Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಕಿಯ ಉಂಡೆಯಂತಾದ ಜಲಸಂಧಿ ನಡುವೆಯೂ ಭಾರತದ ಸಾಹಸ: 46,000 ಟನ್ ಗ್ಯಾಸ್ ಹೊತ್ತ ‘ಗ್ರೀನ್ ಸಾನ್ವಿ’ ಹಡಗು ಸುರಕ್ಷಿತವಾಗಿ ಪ್ರಯಾಣ!

04/04/2026 7:00 PM

ಅಂತರ್ಜಾತಿ ವಿವಾಹಕ್ಕೆ ಮನೆಯವರ ತೀವ್ರ ವಿರೋಧ: ಮನನೊಂದು ನವದಂಪತಿ ಆತ್ಮಹತ್ಯೆ

04/04/2026 7:00 PM

BREAKING: ಉತ್ತರ ಪ್ರದೇಶದಲ್ಲಿ ಘೋರ ದುರಂತ: ಜಾತ್ರೆಯಲ್ಲಿ ದೈತ್ಯ ತೊಟ್ಟಿಲು ಮುರಿದು ಬಿದ್ದು 30ಕ್ಕೂ ಹೆಚ್ಚು ಜನರಿಗೆ ಗಾಯ

04/04/2026 6:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `Whats App’ ಬಳಕೆದಾರರೇ ಗಮನಿಸಿ : ಇಂದಿನಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !
KARNATAKA

`Whats App’ ಬಳಕೆದಾರರೇ ಗಮನಿಸಿ : ಇಂದಿನಿಂದ ‘ಸಿಮ್ ಬೈಂಡಿಂಗ್’ ನಿಯಮ ಜಾರಿ, ಸಿಮ್ ತೆಗೆದರೆ ಆ್ಯಪ್ ಬಂದ್ !

By kannadanewsnow5701/03/2026 5:04 AM

ಬೆಂಗಳೂರು: ನೀವು ವಾಟ್ಸಾಪ್ (WhatsApp) ಅಥವಾ ಟೆಲಿಗ್ರಾಮ್ (Telegram) ಬಳಸುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ಮಾರ್ಚ್ 1 ರ ಇಂದಿನಿಂದ ಜಾರಿಗೆ ಬರುವಂತೆ ಕೇಂದ್ರ ಟೆಲಿಕಾಂ ಇಲಾಖೆಯು ಸಂವಹನ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರುತ್ತಿದೆ.ಇನ್ನು ಮುಂದೆ ನಿಮ್ಮ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ (SIM Card) ಇಲ್ಲದಿದ್ದರೆ ವಾಟ್ಸಾಪ್ ಕೆಲಸ ಮಾಡುವುದಿಲ್ಲ!

ಏನಿದು ‘ಸಿಮ್ ಕಾರ್ಡ್ ಬೈಂಡಿಂಗ್’ ನಿಯಮ?

ಇಲ್ಲಿಯವರೆಗೆ, ಒಂದು ಬಾರಿ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಅನ್ನು ವೆರಿಫೈ (Verify) ಮಾಡಿದ ನಂತರ, ಫೋನ್‌ನಿಂದ ಸಿಮ್ ಕಾರ್ಡ್ ತೆಗೆದರೂ ವೈಫೈ (WiFi) ಮೂಲಕ ಆ್ಯಪ್ ಬಳಸಲು ಸಾಧ್ಯವಿತ್ತು. ಆದರೆ, ಹೊಸ ‘ಸಿಮ್ ಕಾರ್ಡ್ ಬೈಂಡಿಂಗ್’ ನಿಯಮದ ಪ್ರಕಾರ:

ಸಿಮ್ ಇಲ್ಲದಿದ್ದರೆ ಆ್ಯಪ್ ಬಂದ್: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್ ಆಗಿರುವ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್ ಸ್ವಯಂಚಾಲಿತವಾಗಿ ಲಾಗ್ ಔಟ್ (Log out) ಆಗಲಿದೆ.

ನಿರಂತರ ಪರಿಶೀಲನೆ: ಆ್ಯಪ್ ಕೆಲಸ ಮಾಡಲು ಫೋನ್‌ನಲ್ಲಿ ಸಿಮ್ ಇರುವುದು ಇನ್ಮುಂದೆ ಕಡ್ಡಾಯ. ಸಿಮ್ ತೆಗೆದ ತಕ್ಷಣ ಸಂವಹನ ಸೇವೆಗಳು ಸ್ಥಗಿತಗೊಳ್ಳಲಿವೆ.

ವಾಟ್ಸಾಪ್ ವೆಬ್ ಮೇಲೂ ಪರಿಣಾಮ: ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸುವ ವಾಟ್ಸಾಪ್ ವೆಬ್ ಸಹ ಇನ್ನು ಮುಂದೆ ಪ್ರತಿ 6 ಗಂಟೆಗೊಮ್ಮೆ ಲಾಗ್ ಔಟ್ ಆಗಲಿದೆ.

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ನಕಲಿ ಖಾತೆಗಳ ಮೂಲಕ ನಡೆಯುವ ವಂಚನೆಗಳನ್ನು ತಡೆಯಲು ಕೇಂದ್ರ ಟೆಲಿಕಾಂ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ವಂಚನೆಗೆ ಬ್ರೇಕ್: ಸೈಬರ್ ಕ್ರಿಮಿನಲ್‌ಗಳು ಸಿಮ್ ಕಾರ್ಡ್ ಇಲ್ಲದ ಫೋನ್‌ಗಳಲ್ಲಿ ಇಂತಹ ಆ್ಯಪ್‌ಗಳನ್ನು ಬಳಸಿ ಅಕ್ರಮ ಎಸಗುತ್ತಿದ್ದರು.

