Author: kannadanewsnow57

ಬೆಂಗಳೂರು : ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಇಂದು ಧಾರವಾಡ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಹುಬ್ಬಳ್ಳಿ-ಧಾರವಾಡ, ಕಾರವಾರ, ಗದಗ, ಯಾದಗಿರಿ, ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮಳೆಗೆ ಅಕ್ಷರಶಃ ನಲುಗಿ ಹೋಗಿವೆ. ಬುಧವಾರ ರಾತ್ರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಇಬ್ಬರು ನೀರು ಪಾಲಾಗಿದ್ದರೆ, ಗೋಕಾಕ್‌ನಲ್ಲಿ ಒಬ್ಬರು ಬಲಿಯಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ನಾಳೆಯೂ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಜೂ.13 ರಂದು ಸಹ ಮುಂದುವರೆಸಿ, ಇಂದು ಒಂದು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ  ಮಗು ಸೇರಿ ಮೂವರು ಸ್ಥಳದಲ್ಲೇ ಸಾವವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿಗೆ ಡಿಕ್ಕಿ ಹೊಡೆದು ಆಂಧ್ರ ಸಾರಿಗೆ ಬಸ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 5 ವರ್ಷದ ಮಗು, 18 ವರ್ಷದ ಯುವತಿ ಹಾಗೂ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : 2006ರ ಏಪ್ರಿಲ್ 4ಕ್ಕಿಂತ ಮೊದಲು ನೇಮಕಗೊಂಡ ರಾಜ್ಯದ 13 ಸಾವಿರ ಎನ್‌ಪಿಎಸ್ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ಉಲ್ಲೇಖ-(2) ಮತ್ತು (4) ರ ಆದೇಶದಲ್ಲಿ ದಿನಾಂಕ: 01.04.2006 ಮತ್ತು ತದನಂತರ ಸೇವೆಗೆ ಸೇರಿದ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಗಳನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ-ಎನ್.ಪಿ.ಎಸ್) ಜಾರಿಗೊಳಿಸಿರುತ್ತದೆ. ಈ ಯೋಜನೆಯಲ್ಲಿ ಒಳಪಡುವ ನೌಕರರ ವೇತನದಲ್ಲಿ ಪ್ರತಿ ತಿಂಗಳು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 10 ರಷ್ಟು ವಂತಿಗೆಯನ್ನು ಕಟಾವಣೆಗೊಳಿಸಿ, ಸದರಿ ಮೊತ್ತಕ್ಕೆ ಸರ್ಕಾರದ ವತಿಯಿಂದ ವೇತನ ಮತ್ತು ತುಟ್ಟಿಭತ್ಯೆಯ ಮೇಲೆ ಶೇಕಡ 14 ರಷ್ಟು ವಂತಿಗೆಯನ್ನು ಕೊಡುಗೆಯಾಗಿ ನೀಡಿ, ಈ ಕ್ರೋಢೀಕೃತ ನಿಧಿಯನ್ನು (Employee & Govt Contribution) ಪೆನ್‌ಷನ್ ಫಂಡ್ ರೆಗ್ಯೂಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿಯ (ಪಿ.ಎಫ್.ಆರ್.ಡಿ.ಎ) ಅಧೀನದಲ್ಲಿರುವ ಎನ್.ಪಿ.ಎಸ್ ಟ್ರಸ್ಟ್, ಮುಂಬೈ, ರವರ ಮುಖಾಂತರ ಸಂಬಂಧಿಸಿದ ನೌಕರರ ಪ್ರಾನ್ ಖಾತೆಗಳಿಗೆ (ಪರ್ಮನೆಂಟ್ ರಿಟೈರ್ ಮೆಂಟ್ ಆಕೌಂಟ್…

Read More

ಬೆಂಗಳೂರು : ಸಾರ್ವಜನಿಕರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಟ್ಟಡಗಳ ನಿರ್ಮಾಣಗಳಿಗೆ ಸ್ವಾಧೀನ ಪ್ರಮಾಣ (Occupancy Certificate) ಪತ್ರ ಪಡೆಯಲು ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಅವಶ್ಯಕತೆ ಇನ್ನಿಲ್ಲ, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ, ಪ್ರಮಾಣ ಪತ್ರ ಪಡೆಯಬಹುದು. ಆಕ್ಯುಪೆನ್ಸಿ ಸರ್ಟಿಫಿಕೇಟ್ ಬಾಪೂಜಿ ಸೇವಾ ಕೇಂದ್ರದ ತಂತ್ರಾಂಶ bsk.karnataka.gov.in ಮೂಲಕ ಅರ್ಜಿ ಸಲ್ಲಿಸಿ ಸಲ್ಲಿಸಬೇಕಾದ ಪೂರಕ ದಾಖಲೆಗಳು ತೆರಿಗೆ ಪಾವತಿಸಿದ ರಸೀದಿ ಕಟ್ಟಡ ಪರವಾನಗಿ ಕಟ್ಟಡ ನಿರ್ಮಾಣ ಪೂರ್ಣಗೊಂಡ ಪ್ರಮಾಣ ಪತ್ರ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಸೇವೆ ಲಭ್ಯ ಅರ್ಜಿ ಶುಲ್ಕ ರೂ. 50

