Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ರಾಜ್ಯ ಔಷಧ ಸರಬರಾಜು ನಿಗಮಕ್ಕೆ ಕಾಯಕಲ್ಪ ನೀಡುವತ್ತ ಕೆಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಬಾಣಂತಿಯರ ಸಾವಿಗೂ ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ವಿಲೀನಕ್ಕೂ ಸಂಬಂಧಿವಿಲ್ಲ ಎಂದು ಸ್ಪಷ್ಟಪಡಿಸಿದರು. ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುತಕ್ಷತಾ ಇಲಾಖೆಯನ್ನ ಆಡಳಿತಾತ್ಮಕ ದೃಷ್ಟಿಯಿಂದ ವಿಲೀನಗೊಳಿಸುವ ಪ್ರಸ್ತಾವನೆ ಈ ಹಿಂದೆಯೇ ಇತ್ತು. ಗುಣಮಟ್ಟ ಪರಿಶೀಲನೆಯಲ್ಲಿ ಔಷಧ ನಿಯಂತ್ರಣ ಇಲಾಖೆಗೆ ಮೇಲ್ವಿಚಾರಣೆಯ ಅಗತ್ಯತೆ ಇದೆ. ಐಎಎಸ್ ಮಟ್ಟದ ಅಧಿಕಾರಿ ಇದ್ದರೆ ಉತ್ತಮ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಔಷಧ ಸರಬರಾಜು ನಿಗಮಕ್ಕೂ ಕಾಯಕಲ್ಪ ನೀಡುವ ಅಗತ್ಯತೆ ಇದೆ. KSMCL ಕರೆಯುವ ಟೆಂಡರ್ ಗಳಲ್ಲಿ ಗುಣಮಟ್ಟದ ಔಷಧಿಗಳನ್ನ ಪೂರೈಸುವಂತಹ ದೊಡ್ಡ ಕಂಪನಿಗಳು ಪಾಲ್ಗೊಳ್ಳುವಂತಾಗಬೇಕು. ಇನ್ನಷ್ಟು ಪರಿಣಕಾರಿಯಾಗಿ ಔಷಧ ಗುಣಮಟ್ಟ…
ಬೆಂಗಳೂರು : 66/11ಕೆ.ವಿ ಎನ್.ಜಿ.ಇ.ಎಫ್’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ಡಿಸೆಂಬರ್ 7 ರ ಇಂದು ಬೆಳಗ್ಗೆ 10 ಗಂಟೆ ಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: “ಎಸ್ಎಂವಿಬಿ ರೈಲು ನಿಲ್ದಾಣ, ಇಂದಿರಾನಗರ 1ನೇ ಹಂತ, ಎಚ್ಎಎಲ್ 2ನೇ ಹಂತ, ಹಲಸೂರು, ಹಳೆ ಮದ್ರಾಸ್ ರಸ್ತೆ, ಬೆನ್ನಿಗಾನಹಳ್ಳಿ, ಎ ನಾರಾಯಣಪುರ, ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶ ನಗರ, ಪೈ ಲೇಔಟ್, ಬೈರಸಂದ್ರ, ಸಿ.ವಿ. ರಾಮನಗರ, ಎನ್ಜಿಇಎಫ್ ಲೇಔಟ್ನ ಪರ್ವ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ಹೊಯ್ಸಳನಗರ, ಮುನೇಶ್ವರನಗರ, ಬಿಡಿಎ ಲೇಔಟ್, ಮುನಿನಂಜಪ್ಪ ಲೇಔಟ್, ದಯಾನಂದ ಲೇಔಟ್, ಕೆಜಿ ಪುರ, ಅಬ್ಬಯ್ಯ ರೆಡ್ಡಿ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ನಾಗವಾರಪಾಳ್ಯ, ರ್ತೂರು ರಸ್ತೆ, ಕೆ.ಆರ್. ರಸ್ತೆ. ಜೋಗುಪಾಳ್ಯ ರ್ಟಿಲರಿ ರಸ್ತೆ, ಕೇಂಬ್ರಿಡ್ಜ್ ಲೇಔಟ್, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಮಿಲೇನಿಯಾ ಟರ್ಸ್, ಹಲಸೂರು ರಸ್ತೆ, ಸಿ.ಎಮ್.ಹೆಚ್ ರಸ್ತೆ, ಇಂದಿರಾನಗರ…
