Subscribe to Updates
Get the latest creative news from FooBar about art, design and business.
Author: kannadanewsnow57
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಪಡೆಗಳು ಇರಾನ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿವೆ. ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಇಡೀ ಪ್ರದೇಶ ಉದ್ವಿಗ್ನಗೊಂಡಿದೆ. ಶನಿವಾರ ಬೆಳಗಿನ ಜಾವ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಟೆಹ್ರಾನ್ನ ಡೌನ್ಟೌನ್ ಪ್ರದೇಶದಲ್ಲಿ ದೊಡ್ಡ ಮಟ್ಟದ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಸ್ಫೋಟದ ತೀವ್ರತೆಗೆ ಆಕಾಶದತ್ತ ದಟ್ಟವಾದ ಹೊಗೆ ಆವರಿಸಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ಫೋಟ ಸಂಭವಿಸಿರುವುದನ್ನು ಇರಾನ್ನ ಸರ್ಕಾರಿ ದೂರದರ್ಶನ ದೃಢಪಡಿಸಿದೆ. ಆದರೆ, ದಾಳಿಯಿಂದ ಸಂಭವಿಸಿದ ಆಸ್ತಿಪಾಸ್ತಿ ಹಾನಿ ಅಥವಾ ಸಾವುನೋವುಗಳ ಬಗ್ಗೆ ಇನ್ನು ಯಾವುದೇ ನಿಖರ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೆಚ್ಚಿದ ಉದ್ವಿಗ್ನತೆ ಇರಾನ್ನ ಪರಮಾಣು ಕಾರ್ಯಕ್ರಮದ ವಿಚಾರವಾಗಿ ಈಗಾಗಲೇ ಇರಾನ್ ಮತ್ತು ಅಮೆರಿಕ ನಡುವೆ ಶೀತಲ ಸಮರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಇಸ್ರೇಲ್ ನೇರ ದಾಳಿಗೆ ಮುಂದಾಗಿರುವುದು ವಿಶ್ವದಾದ್ಯಂತ ಆತಂಕ ಮೂಡಿಸಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ: “ಮುಂಜಾನೆ ಇದ್ದಕ್ಕಿದ್ದಂತೆ…
ತೆಲ್ ಅವಿವ್: ಇಸ್ರೇಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿ ನೆಲೆಸಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯು ಮಹತ್ವದ ಸುರಕ್ಷತಾ ಸಲಹೆಗಳನ್ನು (Advisory) ನೀಡಿದೆ. ಪ್ರಮುಖ ಸೂಚನೆಗಳು: ಜಾಗರೂಕತೆ ಅತ್ಯಗತ್ಯ: ಇಸ್ರೇಲ್ನಲ್ಲಿರುವ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಸದಾ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ. ಸ್ಥಳೀಯ ನಿಯಮಗಳ ಪಾಲನೆ: ಇಸ್ರೇಲಿ ಅಧಿಕಾರಿಗಳು ಮತ್ತು ‘ಹೋಮ್ ಫ್ರಂಟ್ ಕಮಾಂಡ್’ ಹೊರಡಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಾಜಾ ಮಾಹಿತಿಗಾಗಿ www.oref.org.il/eng ವೆಬ್ಸೈಟ್ ಗಮನಿಸುತ್ತಿರಲು ತಿಳಿಸಲಾಗಿದೆ. ಆಶ್ರಯ ತಾಣಗಳ ಬಗ್ಗೆ ಅರಿವಿರಲಿ: ವಾಸಸ್ಥಳ ಅಥವಾ ಕೆಲಸದ ಸ್ಥಳದ ಹತ್ತಿರವಿರುವ ಸುರಕ್ಷಿತ ಆಶ್ರಯ ತಾಣಗಳ (Shelters) ಬಗ್ಗೆ ತಿಳಿದಿರಲಿ ಮತ್ತು ತುರ್ತು ಸಂದರ್ಭದಲ್ಲಿ ಅವುಗಳ ಹತ್ತಿರವೇ ಇರುವಂತೆ ಸಲಹೆ ನೀಡಲಾಗಿದೆ. ಅನಗತ್ಯ ಪ್ರಯಾಣ ಬೇಡ: ಮುಂದಿನ ಆದೇಶದವರೆಗೆ ಇಸ್ರೇಲ್ ಒಳಗೆ ಯಾವುದೇ ಅನಗತ್ಯ ಅಥವಾ ಅನಿವಾರ್ಯವಲ್ಲದ ಪ್ರಯಾಣವನ್ನು ಮಾಡದಂತೆ ಸೂಚಿಸಲಾಗಿದೆ. ಸುದ್ದಿಗಳ ಮೇಲೆ ನಿಗಾ ಇಡಿ: ಸ್ಥಳೀಯ ಸುದ್ದಿ ವಾಹಿನಿಗಳು,…
ಬೆಂಗಳೂರು : ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಒಂದು ನಿರ್ಣಾಯಕ ಹಂತವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರುಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಅತಿ ಹೆಚ್ಚು ಅಂಕ ಗಳಿಸುವಂತೆ ಒತ್ತಡ ಹೇರುತ್ತಿರುವುದು ಅವರ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭಯ ನಿವಾರಿಸಿ ಆತ್ಮಸ್ಥೈರ್ಯ ತುಂಬಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಪ್ರತಿ ವರ್ಷದಂತೆ ಈ ವರ್ಷವೂ “ಸಹಾಯವಾಣಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಸಮಸ್ಯೆ ಹಾಗೂ ಸಂದೇಹಗಳಿಗೆ ಪರಿಹಾರ ಪಡೆಯಲು ದೂರವಾಣಿ ಸಂಖ್ಯೆ 080-23310075 080-23310076 ಸಂಪರ್ಕಿಸಬಹುದು. ಕಾರ್ಯನಿರ್ವಹಣೆಯ ವೇಳಾಪಟ್ಟಿ ಸಹಾಯವಾಣಿಯು ಮಲ್ಲೇಶ್ವರಂನಲ್ಲಿರುವ ಮಂಡಲಿಯ ಕಚೇರಿಯಲ್ಲಿ ಪ್ರತಿದಿನ 2026 ರ ಮಾರ್ಚ್ 05 ರಿಂದ 15 ರವರೆಗೆ ಪ್ರತಿದಿನ ಅಪರಾಹ್ನ 4.00 ರಿಂದ ಸಂಜೆ 8.00 ರವರೆಗೆ ಕಾರ್ಯನಿರ್ವಹಿಸಲಿದೆ. ಭಾನುವಾರ ರಜಾ ದಿನವಾಗಿರುವುದರಿಂದ ಬೆಳಿಗ್ಗೆ 11.00 ರಿಂದ ಸಂಜೆ 5.00 ರವರೆಗೆ ಕಾರ್ಯನಿರ್ವಹಿಸಲಿದೆ. 2026ರ ಮಾರ್ಚ್ 18 ರಿಂದ ಏಪ್ರಿಲ್ 02 ರವರೆಗೆ…
ಬೆಳಗಾವಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರೆಡಿ ಆಗುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರೆಡಿಯಾಗುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಸ್ನಾನ ಮುಗಿಸಿಕೊಂಡು ಹೊರ ಬರುವಾಗ ಭೂಮಿಕಾ (17) ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಭೂಮಿಕಾ ಮಾಳಗಿ ಸಾವನ್ನಪ್ಪಿದ್ದಾರೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿ : ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಬೆಳಗಾವಿಯಲ್ಲಿ ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಕುಟುಂಬವೊಂದು ಬೀದಿಗೆ ಬಿದ್ದಿದೆ. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಮನೆಯನ್ನು ಜಪ್ತಿ ಮಾಡಿದೆ. ಹೀಗಾಗಿ 3 ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದಿದೆ. ಸಾಲ ಕಟ್ಟಿಲ್ಲವೆಂದು ಫೈನಾನ್ಸ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡಿದ್ದಾರೆ. ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಫೈನಾನ್ಸ್ ಕಂಪನಿ ಸಿಬ್ಬಂದಿಗಳು ಮನೆ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಸಾಮಾಗ್ರಿಯನ್ನೂ ತೆಗೆದುಕೊಳ್ಳಲು ಬಿಡದೇ ಸಿಬ್ಬಂದಿ ದರ್ಪ ಮೆರೆದಿದ್ದಾರೆ. ಸೀಸಾದ 7 ಲಕ್ಷ ರೂ. ಸಾಲ ಬಾಕಿ ಇತ್ತು, ಕಂತು ಕಟ್ಟಿಲ್ಲ ಎಂದು ಮನೆ ಸೀಜ್ ಮಾಡಲಾಗಿದೆ. ಹಣ ಕಟ್ತೀವಿ ಸಮಯಾವಕಾಶ ಕೊಡಿ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಗುರುವಾರದ ದಿನದಂದು ರಾಘವೇಂದ್ರ ಸ್ವಾಮಿಗಳನ್ನು ನಾವು ಪೂಜಿಸುವುದರ ಜೊತೆಗೆ ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಸಲುವಾಗಿ ಮಂತ್ರಗಳನ್ನು, ಸ್ತೋತ್ರಗಳನ್ನು ಕೂಡ ಪಠಿಸುತ್ತೇವೆ. ಗುರುವಾರದ ದಿನದಂದು ನಾವು ಪಠಿಸಬೇಕಾದ ಉತ್ತಮ ಮಂತ್ರ ಅಥವಾ ಸ್ತೋತ್ರಗಳಲ್ಲಿ ಶ್ರೀರಾಘವೇಂದ್ರ ಕವಚ ಕೂಡ ಒಂದಾಗಿದೆ. ಗುರುವಾರದ ದಿನದಂದು ಶ್ರೀರಾಘವೇಂದ್ರ ಕವಚವನ್ನು ಪಠಿಸುವುದರಿಂದ ವ್ಯಕ್ತಿಯು ತನ್ನೆಲ್ಲಾ ಕಷ್ಟಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತಾನೆ. ಗುರುವಾರ ದಿನದಂದು ತಪ್ಪದೇ ಪಠಿಸಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ|| ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್ ದೇವತಾ ಶ್ರೀ…
ಧರ್ಮಸ್ಥಳ : ಮಾರ್ಚ್ 3ರಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂದು ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಧರ್ಮಸ್ಥಳದ ಆಡಳಿತ ಮಂಡಳಿಯು ಪ್ರಕಟಣೆ ಹೊರಡಿಸಿದ್ದು, ಭಕ್ತಾದಿಗಳು ಸಹಕರಿಸುವಂತೆ ಕೋರಿದೆ. ದರ್ಶನದ ಸಮಯದ ವಿವರ: ದಿನಾಂಕ: 03-03-2026, ಮಂಗಳವಾರ. ಬೆಳಗಿನ ಅವಧಿ: ಅಂದು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನದ ನಂತರ: ಗ್ರಹಣದ ಕಾರಣದಿಂದ ಮಧ್ಯಾಹ್ನ 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತಗೊಳ್ಳಲಿದೆ. ರಾತ್ರಿಯ ಅವಧಿ: ರಾತ್ರಿ 7.30 ಗಂಟೆಯ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ದೂರದ ಊರುಗಳಿಂದ ಬರುವ ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸವನ್ನು ಯೋಜಿಸಬೇಕೆಂದು ಕ್ಷೇತ್ರವು ವಿನಂತಿಸಿದೆ.
