Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಏರುತ್ತಿದೆ. ಈ ಸಮಯದಲ್ಲೇ ಬಾಯಿ ತಂಪಾಗಿಸಲು ಕಲ್ಲಂಗಡಿ ಹಣ್ಣಿನ ಮೊರೆಯನ್ನು ಜನರು ಹೋಗುತ್ತಿದ್ದಾರೆ. ಆದರೇ ಹೀಗೆ ಕಲ್ಲಂಗಡಿ ಹಣ್ಣನ್ನು ನೀವು ತಿನ್ನುತ್ತಾ ಇದ್ದರೇ ಎಚ್ಚರ ವಹಿಸಿ. ಯಾಕೆಂದ್ರೆ ನಿಮ್ಮ ಆರೋಗ್ಯದ ಮೇಲೆ ಅದಕ್ಕೆ ನೀಡುವಂತ ಕೃತಕ ಬಣ್ಣ ಪರಿಣಾಮ ಬಿರಲಿದೆ ಅಂತೆ. ಹೌದು.. ಕಲ್ಲಂಗಡಿ ಹಣ್ಣನ್ನು ಅತಿ ಹೆಚ್ಚು ಕೆಂಪಾಗಿಸಲು ಕೃತಕ ಬಣ್ಣದ ಇಂಜೆಕ್ಷನ್ ಮಾಡುತ್ತಿದ್ದಾರೆ ಎನ್ನುವಂತ ಆಘಾತಕಾರಿ ಮಾಹಿತಿಯನ್ನು ಮಾರಾಟಗಾರರೇ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಹಾಕಿದ್ದಾರೆ ಅನ್ನೋದು ನಮಗೆ ಗೊತ್ತಾಗೋದಿಲ್ಲ. ಆದರೇ ಹಣ್ಣಿನ ಕಲ್ಲರ್ ಹೆಚ್ಚಾಗಿದ್ದರೇ ಅದು ಕೃತಕ ಬಣ್ಣದ ಇಂಜೆಕ್ಷನ್ ಮಾಡಿರೋದು ಎಂಬುದಾಗಿ ಪರಿಗಣಿಸಬಹುದಾಗಿ ಅಂತ ಹೇಳಿದ್ದಾರೆ. ಕೃತಕ ಬಣ್ಣದ ಇಂಜೆಕ್ಷನ್ ಅನ್ನು ಕಲ್ಲಂಗಡಿ ಹಣ್ಣಿಗೆ ಮಾಡುವುದರಿಂದ ಅತೀ ಹೆಚ್ಚು ಕೆಂಪನೆಯ ಬಣ್ಣವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಸಪ್ಪೆಯಾಗಿದ್ದಂತ ಹಣ್ಣು ಹೆಚ್ಚು ರುಚಿಕೂಡ ಪಡೆಯುತ್ತದೆ. ಇಂತಹ ಹಣ್ಣನ್ನು ತಿನ್ನುವಂತವರ ಆರೋಗ್ಯದ ಮೇಲೆ ಅಷ್ಟೇ ಪರಿಣಾಮವನ್ನು ಕೂಡಲೇ ಬೀರದೇ ಇದ್ದರೂ ಕಾಲಾನಂತ್ರ…
ನವದೆಹಲಿ: ಇಸ್ಲಾಂನ ಪವಿತ್ರ ಮಾಸ ರಂಜಾನ್‌ನ ಚಂದ್ರ ಶುಕ್ರವಾರ ದೆಹಲಿ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಕಾಣಿಸಲಿಲ್ಲ ಮತ್ತು ಮೊದಲ ಉಪವಾಸ ಮಾರ್ಚ್ 2 (ಭಾನುವಾರ) ರಂದು ನಡೆಯಲಿದೆ. ಚಾಂದನಿ ಚೌಕ್‌ನ ಫತೇಪುರಿ ಮಸೀದಿಯ ಶಾಹಿ ಇಮಾಮ್ ಮೌಲಾನಾ ಮುಫ್ತಿ ಮುಕರ್ರಂ ಅಹ್ಮದ್ ಮಾಧ್ಯಮಗಳಿಗೆ ಮಾತನಾಡಿ, ದೆಹಲಿ-ಎನ್‌ಸಿಆರ್ ಬೆಳಿಗ್ಗೆಯಿಂದ ಮೋಡ ಕವಿದಿತ್ತು, ಇದರಿಂದಾಗಿ ಇಲ್ಲಿ ಚಂದ್ರ ಗೋಚರಿಸಲಿಲ್ಲ. ಗುಜರಾತ್, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಹಲವು ಸ್ಥಳಗಳಲ್ಲಿ ಸಂಪರ್ಕ ಸಾಧಿಸಲಾಗಿದೆ, ಆದರೆ ಚಂದ್ರನ ದರ್ಶನ ಎಲ್ಲಿಂದಲೂ ದೃಢಪಟ್ಟಿಲ್ಲ ಎಂದು ಅವರು ಹೇಳಿದರು. ಸಾಮಾನ್ಯವಾಗಿ ಗುಜರಾತ್‌ನ ಕಚ್ ಪ್ರದೇಶದಲ್ಲಿ ಚಂದ್ರ ಗೋಚರಿಸುತ್ತದೆ, ಆದರೆ ಅಲ್ಲಿಂದ ರಂಜಾನ್ ಚಂದ್ರನನ್ನು ನೋಡಿದ ಬಗ್ಗೆ ಯಾವುದೇ ಸುದ್ದಿ ಇಲ್ಲ ಎಂದು ಅಹ್ಮದ್ ಹೇಳಿದರು. ಆದ್ದರಿಂದ ಮೊದಲ ಉಪವಾಸ ಮಾರ್ಚ್ 2 ರಂದು ಅಂದರೆ ಭಾನುವಾರ ಎಂದು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಇಸ್ಲಾಂನಲ್ಲಿ ಒಂದು ತಿಂಗಳು 29 ಅಥವಾ 30 ದಿನಗಳನ್ನು ಹೊಂದಿರುತ್ತದೆ.…
ನವದೆಹಲಿ : ಆಂಟಿರೆಟ್ರೋವೈರಲ್ ಥೆರಪಿ (ART) ಔಷಧಿಗಳ ಕುರಿತು ಉದ್ಭವಿಸಿರುವ ಕಳವಳಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಆದೇಶಿಸಿದೆ. ಈ ಔಷಧಿಗಳನ್ನು HIV/AIDS ಚಿಕಿತ್ಸೆಗೆ ಬಳಸಲಾಗುತ್ತದೆ. ಫೆಬ್ರವರಿ 24, 2025 ರಂದು ಹೊರಡಿಸಲಾದ ತನ್ನ ಆದೇಶದಲ್ಲಿ, ನ್ಯಾಯಾಲಯವು ರಾಜ್ಯಗಳು ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸುವಂತೆಯೂ ಕೇಳಿದೆ. ಅವರಿಗೆ ಉತ್ತರ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಎಚ್‌ಐವಿ/ಏಡ್ಸ್ ಪೀಡಿತ ಜನರ ಜಾಲ ಮತ್ತು ಇತರರು ಈ ವಿಷಯದಲ್ಲಿ ಅರ್ಜಿ ಸಲ್ಲಿಸಿರುವುದು ಗಮನಾರ್ಹ. ವಿವಿಧ ರಾಜ್ಯಗಳು ಮತ್ತು ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ತೋರಿಸುವ ಚಾರ್ಟ್ ಅನ್ನು ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯವು ಅವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 4, 2025 ರಂದು ನಡೆಯಲಿದೆ.
ನವದೆಹಲಿ : ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಖ್, ಮಾರ್ಚ್ 1, 2025 ರಂದು ಎಲ್‌ಪಿಜಿ ಬೆಲೆಗಳು ಏರಿಕೆಯಾಗಿವೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಿವೆ. ದೆಹಲಿಯಿಂದ ಕೋಲ್ಕತ್ತಾಗೆ ಈ ಸಿಲಿಂಡರ್ ಬೆಲೆ 6 ರೂ. ಹೆಚ್ಚಾಗಿದೆ. ಇದಕ್ಕೂ ಮೊದಲು ಫೆಬ್ರವರಿ 1, 2025 ರಂದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 7 ರೂ.ವರೆಗೆ ಇಳಿಸಿದ್ದವು. ಆದಾಗ್ಯೂ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಫೆಬ್ರವರಿಯಲ್ಲಿ ಸತತ ಎರಡನೇ ತಿಂಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ.
