Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯ ಸರ್ಕಾರದಿಂದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯುವಂತ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿಗೊಂಡಿದ್ದಂತ ಯೋಜನೆಯನ್ನು ಮಾರ್ಚ್ ನಿಂದ ರಾಜ್ಯಾಧ್ಯಂತ ವಿಸ್ತರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ. ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಅವರು, ರಾಜ್ಯದ ಎಲ್ಲಾ ಆರೋಗ್ಯ ಸೇವೆಗಳನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವತ್ತ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಸಾಮಾನ್ಯ, ಬಡ, ದುರ್ಬಲ ವರ್ಗಗಳಿಗೆ, ಗ್ರಾಮೀಣ ಭಾಗಗಳಿಗೆ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ವ ಪ್ರಯತ್ನ ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಕೋಲಾರದಲ್ಲಿ ಯಶಸ್ವಿಯಾಗಿರುವ ಗೃಹ ಆರೋಗ್ಯ ಯೋಜನೆಯನ್ನು ಮಾರ್ಚ್‌ನಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. https://twitter.com/dineshgrao/status/1885628797543940175?s=08 ಏನಿದು ಗೃಹ ಆರೋಗ್ಯ ಯೋಜನೆ? ಗೃಹ ಆರೋಗ್ಯ ಯೋಜನೆಯಡಿ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ…
ಬೆಳಗಾವಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲೇ ಜಾರಿಯಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಫೆ.01) ನಡೆದ ವಿವಿಧ ಬ್ಯಾಂಕಗಳು/ಸಹಕಾರಿ ಸಂಘಗಳ/ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಗಳಿಗೆ ಹೋಗಿ ಕಿರುಕುಳ ನೀಡಬಾರದು. ಕಾನೂನು ಬದ್ಧವಾಗಿ ನೋಟಿಸ್ ಜಾರಿ ಮಾಡಿ ಮಾಡಬೇಕು. ಫೈನಾನ್ಸ್ ಗಳಿಂದ ಪಡೆದ ಸಾಲ ಮನ್ನ ಆಗುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ನಂಬಿಕೆಯಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಧ್ಯಪ್ರವೇಶಿಸಿದೆ. ಇದರಲ್ಲಿ ಸಾಲ ಮನ್ನಾ ಎಂಬ ಪ್ರಶ್ನೆಯೇ ಇಲ್ಲ. ನಿಯಮಾನುಸಾರ ಕಾಲಾವಕಾಶ ನೀಡಿ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯ ವಿವಿಧ…
ಉಡುಪಿ: ಜಿಲ್ಲೆಯ ತೊಂಬಟ್ಟುವಿನ ನಕ್ಸಲ್ ಲಕ್ಷ್ಮಿ ಅವರು ಉಡುಪಿ ಜಿಲ್ಲಾಡಳಿತದ ಮುಂದೆ ಇಂದು ಬೆಳಿಗ್ಗೆ 10.30ಕ್ಕೆ ಶರಣಾಗತಿಯಾಗಲಿರುವುದಾಗಿ ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮವಾಸ್ಯೆ ಬೈಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ ಅವರು ಆಂಧ್ರದಲ್ಲಿ ನಕ್ಸಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2006ರ ಮಾರ್ಚ್.6ರಿಂದ ಲಕ್ಷ್ಮೀ ತೊಂಬಟ್ಟು ನಾಪತ್ತೆಯಾಗಿದ್ದರು. ಕರ್ನಾಟಕದಿಂದ ನಾಪತ್ತೆಯಾಗಿದ್ದಂತ ಲಕ್ಷ್ಮೀ ತೊಂಬಟ್ಟು ಆಂಧ್ರಪ್ರದೇಶದಲ್ಲಿ ನಕ್ಸಲರಾಗಿ ಸಕ್ರೀಯರಾಗಿದ್ದರು. ಅವರು ಮಾಜಿ ನಕ್ಸಲ್ ಸಂಜೀವ್ ಅವರನ್ನು ಮದುವೆಯಾಗಿದ್ದರು. ಆ ಬಳಿಕ ನಕ್ಸಲ್ ತೊರೆದು, ಆಂಧ್ರದಲ್ಲಿ ಸಂಸಾರಿಕ ಜೀವನ ನಡೆಸುತ್ತಿದ್ದರು. ಸದ್ಯ ಸಂಜೀವ್ ಆಲಿಯಾಸ್ ಸಲೀಂ ಹಾಗೂ ಲಕ್ಷ್ಮೀ ನಕ್ಸಲ್ ತೊರೆದು, ಮುಖ್ಯವಾಹಿನಿಗೆ ಬಂದಿದ್ದರು. ಇವರನ್ನು ವಿವಾಹವಾಗಿ ಆಂಧ್ರದಲ್ಲಿ ಜೀವನ ನಡೆಸುತ್ತಿರುವಂತ ಲಕ್ಷ್ಮೀ ಕೂಡ ನಕ್ಸಲ್ ತೊರೆದು, ಆಂಧ್ರ ಸರ್ಕಾರದ ಮುಂದೆ ಶರಣಾಗಿದ್ದರು. ಇದೀಗ ಕರ್ನಾಟಕದ ಉಡುಪಿ ಜಿಲ್ಲೆಯ ಅಮವಾಸ್ಯೆ ಬೈಲಿನ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಇಂದು ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತದ ಬದಲಾಗಿ ಉಡುಪಿ ಜಿಲ್ಲಾಡಳಿತ ಮುಂದೆ ಶರಣಾಗುವುದಾಗಿ ತಿಳಿದು…