ಗೃಹಪ್ರವೇಶಕ್ಕೆ ಮನೆ ಯಜಮಾನನ ಜಾತಕವನ್ನು ನೋಡಿ ಮುಹೂರ್ತವನ್ನು ನಿಷ್ಕರ್ಷೆ ಮಾಡಬೇಕು ಆದರೆ ಸ್ಥೂಲವಾಗಿ ವಾರ ತಿಥಿ ನಕ್ಷತ್ರ ಲಗ್ನ ಕಾಲ ದ್ವಾದಶ ಸುದ್ದಿ ಬಗ್ಗೆ ಸ್ವಲ್ಪ ತಿಳುವಳಿಕೆ ಅಗತ್ಯ. ವೈಶಾಖ ಮಾಸದಲ್ಲಿ ಗೃಹಪ್ರವೇಶ ನಡೆಸಿದ್ದಲ್ಲಿ ಬಹು ಪ್ರಶಸ್ತ ಪ್ರದವಾದದ್ದು. ಜೇಷ್ಠ ಮಾಸವು ಶುಭ ಪಾಲ್ಗುಣ ಸಂಪತ್ಕರ ಮಾಘಮಾಸದಲ್ಲಿ ಸುಖ ಸಂತೋಷ ಮತ್ತು ಧಾನ್ಯ ಸಮೃದ್ಧಿ ವಾರಗಳಲ್ಲಿ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಸಂಪತ್ಕರ ತಿಥಿಗಳಲ್ಲಿ ತೃತಿಯ ಪಂಚಮಿ ಸಪ್ತಮಿ ದಶಮಿ ತ್ರಯೋದಶಿ ಶ್ರೇಷ್ಠ. ರಕ್ತ ತಿಥಿ ದಗ್ದ ಯೋಗ ತಿಥಿಗಳು ಭದ್ರ ಕರಣ ಶುಕ್ಲ ಷಷ್ಟಿಗಳು ಬಹುಳ ಏಕಾದಶಿ ಮೊದಲ ಶುಕ್ಲ ಪ್ರತಿಪದಿಯ ವರೆಗೆ ಪ್ರದೋಷಗಳು ಸೂರ್ಯನನ್ನು ತನಗೆದುರಿಗಿರುವ ಶುಕ್ರನನ್ನು ಬಿಟ್ಟು ಗೃಹಪ್ರವೇಶ ಮಾಡತಕ್ಕದ್ದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ ನೀಡಲಾಗಿದೆ. ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ವರ್ಷಕ್ಕಿಂತ ಹಿಂದಿನ ಸಾವಿನ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೂಲಕವೇ ಮರಣ ಪ್ರಮಾಣ ಪತ್ರ ಪಡೆಯಬೇಕು ಎನ್ನುವ ಷರತ್ತು ರದ್ದುಗೊಳಿಸುವ ಜನನ ಮತ್ತು ಮರಣ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಮರಣ ಪ್ರಮಾಣ ಪತ್ರದಲ್ಲಿ ಲಭ್ಯವಿದ್ದಲ್ಲಿ ಕಾಯಿಲೆಯ ಅಥವಾ ಆಸ್ಪತ್ರೆಯ ಹಿನ್ನೆಲೆಯನ್ನು ದಾಖಲಿಸಿ ಡಿಜಿಟಲ್ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಹೀಗಿವೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು. * ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ * ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಸಮಾಜ ಕಲ್ಯಾಣ ಭವನವನ್ನು ₹40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ…
ನವದೆಹಲಿ : ಮಧ್ಯಪ್ರದೇಶದಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಅಪ್ರಾಪ್ತ ಮಕ್ಕಳಿಗೆ ಯುವಕನೊಬ್ಬ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಮ್ ನಲ್ಲಿ ಜೈ ಶ್ರೀ ರಾಮ್ ಎಂದು ಹೇಳಲು ಯುವಕನೊಬ್ಬ ಮಕ್ಕಳಿಗೆ ಕೇಳಿದನು ಮತ್ತು ಅವರು ಜೈ ಶ್ರೀ ರಾಮ್ ಎಂದು ಹೇಳುವವರೆಗೂ ಅವನು ಅವರನ್ನು ಹೊಡೆಯುತ್ತಲೇ ಇದ್ದನು ಎಂದು ಹೇಳಲಾಗುತ್ತಿದೆ. ಮಕ್ಕಳು ಅಳುತ್ತಲೇ ಇದ್ದರು ಆದರೆ ಹುಡುಗ ನಿಲ್ಲಿಸಲಿಲ್ಲ. ಕಪಾಳಮೋಕ್ಷ ಮಾಡಿದರೂ ಸಮಾಧಾನವಾಗದಿದ್ದಾಗ ಚಪ್ಪಲಿ ತೆಗೆದು ಮಕ್ಕಳಿಗೆ ಹೊಡೆಯತೊಡಗಿದ. ಪ್ರಕರಣ ಒಂದು ತಿಂಗಳ ಹಿಂದಿನದು ಎನ್ನಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗಲೇ ವಿಷಯ ಬೆಳಕಿಗೆ ಬಂದಿದೆ. ವ್ಯಕ್ತಿ ಹೊಡೆದ ಮೂವರು ಮಕ್ಕಳಲ್ಲಿ 6 ವರ್ಷದ ಮಗು ಕೂಡ ಸೇರಿದೆ. ಉಳಿದ ಇಬ್ಬರ ವಯಸ್ಸು 11 ಮತ್ತು 13 ವರ್ಷ ಎನ್ನಲಾಗಿದೆ. ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. https://twitter.com/i/status/1864720434895233524 ವರದಿಯ ಪ್ರಕಾರ, ಗುರುವಾರ ಮೂವರು ಬಾಲಕರ ಕುಟುಂಬಗಳು ಮನಕ್ ಚೌಕ್ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿ…