ನವದೆಹಲಿ : ಮಧ್ಯಪ್ರದೇಶದ ಛಿಂದ್ವಾರದಲ್ಲಿ ಸಾಕು ಬೆಕ್ಕುಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ ವೈರಸ್ (H5N1) ಅಂದರೆ ಪಕ್ಷಿ ಜ್ವರದ ಪ್ರಕರಣ ವರದಿಯಾಗಿದೆ. ಭಾರತದಲ್ಲಿ ಇಂತಹ ಮೊದಲ ಪ್ರಕರಣ ಇದಾಗಿದೆ. H5N1 ಇನ್ಫ್ಲುಯೆನ್ಸ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿರುವುದರಿಂದ, ಇದು ಹೆಚ್ಚಾಗಿ ಪಕ್ಷಿಗಳು ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಬೆಕ್ಕುಗಳಲ್ಲಿ ಇದರ ಉಪಸ್ಥಿತಿಯು ಮನುಷ್ಯರಿಗೂ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಹಕ್ಕಿ ಜ್ವರವು ಕೋಳಿ ಅಥವಾ ಬೆಕ್ಕಿಗೆ ಮಾತ್ರವಲ್ಲದೆ ನಮ್ಮ ಮನೆಗಳಲ್ಲಿ ವಾಸಿಸುವ ಇತರ ಅನೇಕ ಪ್ರಾಣಿಗಳಿಗೂ ಹರಡಬಹುದು ಎಂದು ತಜ್ಞರು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು. ಮಾನವರಲ್ಲಿ H5N1 ಪಕ್ಷಿ ಜ್ವರದ ಲಕ್ಷಣಗಳು H5N1 ಹಕ್ಕಿ ಜ್ವರ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಹರಡಬಹುದು. ಇದರ ಲಕ್ಷಣಗಳು ಉಸಿರಾಟದ ತೊಂದರೆ, ಜ್ವರ, ಕೆಮ್ಮು ಮತ್ತು ತೀವ್ರವಾದ ನ್ಯುಮೋನಿಯಾವನ್ನು ಒಳಗೊಂಡಿರಬಹುದು. ಇದಲ್ಲದೆ, ಗಂಭೀರ ಸ್ಥಿತಿಯಲ್ಲಿ ಸೋಂಕಿತ ವ್ಯಕ್ತಿಗೆ ಮೂರ್ಛೆ ರೋಗ ಬರಬಹುದು. ಇದರಿಂದ ಸಾವಿನ ಅಪಾಯವೂ ಇದೆ. ನೀವು…
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು ಆದ್ಯತಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಹಣ ವರ್ಗಾಯಿಸಲಾಗುತ್ತಿದ್ದು, ಫೆಬ್ರವರಿ-2025 ರಿಂದ ಜಾರಿಗೆ ಬರುವಂತೆ 5 ಕೆ.ಜಿ. ಅಕ್ಕಿಯನ್ನು ಮಾರ್ಚ್-2025ರ ಮಾಹೆಯ ಪಡಿತರ ವಿತರಣೆಯೊಂದಿಗೆ ಸೇರಿಸಿ ವಿತರಿಸಲು ಸರ್ಕಾರವು ಆದೇಶಿಸಿದೆ. ಅಂತ್ಯೋದಯ ಪಡಿತರ ಚೀಟಿಗೆ ಕೇಂದ್ರದಿಂದ 3 ಸದಸ್ಯರವರೆಗಿನ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ರಾಜ್ಯದಿಂದ 4 ಸದಸ್ಯ ಮೇಲ್ಪಟ್ಟು ಒಬ್ಬರಿಗೆ 10 ಕೆ.ಜಿ.ಯಂತೆ ಹಾಗೂ ಆದ್ಯತಾ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ ಕೇಂದ್ರದಿಂದ ತಲಾ 5 ಕೆ.ಜಿ. ಹಾಗೂ ರಾಜ್ಯದಿಂದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿಯನ್ನು ಮಾರ್ಚ್-2025ರ ಮಾಹೆಗೆ ಮಾತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಕೊಪ್ಪಳ : ಹಿಂದೂ ದಾರ್ಮಿಕ ದತ್ತಿ ಇಲಾಖೆಯ ಶ್ರೀ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಾಂಗಲ್ಯ ಭಾಗ್ಯ ಯೋಜನೆಯ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾರ್ಚ 2 ರಂದು ರವಿವಾರ ಪೂರ್ವಾಹ್ನ 12 ಗಂಟೆಗೆ ಶ್ರೀಕ್ಷೇತ್ರ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತರಿರುವರು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್…