ನವದೆಹಲಿ : ಜನವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಒಟ್ಟು ₹1.96 ಲಕ್ಷ ಕೋಟಿಗಳಾಗಿದ್ದು, ವಾರ್ಷಿಕ ಶೇ.12.3 ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಒಟ್ಟು ಜಿಎಸ್ ಟಿ ಆದಾಯದಲ್ಲಿ 1.47 ಲಕ್ಷ ಕೋಟಿ ರೂ. ನಷ್ಟು ದೇಶೀಯವಾಗಿ ನಡೆದ ವಹಿವಾಟಿನಿಮದ, 48382 ಕೋಟಿ ರೂ.ಆಮದು ಮಾಡಿಕೊಂಡ ವಸ್ತುಗಳ ಮೂಲಕ ಸಂಗ್ರಹಿಸಲಾಗಿದೆ. 32335 ಕೋಟಿ ರೂ. ಜಿಎಸ್ ಟಿ ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ, 14,353 ಕೋಟಿ ರೂ.ನೊಂದಿಗೆ ಕರ್ನಾಟಕ 2 ನೇ ಸ್ಥಾನದಲ್ಲಿದೆ. ಜನವರಿ 2024 ರಲ್ಲಿ, ಒಟ್ಟು ಸಂಗ್ರಹವು ₹1.74 ಲಕ್ಷ ಕೋಟಿಗಳಷ್ಟಿತ್ತು. ಡಿಸೆಂಬರ್ 2024 ರಲ್ಲಿ CGST, SGST, IGST ಮತ್ತು ಸೆಸ್ ಎಲ್ಲವೂ ವರ್ಷದಿಂದ ವರ್ಷಕ್ಕೆ ಹೆಚ್ಚಳವನ್ನು ತೋರಿಸಿದೆ ಎಂದು ಇಂದು ಲಭ್ಯವಾದ ಅಧಿಕೃತ ದತ್ತಾಂಶಗಳು ತೋರಿಸುತ್ತವೆ. 2024-25ರಲ್ಲಿ (ಏಪ್ರಿಲ್-ಜನವರಿ) ಇಲ್ಲಿಯವರೆಗೆ, ಒಟ್ಟು ಜಿಎಸ್‌ಟಿ ಸಂಗ್ರಹವು ಶೇ. 9.4 ರಷ್ಟು ಹೆಚ್ಚಾಗಿ ₹18.29 ಲಕ್ಷ ಕೋಟಿಗೆ…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಿಎಂಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ನಾಯಂಡನಹಳ್ಳಿ ಬಳಿ ಮದುವೆ ಮುಗಿಸಿಕೊಂಡು ಸೋದರನ ಜೊತೆಗೆ ಬರುವಾಗ ಮುಂದೆ ನಿಂತಿದ್ದ ಕಾರಿನ ಡೋರ್ ಏಕಾಏಕಿ ತೆಗೆದಿದ್ದು, ಈ ವೇಳೆ ಡೋರ್ ಟಚ್ ಆಗಿ ಬೈಕ್ ನಿಂದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಕಾಮಾಕ್ಷಿಪಾಳ್ಯದ ಸರೋಜಾ (41) ಎಂದು ಗುರುತಿಸಲಾಗಿದೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
2024-25 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್‍ಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ನೀಡುವ ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಹಾಗೂ ಎರಡು ಸ್ಟ್ಯಾಂಪ್ ಅಳತೆಯ ಫೆÇೀಟೋಗಳನ್ನು ಸಲ್ಲಿಸುವುದರ ಮುಖಾಂತರ ಈ ಯೋಜನೆ ಅಡಿ ಫಲಾನುಭವಿಗಳಾಗಬಹುದು. ಈ ಯೋಜನೆ ಅಡಿ ಒಂದು ಎಕರೆ ಜಮೀನಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ರೈತರು 4139 ಹಣವನ್ನು ಪಾವತಿಸುವ ಮೂಲಕ ಒಟ್ಟು 30 ಪೈಪುಗಳು ಹಾಗೂ 5 ಸ್ಪ್ರಿಂಕ್ಲರ್ ಜೆಟ್‍ಗಳು ಹಾಗೂ ಇತರೆ ಸಾಮಗ್ರಿಗಳನ್ನು ಪಡೆಯಬಹುದು. ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹಾಗೂ ಅರ್ಧ ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ರೈತರು ರೂ.2496 ಹಣವನ್ನು ಪಾವತಿಸುವುದರ ಮುಖಾಂತರ…
ಚಿತ್ರದುರ್ಗ : ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ಆದರೆ ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರು. ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. 19 ತಿಂಗಳಿಂದ ನಿರಾಂತಕವಾಗಿ ಯೋಜನೆಗಳು ಮುಂದುವರೆದಿವೆ. ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ ಮಾತುಗಳು ಕೇಳಿ ಬರುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಶನಿವಾರ ನಗರದ ಜಿ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕವಾಗಿ ರೂ.60,000 ಕೋಟಿ ಖರ್ಚು ಮಾಡುತ್ತಿದೆ. ಪಕ್ಷಭೇದವಿಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಷಿಕವಾಗಿ ರೂ.240 ಕೋಟಿಗೂ ಅಧಿಕ, ಅಂದರೆ ಪ್ರತಿ ತಿಂಗಳಿಗೆ ರೂ.20 ಕೋಟಿಯಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಇದು ಹುಡುಗಾಟದ ವಿಷಯವಲ್ಲ,…
ಬೆಂಗಳೂರು : ರಾಯಚೂರು ವಿಶ್ವವಿದ್ಯಾನಿಲಯವನ್ನು ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2024ಕ್ಕೆ ರಾಜ್ಯಪಾಲರ ಅನುಮೋದನೆ ದೊರಕಿದ್ದು, ರಾಯಚೂರು ವಿಶ್ವವಿದ್ಯಾನಿಲಯವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣಗೊಳಿಸಲಾಗಿದೆ.
