಯಿಂದ 42 ಪೈಸೆಗೆ ಹೆಚ್ಚಳ ಮಾಡಲಾಗುವುದು, ವಹಿವಾಟು ವೆಚ್ಚ 0.01 ಪೈಸೆಗೆ ಹೆಚ್ಚಳ ಮಾಡಿ ಮಾರ್ಪಾಡು ಮಾಡಲಾಗುವುದು ಎಂದು ಹೇಳಿದ್ದಾರೆ. ಆಶಾ ಕಿರಣ ಯೋಜನೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸಲು 52.85 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಣ್ಣಿನ ಉಚಿತ ತಪಾಸಣೆಯೇ ಆಶಾಕಿರಣ ಯೋಜನೆಯಾಗಿದೆ. ಅಂಧತ್ವ ನಿವಾರಣಾ ಕಾರ್ಯಕ್ರಮವನ್ನೂ ಒಳಗೊಂಡ…
ಬೆಂಗಳೂರು : ರಾಜ್ಯ ಸರ್ಕಾರದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕ ಬದಲಾವಣೆ ಮಾಡಲಾಗಿದ್ದು, ಮಾರುಕಟ್ಟೆ ಶುಲ್ಕ 41 ಪೈಸೆಯಿಂದ 42 ಪೈಸೆಗೆ ಹೆಚ್ಚಳ ಮಾಡಲಾಗುವುದು ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕ ಬದಲಾವಣೆ ಮಾಡಲಾಗಿದ್ದು, ಮಾರುಕಟ್ಟೆ ಶುಲ್ಕ 41 ಪೈಸೆಯಿಂದ 42 ಪೈಸೆಗೆ ಹೆಚ್ಚಳ ಮಾಡಲಾಗುವುದು, ವಹಿವಾಟು ವೆಚ್ಚ 0.01 ಪೈಸೆಗೆ ಹೆಚ್ಚಳ ಮಾಡಿ ಮಾರ್ಪಾಡು ಮಾಡಲಾಗುವುದು ಎಂದು ಹೇಳಿದ್ದಾರೆ. ಆಶಾ ಕಿರಣ ಯೋಜನೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸಲು 52.85 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಣ್ಣಿನ ಉಚಿತ ತಪಾಸಣೆಯೇ ಆಶಾಕಿರಣ ಯೋಜನೆಯಾಗಿದೆ. ಅಂಧತ್ವ ನಿವಾರಣಾ ಕಾರ್ಯಕ್ರಮವನ್ನೂ ಒಳಗೊಂಡ ಯೋಜನೆಗೆ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ `ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ತಾಲೂಕಿನ…
ಬೆಂಗಳೂರು : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, `ಆಶಾ ಕಿರಣ ಯೋಜನೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಆಶಾ ಕಿರಣ ಯೋಜನೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸಲು 52.85 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಣ್ಣಿನ ಉಚಿತ ತಪಾಸಣೆಯೇ ಆಶಾಕಿರಣ ಯೋಜನೆಯಾಗಿದೆ. ಅಂಧತ್ವ ನಿವಾರಣಾ ಕಾರ್ಯಕ್ರಮವನ್ನೂ ಒಳಗೊಂಡ ಯೋಜನೆಗೆ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ `ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ `ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕರ್ನಾಟಕ ಗೃಹ ಮಂಡಳಿಯಿಂದ 65 ಕೋಟಿ ರೂ. ಮೊತ್ತದಲ್ಲಿ 25 ಎಕರೆ ಜಮೀನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.