ಇಂದಿನ ದಿನಗಳಲ್ಲಿ ಪ್ರೀತಿ ಎಷ್ಟು ವೇಗವಾಗಿ ಚಿಗುರುತ್ತದೆಯೋ, ಅಷ್ಟೇ ವೇಗವಾಗಿ ಬ್ರೇಕಪ್ ಗಳು ಕೂಡ ನಡೆಯುತ್ತಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿಯಿಂದ ದೂರವಾಗುವುದು ಅಥವಾ ಆ ನೆನಪುಗಳನ್ನು ಮರೆತು ಬದುಕುವುದು ಯಾರಿಗಾದರೂ ಅತೀವ ನೋವಿನ ಸಂಗತಿ. ಆದರೆ, ಈ ಕಷ್ಟಕಾಲದಿಂದ ಹೊರಬಂದು ಜೀವನವನ್ನು ಹೊಸದಾಗಿ ಹೇಗೆ ಆರಂಭಿಸಬೇಕು ಎಂಬುದರ ಕುರಿತು ಖ್ಯಾತ ರಿಲೇಷನ್ಶಿಪ್ ಕೋಚ್ ಮತ್ತು ಕೌನ್ಸೆಲರ್ ಕಂಫರ್ಟ್ ಒಮೊವ್ರೆ, ತಮ್ಮ ‘ಹಾರ್ಟ್ಸ್ ಬ್ಲೂಮ್ ಹಿಯರ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಅದ್ಭುತ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ವಿವರ ಇಲ್ಲಿದೆ: 1. ನಿಮ್ಮ ಮೇಲೆ ನಿಮಗಿರಲಿ ನಂಬಿಕೆ ಬ್ರೇಕಪ್ ನಂತರ, “ನಾನು ತೆಗೆದುಕೊಂಡ ನಿರ್ಧಾರ ಸರಿಯೇ?” ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಆದರೆ, ನಿಮ್ಮ ಸಂತೋಷ ಮತ್ತು ಮಾನಸಿಕ ಶಾಂತಿಗಾಗಿ ನೀವು ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಬಲವಾಗಿ ನಂಬಿ. ನಿಮ್ಮ ಮನಸ್ಸಿನಲ್ಲಿರುವ ಕೋಪ ಅಥವಾ ಅಪರಾಧಿ ಭಾವನೆಯನ್ನು ಹತ್ತಿಕ್ಕಬೇಡಿ; ಬದಲಾಗಿ ಅದನ್ನು ಡೈರಿಯಲ್ಲಿ ಬರೆಯಿರಿ. ತಪ್ಪು ಸಂಬಂಧದಲ್ಲಿ ಇಷ್ಟು ದಿನ ಏಕೆ…
ಗದಗ : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಆಸ್ತಿ ವಿಚಾರವಾಗಿ ಮಗನೇ ತನ್ನ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಗೋವನಾಳ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಶಂಕರ ಗೌಡ ದ್ಯಾವನಗೌಡ್ರ (60) ಎಂಬುವರನ್ನು ಅವರ ಮಗ ಪ್ರಭು ಹತ್ಯೆ ಮಾಡಿದ್ದಾನೆ. 2 ಎಕರೆ ಜಮೀನಿಗೊಸ್ಕರ ತಂದೆ-ಮಗನ ನಡುವೆ ಜಗಳವಾಗಿದ್ದು, ಈ ವೇಳೆ ತಂದೆ ಮೇಲೆ ಮಗ ಪ್ರಭು ಜೋರಾಗಿ ಹೊಡೆದಿದ್ದು, ಹೊಡೆದ ರಭಸಕ್ಕೆ ಶಂಕರಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರೋಪಿ ಮಗ ಪ್ರಭುವನ್ನು ಬಂಧಿಸಿದ್ದಾರೆ.
ಸೈನಿಕ ಶಾಲೆಯಲ್ಲಿ ಓದಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯ (AISSEE 2026) ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಈಗ ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಪರೀಕ್ಷೆಯು ಜನವರಿ 18, 2026 ರಂದು ನಡೆದಿತ್ತು. ಫಲಿತಾಂಶ ಪಡೆಯಲು ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ NTA ಬಿಡುಗಡೆ ಮಾಡಿರುವ ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು: ಹಂತ 1: ಮೊದಲು ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡಿ. ಹಂತ 2: ವೆಬ್ಸೈಟ್ನ ಮುಖಪುಟದಲ್ಲಿರುವ ‘Candidate Activity’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಹಂತ 3: ನಂತರ…