ಬಳ್ಳಾರಿ : ರಾಜ್ಯದ ಕೆಲವು ಸ್ಥಳಗಳಲ್ಲಿ ವರದಿಯಾಗಿರುವ ಹಕ್ಕಿ ಜ್ವರ (ಬರ್ಡ್ ಫ್ಲೂ) ಪ್ರಕರಣದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮುಂಜಾಗ್ರತೆ ವಹಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನ ಇಲಾಖೆ, ಬಿಎಮ್‌ಆರ್‌ಸಿ, ಮಹಾನಗರ ಪಾಲಿಕೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಮಾಹಿತಿ ಶಿಕ್ಷಣ ಸಂವಹನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಹಕ್ಕಿಜ್ವರ ಕುರಿತು ಸೇರಿದಂತೆ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಕ್ಕಿ ಜ್ವರವು (ಹಕ್ಕಿಗಳಿಗೆ ಸಂಬAಧಿಸಿದ) ವೈರಾಣುಗಳಿಂದ (ವೈರಸ್) ಉಂಟಾಗಿದ್ದು, ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಶ್ವಾಸೋಚ್ಛಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ. ಸೋಂಕು ತಗುಲಿದ ಕೋಳಿ ಮರಿಗಳ ಪುಕ್ಕಗಳನ್ನು ತರಿಯುವ ಮತ್ತು ವಧೆಗೈಯುವ ಕಾರ್ಯಗಳಲ್ಲಿ ನಿರತರಾದ ವಯಸ್ಕರಲ್ಲಿ ಹೆಚ್ಚಾಗಿ ಈ ಸೋಂಕು ಸಂಭವಿಸುತ್ತದೆ ಎಂದರು. ಸೋAಕು ತಗಲಿದ ಅಥವಾ…
ಬೆಂಗಳೂರು : ಸರ್ಕಾರಿ ಪ್ರೌಡ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಸಂಬಂದ ಪ್ರಸ್ತಾವನೆ ಪಡೆಯುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿನ ಮುಖ್ಯ ಶಿಕ್ಷಕರು ಹಾಗೂ ಉಪ ಪ್ರಾಂಶುಪಾಲರ ವೃಂದದ ಗ್ರೂಪ್-ಬಿ ಖಾಲಿ ಹುದ್ದೆಗಳಿಗೆ ದಿನಾಂಕ:01.01.2023ರಲ್ಲಿದ್ದಂತೆ ಪ್ರಕಟಿಸಲಾದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನಾದರಿಸಿ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಲಾಗಿದೆ. ಪ್ರಕಟಿಸಿರುವ ಜೇಷ್ಟತಾ ಪಟ್ಟಿಯನ್ನು ಅನುಸರಿಸಿ ಬೆಂಗಳೂರು /ಮೈಸೂರು ವಿಭಾಗದಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರು/ಉಪ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.ಈ ಪತ್ರದೊಂದಿಗೆ ಸರ್ಕಾರಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರು/ಉಪ ಪ್ರಾಂಶುಪಾಲರ ಹುದ್ದೆಗಳಿಗೆ ನೀಡಬಹುದಾದ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಮುಂದುವರೆದು ಡೋಸಿಯರ್ ಸಲ್ಲಿಸುವ ಪೂರ್ವದಲ್ಲಿ ಈ ಕೆಳಕಂಡ ಅಂಶಗಳನ್ನು…
ಬೆಂಗಳೂರು : ಉಪಹಾರ ಕೇಂದ್ರಗಳು ಮತ್ತು ಹೋಟೆಲ್ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಇದನ್ನು ನಿಷೇಧಿಸಲಾಗಿದೆ. ಇನ್ನೇರಡು ದಿನಗಳಲ್ಲಿ ಅಧಿಕೃತ ಸುತ್ತೊಲೆ ನೀಡಲಾಗುವುದು. ಈ ಮೊದಲು ಇಡ್ಲಿ ತಯಾರಿಕೆಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಹೆಚ್ಚಿನ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಸಾರ್ವಜನಿಕರು ಸೇವಿಸುವ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದ್ದು, ರಾಜ್ಯದಲ್ಲಿ ಆಹಾರ ಬೇಯಿಸಲು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು. ಅಲ್ಲದೆ, ಹಸಿರು ಬಟಾಣಿಗಳಲ್ಲಿ ರಾಸಾಯನಿಕ ಬಳಕೆ ಕುರಿತು 31 ಮಾದರಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 26 ಅಸುರಕ್ಷಿತ ಎಂದು ದೃಢಪಟ್ಟಿದೆ ಎಂದರು. ಈ ವರ್ಷದ ಜನವರಿಯಿಂದ ವಿವಿಧ ಹೋಟೆಲ್, ಮಳಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಬಳಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ…