Author: kannadanewsnow57

ಅಮೆರಿಕದಲ್ಲಿ ಒಂದು ದುರಂತ ಘಟನೆ ನಡೆದಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿದಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಅಧಿಕಾರಿಗಳ ಪ್ರಕಾರ, ಯಂಗ್ಸ್ಟೌನ್-ವಾರೆನ್ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಆರು ಪ್ರಯಾಣಿಕರೊಂದಿಗೆ ಹೊರಟ ಸೆಸ್ನಾ 441 ವಿಮಾನ ಭಾನುವಾರ ಬೆಳಿಗ್ಗೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಯಿತು. ವೆಸ್ಟರ್ನ್ ರಿಸರ್ವ್ ಪೋರ್ಟ್ ಅಥಾರಿಟಿ ಕಾರ್ಯನಿರ್ವಾಹಕ ನಿರ್ದೇಶಕ ಆಂಥೋನಿ ಟ್ರೆವೆನಾ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ದೃಢಪಡಿಸಿದರು. ಮೃತದೇಹಗಳನ್ನು ಟ್ರಂಬುಲ್ ಕೌಂಟಿ ಕರೋನರ್ ಕಚೇರಿಗೆ ವರ್ಗಾಯಿಸಲಾಗಿದೆ ಎಂದು ಅವರು ಬಹಿರಂಗಪಡಿಸಿದರು. ಮೃತರ ವಿವರಗಳು ಇನ್ನೂ ತಿಳಿದುಬಂದಿಲ್ಲ. ಗುರುತಿನ ಪ್ರಕ್ರಿಯೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೌಲ್ಯಾಂಡ್ ಟೌನ್ಶಿಪ್ ಅಗ್ನಿಶಾಮಕ ಮುಖ್ಯಸ್ಥ ರೇಮಂಡ್…

Read More

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ರಾಜ್ಯವಲಯದ ಆಸ್ಪತ್ರೆಗಳಲ್ಲಿ ಖಾಲಿ ಇರುವ 6,770 ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆಯಡಿ ಭರ್ತಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರಮಾಂಕ(1)ರ ಆದೇಶದಲ್ಲಿ 2019-20ನೇ ಸಾಲಿಗೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳಲ್ಲಿ ಶೇ.30 ರಷ್ಟು ನಾನ್-ಕ್ಲಿನಿಕಲ್ ಹಾಗೂ ಶೇ.45 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಒಟ್ಟಾರೆಯಾಗಿ ಶೇ.75 ಮೀರದಂತೆ ಈ ಹಿಂದಿನ ಟೆಂಡರು ನಿಯಮಗಳನ್ನು ಪಾಲಿಸಿಕೊಂಡು ಹಾಗೂ ಹೊರಗುತ್ತಿಗೆ ಸಂಪನ್ಮೂಲದಡಿ ಟೆಂಡರ್ ಕರೆಯಲು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ. ಮೇಲೆ ಓದಲಾದ ಕ್ರಮಾಂಕ(2)ರ ಏಕ ಕಡತದಲ್ಲಿ ದಿನಾಂಕ:09.01.2025 ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯವಲಯದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ಹಿತದೃಷ್ಠಿಯಿಂದ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಹೆಚ್ಚಿನ/ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಗ್ರೂಪ್-ಡಿ ಖಾಲಿ ಹುದ್ದೆಗಳಿಗೆ ಎದುರಾಗಿ ಪಡೆದುಕೊಳ್ಳುತ್ತಿರುವ ಶೇ 75…

Read More

ದಾವಣಗೆರೆ : ದಾವಣಗೆರೆಯಲ್ಲಿ ಮನೆಯಲ್ಲಿದ್ದ ಯುಪಿಎಸ್ ಸ್ಪೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಪೋಟಗೊಂಡ ಪರಿಣಾಮ ಅಗ್ನಿಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವಿಮಾ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಹಿರೇಮಠ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಮತ್ತೆ 7 ಮಂದಿ ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶಿಸಿದೆ. ಕಂದಾಯ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ತಹಶೀಲ್ದಾರ್ಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