ಬೆಂಗಳೂರು : ನೋಂದಾಯಿತ ಕಾರ್ಮಿಕರಾಗಲು ಕಾರ್ಮಿಕ ಮಂಡಳಿಯು ಸೂಚಿಸಿರುವ ಅಧಿಕೃತ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮಂಡಳಿಗೆ ಸಲ್ಲಿಸಬೇಕಾದ ದಾಖಲೆಗಳು * ಉದ್ಯೋಗ ದೃಢೀಕರಣ ಪತ್ರ * ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ * ಬ್ಯಾಂಕ್ ಪಾಸ್ ಬುಕ್ ಪ್ರತಿ * ಅರ್ಜಿದಾರರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ. ಕಾರ್ಮಿಕ ಸಹಾಯವಾಣಿ 155214
ನವದೆಹಲಿ : ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಇಂದಿನಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಸಮಭಾಜಕ ಹಿಂದೂ ಮಹಾಸಾಗರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಸೈಕ್ಲೋನಿಕ್ ಪರಿಚಲನೆಯು ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ವಿಸ್ತರಿಸುತ್ತದೆ. ಇದರ ಪ್ರಭಾವದಿಂದ, ಡಿಸೆಂಬರ್ 7 ರ ಸುಮಾರಿಗೆ ಮಧ್ಯ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಶನಿವಾರದಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯನ್ನು ಮುನ್ಸೂಚಿಸುತ್ತದೆ, ನಿರ್ದಿಷ್ಟ ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ: ಡಿಸೆಂಬರ್ 11: ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಿಣಂ, ತಿರುವರೂರ್,…
ಭೋಪಾಲ್: ತರಗತಿಯಲ್ಲಿ ಬೈದಿದಕ್ಕೆ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಾಂಶಪಾಲರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಧಮೋರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ಪುಷ್ಪೇಂದ್ರ ಯಾದವ್ ಪ್ರಕಾರ, ಪ್ರಾಂಶುಪಾಲ ಎಸ್ಕೆ ಸಕ್ಸೇನಾ (55) ಈ ಹಿಂದೆ 12 ನೇ ತರಗತಿಯ ವಿದ್ಯಾರ್ಥಿ (17) ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಛೀಮಾರಿ ಹಾಕಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಶುಕ್ರವಾರ ಶಾಲೆಗೆ ಗೈರು ಹಾಜರಾಗಿದ್ದ. ಬಳಿಕ ದೇಶಿ ನಿರ್ಮಿತ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿದ್ದಾನೆ. ಪ್ರಾಂಶುಪಾಲರು ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆರೋಪಿ ತನ್ನ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾನೆ. ಉತ್ತರ ಪ್ರದೇಶದ ಗಡಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಈ ಕ್ರಮದಲ್ಲಿ ಮತ್ತೆ ಇವುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ನಿನ್ನೆ ಹೆಚ್ಚಿದ್ದ ಇವುಗಳ ಬೆಲೆ ಇಂದು ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 10ಗ್ರಾಂ 24ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 290 ರೂಪಾಯಿ ಇಳಿಕೆಯಾಗಿದ್ದು, ಇನ್ನೊಂದೆಡೆ ಬೆಳ್ಳಿಯ ದರವೂ ಕೆಜಿಗೆ 200 ರೂ. ಇಳಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಲವರು ಹೇಳಿದರೆ, ಇನ್ನು ಕೆಲವರು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಭವಿಷ್ಯ ನುಡಿದಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು (ಪ್ರತಿ 10 ಗ್ರಾಂ) (24 ಕ್ಯಾರೆಟ್, 22 ಕ್ಯಾರೆಟ್) ಚೆನ್ನೈನಲ್ಲಿ ರೂ. 77,610, ರೂ. 71,140 ಮುಂಬೈನಲ್ಲಿ ರೂ. 77,610, ರೂ. 71,140 ದೆಹಲಿಯಲ್ಲಿ ರೂ. 77, 760, ರೂ. 71,290 ಹೈದರಾಬಾದ್ನಲ್ಲಿ ರೂ. 77,610, ರೂ. 71,140 ವಿಜಯವಾಡದಲ್ಲಿ ರೂ. 77,610, ರೂ. 71,140 ವಡೋದರಾ ರೂ.…
ಲಕ್ನೋ : ದೇಶದಲ್ಲಿ ಮತ್ತೊಂದು ಬೆಚ್ದಿ ಬೀಳಿಸುವ ಘಟನೆ ನಡೆದಿದ್ದು, ಲಕ್ನೋದ ಪಿಜಿಐ ಪ್ರದೇಶದಲ್ಲಿ ಹೋಟೆಲ್ನ ಹೊರಗಿನಿಂದ ಮಹಿಳೆಯನ್ನು ಅಪಹರಿಸಿ ನಂತರ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯ ಸ್ಥಿತಿ ಹದಗೆಡುತ್ತಿದ್ದಂತೆ ಆರೋಪಿ ಮಹಿಳೆಯನ್ನು ರಸ್ತೆ ಬದಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಸಂತ್ರಸ್ತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ, 24 ವರ್ಷದ ಮಹಿಳೆ, ಲಕ್ನೋದ ಕೃಷ್ಣನಗರದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅವರು ಪಶ್ಚಿಮ ಬಂಗಾಳಕ್ಕೆ ಸೇರಿದವರು. ನವೆಂಬರ್ 23 ರಂದು ಪಿಜಿಐ ತನ್ನ ಸ್ನೇಹಿತನನ್ನು ಭೇಟಿಯಾಗಲು ರಾಯ್ ಬರೇಲಿ ರಸ್ತೆಯಲ್ಲಿರುವ ಹೋಟೆಲ್ಗೆ ಹೋಗಿದ್ದರು. 10 ಗಂಟೆ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ಹೋಟೆಲ್ನಿಂದ ಹೊರಬಂದು ಕ್ಯಾಬ್ಗಾಗಿ ಕಾಯುತ್ತಿದ್ದಳು. ಆಗ ಎರಡು ಕಾರುಗಳು ನಿಂತಿದ್ದವು. ಕಾರಿನಲ್ಲಿದ್ದ ಯುವಕರು ಆಕೆಯನ್ನು ತಮ್ಮ ವಾಹನದಲ್ಲಿ ಎಳೆದೊಯ್ದು ಸುಮಾರು 150 ಕಿ.ಮೀ. ಏಕಾಂತ ಸ್ಥಳಕ್ಕೆ ತೆರಳಿ ಸಾಮೂಹಿಕ ಅತ್ಯಾಚಾರ…