Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಬದಲಿಗೆ ಪ್ರತ್ಯೇಕವಾಗಿ ‘ರಾಜ್ಯ ಶಿಕ್ಷಣ ನೀತಿ’ (SEP) ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದ್ದು, ವರದಿಯ ಶಿಫಾರಸುಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಾದ ಪ್ರೊ. ಸುಖದೇವ್ ಥೋರಟ್ ಅವರು ಸಭೆಯಲ್ಲಿ ವರದಿಯ ಕುರಿತು ವಿವರಣೆ ನೀಡಿದರು. ವರದಿಯಲ್ಲಿನ ಪ್ರಮುಖ ಶಿಫಾರಸುಗಳೆಂದರೆ: ದ್ವಿಭಾಷಾ ನೀತಿ: ರಾಜ್ಯದ ಶಾಲೆಗಳಲ್ಲಿ ಮಾತೃಭಾಷೆ ಅಥವಾ ಕನ್ನಡ ಕಡ್ಡಾಯವಾಗಿರಬೇಕು. ಮೀಸಲಾತಿ: ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲೂ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ನಿಯಮ ಅನ್ವಯಿಸಬೇಕು. ಬಜೆಟ್ ಹೆಚ್ಚಳ: ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಶಿಕ್ಷಣ ಬಜೆಟ್ ಅನ್ನು ಹೆಚ್ಚಿಸಬೇಕು ಮತ್ತು ಶಿಕ್ಷಣದ ಮೇಲೆ ‘ಸರ್ಜಾರ್ಜ್’ ವಿಧಿಸುವ ಬಗ್ಗೆ ಪರಿಗಣಿಸಬೇಕು. ಶುಲ್ಕ ನಿಯಂತ್ರಣ: ಖಾಸಗಿ ಶಾಲಾ-ಕಾಲೇಜುಗಳ ಶುಲ್ಕವನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಜಾರಿಗೆ…
ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನೂತನ ವೇಳಾಪಟ್ಟಿಯಂತೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29, 2026 ರಿಂದ ಪುನರಾರಂಭಗೊಳ್ಳಲಿವೆ. ಶೈಕ್ಷಣಿಕ ಅವಧಿಗಳ ವಿವರ: ನೂತನ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಎರಡು ಅವಧಿಗಳಿರಲಿದ್ದು, ವಿವರಗಳು ಈ ಕೆಳಗಿನಂತಿವೆ: ಮೊದಲನೇ ಅವಧಿ: ದಿನಾಂಕ 29.05.2026 ರಿಂದ 02.10.2026 ರವರೆಗೆ. ಎರಡನೇ ಅವಧಿ: ದಿನಾಂಕ 22.10.2026 ರಿಂದ 10.04.2027 ರವರೆಗೆ. ರಜೆಗಳ ಪಟ್ಟಿ: ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಮುಖ ರಜೆಗಳ ವಿವರ ಹೀಗಿದೆ: ದಸರಾ ರಜೆ: ದಿನಾಂಕ 03.10.2026 ರಿಂದ 21.10.2026 ರವರೆಗೆ. ಬೇಸಿಗೆ ರಜೆ: ದಿನಾಂಕ 11.04.2027 ರಿಂದ 28.05.2027 ರವರೆಗೆ. ವರ್ಷದ ಒಟ್ಟು ದಿನಗಳ ಲೆಕ್ಕಾಚಾರ: 2026-27ನೇ ಸಾಲಿನಲ್ಲಿ ಒಟ್ಟು 365 ದಿನಗಳಲ್ಲಿ ರಜೆ ಮತ್ತು ಕೆಲಸದ ದಿನಗಳ ಹಂಚಿಕೆ ಹೀಗಿದೆ: ಶಾಲಾ ಕರ್ತವ್ಯದ ದಿನಗಳು: 245 ದಿನಗಳು.…