Read More

ಭಟ್ಕಳ: ರಾಜ್ಯದಲ್ಲಿ ಗೋವುಗಳ ಮೇಲಿನ ರಾಕ್ಷಿಸಿ ಕೃತ್ಯ ಮುಂದುವರೆದಿದ್ದು, ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಪಂ ವ್ಯಾಪ್ತಿಯ ನೀರಗದ್ದೆ ಗುಡ್ಡದ ಮೇಲೆ ಭಾನುವಾರ ತಡರಾತ್ರಿ ಗೋವನ್ನು ಹತ್ಯೆ ಮಾಡಿ ಅದರ ತಲೆ ಕಡಿದು ವಿಕೃತಿ ಮೆರೆಯಲಾಗಿದೆ. ದುಷ್ಕರ್ಮಿಗಳು ಕದ್ದು ಹಿಂಸಾತ್ಮಕವಾಗಿ ವಧೆ ಮಾಡಿದ್ದಾರೆ. ಕತ್ತರಿಸಿದ ಗೋವಿನ ತಲೆಯನ್ನು ಮಾರಕಲ್ಲ ಗದ್ದೆಯ ಖಾಲಿ ಜಮೀನಿನಲ್ಲಿ ಎಸೆಯಲಾಗಿದೆ. ಘಟನೆ ಖಂಡಿಸಿ ಹಿಂದು ಸಂಘಟನೆ, ಬಿಜೆಪಿ ಮುಖಂಡರು ಡಿವೈಎಸ್ಪಿ ಕಚೇರಿಗೆ ತೆರಳಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮೀಣ ಠಾಣೆ ಪಿಎಸ್ಐ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ನವದೆಹಲಿ : ಭಾರತದಲ್ಲಿನ ಅಂಚೆ ಕಚೇರಿಗಳು ಆಗಸ್ಟ್ 2025 ರಿಂದ ತಮ್ಮ ಕೌಂಟರ್ಗಳಲ್ಲಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತವೆ. ಅಂಚೆ ಇಲಾಖೆಯ ಹೊಸ ಐಟಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ನಂತರ ಮತ್ತು ವಿಶೇಷ ಅರ್ಜಿಯನ್ನು ಸಲ್ಲಿಸಿದ ನಂತರ ಈ ಸೌಲಭ್ಯವು ಪ್ರಾರಂಭವಾಗುತ್ತದೆ. ಪ್ರಸ್ತುತ, ಅಂಚೆ ಕಚೇರಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅವುಗಳ ಖಾತೆಗಳು ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಗೆ ಸಂಪರ್ಕಗೊಂಡಿಲ್ಲ. ಆದರೆ ಈಗ ಅಂಚೆ ಇಲಾಖೆ ತನ್ನ ಐಟಿ ಮೂಲಸೌಕರ್ಯವನ್ನು ನವೀಕರಿಸುತ್ತಿದೆ. ಈ ಹೊಸ ವ್ಯವಸ್ಥೆಯು ಕ್ಯೂಆರ್ ಕೋಡ್ಗಳ ಮೂಲಕ ವಹಿವಾಟುಗಳನ್ನು ಸುಲಭಗೊಳಿಸುವ ಅಪ್ಲಿಕೇಶನ್ ಅನ್ನು ಹೊಂದಿರುತ್ತದೆ. ಮೂಲಗಳ ಪ್ರಕಾರ, ಈ ವ್ಯವಸ್ಥೆಯನ್ನು ಆಗಸ್ಟ್ 2025 ರ ವೇಳೆಗೆ ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಸಂಪೂರ್ಣವಾಗಿ ಅಳವಡಿಸಲಾಗುವುದು. ಸಾಮಾನ್ಯ ಜನರು ಸಹ ಇದರಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಕರ್ನಾಟಕ ವೃತ್ತದಲ್ಲಿ ಈ ಹೊಸ ವ್ಯವಸ್ಥೆಯ ಪರೀಕ್ಷೆ ಪ್ರಾರಂಭವಾಗಿದೆ. ಮೈಸೂರು ಮತ್ತು ಬಾಗಲಕೋಟೆಯ ಮುಖ್ಯ ಅಂಚೆ ಕಚೇರಿಗಳು ಮತ್ತು ಅವುಗಳ…

Read More

ನವದೆಹಲಿ : ದೇಶಾದ್ಯಂತದ ಸ್ಮಾರ್ಟ್ಫೋನ್ ಬಳಕೆದಾರರಿಗೆ ಶನಿವಾರ ಇದ್ದಕ್ಕಿದ್ದಂತೆ ಪಾಪ್ಅಪ್ ಸಂದೇಶ ಬಂದಿತು, ಅದರಲ್ಲಿ ಟೆಸ್ಟ್ ಅಲರ್ಟ್, ಇದು ‘ಟೆಸ್ಟ್ ಸೆಲ್ ಬ್ರಾಡ್ಕಾಸ್ಟ್’ ಸಂದೇಶ ಮತ್ತು ಸ್ವೀಕರಿಸುವವರಿಂದ ಯಾವುದೇ ಕ್ರಮ ಅಗತ್ಯವಿಲ್ಲ ಎಂದು ಬರೆಯಲಾಗಿದೆ. ಈ ಸಂದೇಶವನ್ನು ಜೂನ್ 28, 2025 ರಂದು ಟೆಲಿಕಾಂ ಇಲಾಖೆ (DOT) ನೀಡಿತು, ಅದರ ಕೋಡ್ #900 ಆಗಿತ್ತು. ಸಂದೇಶ ಬಂದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಈ ಎಚ್ಚರಿಕೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ವಾಸ್ತವವಾಗಿ, ಸರ್ಕಾರವು ದೇಶಾದ್ಯಂತ ತುರ್ತು ಸೆಲ್ ಬ್ರಾಡ್ಕಾಸ್ಟ್ ತಂತ್ರಜ್ಞಾನವನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಿದೆ, ಇದನ್ನು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ಅಭಿವೃದ್ಧಿಪಡಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಪರೀಕ್ಷಾ ಎಚ್ಚರಿಕೆಗಳನ್ನು ಆಫ್ ಮಾಡುವುದು ಹೇಗೆ ಆಂಡ್ರಾಯ್ಡ್: ಸೆಟ್ಟಿಂಗ್ಗಳು > ಭದ್ರತೆ ಮತ್ತು ತುರ್ತುಸ್ಥಿತಿ > ವೈರ್ಲೆಸ್ ತುರ್ತು ಎಚ್ಚರಿಕೆಗಳು > ಪರೀಕ್ಷಾ ಎಚ್ಚರಿಕೆಗಳನ್ನು ಆಫ್ ಮಾಡಿ. ಐಒಎಸ್: ಸೆಟ್ಟಿಂಗ್ಗಳು > ಅಧಿಸೂಚನೆಗಳಿಗೆ ಕೆಳಗೆ ಸ್ಕ್ರಾಲ್…