ಬೆಂಗಳೂರು : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ 7564 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್, ದೇಶದ ಮಧ್ಯಮ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಭಾರತೀಯ ಆರ್ಥಿಕತೆಗೆ ಆದ್ಯತೆ ನೀಡಿದ ಬಜೆಟ್ ಆಗಿದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಾಮಗಾರಿಗೆ 350 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು. 2025-26 ರ ಈ ಬಜೆಟ್‌ನಲ್ಲಿ, ಕೃಷಿಕರ ಏಳ್ಗೆ, ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ, ವೈದ್ಯಕೀಯ ವ್ಯವಸ್ಥೆಯಲ್ಲಿ ಕ್ರಾಂತಿ, ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ, ಪ್ರವಾಸಿ ತಾಣಗಳ ಅಭಿವೃದ್ಧಿ, ಜಲ್ ಜೀವನ್ ಮಿಷನ್ ವಿಸ್ತರಣೆ ಮುಂತಾದ ಘೋಷಣೆಗಳಲ್ಲದೇ, ಈ ಬಾರಿ ಕರ್ನಾಟಕಕ್ಕೆ ₹7564 ಕೋಟಿ ರೈಲ್ವೆ ಬಜೆಟ್ ನೀಡಿ ಅತ್ಯುತ್ತಮ ಬಜೆಟ್ ಘೋಷಿಸಿರುವುದಕ್ಕಾಗಿ, ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರಿಗೆ ಹಾಗೂ ವಿತ್ತ…
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ದಾಖಲೆಯ 8 ನೇ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ ಕ್ಯಾನ್ಸರ್‌ನಿಂದ ರೋಗಿಗಳ ಜೀವ ಉಳಿಸುವ 36 ಔಷಧಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವ ಕಾರ್ಯ ಮತ್ತಷ್ಟು ಸುಗಮವಾದಂತಾಗಿದೆ. ಅಪರೂಪದ ಕಾಯಿಲೆಗಳು ಮತ್ತು ತೀವ್ರ, ದೀರ್ಘ ಸಮಯ ಕಾಡುವ ರೋಗಗಳ ಔಷಧಿಗಳಿಗೆ ಮೂಲ ಆಮದು ಸುಂಕ (ಬಿಸಿಡಿ) ರದ್ದುಪಡಿಸಲಾಗಿದೆ. ಈ ಮೊದಲು ಕೇಂದ್ರ ಸರ್ಕಾರ ಟ್ರಸ್ಸುಝುಮಾಬ್ ಡೆರುಕ್ಸ್ ಕ್ಯಾನ್, ಒಮೆರ್ಟಿನಿಬ್ ಮತ್ತು ಡುರ್ವಲಮಬ್ ಔಷಧಿಗಳಿಗೆ ವಿಧಿಸಲಾಗುತ್ತಿದ್ದ ಶೇ.10 ಆಮದು ಸುಂಕವನ್ನು ಸಂಪೂರ್ಣವಾಗಿ ತೆರವು ಮಾಡಿತ್ತು. ಈಗ ಮತ್ತೆ 36 ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ 6 ಜೀವ ಉಳಿಸುವ ಔಷಧಿಗಳ ಮೇಲಿನ ತೆರಿಗೆಯನ್ನು ಶೇ.5 ರಷ್ಟು ಕಡಿತ ಮಾಡಲಾಗಿದೆ. ಇಷ್ಟೇ ಅಲ್ಲದೆ ಈ ಔಷಧಿಗಳನ್ನು ತಯಾರಿಸುವ ಸಗಟು ಉತ್ಪಾದಕರಿಗೆ ತೆರಿಗೆ ವಿನಾಯಿತಿ ಅನ್ವಯ ಆಗಲಿದೆ ಎಂದು ನಿರ್ಮಲಾ…