ಬೆಂಗಳೂರು: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ಕಾನೂನು ಹೋರಾಟ ಮತ್ತು ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಿರುವ ಅನುಮೋದನೆಗಳ ಬಗ್ಗೆ ಮಾಹಿತಿ ನೀಡಿದರು. ೧. ಕೇಂದ್ರದ ವಿರುದ್ಧ ಕಾನೂನು ಹೋರಾಟ: ಮನರೇಗಾ ಮತ್ತು ಜೀರಾಂಜಿ ಕಾಯ್ದೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ಜೀರಾಂಜಿ’ ಕಾಯ್ದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಂಪುಟ ನಿರ್ಧರಿಸಿದೆ. ಮನರೇಗಾ ಸಂಕಷ್ಟ: ಕೇಂದ್ರವು ಮನರೇಗಾ ಯೋಜನೆಯನ್ನು ರದ್ದುಗೊಳಿಸಿ ಜೀರಾಂಜಿ ಯೋಜನೆಯನ್ನು ತಂದಿದೆ. ಆದರೆ ಮೇ ತಿಂಗಳು ಬಂದರೂ ಯೋಜನೆಯ ಅಧಿಸೂಚನೆ (Notification) ಹೊರಡಿಸಿಲ್ಲ. ಅನುಷ್ಠಾನದ ಗೊಂದಲ: ಹೊಸ ಯೋಜನೆ ಹೇಗೆ ಜಾರಿಯಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಹಳೆಯ ಬಾಕಿ ಹಣವನ್ನೂ ಬಿಡುಗಡೆ ಮಾಡಿಲ್ಲ. ಮಳೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಬಡವರ ಕೂಲಿಯ ಬಗ್ಗೆ ಕೇಂದ್ರ ನಿರ್ಲಕ್ಷ್ಯ ವಹಿಸಿದೆ ಎಂದು ಸಚಿವರು…
ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೇ 25 ಮತ್ತು 26 ರಂದು ಎರಡು ದಿನಗಳ ಕಾಲ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ಅಡಚಣೆಯುಂಟಾಗುವ ಸಾಧ್ಯತೆಯಿದೆ. ಯಾರು ಮುಷ್ಕರ ನಡೆಸುತ್ತಿದ್ದಾರೆ? ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ (AISBISF) ಈ ಮುಷ್ಕರಕ್ಕೆ ಕರೆ ನೀಡಿದ್ದು, 1947 ರ ಕೈಗಾರಿಕಾ ವಿವಾದ ಕಾಯ್ದೆಯಡಿ ‘ವರ್ಕ್‌ಮೆನ್’ ವರ್ಗದ ನೌಕರರು ಈ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖ 16 ಬೇಡಿಕೆಗಳು ಯಾವುವು? ಒಕ್ಕೂಟವು ಒಟ್ಟು 16 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳಲ್ಲಿ ಮುಖ್ಯವಾದವುಗಳೆಂದರೆ: ಸಿಬ್ಬಂದಿ ನೇಮಕಾತಿ: ಕಳೆದ ಮೂರು ದಶಕಗಳಿಂದ ಸ್ಥಗಿತಗೊಂಡಿರುವ ಸಂದೇಶವಾಹಕರು (Messengers) ಮತ್ತು ಸಶಸ್ತ್ರ ಕಾವಲುಗಾರರ (Armed Guards) ನೇಮಕಾತಿಯನ್ನು ತಕ್ಷಣವೇ ಆರಂಭಿಸುವುದು. ಹೊರಗುತ್ತಿಗೆ ನಿಲ್ಲಿಸುವುದು: ಶಾಶ್ವತ ಸ್ವರೂಪದ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ಕೈಬಿಡುವುದು. ವೇತನ ತಾರತಮ್ಯ ನಿವಾರಣೆ: ಅಧಿಕಾರಿಗಳು…