Read More

ಸಾರ್ವಜನಿಕ ಸೇವೆಗಳ ಪೂರೈಕೆಯಲ್ಲಿ ಇನ್ನಷ್ಟು ಪಾರದರ್ಶಕತೆ, ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತರಲು ಭಾರತ ಅಂಚೆ ಇಲಾಖೆ ಸದಾ ಮುಂದಾಗಿದ್ದು, ಅದೇ ಹಿನ್ನೆಲೆಯಲ್ಲಿ ಇತ್ತೀಚೆಗೆ (ಜೂ. 23ರಂದು) ಕೊಪ್ಪಳ ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಜ್ಞಾನವಾದ ಎಪಿಟಿ (APT) 2.0 ಸಾಫ್ಟ್ವೇರ್ ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.  ಈ ಹೊಸ ತಂತ್ರಾಂಶವನ್ನು ಮೈಸೂರಿನ ಸಿಇಪಿಟಿ (Centre for Excellence in Postal Technology) ಎಂಬ ಅಂಚೆ ಇಲಾಖೆಯ ಶ್ರೇಷ್ಠ ತಂತ್ರಜ್ಞಾನ ಸಂಸ್ಥೆ ತನ್ನದೇ ಆದ ತಂತ್ರಜ್ಞಾನ ತಜ್ಞರ ಮೂಲಕ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದ್ದು, ಇದು ಸಂಪೂರ್ಣವಾಗಿ ಭಾರತೀಯ ಅಂಚೆ ಇಲಾಖೆಯ ಆಂತರಿಕ ಸಂಪತ್ತಾಗಿದೆ. ಹಿಂದಿನ ದಿನಗಳಲ್ಲಿ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳ ತಂತ್ರಾಂಶವನ್ನು ಭಾರಿ ವೆಚ್ಚದಲ್ಲಿ ಬಳಸುತ್ತಿದ್ದು, ನಿರಂತರ ನಿರ್ವಹಣಾ ವೆಚ್ಚ ಹಾಗೂ ಸೀಮಿತ ನಿಯಂತ್ರಣದ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈಗ, ಎಪಿಟಿ 2.0 ಎಂಬ ತನ್ನದೇ ಆದ ಸಮಗ್ರ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಅಂಚೆ ಇಲಾಖೆ, ಎಲ್ಲಾ ಅಗತ್ಯ ಸೇವೆಗಳನ್ನು ಒಂದೇ ಸಾಫ್ಟ್ವೇರ್ನಲ್ಲಿ…

Read More

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಐಸಿಯುನಲ್ಲಿದ್ದ 5 ರೋಗಿಗಳು ಸೇರಿದಂತೆ 26 ರೋಗಿಗಳು ಸೇಫ್ ಆಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ರೋಗಿಗಳನ್ನು ಹೆಚ್. ಬ್ಲಾಕ್ ಗೆ ಶಿಫ್ಟ್ ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : 2025-26 ನೇ ಸಾಲಿನ ಪ್ರಧಾನಮಂತ್ರಿ ಆವಾಸ್ (ನಗರ)2.0 ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಂಟಿ ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರು, ತೃತೀಯ ಲಿಂಗಿಗಳು, ಎಸ್ಸಿ/ಎಸ್ಟಿ/ಹಿಂದುಳಿದ/ಅಲ್ಪ ಸಂಖ್ಯಾತ ವರ್ಗದವರು, ಸ್ವಚ್ಛತಾ ಕಾರ್ಮಿಕರು, PM-SAVnidhi ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೈಗಾರಿಕೆ ಕಾರ್ಮಿಕರು, ವಲಸೆ ಬಂದ ಕುಟುಂಬದವರು ತಮ್ಮ ಅರ್ಜಿಗಳನ್ನು ಜುಲೈ 15 ರೊಳಗಾಗಿ https://pmayurban.gov.in ನಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿಯೊಂದಿಗೆ ಆಧಾರ್ ಕಾರ್ಡ್ (ಮನೆಯ ಯಜಮಾನ/ನಿ ಹಾಗೂ ತಂದೆ/ತಾಯಿಯ ಮತ್ತು ಪಡಿತರ ಚೀಟಿಯಲ್ಲಿ ಇರುವಂತೆ ಕುಟುಂಬ ಸದಸ್ಯರ ಆಧಾರ್ ಕಾರ್ಡ್ಗಳು), ವಸತಿ ರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕುಪತ್ರ/ಕ್ರಯಪತ್ರ /ದಾನಪತ್ರ/ಉಡುಗೊರೆ ಪತ್ರ/ಖಾತಾ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ನಿಗದಿತ ನಮೂನೆ (Annexure-2A/2B/2C) ಯಲ್ಲಿ Self Undertaking ಸಲ್ಲಿಸುವುದು.…

Read More