Read More

ಬೆಂಗಳೂರು : ಆಧಾರ್ ಕಾರ್ಡ್ 10 ವರ್ಷಗಳಷ್ಟು ಹಳೆಯದಾಗಿದ್ದರೆ ಅಥವಾ ಅದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಈಗ ನವೀಕರಿಸಬೇಕಾದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ಜನರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತಾ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತ ಆಧಾರ್ ನವೀಕರಣಕ್ಕಾಗಿ ಗಡುವನ್ನು ಜೂನ್ 14, 2025 ರವರೆಗೆ ವಿಸ್ತರಿಸಿದೆ. ಅಂದರೆ, ಈಗ ನಿಮಗೆ ಇನ್ನೂ ಕೆಲವು ವಾರಗಳಿವೆ, ಆಗ ನೀವು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಅಗತ್ಯ ಮಾಹಿತಿಯನ್ನು ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಬಳಸುವಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸದಂತೆ ಆಧಾರ್‌ನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಯುಐಡಿಎಐನ ಈ ನಿರ್ಧಾರದ ಉದ್ದೇಶವಾಗಿದೆ. ಉಚಿತವಾಗಿ ಏನು ನವೀಕರಿಸಬಹುದು? ಈ ಸೌಲಭ್ಯದ ಅಡಿಯಲ್ಲಿ, ನೀವು ನಿಮ್ಮ ಜನಸಂಖ್ಯಾ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು, ಉದಾಹರಣೆಗೆ: ಹೆಸರು ವಿಳಾಸ ಜನ್ಮ ದಿನಾಂಕ ಲಿಂಗ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಸೂಚನೆ: ಫಿಂಗರ್‌ಪ್ರಿಂಟ್, ಫೋಟೋ ಅಥವಾ ಐರಿಸ್ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್…

Read More

ಬಾಗಲಕೋಟೆ : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಶೀಘ್ರವೇ 16,500 ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ “ಶಿಕ್ಷಣ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೀಘ್ರವೇ 16,500 ಶಿಕ್ಷಕರ ನೇಮಕಾತಿ ಮಾಡಲಾಗುವುದು, ಶಾಲೆಗಳಲ್ಲಿ ಈ ವರ್ಷವೇ ಹಲವು ಬದಲಾವಣೆ ಮಾಡಲಾಗುತ್ತದೆ. ಆದರ್ಶ ಶಾಲೆಗಳಲ್ಲಿ ಈ ವರ್ಷದಿಂದಲೇ ಪಿಯುಸಿ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ. ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ “ಸರ್ಕಾರಿ ಶಾಲೆಗಳ ಸುಧಾರಣೆಗೆ” ಕೈಗೊಳ್ಳಬೇಕಾದ ಹಲವಾರು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು. ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಜಮಖಂಡಿ, ಮುಧೋಳ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ ತಾಲೂಕುಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು. ಪಠ್ಯಪುಸ್ತಕ/ಸಮವಸ್ತ್ರ/ಶೂ-ಸಾಕ್ಸ್ ಗಳನ್ನು ಶಾಲಾ…

Read More

ಗುಜರಾತ್: ಏರ್ ಇಂಡಿಯಾ ವಿಮಾನ ಘೋರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಗುಜರಾತ್’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಎಲ್ಲಾ 242 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಧ್ಯ ದುರಂತ ನಡೆದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಅಹಮದಾಬಾದ್ ವಿಮಾನ ಅಪಘಾತದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಕೂಡ ಅವರೊಂದಿಗೆ ಇದ್ದಾರೆ. 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1.17 ಕ್ಕೆ ಲಂಡನ್’ಗೆ ಹೊರಟಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಅಹಮದಾಬಾದ್ನ ಮೇಘನಿನಗರ ಪ್ರದೇಶದ…

Read More

ಬೆಂಗಳೂರು: ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು, ನಿಷೇಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು  ಜಾರಿ ಮಾಡಿ ಸರ್ಕಾರವು ಆದೇಶಿಸಿದೆ. ಕಬ್ಬನ್ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ರಚಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿದ ಪ್ರತಿ ಒಬ್ಬರಿಗೆ ಗರಿಷ್ಠ ರೂ.500/- ಗಳವರೆಗೆ ದಂಡ ವಿಧಿಸಲು ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಇವರು ತೋಟಗಾರಿಕೆ ಉಪ ನಿರ್ದೇಶಕರು, ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ, ಬೆಂಗಳೂರು ರವರಿಗೆ ಅಥವಾ ಸಂಬಂಧಿಸಿದ ಸೂಕ್ತ ಅಧಿಕಾರಿಗೆ ಅವಕಾಶ ಕಲ್ಪಿಸಿಕೊಡುವಂತೆ ಆದೇಶಿಸಿದೆ. ಉಲ್ಲಂಘಿಸಿದ ದಂಡದ ಮೊತ್ತ ಹಾಗೂ ಷರತ್ತಿಗೊಳಪಟ್ಟು ಅನುಮತಿಸಲು ವಿಧಿಸಿರುವ ಮೊತ್ತವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿಷ್ಠಾನನದ ಖಾತೆಗೆ ಜಮೆ ಮಾಡುವುದು. ಅನುಮತಿಸಬಹುದಾದ ಚಟುವಟಿಕೆಗಳು, ನಿಷೇಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ವ್ಯಾಪಕ ಪ್ರಚಾರ ಪಡಿಸಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಹಾಗೂ…