ಬೆಂಗಳೂರು: ರಾಜ್ಯದ ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ತುರ್ತು ಸೇವೆಗಳಿಗೆ ಹೆಚ್ಚಿನ ಬಲ ನೀಡುವ ನಿಟ್ಟಿನಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೂತನವಾಗಿ ಸ್ಥಾಪಿಸಿರುವ ‘ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ’ (Health Emergency Operation Centre – HEOC) ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಬೆಂಗಳೂರಿನ ಆರೋಗ್ಯ ಸೌಧದ 8ನೇ ಮಹಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಕೇಂದ್ರದ ಪ್ರಮುಖ ಉದ್ದೇಶಗಳು ಮತ್ತು ವೈಶಿಷ್ಟ್ಯಗಳು: ಕರ್ನಾಟಕದಾದ್ಯಂತ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿ ಅಥವಾ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ, ಅವುಗಳನ್ನು ತಕ್ಷಣ ಪತ್ತೆಹಚ್ಚಿ ವೇಗವಾಗಿ ಹತೋಟಿಗೆ ತರಲು ಈ ಅತ್ಯಾಧುನಿಕ ‘ಸಮನ್ವಯ ಕೇಂದ್ರ’ ಸಹಕಾರಿಯಾಗಲಿದೆ. 24/7 ಮೇಲ್ವಿಚಾರಣೆ: ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ತುರ್ತು ಆರೋಗ್ಯ ಪರಿಸ್ಥಿತಿಗಳ ಮೇಲೆ ನಿರಂತರ ನಿಗಾ ಇರಿಸಲಿದೆ. ಸುಧಾರಿತ ತಂತ್ರಜ್ಞಾನ: ಆಧುನಿಕ ಕಣ್ಗಾವಲು ಮತ್ತು ಡೇಟಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ನಿಖರವಾದ…
ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ನಾಡಿನ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗುತ್ತಿದೆ ಎಂಬುದಕ್ಕೆ ವಿಜಯಪುರ ಜಿಲ್ಲೆಯ ಈ ಮಹಿಳೆ ಸಾಕ್ಷಿಯಾಗಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಸರ್ಕಾರದ ಹಣವನ್ನು ಸದ್ಬಳಕೆ ಮಾಡಿಕೊಂಡು ಇಂದು ಅವರು ಇತರರಿಗೆ ಮಾದರಿಯಾಗಿದ್ದಾರೆ. ಉಳಿತಾಯದ ಹಣದಲ್ಲಿ ‘ಹಿಟ್ಟಿನ ಗಿರಣಿ’ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದ ರತ್ನಾಬಾಯಿ ಕೋಳಿ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ. ಪ್ರತಿ ತಿಂಗಳು ತಮಗೆ ಬರುತ್ತಿದ್ದ ₹2,000 ಹಣವನ್ನು ಅನಗತ್ಯವಾಗಿ ಖರ್ಚು ಮಾಡದ ರತ್ನಾಬಾಯಿ, ಕಳೆದ 20 ತಿಂಗಳಿಂದ ಸುಮಾರು ₹40,000 ಹಣವನ್ನು ಉಳಿತಾಯ ಮಾಡಿದ್ದರು. ಬರಿ ಹಣ ಉಳಿಸುವುದಷ್ಟೇ ಅಲ್ಲದೆ, ಅದಕ್ಕೆ ತಮ್ಮ ಬಳಿಯಿದ್ದ ಒಂದಿಷ್ಟು ಹೆಚ್ಚಿನ ಮೊತ್ತವನ್ನು ಸೇರಿಸಿ ಸ್ವಂತದ ಹಿಟ್ಟಿನ ಗಿರಣಿ (Flour Mill) ಆರಂಭಿಸಿದ್ದಾರೆ. ಈ ಮೂಲಕ ಅನ್ಯರ ಮೇಲೆ ಅವಲಂಬಿತರಾಗದೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಬಡವರ ಬದುಕಿಗೆ ಆಸರೆಯಾದ ಗ್ಯಾರಂಟಿಗಳು ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕ ಸಂಕಷ್ಟದಿಂದ ಹೊರಬಂದು ಗೌರವಯುತ ಜೀವನ ನಡೆಸಬೇಕೆಂಬ ಸರ್ಕಾರದ…
ಬೆಂಗಳೂರು: ಕರ್ನಾಟಕ ರಾಜಕೀಯದ ಹಿರಿಯ ಮುತ್ಸದ್ದಿ ಹಾಗೂ ‘ಹಳ್ಳಿಹಕ್ಕಿ’ ಎಂದೇ ಖ್ಯಾತರಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ದೀರ್ಘಕಾಲದ ರಾಜಕೀಯ ಪಯಣದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.ಮುಂಬರುವ ಯಾವುದೇ ರೀತಿಯ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ವಿಶ್ವನಾಥ್, ಈ ಮೂಲಕ ಸಕ್ರಿಯ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯ ರಾಜಕಾರಣದ ವಿವಿಧ ಹಂತಗಳಲ್ಲಿ ಪ್ರಭಾವಶಾಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ಈಗ ಚುನಾವಣಾ ಪಯಣಕ್ಕೆ ತೆರೆ ಎಳೆದಿದ್ದಾರೆ. ನಿವೃತ್ತಿ ಘೋಷಣೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದರು. ಪೋಕ್ಸೋ ಪ್ರಕರಣ ಮತ್ತು ಈ ಸಮಯದಲ್ಲಿ ನಡೆಯುತ್ತಿರುವ ಸನ್ಮಾನಗಳು ರಾಜ್ಯದ ಘನತೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸರ್ಕಾರದ ನಡೆಯನ್ನು ಟೀಕಿಸಿದ ಅವರು, “ಸ್ವತಃ ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಲ್ಲಾ ತಿಳಿಯುತ್ತಿಲ್ಲವೇ?” ಎಂದು…
ಬೆಂಗಳೂರು: ಸ್ಯಾಂಡಲ್‌ವುಡ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಸರಣಿಯ ಮೂರನೇ ಭಾಗ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಲವ್ ಮಾಕ್ಟೇಲ್-3’ ಚಿತ್ರವು ಇಂದು ಯಶಸ್ವಿಯಾಗಿ 50 ದಿನಗಳನ್ನು ಪೂರೈಸುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ಕೃಷ್ಣ ಚಿತ್ರದ ಈ ಭರ್ಜರಿ ಗೆಲುವಿನಿಂದ ಇಡೀ ಚಿತ್ರತಂಡ ಸಂಭ್ರಮದಲ್ಲಿದೆ. ಈ ಸಂತಸವನ್ನು ಹಂಚಿಕೊಂಡಿರುವ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ಚಿತ್ರಕ್ಕೆ ಅಭೂತಪೂರ್ವ ಬೆಂಬಲ ನೀಡಿದ ಪ್ರೇಕ್ಷಕರಿಗೆ ಪ್ರೀತಿಯ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕೇವಲ ಲವ್ ಸ್ಟೋರಿ ಮಾತ್ರವಲ್ಲದೆ, ಭಾವನಾತ್ಮಕ ಕಥಾಹಂದರ ಹೊಂದಿದ್ದ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸವಾಲುಗಳ ನಡುವೆಯೂ ಸುವರ್ಣ ಮಹೋತ್ಸವ ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿರುವ ‘ಲವ್ ಮಾಕ್ಟೇಲ್-3’ಗೆ ಹಾದಿ ಸುಲಭವಾಗಿರಲಿಲ್ಲ. ಚಿತ್ರ ಬಿಡುಗಡೆಯಾದ ಸಮಯದಲ್ಲಿ ‘ಧುರಂಧರ್-2’ ನಂತಹ ಬಿಗ್ ಬಜೆಟ್ ಸಿನಿಮಾಗಳ ಪೈಪೋಟಿ ಇತ್ತು. ಆದರೂ ಸಹ, ತನ್ನ ಗಟ್ಟಿಯಾದ ಕಥೆ…
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತು ಕಳೆದ ಕೆಲವು ದಿನಗಳಿಂದ ಮನೆಮಾಡಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಹಸಿರು ನಿಶಾನೆ ತೋರಿಸಿದ್ದಾರೆ. ಲೋಕಭವನದಲ್ಲಿ ಇಂದು ರಾಜ್ಯಪಾಲರನ್ನು ಎರಡನೇ ಬಾರಿಗೆ ಭೇಟಿ ಮಾಡಿದ ವಿಜಯ್, ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮತ್ತು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಮನವಿ ಮಾಡಿದರು. ವಿಜಯ್ ಅವರ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಭೇಟಿಯಲ್ಲಿ ರಾಜ್ಯಪಾಲರು ವಿಜಯ್ ಮುಂದೆ ಕೆಲವು ಕಠಿಣ ಪ್ರಶ್ನೆಗಳನ್ನು ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಅಗತ್ಯವಿದ್ದು, ಸದ್ಯ ಟಿವಿಕೆ ಹೊಂದಿರುವ 112 ಶಾಸಕರಿಂದ ಆಡಳಿತ ಹೇಗೆ ನಡೆಸುತ್ತೀರಿ? ಬಹುಮತಕ್ಕೆ ಬೇಕಾದ ಉಳಿದ ಶಾಸಕರ ಬೆಂಬಲ ಯಾವ ಪಕ್ಷಗಳಿಂದ ಸಿಗಲಿದೆ? ಇತರ ಪಕ್ಷಗಳು ಬೆಂಬಲ ನೀಡಲು ಅಧಿಕೃತವಾಗಿ ಒಪ್ಪಿಕೊಂಡಿವೆಯೇ?ಈ…
ಬೆಂಗಳೂರು: ರಾಜ್ಯದ ಭೋವಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಭೋವಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿನ ಸಾಲವನ್ನು ಈಗಾಗಲೇ ಸರ್ಕಾರ ಮನ್ನಾ ಮಾಡಿದ್ದು, ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು. ಭೋವಿ ನಿಗಮದ ವ್ಯಾಪ್ತಿಯಲ್ಲಿನ ಫಲಾನುಭವಿಗಳ ಸಾಲವನ್ನು ಮನ್ನಾ ಮಾಡುವ ಮೂಲಕ ಸರ್ಕಾರವು ಬಡ ಕುಟುಂಬಗಳಿಗೆ ಆಸರೆಯಾಗಿದೆ. ಸಮುದಾಯದ ಮುಖಂಡರಿಗೆ ವಿಧಾನ ಪರಿಷತ್ ಸದಸ್ಯ (MLC) ಸ್ಥಾನ ನೀಡುವ ಬಗ್ಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯದ ಅರ್ಹರಿಗೆ ಕುಲಪತಿ ಸ್ಥಾನ ನೀಡುವ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು.ರಾಜ್ಯದ ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು. ಯಾವುದೇ ವರ್ಗ ಅಥವಾ ಸಮುದಾಯದವರು ಅವಕಾಶಗಳಿಂದ ವಂಚಿತರಾಗಬಾರದು ಎನ್ನುವುದೇ ಸರ್ಕಾರದ ಮೂಲ ಧ್ಯೇಯವಾಗಿದೆ. ಸಿದ್ಧರಾಮೇಶ್ವರರ ತತ್ವಗಳ ಪಾಲನೆ: “ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಬೇಕು ಮತ್ತು ಉತ್ಪತ್ತಿಯಾದ ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೊಳ್ಳಬೇಕು” ಎಂಬ ಸಿದ್ಧರಾಮೇಶ್ವರರ ಕಾಯಕ ಮತ್ತು ದಾಸೋಹ ತತ್ವವನ್ನು…