ಗುರುತು ಪತ್ತೆ: ಸಿಮ್ ಬೈಂಡಿಂಗ್ ಮಾಡುವುದರಿಂದ ಪ್ರತಿಯೊಂದು ಖಾತೆಯು ಅಧಿಕೃತ ಮೊಬೈಲ್ ಸಂಖ್ಯೆಯೊಂದಿಗೆ ಸದಾ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ಗಮನಿಸಿ: ಕಳೆದ ವರ್ಷ ನವೆಂಬರ್‌ನಲ್ಲೇ ಈ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಈ ಬದಲಾವಣೆ ತರಲು ಫೆಬ್ರವರಿ 28 ರವರೆಗೆ ಗಡುವು ನೀಡಲಾಗಿತ್ತು. ಆ ಗಡುವು ಇಂದು ಮುಗಿಯುತ್ತಿದ್ದು, ನಾಳೆಯಿಂದ ಹೊಸ ಬದಲಾವಣೆಗಳು ಅನ್ವಯವಾಗಲಿವೆ.

ಸಲಹೆ: ನಿಮ್ಮ ವಾಟ್ಸಾಪ್ ಸದಾ ಚಾಲ್ತಿಯಲ್ಲಿರಬೇಕೆಂದರೆ, ನಿಮ್ಮ ಪ್ರೈಮರಿ ಸಿಮ್ ಕಾರ್ಡ್ ಫೋನ್‌ನಲ್ಲೇ ಇರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಡೇಟಾ ಬ್ಯಾಕಪ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.

app will be blocked if SIM is removed! Attention WhatsApp users: 'SIM binding' rule implemented from today
Share. Facebook Twitter LinkedIn WhatsApp Email

Related Posts

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಬೈಲ್ ಕಳ್ಳತನ: 9 ಅಪ್ರಾಪ್ತರು ಸೇರಿದಂತೆ 13 ಮಂದಿ ಬೆಂಗಳೂರು ಪೊಲೀಸರ ವಶಕ್ಕೆ

04/04/2026 6:22 PM1 Min Read

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

04/04/2026 6:18 PM3 Mins Read

ಪೋಕ್ಸೋ ಕೇಸಲ್ಲಿ ಮಕ್ಕಳ ಸುರಕ್ಷತೆಗೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಜಾರಿ

04/04/2026 5:30 PM2 Mins Read
Recent News

ಬೆಂಕಿಯ ಉಂಡೆಯಂತಾದ ಜಲಸಂಧಿ ನಡುವೆಯೂ ಭಾರತದ ಸಾಹಸ: 46,000 ಟನ್ ಗ್ಯಾಸ್ ಹೊತ್ತ ‘ಗ್ರೀನ್ ಸಾನ್ವಿ’ ಹಡಗು ಸುರಕ್ಷಿತವಾಗಿ ಪ್ರಯಾಣ!

04/04/2026 7:00 PM

ಅಂತರ್ಜಾತಿ ವಿವಾಹಕ್ಕೆ ಮನೆಯವರ ತೀವ್ರ ವಿರೋಧ: ಮನನೊಂದು ನವದಂಪತಿ ಆತ್ಮಹತ್ಯೆ

04/04/2026 7:00 PM

BREAKING: ಉತ್ತರ ಪ್ರದೇಶದಲ್ಲಿ ಘೋರ ದುರಂತ: ಜಾತ್ರೆಯಲ್ಲಿ ದೈತ್ಯ ತೊಟ್ಟಿಲು ಮುರಿದು ಬಿದ್ದು 30ಕ್ಕೂ ಹೆಚ್ಚು ಜನರಿಗೆ ಗಾಯ

04/04/2026 6:56 PM

ಇರಾನ್ ಪರಮಾಣು ಸ್ಥಾವರ ಗುರಿಯಾಗಿಸಿ ಭೀಕರ ದಾಳಿ: ಓರ್ವ ಸಾವು; ವಿಕಿರಣ ಸೋರಿಕೆಯ ಆತಂಕವಿಲ್ಲ ಎಂದ IAEA !

04/04/2026 6:54 PM
State News
KARNATAKA

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಬೈಲ್ ಕಳ್ಳತನ: 9 ಅಪ್ರಾಪ್ತರು ಸೇರಿದಂತೆ 13 ಮಂದಿ ಬೆಂಗಳೂರು ಪೊಲೀಸರ ವಶಕ್ಕೆ

By kannadanewsnow0904/04/2026 6:22 PM KARNATAKA 1 Min Read

ಬೆಂಗಳೂರು: ಮಾರ್ಚ್ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಾಟಾ ಐಪಿಎಲ್-2026ರ (IPL-2026) ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ (RCB vs…

ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಉಮೇಶ್ ಮೇಟಿ ಗೆಲ್ಲಿಸಿ: ಜನರಿಗೆ ಸಿಎಂ ಸಿದ್ದರಾಮಯ್ಯ ಮನವಿ

04/04/2026 6:18 PM

ಪೋಕ್ಸೋ ಕೇಸಲ್ಲಿ ಮಕ್ಕಳ ಸುರಕ್ಷತೆಗೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಜಾರಿ

04/04/2026 5:30 PM

ಬೆಂಗಳೂರಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಅರ್ಧದಷ್ಟು ‘ಬಂಕ್‌’ಗಳು ಬಂದ್, ಆಟೋ ಚಾಲಕರು ಕಂಗಾಲು

04/04/2026 5:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.