ಬಳ್ಳಾರಿ : ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವುದರ ಜೊತೆಗೆ ಪರಿಸರ ಪ್ರಚಾರ ಮತ್ತು ಸಂರಕ್ಷಣೆಯ ಕಡೆಗೆ ಸಕ್ರಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಕರ್ನಾಟಕದ ರಾಜ್ಯದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಹೇಳಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛವಾಗಿಡಲು ಒಂದು ಅಥವಾ ಎರಡು ತಿಂಗಳಿಗೊಮ್ಮೆ ಸ್ವಚ್ಛತಾ ಅಭಿಯಾನ ನಡೆಸಬೇಕು ಎಂದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿರುವಂತೆ “ರಾಷ್ಟçಗಳು ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಮಿಸಲ್ಪಟ್ಟಿವೆ” ಎಂಬ ಈ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ವಿಶ್ವವಿದ್ಯಾಲಯಗಳನ್ನು ಶ್ರೇಷ್ಠತೆಯ ಸಂಸ್ಥೆಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಿರಬೇಕು. ಇದಕ್ಕಾಗಿ ವಿಶ್ವವಿದ್ಯಾಲಯಗಳನ್ನು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡುವ ಮತ್ತು ಅಂತರ-ಶಿಸ್ತಿನ ಹಾಗೂ ಅಂತರ-ವಿಶ್ವವಿದ್ಯಾಲಯ ಸಹಯೋಗವನ್ನು ಉತ್ತೇಜಿಸುವ ಕಡೆಗೆ ಕೆಲಸ ಮಾಡುವ ಅವಶ್ಯಕತೆಯಿದೆ ಎಂದರು. 21 ನೇ ಶತಮಾನದ ಅಗತ್ಯವೆಂದರೆ ಡಿಜಿಟಲ್ ಸಾಕ್ಷರತೆ, ನವೀನ ಚಿಂತನೆ, ಜಾಗತಿಕ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯ…
ಬೆಂಗಳೂರು : ಬೆಂಗಳೂರಲ್ಲಿ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣ ಸಂಬಂಧ ಇಂದು ಆರೋಪಿ ಜಗದೀಶ್ ನನ್ನು 5 ದಿನ CID ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿ ಜಗದೀಶ್ ನನ್ನು 5 ದಿನ CID ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಂತ ಜಗದೀಶ್ ನನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಐಡಿ ವಶಕ್ಕೆ ಪಡೆದಿತ್ತು. ಆತನ ವಿರುದ್ಧ ಕೊಲೆ ಕೇಸ್, ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕಳೆದ ಜುಲೈ.15ರಂದು ಬೆಂಗಳೂರಿನ ಭಾರತಿನಗರದಲ್ಲಿ ಬಿಕ್ಲು ಶಿವ ಕೊಲೆಯಾಗಿತ್ತು. ಈ ಕೊಲೆಯಲ್ಲಿ ಜಗದೀಶ್ ಎ.1 ಆರೋಪಿಯಾಗಿದ್ದರು. ಕೊಲೆಯ ಬಳಿಕ ಚೆನ್ನೈ ಏರ್ ಪೋರ್ಟ್ ಮೂಲಕ ದುಬೈಗೆ ಎಸ್ಕೇಪ್ ಆಗಿದ್ದನು.
ಹುಬ್ಬಳ್ಳಿ : ಹುಬ್ಬಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಹುಬ್ಬಳ್ಳಿ ಪೊಲೀಸರು ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕಿಂಗ್ ಪಿನ್ ಸಚಿನ್ ಕಬ್ಬೂರ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಅಕ್ರಮಾವಾಗಿ ಸಾಗಿಸುತ್ತಿದ್ದ 49 ಟನ್ ಅನಭಾಗ್ಯ ಅಕ್ಕಿ ಸೀಜ್ ಮಾಡಲಾಗಿತ್ತು. 2 ಲಾರಿ ಸೇರಿ ಹಲವು ವಾಹನ, 9 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಅಕ್ರಮದ ಕಿಂಗ್ ಪಿನ್ ಸಚಿನ್ ಕಬ್ಬೂರ್ ತಲೆಮರೆಸಿಕೊಂಡಿದ್ದ. ಈತ ಮೂಲತಃ ಹಾವೇರಿ ಜಿಲ್ಲೆಯವನು. ದೊಡ್ಡ ಅಪರಾಧ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದಾನೆ. ಆತನ ಲೊಕೇಶನ್ ಭಾರತದಲ್ಲಿಯೇ ಕಂಡುಬರುತ್ತಿತ್ತು. ಆದರೆ ಆತ ದುಬೈನಲ್ಲಿ ವಾಸವಾಗಿದ್ದ. ಸದ್ಯ ಸಚಿನ್ ಕಬ್ಬೂರ್ ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರೀಚಾರ್ಜ್ ಮಾಡದೆ ಸಿಮ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆಯೇ? ನಿಷ್ಕ್ರಿಯಗೊಂಡ ಸಿಮ್ ಕಾರ್ಡ್ ಅನ್ನು ಮರಳಿ ಪಡೆಯುವುದು ಹೇಗೆ? TRAI (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಟೆಲಿಕಾಂ ಕಂಪನಿಗಳಿಗೆ ನಿಯಮಗಳ ಪ್ರಕಾರ ರೀಚಾರ್ಜ್ ಮಾಡದೆ ಸಿಮ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ನಿರ್ದಿಷ್ಟ ಅವಧಿಯೊಳಗೆ ಸೇವೆಗಳಿಗೆ ಬಳಸದ ಸಿಮ್ ಕಾರ್ಡ್ಗಳು, ವಿಶೇಷವಾಗಿ ಕರೆಗಳು ಅಥವಾ SMS ಗಾಗಿ ಬಳಸದ ಸಿಮ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಬಹುದು. ಮೊಬೈಲ್ ಈಗ ಎಲ್ಲರಿಗೂ ಬಹಳ ಮುಖ್ಯವಾಗಿದೆ. ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಯಲ್ಲಿ ಬಳಕೆದಾರರಿಗೆ ಡೇಟಾವನ್ನು ಒದಗಿಸುತ್ತಿರುವುದರಿಂದ, ಎಲ್ಲರೂ ಇಂಟರ್ನೆಟ್ ಸೇವೆಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಹೆಚ್ಚಿನ ಜನರು ಟೆಲಿಕಾಂ ಕಂಪನಿಗಳ ರೀಚಾರ್ಜ್ ಕೊಡುಗೆಗಳನ್ನು ಆಧರಿಸಿ ಸಿಮ್ ಕಾರ್ಡ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆ ಸಮಯದಲ್ಲಿ, ಅವರು ಕೆಲವು ಪ್ರಮುಖ ಕಾರ್ಯಗಳಿಗಾಗಿ ಆ ಸಿಮ್ ಸಂಖ್ಯೆಗಳನ್ನು ನೀಡುತ್ತಿದ್ದಾರೆ. ಕೆಲವೊಮ್ಮೆ ಅವರು ಅಗತ್ಯವಿದ್ದಾಗ ರೀಚಾರ್ಜ್ ಮಾಡಲು ಮಾತ್ರ ಅವುಗಳನ್ನು ಪಕ್ಕಕ್ಕೆ ಇಡುತ್ತಾರೆ. ನಾವು ಸಿಮ್ ಅನ್ನು ರಕ್ಷಿಸಬೇಕಾಗಿದೆ, ಅಂದರೆ, ನಾವು ಎಷ್ಟು ದಿನಗಳವರೆಗೆ ರೀಚಾರ್ಜ್ ಮಾಡದಿದ್ದರೆ,…
ನಾವು ಕ್ಯಾಮೆರಾದಲ್ಲಿ ಜೂಮ್ ಮಾಡಿದಾಗ ನಮ್ಮ ಕಣ್ಣುಗಳು ಹೇಗೆ ಕಾಣುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇತ್ತೀಚೆಗೆ, ಇದೇ ರೀತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರ ಫಲಿತಾಂಶವು ಇಂಟರ್ನೆಟ್ ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿದೆ. ಈ ವೀಡಿಯೊವು ಮಾನವನ ಕಣ್ಣನ್ನು 1000 ಬಾರಿ ಜೂಮ್ ಮಾಡಿದಾಗ, ಒಳಗಿನ ನೋಟವು ಮತ್ತೊಂದು ಲೋಕದಂತೆ ಕಾಣುತ್ತದೆ ಎಂದು ತೋರಿಸುತ್ತದೆ. ಈ ವೈರಲ್ ವೀಡಿಯೊದಲ್ಲಿ, ಜೂಮ್ ಮಾಡಿದ ನಂತರ, ಕಣ್ಣಿನೊಳಗಿನ ರಚನೆಗಳು ನಿಖರವಾಗಿ ಮಾನವ ಬೆರಳುಗಳಂತೆ ಕಾಣುತ್ತವೆ, ಇದನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಳ್ಳುತ್ತಾರೆ. ಇದು ನಮ್ಮ ದೇಹವು ಎಷ್ಟು ಸಂಕೀರ್ಣ ಮತ್ತು ಅದ್ಭುತವಾಗಿದೆ ಎಂಬುದನ್ನು ತೋರಿಸುತ್ತದೆ. ಈ ಆಸಕ್ತಿದಾಯಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ @technology ಎಂಬ ಪುಟವು ಹಂಚಿಕೊಂಡಿದೆ, ಇದನ್ನು ಇಲ್ಲಿಯವರೆಗೆ 1 ಲಕ್ಷ 31 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ ಮತ್ತು ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಬಳಕೆದಾರರ ಪ್ರಕಾರ, ಒಬ್ಬ ಆಪ್ಟೋಮೆಟ್ರಿಸ್ಟ್ ಇದನ್ನು ದಿನನಿತ್ಯದ ಪರೀಕ್ಷೆಯ ಸಮಯದಲ್ಲಿ ರೆಕಾರ್ಡ್…
ಬೆಂಗಳೂರು : ಬೆಂಗಳೂರಿನಲ್ಲಿ ಪಿಜಿಗೆ ನುಗ್ಗಿ ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸುದ್ದಗುಂಟೆಪಾಳ್ಯದ ಬಳಿಯಿರುವ ಪಿಜಿಗೆ ನುಗ್ಗಿದ ಕಳ್ಳ, ಕೊಠಡಿಯಲ್ಲಿ ಮಲಗಿದ್ದ ಯುವತಿಯ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಯುವತಿ ಪ್ರತಿರೋಧಿಸುತ್ತಿದ್ದಂತೆ 2,500 ರೂಪಾಯಿ ಎಗರಿಸಿ ಪರಾರಿ ಆಗಿದ್ದನು. ಘಟನೆ ಬಗ್ಗೆ ಯುವತಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಇದೀಗ ಆರೋಪಿಯ ಬಂಧನವಾಗಿದೆ. ಆಂಧ್ರಪ್ರದೇಶ ಮೂಲದ ಕೆ.ನರೇಶ್ ಎಂಬಾತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದನು. ಕಳ್ಳತನ ಮಾಡಲು ಪಿಜಿಗೆ ನುಗ್ಗಿದ್ದ ನರೇಶ್ ಯುವತಿ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದನು. ಸುದ್ದಗುಂಟೆಪಾಳ್ಯದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.