Read More

ಬೆಂಗಳೂರು : 2025-26ನೇ ಸಾಲಿನ ಶೂ-ಸಾಕ್ಸ್ ಕಾರ್ಯಕ್ರಮಕ್ಕೆ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿ ಖಾತೆಗಳ ಮಾಹಿತಿಯನ್ನು ದೃಡೀಕರಿಸಿ ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನ ಶೂ-ಸಾಕ್ಸ್ ಕಾರ್ಯಕ್ರಮಕ್ಕೆ ಡಿಬಿಟಿ ಯೋಜನೆಯಡಿಯಲ್ಲಿ ಸ್ಯಾಟ್ಸ್‌ನಲ್ಲಿನ ವಿದ್ಯಾರ್ಥಿಗಳ ದಾಖಲಾತಿಯನ್ನು ಆಧರಿಸಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಎಸ್.ಡಿ.ಎಂ.ಸಿ ಖಾತೆಗಳಿಗೆ ನೇರವಾಗಿ ಅನುದಾನವನ್ನು ಬಿಡುಗಡೆ ಮಾಡಬೇಕಾಗಿರುವುದರಿಂದ ತಮ್ಮ ವ್ಯಾಪ್ತಿಯಲ್ಲಿನ ತಾಲ್ಲೂಕುವಾರು, ಶಾಲಾವಾರು ಎಸ್.ಡಿ.ಎಂ.ಸಿ ಖಾತೆ ಸಂಖ್ಯೆಗಳನ್ನು ಆಯಾ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಪರಿಶೀಲಿಸಿ, ದೃಡೀಕರಿಸಿ ಮಾಹಿತಿಯನ್ನು ಪಡೆದು ತಾವು ಜಿಲ್ಲಾ ಹಂತದಲ್ಲಿ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಿ, ದೃಡೀಕರಣದೊಂದಿಗೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ದಿನಾಂಕ: 12-06-2025ರೊಳಗಾಗಿ ಈ ಕಛೇರಿಗೆ ಸಾಫ್ಟ್(ಎಕ್ಸೆಲ್ ಪ್ರತಿ) ಮತ್ತು ಹಾರ್ಡ್ ಪ್ರತಿ(ಪಿಡಿಎಫ್)ಯನ್ನು ವಿಳಂಬಕ್ಕೆ ಆಸ್ಪದ ನೀಡದೇ ತುರ್ತಾಗಿ ಸಲ್ಲಿಸುವಂತೆ ತಿಳಿಸಿದೆ.

Read More

ಬೆಂಗಳೂರು : ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ILO) 2002 ರಲ್ಲಿ ಜೂನ್-12ನೇ ದಿನವನ್ನು “ವಿಶ್ವ ಬಾಲಕಾರ್ಮಿಕ ವಿರೋಧಿ ದಿನ” ಎಂದು ಘೋಷಣೆ ಮಾಡಿರುತ್ತದೆ. ಅಂದಿನಿಂದ ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತಿದ್ದು, ವಿಶ್ವ ಸಂಸ್ಥೆಯ ಎಲ್ಲಾ ಮಿತ್ರ ರಾಷ್ಟ್ರಗಳು ಪ್ರತಿ ವರ್ಷ ಜೂನ್ 12 ಅನ್ನು “ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಾ ಬರುತ್ತಿವೆ. ಈ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಸರ್ಕಾರದ ಎಲ್ಲಾ ಇಲಾಖೆ/ನಿಗಮ/ಮಂಡಳಿ / ಪ್ರಾಧಿಕಾರ / ಸಂಸ್ಥೆ / ನಿರ್ದೇಶನಾಲಯ ಶಾಲಾ ಕಾಲೇಜು/ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರುಗಳಿಗೆ 12ನೇ ಜೂನ್ 2025ರಂದು “ಬಾಲ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲವೆಂಬ ಪ್ರಮಾಣ ವಚನ’ (ಪ್ರತಿ ಲಗತ್ತಿಸಿದೆ) ವನ್ನು ಬೋಧಿಸಲು ರಾಜ್ಯದ ಎಲ್ಲಾ ಇಲಾಖೆಯ ಮುಖ್ಯಸ್ಥರುಗಳಿಗೆ ಸೂಚಿಸಿದೆ. ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ-2025 ಪ್ರಮಾಣ ವಚನ ನಾನು ಸತ್ಯವಾಗಿ, ಪ್ರಾಮಾಣಿಕವಾಗಿ ಹಾಗೂ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವುದೇನೆಂದರೆ, ನಾನು ವಾಸಿಸುವ ಸುತ್ತ ಮುತ್ತಲಿನ ಪ್ರದೇಶ…

Read More